Home / featured / “ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ

ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ.

ಡಾ.ಜೆ.ಎಸ್.ಪಾಟೀಲರ ” ವೇದಕ್ಕೆ ಒರೆಯ ಕಟ್ಟುವೆ ” ಹಾಗೂ ಶಿವಣ್ಣ ಗುಡಗುಂಟಿ ಶರಣರ ” ಶರಣಧರ್ಮ ಪ್ರವಚನ ಮಾದರಿ 01 ” ಕೃತಿಗಳು ಲೋಕಾರ್ಪಣೆ ಕಾರ್ಯಕ್ರಮ.

ಬಹುತೇಕ ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸ, ಪರಂಪರೆ ಗೊತ್ತಿಲ್ಲದಿರುವುದು ದೊಡ್ಡ ದುರಂತ. ವೈದಿಕರು ಹೇಳಿದ್ದೇ ಶಾಸ್ತ್ರ ಎಂದು ಅಂದುಕೊಂಡು ಲಿಂಗಾಯತರು ಸಹ ಹೋಮ, ಯಜ್ಞ, ತುಳಸಿ ಪೂಜೆಯಂತಹ ಗೊಡ್ಡು ವೈದಿಕ ಆಚರಣೆಗಳನ್ನು ಮಾಡುತ್ತಿದ್ದು, ಬಸವಣ್ಣನವರ ಆಶಯಗಳನ್ನೇ ಮರೆತು ಹೋಗಿದ್ದಾರೆ ಎಂದು ಕವಿ, ಶಿಕ್ಷಕ ಮಲ್ಲಿಕಾರ್ಜುನ ತಾಳಿಕೋಟಿ ಕಳವಳ ವ್ಯಕ್ತಪಡಿಸಿದರು.

ನಗರದ ಜ. ತೋಂಟದಾರ್ಯ ಮಠದಲ್ಲಿ 20 ಸೆಪ್ಟಂಬರ್ 2021ರಂದು ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ 2555ನೇ ಶಿವಾನುಭವ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ,ಬಸವತತ್ವನಿಷ್ಠರಾದ ವಿಜಯಪುರದ ಡಾ.ಜೆ.ಎಸ್‌. ಪಾಟೀಲರ ‘ವೇದಕ್ಕೆ ಒರೆಯ ಕಟ್ಟುವೆ’ (ಅನುಭವ ಸಾಹಿತ್ಯ ಗ್ರಂಥಮಾಲೆ, ಬೈಲೂರು) ಹಾಗೂ ಶರಣನಿಷ್ಠರಾದ ಶಿವಣ್ಣ ಗುಡಗುಂಟಿಯವರ ಶರಣ ಧರ್ಮ ಪ್ರವಚನ-ಮಾದರಿ 01 (ಶ್ರೀಗುರು ಬಸವಣ್ಣನವರ ಅನುಭವ ಮಂಟಪ,ಹಿರೇಮುರಾಳ) ಕೃತಿಗಳ ಲೋಕಾರ್ಪಣೆ ಹಾಗೂ ಸಂಮಾನ ಕಾರ್ಯಕ್ರಮದಲ್ಲಿ ಅವರು ಗ್ರಂಥ ಸಮೀಕ್ಷೆ ಮಾಡಿ ಮಾತನಾಡಿದರು.

ವೈದಿಕತ್ವಕ್ಕೆ ಪ್ರತಿದ್ವಂದ್ವಿಯಾಗಿ ಉದಯಿಸಿ ಬಂದಿರುವ ಧರ್ಮವೇ ಲಿಂಗಾಯತ ಧರ್ಮ. ಇದೀಗ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಕ್ಕಿ ಹಾಕಿಕೊಂಡು ನಲಗುತ್ತಿದ್ದಾರೆ. ಇಂತ ವೇದ ಪ್ರೇರಿತ, ಮನು ಪ್ರೇರಿತ ಪ್ರತಿಗಾಮಿ ವಿಚಾರಗಳಿಂದ ಲಿಂಗಾಯತರನ್ನು ಎಚ್ಚರಿಸಿ ಅವರಿಗೆ ಸ್ಪಷ್ಟ ವೈಚಾರಿಕ ಅರಿವು ಮೂಡಿಸುವ ಕೆಲಸವನ್ನು ಡಾ.ಜೆ.ಎಸ್.ಪಾಟೀಲ್ ಅವರು ಸಂವಾದ ರೂಪದ ಈ ಕೃತಿಯಲ್ಲಿ ಮಾಡಿದ್ದಾರೆ.ಔಷಧ ವಿಜ್ಞಾನದ ಬೋಧಕರಾಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತರಾಗಿರುವ ಜೆ.ಎಸ್. ಪಾಟೀಲರು ಜನರಲ್ಲಿ ವೈಚಾರಿಕ ಜಾಗೃತಿ ಮೂಡಿಸುತ್ತಾ ಸಮಾಜಕ್ಕಂಟಿದ ವ್ಯಾಧಿಯನ್ನು ಗುಣಪಡಿಸುವ ಕಾರ್ಯವನ್ನು ಚಿಕಿತ್ಸಕ ಬುದ್ಧಿಯಿಂದ ಮಾಡುತ್ತಿದ್ದಾರೆ ಎಂದರು.

ವಚನಗಳ ಸಂಗ್ರಹ, ವ್ಯಾಖ್ಯಾನ ಕುರಿತ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ಸಾಕಷ್ಟಿವೆ ಆದರೆ ಲಿಂಗಾಯತ ಧರ್ಮ ವೈದಿಕ ಧರ್ಮಕ್ಕಿಂತ ಹೇಗೆ ಭಿನ್ನ ಎಂದು ಸಂವಾದ ರೂಪದಲ್ಲಿ ವೈಚಾರಿಕ ತಿಳಿವಳಿಕೆಯೊಂದಿಗೆ ಜಾಗೃತಿ ಮೂಡಿಸುವ ಒಂದು ಮೌಲಿಕ ಕೃತಿ ಇದಾಗಿದೆ. ಪ್ರಗತಿಶೀಲ ಚಳವಳಿಗಳನ್ನು ಹತ್ತಿಕ್ಕುತ್ತಿರುವ ಪ್ರತಿಗಾಮಿ ಶಕ್ತಿಗಳನ್ನು ಎದುರಿಸಲು ಬೇಕಾಗುವ ವೈಚಾರಿಕತೆಯನ್ನು ಈ ಕೃತಿ ಕೊಡುತ್ತದೆ.

-ಮಲ್ಲಿಕಾರ್ಜುನ ತಾಳಿಕೋಟಿ

ಸಾನಿಧ್ಯವಹಿಸಿ ಮಾತನಾಡಿದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮವು ವೈದಿಕ ಆಚಾರ,ವಿಚಾರಗಳಿಂದ ಹೊರಬರಬೇಕು.ಮನುಷ್ಯ ಕುಲವನ್ನು ಯಾವುದೇ ಬೇಧಭಾವ ಇಲ್ಲದೆ ಪ್ರೀತಿಸುವ ಅವರ ಆಶಯವನ್ನು ನಾವು ಜೀವಂತವಾಗಿಡಬೇಕು. ಪ್ರಜಾಪ್ರಭುತ್ವದ ನೆಲೆಯಲ್ಲಿ ಹುಟ್ಟಿದ ಲಿಂಗಾಯತ ಧರ್ಮದ ನೆರಳಿನಲ್ಲಿ ನಾವು ಮಾನವೀಯತೆಯ ಅಸ್ಮಿತೆಗಳನ್ನು ಹುಡುಕಬೇಕು ಎಂದರು.

ಶರಣ ಸಂಸ್ಕ್ರತಿಯ ಜೀವಾಳ ಕಾಯಕ. ಕಾಯಕದ ಜೀವಾಳ ದಾಸೋಹ.ಶರಣರು ಕಾಯಕವನ್ನು ದಾಸೋಹಕ್ಕಾಗಿ ಮಾಡುತ್ತಿದ್ದರು. ಸಂಸ್ಕೃತಿಯನ್ನು ಮಾನವೀಯಕರಣಗೊಳಿಸುವ ಕಾರ್ಯ ಮಾಡಿದರು.

ನಮ್ಮ ನೆಲಮೂಲದ ಯುವಜನರನ್ನು ವಿಷವರ್ತುಲದ ಹುಸಿರಾಷ್ಟ್ರೀಯತೆಯ ಪ್ರಪಾತಕ್ಕೆ ಕೆಡವಲಾಗಿದೆ.ಅದರಿಂದ ಅವರನ್ನು ಹೊರತರುವ ಕಾರ್ಯ ಆಗಬೇಕಾಗಿದೆ.ಯಾವ ರಾಷ್ಟ್ರೀಯತೆಗೆ ಎಲ್ಲ ಜನಾಂಗ,ಧರ್ಮದವರನ್ನು ಒಪ್ಪಿಕೊಳ್ಳುವ,ಅಪ್ಪಿಕೊಳ್ಳುವ ಶಕ್ತಿಯಿಲ್ಲವೋ ಅಂಥ ರಾಷ್ಟ್ರೀಯ ವಾದವನ್ನು ನಾವು ಒಪ್ಪಿಕೊಳ್ಳುವ ಅವಶ್ಯಕತೆಯೇ ಇಲ್ಲ.ಸಕಲ ಜೀವಾತ್ಮರ ಲೇಸು ಬಯಸುವ ಲಿಂಗಾಯತ,ಬಸವ ಧರ್ಮ ನಿಜ ರಾಷ್ಟ್ರೀಯತೆ ಬಿತ್ತುವ ಧರ್ಮವಾಗಿದೆ.ನೆಲಮೂಲ ಸಮುದಾಯದ ಯುವಕರು ಬಹುದೊಡ್ಡ ಅಪಾಯ ತಂದೊಡ್ಡುತ್ತಿರುವ ಹಿಂದುತ್ವದ ಹುಸಿ ರಾಷ್ಟ್ರೀಯವಾದವನ್ನು ತಿರಸ್ಕರಿಸುವ ಅರಿವು ಮೂಡಿಸಿಕೊಳ್ಳಬೇಕು.

– ಡಾ.ಜೆ.ಎಸ್.ಪಾಟೀಲ ಲೇಖಕರು,ವಿಜಯಪುರ

ಲೇಖಕರಾದ ಶಿವಣ್ಣ ಗುಡಗುಂಟಿ ಶರಣರು ಮಾತನಾಡಿದರು.

ಈ ವೇಳೆ ಗಜೇಂದ್ರಗಡದವರಾದ, ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಮೀರ ಎ.ರೋಣದ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಕಿರಣ ಈ.ತಾಳಿಕೋಟಿ, ದಾಸೋಹ ಸೇವೆಗೈದ ರೈತ ಹೋರಾಟಗಾರ ಕೂಡ್ಲೆಪ್ಪ ಗುಡಿಮನಿಯವರ ಧರ್ಮ ಪತ್ನಿ ಶಾರದಮ್ಮ ಹಾಗೂ ಉದಯರವಿ ಗುಡಿಮನಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕುಮಾರಿ ಸೌಮ್ಯ ಚುಳಕಿ ವಚನ ಚಿಂತನ, ಕುಮಾರಿ ನಂದಿನಿ ಪಾರ್ವತಿಮಠ ಧರ್ಮಗ್ರಂಥ ಪಠಣ ಮಾಡಿದರು. ಗುರುನಾಥ ಸುತಾರ ಹಾಗೂ ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ದಾನಯ್ಯ ಗಣಾಚಾರಿ, ಮುರುಘರಾಜೇಂದ್ರ ಬಡ್ನಿ, ರತ್ನಕ್ಕ ಪಾಟೀಲ, ವೀರೇಶ ಬುಳ್ಳಾ, ಸೋಮು ಪುರಾಣಿಕ, ಮಲ್ಲಿಕಾರ್ಜುನ ಖಂಡೆಮ್ಮನವರ, ಶಿವಬಸಪ್ಪ ಯಂಡಿಗೇರಿ, ಅಶೋಕ ಬರಗುಂಡಿ, ಶೇಖಣ್ಣ ಕವಳಿಕಾಯಿ, ಗೌರಕ್ಕ ಬಡಿಗಣ್ಣವರ, ಪ್ರತಿಭಾ ಪಾಟೀಲ, ಪಾರ್ವತೆವ್ವ ತಾಳಿಕೋಟಿ, ಅಬ್ದುಲರೆಹಮಾನ್ ಬಿದರಕುಂದಿ, ಮಲ್ಲಿಕಾರ್ಜುನ ಹಡಪದ, ರವೀಂದ್ರ ಹೊನವಾಡ, ಕಲ್ಲಿಗನೂರ ಪುಂಡಲೀಕ, ಎನ್.ಎಂ.ಪವಾಡಿಗೌಡ್ರ, ಪ್ರಕಾಶ ಅಸುಂಡಿ, ಮಂಜುನಾಥ ಅಸುಂಡಿ, ಗುರುಲಿಂಗಯ್ಯ ಓದಸುಮಠ, ಕೆ.ಎಸ್.ಸಾಲಿಮಠ, ಮುತ್ತು ಬಿಳಿಯಲಿ, ಎ.ಆರ್.ರೋಣದ, ವೀರಪ್ಪ ತಾಳದವರ, ಬಸವರಾಜ ಮಂತೂರ, ಮಹಾಂತೇಶ ಕಡಗದ,ಮಂಜು ಹೂಗಾರ, ಇಸ್ಮಾಯಿಲ್ ಯಲಿಗಾರ ಸೇರಿದಂತೆ ನೂರಾರು ಬಸವಾಭಿಮಾನಿಗಳು ಉಪಸ್ಥಿತರಿದ್ದರು. ನಿರೂಪಣೆಯನ್ನು ವಿವೇಕಾನಂದಗೌಡ ಪಾಟೀಲ ಮಾಡಿದರು.

ವರದಿ : ರವೀಂದ್ರ ಹೊನವಾಡ

About Shivanand

Admin : Lingayat Kranti Monthly news paper 8884000008 [email protected]

Check Also

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು …

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ …

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ …

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ …

ಕ್ರೀಡೆ, ಕಲೆ, ಸಾಹಿತ್ಯದಂಥ ರಂಗಗಳು ಜಾತಿ, ಸಂಕುಚಿತತೆ ನಿರ್ಮೂಲನೆಯ ಮಹಾಸಾಧನಗಳು

  ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಮತ ಮುಂಡರಗಿ ಆಗಷ್ಟ್ 07: ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. …

ಪ್ರಮಾಣ ವಚನ ನೇರಪ್ರಸಾರ; ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ರಾಜಭವನದಿಂದ ನೇರ ಪ್ರಸಾರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇಂದು ಮಧ್ಯಾಹ್ನ 2:15ಕ್ಕೆ …

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

  ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ …

ತ್ರಿಭಾಷೆಗಳಲ್ಲಿ ಮೂಡಿಬಂದ ಮಹಾಜಂಗಮ

ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ …

ಹಡಪದರನ್ನು ನೋಡುವ ನೋಟ ಬದಲಾಗಲಿ

ಗಜೇಂದ್ರಗಡ ಜುಲೈ 25: ಅಸಮಾನತೆ, ಜಾತಿವಾದ ವ್ಯವಸ್ಥೆಯ ಈ ಸಮಾಜದಲ್ಲಿ ದಲಿತ ಜನಾಂಗದವರು ಮುಟ್ಟಿಸಿಕೊಳ್ಳದ ಅಸ್ಪೃಶ್ಯತೆಯ ಅವಮಾನಕ್ಕೊಳಗಾಗುತ್ತಿದ್ದಾರೆ. ಹಾಗೆಯೇ ಹಡಪದ …

ಯಡಿಯೂರಪ್ಪ ಅವರನ್ನು ಘನತೆಯಿಂದ ನಡೆಸಿಕೊಳ್ಳಿ- ಡಾ. ಎಂ ಬಿ ಪಾಟೀಲ

ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದು, ಬಿ.ಎಸ್. ಯಡಿಯೂರಪ್ಪ …

ನಾಗನೂರ ರುದ್ರಾಕ್ಷಿಮಠಕ್ಕೆ ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ ಬೇಟಿ

ಅಂತರರಾಷ್ಟ್ರೀಯ ಬಸವ ಗ್ರಂಥಾಲಯ ನಿರ್ಮಾಣದ ಕುರಿತು ಚಿಂತನೆ ಬೆಳಗಾವಿ : ಶುಕ್ರವಾರ ಶಿವಬಸವ ನಗರದ ನಾಗನೂರ ರುದ್ರಾಕ್ಷಿಮಠಕ್ಕೆ ಬೇಟಿ ನೀಡಿ …

47ನೇ ತ್ರೈಮಾಸಿಕ ಶಿವಾನುಭವ-ಗುರುವಂದನೆ

  ಮುಂಡರಗಿ ಜುಲೈ 12: ೧೨ನೆಯ ಶತಮಾನದ ಬಸವಾದಿ ಶರಣರು ದೇವರ ಕಲ್ಪನೆಯನ್ನು ಇಷ್ಟಲಿಂಗದಲ್ಲಿ ಕಂಡರು.ಗರ್ಭಗುಡಿ ಸಂಸ್ಕೃತಿಯಿಂದ ಜನರನ್ನು ಹೊರತಂದು,ಇಷ್ಟಲಿಂಗ …

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ …

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ …

ನೇಗಿನಹಾಳ ಗ್ರಾಮದ ಸಮಸ್ಯೆಗಳ ಆಲಿಸಿದ ತಹಶಿಲ್ದಾರ್ ಬಸವರಾಜ ನಾಗರಾಳ್

ಗ್ರಾಮದ ಜನತಾ ಕಾಲನಿಯಲ್ಲಿ ನೀರು ನುಗ್ಗಿದ್ದರಿಂದ ಮನೆಗಳು ಬಿದ್ಧಿರುವ ಸ್ಥಳಗಳಿಗೆ ಬೇಟಿ ನೀಡಿದರು. ನೇಗಿನಹಾಳ (ಬೆಳಗಾವಿ) : ಗ್ರಾಮದಲ್ಲಿನ ಸಮಸ್ಯೆಗಳನ್ನು …

Leave a Reply

Your email address will not be published. Required fields are marked *