ನೇಗಿನಹಾಳ ಸಂಪಗಾವಿ ರಸ್ತೆಯ ಬ್ರಿಡ್ಜ್ ಮರುನಿರ್ಮಾಣಕ್ಕೆ ಭೂಮಿಪೂಜೆ
ನೇಗಿನಹಾಳ: ಬ್ರಿಟಿಷ್ ಕಾಲದಲ್ಲಿ ತಾಲೂಕಾ ಕೇಂದ್ರವಾಗಿದ್ದ ಸಂಪಗಾವಿಯನ್ನು ಸಂಪರ್ಕಿಸಲು ನೇಗಿನಹಾಳ ಹಳ್ಳಕ್ಕೆ ಹಳೆ ಕಾಲದ ನೀರು ಹರಿಯುವ ಕಲ್ಲಿನ ಸೇತುವೆ ನಿರ್ಮಿಸಿದ್ದು ಕಾಲಾಂತರದಲ್ಲಿ ಶೀತಲಗೊಂಡು ಸಂಪೂರ್ಣ ಕಿತ್ತುಹೋಗಿದ್ದರಿಂದ ನೇಗಿನಹಾಳ, ಸಂಪಗಾವಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ದಾಟಿ ಹೋಗಲು ಹರಸಾಹಸ ಪಡಬೇಕಾಗಿತು. ಜೊತೆಗೆ ಅತೀ ಹೆಚ್ಚು ಮಳೆಯಾಗಿದ್ದರಿಂದ ಸೇತುವೆ ಸಂಪೂರ್ಣ ಹಾಳಾಗಿದ್ದು ಶೀಘ್ರವಾಗಿ ನಿರ್ಮಿಸಿ ಕೊಡಲು ಇಂದು ಭೂಮಿಪೂಜೆ ನೇರವೇರಿಸಲಾಗುತ್ತಿದೆ ಎಂದು ಚೆನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಗ್ರಾಮದ ಬೈಲವಾಡ ಹಳ್ಳದ ಸೇತುವೆ ನಿರ್ಮಾಣಕ್ಕೆ ಪಿಡ್ಲ್ಯೂಡಿ ಇಲಾಖೆಯಿಂದ ೬೦ಲಕ್ಷ ರೂಗಳ ವೆಚ್ಛದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ನೇರವೇರಿಸಿ ಮಾತನಾಡಿದರು. ನೇಗಿನಹಾಳ ಗ್ರಾಮದ ರೈತರು, ಸಾರ್ವಜನಿಕರ ಬಹಳಷ್ಟು ದಿನಗಳ ಬೇಡಿಕೆಯಾಗಿದ್ದ ಸೇತುವೆ ಇಂದು ನಿರ್ಮಾಣವಾಗುತ್ತಿದ್ದು ಸಂಪಗಾವಿಯ ಮೂಲಕ ಬೆಳಗಾವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಸುಗಮವಾಗಿ ಸಾಗಲು ಸಹಕಾರವಾಗುತ್ತದೆ ಎಂದರು.
೨೦೧೯ರಲ್ಲಿ ಬಂದ ಅತೀವ ವೃಷ್ಢಿಯಿಂದ ಚಿಕ್ಕ ಮಳೆ ಬಂದರು ಸಹಿತ ರಸ್ತೆ ಸಂಪೂರ್ಣ ಸಂಪರ್ಕ ನಿಂತುಹೋಗುತ್ತಿತ್ತು. ಸುಮಾರು ೪ವರ್ಷಗಳಿಂದ ಹರಿಯುವ ನೀರಿನಲ್ಲಿಯೇ ವಾಹನಗಳನ್ನು ಚಲಾಯಿಸಿಕೊಂಡು ಸಂಚರಿಸುತ್ತಿದ್ದರು. ನೂರಾರು ಜನ ವಾಹನ ಸವಾರರು, ರೈತರು ದನಕರಗಳನ್ನು ನೀರಿನಲ್ಲಿ ದಾಟಿಸುವಾಗ ಬಿದ್ದು ಮೈಮೂಳೆ ಮುರಿದುಕೊಂಡಿದ್ದು ಸರ್ವೇಸಾಮಾನ್ಯವಾಗಿತು.
ಸೇತುವೆ ನಿರ್ಮಾಣಕ್ಕೆ ಚಾಲನೆ ನಿಡಿದ್ದರಿಂದ ಇಂದು ನೇಗಿನಹಾಳ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬಹಳಷ್ಟು ನಿರಾಳವಾಗಿದ್ದಾರೆ. ತುಂಬ ಸಂತೋಷದಿಂದ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಪಿಡ್ಲ್ಯೂಡಿ ಅಧಿಕಾರಿ ಆರ್.ಬಿ ಹೆಡಗೆ, ಗುತ್ತಿಗೆದಾರ ನಂದಕಿಶೋರ ವಾಗರವಾಡೆ, ಎ.ಪಿ.ಎಮ್.ಸಿ ಸದಸ್ಯ ಬಿ.ಟಿ ಖಂಡಪ್ಪನವರ, ಬಸವೇಶ್ವರ ಬ್ಯಾಂಕ ಅದ್ಯಕ್ಷ ಬಿ.ಎಸ್ ಕಿವಡಸಣ್ಣವರ, ಬಿ.ಜೆ.ಪಿ ಮುಖಂಡ ಸೋಮನಿಂಗ ಕೋಟಗಿ, ರವಿ ಅಂಗಡಿ, ಬಸನಗೌಡ ಪಾಟೀಲ, ಬಸನಗೌಡ ಜುಟನ್ನವರ, ಮಹಾಂತೇಶ ಕುಲಕರ್ಣಿ, ಇಮ್ರಾನ ತತ್ತರಖಾನ, ಪ್ರಕಾಶ ಅಂಗಡಿ, ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.
ನೇಗಿನಹಾಳ, ಸಂಪಗಾವಿ ಹಾಗೂ ಸೂತ್ತಮೂತ್ತಲಿನ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳ್ಳಕ್ಕೆ ನೂತನವಾಗಿ ಸೇತುವೆಯ ನಿರ್ಮಾಣಕ್ಕೆ ಶಾಸಕ ಮಹಾಂತೇಶ ದೊಡ್ಡಗೌಡರ ಭೂಮಿಪೂಜೆ ನೇರವೇರಿಸಿದರು.