ಬೈಲಹೊಂಗಲ : ರೋಮನ್ ದೇಶದ ಯಹೂದಿಗಳ ಮೂಡನಂಬಿಕೆ ಅಂದಕಾರವನ್ನು ತೊಲಗಿಸಲು ಹೋಗಿ ರೋಮನ್ ಸಾಮ್ರಾಜ್ಯದ ಒಡೆಯ ಕೈಸರ ಕೆಂಗಣ್ಣಿಗೆ ಗುರಿಯಾಗಿ ಯಹೂದಿಗಳ ಒತ್ತಾಯದ ಮೇಲೆ ರೋಮನ್ ದೇಶದ ಯಹೂದಿ ಪ್ರಾಂತ್ಯದ ಪ್ರತಿನಿಧಿ ಪಿಲಾತನಿಂದ ಒಬ್ಬ ಏಸು ಕ್ರೈಸ್ತ ಶಿಲುಬೆಗೆ ಏರಿಸಿದರು. ಆತನ ತ್ಯಾಗವನ್ನು ಏಸುವಿನ ಅನುಯಾಯಿಗಳು ಇಡಿ ಜಗತ್ತಿಗೆ ತೋರಿಸಿದರು. ಕ್ರೈಸ್ತ ಶಿಲುಬೆಗೆ ಏರಿಸಿರುವ ಸನ್ನಿವೇಶವನ್ನು ಜಗತ್ತಿನಾದ್ಯಂತ ಸ್ಮಾರಕಗಳನ್ನಾಗಿ ಮಾಡಿ ಮಿಷನರಿಗಳ ಮೂಲಕ ಕ್ರೈಸ್ತ ಧರ್ಮವನ್ನು ಪ್ರಚಾರಗೈದರು.
ಭಾರತದಂತಹ ಪ್ರಾಚೀನ ಇತಿಹಾಸ ಹೊಂದಿರುವ ಮೂಲಭೂತವಾದಿ ವೈದ್ಧಿಕರು, ಪೂರೋಹಿತ ಶಾಹಿಗಳ ಮೌಡ್ಯತೆ, ಕಂದಾಚಾರ, ಅಸಮಾನತೆಯಿಂದ ತುಂಬಿ ತುಳುಕುತ್ತಿತ್ತು ಇದರಿಂದ ಬಡವರ, ದೀನದಲಿತರ, ಕೇಳವರ್ಗದವರನ್ನು ಗುಲಾಮರಂತೆ ಕಾಣುತ್ತಿತ್ತು ಇದನ್ನೇಲ್ಲವನ್ನು ಕಣ್ಣಾರೆ ಕಂಡ ಮೇಲ್ವರ್ಗದಲ್ಲಿ ಜನಿಸಿದ ಗುರು ಬಸವಣ್ಣನವರು 12ನೆಯ ಶತಮಾನದಲ್ಲಿ ಜಗತ್ತಿಗೆ ಮಾದರಿಯಾಗುವಂತಹ ಸರ್ವಸಮಾನತೆಯನ್ನು ಸಾರಿದರು, ಕಾಯಕ, ದಾಸೋಹ ಸಿದ್ಧಾಂತ ಸಾರಿದರು ಮೌಡ್ಯ-ಕಂದಾಚಾರಗಳನ್ನು ಬಹಿರಂಗವಾಗಿ ತಳ್ಳಿಹಾಕಿದರು. ಜೊತೆಗೆ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಿಸಿ ಅಲ್ಲಿರುವ ಶರಣರಾದ ಸಮಗಾರ ಹರಳಯ್ಯನವರ ಮಗ ಶೀಲವಂತ ಮತ್ತು ಬ್ರಾಹ್ಮಣ ಮಧುವರಸರ ಮಗಳಾದ ಲಾವನ್ಯವತಿ ಇವರ ಇಚ್ಛೆಯ ಮೇರೆಗೆ ಕಲ್ಯಾಣ ಮಹೋತ್ಸವ ಮಾಡಿದರು. ಅದು ಅಂದಿನ ಪುರೋಹಿತ ಶಾಹಿ ಜಾತಿವಾದಿಗಳ ಕಣ್ಣು ಕುಕ್ಕಿತು. ಜಾತಿಗಳಳಿದು ನಿಜ ಶರಣರಾದ ಇವರುಗಳು ಲಿಂಗಾಯತ ಧರ್ಮದ ಅನುಯಾಯಿಗಳು ಆಗಿದ್ದರು. ಶರಣರ ಪ್ರಕಾರ ಈ ವಿವಾಹವು ಸ್ವಧರ್ಮಿಯರಲ್ಲಿ ಆದಂತಹ ವಿವಾಹವಾಗಿತ್ತು. ಆದರೆ ಅಂದಿನ ಪಟ್ಟಭದ್ರರಿಗೆ ಅದು ಅಂತರ್ ಜಾತಿ, ವರ್ಣ ಸಂಕರವಾಗಿತ್ತು. ಇದನ್ನು ಕಲ್ಯಾಣ ರಾಜ ಬಿಜ್ಜಳನ ಕಿವಿಯೂದಿ ಶರಣ ದಂಪತಿಗಳಿಗೆ ಮತ್ತು ಹರಳಯ್ಯ ಮಧುವರಸರಿಗೆ ಭಯಂಕರ ಶಿಕ್ಷೇಯಾದ ಯಳಹೂಟೇ ಶಿಕ್ಷೆ ಅಂದರೆ ಶರಣರಿಗೆ ಕಣ್ಣು ಕೀಳಿಸಿ ಆನೆಗೆ ಮದವೇರಿಸಿ ಅದರ ಕಾಲಿಗೆ ಕಟ್ಟಿ ಶರಣರ ದೇಹ ಮಾಂಸದ ಮುದ್ದೆ ಮಾತ್ರ ಉಳಿಯುವ ಹಾಗೆ ಎಳೆಸಿದರು.
ಶರಣರು ಸಮಾನತೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಇಂತಹ ಮಹಾನ ತ್ಯಾಗ ಜಗತ್ತಿನ ಇತಿಹಾಸದಲ್ಲಿ ಯಾವುದೆ ಧರ್ಮದಲ್ಲಿ ಕಾಣಸಿಗುವುದಿಲ್ಲ ದುರ್ದೈವಸಾತ 12 ಶತಮಾನದಿಂದ 20ನೇ ಶತಮಾನದ ವರೆಗೆ ಬಳಹಷ್ಟು ಶರಣರ ತ್ಯಾಗ ಬಲಿದಾನದ ಕುರಿತು ತೋರಿಸಲಿಲ್ಲ.
ಕರ್ನಾಟಕದ ಮೂಲೆಮೂಲೆಗಳಲ್ಲಿ ಇಂದು ಶರಣ ಪರಂಪರೆಯ ಮೂಲ ಎಂದು ಹೇಳಿಕೊಳ್ಳುವ 3000 ರಿಂದ 4000 ಮಠಗಳನ್ನು ನಾವು ಕಾಣುತ್ತೇವೆ.
ಬಹುತೇಕರು ನಮ್ಮದು ಶೂನ್ಯ ಪೀಠ, ನಮ್ಮದು ಸಿದ್ಧರಾಮೇಶ್ವರ ಪರಂಪರೆ, ನಮ್ಮದು ಚೆನ್ನಬಸವಣ್ಣವರ ಪರಂಪರೆ, ಹಾಗೂ ಎಲ್ಲ ಶರಣರ ವಿರಕ್ತ ಪರಂಪರೆಯ ಮಠ ಎಂದು ಹೇಳುತ್ತಾರೆ ಆದರೆ ಈ ಎಲ್ಲ ಮಠಾಧೀಶರು ಉದಾಹರಣೆಗೆ ಒಬ್ಬ ವಿರಕ್ತ ಮಠಾಧೀಶನೂ ಬಹಿರಂಗವಾಗಿ ತಮ್ಮ ಭಕ್ತರಿಗೆ ಶರಣರ ತ್ಯಾಗ- ಬಲಿದಾನ ತಿಳಿಸಲಿಲ್ಲ. ಅವರು ತೋರಿಸಿದ್ದು ತಮ್ಮ ಗುರುಗಳ ಗದ್ದಿಗೆಗಳನ್ನು, ಮಠಕ್ಕೆ ಆಗಿಹೋದವರ ಗದ್ದಿಗೆಗಳನ್ನು ಅವರ ಇತಿಹಾಸವನ್ನು ಮಾತ್ರ. ಅಲ್ಲಿಯೇ ನಮಸ್ಕರಿಸಬೇಕೆಂಬುದು ಸಾಗಿ ಬಂದ ಪರಂಪರೆ ಅಜ್ಜ ಹಚ್ಚಿದ ಆಲದ ಗಿಡ ಅಂತಾ ಹಾಗೇ ಅವರ ಗದ್ದುಗೆ ತೋರಿಸುವ ಪರಂಪರೆ ಸಾಗಿಬಂದಿತು.
ಶರಣರ ಇತಿಹಾಸದ ಅರಿವು ಮೂಡಿಸಿದ ಲಿಂಗಾನಂದ ಮಹಾಸ್ವಾಮಿಗಳು :
ಮಹಾಸ್ವಾಮಿಗಳಿಂದ ಬಸವಾದಿ ಶರಣರ ನೈಜ ಇತಿಹಾಸ ಅರಳಿತು. ಬೀದಿ-ಬೀದಿಗಳಲ್ಲಿ ಶರಣರ ತ್ಯಾಗ-ಬಲಿದಾನ ಕಾಯಕ ದಾಸೋಹದ ಸತ್ಯ ಸಂದೇಶಗಳು ಹೊರಬಿದ್ದು ಹಳ್ಳಿಯಿಂದ ದಿಲ್ಲಿಯವರೆಗೆ ಬಸವಾದಿ ಶರಣರ ಇತಿಹಾಸ ಪ್ರಚಾರಗೊಳ್ಳಲಾರಂಭಿಸಿತು. ಅಂತಹ ಮಹಾನ್ ಸಂತನಿಂದ ಇಷ್ಟಲಿಂಗ ದೀಕ್ಷೆ ಪಡೆದು ಪೂಜ್ಯ ಮಾತಾಜಿ, ನಿಜಗುಣಾನಂದ ಮಹಾಸ್ವಾಮಿಗಳು, ಅಕ್ಕ ಅನ್ನಪೂರ್ಣ, ಅಲ್ಲಮಪ್ರಭು ಸ್ವಾಮೀಜಿ, ಚನ್ನಬಸವಾನಂದ ಸ್ವಾಮಿಗಳು, ಬಸವೇಶ್ವರಿ ಮಾತಾಜಿ, ಹೀಗೆ ನೂರಾರು ಪೂಜ್ಯರು ಲಿಂಗಾನಂದ ಮಹಾಸ್ವಾಮಿಗಳು ತೋರಿದ ಬಸವಾದಿ ಶರಣರ ಲಿಂಗಾಯತ ಧರ್ಮದ ದಾರಿಯಲ್ಲಿ ಸಾಗುತ್ತಿದ್ದಾರೆ. ಅದರಲ್ಲಿ ಅಗ್ರಗಣ್ಯರು ಪೂಜ್ಯ ಮಾತಾಜಿಯವರು.
ಮಾತೆಯಂಬ ಮಹಾಬೆಳಕು :
ಸತ್ಯದ ನಾರಿಯೊಬ್ಬಳು ಬಂದು ಭಾರಿ ಅಬ್ಬರವ ಹೊತ್ತು ಆರೂಢ ಭಿಕ್ಷವ ಬೇಡ್ಯಾಳ ಸುವ್ವಿ ಮತ್ತಿನ್ನು ವೀರಬಸವಣ್ಣ ಬರುವಾಗ ಸುವ್ವಿ.
ಎಂಬ ತಾಯಿ ನೀಲಾಂಬಿಕೆಯ ಕಾಲಜ್ಞಾನದ ವಚನದಂತೆ ಶರಣ ತ್ಯಾಗ ಮತ್ತು ಅವರ ಸಂದೇಶವನ್ನು ಹೊತ್ತು ಬಂದವರೆ ಪೂಜ್ಯ ಮಾತೆ ಮಹಾದೇವಿಯವರು ಅವರ ದಿಟ್ಟ ನಿಲುವು, ಬಸವ ತತ್ವದ ಕ್ರಾಂತಿಕಾರಕ ವಿಚಾರಗಳು. ಪಟ್ಟಭದ್ರರ ಬುಡವನ್ನು ಅಲ್ಲಾಡಿಸಿದವು, ಜಾತಿ ವಾಸನೆಯ ಹೆಣ್ಣು ಗಂಡೆಬ ಬೇದದ ಮಠೀಯ ವ್ಯವಸ್ಥೆಗಳು ತಲ್ಲಣಗೊಂಡವು. ಅವರ ಕಂಚಿನ ಕಂಠದಿಂದ ಹೊರಮೊಮ್ಮುತ್ತಿದ್ದ ಬಸವ ತತ್ವದ ಪ್ರವಚನಗಳ ಮೂಲಕ ಬಸವ ತತ್ವ ಜಗತ್ತಿನ ಮೂಲೆ ಮೂಲೆಗೆ ಪಸರಿಸಿತು. ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ. ಅಜ್ಞಾನ. ಅಂದಕಾರಗಳನ್ನು ತೊಲಗಿಸಿ ತಮ್ಮ ಅಪಾರ ಜ್ಞಾನದ ಭಂಡಾರವನ್ನು ಬಿಚ್ಚಿಟ್ಟು ರಾಷ್ಟೀಯ ಬಸವ ದಳವೆಂಬ ಸಂಘಟನೆಯ ಹದವಾದ ಭೂಮಿಯಲ್ಲಿ ಬಸವ ಬೀಜಗಳನ್ನು ಬಿತ್ತಿ ತಮ್ಮ ಜ್ಞಾನದಾರೆಯನ್ನೆರದು ಹೆಮ್ಮರವಾಗಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶರಣರ ಕ್ರಾಂತಿಯ ನೆಲವಾದ ಬಸವ ಕಲ್ಯಾಣದ 12 ನೇ ಶತಮಾನದ ಎಲ್ಲಾ ಕುರುಹುಗಳು ಅವಸಾನದ ಅಂಚಿನಲ್ಲಿ ಇದ್ದವು ಅಂತಹ ಸಮಯದಲ್ಲಿ ಬಸವ ಕಲ್ಯಾಣದ ಎಲ್ಲ ಪಟ್ಟಭದ್ರ ಹಿತಾಸಕ್ತಿಗಳು ಎಷ್ಟೆ ವಿರೋದ ಮಾಡಿದರೂ ಗುರುಬಸವ ಇಚ್ಚೆ ಇತ್ತೂ ಎಂಬಂತೆ ಮಾತೆ ಮಹಾದೇವಿಯವರು ಕಲ್ಯಾಣದಲ್ಲಿ ಜಮೀನ ಖರೀದಿಸಿ ಮಹಾಮನೆ ಕಟ್ಟೆ ಬಿಟ್ಟರು. ಅವರು ಕಲ್ಯಾಣಕ್ಕೆ ಹೆಜ್ಜೆ ಇಡುತ್ತಿದಂತೆ ಸರಕಾರದಿಂದ ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ರಚಗೊಂಡಿತು ನೋಡು ನೋಡುತ್ತಲೆ ಶರಣರ ಸ್ಮಾರಕಗಳು ಅಭಿವೃದ್ಧಿ ಆಗಿ ಲೋಕಾರ್ಪಣೆ ಗೊಂಡವು, ತಮ್ಮ ಮಹಾಮನೆ ಆವರಣದಲ್ಲಿ ಶರಣ ಗ್ರಾಮಗಳನ್ನು ನಿರ್ಮಿಸುವ ಮೂಲಕ ಜಗತ್ತಿಗೆ ಗುರು ಬಸವಣ್ಣನವರ ಕೊಡುಗೆ ಏನೆಬುವುದನ್ನು ತೋರಿಸಿಕೊಟ್ಟರು.ಯಾವುದೇ ಸರ್ಕಾರದ ಸಹಾಯಧನ ವಿಲ್ಲದೇ ಕೋಟ್ಯಾಂತರ ರೂಪಾಯಿಗಳ ವೆಚ್ಚ ಮಾಡಿ ಭಕ್ತರ ಸಹಾಯದಿಂದ ವಿಶ್ವದ ಅತೀ ಎತ್ತರದ ಗುರುಬಸವಣ್ಣನವರ ಮೂರ್ತಿ ನಿರ್ಮಿಸಿ ಜಗತ್ತಿನ ಜನರನ್ನು ಕಲ್ಯಾಣದತ್ತ ಆಕರ್ಶಿಸುವತ್ತೆ ಮಾಡಿ ತೋರಿಸಿದರು. ಇನ್ನೊಂದು ಹಂಬಲ ಮಾತೆಯವರಲ್ಲಿ ನಿರಂತರ ಕಾಡುತ್ತಿತ್ತು ಗುರುಬಸವಣ್ಣನವರ ನಿಜ ವಾರಸದಾರರಾದ ವಿರಕ್ತ ಮಠಾಧೀಶರು 12 ನೇ ಶತಮಾನದ ಶರಣರ ತ್ಯಾಗವನ್ನು ಕ್ರೈಸ್ತರಂತೆ ಹೆಮ್ಮೆ ಪಡದೆ ಅದನ್ನು 900 ವರ್ಷ ಕಳೆದರು ಜಗದ ಜನಕೆ ತೋರಿಸದಿದ್ದಾಗ ನೊಂದು ಹೇಳುತ್ತಿದ್ದರು ಗುರು ಬಸವಣ್ಣನವರ ನಿಜವಾದ ಮಕ್ಕಳು ಎಂದರೆ ವಿರಕ್ತರು. ಆದರೆ ನಮ್ಮ ಸಮಾಜ ಅಂದು ಹೇಳಿದ ಉತ್ತಂಗಿ ಚನ್ನಪ್ಪ ಪಂಚಾಚಾರ್ಯರು ಬಸವಣ್ಣನವರ ಬಹಿರಂಗ ದ್ರೋಹಿಗಳು ವಿರಕ್ತರು ಬಸವಣ್ಣನವರ ಅಂತರಂಗದ ದ್ರೋಹಿಗಳು ಎಂಬ ಮಾತನ್ನು ನಂಬಲಿಲ್ಲ ಆದರೆ ಇಂದು ಅದು ಕಟು ಸತ್ಯವಾಗಿದೆ. ಈ ವಿರಕ್ತರು ಶರಣರ ತ್ಯಾಗವನ್ನು ತೋರಿಸಲಿಲ್ಲವೆಂದರೆ ಏನಾಯಿತು ದತ್ತು ಮಕ್ಕಳಾದ ನಾವು ಯಾಕೆ ಶರಣರ ತ್ಯಾಗ ಜಗತ್ತಿಗೆ ತೋರಿಸಬಾರದು ಅಂತಾ ತಿಳಿದು ಬಸವ ಕಲ್ಯಾಣದಲ್ಲಿ ಅಂದು 12 ನೇ ಶತಮಾನದಲ್ಲಿ ಅಂತರ್ಜಾತಿ ವಿವಾಹದಲ್ಲಿ ಪಾಲ್ಗೋಂಡ ಶರಣರನ್ನು ಎಳೆಹೂಟೆಗೆ ಕಟ್ಟಿ ಎಳೆಯುತ್ತಿರುವ ಸನ್ನಿವೇಶವನ್ನು ಸ್ಮಾರಕದ ರೂಪದಲ್ಲಿ ಮಾಡಿ ಶರಣರ ತ್ಯಾಗವನ್ನು ಜಗತ್ತಿಗೆ ತೋರಿಸಿದರು.ಇಂದು ಯಾರೇ ಬಸವಕಲ್ಯಾಣಕ್ಕೆ ಬಂದರೂ ಶರಣರ ಎಲ್ಲ ಹಳೆಯ ಸ್ಮಾರಕ ಮತ್ತು ಮಾತಾಜಿ ನಿರ್ಮಿಸಿದ ಗವಿಗಳು ಮತ್ತು ಸ್ಮಾರಕ 108 ಅಡಿ ಎತ್ತರದ ಬಸವ ಮೂರ್ತಿ ನೋಡಿದರೆ ಲಿಂಗಾಯತರ ಮಠಗಳ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಯನ್ನು ಮಾತಾಜಿ ಮಾಡಿ ಹೊಗಿದ್ದಾರೆ ಎಂಬುವುದರಲ್ಲಿ ಸಂಶಯವಿಲ್ಲ. ಅವರು ನಮ್ಮ ಮಧ್ಯ ಇಲ್ಲ ಆದರೆ ಇಂದು ಅವರು ಮಾಡಿದ ಶಿಖರದಂತಹ ಸಾಧನೆ ನಮ್ಮ ಕಣ್ಣು ಪಟಲಗಳ ಮೇಲೆ ಹಾಯುತ್ತಿವೆ .
ಶರಣ : ವಿರೇಶ ಗಂಗಾಧರ ಹಲಕಿ
ರಾಷ್ಟ್ರೀಯ ಬಸವ ದಳ ಬೈಲಹೊಂಗಲ