Home / Tag Archives: ಬೆಳಗಾವಿ

Tag Archives: ಬೆಳಗಾವಿ

ಪಠ್ಯ ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ತಪ್ಪು ಮಾಹಿತಿ; ಜಾಗತಿಕ ಲಿಂಗಾಯತ ಮಹಾಸಭಾ ಪ್ರತಿಭಟನೆ

ಸರ್ಕಾರಕ್ಕೆ ಗಡುವು ಬೆಳಗಾವಿ: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದ್ದು, 9 ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ನೀಡಲಾಗಿರುವ ತಪ್ಪು ಮಾಹಿತಿಯನ್ನು ಸರಿಪಡಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಪ್ರತಿಭಟನೆ ನಡೆಸಿತು. ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ್ ರೊಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಾಗತಿಕ ಲಿಂಗಾಯಿತ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ಸೇನೆ ಸದಸ್ಯರು ಪ್ರತಿಭಟನೆ ನಡೆಸಿದ್ದು, ಒಂದು ವಾರದಲ್ಲಿ ಪಠ್ಯ …

Read More »

ಕರ್ನಾಟಕ ಸರ್ಕಾರದ ಬಸವ ಪುರಸ್ಕಾರ ಪ್ರಶಸ್ತಿ

ಭಾಲ್ಕಿಯ ಪೂಜ್ಯ ಡಾ ಬಸವಲಿಂಗ ಪಟ್ಟದೇವರಿಗೆ ನೀಡಲಾಗುತ್ತಿದೆ. ಈ  ಕುರಿತು ಮೂಡಿಬಂದ ಪುಟ್ಟ ಸಾಕ್ಷ್ಯಚಿತ್ರ. ಸಾಹಿತ್ಯ ಹಾಗೂ ಧ್ವನಿ: ಪ್ರಭು ಚನ್ನಬಸವ ಸ್ವಾಮೀಜಿ. ಸಂಕಲನ : ಡಾ. ಅಲ್ಲಮಪ್ರಭು ಸ್ವಾಮೀಜಿ ಬೆಳಗಾವಿ .    

Read More »

ಸಂಪಗಾವಿಯಲ್ಲಿ ಕೊರೊನಾ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲರಿಂದ ಜಾಗೃತಿ ಜಾಥಾ

ನೇಗಿನಹಾಳ : ಪಕ್ಕದ ಸಂಪಗಾವಿ ಗ್ರಾಮದಲ್ಲಿ ಈಗಾಗಲೇ ಕೊರೊನಾ ಸೊಂಕು ಹರಡಿಕೊಂಡಿದ್ದು ಇದರಿಂದ ನೇಗಿನಹಾಳ ಹಾಗೂ ಸೂತ್ತಮೂತ್ತಲಿನ ಗ್ರಾಮಸ್ಥರು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ಜೊತೆಗೆ ನೇಗಿನಹಾಳ ಗ್ರಾಮದ ಮೇಲೆ ಅತೀ ಹೆಚ್ಚು ಅವಲಂಬನೆ ಹೊಂದಿರುವ  ಸಂಪಗಾವಿ ಗ್ರಾಮದ ವ್ಯಾಪಾರಸ್ಥರೊಂದಿಗೆ ತಮ್ಮ ವ್ಯವಹಾರಗಳಿಂದ ದೂರವಿರಬೇಕು ಒಂದು ವೇಳೆ ಯಾರಾದರೂ ಬಂದರೆ ಅಂತವರ ಕುರಿತು ಶೀಘ್ರವಾಗಿ ಗ್ರಾ.ಪಂ ಸಿಬ್ಬಂದಿ ಹಾಗೂ ಆರೋಗ್ಯ ಅಧಿಕಾರಿಗಳಿಗೆ ತಿಳಿಸಬೇಕೆಂದು ಸಂಪಗಾವಿ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು. …

Read More »

ಕೊರೊನಾ ಹೋರಾಟಕ್ಕೆ ವಿದ್ಯಾರ್ಥಿ ವೇತನವನ್ನೆ ಸಿಎಂ ಪರಿಹಾರ ನಿಧಿಗೆ ನೀಡಿದ 10ವರ್ಷದ ಬಾಲಕ

ಬೆಳಗಾವಿ : ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬೆಳಗಾವಿಯ 10ವರ್ಷದ ಬಾಲಕನ್ನೊಬ್ಬ ತನ್ನ ಶಿಷ್ಯವೇತನ ಹಾಗೂ ಮನೆಯಲ್ಲಿ ಕೂಡಿಟ್ಟ 5ಸಾವಿರ ಹಣವನ್ನ ನೀಡುವ ಮೂಲಕ ಎಲ್ಲರಿಗೂ‌ ಮಾದರಿಯಾಗಿದ್ದಾನೆ. ಮೂಲತಃ ರಾಮದುರ್ಗ ತಾಲೂಕಿನ ನಾಗನೂರ ಗ್ರಾಮದ ಚನ್ನಬಸವ ಪಾಟೀಲ್, ಸದ್ಯ ನಾಲ್ಕನೇ ತರಗತಿ ಓದುತ್ತಿದ್ದಾನೆ.ತನಗೆ ಬಂದ ಸ್ಕಾಲರ‌ಶಿಪ್ ಹಣ ಹಾಗೂ ಮನೆಯಲ್ಲಿ‌ ನೀಡಿದ್ದ ಹಣವನ್ನ ಮನೆಯಲ್ಲಿನ ಟ್ರಜರಿಯಲ್ಲಿ ಕೂಡಿಟ್ಟಿದ್ದ. ಅದನ್ನ ತನ್ನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವ ಆಲೋಚನೆಯಲ್ಲಿದ್ದ. ಆದರೆ ಇಡೀ ದೇಶವನ್ನೇ ಕಾಡುತ್ತಿರುವ ಕೊರೊನಾ …

Read More »

ಜಿಲ್ಲೆಗೆ ಮಾದರಿ ಪಿ.ಡಿ.ಓ. ವಿಶ್ವನಾಥ್ ಎಚ್

ಬೈಲಹೊಂಗಲ/ನೇಗಿನಹಾಳ:  ಮಹಾಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಣಾಮ ಜಗತ್ತಿನಾದ್ಯಂತ ಸಾವು ನೋವುಗಳನ್ನು ಹೆಚ್ಚಿಸಿದೆ ಇದಕ್ಕೆ ನಾವೆಲ್ಲರೂ ಕೈಗೊಳ್ಳಬೇಕಾದ ಪರಿಹಾರ ಪ್ರತಿಯೊಬ್ಬರೂ ಸಾಮಾಜಿಕ ಅಂತರ, ಸ್ವಾಸ್ಥ್ಯ ಮತ್ತು ಸುಚಿತ್ವದಿಂದ ಇದ್ದರೆ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯವಿದೆ ಎಂದು ನೇಗಿನಹಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಚ್ ವಿಶ್ವನಾಥ ಹೇಳಿದರು. ಗ್ರಾಮದಲ್ಲಿ  ಸ್ಯಾನಿಟೈಸರ್ ಸಿಂಪಡಣೆಗೆ ಗ್ರಾಮ ಪಂಚಾಯತಿ ವತಿಯಿಂದ ಜನರೇಟರ್ ಪಂಪಸೆಟ್ ಹಾಗೂ ನೂತನವಾಗಿ ತಯಾರಿಸಿದ ಔಷಧಿ ಸಿಂಪಡಿಸುವ ಸಾಧನಗಳನ್ನು …

Read More »

ಮದ್ಯ ಅಂಗಡಿ ಮಾಲೀಕರೇ ಮದ್ಯವನ್ನ ಕಳ್ಳತನ ಮಾಡಿಸಿ ಮಾರಾಟ: ಸಚಿವ ರಮೇಶ ಜಾರಕಿಹೊಳಿ

ಬೆಳಗಾವಿ: ಮದ್ಯದ ಅಂಗಡಿಗಳ ಮಾಲೀಕರೇ  ಹೆಚ್ಚಿನ ಲಾಭಕ್ಕಾಗಿ ಮದ್ಯವನ್ನು ಕಳ್ಳತನ ಮಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಲಾಕ್ ಡೌನ್ ಹಿನ್ನಲೆಯಲ್ಲಿ ಹೆಚ್ಚಿನ ಲಾಭಕ್ಕಾಗಿ ಮದ್ಯ ಅಂಗಡಿ ಮಾಲೀಕರೇ ಮದ್ಯವನ್ನ ಕಳ್ಳತನ ಮಾಡಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, …

Read More »