ಹುಬ್ಬಳ್ಳಿ(ಉಣಕಲ್): ಜಗತ್ತಿನ ಎಲ್ಲ ಧರ್ಮದ ವಿಚಾರಗಳನ್ನು ಹೇಳುವವರು ಮತ್ತು ಕೇಳುವವರು ಇರುತ್ತಾರೆ ಆದರೆ ಶರಣ ಧರ್ಮದಲ್ಲಿ ಹೇಳುವವರು ಗುರುವಾದರೆ ಕೇಳುವವರು ಶರಣರಾಗಿರುತ್ತಾರೆ. ದೇಹವೇ ದೇವಾಲಯ ಹಾಗೂ ಅರಿವು ಗುರುವಾದ ಕಾರಣ ಶರಣ ಧರ್ಮ ಬಹಳಷ್ಟು ಶ್ರೇಷ್ಠವಾಗಿದೆ ಎಂದು ಮುಂಡರಗಿ ತೋಂಟದಾರ್ಯ ಮಠ ಹಾಗೂ ಬೈಲೂರ ನಿಷ್ಕಲ ಮಂಟಪದ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಉಣಕಲ್ ಸದ್ಗುರು ಸಿದ್ದೇಶ್ವರ ಮಹಾಸ್ವಾಮಿಗಳ 100 ನೆಯ ವರ್ಷದ ಪುಣ್ಯಾರಾಧನೆ ಅಂಗವಾಗಿ ನಡೆದ ಗುರುದರ್ಶನ ಪ್ರವಚನದಲ್ಲಿ ಮಾತನಾಡಿದರು.
ಇಷ್ಟಲಿಂಗ ಅದು ಅರಿವಿನ ಕುರುಹು. ಆದರೆ ದುರ್ದೈವದ ಸಂಗತಿ ಎಂದರೆ ಇಗ ಲಿಂಗವನ್ನು ಜಾತಿಯ ಕುರುಹು ಕಾಣುತ್ತಿದ್ದಾರೆ. ಲಿಂಗ ಬಹಳಷ್ಟು ಅತೀ ಅದ್ಬುತವಾದ ವಿಜ್ಞಾನ ಸಮ್ಮತವಾಗಿದೆ. ಬಸವಣ್ಣನವರ ಹಾಗೂ ಇಷ್ಟಲಿಂಗದ ಕುರಿತು ಜಗತ್ತು ಬಹಳಷ್ಟು ಗೌರವ ನೀಡುತ್ತಿದೆ ಇವತ್ತು ಲಂಡನ್ ದೇಶದ ಥೇಮ್ಸ್ ನದಿಯ ದಡದಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಯಾಗಿದೆ ಇದಕ್ಕೆ ಇಷ್ಟಲಿಂಗದ ಶಿವಯೋಗದ ಶಕ್ತಿಯ ಸಾಧನೆಯೇ ಪ್ರಮುಖ ಕಾರಣವಾಗಿದೆ.
ಹೀಗಾಗಿ ಪ್ರತಿಯೊಬ್ಬರೂ ಇಷ್ಟಲಿಂಗ ದೀಕ್ಷೆ ಪಡೆದು ನಿರಂತರ ಶಿವಯೋಗ ಮಾಡಿದರೆ ದೇಹ ಹಾಗೂ ಮನಸ್ಸಿನ ಚೈತನ್ಯ ಹೆಚ್ಚುತ್ತದೆ. ಶಿವಯೋಗದ ಕುರಿತು ಬಹಳಷ್ಟು ವಿಸ್ತಾರ ಲಿಂಗದೀಕ್ಷಾ ಸಂದರ್ಭದಲ್ಲಿ ತಿಳಿಸುತ್ತೇನೆ ಪ್ರತಿಯೊಬ್ಬರೂ ನಾಳೆ ದೀಕ್ಷೆ ಪಡೆಯಿರಿ ಎಂದರು.
ವಿಭೂತಿ ಲಿಂಗಾಯತರ ಸಂಖ್ಯೇತ ಅಂತ ತಿಳಿದ್ದಿದ್ದಾರೆ ಆದರೆ ಅದು ಶಿವನ ಸಂಕೇತ, ಸೃಷ್ಟಿಯ ಸಂಕೇತ, ತತ್ವದ ಸಂಕೇತವಾಗಿದೆ. ವಿಭೂತಿ ಎಂದರೆ ಓಂ ನಮಃ ಶಿವಾಯ ಇದು ಪರಿಶುದ್ಧತೆಯ ಸಂಕೇತವಾಗಿದ್ದು ಪ್ರತಿಯೊಬ್ಬರೂ ಬೆಳಗ್ಗೆ ವಿಭೂತಿ ಧರಿಸಿ. ಬಸವಣ್ಣನವರ ಕೊಟ್ಟ ವಿಭೂತಿ ಧರಿಸುವುದರಿಂದ ಕರ್ಮಹರಿದ ಹೋಗುತ್ತದೆ.
ವಿಭೂತಿಯನ್ನು ದೇಹದ ತುಂಬೆಲ್ಲಾ ಹಚ್ಚಬೇಕು. ಮಹಿಳೆಯರು ಕೊರಳಲ್ಲಿ ಲಿಂಗ, ರುದ್ರಾಕ್ಷಿ ಧರಿಸುವುದು, ಹಣೆಯಲ್ಲಿ ವಿಭೂತಿ ಹೆಚ್ಚುವುದರಿಂದ ಅತ್ಯಾಚಾರಗಳು ಕಡಿಮೆಯಾಗುತ್ತವೆ.
ರುದ್ರಾಕ್ಷಿ ರುದ್ರ ಅಂದರೆ ಶಿವ ಅಕ್ಷಿ ಎಂದರೆ ಕಣ್ಣು ರುದ್ರಾಕ್ಷಿ ಎಂದರೆ ಶಿವನ ಸಚ್ಚಿದಾನಂದ ಸ್ವರೂಪವಾದ ಶಿವನಕಣ್ಣು ಎಂದರ್ಥವಾಗಿದೆ.
ಲಿಂಗಾಯತರಲ್ಲಿ ದೇವರಿಗೆ ಮಂತ್ರವಿಲ್ಲಸ ಆದರೆ ಸಾಧನೆಗೆ ನಮಃ ಶಿವಾಯ ಓಂ ಎಂದು ಮಂತ್ರವಿದೆ ಹೀಗಾಗಿ ಪ್ರತಿಯೊಬ್ಬರೂ ಲಿಂಗಪೂಜೆಯಲ್ಲಿ ನಮಃ ಶಿವಾಯ ಓಂ ಎಂದು ಮಂತ್ರ ಪಟಿಸುತ್ತಾ ಸಾಧನೆ ಮಾಡಬೇಕು.
ಭಾರತೀಯ ಸಂಸ್ಕ್ರತಿಯ ಪರಂಪರೆಯಲ್ಲಿ ಗುರು-ಶಿಷ್ಯ, ಗಂಡ-ಹೆಂಡತಿ, ತಂದೆ-ತಾಯಿ, ಅಣ್ಣಾ-ತಂಗಿ ಸಂಬಂಧಗಳನ್ನು ಸಹ ಬುಡಮೇಲು ಮಾಡುವ ಸಿದ್ದಾಂತಗಳು ಆರಂಭವಾಗಿವೆ ಅವುಗಳನ್ನು ತೊರೆದು ಬಸವಣ್ಣನವರು ನೀಡಿದ ಇಷ್ಟಲಿಂಗ ದೀಕ್ಷೆ ಪಡೆದು ಶಿವಯೋಗ ಸಾಧನೆಯ ಮೂಲಕ ನಿಮ್ಮ ಬದುಕು ಹಸನು ಮಾಡಿಕೊಳ್ಳಿ.
ನೂರಾರು ಅಜ್ಞಾನದ ಆಚಾರಗಳು, ವಿಚಾರಗಳು ಕೇಳಿ ನೀವುಗಳು ಚಂಚಲ ಮನಸ್ಸುಗಳಾಗಿದ್ದಿರಿ
ದಿನಕ್ಕೊಂದು ಮಠ, ಬೀದಿಗೊಮ್ಮೆ ನಮಸ್ಕಾರ ಮಾಡುವುದು ಬಿಡ್ರಿ ಶರಣರ ಸನ್ಮಾರ್ಗದ ದಾರಿ ಹಿಡಿದು ಬದುಕು ಹಸುನ ಮಾಡಿಕೊಳ್ಳಿ ಎಂದರು.