Home / featured / ಆಳವಿಲ್ಲದ ಸ್ನೇಹಕ್ಕೆ “ಮರಣವೆ ಮಹಾನವಮಿ”

ಆಳವಿಲ್ಲದ ಸ್ನೇಹಕ್ಕೆ “ಮರಣವೆ ಮಹಾನವಮಿ”

 

ಬಸವಣ್ಣ ಹಾಗೂ ಸಮಕಾಲೀನ ಶರಣರ ಕಾಲದಲ್ಲಿ ಹುಟ್ಟು ಪಡೆದ ಸಾಹಿತ್ಯದ ಕಾಲ ಹನ್ನೆರಡನೆ ಶತಮಾನ. ಸುಮಾರು 900 ವರ್ಷಗಳ ಸುದೀರ್ಘ ಅವಧಿಯ ಇಂದಿನ ದಿನಗಳಲ್ಲಿ ಇದರ ಸಿದ್ಧಾಂತ, ಆಚರಣೆಗಳು ಜನಜೀವನದಲ್ಲಿ ಜೀವಂತವಾಗಿ ಉಳಿದಿಕೊಂಡಿದೆ. ಶರಣರ ವಚನ ಸಾಹಿತ್ಯ ಕನ್ನಡಿಗರ ಅಸ್ಮಿತೆಯ ಜಾಗೃತಿ ಮೂಡಿಸುತ್ತದೆ. ಪೂರ್ವಗ್ರಹ ಪೀಡಿತರಿಗೆ ಇದು ವೈದಿಕ ವಿರೋಧಿ ಸಿದ್ಧಾಂತ ಅಲ್ಲ ಎಂದು ಎನಿಸುತ್ತದೆ. ಆದರೆ ವಚನ ಸಾಹಿತ್ಯ ಅವೈದಿಕ ನಿಲುವು ಪ್ರತಿಪಾದಿಸುತ್ತದೆ; ಇದು ವೈದಿಕ ವಿರೋಧಿ ಮತ್ತು ಜಾತಿ ವಿರೋಧಿ ಸಾಹಿತ್ಯವಾಗಿದೆ ಎಂಬುದು ಅರ್ಥೈಸಿಕೊಳ್ಳಬೇಕಾಗಿದೆ.

ವೈದಿಕ ಸಿದ್ಧಾಂತವು ಸ್ಥಳೀಯ ರೈತಾಪಿ ಕೂಲಿಕಾರ್ಮಿಕರ ದಬ್ಬಾಳಿಕೆ, ಶೋಷಣೆಗೆ ಒಳಪಡಿಸಿತ್ತು. ಇದನ್ನು ಶರಣರು ವಿರೋಧಿಸಿ, ಶೋಷಿತ ವರ್ಗಗಳಿಗೆ ಕಾಯಕ ಸಿದ್ಧಾಂತ – ಆಚರಣೆ ಸಾಹಿತ್ಯದ ಪರಿಕಲ್ಪನೆ ಬಿತ್ತಿದರು, ಶೋಷಣೆ ಧರ್ಮ ನಿರಾಕರಿಸಿ ಕಾಯಕ ಧರ್ಮ ಪ್ರತಿಪಾದಿಸಿದರು. ಎಲ್ಲ ವರ್ಗದವರಿಗೂ ಕಾಯಕ ಸಿದ್ಧಾಂತಗಳಿಗೆ ಪ್ರತಿಷ್ಠೆ ಒದಗಿಸಿದರು.

ವೈದಿಕ ವ್ಯವಸ್ಥೆಯ ಪರ್ಯಾಯವಾಗಿ ಹುಟ್ಟಿಕೊಂಡಿರುವ ‘ಲಿಂಗಾಯತ ಧರ್ಮ’ ಜಾತ್ಯತೀತ, ಮಾನವೀಯ ಮೌಲ್ಯ, ವೈಜ್ಞಾನಿಕ ಮತ್ತು ವೈಚಾರಿಕ ನಿಲುವು ಪುರಸ್ಕರಿಸುತ್ತದೆ. ಇಲ್ಲಿ ಒಂದು ಹೊಸ ವಿಚಾರವನ್ನು ತಿಳಿಯಬಹುದು. ವಚನಕಾರರು ಧರ್ಮ ಸ್ಥಾಪನೆಗಾಗಿ ಹೆಚ್ಚು ಒತ್ತು ಕೊಡಲಿಲ್ಲ. ಅದಕ್ಕಾಗಿಯೇ ಚಳವಳಿ ಕಟ್ಟಲಿಲ್ಲ. ಸಮಾಜದಲ್ಲಿ ಚಾತುವರ್ಣ ವ್ಯವಸ್ಥೆಯಿಂದ ತಳವರ್ಗ ಸಮುದಾಯಗಳ ಬದುಕು ಬರ್ಬರವಾಗಿತ್ತು. ಅಂಥ ವಿಷಮ ಪರಿಸ್ಥಿತಿಯಲ್ಲಿ ಎಲ್ಲಾ ವರ್ಗದ ಕಾಯಕ ಜೀವಿಗಳು ಒಗ್ಗೂಡಿದರು. ತಮ್ಮ ಬದುಕಿನ ಹಕ್ಕುಗಳಿಗಾಗಿ, ಶೋಷಣೆ ಮುಕ್ತ ಸಮಾಜ ರೂಪಿಸಲು ಶರಣರು ವೈದಿಕ ವ್ಯವಸ್ಥೆಯ ವಿರುದ್ಧ ದೊಡ್ಡ ಮಟ್ಟದ ಹೋರಾಟ ರೂಪಿಸಿದರು. ಶರಣರು ಪುರೋಹಿತ ವ್ಯವಸ್ಥೆಯ ಕಟ್ಟಳೆಗಳನ್ನು ದಿಕ್ಕರಿಸಿದರು. ಇದು ವೈದಿಕರಿಗೆ ನುಂಗಲಾಗದ ತುಪ್ಪವಾಗಿ ಇಡೀ ಸಮಾಜವನ್ನು ತಲ್ಲಣಗೊಳಿಸಿತ್ತು.

ಜಾತಿರಹಿತ, ವರ್ಗರಹಿತ, ವರ್ಣರಹಿತ ಸಮಾಜ ಸ್ಥಾಪಿಸುವ ಉದ್ದೇಶದಿಂದ ‘ಇವನಾರವ ಎನ್ನದೆ ಇವನಮ್ಮವ’ ಎಂದು ಎಲ್ಲಾ ವರ್ಗದವರಿಗೂ ಅಪ್ಪಿಕೊಂಡಿದರು. ವಿಭಿನ್ನ ಜಾತಿಯವರು ಕೂಡಿ ಊಟ ಮಾಡಿದ ಮಾತ್ರಕ್ಕೆ ಅದು ಸಾಮಾಜಿಕ ಸಮಾನತೆ ಅಲ್ಲ, ನೆಂಟಸ್ತಿಕೆ ಬೆಳೆಸುವುದು, ಅದಕ್ಕೆ ಒಪ್ಪಿಗೆ ನೀಡುವುದು ಶರಣರ ಮೂಲ ಉದ್ದೇಶವಾಗಿತ್ತು. ಊಟದ ಜೊತೆಗೆ ರಕ್ತಸಂಬಂಧವನ್ನೂ ಬೆಳೆಸಬೇಕೆಂಬ ಉದ್ದೇಶದಿಂದ ಇನ್ನೊಂದು ಹೆಜ್ಜೆ ಮುಂದೆ ಮುಂದಿಟ್ಟರು.

“ಉಂಬುದು ಊಡುವುದು ಶಿವಾಚಾರ,
ಕೊಂಬುದು ಕೊಡುವುದು ಕುಲಾಚಾರ,
ಅನಾಚಾರಿಯ ಮಾತ ಕೇಳಲಾಗದು.”
ಎಂದು ಚೆನ್ನಬಸವಣ್ಣನವರ ಪ್ರತಿಕ್ರಿಯೆ ಸಾಮಾಜಿಕ ಒಪ್ಪಿಗೆ ಬಗ್ಗೆ ಸೂಚಿಸುತ್ತಾರೆ.

ಸಾಮಾಜಿಕ ಸಮಾನತೆ ಪರಿಕಲ್ಪನೆಯ ಶರಣರ ಹಲವು ಕಠಿಣ ನಿಲುವು ಸಾಮಾಜಿಕ ಕ್ರಾಂತಿ ಉದ್ಭವಕ್ಕೆ ಕಾರಣವಾಗಿತ್ತು. ಇದು ವೈದಿಕ ಧರ್ಮದ ವಿರೋಧಿ ನಡೆ, ಇದನ್ನು ಮುಂದುವರಿಸಲು ಬಿಟ್ಟರೆ ಉಳಿಗಾಲವಿಲ್ಲ ಎಂದು ಅರಿತ ಬಿಜ್ಜಳ ವಚನಕಾರರ ವಿರುದ್ಧ ಷಡ್ಯಂತ್ರ ರೂಪಿಸಲು ಮುಂದಾಗಿದನು.
ಇದಕ್ಕೆ ಬಸವಣ್ಣನವರು ಒಂದು ವಚನದಲ್ಲಿ..

“ಆನೆ ಅಂಕುಶಕ್ಕೆ ಅಂಜುವುದೆ ಅಯ್ಯಾ ಮಾಣದೆ ಸಿಂಹದ ನಖವೆಂದು ಅಂಜುವುದಲ್ಲದೆ. ಆನೀ ಬಿಜ್ಜಳಂಗಜುವೆನೆ ಅಯ್ಯಾ ಕೂಡಲಸಂಗಮದೇವಾ” ಎಂದು ನುಡಿಯುತ್ತಾರೆ.
‘ನಾಳೆ ಬಪ್ಪುದು ನಮಗಿಂದೆ ಬರಲಿ, ಇಂದು ಬಪ್ಪುದು ನಮಗೀಗಲೆ ಬರಲಿ, ಇದಕಾರಂಜುವರು, ಇದಕಾರಳುಕುವರು’ ಎಂದು ಹೇಳುವ ಮೂಲಕ ತಮ್ಮ ಖಚಿತ ನಿಲುವು ಅಭಿವ್ಯಕ್ತಿಗೊಳಿಸುತ್ತಾರೆ.

ಶರಣರು ಜಾತಿ ಪರಿಕಲ್ಪನೆ ನಿರಾಕರಿಸಿ ಜಾತಿನಿರಸನ ಸಿದ್ಧಾಂತವನ್ನು ಎತ್ತಿ ತೋರಿದರು. ಜಾತಿ ಸಮಾಜ ತಿರಸ್ಕರಿಸಿ ಕಾಯಕ ಸಮಾಜ ಸ್ಥಾಪನೆಗೆ ಹೆಚ್ಚು ಮನ್ನಣೆ ನೀಡಿದ್ದಾರೆ.

“ಆವ ಕುಲವಾದಡೇನು ಶಿವಲಿಂಗವಿದ್ದವನೆ ಕುಲಜನು, ಕುಲವನರಸುವರೆ ಶರಣರಲ್ಲಿ,
ಜಾತಿಸಂಕರನಾದ ಬಳಿಕ ಕೊಂಬೆನವರಲ್ಲಿ,
ಕೂಸ ಕೊಡುವೆ. ಕೂಡಲಸಂಗಮದೇವಾ,
ನಂಬುವೆ ನಿಮ್ಮ ಶರಣನು” ಎನ್ನುವ ಸಿದ್ಧಾಂತ ರೂಪಿಸಿ ಜಾತ್ಯಾತೀತ ಸಮಾಜದಲ್ಲಿ ಬದುಕಿದರು.

ಕಲ್ಯಾಣ ಕ್ರಾಂತಿಗೆ ಮೂಲ ಕಾರಣವಾಗಿದ್ದು ಶರಣ ಹರಳಯ್ಯ ಮತ್ತು ಮಧುವರಸರ ಬೀಗತನದ ವಿಷಯ. ಇಲ್ಲಿ ಇನ್ನೊಂದು ವಿಷಯ ಚರ್ಚೆಗೆ ಬರುವುದು ಶರಣರು ‘ಅಂತರ್ಜಾತಿ ಕಲ್ಯಾಣೋತ್ಸವ’ ಕುರಿತು, ಬಸವಾದಿ ಶರಣರು ಕೈಗೊಂಡಿದ್ದು ಅಂತರ್ಜಾತಿ ಮದುವೆ ಅಲ್ಲ ಎಂಬುದು ಸ್ಪಷ್ಟವಾಗಿ ಹೇಳಬಹುದು. ಬೇರೆ ಬೇರೆ ಜಾತಿಯವರ ಜೊತೆಗೆ ತಮ್ಮ ಜಾತಿಯ ಸಂಬಂಧ ಬೆಳೆಸಿದರೆ ಅದು ಅಂತರ್ಜಾತಿ ವಿವಾಹ ಆಗುತ್ತದೆ. ಆದರೆ ಶರಣರು ಜಾತಿಯೆಂಬ ಪರಿಕಲ್ಪನೆಯನ್ನೇ ನಿರಾಕರಿಸಿದರು. ಅಂದರೆ ಶರಣರು ಜಾತ್ಯತೀತ ಸಿದ್ಧಾಂತ ಪ್ರತಿಪಾದಕರಾಗಿದ್ದರು.

ಶರಣರಿಗೆ ಯಾವುದೇ ಜಾತಿಬೇಧದ ತಾರತಮ್ಯ ಇರಲಿಲ್ಲ. ಈ ಬಗ್ಗೆ ಮಾಚಿದೇವರ ಒಂದು ವಚನ ಹೀಗಿದೆ; “ಆ ಜಾತಿಜಾತಿಯವರೆನಬೇಡ. ಹದಿನೆಂಟುಜಾತಿಯೊಳಗಾವ ಜಾತಿಯಾದಡೂ ಆಗಲಿ, ಗುರು ಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗವ ಧರಿಸಿ, ಪುನರ್ಜಾತರಾದ ಬಳಿಕ” ಎಲ್ಲರೂ ಒಂದೇ ಎನ್ನುವ ಭಾವ ಶರಣರು ವ್ಯಕ್ತಪಡಿಸುತ್ತಾರೆ.

ಹರಳಯ್ಯ ಮತ್ತು ಮಧುವರಸರ ಮಕ್ಕಳ ಕಲ್ಯಾಣೋತ್ಸವದಿಂದ ಕುಲಗೆಟ್ಟಿತ್ತು, ಜಾತಿಸಂಕರವಾಯಿತು..ಎನ್ನುತ್ತಾ ವೈದಿಕ ಸಂಪ್ರದಾಯವಾದಿಗಳು ತೀವ್ರವಾಗಿ ವಿರೋಧಿಸಿದರು. ಇದನ್ನು ಸಹಿಸದ ಸಮಾಜದಲ್ಲಿ ಶರಣರ ಕಲ್ಯಾಣ ಮಹೋತ್ಸವ ಕಾರ್ಯ ದೊಡ್ಡ ಪ್ರಮಾದಕ್ಕೆ ಗುರಿಯಾಗಿತ್ತು. ಮುಂದೆ ಅದು ‘ಕಲ್ಯಾಣ ಕ್ರಾಂತಿ’ಯಾಗಿ ರೂಪಾಂತರ ಹೊಂದಿತು.

“ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು, ಒರೆಯಾವಿನ ಬೆನ್ನ ಹರಿಯಲದೇಕಯ್ಯಾ ಲಜ್ಜೆಗೆಡಲೇಕೆ ನಾಣುಗೆಡಲೇಕೆ ಕೂಡಲಸಂಗಮದೇವನುಳ್ಳನ್ನಕ್ಕ ಬಿಜ್ಜಳನ ಭಂಡಾರವೆನಗೇಕಯ್ಯಾ” ಎಂಬ ಬಸವಣ್ಣನವರು ವೈದಿಕ ವ್ಯವಸ್ಥೆ ವಿರುದ್ಧ ದೊಡ್ಡ ಹೋರಾಟವನ್ನು ಕೈಗೆತ್ತಿಕೊಂಡು ಬಿಜ್ಜಳನ ವಿರುದ್ಧ ಏರು ದನಿಯಲ್ಲಿ ಮಾತನಾಡಿರುವುದು ಸೂಚಿಸುತ್ತದೆ.

ಶರಣರ ಸರ್ವಸಮಾನತೆ ಸಿದ್ಧಾಂತವನ್ನು ಸಹಿಸದ ಕರ್ಮಠರು ಶರಣರಿಗೆ ಎಳೆಹೂಟೆ ಶಿಕ್ಷೆ ವಿಧಿಸಿದರು. ಶರಣರು ರಚಿಸಿದ ಬಹುತೇಕ ವಚನ ರಾಶಿಯನ್ನು ಸುಟ್ಟುಹಾಕಿದರು. ಕಲ್ಯಾಣ ನೆಲದಲ್ಲಿ ಶರಣರ ರಕ್ತ ಹರಿಯಿತು. ಅದು ‘ಕಲ್ಯಾಣದ ಕ್ರಾಂತ್ರಿ’ಗೆ ಸಾಕ್ಷಿಯಾಗಿ ಚಾರಿತ್ರಿಕ ಕಪ್ಪು ಚುಕ್ಕೆಯಾಗಿ ದಾಖಲಾಗಿದೆ. ಇದನ್ನು ಅಲ್ಲಮಪ್ರಭುಗಳು ತಮ್ಮ ವಚನದಲ್ಲಿ ಈ ರೀತಿ ವರ್ಣಿಸಿದ್ದಾರೆ:

“ಕಾಮನ ಕೈ ಮುರಿದಡೆ ಮೋಹ ಮುಂದುಗೆಟ್ಟಿತ್ತು.
ಆಮಿಷ ತಾಮಸಧಾರಿಗಳೆಲ್ಲ ಎಳತಟವಾದರು.
ಅಕ್ಕಟಾ, ಅಯ್ಯಲಾ, ನಿಮ್ಮ ಕಂಡವರಾರೊ ?
ಆಳವಿಲ್ಲದ ಸ್ನೇಹಕ್ಕೆ ಮರಣವೆ ಮಹಾನವಮಿ.
ಗುಹೇಶ್ವರನನರಿಯದೆ ರಣಭೂಮಿಗಳುಲಿದವು.”

ಸಮಾಜೋಧಾರ್ಮಿಕ ಚಳುವಳಿ ರೂಪಿಸಿದ ಶರಣರು ವೈದಿಕ ಎಳೆಹೂಟೆ ಶಿಕ್ಷೆಗೆ ಗುರಿಯಾದರು.
ಜೊತೆಯಾದ ಬಿಜ್ಜಳ ಬಸವಣ್ಣನವರ ಸ್ನೇಹ ಮರೆತು ಶರಣರ ವಿಷಯದಲ್ಲಿ ಕ್ರೂರಿಯಂತೆ ವರ್ತಿಸಿ ಕಠಿಣ ಶಿಕ್ಷೆಗೆ ಒಳಪಡಿಸುತ್ತಾನೆ. ಸತ್ಯ ನ್ಯಾಯ ನಿಷ್ಠೆ ಅರಿಯದ ಕಾರಣ ಕಲ್ಯಾಣ ನೆಲ ರಣರಂಗವಾಯಿತು, ಬಿಜ್ಜಳನ ಸ್ನೇಹದಲ್ಲಿ ಆಳವಿಲ್ಲ, ಅದಕ್ಕೆ ಶರಣರಿಗೆ ‘ಮರಣವೇ ಮಹಾನವಮಿ ‘ ಎನ್ನುವ ನೋವಿನ ಮಾತುಗಳು ಅಲ್ಲಮರು ಹೇಳುತ್ತಾರೆ.

“ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ. ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.
ಕೇಳು, ಕೂಡಲಸಂಗಮದೇವಾ, ಮರಣವೇ ಮಹಾನವಮಿ” ಎನ್ನುವ ಬಸವಣ್ಣನವರು ಬಿಜ್ಜಳನ ವಿರುದ್ಧ ಬಂಡಾಯಗಾರರಾಗಿ ಪ್ರತಿರೋಧ ವ್ಯಕ್ತಪಡಿಸುತ್ತಾರೆ.

“ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು, ಸಾವೆಂಬುದು ಸಯವಲ್ಲ” ಎಂಬಂಥ ಬಸವಣ್ಣನವರ ಮಾತುಗಳು ಸಾವಿನ ಬಗ್ಗೆ ಸೂಚಿಸುತ್ತವೆ. ಶರಣರಿಗೆ ಸಾವಿಲ್ಲ, ಸಾವಿಗೆ ಹೆದರದವರು, ಎಂದೆಂದಿಗೂ ಶರಣರು ಅಮರರು ಹೀಗಾಗಿ ಶರಣರು ‘ಮರಣವೇ ಮಾಹಾನವಮಿ’ ಎಂದಿದ್ದಾರೆ.

ಶರಣ ಜೀವಿಗಳು ಸಮ ಸಮಾಜ ಕನಸು ಹೊತ್ತು ಕಾಯಕ ಸಿದ್ಧಾಂತ ಪರಿಕಲ್ಪನೆ ಜಾರಿಗೊಳಿಸಿದರು. ಲಿಂಗಾಯತ ಎನ್ನುವ ಅವೈದಿಕ ಧರ್ಮ ಸ್ಥಾಪಿಸಿ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು. ಶರಣರು ಅಂತಿಮವಾಗಿ ವೈದಿಕರ ಕೌರ್ಯದಲ್ಲಿ ಹತ್ಯೆಯಾದರು. ಉಳಿದ ಶರಣರು ಕಲ್ಯಾಣ ತೊರೆದು ದಿಕ್ಕುಪಾಲಾದರು. ಕಲ್ಯಾಣ ಪ್ರಣತೆ ಆರಿತು…

“ಅರಸುವಿಚಾರ,ಸಿರಿಯು,ಶೃಂಗಾರ,ಸ್ಥಿರವಲ್ಲಮಾನವಾ.ಕೆಟ್ಟಿತ್ತುಕಲ್ಯಾಣ,ಹಾಳಾಯಿತ್ತುನೋಡಾ”..‌.ಎನ್ನುವಬಸವಣ್ಣನವರಮನದಾಳದಮಾತುಗಳು,”ಕೆಟ್ಟಿತ್ತುನೋಡಾಲೋಕ,ಕೆಟ್ಟಿತ್ತುನೋಡಾಜಗವುಕೆಟ್ಟಿತ್ತುನೋಡಾಈರೇಳುಭುವನವೆಲ್ಲವುಇತ್ತವಿಸ್ತಾರವಾಯಿತ್ತು”…. ಎಂಬಂಥ ಅಲ್ಲಮಪ್ರಭುಗಳ ಮಾತುಗಳು ಕಲ್ಯಾಣ ನಾಡಿನ ಅಂತಿಮ ಕ್ಷಣಗಳನ್ನು ನೆನಪಿಸುತ್ತವೆ.

ಶರಣರು ಕರ್ಮ ಸಿದ್ಧಾಂತ ನಿರಾಕರಿಸಿ ಕಾಯಕ ಸಿದ್ಧಾಂತ ಪ್ರೋತ್ಸಾಹಿಸಿದರು. ಸಮಾಜದ ಎಲ್ಲಾ ವರ್ಗದ ಕಾಯಕ ಜೀವಿಗಳನ್ನು ಒಗ್ಗೂಡಿ ಶರಣ ಚಳವಳಿ ಭಾಗವಾಗಿ ವೈಚಾರಿಕ, ವೈಜ್ಞಾನಿಕ ನೆಲೆಗಟ್ಟಿನ ಧರ್ಮ ಸ್ಥಾಪಿಸಿದರು. ಬಸವಣ್ಣ ಹಾಗೂ ಸಮಕಾಲೀನ ಶರಣರ ಈ ಕ್ರಾಂತಿ ಯಾವುದೇ ಹೊನ್ನು ಮಣ್ಣು ಹೆಣ್ಣಿಗಾಗಿ ನಡೆದ ಯುದ್ಧವಲ್ಲ, ದುಡಿಯುವ ವರ್ಗದ ಜನರ ಜೀವನದ ಹಕ್ಕುಗಳಿಗಾಗಿ ಸಮಾನತೆ ಸಮಾಜ ಸ್ಥಾಪನೆಗಾಗಿ ನಡೆದಿರುವ ಸಾಮಾಜಿಕ ಕ್ರಾಂತಿ. ಅದುವೇ ಕಲ್ಯಾಣ ಕ್ರಾಂತಿ….. ಮರಣವೇ ಮಹಾನವಮಿ.‌..ಶರಣರ ವಿಜಯೋತ್ಸವ….!!

ಬಾಲಾಜಿ ಕುಂಬಾರ, ಚಟ್ನಾಳ

About nagaraj

Check Also

20 ನೇ ಕಲ್ಯಾಣ ಪರ್ವ ಕ್ಷಣಗಣನೆ ಆರಂಭ

ಲೇಖಕರು – ಸಂಗಮೇಶ ಎನ್ ಜವಾದಿ. ಪತ್ರಕರ್ತ, ಪ್ರಗತಿಪರ ಚಿಂತಕರು. ಬೀದರ ಜಿಲ್ಲೆ. ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು …

ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಯ ವೇಳಾಪಟ್ಟಿ

ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ‌ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …

ವೈದ್ದಿಕರ ಕುತಂತ್ರದಿಂದ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆ

ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು …

ಡಾ. ಎಂ.ಬಿ ಪಾಟೀಲ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿ

ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …

ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಶ್ರೀ ಡಾ. ಎಂ.ಬಿ ಪಾಟೀಲರ ಜನ್ಮದಿನ

ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

Leave a Reply

Your email address will not be published.