Home / featured / ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಯ ವೇಳಾಪಟ್ಟಿ

ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಯ ವೇಳಾಪಟ್ಟಿ

ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ‌ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ 23 ರವರೆಗೆ ಜಿಲ್ಲೆಯಾದ್ಯಂತ ಸಂಚರಿಸಲಿದೆ.

ಅಕ್ಟೋಬರ್ 18 ರಂದು ಬೆಳಿಗ್ಗೆ 9 ಗಂಟೆಗೆ ಬೈಲಹೊಂಗಲದಿಂದ ಜ್ಯೋತಿ ಯಾತ್ರೆಯು ಪ್ರಾರಂಭಗೊಳ್ಳಲಿದ್ದು, ಅಕ್ಟೋಬರ್ 23 ರಂದು ಬೆಳಿಗ್ಗೆ 10 ಗಂಟೆಗೆ ಕಿತ್ತೂರಿನ ಚನ್ನಮ್ಮ ವೃತ್ತಕ್ಕೆ ಆಗಮಿಸಲಿದೆ.

ವೀರ ಜ್ಯೋತಿ ಯಾತ್ರೆಯ ವೇಳಾಪಟ್ಟಿ :

ಅಕ್ಟೋಬರ್ 18 (ಸೋಮವಾರ) ರಂದು ಬೆಳಿಗ್ಗೆ 9 ಗಂಟೆಗೆ ಬೈಲಹೊಂಗಲದಿಂದ ಜ್ಯೋತಿ ಯಾತ್ರೆಯ ಮೆರವಣಿಗೆ ಆರಂಭಗೊಳ್ಳಲಿದೆ. ಬೆಳಿಗ್ಗೆ 10 ಗಂಟೆಗೆ ಆನಿಗೋಳ ಗ್ರಾಮದಲ್ಲಿ ಜ್ಯೋತಿಯ ಸ್ವಾಗತ ಹಾಗೂ ಬಿಳ್ಕೋಡುಗೆ ಕಾರ್ಯಕ್ರಮ ನಡೆಯಲಿದೆ. ನಂತರ, ಬೆಳಿಗ್ಗೆ 10: 30 ಗಂಟೆಗೆ ಆನಿಗೋಳದಿಂದ – ಕೆಂಗಾನೂರ – ಗರ್ಜೂರ ಮಾರ್ಗವಾಗಿ ಸಂಗೊಳ್ಳಿಗೆ ಜ್ಯೋತಿ ತಲುಪಲಿದೆ.

ಮಧ್ಯಾಹ್ನ 2:30 ಗಂಟೆಗೆ ಸಂಗೊಳ್ಳಿಯಿಂದ ತುರಮರಿ- ಹುಣಶಿಕಟ್ಟಿ- ಇಟಗಿ ಕ್ರಾಸ್ ಮಾರ್ಗವಾಗಿ ಇಟಗಿಗೆ ಜ್ಯೋತಿ ತಲುಪಲಿದೆ. ಸಂಜೆ 4 ಗಂಟೆಗೆ ಇಟಗಿಯಿಂದ ಜ್ಯೋತಿಯ ಬೀಳ್ಕೊಡುಗೆ ನಡೆಯಲಿದೆ.

ಜ್ಯೋತಿಯು ಸಾಯಂಕಾಲ 6 ಗಂಟೆಗೆ ತೋಲಗಿ-ಬೇಕವಾಡ ಮಾರ್ಗವಾಗಿ ನಂದಗಡ ಗ್ರಾಮಕ್ಕೆ ಆಗಮಿಸಿ, ಸಾಯಂಕಾಲ 7:30 ಗಂಟೆಗೆ ಖಾನಾಪೂರ ತಲುಪಲಿದ್ದು, ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ.

ಅಕ್ಟೋಬರ್ 19 ರಂದು ಬೆಳಿಗ್ಗೆ 9 ಗಂಟೆಗೆ ಖಾಪೂರದಿಂದ ಜ್ಯೋತಿಯನ್ನು ಬೀಳ್ಕೊಡಲಾಗುವುದು. ಬೆಳಿಗ್ಗೆ 11 ಗಂಟೆಗೆ
ಜ್ಯೋತಿಯು ಬೆಳಗಾವಿಗೆ ಆಗಮಿಸಲಿದ್ದು,ನಂತರ ಬೀಳ್ಕೊಡಲಾಗುವುದು. ಮಧ್ಯಾಹ್ನ 1 ಗಂಟೆಗೆ ಕಾಕತಿ ಹಾಗೂ ಮಧ್ಯಾಹ್ನ 2:30 ಗಂಟೆಗೆ ಹುಕ್ಕೇರಿಗೆ ಆಗಮಿಸಲಿದೆ. ಮಧ್ಯಾಹ್ನ 03.30 ಗಂಟೆಗೆ ಹುಕ್ಕೇರಿಯಿಂದ ತೆರಳಿ, ಸಾಯಂಕಾಲ 04.30 ಕ್ಕೆ ಸಂಕೇಶ್ವರ ಹಾಗೂ ಸಾಯಂಕಾಲ 7:30 ಕ್ಕೆ ನಿಪ್ಪಾಣಿಗೆ ಆಗಮಿಸಲಿದ್ದು, ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ.

ಅಕ್ಟೋಬರ್ 20 ರಂದು ಬೆಳಿಗ್ಗೆ 9 ಗಂಟೆಗೆ ನಿಪ್ಪಾಣಿಯಿಂದ ಯಾತ್ರೆ ಪ್ರಾರಂಭಿಸಿ, 11 ಗಂಟೆಗೆ ಚಿಕ್ಕೋಡಿ ತಲುಪಲಿದೆ. ಮಧ್ಯಾಹ್ನ 2:30 ಕ್ಕೆ ಕಾಗವಾಡಕ್ಕೆ ತಲುಪಲಿದೆ ಮತ್ತು ಸಾಯಂಕಾಲ 4 ಗಂಟೆಗೆ ಕಾಗವಾಡದಿಂದ ತೆರಳಿ, ಸಾಯಂಕಾಲ 7:30 ಕ್ಕೆ ಅಥಣಿ ತಲುಪಲಿದ್ದು, ಅಥಣಿಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

ಅಕ್ಟೋಬರ್ 21 ರಂದು ಬೆಳಿಗ್ಗೆ 9 ಗಂಟೆಗೆ ಅಥಣಿಯಿಂದ ತೆರಳಿ, ಮಧ್ಯಾಹ್ನ 12 ಗಂಟೆಗೆ ರಾಯಬಾಗ ತಲುಪಲಿದೆ. ಮಧ್ಯಾಹ್ನ 2:30 ಕ್ಕೆ ಕಂಕಣವಾಡಿ- ಗುರ್ಲಾಪೂರ ಕ್ರಾಸ್ ಮಾರ್ಗವಾಗಿ ಮೂಡಲಗಿ ತಲುಪಲಿದೆ. ನಂತರ, ಮಧ್ಯಾಹ್ನ 3:30 ಕ್ಕೆ ಮೂಡಲಗಿಯಿಂದ‌ ತೆರಳಿ, ಸಾಯಂಕಾಲ 5 ಗಂಟೆಗೆ ಗೋಕಾಕ ತಲುಪಲಿದೆ. ಸಾಯಂಕಾಲ 7:30 ಕ್ಕೆ ಯರಗಟ್ಟಿಗೆ ಆಗಮಿಸಿ, ವಾಸ್ತವ್ಯವಿರಲಿದೆ.

ಅಕ್ಟೋಬರ್ 22 ರಂದು ಬೆಳಿಗ್ಗೆ 9 ಗಂಟೆಗೆ ಯರಗಟ್ಟಿಯಿಂದ ತೆರಳಿ, ಮಧ್ಯಾಹ್ನ 1 ಗಂಟೆಗೆ ಚಂದರಗಿ-ಗೊಡಚಿ ಮಾರ್ಗವಾಗಿ ರಾಮದುರ್ಗ ತಲುಪಲಿದೆ. ಮಧ್ಯಾಹ್ನ 1:30 ಕ್ಕೆ ರಾಮದುರ್ಗದಿಂದ ತೆರಳಿ, 2:30 ಕ್ಕೆ ಸವದತ್ತಿ ತಲುಪಲಿದೆ. ಮಧ್ಯಾಹ್ನ 3:30ಕ್ಕೆ ಸವದತ್ತಿಯಿಂದ ತೆರಳಿ, ಸಾಯಂಕಾಲ 4:30 ಕ್ಕೆ ಬೆಳವಡಿ ತಲುಪಲಿದೆ.

ನಂತರ,‌ ಸಾಯಂಕಾಲ 9 ಗಂಟೆಗೆ ಖೋದಾನಪೂರ-ಪಟ್ಟಿಹಾಳ ಕೆ.ಬಿ.-ಇಟಗಿ ಕ್ರಾಸ್- ಮಲಪ್ರಭಾ ಸಕ್ಕರೆ ಕಾರ್ಖಾನೆ- ಎಂ.ಕೆ.ಹುಬ್ಬಳ್ಳಿ-ದಾಸ್ತಿಕೊಪ್ಪ ಮಾರ್ಗವಾಗಿ ಕಿತ್ತೂರಿನ ಸೈನಿಕ ಶಾಲೆಯಲ್ಲಿ ವಾಸ್ತವ್ಯವಿರಲಿದೆ.

ಅಕ್ಟೋಬರ್ 23 ರಂದು ಬೆಳಿಗ್ಗೆ 9 ಗಂಟೆಗೆ ಕಿತ್ತೂರಿನ ಸೈನಿಕ‌ ಶಾಲೆಯಿಂದ ತೆರಳಿ, 10 ಗಂಟೆಗೆ ಕಿತ್ತೂರಿನ ಚನ್ನಮ್ಮ ವೃತ್ತಕ್ಕೆ ಆಗಮಿಸಲಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಜ್ಯೋತಿ ಉಪಸಮಿತಿಯ ಅಧ್ಯಕ್ಷರಾದ ಡಾ.ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದ್ದಾರೆ

About Shivanand

Admin : Lingayat Kranti Monthly news paper 8884000008 [email protected]

Check Also

ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ಲಿಂಗಾಯತ ಉಪಪಂಗಡಗಳು ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ: ಎಂ ಬಿ ಪಾಟೀಲ

ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಶ್ರೀ ಎಂ.ಬಿ.ಪಾಟೀಲ ಅವರು ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು …

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಮೊದಲು ಮೂರು ನೀತಿಕಥೆಗಳನ್ನು ನೊಡೋಣ ಆನಂತರ ವಿಷಯಕ್ಕೆ ಬರೋಣ.ಬೆಳಗಿನ ಜಾವ ಯಾರೋ ಒಬ್ಬರು ಸಮುದ್ರ ತೀರದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅಂದು …

ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಸಾಹಿತಿ ಮತ್ತು ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳ ಒಡನಾಡಿ ಶಿಷ್ಯರಾದ ಸಿದ್ದು ಯಾಪಲಪರವಿ ಅವರು ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ …

ರಂಗಾಯಣದಿಂದ ನೇಗಿನಹಾಳದಲ್ಲಿ ಸರ್ವರಿಗೂ ಸಂವಿಧಾನದ ನಾಟಕ

ನೇಗಿನಹಾಳ: ಜನಸಾಮಾನ್ಯರಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ಮೂಡಿಸುವುದರ ಜೊತೆಗೆ ಜಾತಿ, ಧರ್ಮ, ಲಿಂಗಸಮಾನತೆ, ಅಸ್ಪೃಶ್ಯತೆ ನಿವಾರಣೆ, ದೇವದಾಸಿ …

ಜಗದ್ಭವ್ಯ ಮೇರು ಕೃತಿ : ಮಹಾತ್ಮರ ಚರಿತಾಮೃತ

ಲೇಖನ: ಪ್ರಕಾಶ ಗಿರಿಮಲ್ಲನವರ                          …

ಸೆ. 25ರಂದು “ಮಹಾತ್ಮರ ಚರಿತಾಮೃತ” ಲೋಕಾರ್ಪಣೆ

ಅಥಣಿ: ಗಡಿಭಾಗದಲ್ಲಿ ನಾಡು-ನುಡಿ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಂತ-ಮಹಾಂತರ …

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು …

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ …

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ …

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ …

ಕ್ರೀಡೆ, ಕಲೆ, ಸಾಹಿತ್ಯದಂಥ ರಂಗಗಳು ಜಾತಿ, ಸಂಕುಚಿತತೆ ನಿರ್ಮೂಲನೆಯ ಮಹಾಸಾಧನಗಳು

  ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಮತ ಮುಂಡರಗಿ ಆಗಷ್ಟ್ 07: ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. …

ಪ್ರಮಾಣ ವಚನ ನೇರಪ್ರಸಾರ; ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ರಾಜಭವನದಿಂದ ನೇರ ಪ್ರಸಾರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇಂದು ಮಧ್ಯಾಹ್ನ 2:15ಕ್ಕೆ …

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

  ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ …

ತ್ರಿಭಾಷೆಗಳಲ್ಲಿ ಮೂಡಿಬಂದ ಮಹಾಜಂಗಮ

ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ …

ಹಡಪದರನ್ನು ನೋಡುವ ನೋಟ ಬದಲಾಗಲಿ

ಗಜೇಂದ್ರಗಡ ಜುಲೈ 25: ಅಸಮಾನತೆ, ಜಾತಿವಾದ ವ್ಯವಸ್ಥೆಯ ಈ ಸಮಾಜದಲ್ಲಿ ದಲಿತ ಜನಾಂಗದವರು ಮುಟ್ಟಿಸಿಕೊಳ್ಳದ ಅಸ್ಪೃಶ್ಯತೆಯ ಅವಮಾನಕ್ಕೊಳಗಾಗುತ್ತಿದ್ದಾರೆ. ಹಾಗೆಯೇ ಹಡಪದ …

Leave a Reply

Your email address will not be published. Required fields are marked *