2020 ನೇ ಸಾಲಿನ ಡಾ.ಚನ್ನಬಸವ ಪಟ್ಟದ್ದೇವರ ಅನುಭವಮಂಟಪ ಪ್ರಶಸ್ತಿಗೆ ಅರವಿಂದ ಜತ್ತಿ ಅವರು ಆಯ್ಕೆ
nagaraj
November 18, 2021
featured, General News
ಬಾಲ್ಕಿ: 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಜಗತ್ತಿನ ಮೊಟ್ಟಮೊದಲ ಸಂಸತ್ತು ಆಗಿರುವುದು ಸಮಸ್ತ ಭಾರತೀಯರಿಗೆ ಅಭಿಮಾನದ ಸಂಗತಿಯಾಗಿದೆ. ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಸಮಸಮಾಜವನ್ನು ನಿರ್ಮಾಣ ಮಾಡಿದರು. ಜಾತಿ, ವರ್ಣ, ವಂಶ, ವರ್ಗ, ಲಿಂಗ ಮುಂತಾದ ಯಾವುದೇ ಭೇದವಿಲ್ಲದೆ ಸಕಲ ಜಿವಾತ್ಮರ ಲೇಸನ್ನೆ ಬಯಸುವ ಕಲ್ಯಾಣ ರಾಜ್ಯ ಕಟ್ಟಿದರು. ಬಸವಾದಿ ಶರಣರ ಅನುಭವಮಂಟಪ ಸಂಸ್ಕೃತಿಗೆ ಮರುಜೀವ ತುಂಬಿರುವ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರ ಹೆಸರಿನಲ್ಲಿ “ಡಾ.ಚನ್ನಬಸವ ಪಟ್ಟದ್ದೇವರ ಅನುಭವಮಂಟಪ ಪ್ರಶಸ್ತಿ” ಯನ್ನು ಕಳೆದು 20 ವರ್ಷಗಳಿಂದ ಪ್ರತಿವರ್ಷ ವಿಶ್ವಬಸವಧರ್ಮ ಟ್ರಸ್ಟ ವತಿಯಿಂದ ನೀಡುತ್ತಾ ಬಂದಿದ್ದೇವೆ. ಈ ಪ್ರಶಸ್ತಿಯನ್ನು ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ.
2020 ರ ಈ ಪ್ರಶಸ್ತಿಯನ್ನು ಬೆಂಗಳೂರಿನ ಬಸವಸಮಿತಿಯ ಅಧ್ಯಕ್ಷರಾದ ಶರಣ ಶ್ರೀ ಅರವಿಂದ ಜತ್ತಿ ಅವರಿಗೆ ಆಯ್ಕೆ ಮಾಡಲಾಗಿದೆ. ಶರಣ ಶ್ರೀ ಅರವಿಂದ ಜತ್ತಿ ಅವರು ಬಸವ ಸಮಿತಿಯ ಮೂಲಕ ರಾಷ್ಟç, ಅಂತರ್‌ರಾಷ್ಟಿçÃಯ ಮಟ್ಟದಲ್ಲಿ ಬಸವಾದಿ ಶರಣರ ತತ್ವಾದರ್ಶಗಳನ್ನು ಪ್ರಸಾರ ಮಾಡುವ ಚರಜಂಗಮರಾಗಿದ್ದಾರೆ. ವಿಶೇಷವಾಗಿ ಬಹುಭಾಷಾ ವಚನ ಅನುವಾದ ಯೋಜನೆಯ ಅಡಿಯಲ್ಲಿ ದೇಶದ 26 ಭಾಷೆಗಳಲ್ಲಿ ವಚನ ಗ್ರಂಥವನ್ನು ಪ್ರಕಟಿಸಿದ್ದು ಒಂದು ಐತಿಹಾಸಿಕ ಕಾರ್ಯವಾಗಿದೆ. ಅಷ್ಟೇ ಅಲ್ಲದೆ ಎಂಟು ವಿದೇಶಿ ಭಾಷೆಗಳಲ್ಲಿಯೂ ವಚನ ಅನುವಾದ ಕಾರ್ಯ ಪೂರೈಸುತ್ತಿದ್ದಾರೆ. ದೇಶದ ಏಳು ಭಾಷೆಗಳಲ್ಲಿ ಮಾಸಪತ್ರಿಕೆಯನ್ನು ನಿರಂತರವಾಗಿ ನಡೆಸುತ್ತಿದ್ದಾರೆ.
ವಚನ ವ್ಯಕ್ತಿತ್ವ ವಿಕಸನ ಎಂಬ ನೂತನ ಕಾರ್ಯಕ್ರಮದ ಮೂಲಕ ಯುವಕರಲ್ಲಿ ಬಸವತತ್ವದ ಬೀಜವನ್ನು ಬಿತ್ತುತ್ತಿದ್ದಾರೆ. ಅಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ದೇಶ-ವಿದೇಶದ ಪ್ರಜ್ಞಾವಂತ ನಾಗರಿಕರಿಗೆ ಬಸವಾದಿ ಶರಣರ ವಿಚಾರಧಾರೆಯನ್ನು ಮುಟ್ಟಿಸುವ ಕಾರ್ಯವನ್ನು ನಿರಂತರವಾಗಿ ಶರಣ ಅರವಿಂದ ಜತ್ತಿ ಅವರು ಮುನ್ನಡೆಸುತ್ತಿದ್ದಾರೆ. ಅವರ ಸಮಗ್ರ ಸೇವೆಯನ್ನು ಗುರುತಿಸಿ, 2020 ನೇ ಸಾಲಿನ ಡಾ.ಚನ್ನಬಸವ ಪಟ್ಟದ್ದೇವರ ಅನುಭವಮಂಟಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿಯನ್ನು ದಿ: 28-11-2021 ರಂದು ಬಸವಕಲ್ಯಾಣದಲ್ಲಿ ನಡೆಯುವ ಅನುಭವಮಂಟಪ ಉತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Check Also
ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …
ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು …
ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …
ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …
ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …
ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …
ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …
ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …
ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …
ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …
ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …
ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …
ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …
ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …
ನೂರು ವರ್ಷಗಳ ಹಿಂದೆ ಒಬ್ಬ ಉದ್ಯಮಿ ಬೆಳಗಿನ ಕಾಫ಼ಿ ಸೇವಿಸುತ್ತ ಅಂದಿನ ದಿನಪತ್ರಿಕೆಯೊಂದನ್ನ ಕೈಗೆತ್ತಿಕೊಂಡು ಓದಲು ಪ್ರಾರಂಭಿಸುತ್ತಾನೆ. ಅದರಲ್ಲಿನ ಒಂದು …