Home / featured / ಜಗದ್ಭವ್ಯ ಮೇರು ಕೃತಿ : ಮಹಾತ್ಮರ ಚರಿತಾಮೃತ

ಜಗದ್ಭವ್ಯ ಮೇರು ಕೃತಿ : ಮಹಾತ್ಮರ ಚರಿತಾಮೃತ

ಲೇಖನ: ಪ್ರಕಾಶ ಗಿರಿಮಲ್ಲನವರ                                                  ಬೆಳಗಾವಿ ಮೊ : ೯೯೦೨೧೩೦೦೪೧

ಬೆಳಗಾವಿ: ಮಾನವ ಮಹಾತ್ಮರ ಚರಿತಾಮೃತ ಅಥಣಿ ಮೋಟಗಿಮಠದ ಪೂಜ್ಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿಯವರು ರಚಿಸಿದ ಒಂದು ಮಹೋನ್ನತ ಕೃತಿಯಾಗಿದೆ, ೨೧೬ ಜನ ಮಹಾತ್ಮರ ದಿವ್ಯಜೀವನದ ದರ್ಶನ ಇಲ್ಲಿದೆ. ಇದೊಂದು ವಿನೂತನ ಹೆಬ್ಬೊತ್ತಿಗೆ, ಅಧ್ಯಾತ್ಮಜೀವಿಗಳಿಗೊಂದು ದಾರಿದೀಪ. ಕರುಣಾಳು ಬೆಳಕು, ಪ್ರಾಸಾದಿಕ ಗ್ರಂಥ, ಗ್ರಂಥಗಳಿಗೆ ಗ್ರಂಥರಾಜ, ಅನೇಕ ಗ್ರಂಥಗಳಿಗೆ ವಸ್ತುವಾಗಬಲ್ಲ ವಿಷಯ ವೈಫಲ್ಯವುಳ್ಳ ಗ್ರಂಥ. ಕರ್ನಾಟಕ – ಭಾರತ – ವಿದೇಶಿ ಮಹಾತ್ಮರೂ ಇಲ್ಲಿ ಎಡೆಪಡೆದಿದ್ದಾರೆ, ಈ ಮಹಾತ್ಮರೆಲ್ಲ ಉಪಮಿಸಬಾರದ ಉಪಮಾತೀತರು, ಕಾಲಕರ್ಮರಹಿತರು. ನಮ್ಮ ನಡುವೆ ಬದುಕಿ, ಬಾಳಿದ ಪುಣ್ಯಪುರುಷರು. ಇಂತಹ ಮಹಾತ್ಮರನ್ನು ನೆನೆಯುವುದೇ ನಮ್ಮ ಉದಯ; ಮರೆಯುವುದೇ ಅಸ್ತಮಾನ ! ಅಂಕಲಗಿ ಅಡವಿಸಿದ್ದೇಶ್ವರರಿಂದ ಪ್ರಾರಂಭವಾದ ಈ ಚರಿತಾಮೃತ, ಹೊಸಳ್ಳಿ ಬೂದೀಶ್ವರ ಶಿವಯೋಗಿಗಳ ವರೆಗೆ ಎಲ್ಲ ಮಹಾತ್ಮರ ಸಂಕ್ಷಿಪ್ತವಾದ ಸಮಗ್ರವಾದ ವಿವರಣೆ ಈ ಕೃತಿಯಲ್ಲಿ ದೊರೆಯುತ್ತದೆ. ಮಹಾತ್ಮರಿಗೆ ಯಾವುದೇ ಜಾತಿ ಧರ್ಮದ ಹಂಗಿಲ್ಲ. ಹೀಗಾಗಿ ಇಲ್ಲಿರುವ ಎಲ್ಲ ಮಹಾತ್ಮರು ವಿಶ್ವಮಾನವರು, ಜಾತಿ – ಮತ – ಪಂಥಗಳನ್ನು ಮೀರಿ ನಿಂತ ಮಹನೀಯರು. ಸಿದ್ಧಗಂಗಾಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಮುರುಗೋಡ ಮಹಾಂತ ಶಿವಯೋಗಿಗಳು, ನಾಗನೂರು ಶಿವಬಸವ ಸ್ವಾಮಿಗಳು, ಭಾಲ್ಕಿ ಚೆನ್ನಬಸವ ಪಟ್ಟದ್ದೇವರು, ಮೊದಲಾದ ಶತಾಯಿಷಿಗಳ ಬದುಕು ಇಲ್ಲಿದೆ.

ಶಿಶುನಾಳ ಶರೀಫ , ಬಂದೇನವಾಜ , ಸಾವಳಗಿ ಶಿವಲಿಂಗೇಶ್ವರ ಮೊದಲಾದ ಭಾವೈಕ್ಯ ಮೇರುಗಳು , ಮಹಮ್ಮದ ಪೈಗಂಬರ್, ಏಸು ಕ್ರೈಸ್ತ, ಝರತುಷ್ಟ ಮೊದಲಾದ ವಿದೇಶಿ ಪ್ರವಾದಿಗಳು, ಸಜ್ಜಲಗುಡ್ಡದ ಶರಣಮ್ಮ, ಗಡಹಿಂಗ್ಲಜ ಚಂದ್ರಮ್ಮ ತಾಯಿ, ಮೀರಾ, ಅಂಡಾಳ ಮೊದಲಾದ ಮಹಿಳಾ ಆನುಭಾವಿಗಳು, ಸಿದ್ಧಾರೂಢರು, ಶಿವಾನಂದರು, ಶಿವಪುತ್ರ ಸ್ವಾಮಿಗಳವರಂತಹ ಆರೂಢ ಜ್ಯೋತಿಗಳು. ಹಳಕಟ್ಟಿ, ಹರ್ಡೇಕರ ಮಂಜಪ್ಪ , ಉತ್ತಂಗಿ ಚೆನ್ನಪ್ಪ ಮೊದಲಾದ ವಚನ ಸಾಹಿತ್ಯ ಸಾಧಕರು, ೧೨ ನೇ ಶತಮಾನದ ಬಸವಣ್ಣ , ಅಲ್ಲಮ, ಸಿದ್ದರಾಮ, ಗೋರಖನಾಥರಿಂದ ಹಿಡಿದು, ೨೦ ನೇ ಶತಮಾನದ ಗದುಗಿನ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ವರೆಗೆ ಎಲ್ಲ ವಯೋಮಾನದ ಎಲ್ಲ ಕಾಲದ ಮಹಾತ್ಮರ ಜೀವನ – ಸಾಧನೆ – ಸಿದ್ಧಿಗಳ ವಿವರ ಈ ಒಂದು ಕೃತಿಯಲ್ಲಿ ದೊರೆಯುತ್ತದೆ . ಜೀವನದ ವಿಕಾಸ – ವಿಸ್ತಾರ – ವಿಮುಕ್ತಿಯ ದಾರಿಯನ್ನು ಈ ‘ ಮಹಾತ್ಮರ ಚರಿತಾಮೃತ ‘ ತರೆದು ತೋರಿಸುತ್ತದೆ . ಇಂದು ಮನುಷ್ಯ ತನ್ನ ಅಸ್ತಿತ್ವವನ್ನೂ ಅಸ್ಮಿತೆಯನ್ನೂ ಕಳೆದುಕೊಂಡು ತೊಳಲಾಡುತ್ತಿದ್ದಾನೆ . ಅಸ್ತಿತ್ವ ಮತ್ತು ಅಸ್ಮಿತೆಯ ಹುಡುಕಾಟವೇ ಈ ಮಹಾತ್ಮರ ಚರಿತಾಮೃತವಾಗಿದೆ . ಮನುಷ್ಯ ಇಂದು ಪ್ರಕೃತಿ ಪರಿಣಾಮದ ಒಂದು ಪರ್ವ ಸಂಧಿಯಲ್ಲಿ ಸಿಕ್ಕುಬಿದ್ದಿದ್ದಾನೆ . ಕರೋನಾದಂತಹ ಭಯಂಕರ ರೋಗದ ಭಯದಲ್ಲಿ ಅವನೀಗ ತನ್ನ ಮುಂದಿನ ದಾರಿಯನ್ನು ಆರಿಸಿಕೊಳ್ಳಬೇಕಾಗಿದೆ . ಮನುಷ್ಯನ ಮನ ಇಂದು ಒಂದು ವೈಷಮ್ಯದ ಗೊಂದಲಕ್ಕೆ ಸಿಕ್ಕಿದೆ . ಕೆಲಕೆಲವು ವಿಷಯಗಳಲ್ಲಿ ಆವನು ಅಸಾಧ್ಯವಾದ ಅಭ್ಯುದಯ ಹಾಗು ಉತ್ಕರ್ಷವನ್ನು ಸಾಧಿಸಿದ್ದಾನೆ . ಹಾಗೆಯೇ ಇನ್ನು ಕೆಲವು ದಿಕ್ಕುಗಳಲ್ಲಿ ಅವನ ಪ್ರಗತಿ ಕುಂಠಿತವಾಗಿ ದಿಗ್ಭ್ರಾಂತಗೊಂಡಿದೆ . ಮುಂದಿನ ದಾರಿ ಸಿಗದಂತಾಗಿದೆ . ನಿತ್ಯ ಚಂಚಲ ಪ್ರಾಣ – ಸಂಕಲ್ಪ ಮತ್ತು ಮನಸ್ಸು ನೀಗದ ಜಟಿಲತೆಯನ್ನು ನಿರ್ಮಿಸಿವೆ . ಅದಕ್ಕೆ ಕೊನೆಯೇ ಇಲ್ಲ . ಈ ಎಲ್ಲ ಸಮಸ್ಯೆಗಳಿಗೆ ಸೂಕ್ತ ಉತ್ತರವಾಗಿ ಮಹಾತ್ಮರ ಚರಿತಾಮೃತ ನಮ್ಮ ಮುಂದಿದೆ . ಕರೋನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತು ಆತಂಕದಲ್ಲಿತ್ತು . ವಿಷಾದಯೋಗದಲ್ಲಿತ್ತು . ಇಂಥ ಸಂದರ್ಭದಲ್ಲಿ ಪೂಜ್ಯ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿಯವರು ಇಂಥ ಒಂದು ಮಹಾನ್ ಗ್ರಂಥ ರಚನೆಯ ಹೊಳಹು ಹಾಕಿ , ಕಾರ್ಯಪ್ರವೃತ್ತರಾದರು . ಒಂದು ವರ್ಷದ ಅವಧಿಯಲ್ಲಿ ನಾಲ್ಕು ನೂರಕ್ಕಿಂತ ಹೆಚ್ಚು ಗ್ರಂಥಗಳನ್ನು ಅಧ್ಯಯನ ಮಾಡಿದರು , ಸಾವಿರಾರು ಲೇಖನಗಳನ್ನು ಪರಿಶೀಲಿಸಿದರು . ಪ್ರತಿಯೊಂದು ಚರಿತ್ರೆಯೂ ಅಧಿಕೃತವಾಗಬೇಕೆಂಬ ಉದ್ದೇಶದಿಂದ ನೂರಾರು ವಿದ್ವಾಂಸರನ್ನು ಸಂಪರ್ಕಿಸಿದರು . ವರ್ಷಗಳು , ಘಟನೆಗಳು ಎಲ್ಲವೂ ಚಾರಿತ್ರಿಕವಾಗಿ ಐತಿಹಾಸಿಕವಾಗಿರಲೆಂದು ತುಂಬ ಶ್ರಮವಹಿಸಿದರು . ಒಂದೊಂದು ಚರಿತ್ರೆಯೂ ವಿನೂತನವಾಗಿವೆ . ಒಬ್ಬರ ಚರಿತ್ರೆ ಓದಿದ ನಂತರ , ಇನ್ನೊಬ್ಬ ಮಹಾತ್ಮರ ಚರಿತ್ರೆ ಓದಲು ತೊಡಗಿದರೆ , ಅಲ್ಲಿಯ ಹೊಸ ಅನುಭವ ಬೇರೆಯೇ ಆಗಿರುತ್ತದೆ . ಅಷ್ಟು ಆಪ್ಯಾಯಮಾನವಾದ ಶೈಲಿಯನ್ನು ಶ್ರೀಗಳು ಬಳಸಿದ್ದಾರೆ . ಇಲ್ಲಿಯ ಭಾಷೆಯ ಬಗ್ಗೆ ವಿಶೇಷವಾಗಿ ಹೇಳಬೇಕು . ಸ್ವಾಮೀಜಿ ಅವರದೇ ಒಂದು ಶೈಲಿ ಇದೆ . ಅದು ಪ್ರಾಸಾದಿಕ ಶೈಲಿ , ಅವರು ಅರ್ಥೈಸುವ ರೀತಿ , ವಿವೇಚಿಸುವ ಬಗೆ , ಒಂದೊಂದು ಪರಿಭಾವನಾರ್ಹ , ಬೆಡಗನ್ನು ಬಿಚ್ಚಿ ತೋರಿಸುವ – ಉಪಮೆ , ಪ್ರತಿಮೆ ಸಂಕೇತಗಳಲ್ಲಿ ನಿನದಿಸುವ ಧ್ವನಿಯ ಹೊರಹೊಮ್ಮಿಸುವ ಕಲೆ ಶ್ರೀಗಳಿಗೆ ಹಸ್ತಗತವಾಗಿದೆ . ಆ ಭಾಷೆಯನ್ನು ಓದಿಯೇ ಅನುಭವಿಸಬೇಕು . ಅಷ್ಟೊಂದು ರಸಮಯವಾದ ಭಾಷೆಯನ್ನು ಬಳಸಿದ್ದಾರೆ . ಮಹಾತ್ಮರ ಚರಿತಾಮೃತ ಒಂದು ಅದ್ಭುತ ಕಥನಕಾವ್ಯವಾಗಿದೆ . ಸಾವಿರಾರು ವರ್ಷಗಳ ಮತ್ತು ಸಮಕಾಲೀನರ ಜೀವನ ಚಿತ್ರಣವನ್ನು ಇಷ್ಟು ಸುಂದರವಾಗಿ ಹಿಡಿದಿಡಲು ಬಹುಕಷ್ಟಸಾಧ್ಯವಾದುದು . ಶ್ರೀಗಳು ಈ ಮಹಾತ್ಮರ ಜೀವನದಲ್ಲಿ ಒದಗಬಹುದಾದ ಅನೇಕ ಸಂದರ್ಭಗಳನ್ನು ರಸವತ್ತಾಗಿ ಚಿತ್ರಿಸಿದ್ದಾರೆ. ಶ್ರೀಗಳ ಕಾವ್ಯಮಯ ಶೈಲಿಯಲ್ಲಿ ಈ ಚರಿತ್ರೆಗಳು ದಾಖಲಾದ ನಿರರ್ಗಳವಾಗಿ ಪ್ರಹಿಸಿದೆ . ವಸ್ತು , ಗುಣ , ಗಾತ್ರಗಳಿಂದ ಈ ಕೃತಿ ಮಹತ್ತಾಗಿದೆ . ಪ್ರಭುಚನ್ನಬಸವ ಸ್ವಾಮೀಜಿಯವರ ಪ್ರತಿಭೆಯಲ್ಲಿ ಅರಳಿ ಮೂಡಿ ನಿಂತ ಈ ಮಹಾಕೃತಿಯು ಕನ್ನಡಕ್ಕೊಂಡು ವಿಶಿಷ್ಟ ಕೊಡುಗೆಯಾಗಿದೆ . ಕಾಣಿಕೆಯಾಗಿದೆ . ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಶಾಸ್ತಚೂಡಾಮಣಿ ಪ್ರೊ . ಮಲ್ಲೇಪುರಂ ಜಿ . ವೆಂಕಟೇಶ ಅವರು ಮುನ್ನುಡಿಯಲ್ಲಿ ಬರೆಯುತ್ತ , ‘ ಭಾರತೀಯ ಸಾಹಿತ್ಯ ಪ್ರಕಾರದಲ್ಲಿ ಇಂತಹದೊಂದು ಪ್ರಯೋಗ ನಡೆದಿಲ್ಲವೆಂದು ‘ ಹೇಳಿರುವುದು ಉತ್ತೇಕ್ಷೆಯ ಮಾತಲ್ಲ . ಇದು ನಿಜವಾಗಿಯೂ ಒಂದು ಅನನ್ಯ ಪ್ರಯೋಗ . ಇಂಥ ಮಹಾನ್ ಕೃತಿಯನ್ನು ರಚಿಸಿದ ಪೂಜ್ಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಅವರು ಸಮಸ್ತ ಕನ್ನಡಿಗರ ಗೌರವಾಭಿನಂದನೆಗಳಿಗೆ ಪಾತ್ರರಾಗಿದ್ದಾರೆ.

ಮಹಾತ್ಮರ ಚರಿತಾಮೃತ ಲೋಕಾರ್ಪಣೆ

ಅಥಣೀಶರ ಮಹಾತ್ಮರ ಚರಿತಾಮೃತ ಕೃತಿಯು ೨೫ ಸೆಪ್ಟೆಂಬರ್ ೨೦೨೧ ಶನಿವಾರ ಬೆಳಿಗ್ಗೆ ೧೦-೩೦ ಗಂಟೆಗೆ ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಲೋಕಾರ್ಪಣೆಯಾಗಲಿದೆ . ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಈ ಕೃತಿಯನ್ನು ಲೋಕಾರ್ಪಣೆ ಮಾಡುವರು . ಪೂಜ್ಯ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು , ಜಗದ್ಗುರು ಸುತ್ತೂರು ಸಂಸ್ಥಾನಮಠ , ಮೈಸೂರು , ಪೂಜ್ಯ ಶ್ರೀ ಜಗದ್ಗುರು ಡಾ . ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಎಡೆಯೂರು – ಡಂಬಳ – ಗದಗ , ಪೂಜ್ಯ ಶ್ರೀ ಜಗದ್ಗುರು ಡಾ . ಶಿವಮೂರ್ತಿ ಮುರುಘಾ ಶರಣರು ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗ , ಪೂಜ್ಯ ಶ್ರೀ ಜಗದ್ಗುರು ಡಾ . ನಿರ್ಮಲಾನಂದನಾಥ ಮಹಾಸ್ವಾಮಿಗಳವರು ಜಗದ್ಗುರು ಶ್ರೀ ಆದಿಚುಂಚನಗಿರಿ ಸಂಸ್ಥಾನಮಠ ಆದಿಚುಂಚನಗಿರಿ, ಪೂಜ್ಯ ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀ ಸಿದ್ಧಗಂಗಾಮಠ, ಸಿದ್ಧಗಂಗಾ, ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಹಿರೇಮಠ ಸಂಸ್ಥಾನ, ಭಾಲ್ಕಿ, ಪೂಜ್ಯ ಶ್ರೀ ಮ.ನಿ.ಪ್ರ. ಶಿವರುದ್ರ ಮಹಾಸ್ವಾಮಿಗಳು ಬೇಲಿಮಠ, ಬೆಂಗಳೂರು ಅವರ ಪಾವನ ಸಾನ್ನಿಧ್ಯದಲ್ಲಿ ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಶ್ರೀ ಶಿವರಾಜ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸುವರು. ಪುಸ್ತಕ ಕುರಿತು ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡುವರು. ಡಾ. ಸಿ ಸೋಮಶೇಖರ ಆಶಯ ನುಡಿಗಳನ್ನಾಡಲಿದ್ದಾರೆ. ಸಿ. ಸೋಮಣ್ಣ, ಬಿ. ಎಸ್. ಪರಮಶಿವಯ್ಯ, ಡಾ. ಹಂಸಲೇಖ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಗ್ರಂಥ ದಾಸೋಹ ನೀಡಿದ ಚಂದ್ರಕಾಂತ ಬೆಲ್ಲದ, ಶಿವರಾಜ ಪಾಟೀಲ, ಶಂಕರ ಕೋಳಿವಾಡ ಅವರನ್ನು ಸನ್ಮಾನಿಸಲಾಗುವುದು. ಕರ್ನಾಟಕದ ವಿವಿಧ ಭಾಗದ ನೂರಕ್ಕೂ ಹೆಚ್ಚು ಮಠಾಧೀಶರು, ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ನಂತರ ಸಂಗೀತ ಸಂಭ್ರಮ ಜರುಗುವುದು.

About nagaraj

Check Also

20 ನೇ ಕಲ್ಯಾಣ ಪರ್ವ ಕ್ಷಣಗಣನೆ ಆರಂಭ

ಲೇಖಕರು – ಸಂಗಮೇಶ ಎನ್ ಜವಾದಿ. ಪತ್ರಕರ್ತ, ಪ್ರಗತಿಪರ ಚಿಂತಕರು. ಬೀದರ ಜಿಲ್ಲೆ. ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು …

ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಯ ವೇಳಾಪಟ್ಟಿ

ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ‌ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …

ವೈದ್ದಿಕರ ಕುತಂತ್ರದಿಂದ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆ

ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು …

ಡಾ. ಎಂ.ಬಿ ಪಾಟೀಲ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿ

ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …

ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಶ್ರೀ ಡಾ. ಎಂ.ಬಿ ಪಾಟೀಲರ ಜನ್ಮದಿನ

ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

Leave a Reply

Your email address will not be published.