Home / featured / ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ಕುರಿತು ಪ್ರಕಾಶ ಉಳ್ಳಗಡ್ಡಿ ಅವರ ವಿಶ್ಲೇಷಣೆ

ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ಕುರಿತು ಪ್ರಕಾಶ ಉಳ್ಳಗಡ್ಡಿ ಅವರ ವಿಶ್ಲೇಷಣೆ

ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ

ನಮ್ಮ ಸಂಪ್ರದಾಯದಲ್ಲಿ ದಾರ್ಶನಿಕರು, ಅನುಭಾವಿಗಳು ಮಾನವನ ದೇಹದ ಕುರಿತು ತಮ್ಮದೆ ರೀತಿಯಲ್ಲಿ ಬಣ್ಣಿಸಿದ್ದಾರೆ. ಬಸವಣ್ಣನವರು ಮಾನವನ ದೇಹಕ್ಕೆ ವಿಶೇಷ ಮಹತ್ವ ಕೊಟ್ಟು “ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ” ಎಂದು ಹೇಳಿ ಜೀವವಂಚನೆ, ಕಾಯವಂಚನೆಗಳನ್ನ ಸಾರಾಸಗಟವಾಗಿ ತಿರಸ್ಕರಿಸಿ ಕೂಡಲಸಂಗಮ ದೇವನೋಲಿಸಲು ಬಂದ ಪ್ರಸಾದ ಕಾಯವ ಕೆಡಿಸಲಾಗದು ಎಂದಿದ್ದಾರೆ. ಅಂತೆಯೇ ಕಾಯದ ಸದ್ಬಳಕೆಗಾಗಿ ಕಾಯಕವನ್ನ ಕಡ್ಡಾಯ ಮಾಡಿ, ಕಾಯಕದಿಂದ ಪ್ರಸಾದ, ಭಕ್ತಿ ಮತ್ತು ದಾಸೋಹ ತತ್ವಗಳನ್ನ ಅನುಭವ ಮಂಟಪದಲ್ಲಿ ಅನುಷ್ಟಾನ ಮಾಡುತ್ತಾರೆ. ಅದರಂತೆ ಶಿಶುನಾಳ ಶರೀಫಜ್ಜ ಕೂಡ “ಗುಡಿಯ ನೋಡಿರಣ್ಣ, ದೇಹದ ಗುಡಿಯ ನೋಡಿರಣ್ಣ” ಎಂದು ದೇಹವನ್ನ ಗುಡಿಗೆ ಹೋಲಿಸಿದ್ದಾರೆ. ಹೀಗೆ ಸಾಕಷ್ಟು ಅನುಭಾವಿಗಳು ತಮ್ಮದೆ ದಾಟಿಯಲ್ಲಿ ದೇಹದ ಕುರಿತು ವ್ಯಾಖ್ಯಾನ ಮಾಡಿದ್ದಾರೆ.

ಅನುಭಾವಿಗಳಂತೆ ಅಂತರಂಗದಾಳಕ್ಕೆ ಧುಮುಕುವ ಶಕ್ತಿ ನನಗಿಲ್ಲದಿದ್ದರೂ ಮಾನವನ ದೇಹ, ರಚನೆ ಮತ್ತು ಅದರ ವಿಶೇಷತೆಗಳನ್ನ ವಿಜ್ಞಾನದ ಸಹಾಯದಿಂದ ನೋಡುವ ಪ್ರಯತ್ನ ಮಾಡಬಹುದಾಗಿದೆ. ಹಾಗಾಗಿ ಕೂತೂಹಲಕ್ಕೆ ಮಾನವನ ದೇಹದ ಬಗ್ಗೆ ಅಧ್ಯಯನ ಮಾಡಿದಾಗ ಬಹಳಷ್ಟು ಸ್ವಾರಸ್ಯಕರ ಸಂಗತಿಗಳು ತಿಳಿದು ಬಂದವು. ಅವುಗಳನ್ನ ಈ ಬರಹದ ಮೂಲಕ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ.

ಶಿಶು :
ಜಲ-ಬಿಂದುಗಳ ವ್ಯವಹಾರದಿಂದ ಹುಟ್ಟಿದ ಭ್ರೂಣ ಜೀವ ಪಡೆದು ತಾಯಿಯ ಗರ್ಭದಿಂದ ಈ ಪ್ರಥ್ವಿಗೆ ಆಗಮಿಸುತ್ತದೆ. ಹುಟ್ಟುತ್ತಲೆ ಮೆದುಳು ಸಕ್ರೀಯವಾಗಿರುವುದಿಲ್ಲ, ಕೆಲದಿನಗಳ ನಂತರ ಸಕ್ರೀಯವಾಗುತ್ತದೆ. ಮೊದಮೊದಲು ಶಿಶುವಿಗೆ ನಮ್ಮ ಚಿತ್ರ ತಲೆಕೆಳಗಾಗಿ ಕಾಣುತ್ತದೆಯಂತೆ, ಮೆದುಳು ಸಕ್ರಿಯವಾಗುತ್ತಿದ್ದಂತೆ ನಮ್ಮ ಚಿತ್ರ ಮತ್ತು ವಸ್ತುಗಳು ಸರಿಯಾಗಿ ಗೋಚರಿತ್ತವೆ. ಸೋಜಿಗವೆಂದರೆ ಎಲ್ಲ ಜೀವರಾಶಿಗಳಲ್ಲಿ ಮಾನವ ಶಿಶುಗಳು ಮಾತ್ರ ತಮ್ಮ ಪೋಷಕರನ್ನ ನೋಡಿ ನಗೆ ಬೀರುತ್ತವೆಯಂತೆ. ಶಿಶುಗಳು ನಮ್ಮ ಮಾತು ಧ್ವನಿಗಿಂತಲೂ ರಾಗ, ತಾಳ, ಸಂಗೀತಕ್ಕೆ ಹೆಚ್ಚು ಪ್ರತಿಕ್ರಿಯಿಸುತ್ತವೆ. ಶಿಶು ನೀರಿನಲ್ಲಿ ಮುಳುಗಿದಾಗ ದಿಗಿಲುಗೊಳ್ಳದೆ ಬಹಳ ಹೊತ್ತು ಉಸಿರು ಹಿಡಿದುಕೊಳ್ಳಬಲ್ಲವು. ಶಿಶುಗಳು ಮೀನುಗಳಂತೆ ಒಂದೆ ಕಾಲಕ್ಕೆ ಉಸಿರಾಡುವುದು ಮತ್ತು ನುಂಗಬಲ್ಲವಂತೆ. ಶಿಶುವಿನ ಹೊಟ್ಟೆ ಒಂದು ಆಕ್ರೋಟನಷ್ಟು ಮಾತ್ರ, ಹುಳಿ ಮತ್ತು ಸಿಹಿ ಮಾತ್ರ ಗುರುತಿಸುತ್ತವೆ, ಮೊದಲ ಒಂದು ತಿಂಗಳ ಕಾಲ ಅತ್ತಾಗ ಕಣ್ಣೀರು ಬರುವುದಿಲ್ಲ, ಶಿಶು ತಿಂಗಳಿಗೆ ೧.೫ ಸೆಂಟಿ ಮೀಟರನಷ್ಟು ಬೆಳೆದು ಐದು ತಿಂಗಳಿನಲ್ಲಿ ತನ್ನ ತೂಕವನ್ನು ದ್ವಿಗುಣ ಗೊಳಿಸಿ ವರ್ಷದ ಕೊನೆಗೆ ತೂಕ ಮೂರು ಪಟ್ಟು ಹೆಚ್ಚಿಸಿಕೊಳ್ಳುತ್ತದೆಯಂತೆ. ಒಂದು ಸಂಶೋಧನೆಯ ಪ್ರಕಾರ ನಾವೆಲ್ಲ ಬಹುತೇಕ ತಂದೆಯ ವಂಶವಾಹಿಗಳನ್ನ (ಜೀನ್ಸ್) ಪಡೆದಿರುತ್ತೇವೆ.

ಎಲುಬು :
ನಾವು ಹುಟ್ಟಿದಾಗ ೩೦೦ ಎಲಬುಗಳು ಆದರೆ ಬೆಳೆದಂತೆ ಕೆಲವು ಎಲಬುಗಳು ಒಂದಕ್ಕೊಂದು ಬೆಸಗೊಂಡು ಅವುಗಳ ಸಂಖ್ಯೆ ೨೦೬ಕ್ಕೆ ಇಳಿಯುತ್ತದೆ. ೫೦ಕ್ಕು ಹೆಚ್ಚು ಎಲಬುಗಳು ನಮ್ಮ ಪಾದದಲ್ಲಿವೆ. ಅತಿ ಚಿಕ್ಕ ಎಲಬು ೨.೮ ಮಿಲಿಮೀಟರ ಮಾತ್ರ ನಮ್ಮ ಕಿವಿಯಲ್ಲಿದ್ದರೆ ಬಲಿಷ್ಠ ಮತ್ತು ದೊಡ್ಡ ಎಲುಬು ನಮ್ಮ ತೊಡೆಯಲ್ಲಿದೆ. ಕೈ ಬೆರಳಿನ ಉಗುರುಗಳು ಕಾಲಿನ ಉಗುರುಗಳಿಗಿಂತ ವೇಗವಾಗಿ ಬೆಳೆಯುತ್ತವೆ. ನಮ್ಮ ದೇಹದಲ್ಲಿ ಸುಮಾರು ೬೦೦ ಸ್ನಾಯುಗಳು ಅಥವಾ ಮಾಂಸ ಖಂಡಗಳಿವೆ. ಬೆಳಿಗ್ಗೆ ಎದ್ದಾಗ ಎತ್ತರ ಹೆಚ್ಚಿರುತ್ತದೆ ಅದೇ ಸಾಯಂಕಾಲ ಎತ್ತರ ಕಡಿಮೆಯಾಗುತ್ತದೆ. ನಮ್ಮ ಕೈಯಲ್ಲಿನ ಶಕ್ತಿ ೫೦ ಪ್ರತಿಶತ ಕೇವಲ ಕಿರುಬೆರಳಿನಿಂದ ಬರುವುದಂತೆ.

ಅಹಾರ ಮತ್ತು ಉತ್ಪತ್ತಿ:
ಒಬ್ಬ ಸಾಮಾನ್ಯ ಮನುಷ್ಯ ತನ್ನ ಜೀವಮಾನವಿಡಿ ಸೇವಿಸುವ ಆಹಾರ ಸುಮಾರು ೬ ಆನೆಗಳ ತೂಕದಷ್ಟಿರುತ್ತದೆಯಂತೆ ಅಂದರೆ ಬರೋಬ್ಬರಿ ೩೩ ಟನ್ ನಷ್ಟು. ಮತ್ತು ತನ್ನ ಜೀವಮಾನದಲ್ಲಿ ಸುಮಾರು ೫೦೦ ಬಾಥಟಬ್ಬಗಳನ್ನು ಅಂದರೆ ಎರಡು ಈಜುಗೋಳ (ಸ್ವೀಮಿಂಗ್ ಪೂಲ್) ತುಂಬಿಸುವಷ್ಟು ಬಾಯಲ್ಲಿ ಲಾಲಾರಸ, ಸಲೈವಾ ಅಥವಾ ಜೊಲ್ಲು ಉತ್ಪತ್ತಿಯಾದರೆ ಮೂಗು ದಿನಕ್ಕೆ ಒಂದು ಟಿ-ಕಪ್ಪ್ ನಷ್ಟು ಸುಂಬಳ ಉತ್ಪಾದಿಸುತ್ತದೆ.

ನಾಲಿಗೆ :
ನಮ್ಮ ನಾಲಿಗೆ ಸುಮಾರು ೨೦೦೦ ದಿಂದ ೪೦೦೦ ವಿವಿಧ ರುಚಿಗಳನ್ನ ಗುರುತಿಸಬಲ್ಲದು. ಆದರೆ ಹುಡುಗರಿಗಿಂತ ಹುಡುಗೀಯರು ಹೆಚ್ಛು ರುಚಿ ಗುರುತಿಸಬಲ್ಲರು. ನಾವು ಸೇವಿಸಿದ ಅಹಾರ ಪದಾರ್ಥದಿಂದ ಮಾತ್ರ ಹೊಟ್ಟೆ ತುಂಬಿರುವುದಿಲ್ಲ ಬದಲಾಗಿ ಪದಾರ್ಥದ ಸುವಾಸನೆಯು ಕೂಡ ಹೊಟ್ಟೆ ತುಂಬಿಸುವುದರಲ್ಲಿ ಪಾತ್ರವಹಿಸುತ್ತದೆಯಂತೆ. ಅಂದರೆ ಸುಮಾರು ೮೦ ಪ್ರತಿಶತ ನಾವು ಯಾವುದನ್ನ ರುಚಿ ಎಂದು ಗುರುತಿಸುತ್ತೆವೆಯೋ ಅದು ನಿಜಕ್ಕೂ ವಾಸನೆ ಮಾತ್ರವಾಗಿರುತ್ತದೆ. ನಮ್ಮ ಬೆರಳಚ್ಚಿನಂತೆ ನಮ್ಮ ನಾಲಿಗೆಯ ಅಚ್ಛು ಕೂಡ ಅನನ್ಯ (ಯುನಿಕ್). ನಮ್ಮ ಮೂಗು ನೆಗಡಿಯಿಂದಾಗಿ ಸೋರುತ್ತಿದ್ದರೆ ದೇಹ ಬೇಡವಾದ ಸೂಕ್ಸ್ಮಜೀವಿಗಳನ್ನ ಹೊರಹಾಕುತ್ತಿರುತ್ತದೆ ಎಂದರ್ಥ. ನಮ್ಮ ಮೂಗು ನಾಲಿಗೆಗಿಂತ ೧೦೦೦೦ ಪಟ್ಟು ಹೆಚ್ಛು ವಾಸನೆಗಳನ್ನ ಗುರುತಿಸಬಲ್ಲದಂತೆ.

ಚರ್ಮ:
ನಮ್ಮ ದೇಹದಲ್ಲಿ ಅತೀ ದೊಡ್ಡ ಅಂಗಾಂಗವೆಂದರೆ ಚಳಿ, ಗಾಳಿ, ಬಿಸಿಲಿನಿಂದ ಸದಾ ರಕ್ಸಿಸುವ ನಮ್ಮ ಚರ್ಮ, ಅದು ೧೦೦೦ ವಿವಿಧ ಅಣುಜೀವಿಗಳನ್ನ ಹೊಂದಿದೆ. ನಮ್ಮ ದೇಹದಲ್ಲಿ ೨೦ ರಿಂದ ೫೦ ಲಕ್ಷ ಬೆವರಿನ ಗ್ರಂಥಿಗಳಿವೆಯಂತೆ. ಒಟ್ಟು ಚರ್ಮದ ತೂಕ ೩.೮ ಕೆಜಿಯಷ್ಟು, ಮತ್ತು ಒಟ್ಟು ಕ್ಷೇತ್ರ ೨ ಸ್ಕ್ವೆರ್ ಮೀಟರ ಅಂದರೆ ಒಂದು ಕಿಂಗ್ ಸೈಜ಼್ ಬೆಡ್ ಶೀಟನಷ್ಟು. ನಮ್ಮ ಅಂಗೈನ ಚರ್ಮ ಮತ್ತು ಪಾದದಡಿಯಲ್ಲಿನ ಚರ್ಮ ೧.೫ ಮಿಲಿಮೀಟರನಷ್ಟು ದಪ್ಪವಾಗಿರುತ್ತದೆ. ನಮ್ಮ ದೇಹ ಒಂದು ಸೆಕಂಡಿಗೆ ೨.೫ ಕೋಟಿ ಜೀವಕೋಶಗಳನ್ನು ಉತ್ಪಾದಿಸುತ್ತದೆ. ಇದರರ್ಥ ನಾವು ಮನೆಯಲ್ಲಿ ಕಸಗೂಡಿಸಿದ ಎಲ್ಲವೂ ಹೊರಗಿನಿಂದ ಬಂದ ಕಸವಾಗಿರುವುದಿಲ್ಲ ಬದಲಿಗೆ ಅದರಲ್ಲಿನ ಸುಮಾರು ೩೦ ಪ್ರತಿಶತದಷ್ಟು ನಮ್ಮ ದೇಹದ ಸತ್ತ ಜೀವಕೋಶಗಳಾಗಿರುತ್ತದೆ. ಕಾರಣ ಘಂಟೆಗೆ ಸುಮಾರು ೬ ಲಕ್ಷ ಸತ್ತ ಜೀವಕೊಶಗಳು ಚರ್ಮದಿಂದ ಉದುರುತ್ತಲಿರುತ್ತವೆ. ಸಾಮಾನ್ಯವಾಗಿ ನಮ್ಮ ದೇಹದ ಸುತ್ತ ೨ ಕಿಲೋನಷ್ಟು ಬ್ಯಾಕ್ಟಿರಿಯಾಗಳನ್ನು ಹೊತ್ತೊಯ್ಯುತ್ತೇವೆ. ನಮಗೆ ವಯಸ್ಸಾದಂತೆ ಚರ್ಮ ಸವೆದು ಸಣ್ಣದಾಗಿ ಹಿಗ್ಗುವ ಕುಗ್ಗುವ ಗುಣ ಕಳೆದುಕೊಂಡು ಮುದುಡಲಾರಂಬಿಸುತ್ತದೆ.

ಕಣ್ಣು :
ನಮ್ಮ ಕಣ್ಣಿನ ರೆಪ್ಪೆಗಳು ನಿಮಿಷಕ್ಕೆ ೨೦ ಸಲ ಮುಚ್ಚಿ ತೆರೆಯುತ್ತವೆ. ಪ್ರತಿ ೧೫೦ ದಿನಕ್ಕೊಮ್ಮೆ ರೆಪ್ಪೆಯ ಮೇಲಿನ ಕೂದಲು ಉದುರುತ್ತದೆ. ನಮಗೆ ಬಣ್ಣಬಣ್ಣದ ಕನಸುಗಳು ಕಾಣೋದು ಒಟ್ಟು ನಿದ್ರೆಯ ೨೫ ಪ್ರತಿಶತ ಸಮಯದಲ್ಲಿ ಮಾತ್ರವಂತೆ ಮತ್ತು ಕನಸು ಕಾಣುವಾಗ ನಮ್ಮ ಕಣ್ಣಿನ ಗುಡ್ಡೆಗಳು ಅವಸರವಾಗಿ ಓಡುತ್ತವೆ. ನಮ್ಮ ದೇಹದಲ್ಲಿ ರಕ್ತವಿರದ ಜಾಗವೆಂದರೆ ಕಣ್ಣಾಲಿಗಳು ಮಾತ್ರ ಕಾರಣ ಕಣ್ಣಾಲಿಗಳಿಗೆ ಬೇಕಾಗಿರುವುದು ಆಮ್ಲಜನಕ ಅದನ್ನ ಗಾಳಿಯಿಂದ ನೇರವಾಗಿ ಪಡೆಯುತ್ತವೆ.

ಮೆದುಳು:
ನಮ್ಮ ದೇಹ ಉತ್ಪಾದಿಸಿದ ಶಕ್ತಿಯಲ್ಲಿ ೨೦ ಪ್ರತಿಶತ ಶಕ್ತಿಯನ್ನ ಕೇವಲ ಮೆದುಳು ಉಪ ಯೋಗಿಸುತ್ತದೆ. ಒಬ್ಬ ಸಾಮಾನ್ಯನ ಮೆದುಳು ಸುಮಾರು ೧.೫ ಕೆಜಿ ಅಂದರೆ ನಮ್ಮ ದೇಹದ ಕೇವಲ ೨ ಪ್ರತಿಶತದಷ್ಟು. ನಾವು ಸೇವಿಸುವ ಒಟ್ಟು ಆಮ್ಲಜನಕದಲ್ಲಿ ೨೫ ಪ್ರತಿಶತ ಕೇವಲ ನಮ್ಮ ಮೆದುಳು ಉಪಯೊಗಿಸುತ್ತದೆ. ಮೆದುಳಿನ ಮುದುಡಿದ ಎಲ್ಲ ಬಾಗಗಳನ್ನ ನೇರವಾಗಿಸಿದರೆ ಅದರ ಒಟ್ಟು ಗಾತ್ರ ಒಂದು ತಲೆದಿಂಬುವಿನಷ್ಟು ದೊಡ್ಡದಾಗಿರುತ್ತದೆ. ನಾವು ಎಚ್ಚರವಿದ್ದಾಗ ಮೆದುಳು ಒಂದು ಲೈಟ್ ಬಲ್ಬ್ ಉರಿಯುವಷ್ಟು ವಿದ್ಯುತ್ ಉತ್ಪಾದಿಸುತ್ತದೆ. ನಮ್ಮ ಎಡಭಾಗದ ಮೆದುಳು ಬಲಬಾಗದ ದೇಹವನ್ನ ನಿಯಂತ್ರಿಸಿದರೆ ಬಲಭಾಗದ ಮೆದುಳು ಎಡಭಾಗದ ದೇಹವನ್ನ ನಿಯಂತ್ರಿಸುವುದು.

ಹ್ರದಯ :
ನಮ್ಮ ಹ್ರದಯ ಒಂದು ದಿನಕ್ಕೆ ೧ ಲಕ್ಷ ಸಲ ಬಡಿದುಕೊಳ್ಳುತ್ತೆ ಅಂದರೆ ನಮ್ಮ ಜೀವಮಾನವಿಡಿ ಒಂದು ರಾಕೆಟ್ ಚಂದ್ರನ ಮೇಲೆ ೨ ಎರಡು ಸಲ ಹೋಗಿ ಬರುವಷ್ಟು ಇಂಧನ ಪಂಪ ಮಾಡುತ್ತದಂತೆ. ಇನ್ನು ಸರಳವಾಗಿ ಹೇಳುವುದಾದರೆ ಒಂದು ವರ್ಷದಲ್ಲಿ ಒಂದು ಓಲಂಪಿಕ್ ಮೈದಾನವನ್ನು ತುಂಬುವಷ್ಟು ರಕ್ತವನ್ನು ಪಂಪ ಮಾಡುತ್ತದೆ. ನಮ್ಮ ರಕ್ತದ ಗುಂಪು ‘ಓ’, ‘ಏ’, ‘ಬಿ’ ಮತ್ತು ‘ಎಬಿ’ ಮಾತ್ರವಲ್ಲ ಸುಮಾರು ೩೦ ತರಹದ ಗುಂಪುಗಳಿವೆ. ನಾವು ಸಂಗೀತ ಕೇಳುವಾಗ ನಮ್ಮ ಹ್ರದಯದ ಬಡಿತ ತನ್ನಿಂದ ತಾನಾಗೆ ಆ ರಾಗ ತಾಳಕ್ಕೆ ಹೊಂದಿಕೊಳ್ಳುತ್ತದೆಯಂತೆ. ಒಂದೊಮ್ಮೆ ನಮ್ಮ ರಕ್ತನಾಳಗಳನ್ನ ಒಂದಕ್ಕೊಂದು ಜೋಡಿಸಿದರೆ ಈಡೀ ಪ್ರಥ್ವಿಯನ್ನ ಒಂದು ಸಲ ಸುತ್ತು ಹಾಕಬಹುದು. ಮನುಷ್ಯರಿಗೆ ಮಾತ್ರ ಗದ್ದವಿದೆಯಂತೆ.

ಕಿವಿ ಮಾತ್ರ ಸದಾ ಬೆಳೆಯುತ್ತಲೆ ಇರುತ್ತದೆ. ಕಿವಿಯಲ್ಲಿ ಬರುವ ಕೂಗಣ ವ್ಯಾಕ್ಸ್ ಕೂಡ ಒಂದು ತರದ ಬೆವರು. ನಮ್ಮ ದೇಹದಲ್ಲಿ ಸುಮಾರು ೭-೮ ಸಾಬೂನಗಳನ್ನ ತಯಾರಿಸುವಷ್ಟು ಕೊಬ್ಬು ಇರುತ್ತದೆ. (ಕೆಲವರಿಗೆ ಕೊಬ್ಬು ಜಾಸ್ತಿ ಅದು ಬೇರೆ). ನಮ್ಮ ಮೂತ್ರಪಿಂಡಗಳು ಪ್ರತಿ ೪೫ ನಿಮಿಷಕ್ಕೆ ರಕ್ತವನ್ನು ಶುದ್ಧೀಕರಿಸಿ ಸುಮಾರು ೬ ಕಪ್ಪ್ ಅಂದರೆ ೨ ಲೀಟರ್ ನಷ್ಟು ಮೂತ್ರವನ್ನು ಮೂತ್ರಕೋಶಕ್ಕೆ ಕಳಿಸುತ್ತದೆ. ನಮ್ಮ ದೇಹದಲ್ಲಿ ಕಬ್ಬಿನಾಂಶ ಎಷ್ಟಿದೆ ಅಂದರೆ ೨.೫ ಸೆಂಟಿಮೀಟರನಷ್ಟು ಉದ್ದವಾದ ಮೊಳೆಯನ್ನು ತಯಾರಿಸುವಷ್ಟು.

ಇದಿಷ್ಟು ನನ್ನ ಗಮನಕ್ಕೆ ಬಂದಿದ್ದು ಮಾತ್ರ ಆದರೆ ನಮ್ಮ ದೇಹದ ರಚನೆ ಕುರಿತು ಇನ್ನೂ ಅದೇಷ್ಟೊ ಸ್ವಾರಸ್ಯಕರವಾದ ವಿಷಯಗಳು ವಿಸ್ಮಯಗಳು ಇರಬಹುದು ಬಲ್ಲವರು ಇಲ್ಲಿ ಹಂಚಿಕೊಳ್ಳಬಹುದು.

ಶರಣ: ಪ್ರಕಾಶ ಉಳ್ಳೇಗಡ್ಡಿ
ಮಸ್ಕತ್ತ-ಒಮಾನ್
ಶರಣು ಶರಣಾರ್ಥಿಗಳು.

About nagaraj

Check Also

ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಯ ವೇಳಾಪಟ್ಟಿ

ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ‌ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …

ವೈದ್ದಿಕರ ಕುತಂತ್ರದಿಂದ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆ

ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು …

ಡಾ. ಎಂ.ಬಿ ಪಾಟೀಲ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿ

ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …

ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಶ್ರೀ ಡಾ. ಎಂ.ಬಿ ಪಾಟೀಲರ ಜನ್ಮದಿನ

ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

“ನೊಬೆಲ್” ಎಂಬ ಮನುಕುಲದ ದ್ರುವತಾರೆ…🌟

ನೂರು ವರ್ಷಗಳ ಹಿಂದೆ ಒಬ್ಬ ಉದ್ಯಮಿ ಬೆಳಗಿನ ಕಾಫ಼ಿ ಸೇವಿಸುತ್ತ ಅಂದಿನ ದಿನಪತ್ರಿಕೆಯೊಂದನ್ನ ಕೈಗೆತ್ತಿಕೊಂಡು ಓದಲು ಪ್ರಾರಂಭಿಸುತ್ತಾನೆ. ಅದರಲ್ಲಿನ ಒಂದು …

Leave a Reply

Your email address will not be published.