Home / featured / ಷಟಸ್ಥಲ ಚಕ್ರವರ್ತಿ ಚೆನ್ನಬಸವಣ್ಣನವರು

ಷಟಸ್ಥಲ ಚಕ್ರವರ್ತಿ ಚೆನ್ನಬಸವಣ್ಣನವರು

ಚಿನ್ಮಯಜ್ಞಾನಿ ಚೆನ್ನಬಸವಣ್ಣಅಂಕಿತ: ಕೂಡಲಚೆನ್ನಸಂಗಮದೇವ

ಕಾಯಕ: ಆಚಾರ್ಯ ಪುರುಷ, ಎರಡನೆಯ ಶೂನ್ಯ ಪೀಠಾಧ್ಯಕ್ಷ

ತಾಯಿ: ಅಕ್ಕ ನಾಗಲಾಂಬಿಕೆ

ತಂದೆ: ಶಿವದೇವ

ಹುಟ್ಟಿದ ಸ್ಥಳ ಹಾಗೂ ವಷ೯: ಬಸವಕಲ್ಯಾಣ – ಕ್ರಿ. ಶ. ಸುಮಾರು 1172 ರಲ್ಲಿ ಜನಿಸಿದರು.
ಸೋದರ ಮಾವ: ಗುರು ಬಸವಣ್ಣನವರು
ಖಡ್ಗ ಹಿಡಿದು ಕನ್ನಡ ಸಾಹಿತ್ಯವನ್ನು ರಕ್ಷಣೆ ಮಾಡಿದ 21 ವರ್ಷದ ಯುವಕ ಯಾರು ಗೊತ್ತೆ?
ಅದು ಷಟಸ್ಥಲ ಜ್ಞಾನಿ ಚನ್ನಬಸವಣ್ಣನವರು

ಬಸವಣ್ಣನವರ ಪ್ರಕಾರ ಜನ್ಮತ: ಜ್ಞಾನಪರಿಮಳಭರಿತ
ಪ್ರಭುದೇವರ ದೃಷ್ಠಿಯಲ್ಲಿ ಅವಿರಳ ಜ್ಞಾನಿ,ಸ್ವಯಂಭು ಜ್ಞಾನಿ
ಅಕ್ಕಮಹಾದೇವಿಯವರ ದೃಷ್ಠಿಯಲ್ಲಿ ಸಮ್ಯಕ ಜ್ಞಾನಿ
ಶರಣರ ದೃಷ್ಠಿಯಲ್ಲಿ ಷಟಸ್ಥಲ ಜ್ಞಾನಿ

ಚನ್ನಬಸವಣ್ಣನವರು ಪ್ರಾಯದಿಂದ ಚಿಕ್ಕವರು ಆದರೆ ಅವರ ಅಭಿಪ್ರಾಯ ಮಾತ್ರ ಚಿಕ್ಕದಾಗಿರಲಿಲ್ಲಾ

– ತಾಯಿಯ ಗಭ೯ದಲ್ಲಿ ಇರುವಾಗಲೇ ಗಭ೯ಲಿಂಗಧಾರಣೆಯನ್ನು ಬಸವಣ್ಣನವರಿಂದ ಪಡೆದಿದ್ದರು

– ಸೊಲ್ಲಾಪುರದ ಸಿದ್ಧರಾಮೇಶ್ವರರಿಗೆ ಇಷ್ಟಲಿಂಗ ದೀಕ್ಷೆಯನ್ನು ನೀಡಿದವರೇ ಚೆನ್ನಬಸವಣ್ಣನವರು

ಅನುಭವಮಂಟಪದಲ್ಲಿ ಪ್ರತಿಯೊಂದು ವಚನಗಳಿಗೆ ಅಂತಿಮವಾಗಿ ಒಪ್ಪಿಗೆಯನ್ನು ಕೊಡುವ ಜವಾಬ್ದಾರಿ ಚೆನ್ನಬಸವಣ್ಣನವರದು

– ಕರಣಹಸಿಗೆ ಹಾಗೂ ಷಟಸ್ಥಲ ತತ್ವವನ್ನು ಕಲ್ಯಾಣದ ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಗಿ ತಿಳಿಪಡಿಸುತ್ತಿದ್ದರು.

– ಬಸವಣ್ಣನವರ ತತ್ವಗಳಿಗಾಗಿ ದೇಶ-ವಿದೇಶಗಳಿಂದ ಬಂದು ಬಾಗವಹಿಸುತ್ತಿದ್ದ ಕಲ್ಯಾಣದ ಮಾಹಿತಿಯನ್ನು ಸಮಗ್ರವಾಗಿ ವಚನಗಳಲ್ಲಿ ದಾಖಲಿಸಿದ ಕೀತಿ೯ ಚೆನ್ನಬಸವಣ್ಣನವರಿಗೆ ಸಲ್ಲುತ್ತದೆ.

– ಅಕ್ಕಮಹಾದೇವಿತಾಯಿಯರು ಉಡತಡಿಯಿಂದ ಅನುಭವಮಂಟಪಕ್ಕೆ ಬಂದಾಗ ಅವರ ದಿವ್ಯತ್ವವನ್ನು ಪರಿಚಯಿಸಿದವರು ಚೆನ್ನಬಸವಣ್ಣನವರು.

– ಅನುಭವ ಮಂಟಪದ ಎರಡನೆಯ ಶೂನ್ಯ ಪೀಠಾಧೀಶರಾಗಿದ್ದರು

– ಗುರು ಬಸವಣ್ಣನವರ ದಿವ್ಯ ಆದೇಶದಂತೆ ವಚನ ಸಾಹಿತ್ಯ ಸಂಪತ್ತನ್ನು ರಕ್ಷಿಸಲು ಪಣ ತೊಟ್ಟರು

– ನಳನಾಮ ಸಂವತ್ಸರ ವೈಶಾಖ ಬಹುಳ ಬಿದಿಗೆ ಬುಧವಾರ ರೋಹಿಣಿ ನಕ್ಷತ್ರದಲ್ಲಿ ಚೆನ್ನಬಸವಣ್ಣನವರು ತಮ್ಮೊಡನೆ ಹನ್ನೆರಡು ಸಾವಿರ ಶರಣರನ್ನು ಕರೆದುಕೊಂಡು ಉಳಿವಿಗೆ ಬಂದು ಬೀಡು ಬಿಟ್ಟರು.

– ತಾಯಿ ಅಕ್ಕನಾಗಲಾಂಬಿಕೆ, ಗಣಾಚಾರಿ ಮಡಿವಾಳ ಮಾಚಿದೇವರ ಹಾಗೂ ಸಾವಿರಾರು ಶರಣರ ಜೊತೆಗೂಡಿ ವಚನಕಟ್ಟುಗಳ ಗಂಟುಗಳನ್ನು ಎತ್ತಿನ ಬಂಡೆಗಳಲ್ಲಿ, ಕುದುರೆಗಳ ಮೇಲೆ ಹಾಗೂ ತೆಲೆಯಮೇಲೆ ಹೊತ್ತು ಕೈಯಲ್ಲಿ ಖಡ್ಗವಿಡಿದು ಹೋರಾಡಿ ವಚನಗಳ ರಕ್ಷಿಸಿ ಕಲ್ಯಾಣದಿಂದ ಉಳವಿಯ ಮಹಾಮನೆಗೆ ಸಾಗಿಸಿದರು.

– ಒಂದು ತಂಡ ಮಡಿವಾಳ ಮಾಚಿದೇವರೂಡನೆ ಶರಣರನ್ನು ಕರೆದುಕೊಂಡು ವಚನಕಟ್ಟುಗಳ ಗಂಟುಗಳನ್ನು ಎತ್ತಿನ ಬಂಡೆಗಳಲ್ಲಿ, ಕುದುರೆಗಳ ಮೇಲೆ ಹಾಗೂ ತೆಲೆಯಮೇಲೆ ಹೊತ್ತು ಕೈಯಲ್ಲಿ ಖಡ್ಗವಿಡಿದು ಕಲ್ಯಾಣದಿಂದ ಉಳವಿಯವರೆಗೆ ಸಾಗುವಾಗ ವಚನಗಳ ರಕ್ಷಣೆಗೆ ಹಾಗೂ ಪ್ರಚಾರಕ್ಕಾಗಿ ಲಿಂಗಾಯತ ಮಠಗಳನ್ನು ಸ್ಥಾಪಿಸಿದ ಸುಕ್ಷೇತ್ರಗಳು ಗೊಡಚಿ, ಸತ್ತಿಗೇರಿ, ಜಾಲಿಕಟ್ಟಿ, ಮೆಲ್ದೂರ, ಸೊಗಲ, ಕಾರಿಮನಿ, ಮುರುಗೋಡು, ಹೊಸೂರು, ಬೈಲಹೊಂಗಲ, ತಿಗಡಿ, ನಾಗಲಾಪೂರ, ಕಾದರಹಳ್ಳಿ, ಹುಣಶಿಕಟ್ಟಿ, ಚಿಕ್ಕನಂದಿಹಳ್ಳಿ, ಲಿಂಗದಳ್ಳಿ, ಕಕ್ಕೇರಿ, ದಾಂಡೇಲಿ, ಉಳವಿ ಮುಂತಾದವು.

– ಮತ್ತೊಂದು ತಂಡ ಚೆನ್ನಬಸವಣ್ಣನವರು ಹಾಗೂ ಸಾವಿರಾರು ಶರಣರನ್ನು ಕರೆದುಕೊಂಡು ಕಲ್ಯಾಣದಿಂದ ಉಳವಿಗೆ ಸಾಗುವಾಗ ವಚನಗಳ ರಕ್ಷಣೆಗೆ ಹಾಗೂ ಪ್ರಚಾರಕ್ಕಾಗಿ ಲಿಂಗಾಯತ ಮಠಗಳನ್ನು ಸ್ಥಾಪಿಸಿದ ಸುಕ್ಷೇತ್ರಗಳು ಹುಬ್ಬಳ್ಳಿಯ ಮೂರುಸಾವಿರ ಮಠ, ಓಲೆಮಠ, ವಿದ್ಯಾನಗರದ ತಿಮ್ಮಸಾಗರ ಚೆನ್ನಬಸವಣ್ಣನವರ ದೇವಸ್ಥಾನ, ಉಣಕಲ ಕೆರೆಯ ಮೇಲಿರುವ ಚೆನ್ನಬಸವಣ್ಣನವರ ದೇವಸ್ಥಾನ, ಧಾರವಾಡದ ಉಳವಿ ಚೆನ್ನಬಸವಣ್ಣನವರ ದೇವಸ್ಥಾನ ಮುಂತಾದವು.

– ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ಲಿಂಗಾಯತ ಧಮ೯ದ ಸಪ್ತ ಪ್ರಮಥರಲ್ಲಿ ಒಬ್ಬರು

– ಜಂಗಮನಾಗಿ ಸಮಯಕ್ಕೆ ಸರಿಯಾಗಿ(ಕಲ್ಯಾಣ ಕ್ರಾಂತಿಯಾದಾಗ) ಖಡ್ಗವಿಡಿದು ವಚನಗಳನ್ನು ರಕ್ಷಣೆಮಾಡಿದ್ದರು

– ಜನಸಾಮಾನ್ಯರು ಲಿಂಗಾಯತ ಧಮ೯ದ ತತ್ವಗಳನ್ನು ತಿಳಿದುಕೊಳ್ಳಲು ಉಳವಿಗೆ ಚೆನ್ನಬಸವಣ್ಣನವರ ಹತ್ತಿರ ಬರುತ್ತಿದ್ದರು

– ಅನುಭವ ಮಂಟಪದಲ್ಲಿ ಸಮಾಜದಲ್ಲಿ ಧಾಮಿ೯ಕ, ನೈತಿಕ, ಸಾಂಸ್ಕೃತಿಕ ಆಧ್ಯಾತ್ಮಿಕ ತತ್ವಗಳ ಚಿಂತನೆಯಲ್ಲಿ ವಯಸ್ಸಿನಲ್ಲಿ ಕಿರಿಯರಾದರು ತಮ್ಮ ಅಭಿಪ್ರಯವನ್ನು ಮಂಡಿಸುತ್ತಿದ್ದರು.

– ತಮ್ಮ ಬಳಿ ಬರುತ್ತಿರುವ ಜನಸಾಮಾನ್ಯರಿಗೆ ಹಾಗೂ ಸಾದಕರಿಗೆ ಲಿಂಗಾಯತ ಧಮ೯ದ ತತ್ವ ಸಿದ್ದಾಂತವನ್ನು ಮಾಗ೯ದಶ೯ನ ಮಾಡುತ್ತಿದ್ದರು.

– ಸಮಾಜದಲ್ಲಿ ಜನಸಾಮಾನ್ಯರ ಕಷ್ಟಗಳನ್ನು ಪರಿಹರಿಸಲು ಯುವಕರಲ್ಲಿ ತರಬೇತಿ ಕೊಟ್ಟು ಅವರೊಂದಿಗೆ ವಚನಗಳನ್ನು ಕೊಟ್ಟು ಊರೂರಿಗೆ ಮಾಗ೯ದಶ೯ನಕ್ಕಾಗಿ ಕಳಿಸುತ್ತಿದ್ದರು.

ಚನ್ನಬಸವಣ್ಣನವರ ವ್ಯಕ್ತತ್ವದ ಬಗೆಗೆ ಷಟಸಥಲಸಿದ್ಧಾಂತ ಮತ್ತು ಆಚರಣೆಯ ನಿರ್ಣಯದಲ್ಲಿ ಚನ್ನಬಸವಣ್ಣನವರು ವಹಿಸಿದ ಮಹತ್ವಪೂರ್ಣ ಪಾತ್ರವನ್ನು ತಿಳಿಯಲು ಸಾಕಷ್ಟು ಸಾಮಗ್ರಿ ನಮಗೆ ದೊರೆಯುತ್ತದೆ. ಆದರೆ ಅವರ ಜೀವನಚರಿತ್ರೆಯ ಬಗ್ಗೆ ಅವರನ್ನೇ ಕುರಿತು ಬರೆದ ವಿರೂಪಾಕ್ಷಪಂಡಿತನ ಚೆನ್ನಬಸವ ಪುರಾಣ ಮತ್ತು ಬೇರೆ ಕೆಲವು ಕೃತಿಗಳಲ್ಲಿ ಸಾಂದರ್ಭಿಕವಾಗಿ ಕೆಲವು ವಿವರಗಳು ದೊರೆಯುತ್ತಿವೆಯಾದರೂ ಒಂದೆರಡು ವಿಷಯಗಳ ಬಗೆಗೆ ಎಲ್ಲವುಗಳಲ್ಲಿಯೂ ಏಕಾಭಿಪ್ರಾಯವಿಲ್ಲ. ಉಪಲಬ್ದ ಸಾಮಗ್ರಿಯನ್ನೇ ಆಧರಿಸಿ ಚನ್ನಬಸವಣ್ಣನವರ ಜೀನವ ಚರಿತ್ರೆಯನ್ನು ಈಗ ನಿರೂಪಿಸಬೇಕಾಗಿದೆ.

ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದ ಶರಣರಲ್ಲಿ ಅಗ್ರಗಣ್ಯನಾಗಿ ಆಚಾರ್ಯ ಪುರುಷನಾಗಿ ಬೆಳಗಿದ ಚೆನ್ನಬಸವಣ್ಣನು, ಭಕ್ತಿ, ಜ್ಞಾನ ವೈರಾಗ್ಯ ಮೂರ್ತಿಯಾಗಿ ಕಂಗೊಳಿಸಿದ್ದಾನೆ. ಚೆನ್ನಬಸವಣ್ಣನು ಅವಿರಳಜ್ಞಾನಿ, ಸದಮಲಜ್ಞಾನಿ, ಷಟುಸ್ಥಲ ಸ್ಥಾಪನಾಚಾರ್ಯ, ದಿವ್ಯಗುಣ ಸಂಪನ್ನನೆಂದು ಪ್ರಸಿದ್ಧನಾಗಿದ್ದಾನೆ. ಬಸವಣ್ಣನ ಅಕ್ಕ ನಾಗಲಾಂಬಿಕೆ ಮತ್ತು ಶಿವದೇವರಿಗೆ ಪುತ್ರನಾಗಿ ಕ್ರಿ. ಶ. ೧೧೪೪ ರಲ್ಲಿ ಜನಿಸಿದ ಚೆನ್ನಬಸವಣ್ಣ ಅತಿಚಿಕ್ಕ ವಯಸ್ಸಿನಲ್ಲೇ ಅಸಾಧರಣ ಕಾರ್ಯಗಳನ್ನು ಮಾಡಿದ ಮಹಾಪುರುಷನಾಗಿದ್ದಾನೆ.

ಚೆನ್ನಬಸವಣ್ಣ ಕೂಡಲ ಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿ ಪ್ರತಿಭಾಸಂಪನ್ನನಾದನು ಕಲ್ಯಾಣಕ್ಕೆ ಬಂದ ನಂತರ ಬಸವಣ್ಣನ ಮಹಾಮನೆಯ ಕಾರ್ಯದಲ್ಲಿ ನೆರವಾಗಿ ಧರ್ಮೊದ್ಧಾರ ಕರ್ಯಗಳಲ್ಲಿ ಸಹಯಕನಾದವನು. ಅನುಭವ ಮಂಟಪದ ಎಲ್ಲಾಕಾರ್ಯಗಳು ಚೆನ್ನಬಸವಣ್ಣನವರ ನೇತ್ರತ್ವದಲ್ಲಿ ನಡೆಯುತ್ತಿದ್ದವು. ಅಲ್ಲಮ ಪ್ರಭುವಿನ ಅಪ್ಪಣೆ ಮೇರೆಗೆ ಕಲ್ಯಾಣಕ್ಕೆ ಬಂದ ಸಿದ್ಧರಾಮನಿಗೆ ಲಿಂಗಧಾರಣೆ ಮಾಡಿದ ಮಹಾಮಹಿಮಶಾಲಿ. ಈತ ಅನುಭವ ಮಂಟಪಕ್ಕೆ ಬಂದ ಅಕ್ಕಮಹಾದೇವಿಯ ದಿವ್ಯತ್ವವನ್ನು ಗ್ರಹಿಸಿ ಶಿವಯೋಗ ಶಕ್ತಿಯನ್ನು ಅರಿತ ಅವರು ಆಕೆಯನ್ನು ಹೀಗೆ ಸ್ತುತಿಸಿದ್ದಾರೆ.

ಅಜಕೋಟಿ ವರುಷದವರೆಲ್ಲರೂ ಹಿರಿಯರೇ
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ
ಮತಿಗೆಟ್ಟು ಒಂದನಾಡ ಹೋಗಿ ಒಂಬತ್ತನಾಡುವ
ಅಜ್ಞಾನಿಗಳೆಲ್ಲರೂ ಹಿರಿಯರೇ? ಅನುವರಿದು ಘನವ
ಬೆರೆಸಿ ಹಿರಿಕಿರಿದೆಂಬ ಭೇದವ ಮರೆದು ಕೂಡಲ ಚೆನ್ನ
ಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ
ನಮ್ಮ ಮಹಾದೇವಿಯಕ್ಕಂಗಾಯ್ತು.

ಚೆನ್ನಬಸವಣ್ಣ ಶಿವಪಥದಲ್ಲಿ ಆಚಾರ್ಯರಾಗಿದ್ದಂತೆಯೇ ರಾಜನೀತಿಶಾಸ್ತ್ರಜ್ಞರಾಗಿದ್ದರು, ಶೂನ್ಯಪೀಠದ ಅಧ್ಯಕ್ಷರಾದರು. ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ ಮುಂತಾದ ಮತ ಪ್ರಕ್ರಿಯೆಗಳನ್ನು ರೂಪಿಸಿದರು. ಅವರು ೧೫೦೦ ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವರು. ಕಲ್ಯಾಣ ಕ್ರಾಂತಿಯ ನಂತರ ಶರಣರನ್ನು ಮತ್ತು ವಚನ ಸಂಪತ್ತನ್ನು ರಕ್ಷಿಸುವ ಹೊಣೆಹೊತ್ತು ಹೋರಾಡಿದರು. ಕೊನೆಗೆ ಅವರು ಉಳವಿಯಲ್ಲಿ ಲಿಂಗೈಕ್ಯರಾದರು. ಅವರ ವಚನವೊಂದರಲ್ಲಿ ದೇವರ ನಿಲುವನ್ನು ಈ ರೀತಿ ಹೇಳಿದ್ದಾರೆ.

ಮರೀಚಿಯೊಳಡಗಿದ ಬಿಸಿಲಿನಂತಿದ್ದಿತ್ತು,
ಕ್ಷೀರದೊಳಡಗಿದ ತುಪ್ಪದಂತಿದ್ದಿತು,
ಚಿತ್ರದೊಳಡಗಿದ ಚಿತ್ರದಂತಿದ್ದಿತು,
ನುಡಿಯೊಳಗಡಗಿದ ಅರ್ಥದಂತಿದ್ದಿತು,
ಕೂಡ ಚೆನ್ನಸಂಗಯ್ಯ ನಿಮ್ಮ ನಿಲುವು.

ಬಸವಣ್ಣವನರ ಸೋದರಿ ಅಕ್ಕನಾಗಮ್ಮನ ಮಗ ಚೆನ್ನಬಸವಣ್ಣನೆಂಬುದರಲ್ಲಿ ಯಾರೂ ಸಂದೇಹ ವ್ಯಕ್ತಪಡಿಸಿಲ್ಲ. ಆದುದರಿಂದ ಚನ್ನಬಸವಣ್ಣ, ಬಸವಣ್ಣನವರ ಸೋದರಳಿಯನಾಗುತ್ತಾನೆ. ಚನ್ನಬಸವಣ್ಣನವರ ಜನ್ಮಸ್ಥಳ ಕಲ್ಯಾಣವೆಂದು ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ ಮತ್ತು ಸಂದಬರ್ಾನುಸಾರ ಚನ್ನಬಸವಣ್ಣನವರನ್ನು ಉಲ್ಲೇಖಿಸುವ ವೀರಶೈವ(ಲಿಂಗಾಯತ) ಕೃತಿಗಳು ಹೇಳುತ್ತವೆ. ಆದರೆ ಇತ್ತೀಚಿನ ಕೆಲವು ವಿದ್ವಾಂಸರು ಬಸವಣ್ಣವನರು ಕಲ್ಯಾಣಕ್ಕೆ ಬರುವ ಪೂರ್ವದಲ್ಲಿಯೇ ಚನ್ನಬಸವಣ್ಣನವರು ಜನಿಸಿರಬೇಕೆಂದು ಹೇಳುತ್ತಾರೆ. ಚನ್ನಬಸವಣ್ಣನವರ ತಂದೆಯ ಹೆಸರನ್ನು ‘ಅಮಲಬಸವ ಚಾರತ್ರ್ಯ’ (ಸಿಂಗಿರಾಜಪುರಾಣ) ವೊಂದನ್ನು ಬಿಟ್ಟು ಉಳಿದಾವ ಕೃತಿಗಳೂ ಹೇಳುವುದಿಲ್ಲ. ಸಿಂಗಿರಾಜ ಪುರಾಣದಲ್ಲಿ ಎರಡು ಮೂರುಕಡೆ ಅಕ್ಕನಾಗಮ್ಮನ ಪತಿ ಶಿವಸ್ವಾಮಿ ಅಥವಾ ಶಿವದೇವನೆಂದು ಬರುತ್ತದೆ.

ಪ್ರಭುದೇವರ ಅನಂತರ ಚನ್ನಬಸವಣ್ಣ ಶೂನ್ಯಸಿಂಹಾಸನವನ್ನೇರಿದನೆಂದು ಹೇಳಲಾಗುತ್ತದೆ. ಕಲ್ಯಾಣದಲ್ಲಿ ನಡೆದ ಕ್ರಾತಿಯಿಂದಾಗಿ ಶರಣ ಶರಣೆಯರೆಲ್ಲ ಬೇರೆ ಬೇರೆ ಕಡೆ ಚದುರಿಹೋಗುತ್ತಾರೆ. ಚನ್ನಬಸವಣ್ಣನವರು ಕ್ರಾಂತಿಯ ಅನಂತರ ಕೆಲವುದಿನ ಕಲ್ಯಾಣದಲ್ಲಿಯೇ ಉಳಿದು ಅಲ್ಲಿದ್ದ ಶರಣರ ಯೋಗಕ್ಷೇಮವನ್ನು ನೋಡಿಕೊಂಡಿರುವ ಸಾಧ್ಯತೆ ಇದೆ. ಆಮೇಲೆ ಪರಿಸ್ಥಿತಿ ಇನ್ನೂ ಉಲ್ಬಣಗೊಂಡಾಗ ಉಳಿದ ಶರಣರ ಜೊತೆಯಲ್ಲಿ ಅವರು ಉಳವಿಯತ್ತ ಪ್ರಯಾಣ ಬೆಳೆಸಿದಂತೆ ಕೆಲವು ಕೃತಿಗಳಿಂದ ತಿಳಿದುಬರುತ್ತದೆ. ಚನ್ನಬಸವಣ್ಣನವರು ಬಯಲಾದುದು ಉಳವಿಯಲ್ಲಿಯೇ ಎಂಬ ನಂಬಿಕೆ ಈಗಲೂ ಅನೇಕ ಜನರಲ್ಲಿ ಬಲವತ್ತರವಾಗಿದೆ.

?? ಶರಣು ಶರಣಾರ್ಥಿಗಳು ??

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

20 ನೇ ಕಲ್ಯಾಣ ಪರ್ವ ಕ್ಷಣಗಣನೆ ಆರಂಭ

ಲೇಖಕರು – ಸಂಗಮೇಶ ಎನ್ ಜವಾದಿ. ಪತ್ರಕರ್ತ, ಪ್ರಗತಿಪರ ಚಿಂತಕರು. ಬೀದರ ಜಿಲ್ಲೆ. ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು …

ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಯ ವೇಳಾಪಟ್ಟಿ

ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ‌ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …

ವೈದ್ದಿಕರ ಕುತಂತ್ರದಿಂದ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆ

ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು …

ಡಾ. ಎಂ.ಬಿ ಪಾಟೀಲ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿ

ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …

ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಶ್ರೀ ಡಾ. ಎಂ.ಬಿ ಪಾಟೀಲರ ಜನ್ಮದಿನ

ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

Leave a Reply

Your email address will not be published.