Home / Shivanand (page 2)

Shivanand

Admin : Lingayat Kranti Monthly news paper 8884000008 lingayatkranti@gmail.com

ಹಿರಿಯ ಕಲಾವಿದ ಬಸವಲಿಂಗಯ್ಯ ಹಿರೇಮಠ ಲಿಂಗೈಕ್ಯ

ಚನ್ನಮ್ಮನ ಕಿತ್ತೂರ: ಜಾನಪದ ಹಾಡುಗಾರ, ಸಾವಿರ ಹಾಡಿನ ಸರದಾರ, ರಾಜ್ಯ ಪ್ರಶಸ್ತಿ ಪುರಸ್ಕೃತ, ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಶ್ರೀ ಬಸಲಿಂಗಯ್ಯ ಹಿರೇಮಠ ತಮ್ಮ 63 ನೇ ವಯಸ್ಸಿನಲ್ಲಿ ಇಂದು ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಒಬ್ಬ ಪುತ್ರ, ಪುತ್ರಿಯನ್ನು, ಸೊಸೆಯನ್ನು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಬಸವಲಿಂಗಯ್ಯ ಹಿರೇಮಠ ಅವರ ಸಾವಿಗೆ ಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಜಿ ಅವರು ಸಂತಾಪ ಸೂಚಿಸಿದ್ದಾರೆ. ಮೃತರ …

Read More »

ಬಸವಣ್ಣನವರ ಅಂಕಿತನಾಮ ಗೊಂದಲಕ್ಕೆ ತೆರೆ; ಕೂಡಲಸಂಗಮದೇವ ಅಂಕಿತನಾಮ ಬಳಸಲು ಆದೇಶ

  ಸುದ್ದಿಗೋಷ್ಠಿಯಲ್ಲಿ ಆದೇಶ ನೀಡಿದ ಮಾತೆ ಗಂಗಾದೇವಿ ಅವರು, ಸುಪ್ರೀಂ ಕೋರ್ಟ್ 2017 ಸೆಪ್ಟೆಂಬರ್ 21 ರಂದು ಕೂಡಲಸಂಗಮದೇವ ಅಂತಾನೆ ಅಂಕಿತನಾಮ ಬಳಸಲು ಆದೇಶ ನೀಡಿದೆ. ನಾವು ಕೋರ್ಟ್ ಆದೇಶಕ್ಕೆ ತಲೆ ಬಾಗಿ, ಗೌರವ ನೀಡುವ ಉದ್ದೇಶದಿಂದ ಈ ಕರೆ ನೀಡಿದ್ದೇವೆ. ಬಾಗಲಕೋಟೆ: ವಿಶ್ವಗುರು, ಮಹಾಮಾನವತಾವಾದಿ, ಸಾಮಾಜಿಕ ಸಮಾನತೆಯ ಹರಿಕಾರ ಬಸವಣ್ಣ ತಮ್ಮ ವಚನಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದಿದವರು. 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ವಚನದ ಅಂಕಿತನಾಮ …

Read More »

ನಾಡು-ನುಡಿ, ಭಾಷೆ, ಧರ್ಮದ ಹೆಸರಿನಲ್ಲಿ ಮಹಾತ್ಮರ ಹೆಸರಿಗೆ ಮಸಿ ಬಳೆಯುವ ಕಾರ್ಯ ನಿಲ್ಲಿಸಿ, ಭಾರತೀಯರೆಂಬ ಸೌಹಾರ್ದತೆಯಿಂದ ಬದುಕಿ: ನಿಜಗುಣಾನಂದ ಮಹಾಸ್ವಾಮಿಗಳು

  ಲಿಂಗಾಯತ ಕ್ರಾಂತಿ ನೇಗಿನಹಾಳ: ಕ್ಷುಲ್ಲಕ ಕಾರಣಗಳಿಗೆ ಮಹಾತ್ಮರ, ಸಂತರ, ದೇಶಭಕ್ತರ ಮೂರ್ತಿಗಳಿಗೆ ಅವಮಾನ ಸರಿಯಲ್ಲ, ನಮ್ಮ ನಾಡು, ಭಾಷೆ, ಧರ್ಮದ ಕುರಿತು ಅಭಿಮಾನವಿರಲಿ ಆದೇ ರೀತಿ ಅನ್ಯ ಭಾಷೆ, ಧರ್ಮಗಳ ಕುರಿತು ಗೌರವದಿಂದ ಬದುಕುಬೇಕು. ಈ ನೆಲದ ಮೂಲ ದ್ರಾವಿಡರಿಗೆ, ಹಿಂದೂಗಳಿಗೆ ಭಾರತ ತಾಯಿ ಆದರೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮೀಯರಿಗೆ ಸಾಕು ತಾಯಿ ಇದ್ದಂತೆ ಹೀಗಾಗಿ ನಾವೆಲ್ಲರೂ ಭಾರತೀಯರು ಎಂಬ ಅಭಿಮಾನದಿಂದ ಬದುಕಬೇಕು ಎಂದು ಬೈಲೂರ ನಿಷ್ಕಲ …

Read More »

ಲಿಂಗಾಯತ ದಿನದರ್ಶಿಕೆ – 2022 ಬಿಡುಗಡೆ

  ಮೂಡಲಗಿ: ಲಿಂಗಾಯತ ಧರ್ಮದ ಇತಿಹಾಸವನ್ನು ಹೊಂದಿರುವ ‘ಲಿಂಗಾಯತ’ ಕ್ಯಾಲೆಂಡರ್ ಉಳಿದ ಕ್ಯಾಲೆಂಡರ್ ಗಿಂತ ಭಿನ್ನವಾಗಿರುತ್ತದೆ. ಲಿಂಗಾಯತ ಧರ್ಮವೆನ್ನುವುದೇ ಒಂದು ದೊಡ್ಡ ಕ್ರಾಂತಿ. ಕೇರಿಗಳಲ್ಲಿ ಇರುವ ಹಾಗೂ ಕಾಯಕ ಮಾಡಿಕೊಂಡು ಇದ್ದ ಜನರನ್ನು ಒಟ್ಟುಗೂಡಿಸಿದ ಧರ್ಮ ಲಿಂಗಾಯತ ಧರ್ಮ ಎಂದು ಮಲ್ಲು ಗೋಡಿಗೌಡರ ಹೇಳಿದರು. ಇಲ್ಲಿಯ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ‘ಲಿಂಗಾಯತ’ ದಿನದರ್ಶಿಕೆ ೨೦೨೨ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಸಮಾನತೆ ಹೊಂದಿದ್ದ ಸಮಾಜದಲ್ಲಿ ಸಮಾನತೆ ತಂದದ್ದೇ ಲಿಂಗಾಯತ …

Read More »

ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ಕುರಿತು ಪ್ರಕಾಶ ಉಳ್ಳಗಡ್ಡಿ ಅವರ ವಿಶ್ಲೇಷಣೆ

ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ನಮ್ಮ ಸಂಪ್ರದಾಯದಲ್ಲಿ ದಾರ್ಶನಿಕರು, ಅನುಭಾವಿಗಳು ಮಾನವನ ದೇಹದ ಕುರಿತು ತಮ್ಮದೆ ರೀತಿಯಲ್ಲಿ ಬಣ್ಣಿಸಿದ್ದಾರೆ. ಬಸವಣ್ಣನವರು ಮಾನವನ ದೇಹಕ್ಕೆ ವಿಶೇಷ ಮಹತ್ವ ಕೊಟ್ಟು “ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ” ಎಂದು ಹೇಳಿ ಜೀವವಂಚನೆ, ಕಾಯವಂಚನೆಗಳನ್ನ ಸಾರಾಸಗಟವಾಗಿ ತಿರಸ್ಕರಿಸಿ ಕೂಡಲಸಂಗಮ ದೇವನೋಲಿಸಲು ಬಂದ ಪ್ರಸಾದ ಕಾಯವ ಕೆಡಿಸಲಾಗದು ಎಂದಿದ್ದಾರೆ. ಅಂತೆಯೇ ಕಾಯದ ಸದ್ಬಳಕೆಗಾಗಿ ಕಾಯಕವನ್ನ ಕಡ್ಡಾಯ ಮಾಡಿ, ಕಾಯಕದಿಂದ ಪ್ರಸಾದ, …

Read More »

ಸುವರ್ಣಸೌಧದ ಮುಂದೆ ಬಸವಣ್ಣನವರ ಪುತ್ಥಳಿ ಅನಾವರಣಗೊಳ್ಳಬೇಕು : ಕರಜಗಿಮಠ ಆಗ್ರಹ

ಸುವರ್ಣ ಸೌಧದ ಮುಂದೆ ಬಸವಣ್ಣನವರ ಮೂರ್ತಿ ಪ್ರತಿಷ್ಠಾನಕ್ಕೆ ಆಗ್ರಹ : ಕರಜಗಿಮಠ ಬೆಳಗಾವಿ: ಸುವರ್ಣಸೌಧದಲ್ಲಿ ನಡೆದಂತಹ ಅಧಿವೇಶನದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಸುವರ್ಣಸೌಧದ ಮುಂದೆ ದೇಶದ ಸ್ವತಂತ್ರಕ್ಕಾಗಿ ಹೋರಾಟಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟ ವೀರಮಾತೆ ರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಬಲಗೈ ಬಂಟ ಶೂರ ಸಂಗೊಳ್ಳಿ ರಾಯಣ್ಣ ರವರ ಮೂರ್ತಿಯನ್ನು ಸ್ಥಾಪಿಸಲು ನಿರ್ಧರಿಸಿರುವುದು ನಾಡಿನ ಸಮಸ್ತ ಜನತೆಗೆ ಸ್ವಾಗತಾರ್ಹ ವಿಚಾರ. ಇದರ ಜೊತೆಗೆ 12ನೆಯ ಶತಮಾನದಲ್ಲಿಯೇ ವಿಶ್ವಗುರು ಬಸವಣ್ಣನವರು …

Read More »