ಸಿದ್ದಯ್ಯ ಪುರಾಣಿಕ ವಿರಚಿತ ಶರಣರ ಚರಿತಾಮೃತ ಪ್ರವಚನ ಕೈಂಕರ್ಯ
nagaraj
October 19, 2021
featured, General News
ಹುಕ್ಕೇರಿ: ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ಸಿದ್ದಯ್ಯ ಪುರಾಣಿಕ ವಿರಚಿತ ಶರಣರ ಚರಿತಾಮೃತ ಪ್ರವಚನ ಕೈಂಕರ್ಯ ನೆರವೇರಿತು.
ಬಸವಾದಿ ಪ್ರಮಥರ ಆತ್ಮಸಮವಾದ ವಚನ ಸಾಹಿತ್ಯವನ್ನು ಪಲ್ಲಕ್ಕಿಯಲ್ಲಿ ಇಟ್ಟು ಉತ್ಸವ ಜರುಗಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಮಚಿತ್ತದ ರಂಗೋಲಿ ಅಲಂಕೃತಗೊಂಡ, ಜಾತಿ ಭೇದ ಭಾವವಿಲ್ಲದೆ ತಂದೆ ಬಸವಣ್ಣ ತಾಯಿ ನಿಲಮ್ಮ ಎಂದು ಗುರು ಬಸವಣ್ಣನವರ ಮತ್ತು ಮಾತೆ ನಿಲಮ್ಮ ತಾಯಿಯ ತೋರು ಭಾವಚಿತ್ರವನ್ನಿಟ್ಟು ಶಿವಶರಣರು ಕೊಟ್ಟ ಸ್ತ್ರೀ-ಪುರುಷ ಸಮಾನತೆಯನ್ನು ಬಸವ ಭಕ್ತರು ತೋರಿಕೊಟ್ಟರು.
ನಾಡಿನಲ್ಲಿ ಭಗವತ್ಪಾದಕರೆಂಬವರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಮಾನವರ ಹೆಗಲಮೇಲೆ ಕುಳಿತು ಅಡ್ಡಪಲ್ಲಕ್ಕಿ ಮಾಡಿ ಉದ್ದಕ್ಕೆ ಸಾಸ್ಟಾಂಗ ಹಾಕುವುದೆಂತು ವಿಪರ್ಯಾಸ. ಜಗದ ಇತ್ಯರ್ಥಕ್ಕಾಗಿ ಮೃತ್ಯೆಕ್ಕೆ ಅವತರಿಸಿದ ಜಗದಾದಿ ದೇಶಿಕರ ಕರಬರಹದಲ್ಲಿ ಮೂಡಿಬಂದ ಕರ್ಮದ ಕತ್ತಲೆಯ ಕಳೆಯುತ್ತಿರುವ ವಚನ ಸಾಹಿತ್ಯವೆಂಬ ಅಗರ್ಭ ಸಂಪತ್ತನಿಟ್ಟು ಹೆಗಲು ಕೊಟ್ಟು ಸಂಬ್ರಮಿಸಿದರು.
ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮೀಗಳು. ಧಾರವಾಡ ಮುರಘಾ ಮಠದ ಶ್ರೀ ಮ ನಿ ಪ್ರ ಶ್ರೀ ಮಲ್ಲಿಕಾರ್ಜುನ ಅಪ್ಪಗಳು, ಶ್ರೀ ಶಿವಬಸವ ಮಹಾಸ್ವಾಮಿಗಳು, ಹುಕ್ಕೆರೀಯ ಶ್ರೀಶರಣಬಸವ ದೇವರು ಬಸವಬಳವಿ ಸರ್ವ ಪೂಜ್ಯರ ಅಮೃತ ಹಸ್ತದಿಂದ ಭಕ್ತರಿಗೆ ಹಸ್ತಾಂತರವಾಗಿ ಬಸವ ಭಕ್ತರ ಹೃತ್ಕಮಲದಲ್ಲಿ ಸಾಗಿತು ಹೊಣತೇರಿನಲ್ಲಿ ಏರಿ ಬರುವ ರವಿಕಿರಣ ವಚನ ಪಲ್ಲಕ್ಕಿಗೆ ಮುಟ್ಟುವಲ್ಲಿ ಆಯಿತು ಮಹಾಮಂಗಳಾರತಿ ಮನ ಮನೋಹರವಾದ ದೃಶ್ಯ ಜನಮನ ಸೆಳೆಯಿತು. ಅಲಂಕೃತವಾದ ಪಲ್ಲಕ್ಕಿ ಬಸವಣ್ಣ ನೀಲಮ್ಮ ಬರುತ್ತಿರುವುದನ್ನು ನೋಡಿದರೆ ಅನಂತ ಆನಂದ ಸಾವಿರಕಣ್ಣುಗಳಿದ್ದರು ಸೇರೆಯಾಗದ ದೃಶ್ಯ.
ಲಲಾಟದಲ್ಲಿ ತ್ರಿಪುರಾಂಟ ಕೊರಳಲ್ಲಿ ಲಿಂಗ ತಲೆಯ ಮೇಲೆ ವಚನಕಟ್ಟು ಹೊತ್ತು ಸಾಲುಸಾಲಾಗಿ ಶರಣಶರಣೆಯರ ಗುಂಪುನೊಡಿದರೆ ಬಸವಕಲ್ಯಾಣದ ಕನ್ನಡಿ ಕಲ್ಯಾಣ ಹೆಬ್ಬಾಳ ಎಂಬಂತೆ ಕಂಡಿತ್ತು.
ಈ ಪರಂಪರೆ ಆಚಂದ್ರಾರ್ಕವಾಗಿ ಪ್ರತಿ ವರುಷ ಕಲ್ಯಾಣ ಹೆಬ್ಬಾಳದಲ್ಲಿ ನೆರೆವೇರುತ್ತದೆ. ವಚನ ಪಲ್ಲಕ್ಕಿ ಉತ್ಸವ ಅದು ಸಂಕೇತ ಇಲ್ಲಿಯ ಭಕ್ತರ ಜೀವನವೇ ವಚನ ನಿತ್ಯೊತ್ಸವವಾಗಿದೆ.
ಅನುಭವದ ನುಡಿಮುತ್ತುಗಳನು ಮಾತಿನಧಾರದಲ್ಲಿ ಪೋನಿಸುವುದು ಅಸಾಧ್ಯ.
Check Also
ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …
ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು …
ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …
ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …
ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …
ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …
ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …
ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …
ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …
ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …
ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …
ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …
ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …
ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …
ನೂರು ವರ್ಷಗಳ ಹಿಂದೆ ಒಬ್ಬ ಉದ್ಯಮಿ ಬೆಳಗಿನ ಕಾಫ಼ಿ ಸೇವಿಸುತ್ತ ಅಂದಿನ ದಿನಪತ್ರಿಕೆಯೊಂದನ್ನ ಕೈಗೆತ್ತಿಕೊಂಡು ಓದಲು ಪ್ರಾರಂಭಿಸುತ್ತಾನೆ. ಅದರಲ್ಲಿನ ಒಂದು …