Home / featured / ವೈದ್ದಿಕರ ಕುತಂತ್ರದಿಂದ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆ

ವೈದ್ದಿಕರ ಕುತಂತ್ರದಿಂದ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆ

ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು ಮೆಟ್ಟಿನಿಂತ ಮೊಟ್ಟಮೊದಲ ಗುರು ಬಸವಣ್ಣನವರ ಹಾಗೂ ಸಮಕಾಲೀನ ಶರಣರ ವಚನಗಳಿಂದ ತಿಳಿದುಬರುತ್ತದೆ.

ಮೌಡ್ಯದ ಅಂದಾನುಕರಣೆ ತುಂಬಿ ತುಳುಕುತ್ತಿದ್ದ ಕಾಲಮಾನದಲ್ಲಿ ಸರಳ ಹಾಗೂ ವೈಚಾರಿಕತೆಯ ಪಥದತ್ತ ಸಾಗಲು ದಾರಿ ತೋರಿಸಿದ ಮಹಾಮಾನವತಾವಾದಿ ಗುರು ಬಸವಣ್ಣನವರು ಸನಾತನ ವೈದಿಕ ಧರ್ಮದಿಂದ ಹೊರಬಂದು ಲಿಂಗಾಯತ ಧರ್ಮ ಸ್ಥಾಪಿಸಿದರು.

ಇದರಿಂದ ಗುರು ಬಸವಣ್ಣನವರ ವೈದ್ಧಿಕ ಸನಾತನಿಗಳ ಕೆಂಗಣ್ಣಿಗೆ ಗುರಿಯಾಗಿ ಕುತಂತ್ರದಿಂದ ಕಲ್ಯಾಣ ತೇಜಿಸಿ ಕೂಡಲಸಂಗಮದಲ್ಲಿ ಲಿಂಗದಲ್ಲಿ ಲೀನವಾದರು.

ಅವರು ಕಾಲವಾದ ನಂತರ ಬಸವಣ್ಣನವರ ಅನುಯಾಯಿಗಳನ್ನು ಕಂಡಲ್ಲಿ ಕೊಲ್ಲುವುದು, ವಚನ ಸಾಹಿತ್ಯ ಸುಡುವುದು ಆರಂಭವಾಯಿತು. ವಚನ ಸಾಹಿತ್ಯ ರಕ್ಷಣೆಗಾಗಿ ದಟ್ಟವಾದ ಅರಣ್ಯ, ಗುಡ್ಡಗಾಡು ಪ್ರದೇಶದಲ್ಲಿ ಬಂದು ನೆಲೆಸಿದರು. ನಂತರ ಶತಮಾನಗಳು ಕಳೆದಂತೆ ಜಗತ್ತಿನಾದ್ಯಂತ ಬಸವತತ್ವ, ಲಿಂಗಾಯತ ಧರ್ಮ ಪ್ರಚಾರ ಪಡೆಯಲಾರಂಭಿಸಿತು.

17 ಮತ್ತು 18 ನೆಯ ಶತಮಾನದಲ್ಲಿ ಪ್ರಾಚೀನ ಸನಾತನ ವೀರಶೈವ ವೈದ್ಧಿಕರು ಬಸವಣ್ಣನವರ ತತ್ವಗಳಿಗೆ ಮಾರುಹೋಗಿ ಲಿಂಗಾಯತ ಧರ್ಮದಲ್ಲಿ ಬಂದು ಸೇರಿಕೊಂಡರು ಅವರು ಶಿವಲಿಂಗ ಪೂಜೆಯ ಜೊತೆಗೆ ಇಷ್ಟಲಿಂಗ ಪೂಜೆಯನ್ನು ಮಾಡಲಾರಂಭಿಸಿದರು. ಇದರಿಂದ ಲಿಂಗಾಯತ ಪದ ಬಳಕೆ ಕಡಿಮೆಯಾಗುತ್ತಾ ಸನಾತನ ವೈದ್ಧಿಕ ವೀರಶೈವ ಪದದ ಬಳಕೆ ಹೆಚ್ಚಾಗ ತೊಡಗಿತು. ಆಗ ಲಿಂಗಾಯತ ಧರ್ಮ ಪದವು ಗೌನವಾಗತೋಡಗಿ ತು.

19 ನೆಯ ಶತಮಾನದಲ್ಲಿ ಹುಟ್ಟಿಕೊಂಡ ವೀರಶೈವ ಮಹಾಸಭೆ, ವಾರದ ಮಲ್ಲಪ್ಪನವರ ಲಿಂಗಿಬ್ರಾಹ್ಮಣ ಹೋರಾಟ, ಮೈಸೂರು ಅರಸರಿಂದ ಲಿಂಗಾಯತ ಮಠಾಧೀಶರ ಸಾಮೂಹಿಕ ಹತ್ಯ, ಮಠ-ಮಾನ್ಯಗಳು ಲಿಂಗಾಯತ ಪದಬಳಕೆ ಬಿಟ್ಟು ವೀರಶೈವ ಪದಬಳಕೆ ಆರಂಭಿದರಿಂದ ಲಿಂಗಾಯತ ಧರ್ಮದ ವಚನ ಸಾಹಿತ್ಯದ ತತ್ವ – ಸಿದ್ಧಾಂತಗಳು, ಸಂಸ್ಕಾರ ಸಂಸ್ಕೃತಿ, ಆಚಾರ-ವಿಚಾರಗಳು ಸ್ಪಷ್ಟವಾಗಿ ಜನರಿಗೆ ಮುಟ್ಟದೆ ಕಲಬೇರಿಕೆಯ ರೂಪತಾಳಿದ್ದರ ಫಲವಾಗಿ ಲಿಂಗಾಯತ ಧರ್ಮ ಇಂದಿಗೂ ಸ್ವತಂತ್ರ ಧರ್ಮವಾಗಲೂ ಹಲವಾರು ಅಡಕುಗಳನ್ನು ಹೊಂದಿಕೊಂಡಿದೆ.

ಲಿಂಗಾಯತ ಧರ್ಮದ ಪುನರುಜ್ಜೀವನ ಕಾಲ ಎಂದರೆ 20 ನೆಯ ಶತಮಾನ ಅದು ಫ.ಗು ಹಳಕಟ್ಟಿ, ಹರ್ಡೆಕರ ಮಂಜಪ್ಪ, ರೇ. ಉತ್ತಂಗಿ ಚನ್ನಬಸಪ್ಪ, ಲಿಂಗಾನಂದ ಮಹಾಸ್ವಾಮಿಗಳಿಂದ ವಚನ ಸಂಶೋಧನೆ, ಲಿಂಗಾಯತ ಧರ್ಮ ಪ್ರವಚನ ಕಾರ್ಯ ಆರಂಭವಾಯಿತು.

ನಂತರದ ದಿನಮಾನಗಳಲ್ಲಿ ನೂರಾರು ಜನ ಮಠಾಧೀಶರು ಪ್ರವಚನ ಕಾರ್ಯಗಳನ್ನು ಆರಂಭಿಸಿದರು. ಲಿಂಗಾಯತ ಧರ್ಮದ ಕುರಿತು ಸ್ಪಷ್ಟವಾಗಿ ಮಾತನಾಡಲಾರಂಭಿಸಿದರು.

ಸುಮಾರು 1940 ರಲ್ಲಿ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಟ ಆರಂಭವಾಯಿತು ಆದರೆ ಭಾರತದ ಸ್ವಾತಂತ್ರ್ಯ ಹೋರಾಟವೇ ಮುಖ್ಯವೆಂದು ಅಂದು ಹೋರಾಟವನ್ನು ಕೈಬಿಟ್ಟರು. ಇತ್ತೀಚಿಗೆ ಪೂಜ್ಯ ಮಾತೆ ಮಹಾದೇವಿ ಅವರು ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಆರಂಭಿಸಿದರು.

ಬೀದರ ನಗರದಲ್ಲಿ ಮೊಟ್ಟಮೊದಲಿಗೆ ಆರಂಭವಾದ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ಪೂಜ್ಯ ಮಾತಾಜಿ , ಪೂಜ್ಯ ಡಾ ಬಸವಲಿಂಗ ಪಟ್ಟದ್ದೆವರು, ಅಕ್ಕ ಅನ್ನಪೂರ್ಣಾ, ಅಕ್ಕ ಗಂಗಾಭಿಕಾ, ಬೆಲ್ದಾಳ ಶರಣರು ಸೇರಿದಂತೆ ನಾಡಿನ ಅನೇಕ ಪೂಜ್ಯರು ನೇತೃತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಬೀದರ ಸಂಸದರಾದ ಭಗವಂತ ಖೂಬಾ, ಜೆ.ಡಿ.ಎಸ್ ಪಕ್ಷದ ಬಸವ ಕಲ್ಯಾಣ ಶಾಸಕರಾದ ಮಲ್ಲಿಕಾರ್ಜುನ ಖೂಬಾ, ಮಕ್ಕಳ ಪಕ್ಷದ ಶಾಸಕ ಅಶೋಕ ಖೇಣಿ, ಶಾಸಕ ಅಜಯಸಿಂಗ್ ಸೇರಿದಂತೆ ಎಲ್ಲ ಪಕ್ಷದ ನೂರಾರು ಮುಖಂಡರು ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಈ ಹೋರಾಟದಿಂದ ಲಿಂಗಾಯತ ಸಮಾಜ ಎಚ್ಚರವಾಗಿ ಎಲ್ಲ ಕಡೆ ಹೋರಾಟ ಆರಂಭಿಸಿದರೆ ಒಂದು ಕಡೆ ವೀರಶೈವ ಮಹಾಸಭೆಗೆ ದೊಡ್ಡ ಸವಾಲಾಗಿ ಪರಿಣಮಿಸಿತು ಇನ್ನೊಂದು ಕಡೆ ವೈದ್ಧಿಕ ಸನಾತನವಾದಿಗಳಿಗೆ ನುಂಗಲಾರದ ತುತ್ತಾಯಿತು. ನಂತರ ಬೆಳಗಾವಿಯಲ್ಲಿ ನಡೆಯುವ ಸಮಾವೇಶಕ್ಕೆ ಬಿಜೆಪಿ ಹೈಕಮಾಂಡ್, ಪಂಚಪೀಠದ ಸ್ವಾಮಿಗಳು,‌ ಹಾಗೂ ಆರ್.ಎಸ್.ಎಸ್ ನಾಯಕರು ಬಿಜೆಪಿ ಪಕ್ಷದವರಿಗೆ ಲಿಂಗಾಯತ ಹೋರಾಟದಿಂದ ದೂರಸರಿಯುವಂತೆ ಸ್ಪಷ್ಟವಾಗಿ ಹೇಳಿದರು. ಕೆಲವು ಲಿಂಗಾಯತರೇ ಪಕ್ಷದ ಹಿತಕಾಯಲು, ಟಿಕೇಟ್ ಪಡೆಯಲು, ವಿಶ್ವಾಸ ಕಾಯಲು ಹಾಗೂ ಶಾಸಕರಾಗಲು, ಲಿಂಗಾಯತ ಧರ್ಮದ ವಿರುದ್ಧ ಮಾತನಾಡಲಾರಂಭಿಸಿದರು. ಇದರಿಂದ ಅಲ್ಲಿ ಆರಂಭವಾದ ವಿರೋಧ ಲಿಂಗಾಯತ ಧರ್ಮದ ಸಿಪಾರಸ್ಸು ಆಗುವವರೆಗೆ ಮಂದೆವರೆಯಿತು. ಇದರಿಂದ ಲಿಂಗಾಯತ ಧರ್ಮದ ಹೋರಾಟಗಾರರ ವಿರುದ್ಧ ಬಹುದೊಡ್ಡ ಪಡೆಯೇ ನಿರ್ಮಾಣವಾಗಿ ಲಿಂಗಾಯತ ಧರ್ಮದ ಪರವಾಗಿದ್ದ ಸಚಿವ ಶಾಸಕರನ್ನು ಸೋಲಿಸುವ ಕುತಂತ್ರಕ್ಕೆ ಕೈಹಾಕಿದರು. ಇಂದಿಗೂ ಲಿಂಗಾಯತ ಧರ್ಮದ ಹೋರಾಟವನ್ನು ಹತ್ತಿಕ್ಕಲು ಶತಪ್ರಯತ್ನ ನಡೆಯುತ್ತಲೇ ಇದೆ. ಇದಕ್ಕೆ ಕೊನೆ ಯಾವಾಗ ಎಂಬುವುದು ಕಾಯ್ದು ನೋಡ ಬೇಕಾಗಿದೆ.

About nagaraj

Check Also

20 ನೇ ಕಲ್ಯಾಣ ಪರ್ವ ಕ್ಷಣಗಣನೆ ಆರಂಭ

ಲೇಖಕರು – ಸಂಗಮೇಶ ಎನ್ ಜವಾದಿ. ಪತ್ರಕರ್ತ, ಪ್ರಗತಿಪರ ಚಿಂತಕರು. ಬೀದರ ಜಿಲ್ಲೆ. ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು …

ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಯ ವೇಳಾಪಟ್ಟಿ

ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ‌ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …

ಡಾ. ಎಂ.ಬಿ ಪಾಟೀಲ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿ

ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …

ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಶ್ರೀ ಡಾ. ಎಂ.ಬಿ ಪಾಟೀಲರ ಜನ್ಮದಿನ

ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

“ನೊಬೆಲ್” ಎಂಬ ಮನುಕುಲದ ದ್ರುವತಾರೆ…🌟

ನೂರು ವರ್ಷಗಳ ಹಿಂದೆ ಒಬ್ಬ ಉದ್ಯಮಿ ಬೆಳಗಿನ ಕಾಫ಼ಿ ಸೇವಿಸುತ್ತ ಅಂದಿನ ದಿನಪತ್ರಿಕೆಯೊಂದನ್ನ ಕೈಗೆತ್ತಿಕೊಂಡು ಓದಲು ಪ್ರಾರಂಭಿಸುತ್ತಾನೆ. ಅದರಲ್ಲಿನ ಒಂದು …

Leave a Reply

Your email address will not be published.