Home / General News / ಬೆಳಗಾವಿ (page 4)

ಬೆಳಗಾವಿ

ಶರಣ ಪರಂಪರೆಯ ಶರಣ ಶರಣೆಯರು- ಗಂಗಮ್ಮ

    ಲಿಂಗಾಯತ ಕ್ರಾಂತಿ ವರದಿ:  12 ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಕಲ್ಯಾಣದಲ್ಲಿ ಜನರ ಸಾಮಾಜಿಕ ಬದುಕು ಕಲ್ಯಾಣವಾಗುವಂತೆ ಒಂದು ಕ್ರಾಂತಿಯನ್ನೇ ನಡೆಸಿ ಇಂದಿಗೂ, ಮುಂದಿಗೂ ಅಜರಾಮರರಾದರು.  ಆಗಿನ ಕಾಲದಲ್ಲಿಯೇ ಸಾಮಾಜಿಕವಾಗಿ ಎಲ್ಲರೂ ಒಂದೇ ಎನ್ನುವ ತತ್ವವನ್ನೂ, ಆರ್ಥಿಕ ಸಬಲತೆಗೆ ದಾಸೋಹದ ಪರಿಕಲ್ಪನೆಯನ್ನೂ, ಆಧ್ಯಾತ್ಮಿಕ ಬಲಕ್ಕಾಗಿ ಅರಿವಿನ ಮಹಾ ಮಂತ್ರವನ್ನೂ ಅವರು ಜಾರಿಗೊಳಿಸಿ,  ಜನ ಸಾಮಾನ್ಯರಲ್ಲಿ ಹುಟ್ಟಿನಿಂದ ಯಾರೂ ದೊಡ್ಡವರೂ ಅಲ್ಲ, ಕೀಳು ಅಲ್ಲ ಎಂದು ಸಮಾನತೆಯನ್ನು  ಸಾರುವ …

Read More »

ಕರ್ನಾಟಕ ಕಂಡ ಅಪರೂಪದ ರಾಜಕಾರಣಿ ಶರಣ ಜೆ ಹೆಚ್ ಪಟೇಲ್

ವಿಶೇಷ ಲೇಖನ: ಜಯದೇವಪ್ಪ ಹಾಲಪ್ಪ ಪಟೇಲ್ ಕರ್ನಾಟಕ ರಾಜ್ಯದ 20 ನೇ ಮುಖ್ಯಮಂತ್ರಿ ಅವಿಭಜಿತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾರಿಗನೂರಿನ ಲಿಂಗಾಯತ ಸಮಾಜದ ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದ ಧೀಮಂತ ನಾಯಕ ಜಯದೇವಪ್ಪ ಹಾಲಪ್ಪ ಪಟೇಲ್ ಅವರು ಹುಟ್ಟಿದ್ದು 1ನೇ ಅಕ್ಟೋಬರ್ 1930ರಂದು. ಅಸಾಮಾನ್ಯ ಬುದ್ಧಿವಂತರಾಗಿದ್ದ ಅವರು ಅತಿ ಹೆಚ್ಚು ಪ್ರವಾಸ ಮಾಡಿದ್ದರು. ವಿಶ್ವಕೋಶ ದಂತಹ ಮಾಹಿತಿಯ ಕಣಜ.ಗ್ರಹಿಕೆ – ಅವರಿಗೆ ಭಗವಂತ ನೀಡಿದ್ದ ಬಹುದೊಡ್ಡ ವರ .ತೀಕ್ಷ್ಣಮತಿ. ಸಮಾಧಾನಿ. …

Read More »

ಡಾ.ವಿಶ್ವನಾಥ ಪಾಟೀಲಗೆ ಬಿ.ಜೆ.ಪಿ ಟಿಕೇಟ…!

  ಬೆಳಗಾವಿ: ಸಂಸದ ಸುರೇಶ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಸಂಸದ ಸ್ಥಾನಕ್ಕೆ ಮಾಜಿ ಶಾಸಕ ಹಾಗೂ ಬೆಳಗಾವಿ ಜಿಲ್ಲಾ ಬಿ.ಜೆ.ಪಿ ಗ್ರಾಮಾಂತರ ನಿಕಟ ಪೂರ್ವ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಬಿ.ಜೆ.ಪಿಯಿಂದ ಕಣಕ್ಕಿಳಿಸುವ ಸಾದ್ಯತೆಗಳಿವೆ ಎಂದು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಈಗಾಗಲೇ ಬೈಲಹೊಂಗಲ ಶಾಸಕನಾಗಿ ಜನಮಾನಸದಲ್ಲಿ ಉಳಿದ ಡಾ.ಪಾಟೀಲ ಜಿಲ್ಲೆಯಲ್ಲಿ ಸೌಮ್ಯ ಸ್ವಭಾವದ, ಸಜ್ಜನ ಮತ್ತು ಸರಳ ರಾಜಕಾರಣಿ ಎಂದು ಹೆಸರು ವಾಸಿಯಾಗಿದ್ದಾರೆ. ಜೊತೆಗೆ ಪ್ರತಿಷ್ಠಿತ ಕೆ.ಎಲ್.ಇ …

Read More »

ಬಸವತತ್ವ ನಿಷ್ಠುರ, ಕೇಂದ್ರ ಸಚಿವ ಸುರೇಶ ಅಂಗಡಿ ಲಿಂಗೈಕ್ಯ

  ಬೆಳಗಾವಿ : ನಗರದ ಲಿಂಗಾಯತ ಸಂಘಟನೆಯೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದ ಸುರೇಶ ಅಂಗಡಿ ಅವರು ನೂರಾರು ಬಸವತತ್ವ ಪ್ರಸಾರದ ಕಾರ್ಯವನ್ನು ಕೈಗೊಂಡಿದ್ದರು. ಇವರು ಇಂದು ಕೊರೊನಾ ಸೋಂಕಿಗೆ ತುತ್ತಾಗಿ ಲಿಂಗೈಕ್ಯರಾಗಿದ್ದು ಲಿಂಗಾಯತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. 2014ರಲ್ಲಿ ದೆಹಲಿಯಲ್ಲಿ ಜರುಗಿದ ‌ಲಿಂಗಾಯತ ಧರ್ಮದ ಸಮಾವೇಶ ಬೆಳಗಾವಿ ಸಂಸದ ಸುರೇಶ ಅಂಗಡಿಯವರು ಇವರಲ್ಲಿರುವ ಲಿಂಗಾಯತ ಸಮಾಜದ ಮೇಲಿನ ಕಾಳಜಿ ಹಾಗೂ ಸಹಕಾರದಿಂದ ಇಂದು ನಡೆಯುತ್ತಿರುವ ಲಿಂಗಾಯತ ಕ್ರಾಂತಿ ಪತ್ರಿಕೆ ಆರಂಭವಾಗುವಲ್ಲಿ …

Read More »

ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ಆನಂದ ಚೋಪ್ರಾ ಲಿಂಗೈಕ್ಯ

  ಸವದತ್ತಿ: ರಾಷ್ಟ್ರೀಯ ಬಸವದಳದ ಗೌರವಾದ್ಯಕ್ಷ, ಹಿರಿಯ ಕಾಂಗ್ರೆಸ್ ನಾಯಕ, ಸಮಾಜ ಸೇವಕ ಆನಂದ ಚೋಪ್ರಾ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಸವದತ್ತಿ ಕ್ಷೇತ್ರದಿಂದ 2 ಬಾರಿ ಚುನಾವಣೆಗೆ ಸ್ಪರ್ಧಿಸಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋತಿದ್ದ ಅವರು, ಶನಿವಾರ ಬೆಳಗಿನಜಾವ ಹೃದಯಾಘಾತದಿಂದ ನಿಧನರಾದರು. ಶುಕ್ರವಾರ ರಾತ್ರಿ ಹುಬ್ಬಳ್ಳಿಗೆ ಹೋಗಿ ಬಂದು ಮಲಗಿದ್ದ ಅವರು, ಶನಿವಾರ ಮುಂಜಾನೆ 5 ಗಂಟೆಗೆ ವಾಕಿಂಗ್ ಹೋಗಲು ಎದ್ದರಾದರೂ ಸಾಧ್ಯವಾಗದೆ ಮತ್ತೆ ಕುಸಿದು …

Read More »

ಜಾತಿ ಪ್ರಮಾಣ ಪತ್ರದಲ್ಲಿ ಲಿಂಗಾಯತ ನಮೂದಿಸಲು ಸರ್ಕಾರಕ್ಕೆ ಮನವಿ

  ಚನ್ನಮ್ಮನ ಕಿತ್ತೂರು: ಸರ್ಕಾರವು ಜಾತಿ ಪ್ರಮಾಣ ಪತ್ರದಲ್ಲಿ “ಲಿಂಗಾಯತ”ರಿಗೆ ವೀರಶೈವ ಲಿಂಗಾಯತ ಎಂದು ನೀಡುತ್ತಿರುವುದನ್ನು ಖಂಡಿಸಿ ಸರ್ಕಾರಕ್ಕೆ ಮನವಿ ಮಾಡಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಚಂದ್ರಗೌಡ ಪಾಟೀಲ ಮೂಲ ಶಾಲಾ ದಾಖಲಾತಿಯಲ್ಲಿ “ಲಿಂಗಾಯತ” ಎಂದು ಬರೆಸಿದ್ದರು ಕೂಡಾ ಕಂದಾಯ ಇಲಾಖೆಯ ಯಡವಟ್ಟಿನಿಂದ ವೀರಶೈವ ಲಿಂಗಾಯತ ಎಂದು ನೀಡುತ್ತಿರುವುದು ಸಮಸ್ತ ಲಿಂಗಾಯತರಿಗೆ ಮುಜುಗುರವನ್ನುಂಟು ಮಾಡುತ್ತಿದೆ ಎಂದರು. ಸರ್ಕಾರವು ಈ ವಿಷಯವಾಗಿ ಮತ್ತೊಮ್ಮೆ ಪರಸ್ಕರಿಸಿ ವೀರಶೈವ ಲಿಂಗಾಯತ ಬದಲಿಗೆ ಲಿಂಗಾಯತ ಎನ್ನುವ ಜಾತಿ …

Read More »