ಬೆಳಗಾವಿ: ಗುರು ಬಸವೇಶ್ವರರು 12ನೇ ಶತಮಾನದಲ್ಲಿ ಸ್ಥಾಪಿಸಿರುವ ಜಗತ್ತಿನ ವಿನೂತನ, ವಿಶಿಷ್ಟ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಲೇಬೇಕು. 2021ರ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ಕೂಡಲಸಂಗಮದ ಬಸವಧರ್ಮ ಪೀಠದ ಡಾ.ಗಂಗಾ ಮಾತಾಜಿ ಕರೆ ನೀಡಿದರು. ರವಿವಾರ ಬೆಳಗಾವಿಯ ಗಾಂಧಿ ಭವನದಲ್ಲಿ ಜಿಲ್ಲಾ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಸಂಘಟನೆಗಳ ಆಶ್ರಯದಲ್ಲಿ ವಿಶ್ವದ ಮೊಟ್ಟ ಮೊದಲ ಮಹಿಳಾ ಜಗದ್ಗುರು ಕೂಡಲಸಂಗಮ ಬಸವಧರ್ಮ ಪೀಠದ ಲಿಂಗೈಕ್ಯ …
Read More »ಶರಣರೇ ಅನುದಾನ-ಅಧಿಕಾರದಾಸೆಯ ನಿಲುವು ಬಿಡಿ : ಡಾ.ಎಸ್.ಎಂ ಜಾಮದಾರ
30-1-2021ರ೦ದು ಪ್ರಜಾವಾಣಿ ಯಲ್ಲಿ ಪ್ರಕಟವಾದ ಮುರುಘಾ ಶರಣರ ಲೇಖನಕ್ಕೆ ಒ೦ದು ಪ್ರತಿಕ್ರಿಯೆ. ಪೂಜ್ಯ ಶರಣರು “ಬೇಲಿ ಹಾಕುವುದು ಬಸವ ತತ್ವವವಲ್ಲ” ಎ೦ದಿದ್ದಾರೆ. ಅದು ಸತ್ಯ. ಆದರೆ ಮೊನ್ನೆ ಸ್ಥಾಪಿತವಾದ ಲಿ೦ಗಾಯತ ಮಠಗಳ ಒಕ್ಕೂಟಕ್ಕೆ ಯಾರೂ ಯಾವುದೇ ಬೇಲಿಯನ್ನು ಹಾಕಿಲ್ಲ. ಶರಣರೂ ಅದರ ಸದಸ್ಯರಾಗಬಹುದು. ಆದರೆ ಅವರು ಆ ಒಕ್ಕೂಟವನ್ನು ಸೇರುವುದಿಲ್ಲ. ಕಾರಣವೆ೦ದರೆ ಅವರನ್ನು ಕೇಳದೇ ಆ ಒಕ್ಕೂಟ ರಚನೆಯಾಗಿದೆ. ಅದೇ ಅವರ ಹೊಟ್ಟೆ ಉರಿಗೆ ಕಾರಣವಾಗಿದೆ ಎ೦ಬುದು ಸ್ಪಷ್ಟ. ಅಷ್ಟಕ್ಕೂ …
Read More »ಲಿಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ್ ನಿಧನ
ಬೆಳಗಾವಿ: ಬೆಳಗಾವಿ ಲಿಂಗಾಯತ ಸಂಘಟನೆಯ ಸಕ್ರಿಯ ಕಾರ್ಯಕರ್ತ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ್ ನಿಧನರಾಗಿದ್ದಾರೆ. ಬೆಂಗಳೂರಿಗೆ ತೆರಳಿದ್ದ ಅವರು ವಾಸ್ತವ್ಯ ಹೂಡಿದ್ದ ಹೊಟೆಲ್ ಕೊಠಡಿಯಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಎಬಿವಿಪಿಯಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಅವರು ಬಿಜೆಪಿಗೆ ದೊಡ್ಡ ಆಸ್ತಿಯಾಗಿದ್ದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಅವಿವಾಹಿತರಾಗಿದ್ದ ಅವರು ಪೂರ್ಣಾವಧಿಯಾಗಿ ಬಿಜೆಪಿ ಚಟುವಟಿಕೆಗಳಲ್ಲಿ ತಮ್ಮನ್ನು …
Read More »ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಅಧ್ಯಯನದ ಕೊರತೆಯಿದೆ: ಕೂಡಲಸಂಗಮ ಶ್ರೀಗಳು ಗರಂ
ಬೆಳಗಾವಿ: ಅಧ್ಯಯನದ ಕೊರತೆ ಮತ್ತು ತಪ್ಪು ಮಾಹಿತಿಯಿಂದ ಕೆಲವರು ಲಿಂಗಾಯತ ಧರ್ಮ ಹೋರಾಟವನ್ನು ವಿರೋಧಿಸುತ್ತಿದ್ದಾರೆ. ಅಂತವರು ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ, ಈ ಧರ್ಮದ ನಿಜವಾದ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಂಡು ಚರ್ಚೆ ಮಾಡಲಿ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಟಾಂಗ್ ಕೊಟ್ಟಿದ್ದಾರೆ. ಇತ್ತಿಚೆಗೆ ಡಿ.ಕೆ.ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರತ್ಯೇಕ ಧರ್ಮದ ಹೋರಾಟದಲ್ಲಿ ನಾವು ಪಾಲ್ಗೊಳ್ಳಬಾರದಿತ್ತು. ಆ ಸಂಬಂಧ ನಾವು ಈಗಾಗಲೇ ಕ್ಷಮೆ …
Read More »ಡಿಕೆಶಿ ದಾರಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್…! ಲಿಂಗಾಯತ ಹೋರಾಟ ವಿರೋಧ
ಬೆಳಗಾವಿ: ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಬೆಂಬಲಿಸಿ ತಪ್ಪು ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕ್ಷಮೆ ಕೇಳಿ ಲಿಂಗಾಯತ ಧರ್ಮೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಇಷ್ಟು ದಿನ ಮೌನವಾಗಿದ್ದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಈಗ ಲಿಂಗಾಯತ ಹೋರಾಟದ ಬಗ್ಗೆ ತಪ್ಪು ಮಾಡಿರುವುದಾಗಿ ಹೇಳಿ ಡಿಕೆಶಿ ದಾರಿಯಲ್ಲಿ ನಡೆದಿದ್ದಾರೆ. ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ ? https://todaybreakings.com/i-did-wrong-by-supporting-the-fight-for-seperate-religion-status-to-lingayats-says-laxmi-hebbalkar/ ಬೆಳಗಾವಿಯಲ್ಲಿ ಮಾತನಾಡಿದ ಶಾಸಕಿ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ …
Read More »ಲಿಂಗಾಯತ ದಿಟ್ಟ ಶರಣೆ: ಪ್ರೇಮಕ್ಕಾ ಅಂಗಡಿ
ಬೈಲಹೊಂಗಲ: ಪ್ರೇಮಕ್ಕ ಅಂಗಡಿ ನಮ್ಮ ಸಮಾಜದ ದಿಟ್ಟ ಹೆಣ್ಣುಮಗಳು ಇಂದು ಇಡೀ ರಾಜ್ಯದಲ್ಲಿ ಲಿಂಗಾಯತ ಸಮಾಜದ ಮಹಿಳೆಯರು ಸಂಘಟಿತ ಆಗುವಲ್ಲಿ ಅಕ್ಕನದು ಪ್ರಮುಖ ಪಾತ್ರ. ನಿರಾಭರಣಿ ಪ್ರೇಮಕ್ಕ ಸದಾ ನೊಸಲಲ್ಲಿ ವಿಭೂತಿ ಧರಿಸಿ ಮುಖದಲ್ಲಿ ಒಂದಿಷ್ಟು ಮುಗುಳ್ನಗೆ ಬೀರುವ ಪ್ರೇಮಕ್ಕನಿಗೆ ಅದುವೇ ನಿಜವಾದ ಆಭರಣ ಅಪ್ಪಟ ಬಸವಾನುಯಾಯಿಯಾದ ಪ್ರೇಮಕ್ಕ ತನ್ನ ಕೌಟುಂಬಿಕ ಜವಾಬ್ದಾರಿ ಜೊತೆಗೆ ಭೋದಕಿಯ ಕಾಯಕ ಜೊತೆ ಜೊತೆಗೆ ಇಡೀ ನಾಡಿನುದ್ದಕ್ಕೂ ಸಂಚರಿಸಿ ಸಮಾಜ ಸಂಘಟಿಸುವ ಹೊಣೆಗಾರಿಕೆ …
Read More »