
ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ ಮಾಜಿ ಗೃಹ ಸಚಿವ ಡಾ. ಎಂ.ಬಿ ಪಾಟೀಲರು ಭವಿಷ್ಯತ್ತಿನಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಕೇವಲ ವಿಜಯಪುರ ಅಷ್ಟೇ ಅಲ್ಲದೇ ನಾಡಿನ ಸಮಸ್ತ ಜನತೆಯ ಬಾಳಿಗೆ ನಂದಾದೀಪವಾಗಲಿ ಎಂಬುವುದು ನಮ್ಮೆಲ್ಲರ ಆಶಯವಾಗಿದೆ ಎಂದು ಲಿಂಗಾಯತ ಹೋರಾಟಗಾರ, ಪತ್ರಕರ್ತ ಶಿವಾನಂದ ಮೇಟ್ಯಾಲ ಹೇಳಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಜಿ ಗೃಹ ಹಾಗೂ ಜಲಸಂಪನ್ಮೂಲ ಸಚಿವ, ಲಿಂಗಾಯತ ನಾಯಕ ಡಾ. ಎಂ.ಬಿ ಪಾಟೀಲರ ಜನ್ಮದಿನದ ನಿಮಿತ್ತ ಅಭಿಮಾನಿಗಳು ಹಾಲು, ಹಣ್ಣು ಹಾಗೂ ಸಿಹಿ ವಿತರಿಸಿ ಮಾತನಾಡಿದರು.
ಎಂ.ಬಿ ಪಾಟೀಲರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನ ಆಡಳಿತಾವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿ ಸುಮಾರು 55 ಸಾವಿರ ಕೋಟಿ ರೂಗಳ ಯೋಜನೆ ರೂಪಿಸಿ ಬರಗಾಲದ ಪ್ರದೇಶಗಳಿಗೆ ಕೆರೆ, ಕಾಲುವೆ, ಮೇಲಸೇತುವೆ ಮೂಲಕ ನೀರು ಹರಿಸಿದರು. ಜಗತ್ತಿನ ಅತ್ಯಂತ ಉದ್ಧವಾದ ಮೇಲಸೇತುವೆ ನಿರ್ಮಿಸಿ ವಿಜಯಪುರ ಜಿಲ್ಲೆಯ ನೂರಾರು ಗ್ರಾಮಗಳಿಗೆ ನೀರು ಹರಿಸಿ ಬರಮುಕ್ತ ಜಿಲ್ಲೆ ಮಾಡಲು ಪಣತೊಟ್ಟು ಯಶಸ್ವಿಯಾದರು.
ಗೃಹ ಸಚಿವರಿದ್ದಾಗ ಔರಾಧಕರ್ ವರದಿ ಅನುಷ್ಠಾನಗೊಳಿಸಿ ಪೋಲಿಸ್ ಸಿಬ್ಬಂದಿಯ ವೇತನ ಹೆಚ್ಚಿಸಿದ್ದರು, ಆಡಳಿತದ ಅನುಭವ ಹೊಂದಿರುವ ಇಂತಹವರು ಕರ್ನಾಟಕ ರಾಜ್ಯದ ಮುಂದಿನ ಮುಖ್ಯಮಂತ್ರಿಗಳಾಗಲಿ ಎಂದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಜಗದೀಶ ಹಲಸಗಿ, ಗ್ರಾ.ಪಂ ಅದ್ಯಕ್ಷ ಶಿವಾಜಿ ಮುತ್ತಗಿ, ಸದಸ್ಯರಾದ ಸುಭಾಷ್ ರುಮೋಜಿ, ನಾಗರಾಜ ನರಸನ್ನವರ, ನಾಗಪ್ಪ ಭೋವಿ, ಶ್ರೀಶೈಲ ಚನ್ನಪ್ಪಗೌಡರ, ಮಲ್ಲಪ್ಪ ಭೂತಾಳಿ, ಸರ್ವೇಶ ಬಬಲಿ, ಆನಂದ ಚಿಕ್ಕಮಠ, ಮಹಾದೇವ ಮುದ್ದೇನ್ನವರ, ಆಸ್ಪತ್ರೆಯ ಸಿಬ್ಬಂದಿಗಳು, ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.