ಚನ್ನಮ್ಮನ ಕಿತ್ತೂರು: ೧೨ ನೇ ಶತಮಾನದಲ್ಲಿ ಬಸವಾದಿ ಶರಣರು ಸರ್ವಜನಾಂಗದ ಸಮಾನತೆಯನ್ನು ಎತ್ತಿ ಹಿಡಿಯಲು ಅಂತರ್ಜಾತಿ ವಿವಾಹ ಮೂಲಕ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿದ್ದರು, ಇಂದು ಮೆಟ್ಯಾಲ ಗ್ರಾಮದ ಗುರುಬಸವ ಮಂಟಪದಲ್ಲಿ ನಡೆದ ಅಂತರ್ಜಾತಿ ವಿವಾಹವು ಧರ್ಮಗುರು ಬಸವಣ್ಣನವರ ಕನಸಾಗಿದ್ದ ಕಲ್ಯಾಣರಾಜ್ಯ ನಿರ್ಮಾಣವಾಗುತ್ತಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ವಧು-ವರರಿಗೆ ಧರ್ಮದೀಕ್ಷೆ ನೀಡುವ ಮೂಲಕ ಆಶೀರ್ವದಿಸಿ ಮಾತನಾಡಿದರು.
ಬೆಳಗಾವಿ ಜಿಲ್ಲೆಯ ಚನ್ನಮ್ಮನ ತಾಲೂಕಿನ ಮೆಟ್ಯಾಲ ಗ್ರಾಮದ ಗುರುಬಸವ ಮಂಟಪದಲ್ಲಿ ಆಯೋಜಿಸಿದ್ದ ಅಂತರ್ಜಾತಿ ಮದುವೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ೧೨ ನೇ ಶತಮಾನಕ್ಕಿಂತಲೂ ಮೊದಲು ವರ್ಣಾಶ್ರಮ ಪದ್ದತಿ ಜಾರಿಯಲ್ಲಿತ್ತು ಈ ಸಂದರ್ಭದಲ್ಲಿ ಲಿಂಗತಾರತಮ್ಯ, ಮೇಲು-ಕೀಳು, ಮೂಡಾಚಾರ ತಾಂಡವವಾಡುತಿತ್ತು. ಬಸವಣ್ಣನವರ ಸಾಮಾಜಿಕ ಕಳಕಳಿ, ಏಕದೇವೋಪಾಸನೆ ಮೂಲಕ ಸರ್ವರಿಗೂ ಇಷ್ಟಲಿಂಗ ದೀಕ್ಷೆ ನೀಡುವ ಮೂಲಕ ಸಮನಾಗಿ ಕಂಡರು. ಅಂದಿನಿಂದಲೇ ಎಲ್ಲ ಕೆಳ ವರ್ಗದವರು ಇಷ್ಟಲಿಂಗ ದೀಕ್ಷೆ ಪಡೆಯುವ ಮೂಲಕ ಲಿಂಗಾಯತರಾಗಿದ್ದಾರೆ. ಅಂತಹ ಒಂದು ಧರ್ಮದ ದೀಕ್ಷೆಯನ್ನು ಇಂದು ನೀವು ಪಡೆಯುತ್ತಿದ್ದು, ಬಸವಣ್ಣನವರ ಕಾಯಕ, ದಾಸೋಹ, ಏಕದೇವೋಪಾಸನೆಯ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಯಿರಿ ಎಂದು ವಧು-ವರರಿಗೆ ಆಶೀರ್ವದಿಸಿದರು.
ಲೈವ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
https://www.facebook.com/www.lingayatkranti.co/videos/1670138086488699/
ಈ ಸಂದರ್ಭದಲ್ಲಿ ಧಾರವಾಡ ಸಲಕೀನಕೊಪ್ಪ ಬಸವಾಶ್ರಮದ ಪೂಜ್ಯ ಅಕ್ಕನಾಗಮ್ಮ ತಾಯಿ, ಲಿಂಗಾಯತ ಅಭಿವೃದ್ದಿ ಸಂಸ್ಥೆಯ ರಾಜ್ಯಾಧ್ಯಕ್ಷ ಬಸವರಾಜ ಕಡೇಮನಿ, ಪಂಚಮಸಾಲಿ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೊಡಗೌಡ ಹುಚಗೌಡರ, ರಾಷ್ಟ್ರೀಯ ಬಸವ ದಳದ ಮುಖಂಡರಾದ ಶಿವಾನಂದ ಅಗಸಿಮನಿ, ಮಡಿವಾಳಪ್ಪ ಅಸುಂಡಿ, ಭೀಮಪ್ಪ ಮರಿಗೌಡರ, ಈರಪ್ಪ ಅಸುಂಡಿ, ಬಸಪ್ಪ ಶಿವಪೂಜಿ, ಮಹಾದೇವ ನಂದಿಹಳ್ಳಿ, ಅಡಿವೆಪ್ಪ ಕೋಟಿ, ಆನಂದ ಅಸುಂಡಿ, ಸಿದ್ದಪ್ಪ ಮಾಳಗಿ, ಮಾರುತಿ ಹರಿಜನ, ರುದ್ರಯ್ಯ ಹಿರೇಮಠ, ಪುಂಡಲೀಕ ಶಿವಪೂಜಿ ಮತ್ತಿತರು, ಉಪಸ್ಥಿತರಿದ್ದರು.