ವೈದ್ಧಿಕ ಮಂತ್ರ ಜಪಿಸಿದ ವಚನಾನಂದ
nagaraj
August 23, 2020
featured, General News, ಅಪರಾಧ ಸುದ್ದಿ
ಹರಿಹರ: ವೀರಶೈವ ಪಂಚಮಸಾಲಿ ಪೀಠದ ಜಗದ್ಗುರು ಎನಿಸಿಕೊಂಡಿರುವ ವಚನಾನಂದರು ಮೂಲತಃ ಬಸವತತ್ವ ಅಪ್ಪಿಕೊಂಡು ಇಳಕಲ್ ಪೂಜ್ಯ ಗುರುಮಹಾಂತ ಸ್ವಾಮಿಗಳಿಂದ, ಆರ್ಥಿಕ ಸಹಾಯ ಪಡೆದು ಹೆಚ್ಚಿನ ವಿದ್ಯಾಭ್ಯಾಸ ಗಳಿಸಿದರು. ನಂತರ ಅವರೇ ನನ್ನ ಗುರುಗಳು ಎಂದು ಲಿಂಗಾಯತ ಧರ್ಮೀಯರ ಹಾಗೂ ಬಸವತತ್ವ ಅನುಯಾಯಿಗಳ ಕಣ್ಣಿಗೆ ಮನ್ನೆರಚುವ ಕಾರ್ಯಕ್ಕೆ ಸರವಾಗಿ ಕೈಹಾಕಿದ್ದಾರೆ.
ಇತ್ತೀಚಗೆ ಚಂಡಿಕಾಯಜ್ಞ ತಾವೇ ಮಾಡುವುದರ ಮೂಲಕ ತಮ್ಮ ನೈಜ ಜೀವನದ ಕುರಿತು ಲಿಂಗಾಯತರಿಗೆ ತೋರಿಸಿದ್ದಾರೆ.
ವಚನಾನಂದ ಸ್ವಾಮಿಗಳು ಲಿಂಗಾಯತರು, ಬಸವತತ್ವ ಅನುಯಾಯಿಗಳು ಕಂಡಾಗ ಇಳಕಲ್ ಗುರು ಮಹಾಂತ ಸ್ವಾಮೀಜಿಗಳ ಶಿಷ್ಯ ಎಂದು ಹೇಳುತ್ತಾ ಶ್ರೀಗಳ ಹೆಸರನ್ನು ಬಳೆಸುತ್ತಾರೆ. ಆದರೆ ವೈದಿಕರ ಆಚರಣೆಗಳನ್ನು ಸ್ವತಃ ತಾನೇ ಮಾಡುವುದರ ಮೂಲಕ ಏಕದೇವೊಪಾಸಕರಾದ ಲಿಂಗಾಯತ ಸಮಾಜದ ಮಾರ್ಯಾದೆಯನ್ನು ಮತ್ತೊಮ್ಮೆ ಹರಾಜು ಹಾಕಿದ್ದಾರೆ.
ಇಳಕಲ್ ಮಠವು ಹಾಗೂ ಅಲ್ಲಿನ ಪೂಜ್ಯರು ವೈದ್ಧಿಕರ ಧಾರ್ಮಿಕ ಆಚರಣೆಗಳನ್ನು ಕಡಾಕಂಡಿತವಾಗಿ ತಳ್ಳಿಹಾಕಿ, ತಮ್ಮ ಲಿಂಗಾಯತ ಮಠದಲ್ಲಿ ವಚನ ಸಾಹಿತ್ಯ, ಶರಣರು, ಲಿಂಗಾಯತ ಧರ್ಮದ ಕುರಿತು ಪ್ರಚಾರಗೈಯುವಲ್ಲಿ ನಾಡಿನಾದ್ಯಂತ ಹೆಸರುವಾಸಿಯಾಗಿದೆ. 
ವಚನಾನಂದ ಸ್ವಾಮಿಗಳು ನಾನು ಆ ಮಠದ ಶಿಷ್ಯ ಅಂತಾ ಹೇಳಿಕೊಂಡು ಹಿಂದೆ ತಮ್ಮ ಹರಿಹರದ ಮಠದಲ್ಲಿ ಉತ್ತರಪ್ರದೇಶದ ತಂತ್ರಗಾರರನ್ನು ಕರೆಸಿ ಮಾಟ-ಮಂತ್ರ ಮಾಡಿಸಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದರು.
ಲಿಂಗಾಯತ ಸಮುದಾಯದ ವೈದ್ಧಿಕತೆಯಲ್ಲಿ ಬಿದ್ದಿರುವ ರಾಜಕಾರಣಿಗಳು, ಉದ್ಯಮಿಗಳು ಕರೆದಾಗ ಅವರನ್ನು ಮೆಚ್ಚಿಸಲು ಸ್ವತಃ ತಾವೇ ಪುರೋಹಿತರ ಜೊತೆಗೆ ಕುಳಿತು ತಿನ್ನುವ ಹಣ್ಣು , ತುಪ್ಪ ಹಾಗೂ ಬೆಲೆ ಬಾಳುವ ಬಟ್ಟೆಗಳನ್ನು ಹೋಮದಲ್ಲಿ ಹಾಕುವುದು ಇಡೀ ಲಿಂಗಾಯತ ಸಮಾಜವೇ ತಲೆ ತಗ್ಗಿಸುವಂತಾಗಿದೆ.
ವಚನಾನಂದ ಸ್ವಾಮಿಗಳವರು ವೈದ್ಧಿಕ ಸ್ವಾಮಿಗಳೋ, ಅಥವಾ ಲಿಂಗಾಯತರ ಸ್ವಾಮಿಗಳೋ ಎಂಬುದನ್ನು ಅವರಿಗೆ ದೀಕ್ಷೆ ನೀಡಿದ ಗುರುಗಳು ಹಾಗೂ ಅವರ ಪೀಠದವರು ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟಪಡಿಸಬೇಕು.
Check Also
ಲೇಖಕರು – ಸಂಗಮೇಶ ಎನ್ ಜವಾದಿ. ಪತ್ರಕರ್ತ, ಪ್ರಗತಿಪರ ಚಿಂತಕರು. ಬೀದರ ಜಿಲ್ಲೆ. ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು …
ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …
ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು …
ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …
ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …
ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …
ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …
ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …
ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …
ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …
ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …
ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …
ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …
ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …
ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …