ಬೈಲಹೊಂಗಲ : ಲಿಂಗಾಯತರಲ್ಲಿ ಅನೇಕರು ಇಂದು ನಾಲಿಗೆ ರುಚಿಗಾಗಿ ಮಾಂಸಾಹಾರಿಗಳಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಸಂಸ್ಕಾರದ ಕೊರತೆ. ಲಿಂಗಾಯತ ಧರ್ಮದಲ್ಲಿ ಮಾಂಸಹಾರ ಇಲ್ಲ ನೀವು ಶಾಖಾಹಾರಿಗಳು ಅಂತಾ ನಮ್ಮನ್ನು ತಿದ್ದಿ ಬುದ್ದಿ ಹೇಳಬೇಕಾದ ಮಠಾಧೀಶರಲ್ಲಿ ಕೆಲವರನ್ನು ಹೊರೆತು ಪಡಿಸಿದರೆ ಬಹುಪಾಲು ಲಿಂಗಾಯತ ವಿರಕ್ತ ಮಠದ ಸ್ವಾಮೀಗಳು ಸಮಾಜ ಏನಾದರೂ ಪರವಾಗಿಲ್ಲ ನಮ್ಮ ಮಠದಲ್ಲಿ ಇರುವ ಶಾಲಾ ಕಾಲೇಜುಗಳ ವ್ಯಾಪಾರ ಚನ್ನಾಗಿ ನಡೆದರು ಸಾಕು ಎನ್ನುವ ದುರಾಸೆಯಿಂದ ಲಿಂಗಾಯತರನ್ನು ಸಂಸ್ಕಾರ ಮತ್ತು ಅಭಿಮಾನ ಶೂನ್ಯರನ್ನಾಗಿ ಮಾಡಿದರು.
ಭಾರತ ದೇಶವನ್ನು ನೋಡಿದಾಗ ಮೂಲಭೂತವಾಗಿ ಧಾರ್ಮಿಕ, ಆಧ್ಯಾತ್ಮಿಕ ಪರಂಪರೆಯ ದೇಶವಾಗಿದೆ. ಇಲ್ಲಿ ಜೈನ, ಬೌದ್ದ, ಮತ್ತು ಲಿಂಗಾಯತ ಅಂತಹ ಅಹಿಂಸಾವಾದಿ ಧರ್ಮಗಳು ಜನ್ಮ ತಳದಿವೆ. ಜೈನ ಧರ್ಮ ಅಹಿಂಸೊ ಪರಮೋಧರ್ಮ ಅಂತಾ ಬೋಧೀಸಿದರೆ ಬೌದ್ದ ಧರ್ಮವು ಜೀವ ನೀಡುವ ಶಕ್ತಿ ನಿನಗಿಲ್ಲದಿರುವಾಗ ಕೊಲ್ಲೂವ ಹಕ್ಕು ನಿನಗಿಲ್ಲ ಅಂತಾ ಭೋದಿಸುತ್ತದೆ. ಲಿಂಗಾಯತ ಧರ್ಮವು ದಯವೇ ಧರ್ಮದ ಮೂಲ ಅಂತಾ ಭೋದಿಸುತ್ತದೆ.
ವಿಪರ್ಯಾಸವೆಂದರೆ ಜೈನರಲ್ಲಿ ಬಹುಪಾಲು ಜನರು ಶಾಖಾಹಾರಿಗಳಾಗಿ ಉಳಿದರೆ ಇಂದು ಲಿಂಗಾಯತರಲ್ಲಿ ಬಹುಪಾಲು ಜನರು ಮಾಂಸಾಹಾರಿ ಆಗುತ್ತಿರುವುದು ಕಳವಳಕಾರಿಯಾಗಿದೆ.
ಲಿಂಗಾಯತ ಧರ್ಮಗುರು ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಪ್ರಾಣಿಗಳನ್ನು ಕೊಂದು ತಿನ್ನ ಭಾರದೆಂದು ಭೋದಿಸಿದ್ದಾರೆ.
“ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲಪ್ರಾಣಿಗಳೆಲ್ಲರಲ್ಲಿಯೂ ದಯವೇ ಧರ್ಮದ ಮೂಲವಯ್ಯಾ ಕೂಡಲ ಸಂಗಮದೇವಯ್ಯ ನಂತಲ್ಲದೊಲ್ಲನಯ್ಯಾ” ಅಂತಾ ಹೇಳಿ ಬಾಯಿ ಚಪಲಕ್ಕೆ ದೇವರ ಹೆಸರು ಹೇಳಿ ಪ್ರಾಣಿ ಬಲಿ ಕೊಟ್ಟು ತಿನ್ನುವುದನ್ನು ಖಂಡಿಸಿದ್ದಾರೆ.

ಗುರು ಬಸವ್ಣನವರು ತಮ್ಮ ಇನ್ನೋಂದು ವಚನದಲ್ಲಿ
ಅಂಗದಿಚ್ಚೆಗೆ ಮಧ್ಯ ಮಾಂಸ ತಿಂಬರು ಅಂತಾ ಹೇಳಿ ಲಿಂಗ ಪಥವ ತಪ್ಪಿ ನಡೆವವರು? ಅಂತಾ ಪ್ರಶ್ನೆ ಮಾಡುತ್ತಾರೆ .ಇದಲ್ಲದೆ ಲಿಂಗ ಲಾಂಛನದಾರಿಗಳಾಗಿ ಮಾಂಸಹಾರ ಮಾಡಿದರೆ ಕೊಂಡಮಾರಿಂಗೆ (ಅಂದರೆ ಹಾದಿಯಲ್ಲಿ ಹೋಗುವ ದೆವ್ವವನ್ನ (ವಿಪತ್ತು) ಮೈಮೇಲೆ ಎಳೆದು ಕೊಂಡಂತೆ ) ಹೋಗಬೇಕಾಗುತ್ತದೆ ಎನ್ನುತ್ತಾರೆ. ಇಂದು ಚೀನಾ ದೇಶದಲ್ಲಿ ಜೀವಂತ ಕಾಡು ಪ್ರಾಣಿಗಳ ತಿನ್ನುವ ಮಾರುಕಟ್ಟಿಯಿಂದ ಬಂದ ಕೊರೊನಾ ಎಂಬ ಮಹಾಮಾರಿ ಇಡಿ ಜಗತ್ತಿಗೆ ವಿಪತ್ತು ಆಗಿ ಕಾಡುವುದನ್ನು ಇಂದಿನ ದಿನ ನಾವು ಕಾಣಬಹುದು. ಇದಲ್ಲದೇ ಮಡಿವಾಳ ಮಾಚಿತಂದೆ ಶರಣರು ತಮ್ಮ ಒಂದು ವಚನದಲ್ಲಿ ಎಲ್ಲೆಲ್ಲಿಯ ಪ್ರಾಣಿಯ ಕೊಲ್ಲದಿಹುದೆ ಧರ್ಮ ಅಂತಾ ಹೇಳಿದ್ದಾರೆ. ಇದಲ್ಲದೆ ಅನೇಕ ಶರಣರು ತಮ್ಮ ವಚನಗಳಲ್ಲಿ ಮಾಂಸಹಾರ ಸೇವಿಸುವವರನ್ನು ಖಂಡಿಸಿದ್ದಾರೆ. ಹೀಗಾಗಿ ಲಿಂಗಾಯತ ಧರ್ಮದಲ್ಲಿ ಮಾಂಸಾಹಾರ ನಿಷಿದ್ದ.ಮನುಷ್ಯನು ನೈಸರ್ಗಿಕವಾಗಿ ಹಾಗೂ ಮೂಲಭೂತವಾಗಿಯು ಶಾಖಾಹಾರಿ ಆಗಿದ್ದಾನೆ. ಅದಕ್ಕೆ ಸಾಕಷ್ಟು ಉದಾಹರಣೆ ನೀಡಬಹುದು. ಇಂದು ಭೂಮಿಯ ಮೇಲೆ ಮನುಷ್ಯನನ್ನು ಹೊರೆತು ಪಡಿಸಿ ಅನೇಕ ಜೀವಿಗಳು ಬದುಕುತ್ತಿವೆ. ಅವುಗಳಲ್ಲಿಯು ಕೂಡ ಶಾಖಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳನ್ನು ನಾವು ಕಾಣಬಹುದು ಮಾಂಸಾಹಾರ ಮಾಡುವ ಪ್ರಾಣಿಗಳಿಗೆ ಹರಿದು, ಕೊಂದು ತಿನ್ನಲು ಉಗುರಿನ ಚೂಪಾದ ಪಂಜರ ಮತ್ತು ಹಲ್ಲುಗಳಲ್ಲಿ ಅತೀ ಮೊನಚಾದ ಕೋರಿ ಹಲ್ಲುಗಳನ್ನು ಕಾಣಬಹುದು ಮತ್ತು ಅವುಗಳ ಹೊಟ್ಟೆಯ ಕರುಳುಗಳಲ್ಲಿ ಶಾಖಾಹಾರಿ ಪ್ರಾಣಿಗಳಿಗೂ ಮಾಂಸಾಹಾರಿ ಪ್ರಾಣಿಗಳಲ್ಲಿ ವ್ಯತ್ಯಾಸ ಕಾಣಬಹುದು ಮತ್ತು ಶಾಖಾಹಾರ ಪ್ರಾಣಿಗಳ ಹಲ್ಲಿಗೂ ಹಾಗೂ ಮನುಷ್ಯನ ಹಲ್ಲುಗಳು ಒಂದೆ ಬಗೆಯಲ್ಲಿ ಇವೆ ಉದಾಹರಣೆಗೆ ಆಡು, ಕುರಿ, ಜಿಂಕೆ ಮೊಲ, ಕುದುರೆ ಇತ್ಯಾದಿಗಳನ್ನು ಕಾಣಬಹುದು ಮತ್ತು ಕೆಲವರು ಸಸ್ಯಗಳಲ್ಲಿಯೂ ಜೀವವಿದೆ ಅವುಗಳನ್ನು ಮತ್ತು ಫಲವನ್ನು ತಿನ್ನುವುದು ಹಿಂಸೆ ಅಂತಾ ವಾದ ಮಾಡುತ್ತಾರೆ. ಸಸ್ಯಗಳಲ್ಲಿ ಜೀವ ವಿದೆ ಆದರೆ ಆತ್ಮ ಇಲ್ಲ ಸಸ್ಯಗಳಿಗೆ ಸುಖ, ದುಃಖ, ನೋವು, ನಲಿವುಗಳಿಲ್ಲ ಆದ್ದರಿಂದ ಸಸ್ಯಾಹಾರ ಮಾಡುವುದು ಹಿಂಸೆ ಅಲ್ಲ ಎಂಬುವುದು ನನ್ನ ವಯಕ್ತಿಕ ವಿಚಾರವಾಗಿದೆ. ಸಸ್ಯಗಳಲ್ಲಿ ಕ್ರೀಯೆ ಪ್ರಕ್ರೀಯೆ ಇರುವುದಿಲ್ಲಾ ಅವು ಸುಖ ದುಃಖಗಳನ್ನು ಪ್ರಕಟಿಸುವುದಿಲ್ಲ ಸಸ್ಯವನ್ನು ಕತ್ತರಿಸಿ ಮತ್ತೆ ಬೆಳೆಯುತ್ತೆ ಆದರೆ ಒಂದು ಪ್ರಾಣಿಯನ್ನು ಕತ್ತರಿಸಿ ಸಾಯುತ್ತೆ ಮತ್ತೆ ಹುಟ್ಟುವುದಿಲ್ಲ ಆದ್ದರಿಂದ ಸಸ್ಯಹಾರ ಹಿಂಸೆ ಅಲ್ಲ ಎಂಬುವುದು ನನ್ನ ವಯಕ್ತಿಕ ಅಭಿಪ್ರಾಯ ಮತ್ತೆ ಕೆಲವರು ಹಾಲನ್ನು ಕೂಡಾ ಮಾಂಸದಿಂದ ಬರುತ್ತದೆ. ಅದು ಹೇಗೆ ಶಾಖಾಹಾರ ಆಗುತ್ತದೆ ಎಂದು ವಾದಿಸುತ್ತಾರೆ. ಹಾಲು ಮಾಂಸದಿಂದ ಬರುತ್ತದೆ. ಆದರೆ ಹಾಲನ್ನು ನಾವು ಕೊಂದು ತೆಗೆಯುವುದಿಲ್ಲ ಕರುವನ್ನು ಬಿಟ್ಟು ಅದು ಕುಡಿದ ಮೆಲೆ ತಗೆಯುತ್ತೆವೆ. ಕರು ಬಹಳ ಹಾಲುಕುಡಿದರು ಅದರ ಜೀವಕ್ಕೆ ಆಪತ್ತು ಹಾಲು ಕರಿಯದಿದ್ದಡೆ ಹಸುವಿಗೆ ಅದರ ಕೆಚ್ಚಲಕ್ಕೆ ಆಪತ್ತು ಹೀಗಿರುವಾಗ ಹಾಲು ಹೇಗೆ ಮಾಂಸಹಾರ ಆಗುತ್ತದೆ ಇದಲ್ಲದೆ ಕೋಳಿ ಮೊಟ್ಟೆಯು ಶಾಖಾಹಾರ ಅಂತ ತಿನ್ನುವವರೂ ಎಷ್ಟೋ ಜನ ಇದ್ದಾರೆ ಮೊಟ್ಟೆ ಮೂಲಭೂತವಾಗಿ ಮಾಂಸಾಹಾರದಲ್ಲಿ ಬರುತ್ತೆ. ಕೋಳಿ ತನ್ನ ಮೊಟ್ಟಗೆ ನೈಸರ್ಗಿಕವಾಗಿ ಶಾಖನೀಡುವ ಪ್ರಕ್ರೀಯೆಯಿಂದ ಮರಿ ಹೊರಬರುತ್ತದೆ. ಮೊಟ್ಟೆಯಲ್ಲಿ ಮಾಂಸದ ಅಂಶವಿರುತ್ತದೆ ಎನ್ನುವುದನ್ನು ನಮ್ಮ ಲಿಂಗಾಯತರು ಮರಿಯಭಾರದು ನಾವು ಲಿಂಗಾಯತ ಧರ್ಮದಲ್ಲಿ ಅನುಯಾಯಿಯು ಆಹಾರ ಸ್ವೀಕರಿಸಬೇಕಾದರೆ ಲಿಂಗಾರ್ಪಿತ ಮಾಡಿ ಸ್ವೀಕರಿಸುವ ಸಮರ್ಪನಾ ಭಾವವಿರುತ್ತದೆ.ಆದರೆ ಮಾಂಸಾಹಾರಿಗಳಾದರೆ ಲಿಂಗಕ್ಕೆ ಮಾಂಸ ಅಥವಾ ಮೊಟ್ಟೆಯನ್ನು ಎಡೆಮಾಡಿ ಸಮರ್ಪಿಸಲು ಬರುವುದಿಲ್ಲ ದೇವರು ಕರುಣಾಮಯಿ ಹಿಂಸೆಯನ್ನು ಒಪ್ಪುವುದಿಲ್ಲ. ಲಿಂಗಾಯತರಾದವರು ಮಾಂಸಹಾರ ಮಾಡುವುದಿರಲಿ, ಮಾಂಸಹಾರಿಗಳ ಮನೆಯಲ್ಲಿಯೂ ಕೂಡ ಪ್ರಸಾದ ಮಾಡಬಾರದೆಂಬುವುದು ನಿಯಮ ಹೀಗಿರುವಾಗ ಇಂದು ಅನೇಕ ಲಿಂಗಾಯತರು ತಮ್ಮ ಮನೆಗಳಲ್ಲಿಯೆ ಮಾಂಸ ತಂದು ಕುದಿಸಿ ತಿನ್ನುತಿರುವುದು ಲಿಂಗವಂತರಲ್ಲಿ ತಲೆ ತಗ್ಗಿಸುವ ಸಂಗತಿಯಾಗಿದೆ.
ಲಿಂಗಾಯತವು ಇಷ್ಟ ಲಿಂಗ ಧಾರಣೆ ಮತ್ತು ಸಸ್ಯಾಹಾರ ತತ್ವದ ಅಹಿಂಸಾವಾದಿ ಶುದ್ದ ಶಾಖಾಹಾರಿ ಧರ್ಮ. ಲಿಂಗಾಯತರು ಮಾಂಸಹಾರಿಗಳಲ್ಲ ಸಸ್ಯಹಾರಿಗಳು. ಮಾಂಸಹಾರಿಗಳ್ಯಾರು ಲಿಂಗಾಯತರಲ್ಲ. ಪ್ರಾಣಿಗಳಿಗೆ ಅನುಕಂಪ ತೋರಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ.
ಶರಣ :ವಿರೇಶ ಹಲಕಿ
ರಾಷ್ಟೀಯ ಬಸವ ದಳ ಬೈಲಹೊಂಗಲ