Home / General News / ಬೆಳಗಾವಿ (page 5)

ಬೆಳಗಾವಿ

ದಕ್ಷಿಣ ಭಾರತದ ವೃಚಾರಿಕ ಸಂತ ಪೆರಿಯಾರ್ ಕುರಿತು

  ಜನನ/ಜೀವನ: ಪೆರಿಯಾರ್ ಅಥವಾ ರಾಮಸ್ವಾಮಿ ಜನಿಸಿದ್ದು 1879ರ ಸೆಪ್ಟಂಬರ್‌ 17 ರಂದು. ಅಂದಿನ ಮದ್ರಾಸ್ ರಾಜ್ಯದ ಕೊಯಮತ್ತೂರು ಜಿಲ್ಲೆಯ ಈರೋಡಿನ ಶ್ರೀಮಂತ ಬಲಿಜ ಕುಟುಂಬದಲ್ಲಿ ಹುಟ್ಟಿದ ರಾಮಸ್ವಾಮಿಯವರ ಮನೆಯ ಭಾಷೆ ಕನ್ನಡವಾಗಿತ್ತು. ತಂದೆ ವೆಂಕಟಪ್ಪ ನಾಯಕರ್ , ತಾಯಿ ಚಿನ್ನತಾಯಮ್ಮ. ಕೇವಲ 5 ವರ್ಷಗಳ ಕಾಲ ವಿದ್ಯಾಭ್ಯಾಸ ನಡೆಸಿದ ರಾಮಸ್ವಾಮಿ ತನ್ನ 12ನೇ ವಯಸ್ಸಿನಲ್ಲೇ ತಂದೆ ನಡೆಸುತ್ತಿದ್ದ ವ್ಯಾಪಾರಕ್ಕೆ ನೆರವಾಗತೊಡಗಿದರು. ಪೆರಿಯಾರ್ ಅಥವ ರಾಮಸ್ವಾಮಿಗೆ 19 ವರ್ಷದವರಾಗಿದ್ದಾಗ ಮದುವೆಯಾಯಿತು, …

Read More »

ಕಿತ್ತೂರಿನಲ್ಲಿ ರಾಣಿ ಚನ್ನಮ್ಮ ವಿವಿ ಸ್ಥಾಪನೆಗೆ ಆಗ್ರಹ

ಚನ್ನಮ್ಮನ ಕಿತ್ತೂರು: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಕಿತ್ತೂರಿನಲ್ಲಿ ಸ್ಥಾಪಿಸುವಂತೆ ವಿವಿದ ಸಂಘಟನೆಗಳ ಮುಖಂಡರು ಕಿತ್ತೂರು ತಹಶಿಲ್ದಾರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಸರ್ಕಾರ ಬೇರೆಡೆಗೆ ಸ್ಥಳಾಂತರಿಸಿ ಹೊರಡಿಸಿದ ಆದೇಶವನ್ನು ಹಿಂಪಡೆದು ಐತಿಹಾಸಿಕ ಪ್ರಸಿದ್ದ ಸ್ಥಳ, ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳಾ ಸ್ವತಂತ್ರ ಹೋರಾಟದ ನಾಡಾದ ಕಿತ್ತೂರಿಗೆ ಸ್ಥಳಾಂತರಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯ ಮಾಡಲಾಯಿತು. ಕಿತ್ತೂರು ಸಂಸ್ಥಾನವನ್ನು ತಾಲೂಕಾಗಿ ಘೋಷಿಸಲು ೬೫ ವರ್ಷ ಕಾಯಬೇಕಾಯಿತು. …

Read More »

ಲಿಂಗಾಯತ ಪದ ಬಳಕೆಗೆ ಆಗ್ರಹ

ಬೆಳಗಾವಿ: ಜಾತಿ ಪ್ರಮಾಣ ಪತ್ರದಲ್ಲಿ  ‘ವೀರಶೈವ ಲಿಂಗಾಯತ’ ಬದಲಿಗೆ ಕೇವಲ “ಲಿಂಗಾಯತ” ಎಂದು  ನಮೂದಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ, ಮುಖ್ಯಮಂತ್ರಿಗಳಿಗೆ  ಮನವಿ ಮಾಡಲಾಯಿತು. ಪೂಜ್ಯಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾ ಲಿಂಗಾಯತ ಧಮ೯ ಮಹಾಸಭಾ ಮತ್ತು ರಾಷ್ಟ್ರೀಯ ಬಸವದಳಗಳ ಪದಾಧಿಕಾರಿಗಳು ಮತ್ತು ಸದಸ್ಯರ ಸಮ್ಮುಖದಲ್ಲಿ  ಮನವಿ ಸಲ್ಲಿಸಲಾಯಿತು.

Read More »

ಬಸವೇಶ್ವರರ ಕಂಚಿನ ಮೂರ್ತಿ ಸ್ಥಾಪನೆಗೆ ಶಂಕುಸ್ಥಾಪನೆ

  ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಗಾಂಧಿ ಮೈದಾನದಲ್ಲಿ ಬಸವೇಶ್ವರ ಕಂಚಿನ ಪ್ರತಿಮೆಯ ಪ್ರತಿಷ್ಠಾಪನೆ ಭೂಮಿ ಪೂಜೆಯನ್ನು ಇಂಚಲದ ಡಾ. ಶಿವಾನಂದಭಾರತಿ ನೆರವೇರಿಸಿದರು. ‘ಸಮಾನತೆ, ಕಾಯಕ ಹಾಗೂ ದಾಸೋಹ ಸಂದೇಶವನ್ನು ವಿಶ್ವಕ್ಕೆ ಸಾರಿದ ಬಸವಣ್ಣನವರ ತತ್ವಗಳು ಸಾರ್ವಕಾಲಿಕವಾಗಿವೆ. 12ನೇ ಶತಮಾನದಲ್ಲಿ ಸಮಾಜದ ಸಂವಿಧಾನವನ್ನು ರಚಿಸಿದ್ದ ಮಹಾನ್‌ ಮಾನವತಾವಾದಿ ಬಸವಣ್ಣ’ ಎಂದು ಬಣ್ಣಿಸಿದರು. ಮೂರ್ತಿ ಪ್ರತಿಷ್ಠಾಪನೆಯ ಮುಖ್ಯ ನಿಯೋಜಕ ಈರಪ್ಪ ಬೆಳಕೂಡ ಮಾತನಾಡಿ, ‘12 ಅಡಿಯ ಕಂಚಿನ ಅಶ್ವಾರೂಢ ಪ್ರತಿಮೆಯನ್ನು 10 ಅಡಿ …

Read More »

ಅಂತರ್ಜಾತಿ ವಿವಾಹ ನೆರವೇರಿಸಿದ ಕೂಡಲಸಂಗಮ ಶ್ರೀಗಳು

ಚನ್ನಮ್ಮನ ಕಿತ್ತೂರು: ೧೨ ನೇ ಶತಮಾನದಲ್ಲಿ ಬಸವಾದಿ ಶರಣರು ಸರ್ವಜನಾಂಗದ ಸಮಾನತೆಯನ್ನು ಎತ್ತಿ ಹಿಡಿಯಲು ಅಂತರ್ಜಾತಿ ವಿವಾಹ ಮೂಲಕ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿದ್ದರು,  ಇಂದು ಮೆಟ್ಯಾಲ ಗ್ರಾಮದ ಗುರುಬಸವ ಮಂಟಪದಲ್ಲಿ ನಡೆದ ಅಂತರ್ಜಾತಿ ವಿವಾಹವು  ಧರ್ಮಗುರು ಬಸವಣ್ಣನವರ ಕನಸಾಗಿದ್ದ ಕಲ್ಯಾಣರಾಜ್ಯ ನಿರ್ಮಾಣವಾಗುತ್ತಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ವಧು-ವರರಿಗೆ ಧರ್ಮದೀಕ್ಷೆ ನೀಡುವ ಮೂಲಕ ಆಶೀರ್ವದಿಸಿ ಮಾತನಾಡಿದರು. ಬೆಳಗಾವಿ ಜಿಲ್ಲೆಯ ಚನ್ನಮ್ಮನ ತಾಲೂಕಿನ …

Read More »

ನೂತನ ಚನ್ನಮ್ಮನ ಕಿತ್ತೂರು ರೈಲು ಮಾರ್ಗಕ್ಕೆ ಅನುಮೋದನೆ

  ಬೆಳಗಾವಿ:- ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ಕಿತ್ತೂರು-ಧಾರವಾಡ ಹೊಸ ರೈಲು ಮಾರ್ಗ ಯೋಜನೆಗೆ ಮಂಜೂರಾತಿ ದೊರಿತು ಕನಸು ನನಸಾಗುವ ಕಾಲ ಕೂಡಿಬಂದಿದೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಜನರ ಬಹು ವರ್ಷಗಳ ಬೇಡಿಕೆಯಾದ ಹಿರೇ ಬಾಗೇವಾಡಿ, ಕಿತ್ತೂರು ಮಾರ್ಗವಾಗಿ ಬೆಳಗಾವಿ – ಧಾರವಾಡ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದ್ದು, ಅಂದಾಜು 927.40 ಕೋಟಿ ರೂ ವೆಚ್ಚದಲ್ಲಿ ಅತೀ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸುರೇಶ ಅಂಗಡಿ ತಿಳಿಸಿದರು. ಪ್ರಸ್ತುತದಲ್ಲಿ …

Read More »