ಗದಗ : ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗದ ಶ್ರೀಸಮಾನ ಸ್ವಾಮಿಯೇ ಆಗಿದ್ದ ಶ್ರೀ ಜಗದ್ಗುರು ಸಿದ್ಧಲಿಂಗ ಸ್ವಾಮೀಜಿಯವರು 21 ಫೆಬ್ರುವರಿ 1949 ರಂದು ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರದಲ್ಲಿ ಜನಿಸಿದರು. 1974 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ತಮ್ಮ ಧಾರ್ಮಿಕ ಶಿಕ್ಷಣವನ್ನು ಸಿಂದಗಿ, ಶಿವಯೋಗ ಮಂದಿರ, ಹುಬ್ಬಳ್ಳಿಗಳಲ್ಲಿ ಪೂರೈಸಿದರು… ಸ್ವಾಮೀಜಿ ಎಡೆಯೂರು ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಪೀಠ ಪರಂಪರೆಯ 19ನೇಯ ಪೀಠಾಧಿಪತಿಗಳಾಗಿ ಡಂಬಳ-ಗದಗ ಸಂಸ್ಥಾನಮಠಕ್ಕೆ 1974 …
Read More »ಕನ್ನಡ ಅಸ್ಮಿತೆ ಹಾಗೂ ವಚನ ಪ್ರಚಾರದ ದಂಡನಾಯಕ: ಡಾ. ಚನ್ನಬಸವ ಪಟ್ಟದ್ದೇವರು
ಜಗತ್ತಿನ ಪ್ರಥಮ ಸಮಾಜವಾದಿ ಚಿಂತಕ, ಕಾಯಕ ಚಳುವಳಿ ಮೂಲಕ ಕಾರ್ಮಿಕ ಸಮೂಹವನ್ನು ಒಗ್ಗೂಡಿಸಿದ ನಾಯಕ, ಸಮಾನತೆ ಪರಿಕಲ್ಪನೆಯ ಹರಿಕಾರ ವಿಶ್ವ ಗುರು ಬಸವಣ್ಣ ಎಂದು ನಾವೆಲ್ಲರೂ ಕರೆಯುತ್ತೇವೆ. ಹೌದು, ರಾಜ್ಯಶಕ್ತಿಗಳ ಅಟ್ಟಹಾಸದಿಂದ ತಳವರ್ಗ ಸಮುದಾಯಗಳ ಬದುಕು ದುರ್ಬರವಾಗಿತ್ತು. ಅಂತಹ ವಿಷಮ ಕಾಲಘಟ್ಟದಲ್ಲಿ: ಜನಿಸಿದ ಬಸವಣ್ಣ ಶೋಷಿತರ ದನಿಯಾಗಿ ಸಮಾಜೋಧಾರ್ಮಿಕ ಸುಧಾರಣೆಗೆ ನಾಂದಿಹಾಡಿದರು. ಅದು 12ನೇ ಶತಮಾನದ ಕಾಲ, ಬಸವಣ್ಣ ಹಾಗೂ ಸಮಕಾಲೀನ ಶರಣ ಸಂಕುಲ ಒಗ್ಗೂಡಿ ಕೈಗೊಂಡಿರುವ ಸಾಮಾಜಿಕ ಚಳುವಳಿಗೆ …
Read More »ಗಡಿನಾಡಿನ ಬಸವತತ್ವ ಪ್ರಸಾರಕ : ಡಾ. ಚನ್ನಬಸವ ಪಟ್ಟದ್ದೆವರು
ಭಾಲ್ಕಿ: ನಡೆದಾಡುವ ದೇವರು, ನೂತನ ಅನುಭವ ಮಂಟಪದ ರೂವಾರಿ, ಕಾಯಕ ನಿಷ್ಠೆ-ದಾಸೋಹದ ಕರುಣಾ ಮೂರ್ತಿ, ಅನಾಥರ-ನೊಂದವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ-ಬೆಳೆಸಿದ ಕನ್ನಡ ಭಾಷಾಪ್ರೇಮಿ, ವಚನ ಸಾಹಿತ್ಯ ತತ್ವಗಳನ್ನು ವಿಶ್ವಸಮುದಾಯಕ್ಕೆ ಪಸರಿಸಿದ ಮೇಧಾವಿ ಸಂತ, ಸರಳತೆಯನ್ನು ಮೈಗೂಡಿಸಿಕೊಂಡು ಕಾಯಕ ನಿಷ್ಠೆಯ ಸನ್ಮಾರ್ಗದಲ್ಲಿ ಸಾಗುವ ಮೂಲಕ ಈ ಜಗತ್ತಿಗೆ ಮಾದರಿಯಾಗಿ ಬದುಕಿ, ಇತರರಿಗೆ ಆದರ್ಶ ಚೇತನರಾಗಿ ಬಾಳಿದರು ನಮ್ಮ ಹೆಮ್ಮೆಯ ಕಲ್ಯಾಣದ ಪ್ರಜ್ವಲ ಜ್ಯೋತಿ ಭಾಲ್ಕಿ ಹಿರೇಮಠ ಸಂಸ್ಥಾನದ ಪರಮ …
Read More »ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ
ಭಾಲ್ಕಿ: 22 ಏಪ್ರಿಲ್ 2020 ರಂದು ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ವಚನ ಜಾತ್ರೆ ಹಾಗೂ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು ಮಹಾಸ್ವಾಮಿಗಳ 21ನೇ ಸ್ಮರಣೋತ್ಸವನ್ನು ಸರಳವಾಗಿ ಆಚರಿಸೋಣ ಎಂದು ಶ್ರೀ ಗಳು ತಿಳಿಸಿದ್ದಾರೆ. ಈ ವರ್ಷ ಕರೋನ ಎಂಬ ಮಹಾಮಾರಿ ಜಗತ್ತಿನಾದ್ಯಂತ ಹರಡಿರುವ ಕಾರಣದಿಂದ, ಶರಣ ಬಂಧುಗಳು ತಮ್ಮ-ತಮ್ಮ ಮನೆಗಳಲ್ಲಿಯೇ ಬಸವಣ್ಣನವರ ಹಾಗೂ ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಸವಾದಿ ಶರಣರ ವಚನಗಳನ್ನು ಪಠಣ ಮಾಡುವ ಮೂಲಕ ತಮ್ಮ …
Read More »