ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ನಮ್ಮ ಸಂಪ್ರದಾಯದಲ್ಲಿ ದಾರ್ಶನಿಕರು, ಅನುಭಾವಿಗಳು ಮಾನವನ ದೇಹದ ಕುರಿತು ತಮ್ಮದೆ ರೀತಿಯಲ್ಲಿ ಬಣ್ಣಿಸಿದ್ದಾರೆ. ಬಸವಣ್ಣನವರು ಮಾನವನ ದೇಹಕ್ಕೆ ವಿಶೇಷ ಮಹತ್ವ ಕೊಟ್ಟು “ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ” ಎಂದು ಹೇಳಿ ಜೀವವಂಚನೆ, ಕಾಯವಂಚನೆಗಳನ್ನ ಸಾರಾಸಗಟವಾಗಿ ತಿರಸ್ಕರಿಸಿ ಕೂಡಲಸಂಗಮ ದೇವನೋಲಿಸಲು ಬಂದ ಪ್ರಸಾದ ಕಾಯವ ಕೆಡಿಸಲಾಗದು ಎಂದಿದ್ದಾರೆ. ಅಂತೆಯೇ ಕಾಯದ ಸದ್ಬಳಕೆಗಾಗಿ ಕಾಯಕವನ್ನ ಕಡ್ಡಾಯ ಮಾಡಿ, ಕಾಯಕದಿಂದ ಪ್ರಸಾದ, …
Read More »ಅಕ್ಕನ ಸಮರ್ಪಣಾ ಭಾವ
ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ ಅಧ್ಯಾತ್ಮದ ಬದುಕು. ಕನಸು ಕನವರಿಕೆಯ ಧ್ಯಾನಸ್ಥ ಮನದಲ್ಲಿ ಚೆನ್ನಮಲ್ಲಿಕಾರ್ಜುನನನ್ನು ಸ್ಮರಿಸಿಕೊಳ್ಳುವ ಆದರ್ಶ ಮಾರ್ಗ. ವಚನಗಳಲ್ಲಿ ಕಂಡುಬರುವ ಸೃಜನಶೀಲ ಹಾಗೂ ವೈಚಾರಿಕ ಸನ್ನಿವೇಶಗಳೊಂದಿಗೆ ಅನ್ವೇಷಿಸುವ ಮನಸ್ಥಿತಿ ಆಕೆಯದು. ಹೀಗಾಗಿ ಅಕ್ಕನ ವಚನಗಳನ್ನು ಒಂದು ಸೀಮಿತ ವಲಯದಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಲೌಕಿಕ ಪ್ರೀತಿಯ ಮೂಲಕ ಆಧ್ಯಾತ್ಮಿಕ ಮಾರ್ಗದ ಅನ್ವೇಷಣೆಯಲ್ಲಿ ಒಂದಾಗಿದೆ. ಭಾರತೀಯ …
Read More »ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ
ವಚನ: ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ. ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ. ವ್ರತಹೀನನರಿದು ಬೆರೆದಡೆ ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರಯ್ಯಾ. ಒಲ್ಲೆನೊಲ್ಲೆ ಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ. ಸೂಳೆಸಂಕವ್ವೆ ಭಾವಾರ್ಥ = ಸೂಳೆ ಸಂಕೆವ್ವೆಯವರು ತಮ್ಮ ಈವೊಂದು ವಚನದಲ್ಲಿ ತನ್ನ ವೃತ್ತಿಪದಗಳನ್ನೆ ಬಳಸಿ, ತಾನೇಗೆ ತನ್ನ ಒಳಗಿನ ದೈವತ್ವಕ್ಕೆ ಅರ್ಪಣೆಗೊಂಡೆ ಎಂಬುದನ್ನ ಆಕೆಯು ಇಲ್ಲಿ ತಿಳಿಸಿ ಹೇಳಿದ್ದಾಳೆ. ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ. ನನ್ನ ಈ ತನುಮನ ಭಾವನೆಗಳೆಲ್ಲವನ್ನ …
Read More »ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ
ವಚನ ವಿಶ್ಲೇಷಣೆ: ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ : ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ ದೇವಾ ನಿಮ್ಮತ್ತಲೊಂದೆಳವುತ್ತಲದೆ. ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿಯಿಡುವೆನಯ್ಯಾ ನಾನು? ಬೆಳಗಾವಿ : ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ. ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ. ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ. ತಂದೆ ಈ ದಂದುಗವ ಮಾಣಿಸಿ ನಿಮ್ಮ ನಿಜಾನಂದ ಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ. ಪುರದ ನಾಗಣ್ಣ ವಚನ ಅನುಸಂಧಾನ …
Read More »ಶರಣ ಪರಂಪರೆ: ಕೋಟಾರದ ಸೋಮಣ್ಣ
ಶರಣ ಕೋಟಾರದ ಸೋಮಣ್ಣ ಈತನು ಬಸವಣ್ಣನವರ ಸಮಕಾಲೀನನಾದ ಶರಣನಾಗಿದ್ದು ಈತನ ಕಾಲ 1160 ಎಂದು ಗುರುತಿಸಲಾಗಿದೆ. ಈತನ ಇತಿವೃತ್ತಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರಕಿರುವುದಿಲ್ಲ. ಕೊಟಾರ ಎಂದರೆ ಉಗ್ರಾಣ, ದಾಸ್ತಾನು ಮಳಿಗೆ ಎಂಬರ್ಥವಿದೆ. ಅಂದರೆ ಈ ಶರಣ ಸೋಮಣ್ಣನು ಕಲ್ಯಾಣದ ರಾಜ ಬಿಜ್ಜಳನ ರಾಜ್ಯದಲ್ಲಿ ದಾಸ್ತಾನು ಮಳಿಗೆಯನ್ನೋ, ಉಗ್ರಾಣವನ್ನೋ ನೋಡಿಕೊಳ್ಳುವ ಕಾಯಕದವನು ಇರಬೇಕೆಂದು ಅಂದಾಜಿದಲಾಗಿದೆ. ಯಾವುದೇ ಶರಣರು ತಮ್ಮ ಕಾಯಕದಿಂದಲೇ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದರಿಂದ ಈ ಶರಣ ಸೋಮಣ್ಣನಿಗೆ ಕೊಟಾರದ ಸೋಮಣ್ಣ ಎಂಬ …
Read More »ಶರಣರು ಶೈವ/ವೀರಶೈವಗಳನ್ನೆಲ್ಲ ಅಲ್ಲಗಳೆದಿದ್ದರು.
ಬಸವಾದಿ ಶರಣರು ಒಂದು ಹೊಸ ವಿಚಾರಧಾರೆಯನ್ನು ಹುಟ್ಟುಹಾಕಿದ್ದರು ಎನ್ನುವುದು ಸೂರ್ಯನಷ್ಟೆ ಸತ್ಯವಾಗಿದ್ದರೂ ಪಟ್ಟಭದ್ರರು ಅವರು ಹಿಂದೂ ಧರ್ಮದ ಸುಧಾರಣಾವಾದಿಗಳುˌ ಶೈವ/ವೀರಶೈವ ಪಂಥದ ಅನುಯಾಯಿಗಳು ಎಂದು ವಾದಿಸುತ್ತಲೆ ಇರುತ್ತಾರೆ. ಈ ಮೊಂಡುವಾದಗಳು ಶರಣರು ಪ್ರತಿಪಾದಿಸಿದ ವೈಚಾರಿಕ ತತ್ವಗಳಿಗೆ ಹೆದರಿ ಹುಟ್ಟಿದಂತವು ಎಂದು ಬೇರೆ ಹೇಳಬೇಕಿಲ್ಲ. ಚೆನ್ನಬಸವಣ್ಣನವರು ಶರಣರು ಹೇಗೆ ಶೈವ ತತ್ವವನ್ನು ನಿರಾಕರಿಸಿದರು ಎಂದು ವರ್ಣಿಸುವ ವಚನ : ” ಅಂಧಕನು ಓಡ ಹಿಡಿದು ತನ್ನ ಸ್ವರೂಪವ ತಾ ನೋಡುವಂತೆ, ಶೈವ …
Read More »