ನೇಗಿನಹಾಳ : ಗ್ರಾಮದಲ್ಲಿ ಹೆಚ್ಚಿದ ಕೊರೊನಾ ಸೋಂಕು ಹಾಗೂ ಮೃತರ ಸಂಖ್ಯೆಯನ್ನು ಅರಿತು ಇಲ್ಲಿನ ವಾಸ್ಥವ ಸಮಸ್ಯೆಗಳನ್ನು ಪರಿವೀಕ್ಷಣೆ ಮಾಡಲು ಮುಂಜಾನೆಯಿಂದ ಮಧ್ಯಾಹ್ನದವರೆಗೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳ ಜೊತೆಗೂಡಿ ಗ್ರಾಮ ಪಂಚಾಯತಿಯಲ್ಲಿ ಸಭೆ ಕರೆದು ಇಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಆಲಿಸಿದರು. ಅಧಿಕಾರಿಗಳು, ಗ್ರಾ.ಪಂ ಆಡಳಿತ ಮಂಡಳಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಹಕಾರ ನೀಡಿದ್ದರೆ ಅಂತಹ ವ್ಯಕ್ತಿಗಳ ಮೇಲೆ ನಿರ್ಧಾಕ್ಷಣ್ಯವಾಗಿ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು. ಗ್ರಾಮದಲ್ಲಿನ ಕೊರೊನಾ ಸೋಂಕಿತರ ಸಂಖ್ಯೆಯನ್ನು ತಡೆಗಟ್ಟಲು ಪಂಚಾಯತಿ ಹಾಗೂ ಆರೋಗ್ಯ ಇಲಾಖೆಯವರು ಜೊತೆಗೂಡಿ ಕಾರ್ಯಪಡೆ ರಚಿಸಬೇಕೆಂದು ಜಿಲ್ಲಾಧಿಕಾರಿ ಎಮ್.ಜಿ ಹಿರೇಮಠ ತಿಳಿಸಿದರು.
ಗ್ರಾಮದ ಪಂಚಾಯತಿಯ ಸಭಾಂಗಣದಲ್ಲಿ ಕರೆದ ತುರ್ತು ಸಭೆಯನ್ನು ಕರೆದು ಮಾತನಾಡಿದ ಅವರು ಗ್ರಾಮದ ಕೊರೊನಾ ಸೋಂಕಿತರ ಮನೆಗಳಿಗೆ ಬೇಟಿ ನೀಡಿ ಆರೋಗ್ಯ ವಿಚಾರಿಸಿ ಮನೆಯ ಎಲ್ಲ ಸದಸ್ಯರ ಸೆಚ್ಯುರೇಶನ್ ಮತ್ತು ಟೆಂಪರೇಚರ್ ಪರೀಕ್ಷೆಯನ್ನು ತಾವೇ ಖುದ್ದಾಗಿ ಮುಂದೆ ನಿಂತು ಮಾಡಿಸಿದರು. ಸೋಂಕಿತರಿಗೆ ಕ್ವಾರಂಟೈನ್ ಕೇಂದ್ರಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಗ್ರಾಮದಲ್ಲಿ ನಡೆಸಿರುವ ಸ್ಯಾನಿಟೈಸರ್ ವ್ಯವಸ್ಥೆಯನ್ನು ವಿಕ್ಷೀಸಿದರು. ಜೊತೆಗೆ ಪಾದಯಾತ್ರೆಯ ಮೂಲಕ ಎಸ್ಸಿ. ಎಸ್ಟಿ ಕಾಲನಿಯ ಮನೆ-ಮನೆಗೆ ತೆರಳಿ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು, ಯಾರು ಭಯಪಟ್ಟು ಮನೆಯಲ್ಲಿಯೇ ಜೀವ ಕಳಿದುಕೊಳ್ಳಬಾರದು ಚಿಕಿತ್ಸೆಯಿಂದ ರೋಗ ಮುಕ್ತರಾಗುತ್ತಿರಿ ಎಂದು ಸಲಹೆ ನೀಡಿದರು. ಕೆಲವು ಮನೆಗಳಲ್ಲಿ ಸ್ಯಾಚುರೇಶನ್ ಹಾಗೂ ಟೆಂಪರೆಚರ್ ಚಿಕಿತ್ಸೆ ಮಾಡಿಸಿದರು. ಕೊರೊನಾದಿಂದ ಮೃತರಾದ ಕುಟುಂಬದವರಿಗೆ ಸಾಂತ್ವನ ತಿಳಿಸಿ ಎಲ್ಲ ಸದಸ್ಯರ ರ್‍ಯಾಪಿಡ್ ಚಿಕಿತ್ಸೆ ಮಾಡಿಸಿದರು.
ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಗ್ರಾಮದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ. ಕೊರೊನಾ ಸೋಂಕು ಕಂಡುಬಂದಿರುವ ರೋಗಿಗಳು ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ಕ್ವಾರಂಟೈನ್ ಆಗಬೇಕು ಇಲ್ಲಿ ಆಹಾರ, ಮುಂಜಾನೆ ಯೋಗ, ವೈದ್ಯಕೀಯ ಸೇವೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಅನುಕೂಲ ಮಾಡಲಾಗುವುದು. ಗ್ರಾಮದ ಎಲ್ಲ ವಾರ್ಡಗಳಲ್ಲಿ ಗ್ರಾ.ಪಂ ಸದಸ್ಯರ ಸಹಕಾರದ ಮೂಲಕ ಮನೆ-ಮನೆಗೆ ತೆರಳಿ ರ್‍ಯಾಪಿಡ್ ಚಿಕಿತ್ಸೆ ಮಾಡುವ ಕಾರ್ಯ ಆರಂಭಿಸಲು ಸಲಹೆ ನೀಡಿದರು.
ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ನಮ್ಮ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ೪೦,೦೦೦ ಜನರು ಚಿಕಿತ್ಸೆ ಪಡೆಯುವ ಒಂದೇ ಸರಕಾರಿ ಆಸ್ಪತ್ರೆ, ಇಲ್ಲಿ ಒಬ್ಬರೇ ವೈದ್ಯರಿದ್ದು ಅವರು ಸಹ ತಾತ್ಕಾಲಿಕ ಇದ್ದಾರೆ. ಅವರು ಕೊರೊನಾ ಸೊಂಕಿಗೆ ತುತ್ತಾದರೆ ಬೇರೆ ವೈದ್ಯರು ಬರಲಿಲ್ಲಾ ಇತಂಹ ಸಂದರ್ಭದಲ್ಲಿ ಕೊರೊನಾ ಸೋಂಕು ಪ್ರತಿ ಮನೆ-ಮನೆಗೆ ಹಬ್ಬಿದಲ್ಲದೇ ಚಿಕಿತ್ಸೆ ಪಡೆಯದೇ ಹಲವಾರು ಜನರು ಮರಣ ಹೊಂದಿದ್ದಾರೆ. ಆದರಿಂದ ಗ್ರಾಮದ ಆಸ್ಪತ್ರೆ ಮೇಲಧರ್ಜೆಗೆರಿಸಿ ಖಾಯಂ ಇರುವ ಇಬ್ಬರು ವೈದ್ಯರನ್ನು ನೇಮಿಸಿ ಎಂದು ತಿಳಿಸಿದರು.
ನೇಗಿನಹಾಳ ಗ್ರಾ.ಪಂ ಬಹಳಷ್ಟು ದೊಡ್ಡದಿದ್ದು ಇಲ್ಲಿ ಖಾಯಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೇಮಕವಿಲ್ಲ ತಾತ್ಕಾಲಿಕ ಇರುವುದರಿಂದ ಅಭಿವೃದ್ಧಿ ಕಾರ್ಯಗಳು ನಿಧಾನಗತಿಯಲ್ಲಿ ನಡೆಯುತ್ತಿದ್ದು ಬಹಳಷ್ಟು ಸಮಸ್ಯೆಗಳಾಗುತ್ತಿವೆ ಆದರಿಂದ ಖಾಯಂ ಆಗಿ ಇರುವತ್ತೆ ಅಧಿಕಾರಿ ನೇಮಿಸಬೇಕೆಂದು ಹಾಗೂ ಗ್ರಾಮದಲ್ಲಿ ಪ್ರತಿದಿನ ಸಾಯುತ್ತಿರುವ ಶವಗಳನ್ನು ಭಸ್ಮ ಮಾಡಲು ಕರೆಂಟ್ ಮೂಲಕ ಸುಡುವ ಯಂತ್ರವನ್ನು ನೀಡುವಂತೆ ಗ್ರಾ.ಪಂ ಅದ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೈಲಹೊಂಗಲ ಉಪವಿಭಾಗಧಿಕಾರಿ ಶಶಿಧರ ಬಗಲಿ, ತಹಶಿಲ್ದಾರ್ ಬಸವರಾಜ ನಾಗರಾಳ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಊಣ್ಣಿ, ಪಿ.ಎಸ್.ಆಯ್ ಈರಣ್ಣಾ ರೀತ್ತಿ, ವೈದ್ಯಾಧಿಕಾರಿ ಡಾ ಸಂಜಯ ಸಿದ್ಧನ್ನವರ, ಡಾ. ಮಹಾಂತೇಶ ಹಿರೇಮಠ, ಡಾ. ಸೋಮನಿಂಗ ಪಾಶ್ವಾಪೂರ, ಡಾ. ಅರುಣ ಕುಂಕೂರ, ಗಣ್ಯರಾದ ಕಾಶಿನಾಥ ಇನಾಮದಾರ, ಗ್ರಾ.ಪಂ ಅಧ್ಯಕ್ಷ ಶಿವಾಜಿ ಮುತ್ತಗಿ, ಸದಸ್ಯರಾದ ಗಂಗಪ್ಪ ತೋರಣಗಟ್ಟಿ, ಮಹಾದೇವ ಮಡಿವಾಳರ, ಧರ್ಮರಾಜ ತಪರಿ, ಸುಭಾಷ್ ರೂಮೋಜಿ, ನಾಗಪ್ಪ ಭೂವಿ, ನಾಗರಾಜ ನರಸಣ್ಣವರ, ಮಹಾದೇವಿ ಕೋಟಗಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಮಡಿವಾಳಪ್ಪ ಅವಕ್ಕನವರ, ಗ್ರಾಮ ಲೆಕ್ಕಾಧಿಕಾರಿ ಛತ್ರಪತಿ ಎನ್.ಕೆ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿಯಲ್ಲಿ ಕರೆದ ತುರ್ತು ಸಭೆಯಲ್ಲಿ ಜಿಲ್ಲಾಧಿಕಾರಿ ಎಮ್.ಜಿ ಹಿರೇಮಠ ಮಾತನಾಡಿದರು. ಶಾಸಕ ಮಹಾಂತೇಶ ದೊಡ್ಡಗೌಡರ, ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ಉಪಸ್ಥಿತರಿದ್ದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾತಾ ಮಾಡಿ ಕೊರೊನಾ ಸೋಂಕಿತರ ಮನೆಗೆ ಬೇಟಿ ನೀಡಿ ಕ್ವಾರಂಟೈನ್ ಆಗುವಂತೆ ವಿನಂತಿಸಿದರು.
ಕೊರೊನಾ ಸೋಂಕಿನಿಂದ ಮೃತರಾದ ಮನೆಗೆ ಬೇಟಿ ನೀಡಿ ಕುಟುಂಬಸ್ಥರಿಗೆ ರ್‍ಯಾಪಿಡ್ ಪರೀಕ್ಷೆ ಮಾಡಿಸಿದರು.
ಬಿಸಿಎಮ್ ವಸತಿ ನಿಲಯದಲ್ಲಿ ನಾಳೆಯಿಂದ ಕೋವಿಡ್ ಕೇರ್ ಸೆಂಟರ್ ಮಾಡುವಂತೆ ಸೂಚಿಸಿದರು.
ಗ್ರಾಮದಲ್ಲಿ ಕರೆಂಟ್ ಚಾಲಿತ ಚಿತಾಗಾರ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು.