ಇಳಕಲ್ಲ: ಗುರುಮಾಹಂತ ಸ್ವಾಮಿಜಿ ಅವರ 60 ನೇ ಜನನ ಜಾಗೃತಿಯ ನಿಮಿತ್ಯ
ಬಸವ ಯೋಗಿ ಮಾಹಂತ ಸ್ವಾಮಿಗಳು ಈ ಪುಸ್ತಕದ ಆಯ್ದ ಸಾಲು ಮಾತ್ರ
27/05/1960 ಬಸವಯಂತಿಯಂದು ಭಕ್ತವರ್ಗದಲ್ಲಿ ಜನಸಿದ ಪುತ್ರ. ಪ್ರಾಮಾಣಿಕ ವಿದ್ಯಾರ್ಥಿ ಬಾಲ್ಯದಲ್ಲಿ ಶೂನ್ಯ ಸಂಪಾದನೆ ಓದು ಬೆಳಿಸಿಕೊಂಡವರು ರಜಾದಿನಗಳನ್ನು ಬಸವತತ್ವ ಮಠಗಳಲ್ಲಿ ಕಳೆಯುವದು ವಚನಚಿಂತನ ಮಾಡುವದು. ಕಾಲೇಜು ವಿದ್ಯಾರ್ಥಿ ಜೀವನದಲ್ಲಿ ಸಾದಾ ಸರಳ ಶುಬ್ರವಾಗಿ ವಿಭೂತಿ ಧರಿಸಿ ಸಿಸ್ತಿನ ಸಿಪಾಯಿಯಂತೆ ಬರುವರು
ಬಿ. ಎ. ಭಾಗ 1 ಕನ್ನಡದಲ್ಲಿ ಭಾಗ 2 ಮತ್ತು 3 ಇಂಗ್ಲಿಷಿನಲ್ಲಿ ಓದಿ ಕಾಲೇಜಿಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದವರು.
ವಿಶ್ವವಿದ್ಯಾಲಯಗಳಲ್ಲಿ ಬರಿಗಾಲಲ್ಲಿ ಇವರು ಸ್ಪರ್ಧೆಗೆ ಬಂದು ನಿಂತಾಗ ಗೊಳ್ಳೆಯಂದು ಎಲ್ಲರೂ ನಗುತ್ತಿದ್ದರಂತೆ ಓಡಿ ಪ್ರಥಮ ಸ್ಥಾನ ಗಿಟ್ಟಿಸಿದರು ಮತ್ತು ಯುನಿವ್ಹರ್ಸಿಟಿ ಬ್ಲೂ ಆಗಿ ಹೊರಹೊಮ್ಮಿ ಕಾಲೇಜಿಗೆ ಕೀರ್ತಿ ತಂದರು ಕಾಲೆಜಿನಲ್ಲಿ ಯೂನಿಯನ್ ಸೆಕ್ರೆಟರಿಯಾಗಿ ಯಾವಾಗಲೂ ಇವರೆ ಆಯ್ಕೆ ಯಾಗುತಿದ್ದರು.
1981ರಿಂದ 1984 ವರೆಗೆ ಮೂರು ವರ್ಷ ಮುರಘಾಮಠ ಧಾರವಾಡದಲ್ಲಿ ಸೇವೆ ಮಾಡುತ್ತ ಕಾನೂನು ವಿದ್ಯಾರ್ಥಿಯಾಗಿ ಪೂಜ್ಯರ ಕೃಪೆಗೆ ಪಾತ್ರರಾಗಿ ಕಾನೂನು ಶಿಕ್ಷಣ ಮುಗಿಸಿದರು ವಕೀಲ ವೃತ್ತಿ ತರಬೇತಿ ಗೆಂದು ಹೊರಗಡೆ ಹೋಗಬೇಕೆಂದು ಪೂಜ್ಯ ಮಾಹಂತಪ್ಪಗಳ ಆಶೀರ್ವಾದ ಪಡೆಯಲು ಹೊಗಿ ಪೂಜ್ಯರ ಹತ್ತಿರ ನಾನು ಹೋಗುವೆ ಅಪ್ಪವರೆ ಎಂದು ಕೇಳಿದಾಗ ಮಾಹಂತಪ್ಪಗಳ ಸ್ವಲ್ಪ ಮೌನವಾಗಿ ತಡೆದು ನೀನು ಎಲ್ಲಿಯೂ ಹೋಗಬೇಕಾಗಿಲ್ಲ ಮಠದಲ್ಲಿಯೆ ಇದ್ದು ವೃತ್ತಿ ಮಾಡು ಎಂದರು. ಮುಂದೆ 1984ರಿಂದ 1999 ರವರೆಗೆ ಪೂಜ್ಯರ ಅಪ್ಪಣೆ ಆಗುವವರೆಗೆ ಶ್ರೀ ಮಠದಲ್ಲೆ ಉಳಿದರು.
ವಕೀಲ ವೃತ್ತಿ ಪ್ರಾರಂಭ ದಿನ ಅಪ್ಪಟ ಸ್ವದೇಶಿ ಭೂಷಣ ಕಾದಿ ಅಂಗಿ ದೊತುರ ಹಣೆಯ ಮೇಲೆ ವಿಭೂತಿ ಧರಿಸಿ ಪೂಜ್ಯರ ಆಶೀರ್ವಾದ ಪಡೆದು ಕೊರ್ಟಗೆ ಹೋಗಿ ನ್ಯಾಯಾಲದಲ್ಲಿ ನ್ಯಾಯಾದೀಶರಿಗೆ ಸಾಷ್ಟಾಂಗ ನಮಸ್ಕರಿಸಿದಾಗ ನ್ಯಾಯಾಧೀಶರು ವಕೀಲರು ಎದ್ದು ನಿಂತ ಕೈ ಮುಗಿದರದಂತೆ ಇದು ನಾಯ್ಯಾಲಯದ ಇತಿಹಾಸದಲ್ಲಿ ಪ್ರಥಮವಿರಬೇಕೆನೊ.
ಶಿವಯೋಗಿಗಳ ಇಚ್ಚೆ ಆದಾಗ
ಪೂಜ್ಯ ಶ್ರೀ ಮಾಹಂತಪ್ಪಗಳವರು ಇವರ ಸ್ವಭಾವ ವೈರಾಗ್ಯ ಸೇವಾ ಮನೋಭಾವ, ಸಾತ್ವಿಕ ಶರಣಜೀವೀವನ, ಸದುವಿನಯ, ಕಿಂಕರತ್ವ ಗಮನಿಸುತ್ತಲೇ ಇದ್ದರು ಒಂದು ದಿನ ಬೆಳಗಿನ ಪೂಜಾಸಮಯಕ್ಕೆ ಇವರಿಗೆ ಅನುಗ್ರಹಿಸಿ ದೀಕ್ಷೆ ಅಂದರೆ ಜಂಗಮದೀಕ್ಷೆ ನೀಡಬೇಕೆಂಬ ಹಂಬಲದಿಂದ ಕಾವಿ ಕಂಪನಿ, ರುದ್ರಾಕ್ಷಿಮಾಲೆ, ಕ್ರಿಯಾಭಸ್ಮ ಎಲ್ಲವನ್ನು ಸಿದ್ಧವಾಗಿಟ್ಟುಕೊಂಡು ತಮ್ಮ ಸೇವಾ ಮರಿಯ ಮೂಲಕ ಕರೆತರಲು ಅಪ್ಪಣೆ ಮಾಡಿದರು. ಪೂಜ್ಯ ಅಪ್ಪಗಳ ಪೂಜಾ ಕೊಣೆಗೆ ಸ್ನಾನ ಮಾಡಿ ಇವರು ಹೋದರು ಆಗ ಪೂಜ್ಯರು ತಮ್ಮ ಇಚ್ಛೆ ತಿಳಿಸಿದರು.
ತಕ್ಷಣಭಯದಿಂದ ಪೂಜ್ಯರ ಕೊಣೆ ಬಿಟ್ಟು ಹೋರಗೆ ಬಂದವರೆ ಮಠ ಬಿಟ್ಟು ಹೊರಟು ಹೋದರು ಇವರು ಸ್ವಾಮಿಯಾಗಲು ಯೋಚಿಸಿರಲೇ ಇಲ್ಲ ತಾನು ಸೇವಾ ಮಾಡುತ್ತ ಆಧ್ಯಾತ್ಮಿಕ ಸಾಧಕನಾಗಬೇಕು ಎಂದು ಮಾತ್ರ ಅಂದುಕೊಂಡಿದ್ದರು.
ಪೂಜ್ಯ ಶ್ರೀ ಮಾಹಂತಪ್ಪಗಳವರು ಮಠದ ವಿದ್ಯಾರ್ಥಿ ಮೂಲಕ ಹುಡಿಕಿಸಿ ಮಠಕ್ಕೆ ಕರೆಸಿಕೊಂಡು ಶಿವಯೋಗಿಗಳ ಇಚ್ಚೆ ಆದಾಗ ಸ್ವಾಮಿ ಆಗುವಂತೆ ಬಾ, ಮಠ ಬಿಟ್ಟು ಎಲ್ಲಿ ಹೋಗಬೇಡ ಎಂದು ವಾತ್ಸಲ್ಯದಿಂದ ಆಶಿರ್ವದಿಸಿದರು ಅನೇಕ ಘಟ್ಟಗಳನ್ನು ದಾಟಿ ಮುಂದೆ ಚಿತ್ರದುರ್ಗದ ಮುರಘಾಶರಣ ಮಠದಲ್ಲಿ ಸೇವೆ ಮಾಡಿ ಮುರಘಾಶರಣರ ಆದೇಶದಂತೆ ಮೈಸೂರಿನ ಭಾಗದಲ್ಲಿ ಚಿತ್ರದುರ್ಗದ ಶಾಖಾಮಠವಾದ ಶ್ರೀ ಮಾಲಿಂಗೇಶ್ವರ ಮಠದ ಚರಮುರ್ತಿಗಳಾಗಿ ಬಂದು ಒಂದು ವರ್ಷ ಕಾಲ ಅದ್ಭುತವಾಗಿ ಜಂಗಮಕಾಯಕ ಮಾಡಿ ಶ್ರದ್ಧೆಯಿಂದ ಬಸವ ತತ್ವ ಪ್ರಚಾರ ಮಾಡಿದರು ಆ ಭಾಗದಲ್ಲಿ ಮನೆಯಲ್ಲಿ ಮಾಹಾಮನೆ ಶರಣ ಸಂಗಮ ಶಿವಾನುಭವಗೊಷ್ಟಿ ಹಿಗೆಲ್ಲ ತತ್ವ ಪ್ರಸಾರ ಮಾಡಿದವರು.
ಮೈಸೂರಿನಿಂದ ಚಿತ್ತರಿಗೆ ಸಂಸ್ಥಾನ ಮಠಕ್ಕ 19ನೇ ಪೀಠಾದಿಪತಿಯಾದ ಶ್ರೀ ಡಾ. ಮಹಾಂತ ಶಿವಯೋಗಿಗಳ ಉತ್ತರಾಧಿಕಾರಿ ಅನೇಕ ಮಠಾದೀಶರ ಒತ್ತಾಯದ ಮೇರೆಗೆ ಪಟ್ಟ ಬದ್ರ ಜಾತಿ ವಾದಿಗಳ ವಿರೋಧದ ನಡುವೆ ಭಕ್ತ ವರ್ಗದ ವಿನಯಶೀಲರು ವಿದ್ಯಾವಂತರು ಆದ ಇವರನ್ನು ಅನೇಕ ಗೊಂದಲದ ನಡುವೆ ಭಕ್ತ ವರ್ಗದ ಮನೆತನದವರು ಪಟ್ಟವಾಗಬಾರದೆಂದು ವಿರೋಧದ ನಡುವೆ ಮಹಾತಂತಪ್ಪಗಳ 20ನೇ ಪೀಠಾಧೀಶರನ್ನಾಗಿ 12/09/2000 ರಂದು ಎಲ್ಲ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಭಕ್ತ ವರ್ಗದ ನರಗುಂದ ದಯವಿಟ್ಟು ಹೆಗಡಾಳವರ ಮನೆತನದಲ್ಲಿ ಹುಟ್ಟಿ ಶ್ರೀ ಮಠಕ್ಕೆ ಶ್ರೀ ಮ ನಿ ಪ್ರ ಗುರುಮಹಾಂತಸ್ವಿಮಿಗಳಾದರು ಶಾಂತ ಸ್ವಭಾವದ ಮೂರ್ತಿ ಇವರ 60 ನೇ ಜನನ ಜಾಗೃತಿಯ ಶುಭಾಷಯಗಳು.