Home / Tag Archives: lingayat

Tag Archives: lingayat

ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ಕುರಿತು ಪ್ರಕಾಶ ಉಳ್ಳಗಡ್ಡಿ ಅವರ ವಿಶ್ಲೇಷಣೆ

ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ನಮ್ಮ ಸಂಪ್ರದಾಯದಲ್ಲಿ ದಾರ್ಶನಿಕರು, ಅನುಭಾವಿಗಳು ಮಾನವನ ದೇಹದ ಕುರಿತು ತಮ್ಮದೆ ರೀತಿಯಲ್ಲಿ ಬಣ್ಣಿಸಿದ್ದಾರೆ. ಬಸವಣ್ಣನವರು ಮಾನವನ ದೇಹಕ್ಕೆ ವಿಶೇಷ ಮಹತ್ವ ಕೊಟ್ಟು “ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ” ಎಂದು ಹೇಳಿ ಜೀವವಂಚನೆ, ಕಾಯವಂಚನೆಗಳನ್ನ ಸಾರಾಸಗಟವಾಗಿ ತಿರಸ್ಕರಿಸಿ ಕೂಡಲಸಂಗಮ ದೇವನೋಲಿಸಲು ಬಂದ ಪ್ರಸಾದ ಕಾಯವ ಕೆಡಿಸಲಾಗದು ಎಂದಿದ್ದಾರೆ. ಅಂತೆಯೇ ಕಾಯದ ಸದ್ಬಳಕೆಗಾಗಿ ಕಾಯಕವನ್ನ ಕಡ್ಡಾಯ ಮಾಡಿ, ಕಾಯಕದಿಂದ ಪ್ರಸಾದ, …

Read More »

ಸುವರ್ಣಸೌಧದ ಮುಂದೆ ಬಸವಣ್ಣನವರ ಪುತ್ಥಳಿ ಅನಾವರಣಗೊಳ್ಳಬೇಕು : ಕರಜಗಿಮಠ ಆಗ್ರಹ

ಸುವರ್ಣ ಸೌಧದ ಮುಂದೆ ಬಸವಣ್ಣನವರ ಮೂರ್ತಿ ಪ್ರತಿಷ್ಠಾನಕ್ಕೆ ಆಗ್ರಹ : ಕರಜಗಿಮಠ ಬೆಳಗಾವಿ: ಸುವರ್ಣಸೌಧದಲ್ಲಿ ನಡೆದಂತಹ ಅಧಿವೇಶನದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಸುವರ್ಣಸೌಧದ ಮುಂದೆ ದೇಶದ ಸ್ವತಂತ್ರಕ್ಕಾಗಿ ಹೋರಾಟಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟ ವೀರಮಾತೆ ರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಬಲಗೈ ಬಂಟ ಶೂರ ಸಂಗೊಳ್ಳಿ ರಾಯಣ್ಣ ರವರ ಮೂರ್ತಿಯನ್ನು ಸ್ಥಾಪಿಸಲು ನಿರ್ಧರಿಸಿರುವುದು ನಾಡಿನ ಸಮಸ್ತ ಜನತೆಗೆ ಸ್ವಾಗತಾರ್ಹ ವಿಚಾರ. ಇದರ ಜೊತೆಗೆ 12ನೆಯ ಶತಮಾನದಲ್ಲಿಯೇ ವಿಶ್ವಗುರು ಬಸವಣ್ಣನವರು …

Read More »

47ನೇ ತ್ರೈಮಾಸಿಕ ಶಿವಾನುಭವ-ಗುರುವಂದನೆ

  ಮುಂಡರಗಿ ಜುಲೈ 12: ೧೨ನೆಯ ಶತಮಾನದ ಬಸವಾದಿ ಶರಣರು ದೇವರ ಕಲ್ಪನೆಯನ್ನು ಇಷ್ಟಲಿಂಗದಲ್ಲಿ ಕಂಡರು.ಗರ್ಭಗುಡಿ ಸಂಸ್ಕೃತಿಯಿಂದ ಜನರನ್ನು ಹೊರತಂದು,ಇಷ್ಟಲಿಂಗ ಎಡಗೈಲಿ ಇಡುವ ಮೂಲಕ ದೈಹಿಕ ಅಸ್ಪೃಶ್ಯತೆ ಹಾಗೂ ಮೌಢ್ಯ ನಿವಾರಿಸಿ ಪ್ರಗತಿಪರತೆಯ ದಾರಿಯನ್ನು ತೋರಿದ್ದಾರೆ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಜಿ ಹೇಳಿದರು. ಪಟ್ಟಣದ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದಲ್ಲಿ ನಡೆದ ೪೭ನೆಯ ತ್ರೈಮಾಸಿಕ ಶಿವಾನುಭವ, ಗುರುವಂದನೆ,ಆಷಾಡ ಮಾಸದ ಪ್ರವಚನ ಪ್ರಾರಂಭ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ …

Read More »

ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಎಲ್​ಕೆಜಿಯಿಂದ ಇಂಜಿನಿಯರಿಂಗ್​ವರೆಗೂ ಉಚಿತ ಶಿಕ್ಷಣ: ಶ್ರೀ ಸಿದ್ಧರಾಮ ಸ್ವಾಮೀಜಿ

ಶ್ರೀಮಠದ ವಸತಿ ನಿಲಯದಲ್ಲಿ ಇದ್ದು ಕಲಿಯುವಂತರಿಗೂ ಎಲ್ಲ ರೀತಿಯ ವ್ಯವಸ್ಥೆ ಮಾಡುವುದಾಗಿ ಶ್ರೀಗಳು ಹೇಳಿದ್ದಾರೆ. ಅಷ್ಟೇ ಅಲ್ಲ ಕೊವಿಡ್ ವಿರುದ್ಧ ಹೋರಾಟಕ್ಕೆ ಸರ್ಕಾರಕ್ಕೂ ಶ್ರೀಮಠ ಸಾಥ್ ನೀಡಿದೆ. ಆ ಮೂಲಕ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಮಠದ ಕಾಲೇಜನ್ನು ಕೊವಿಡ್ ಕೇರ್ ಸೆಂಟರ್ ಮಾಡಲು ಅನುಮತಿ ನೀಡಿದ್ದಾರೆ. ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ ಗದಗ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. …

Read More »

ಲಿಂಗಾಯತ ಮಠಾಧೀಶರ ಒಕ್ಕೂಟ ಅಸ್ತಿತ್ವಕ್ಕೆ

ಬೆಳಗಾವಿ: ಇಲ್ಲಿನ ರುದ್ರಾಕ್ಷಿ ಮಠದ ಎರಡು ದಿನಗಳ ಲಿಂಗಾಯತ ಮಠಾಧೀಶರ ಚಿಂತನಾ ಶಿಬಿರದಲ್ಲಿ ಸಮಾವೇಶಗೊಂಡ ನಾಡಿನ ಮಠಾಧೀಶರೆಲ್ಲ ಸೇರಿ ಲಿಂಗಾಯತ ಮಠಾಧೀಶರ ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲು ನಿರ್ಧರಿಸಿತು. ಹನ್ನೆರಡನೆಯ ಶತಮಾನದ ಬಸವಣ್ಣನವರನ್ನೆ ಗುರುವೆಂದು ಒಪ್ಪಿಕೊಳ್ಳುವುದು. ಶರಣರು ಬರೆದ ವಚನಗಳೇ ಧರ್ಮಗ್ರಂಥವೆಂದು ಸಾರಿ ಹೇಳಿತು. ಸನಾತನ ಪರಂಪರೆ, ಬಸವ ಪರಂಪರೆ ತುಂಬಾ ವಿಭಿನ್ನ. ಇದನ್ನು ಅರಿಯದೆ ಲಿಂಗಾಯತ ಮಠಾಧೀಶರು ವೈದಿಕರಣಗೊಂಡ ಬಗ್ಗೆ ಚಿಂತಿಸಿ, ಚರ್ಚಿಸಿ ತೀರ್ಮಾನಿಸಲಾಯಿತು ಎಂದು ಗದುಗಿನ ತೋಂಟದಾರ್ಯ ಮಠದ …

Read More »

ವಚನಗಳಾಶಯದ ಬದುಕು ನಮ್ಮದಾಗಲಿ

  ನಿಜಶರಣ ಅಂಬಿಗರ ಚೌಡಯ್ಯನವರ 901ನೇ ಜಯಂತ್ಯೋತ್ಸವ. ಗಜೇಂದ್ರಗಡ: ಸಮಾಜವನ್ನು ಕಂದಾಚಾರ, ಮೌಢ್ಯ, ಅಂಧಶೃದ್ಧೆಗಳಂಥ ಆಚರಣೆಗಳಿಗೆ ದೂಡಿ, ಜನರನ್ನು ಕೀಳಾಗಿ ನಡೆಸಿಕೊಳ್ಳುತ್ತ ನಿರಂತರ ಅನ್ಯಾಯ, ಶೋಷಣೆಗೆ ಈಡು ಮಾಡಿದ್ದ ಅಂದಿನ ಸನಾತನಿಗಳ ಕಪಿಮುಷ್ಠಿಯಿಂದ ಜನತೆಯನ್ನು ಹೊರತಂದು ಸಮಾನತೆಯ ಕಲ್ಯಾಣರಾಜ್ಯದ ಕನಸು ಕಟ್ಟಿಕೊಂಡು ಹೋರಾಡಿದವರು ಅಂದಿನ ಹನ್ನೆರಡನೆ ಶತಮಾನದ ಬಸವಾದಿ ಶರಣರು. ಶರಣರು ಕಟ್ಟಿಕೊಂಡಿದ್ದ ಅನುಭವ ಮಂಟಪದಲ್ಲಿ ಏಳುನೂರ ಎಪ್ಪತ್ತು ಅಮರ ಶರಣರಲ್ಲಿ ದೋಣಿ ನಡೆಸುವ ಕಾಯಕ ಮಾಡುತ್ತಿದ್ದ ಅಂಬಿಗರ ಚೌಡಯ್ಯನವರು …

Read More »