Home / featured / ಗಣಾಚಾರಿಗಳಿದ್ದಾರೆ ಎಚ್ಚರಿಕೆ : ಪ್ರಕರಣ ದಾಖಲಿಸಲು ಮನವಿ

ಗಣಾಚಾರಿಗಳಿದ್ದಾರೆ ಎಚ್ಚರಿಕೆ : ಪ್ರಕರಣ ದಾಖಲಿಸಲು ಮನವಿ

ಬೆಂಗಳೂರು‌ : ಅಭಿಪ್ರಾಯಗಳಲ್ಲಿ ಭಿನ್ನಾಭಿಪ್ರಾಯ ಇರುವದು ಮಾನವ ಸಹಜ ಗುಣದರ್ಮ. ಅದು ಅಭಿವೃದ್ಧಿಯ ಸಂಕೇತ, ಸಮಾಜದಲ್ಲಿ ಹೊಸ ವಿಚಾರ, ಹೊಸ ಸಂಶೋದನೆ,ಹೊಸ ಸಿದ್ಧಾಂತ, ಇವುಗಳಿಂದಲೆ ಆಗಿದ್ದಲ್ಲವೆ ಮಾನವನ ವಿಕಾಸ. ಹೊಸದನ್ನು ಒಪ್ಪಿಕೊಳ್ಳದೆ ಹಳೆಯದನ್ನು ತ್ಯಜಿಸದೆ ಇದ್ದರೆ, ಇಂದು ನಾವು ಬತ್ತಲೆ ಸಮಾಜದಲ್ಲಿ ಇರಬೇಕಾಗುತ್ತಿತ್ತು. ಕಲ್ಲು ಕಲ್ಲುಗಳನ್ನು ತಿಕ್ಕಿ ಬೆಂಕಿ ಹಚ್ಚಬೇಕಾಗಿತ್ತು.ಪ್ರಾಣಿಗಳ ಹಸಿ ಮಾಂಸವನ್ನು ತಿನ್ನಬೇಕಾಗಿತ್ತು, ಕತ್ತೆಗಳ ಬೆನ್ನೂ ಸಂಪರ್ಕ ಸಾಧನ ವಾಗುತ್ತಿತ್ತು. ಹೊಸದಕ್ಕೆ ತೆರೆದುಕೊಂಡಗಲೆ ನಾವು ಇಂದು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೆವೆ.

ಪೃಥ್ವಿ ದುಂಡಗಾಗಿದೆ ಎಂದ ಪೈಥಾಗೋರಸ್ ನನ್ನು ಕೊಂದಿರಿ. ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಇದೆ ಎಂದವನಿಗೆ ಹುಚ್ಚ ಎಂದಿರಿ.ಅವನನ್ನು ಕೊಂದಿರಿ, ಮಾನವನ್ನು ಪ್ರಿತಿಸು ಎಂದ ಏಸುವನ್ನು ಸಿಲುಬೆಗೆ ಎರಿಸಿದಿರಿ.ಮಾನವನನ್ನು ಮಾನವ ನನ್ನಾಗಿ ಕಾಣು ಎಂದಾಗ ಬಸವಣ್ಣನವರನ್ನು ಕೊಂದಿರಿ. ನ್ಯಾಯ,ಸತ್ಯ, ಧರ್ಮ ರಕ್ಷಣೆಗಾಗಿ ರಚಿಸಿದ ವಚನ ಸಾಹಿತ್ಯದ ಜನಕರನ್ನು ಕೊಂದಿರಿ. ಪರಸ್ಪರ ಪ್ರೆಮಿಸಿ ಕೈ ಹಿಡಿದ ಯುವ ದಂಪತಿಗಳನ್ನು ಕೊಂದಿರಿ. ದೇವರು ಕಲ್ಲಿನಲ್ಲಿ ಇಲ್ಲ ನಿಮ್ಮ ಹೃದಯದಲ್ಲಿದ್ದಾನೆ ಎಂದು ಎಚ್ಚರಿಸಿದ ಶರಣರನ್ನು ಆನೆಯ ಕಾಲಡಿಯಲ್ಲಿ ತುಳಿಸಿದಿರಿ. ಧರ್ಮದ ತಿರುಳನ್ನು ಚರ್ಚಿಸಲು ಕಟ್ಟಿದ ಅನುಭವ ಮಂಟಪದ ಸದಸ್ಯರನ್ನು ಕೊಂದಿರಿ.ಆದರೆ ಅರ್ಥ ಮಾಡಿಕೊಳ್ಳಿ ಅಂದು ಕೊಲ್ಲಲ್ಪಟ್ಟವರು ಇನ್ನೂ ಬದುಕಿದ್ದಾರೆ. ಅವರು ಇಂದೂ ಪೂಜಿಸಲ್ಪುಡುತ್ತಿದ್ದಾರೆ. ಅವರನ್ನು ಕೊಂದವರು ಅಂದೆ ಸತ್ತಿದ್ದಾರೆ,

ಅಂದು ಕೊಂದವರನ್ನು ಇಂದು ನೀವೇ ದೇವರೆಂದು ಪೂಜಿಸುತ್ತಿದ್ದಿರಿ. ಅವರ ಹೆಸರಿನಲ್ಲಿ ಗುಡಿ ಗುಂಡಾರ ಕಟ್ಟಿ ನಿಮ್ಮ ಹೊಟ್ಟೆ ಹೊರೆಯುತ್ತಿದ್ದೀರಿ. ಅಲ್ಲಿಯೂ ನಿಮ್ಮ ಮಂತ್ರ ತಂತ್ರ ಪ್ರಯೋಗಿಸುತ್ತಲಿದ್ದೀರಿ. ನಿಮಗೆ ಅನ್ನ ಇಕ್ಕಿದ,ನೀವೇ ನಿತ್ಯವೂ ಪೂಜಿಸುವ ನಿಮ್ಮ ದೇವರ ಸಿದ್ಧಾಂತಕ್ಕೆ ಕನ್ನ ಹಾಕಿ ಮತೊಮ್ಮೆ ನೀವೇ ಹುಟ್ಟಾಕಿದ ದೇವರನ್ನು ದಿನವೂ ಸಾಯಿಸಲು ಪ್ರಯತ್ನಿಸುತ್ತಿದ್ದಿರಿ. ಇದು ಯಾವ ಧರ್ಮ.

ಕೊಲ್ಲಿರಿ ಎಷ್ಟು ಜನರನ್ನು ಕೊಲ್ಲುತ್ತಿರಿ. ಕೊಂದಷ್ಟು ನಿಮ್ಮ ಧರ್ಮ ಕುಗ್ಗುತ್ತದೆ. ಒಬ್ಬ ಏಸುವನ್ನು ಕೊಂದು ಅರ್ಧ ಜಗತ್ತನ್ನು ಅವನಿಗೆ ಅರ್ಪಿಸಿದಿರಿ. ಒಬ್ಬ ಪೈಗಂಬರನನ್ನು ಕೊಂದು ಕಾಲು ಭಾಗ ಮತ್ತೆ ಕಳದು ಕೊಂಡಿರಿ.ಒಬ್ಬ ಬಸವಣ್ಣನನ್ನು ಕೊಂದು ಇಡೀ ದಕ್ಷಿಣ ಭಾರತವನ್ನು ಕಳೆದುಕೊಂಡಿರಿ.

ಅದು ಅಂದು,ಅಂದು ಮಾಡಿದ ತಪ್ಪನ್ನು ಇಂದೂ ಮಾಡಿದರೆ ನಿಮ್ಮನ್ನು ಮುರ್ಖಎನ್ನುತ್ತಾರೆ. ಇತಿಹಾಸ ಅರಿಯದ ಮೂಢ ವರ್ತಮಾನ ಕಟ್ಟಲಾರ. ಒಬ್ಬ ಕಲಬುರ್ಗೀಯನ್ನು ಕೊಂದು ಸಾವಿರಾರು ಕಲಬುರ್ಗಿಗಳನ್ನು ಹುಟ್ಟು ಹಾಕಿದಿರಿ, ಒಬ್ಬ ದಾಬೋಲ್ಕರರನನ್ನು ಕೊಂದು ಮಹಾರಾಷ್ಟ್ರ ಕಳೆದುಕೊಂಡಿರಿ. ಒಬ್ಬ ಗೌರಿಯನ್ನು ಕೊಂದು ಸಾವಿರಾರು ಗೌರಿಗಳನ್ನು ಸೃಷ್ಟಿಸಿದಿರಿ. ಇನ್ನು ನೀವು ಬುದ್ದಿ ಬಂದಿಲ್ಲವೆಂದರೆ ನಿಮ್ಮನ್ನಾರು ಕಾಪಾಡಲಾರರು.

ದೇವರು ದೇವರಲ್ಲ ಅದು ಕಲ್ಲೆಂದು ನೀರೂಪಿಸಿದೆ ಕಣ್ಣಿಗೆ ಕಾಣದ ವೈರಸ್. ಇಂದು ಮನುಕುಲಕ್ಕೆ ಸವಾಲಾಗಿದೆ.ಎಲ್ಲರನ್ನು ರಕ್ಷಿಸುವ ನಿಮ್ಮ ದೇವರು ಎಲ್ಲಿದ್ದಾನೆ.ನೀವು ಹೇಳುವ ಜಗದ್ ರಕ್ಷಕ ತನ್ನ ಸ್ವರಕ್ಷಣೆಗೆ ಬಾಗಿಲ ಹಿಂದೆ ಅಡಗಿ ಕುಳಿತ್ತಿದ್ದಾನೆ, ತನ್ನ ಭವಿಷ್ಯವನ್ನೆ ಅರಿಯದ ಒಬ್ಬ ಅಬ್ಬೆಪಾಲಿ ಅನ್ಯರ ನಾಳಿನ ಭವಿಷ್ಯ ಹೇಗೆ ಹೇಳಿಯಾನು?.ಒಂದು ಕ್ಷುಲ್ಲಕ ವೈರಸಗೇಕೆ ಅಡಗಿ ಮನೆಯಲ್ಲಿ ಕುಳಿತಿರುವ.

ಅಭಿವ್ಯಕ್ತಿ ಸ್ವಾತಂತ್ರ್ಯ ಇರುವ ದೇಶದಲ್ಲಿ ತಾಲಿಬಾನ ಸಂಸ್ಕೃತಿ ಯನ್ನು ತರಬಯಸುವ ನೀವೂ ತಾಲಿಬಾನಿಗಳ ಅಂತ್ಯ ಕಂಡಿಲ್ಲವೇ?. ನಿಮಗೆ ಸಲ್ಲದ ಅಭಿಪ್ರಾಯಗಳಿಗೆ ವೈಚಾರಿಕವಾಗಿ ಉತ್ತರಿಸಿ,ಅದನ್ನು ಬಿಟ್ಟು ದೈಹಿಕ ಬೆದರಿಕೆ ಹಾಕುವದು ಅತ್ಯಂತ ಹೇಯ ಹಾಗು ಖಂಡನೀಯ.

ಲಿಂಗಾಯತರ ತಂಟೆಗೆ ಬರಬೇಡಿ, ಬಸವಣ್ಣನ ಭಕ್ತರು ಶಾಂತಿ ಪ್ರಿಯರು ಆದರೆ ಹೇಡಿಗಳಲ್ಲ. ನಮ್ಮಲಿಯ ಗಣಾಚಾರಿ ಅಂಬಿಗರ ಚೌಡಯ್ಯ ಇನ್ನೂ ಸತ್ತಿಲ್ಲ.ಅವನು ನಮ್ಮ ಮನೆ ಮನೆಯಲ್ಲಿ ಇರುವುದನ್ನು ಜ್ಞಾಪಿಸಿಕೊಳ್ಳಿ. ಎಚ್ಚರಿಕೆ

ನಿಮ್ಮ ಅನಾಗರಿಕತೆಯ ಅತಿರೇಖದ,ಅರ್ಥವಿಲ್ಲದ ವೈದಿಕ ಆಚರಣೆ ,ಮುಡನಂಬಿಕೆ,ಕಂದಾಚಾರಗಳನ್ನು ವಿರೋಧಿಸುವದು ಆರೋಗ್ಯಕರ ಸಮಾಜವನ್ನು ಬಯಸುವ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂದು ನೀವೂ ಬೆದರಿಕೆ ಹಾಕುತ್ತಿರುವದು ಒಬ್ಬ ಲಿಂಗಾಯತ ಸನ್ಯಾಸಿಗಲ್ಲ ಒಂದು ಸಮಾಜಕ್ಕೆ ನೆನಪಿರಲಿ. ಶ್ರೀ ನಿಜಗುಣಾನಂದ ಶರಣರು ಒಬ್ಬ ವ್ಯಕ್ತಿಯಲ್ಲ ಅವರು ಲಿಂಗಾಯತ ಧರ್ಮದ ಶಕ್ತಿ. ಅವರಿಗೆ ಬೆದರಿಕೆ ಸಮಾಜಕ್ಕೆ ಬೆದರಿಕೆ.

ಆಯುಷ್ಯ ತೀರಿದಲ್ಲದೆ ಮರಣವಿಲ್ಲ,
ಭಾಷೇ ತಪ್ಪಿದಲ್ಲದೆ ದಾರಿದ್ರವಿಲ್ಲ.
ಅಂಜಲದೇಕೋ, ಲೋಕವಿಗರ್ಭಣೆಗೆ?
ಅಂಜಲದೇಕೋ, ಕೂಡಲಸಂಗಮದೇವಾ ನಿಮ್ಮಾಳಾಗಿ.

About nagaraj

Check Also

20 ನೇ ಕಲ್ಯಾಣ ಪರ್ವ ಕ್ಷಣಗಣನೆ ಆರಂಭ

ಲೇಖಕರು – ಸಂಗಮೇಶ ಎನ್ ಜವಾದಿ. ಪತ್ರಕರ್ತ, ಪ್ರಗತಿಪರ ಚಿಂತಕರು. ಬೀದರ ಜಿಲ್ಲೆ. ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು …

ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಯ ವೇಳಾಪಟ್ಟಿ

ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ‌ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ …

ವೈದ್ದಿಕರ ಕುತಂತ್ರದಿಂದ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆ

ಲಿಂಗಾಯತ ಕ್ರಾಂತಿ: ಲಿಂಗಾಯತ ಧರ್ಮ ಉದಯವಾಗಿದ್ದು 12 ಶತಮಾನದ ಆರಂಭದಲ್ಲಿ ಎಂಬುವುದು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಸಮಾನತೆಯ ಪ್ರತಿಪಾಧಕ, ಲಿಂಗಬೇದವನ್ನು …

ಡಾ. ಎಂ.ಬಿ ಪಾಟೀಲ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿ

ನೇಗಿನಹಾಳ : ನಾಡಿನ ನೆಲ, ಜಲ, ಶಿಕ್ಷಣ ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ವಿಜಯಪುರ ಜಿಲ್ಲೆಯ ಬೆಳಕಾಗಿರುವ …

ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಶ್ರೀ ಡಾ. ಎಂ.ಬಿ ಪಾಟೀಲರ ಜನ್ಮದಿನ

ಲಿಂಗಾಯತ ಕ್ರಾಂತಿ: ಲಿಂಗಾಯತರ ಪ್ರಶ್ನಾತೀತ ನಾಯಕ, ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಗಳು, ನೇರ ನಡೆ-ನುಡಿಯ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರಾದ ಸನ್ಮಾನ್ಯಶ್ರೀ …

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

Leave a Reply

Your email address will not be published.