Home / General News

General News

ಬಸವಾದಿ ಶಿವಶರಣರ ವಚನಗಳ ಸಂರಕ್ಷಕಣೆಯಲ್ಲಿ ಕ್ರಾಂತಿಕಾರಿ ಮಡಿವಾಳ ಮಾಚಿದೇವರು ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ನಕ್ಷತ್ರ

ಗುರುವಾದಡೂ ಬಸವಣ್ಣನಿಲ್ಲದೇ ಗುರುವಿಲ್ಲ ಲಿಂಗವಾದಡೂ ಬಸವಣ್ಣನಿಲ್ಲದೇ ಲಿಂಗವಿಲ್ಲ ಜಂಗಮವಾದಡೂ ಬಸವಣ್ಣನಿಲ್ಲದೇ ಜಂಗಮವಿಲ್ಲ ಪ್ರಸಾದವಾದಡೂ ಬಸವಣ್ಣನಿಲ್ಲದೇ ಪ್ರಸಾದವಿಲ್ಲ ಅನುಭವವಾದಡೂ ಬಸವಣ್ಣನಿಲ್ಲದೇ ನುಡಿಯಲಾಗದು ಇಂತು ಸಂಗಿಸುವಲ್ಲಿ, ನಿಜ ಸಂಗಿಸುವಲ್ಲಿ ಸುಸಂಗಿಸುವಲ್ಲಿ, ಮಹಾಸಂಗಿಸುವಲ್ಲಿ ಪ್ರಸಾದ ಸಂಗಿಸುವಲ್ಲಿ ಕಲಿದೇವಾ ನಿಮ್ಮ ಶರಣ ಬಸವಣ್ಣನ ನಿಲುವು. ಸರ್ವ ಸಮಾನತೆ ಲೋಕ ಕಲ್ಯಾಣ ಮತ್ತು ವೈಜಾರಿಕ ಸಮಾಜದ ಕರ್ತಾರ, ಮಹಾಮನೆಯ ಒಡೆಯ ಬಸವಣ್ಣನವರ ವ್ಯಕ್ತಿತ್ವ ದರ್ಶನವನ್ನು ತಮ್ಮ ವಚನದಲ್ಲಿ ಕಟ್ಟಿಕೊಟ್ಟಿರುವ ಮಹಾ ಶರಣ ಮಡಿವಾಳ ಮಾಚೀದೇವರ ಕೊಡುಗೆ ಅಮೋಘವಾಗಿದೆ. …

Read More »

ಶರಣರ ವಚನಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ: ಸಾಮಾಜಿಕ ಕಾರ್ಯಕರ್ತೆ ಮಂಗಳಾ ಮನ್ನಳ್ಳಿ

ವಿಜಯಪುರ: ನಗರದ ಕಲಬುರಗಿ ಫೌಂಡೇಷನ್ ಮತ್ತು ಪಾಟೀಲ ಟುಟೋರಿಯಲ್ಸ್ ಸಂಯುಕ್ತ ಆಶ್ರಯದಲ್ಲಿ ಇಂದು ಮುಂಜಾನೆ 10 ಗಂಟೆಗೆ ಆನಂದ ನಗರದಲ್ಲಿ ವಚನ ಓದು ಹಾಗು ವಿಶ್ಲೇಷಣಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಬಸವಾದಿ ಶಿವಶರಣರ ವಚನಗಳನ್ನು ಓದಿ ಅವುಗಳ ಅರ್ಥ ವಿವರಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಸಮಾಜ ಸುಧಾರಣೆಯಲ್ಲಿ ಬಸವಾದಿ ಶಿವಶರಣರ ವಚನಗಳ ಮಹತ್ವದ ಕುರಿತು ಚಿಂತಕ ಡಾ. ಜೆ ಎಸ್ ಪಾಟೀಲ ಅವರು ವಿವರಿಸಿದರು. ತೀರ್ಪುಗಾರರಾಗಿ ಆಗಮಿಸಿದ್ದ …

Read More »

ಒಂದೇ ಹುಟ್ಟಲಿ ಕಡೆಯ ಹಾಯಿಸುವ ಅಂಬಿಗರ ಚೌಡಯ್ಯ….!

                  “ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ, ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು ಅಕ್ಕಿ ಕಣಕವ ಕೊಂಡುಹೋಗುವ ಗುರುವಿನ ಕಂಡರೆ, ಕೆಡವಿ ಹಾಕಿ ಮೂಗನೆ ಕೊಯ್ಧು ಇಟ್ಟಂಗಿಯ ಕಲ್ಲಿಲೆ ತಿಕ್ಕಿ ಸಾಸಿವೆಯ ಹಿಟ್ಟನೆ ತಳಿದು ಮೇಲೆ ಲಿಂಬಿಯ ಹುಳಿಯನೆ ಹಿಂಡಿ ಪಡುವ ಗಾಳಿಗೆ ಹಿಡಿಯೆಂದಾತ ನಮ್ಮ ಅಂಬಿಗರ ಚೌಡಯ್ಯ” ನಿಜ ಶರಣ ಅಂಬಿಗರ ಚೌಡಯ್ಯನವರು 12ನೇ ಶತಮಾನದ ಬಸವಣ್ಣನವರ ಸಮಕಾಲೀನ …

Read More »

ಮಹಾಯೋಗಿ ಶ್ರೀ ವೇಮನ ಜಯಂತಿ

ಮಹಾಯೋಗಿ ವೇಮನ 15ನೇ ಶತಮಾನದ ತೆಲಗು ಕವಿಗಳಲ್ಲಿ ಪ್ರಮುಖ ಹೆಸರು. ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ ಮಹಾಕವಿ, ಮಹಾಯೋಗಿಯಾಗಿದ್ದಾರೆ. ಮಹಾಯೋಗಿ ವೇಮನ ಅವರು ಲಿಂಗಾಯತದ ಧರ್ಮಕ್ಕೆ ಸಮುದಾಯಕ್ಕೆ ಸೇರಿದವರಾಗಿದ್ದು, ಕೆಲ ಸಂಶೋಧಕರು ವೇಮನರು ಮೂಲತಃ ರೈತರೆಂದು ಹೇಳಿದರೆ, ಕೆಲವರು ಇವರು ಕೊಂಗವೀಡು ಸಂಸ್ಥಾನದ ರಾಜ ಗದ್ದಮ್ ವೇಮ ಅವರ ಕಿರಿಯ ಪುತ್ರನೆಂದು ಹೇಳುತ್ತಾರೆ. ಆಂಧ್ರದ ಅನಂತಪುರ ಜಿಲ್ಲೆಯ ಕದಿರಿ ಪಲ್ಲಿಯಲ್ಲಿ ಯೋಗಿ ವೇಮನ ಅವರ ಸಮಾಧಿ …

Read More »

ಚಂಪಾ ಲಿಂಗೈಕ್ಯ

ಲಿಂಗಾಯತ ಕ್ರಾಂತಿ: ಕನ್ನಡ ನಾಡಿನ ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವದಿಂದ ಪ್ರಸಿದ್ಧರಾಗಿದ್ದ ಚಂದ್ರಶೇಖರ ಪಾಟೀಲ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ಚಂದ್ರಶೇಖರ ಪಾಟೀಲರು ಜೂನ್ ೧೮, ೧೯೩೯ ರಂದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ ಜನಿಸಿದರು. ಕಾವ್ಯನಾಮ: ಚಂಪಾ, ವೃತ್ತಿ: ಲೇಖಕ, ಪ್ರಾಧ್ಯಾಪಕ, ಸಂಘಟನಕಾರರು, ಅಂಕಣಕಾರರು ಪ್ರಕಾರ/ಶೈಲಿ: ಕಥೆ, ಕವನ, ಕಾದಂಬರಿ, ನಾಟಕ, ಸಂಪಾದನೆ, ಕನ್ನಡ ಸಾಹಿತ್ಯ, ಸಾಹಿತ್ಯ ಚಳುವಳಿ …

Read More »

ಬಯಲಾದ ಕನ್ನಡ ನಾಡಿನ ಬಯಲಾಟದ ಕೊಂಡಿ

ಲಿಂಗಾಯತ ಕ್ರಾಂತಿ: ಜಾನಪದ ಹಾಡುಗಾರಿಕೆಯ ಕಲಾವಂತಿಕೆಯಲ್ಲಿ ಕಳೆದ ಐದು ದಶಕಗಳ ಕಾಲ ಜನಪದರ, ವಿದ್ವಾಂಸರ, ನಗರವಾಸಿಗಳ ಮನಗಳಿಗೆ ಲಗ್ಗೆಯಿಟ್ಟು ಅವರೆಲ್ಲರ ತಲೆದೂಗಿಸಿದ ಹಾಡುಗಾರ ಬಸಲಿಂಗಯ್ಯ ಸಂಗಯ್ಯ ಹಿರೇಮಠ. ಜಾನಪದ ಸಂಗೀತ ಕ್ಷೇತ್ರದಲ್ಲಿ ಸಮಕಾಲೀನ ಬಹುತೇಕ ಹಾಡುಗಾರರಿಂದ ಮನ್ನಣೆ ಪಡೆದ ಅದೃಷ್ಟವಂತರಿವರು. ಹಾರ್ಮೋನಿಯಂನ ಕೀಲಿಮಣೆಗಳ ಮೇಲೆ ಅವರ ಬೆರಳುಗಳು ಚಕಚಕನೆ ಓಡುತ್ತಿದ್ದರೆ ಕಂಠಸಿರಿಯಿಂದ ಹಾಡಿನ ಓಘ ಜಲಪಾತದಂತೆ ಧುಮುಕುತಿತ್ತು. ಬೆರಳುಗಳು ಹಾಗೂ ತುಟಿಗಳ ಚಲನೆಗಳು ಒಂದಕ್ಕೊಂದು ಪೈಪೋಟಿ ನಡೆಸುತ್ತಿದ್ದವು. ಆದರೆ ಹಾಡು …

Read More »