Home / featured / ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಮೊದಲು ಮೂರು ನೀತಿಕಥೆಗಳನ್ನು ನೊಡೋಣ ಆನಂತರ ವಿಷಯಕ್ಕೆ ಬರೋಣ.ಬೆಳಗಿನ ಜಾವ ಯಾರೋ ಒಬ್ಬರು ಸಮುದ್ರ ತೀರದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅಂದು ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ದ ತೆರೆಗಳು ಬರುತ್ತಿದ್ದವು. ಅ ತೆರೆಗಳು ಸಮುದ್ರದಲ್ಲಿನ ಸ್ಟಾರಪಿಶ್ ಗಳನ್ನ ದಡಕ್ಕೆ ತಂದು ಎಸೆಯುತ್ತಿದ್ದವು. ತೆರೆ ನಿರ್ಗಮಿಸುವಾಗ ಕೆಲವು ಸ್ಟಾರಫ಼ಿಶ್ ಗಳು ಮತ್ತೆ ನೀರಿಗೆ ಸೇರುತ್ತಿದ್ದರೆ ಬಹುತೇಕ ಸ್ಟಾರಫ಼ಿಶ್ ಗಳು ದಡದಲ್ಲೆ ಸೂರ್ಯನ ಕಿರಣಕ್ಕೆ ಬಲಿಯಾಗಿ ಸಾಯುತ್ತಿದ್ದವು. ಇದನ್ನ ಗಮನಿಸಿದ ಆ ಮನುಷ್ಯ ತೆರೆ ನಿರ್ಗಮಿಸುತ್ತಿದ್ದಂತೆಯೇ ಇನ್ನೂ ಜೀವಂತವಿದ್ದ ಸ್ಟಾರಫ಼ಿಶ್ ಗಳನ್ನು ಎತ್ತಿ ನೀರಿಗೆ ಎಸೆಯಲಾರಂಭಿಸಿದ. ಆದರೆ ದಡದಲ್ಲಿ ಬಂದು ಬೀಳುತ್ತಿದ್ದ ಸಾವಿರಾರು ಸ್ಟಾರಫ಼ಿಶ್ ಗಳಲ್ಲಿ ಕೆಲವನ್ನ ಮಾತ್ರ ಆತನಿಗೆ ನೀರಿಗೆ ಸೇರಿಸಲು ಸಾಧ್ಯವಿತ್ತು. ದೂರದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಇದನ್ನ ನೋಡಿ ಬಳಿ ಬಂದು ತಾವೇನು ಮಾಡುತ್ತಿದ್ದೀರಿ ಮಹಾಶಯರೆ?, ನೀವೆಷ್ಟೇ ಶ್ರಮಿಸಿದರೂ ಇನ್ನೂ ಸಾವಿರಾರು ಸ್ಟಾರಫ಼ಿಶ್ ಗಳು ಸಾಯುತ್ತಿವೆಯಲ್ಲ, ಇದರಿಂದ ಏನು ಪ್ರಯೋಜನ? ಯಾರಿಗೆ ಮತ್ತು ಏನು ವ್ಯತ್ಯಾಸವುಂಟಾಗುತ್ತದೆ ಎಂದು ಪ್ರಶ್ನಿಸಿದ ಅದಕ್ಕೆ ಆತ ಇನ್ನೆರಡು ಹೆಜ್ಜೆ ಮುಂದೆ ಹೋಗಿ ಇನ್ನೊಂದು ಜೀವಂತವಿರುವ ಸ್ಟಾರಫ಼ಿಶ್ ಎತ್ತಿ ನೀರಿಗೆ ಎಸೆದು, ನೋಡಿ ಈ ಸ್ಟಾರಫ಼ಿಶ್ ಗೆ ಖಂಡಿತ ವ್ಯತ್ಯಾಸವಾಗುತ್ತೆ ಎನ್ನುತ್ತಾನೆ. ಸಾವಿರಾರು ಸ್ಟಾರಫ಼ಿಶ್ ಗಳು ಸಾಯುತ್ತಿದ್ದರೂ ಕೆಲವನ್ನಾದರೂ ಬದುಕಿಸಿದ ತೃಪ್ತಿ ಅವನಲ್ಲಿತ್ತು. (ಈ ಕಥೆ ಶಿವ ಖೇರಾ ಅವರ ಪ್ರಸಿದ್ಧ “ಯು ಕ್ಯಾನ್ ವಿನ್” ಎಂಬ ಪುಸ್ತಕದಿಂದ ಆಯ್ದುಕೊಂಡದ್ದು)

ಇನ್ನು ಎರಡನೇಯ ಕಥೆ, ಕ್ಯಾಚ್-೨೨ ಆರೋಪಿಗಳಿಬ್ಬರ ವಿರೋಧಾಭಾಸದ ಸಂಧಿಗ್ಧತೆ (ಪ್ಯಾರಾಡೋಕ್ಸಿಯಲ ಪ್ರಿಜನರ್ ಡೈಲಿಮಾ). ಪೋಲಿಸ ಅಧಿಕಾರಿ ಅಪರಾಧ ಎಸಗಿದ ಆರೋಪದ ಮೇಲೆ ಇಬ್ಬರನ್ನ ಬಂಧಿಸಿ ಜೈಲಿಗೆ ತರುತ್ತಾನೆ. ಆದರೆ ನ್ಯಾಯಾಲಯದಲ್ಲಿ ಅಪರಾಧ ಸಿದ್ಧವಾಗದ ಹೊರತು ಅವರು ಅಪರಾಧಿಗಳಲ್ಲ. ಅಪರಾಧ ಸಾಬೀತು ಮಾಡಲು ಪ್ರತ್ಯಕ್ಷದರ್ಶಿಗಳಾರು ಇಲ್ಲದ್ದರಿಂದ ಅರೋಪಿಗಳು ತಾವೇ ಅಪರಾಧ ಎಸಗಿದ್ದು ಎಂದು ಒಪ್ಪಿಕೊಂಡಲ್ಲಿ ಮಾತ್ರ ಅಪರಾಧ ಸಿದ್ಧವಾಗುವುದು. ಇಲ್ಲದಿದ್ದರೆ ಅವರು ನಿರಪರಾಧಿಗಳು. ಆಗ ಪೋಲಿಸ ಅಧಿಕಾರಿ ತಂತ್ರವೊಂದನ್ನ ರೂಪಿಸುತ್ತಾನೆ, ಅದರಿಂದ ಇಬ್ಬರಿಗೂ ಶಿಕ್ಷೆ ಆಗಿರಬೇಕು. ಅದೇನೆಂದರೆ, ಆರೋಪಿಗಳನ್ನ ಬೇರೆ ಬೇರೆ ಕೋಣೆಯಲ್ಲಿರಿಸಿ, ಒಬ್ಬಾತನಿಗೆ, ನೋಡು ನೀನು ಅಪರಾಧದ ಪ್ರತ್ಯಕ್ಷದರ್ಶಿ ಮತ್ತು ಭಾಗಿದಾರ, ಅಪರಾಧ ಸಿದ್ಧವಾದಲ್ಲಿ ೫ ವರ್ಷ ಜೈಲುಶಿಕ್ಷೆ ಆದರೆ ನಾನು ಹೇಳಿದಂತೆ ಕೇಳಿ ಅಪ್ರೂವರ ಆಗಿ ಅಪರಾಧಿಗೆ ಶಿಕ್ಷೆ ಕೊಡಿಸುವಲ್ಲಿ ಸಹಾಯ ಮಾಡಿದರೆ ನಿನಗೆ ೨ ವರ್ಷ ಜೈಲುಶಿಕ್ಷೆ ಮಾತ್ರ. ನಾಳೆಯೇ ನ್ಯಾಯಾಧೀಶರ ಮುಂದೆ ನಿನ್ನ ಹೇಳಿಕೆಯನ್ನ ದಾಖಲಿಸಬೇಕು, ಇದೇ ಆಫರ್ ನಾನು ಇನ್ನೊಬ್ಬನಿಗೂ ಕೂಡ ಕೊಟ್ಟಿರುವೆನೆಂದು ಹೇಳಿ ನಿರ್ಗಮಿಸುತ್ತಾನೆ. ಇತ್ತ ಇಬ್ಬರೂ ಆರೋಪಿಗಳು ಒಬ್ಬರನೊಬ್ಬರು ನೋಡುವಂತಿಲ್ಲ ಅಥವಾ ಮಾತಾಡುವಂತಿಲ್ಲ ಕಾರಣ ಇಬ್ಬರೂ ಬೇರೆ ಬೇರೆ ಕೋಣೆಯಲ್ಲಿ ಬಂಧಿಯಾಗಿದ್ದಾರೆ. ಇದು ಅತ್ಯಂತ ಸಂಧಿಗ್ಧ ಪರಿಸ್ಥಿತಿ. ಒಬ್ಬರನೊಬ್ಬರು ಅನುಮಾನಿಸುತ್ತಾ ಪರಸ್ಪರ ಮೋಸ ಮಾಡಬಹುದೆಂದು ನಿರ್ಧಾರಕ್ಕೆ ಬಂದು ಕೊನೆಗೆ ಪೋಲಿಸ ಅಧಿಕಾರಿ ಹೇಳಿದಂತೆ ಕೇಳಲು ನಿರ್ಧರಿಸಿ ಮರುದಿನ ನ್ಯಾಯಾಧೀಶರ ಮುಚ್ಛಿದ ಕೋಣೆಯಲ್ಲಿ ತಮ್ಮ ತಮ್ಮ ಹೇಳಿಕೆಗಳನ್ನ ದಾಖಲಿಸುತ್ತಾರೆ. ಇದರಿಂದ ಇಬ್ಬರೂ ಅಪರಾಧಿಗಳೆಂದು ಸಾಬೀತಾಗಿ ನ್ಯಾಯಾಲಯ ೫ ವರ್ಷದ ಜೈಲು ಶಿಕ್ಷೆ ನೀಡುತ್ತದೆ. ಇದೊಂದು ಕಲ್ಪಿತ ಕಥೆಯಾದರೂ ಪರಸ್ಪರ ಸಂಶಯ ಪಡದೆ ವಿರುದ್ಧ ಹೇಳಿಕೆ ದಾಖಲಿಸದೆ ಇದ್ದಿದ್ದರೆ ಅಪರಾಧ ಸಾಬೀತಾಗದೆ ಇಬ್ಬರೂ ಸ್ವತಂತ್ರರಾಗುತ್ತಿದ್ದರು. “ವಿನ್ನ್-ವಿನ್ನ್ ಆಗಿ ಯೋಚಿಸಬಹುದಿತ್ತು ಆದರೆ ಪೋಲಿಸ ಅಧಿಕಾರಿಯ ಆಮಿಷ ಪರಸ್ಪರ ಸಂಶಯದಿಂದ ನೊಡುವಂತೆ ಮಾಡಿ ಸೋತರು. (ಈ ಕಥೆ ವಿ. ರಘುನಾಥನ ಅವರ ಪ್ರಸಿದ್ಧ “ಗೇಮ್ಸ್ ಇಂಡಿಯನ್ಸ್ ಪ್ಲೇ” ಎಂಬ ಪುಸ್ತಕದಿಂದ ಆಯ್ದುಕೊಂಡದ್ದು)

ಮೂರನೇಯದಾಗಿ, ಒಂದು ಸಾಮಾನ್ಯ ಕುಟುಂಬ, ಅಮ್ಮ, ಮಗ, ಸೊಸೆ ಮತ್ತು ಮೊಮ್ಮಕ್ಕಳು ಇರುವ ಸುಖ ಸಂಸಾರ. ಪ್ರತಿದಿನ ಮಗ ಮಧ್ಯಾಹ್ನದ ಊಟಕ್ಕೆ ಮನೆಗೆ ಬರುತ್ತಿದ್ದ. ತಾಯಿ ಎಲ್ಲರಿಗೂ ಊಟ ಬಡಿಸಿ ನಂತರ ತಾನು ಊಟ ಮಾಡುತ್ತಿದ್ದಳು. ಪ್ರತಿದಿನ ಸರಿಯಾಗಿ ಅವಳ ಊಟದ ಸಮಯಕ್ಕೆ ಒಬ್ಬ ಭಿಕ್ಷುಕ ಬರುತ್ತಿದ್ದ ಮತ್ತು ತಾಯಿ ತನ್ನ ತಟ್ಟೆಯಲ್ಲಿನ ಒಂದು ರೊಟ್ಟಿ ಪಲ್ಯ ಹಚ್ಚಿ ಅವನಿಗೆ ನೀಡುತ್ತಿದ್ದಳು. ತುಂಬಿದ ಸಂಸಾರದಲ್ಲಿ ಮಾಡುವ ಅಡುಗೆ ಕೊನೆಯಲ್ಲಿ ಸ್ವಲ್ಪ ಉಳಿಯುವುದು ಸಾಮಾನ್ಯ. ಅದು ನಿತ್ಯ ದನ ಕರುಗಳಿಗೆ ಸಲ್ಲುತ್ತಿತ್ತು. ಪ್ರತಿದಿನ ಆ ಭಿಕ್ಷುಕ ತಾಯಿಯ ಊಟದ ಸಮಯಕ್ಕೆ ಬರುವುದು ಮತ್ತು ತಾಯಿ ತನ್ನ ತಟ್ಟೆಯಿಂದಲೆ ಅವನಿಗೆ ಅಹಾರ ಎತ್ತಿ ನೀಡುವುದನ್ನ ನೋಡುತ್ತಿದ್ದ ಮಗ, ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚಾಗೆ ಅಡುಗೆ ಮಾಡುತ್ತಿದ್ದು ಅದರಿಂದಲೇ ಭಿಕ್ಷುಕನಿಗೂ ಸಹ ನೀಡಬಾರದೇಕೆ, ನಿನ್ನ ತಟ್ಟೆಯಿಂದಲೆ ತೆಗೆದು ಯಾಕೆ ಕೊಡುತ್ತಿರುವೆ ಎಂದು ತಾಯಿಯನ್ನ ಕೇಳುತ್ತಾನೆ. ಆಗ ತಾಯಿ, ನೋಡು ಮಗ ನಿನ್ನ ಸಂಪಾದನೆಯಿಂದ ಮನೆಯನ್ನು ಮತ್ತು ಉದ್ಯಮದ ನೌಕರರನ್ನು ಸಲಹುತ್ತಿರುವೆ ಅದರಿಂದ ನಿನಗೆ ಆತ್ಮತ್ರಪ್ತಿ ಸಿಗುತ್ತದೆ ಆದರೆ ನಾನು ಮನೆಯಲ್ಲಿ ಅಲ್ಪ ಸ್ವಲ್ಪ ಕೆಲಸ, ಅಡುಗೆ ಮಾಡಿ ನನ್ನ ಊಟವನ್ನ ಸಂಪಾದಿಸುತ್ತೇನೆ, ಅದರಲ್ಲಿನ ಸ್ವಲ್ಪ ಭಾಗ ಭಿಕ್ಷುಕನಿಗೆ ನೀಡಿದಾಗ ನನಗೂ ಆತ್ಮತ್ರಪ್ತಿ ಸಿಗುತ್ತದೆ ಎನ್ನುತ್ತಾಳೆ ತಾಯಿ. ಮಗ ತಾಯಿಯ ಈ ಮಾನವೀಯ ಮೌಲ್ಯಕ್ಕೆ ಬೆರಗಾಗಿ ಗೌರವಿಸುತ್ತಾನೆ. ಆ ತಾಯಿಯಲ್ಲಿನ ಕಾಯಕ ಮತ್ತು ದಾಸೋಹದ ಪ್ರಜ್ಞೆ ನಮ್ಮೆಲ್ಲರಿಗೂ ಮಾದರಿಯಾಗಬೇಕು. (ಇದು ಹೆಂಡತಿಯಿಂದ ಕೇಳಿದ್ದು, ಮೂಲ ಕೃತಿ ಯಾವುದೆಂದು ಗೊತ್ತಿಲ್ಲ)

ಕಳೆದೆರಡು ವರ್ಷಗಳಿಂದ ಜಗತ್ತು ಕರೋನಾ ಮಹಾಮಾರಿಯಿಂದಾಗಿ ತಲ್ಲಣಿಸಿ ಹೋಗಿದೆ, ಜನರ ಜೀವನ ಅಲ್ಲೋಲ ಕಲ್ಲೋಲವಾಗಿದೆ. ಆರ್ಥಿಕತೆ, ಸಾಮಾಜಿಕ ಜೀವನ ಹಳಿತಪ್ಪಿದೆ. ಹೊತ್ತಿದ ಚಿತೆಯ ಬೆಂಕಿ ಆರಲೇ ಇಲ್ಲ ಮನೆಗೆ ಒಬ್ಬರೋ ಇಬ್ಬರೋ ಮಹಾಮಾರಿಗೆ ಬಲಿಯಾದರು. ಗಂಡನ ಕಳೆದುಕೊಂಡು ವಿಧವೆಯಾದವರು ಅನೇಕ, ಮಕ್ಕಳನ್ನು ಕಳೆದುಕೊಂಡ ಅಸಹಾಯಕರಾದ ವ್ರದ್ಧರು ಅನೆಕಾನೇಕ, ತಂದೆ ತಾಯಿಗಳನ್ನ ಕಳೆದುಕೊಂಡು ತಬ್ಬಲಿಗಳಾದ ಮಕ್ಕಳು ಸಾವಿರಾರು. ಅನ್ನ, ಅರಿವೆ, ಔಷದಿಗಳು ಸಿಗದೆ ಮಮ್ಮಲ ಮರುಗುತ್ತಿರುವರ ಸಂಖ್ಯೆ ಅಂತೂ ಹೇಳತೀರದು. ಇದು ನಮಗೆ ಬಂದೊದಗಿದ ಅತ್ಯಂತ ಸಂಧಿಗ್ಧ ಪರಿಸ್ಥಿತಿ. ಸಾಲದ್ದಕ್ಕೆ ಅತೀವ್ರಷ್ಟಿಯಿಂದಾಗಿ ತಲೆಯ ಮೇಲಿನ ಸೂರನ್ನು ಕೂಡ ಕಳೆದುಕೊಂಡು ಜನ ನಿರಾಶ್ರಿತರಾಗಿದ್ದಾರೆ. ಈ ಕೂಗಿಗೆ ನಾವು ಹೇಗೆ ಕಿವಿಗೊಡುತ್ತೆವೆ ಮತ್ತು ಜವಾಬ್ಧಾರಿಯನ್ನ ಹೇಗೆ ನಿಭಾಯಿಸುತ್ತೆವೆ ಎನ್ನುವುದು ಬಹಳ ಮುಖ್ಯ.

ನಮ್ಮ ಬಹುತೇಕರ ಮನೋಸ್ತಿಥಿ ಆ ಮೊದಲ ಕಥೆಯಲ್ಲಿ “ಇದರಿಂದ ಯಾರಿಗೇನು ಪ್ರಯೋಜನ, ಏನು ವ್ಯತ್ಯಾಸವಾಗುವುದು” ಎಂದು ಕೇಳುವವನಂತೆ “ಕಿಸಿಕೋ ಕ್ಯಾ ಫರಕ ಪಡ್ತಾ ಹೆ, ಸಬ್ ಕುಚ ಚಲ್ತಾ ಹೆ ಯಹಾ” ಎನ್ನುವ ಬೇಜವಾಬ್ದಾರಿ ಪ್ರವೃತ್ತಿಯುಳ್ಳವರೆ. ಹಾಗೂ ಎರಡನೆ ಕಥೆಯಲ್ಲಿನ ವಿರೋಧಾಬಾಸದ ಸಂಧಿಗ್ಧ ಪರಿಸ್ಥಿತಿ ಬಂದಲ್ಲಿ ಸೋಲುವವರೆ. ಒಂದೋ ಈ ಕಡೆ, ಇಲ್ಲಾ ಆ ಕಡೆ ಎನ್ನುವ ಎರಡು ಧ್ರುವಗಳ ಅಂತರದಲ್ಲಿರುವ ಮನಸ್ಥಿತಿಗಳು ಆದರೆ ಆ ಎರಡು ಧ್ರುವಗಳ ಮಧ್ಯೆ “ವಿನ್ನ್-ವಿನ್ನ್” ಎನ್ನುವ ವಿಕಲ್ಪದ ಅರಿವು ಕೂಡ ನಮ್ಮಲ್ಲಿಲ್ಲ. ಹೀಗಾಗಿ ನಾವು ಸಾಮಾಜಿಕ ಜವಾಬ್ದಾರಿಗಳನ್ನ ನಿಭಾಯಿಸುವಲ್ಲಿ ನಿರಂತರ ಸೋಲುತ್ತಿದ್ದೇವೆ.

ಎಲ್ಲೋ ಇರುವ ಕಾಣದ ದೇವರ ಹೆಸರಲ್ಲಿ ಮನುಷ್ಯ ತನ್ನನ್ನ ಮತ್ತು ತನ್ನವರನ್ನ ಬಲಿಕೊಡುವುದು, ಎಲ್ಲೋ ಇರುವ ಕಾಣದ ದೇವರ ಹೆಸರಲ್ಲಿ ಇದು ಧರ್ಮಯುದ್ಧವೆಂದು ಸಾರಿ ಸಾವಿರಾರು ಮನುಷ್ಯರ ರಕ್ತದ ಕಾಲುವೆ ಹರಸುವುದು, ಎಲ್ಲೋ ಇರುವ ಕಾಣದ ದೇವರಿಗೆ ೨೦ ಕೋಟಿ ಚಿನ್ನದ ಬಟ್ಟಲುಗಳನ್ನ, ೪೫ ಕೋಟಿ ವಜ್ರದ ಕೀರಿಟನ್ನ, ಕಲ್ಲಿನ ಗೋಪುರಗಳಿಗೆ ಚಿನ್ನದ ತಗಡು ಬಡೆಸುವ ಕಾರ್ಯಗಳು ಕೊಂಚಕಾಲ ವಿಶ್ರಾಂತಿ ಪಡೆಯಲಿ, ಬುದ್ಧನ ಸಂದೇಶದಂತೆ ಎಲ್ಲೋ ಇರುವ ದೇವರ ಬದಲಾಗಿ ಇಲ್ಲೇ ಇರುವ ಮನುಷ್ಯ ದೇವರನೊಮ್ಮೆ ಕಣ್ಣೆತ್ತಿ ನೋಡಿ.

ಸ್ಟಾರಫ಼ಿಶ್ ಗಳಿಗಾಗಿ ಮಿಡಿದ ಹ್ರದಯದಂತೆ, ಆ ಕಥೆಯಲ್ಲಿ ಬರುವ ತಾಯಿಯ ಕಾಯಕ, ದಾಸೋಹದ ಪ್ರಜ್ಞೆಯುಳ್ಳವರಾಗಿ ನಾವಿರುವ ಸಮಾಜದ ಮನುಷ್ಯರ ಬಾಳಲ್ಲೂ ಅಂತಹ ಸಣ್ಣದೊಂದು ವ್ಯತ್ಯಾಸ ಮಾಡಿದ್ದೆವೆಯೇ?. ಸಣ್ಣದೋ ದೊಡ್ಡದೋ ಪ್ರಶ್ನೆಯಲ್ಲ ಕನಿಷ್ಠ ಪ್ರಯತ್ನಿಸಿದ್ದೆವೆಯೇ?. ಒಂದೊಮ್ಮೆ ೧೩೦ ಕೋಟಿ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ಇಂತಹ ಒಂದು ಸಣ್ಣ ವ್ಯತ್ಯಾಸವನ್ನು ಮಾಡಿದ್ದೇ ಆದಲ್ಲಿ ಅದೊಂದು ದೊಡ್ಡ ಆನೆಕಟ್ಟು ಆಗಲಾರದೆ?. ನೆನಪಿರಲಿ, ಸಾಲು ಇರುವೆ ಬಲಿಷ್ಠ ಆನೆಯನ್ನು ಕೆಳಗುರುಳಿಸಬಹುದು.

ಜನ್ಮ ಜನ್ಮಕ್ಕೆ ಹೋಗಲೀಯದೆ,
`ಸೋಹಂ ಎಂದೆನಿಸದೆ `ದಾಸೋಹಂ ಎಂದೆನಿಸಯ್ಯಾ.
ಲಿಂಗಜಂಗಮಪ್ರಸಾದದ #ನಿಲವ ತೋರಿ ಬದುಕಿಸಯ್ಯಾ,
ಕೂಡಲಸಂಗಮದೇವಾ, ನಿಮ್ಮ ಧರ್ಮ.

✒ಪ್ರಕಾಶ ಉಳ್ಳೇಗಡ್ಡಿ
ಮಸ್ಕತ್ತ-ಒಮಾನ್

ಶರಣು ಶರಣಾರ್ಥಿಗಳು.
🌹🙏🥀🌹🥀🙏🌹

About Shivanand

Admin : Lingayat Kranti Monthly news paper 8884000008 [email protected]

Check Also

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ …

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ …

ನೇಗಿನಹಾಳ ಗ್ರಾಮದ ಸಮಸ್ಯೆಗಳ ಆಲಿಸಿದ ತಹಶಿಲ್ದಾರ್ ಬಸವರಾಜ ನಾಗರಾಳ್

ಗ್ರಾಮದ ಜನತಾ ಕಾಲನಿಯಲ್ಲಿ ನೀರು ನುಗ್ಗಿದ್ದರಿಂದ ಮನೆಗಳು ಬಿದ್ಧಿರುವ ಸ್ಥಳಗಳಿಗೆ ಬೇಟಿ ನೀಡಿದರು. ನೇಗಿನಹಾಳ (ಬೆಳಗಾವಿ) : ಗ್ರಾಮದಲ್ಲಿನ ಸಮಸ್ಯೆಗಳನ್ನು …

ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ

ಲಿಂಗಾಯತ ಕ್ರಾಂತಿ: ಎಂ.ಎಂ.ಕಲ್ಬುರ್ಗೀ ಸರ್ ಬರೆದಂತ ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ ಎನ್ನುವ ಶೀರ್ಷಿಕೆಯನ್ನು ಇಲ್ಲಿ ಬಳಸುತ್ತಿರುವೆ.ಕಲ್ಬುರ್ಗಿ ಸರ್ …

ವಚನ ಸಾಹಿತ್ಯ ಬೆಳಕಿಗೆ ತಂದವರು ಡಾ.ಫ.ಗು.ಹಳಕಟ್ಟಿಯವರು: ಡಾ. ಎಂ ಬಿ ಪಾಟೀಲ

  ವಿಜಯಪುರ: ಹರಿದು ಹಂಚಿ ಹೋಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಪ್ರಕಟಿಸಿ, ಪ್ರಚಾರ ಮಾಡಿ, ಬೆಳಕಿಗೆ ತಂದವರು ವಚನಪಿತಾಮಹರೆಂದೇ ಖ್ಯಾತರಾದವರು …

ಅಂಬೇಡ್ಕರ್ ತತ್ವಗಳನ್ನು ಅರಿತಾಗ ಸಂವಿಧಾನದ ಆಶಯಗಳ ಅನುಷ್ಠಾನ ಸಾಧ್ಯ: ನಿಜಗುಣಾನಂದ ಶ್ರೀ

  ಎಂ.ಕೆ.ಹುಬ್ಬಳ್ಳಿ: ಅಂಬೇಡ್ಕರ್ ಅವರ ತತ್ವಗಳನ್ನು ಕೇವಲ ಕಾನೂನು ನ್ಯಾಯಾಂಗದ ಚೌಕಟ್ಟಿನಲ್ಲಿ ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ. ಆದರೆ ಹೃದಯಾಳದಲ್ಲಿ ಅವರ …

ಕ್ರಿ.ಪೂ. 200 ವರ್ಷಗಳ ಹಿಂದೆ…

  ಲಿಂಗಾಯತ ಕ್ರಾಂತಿ: ಕ್ರಿ.ಪೂ. 200 ವರ್ಷಗಳ ಹಿಂದೆ ಅಲೆಕ್ಸಾಂಡರ್ ದಿ ಗ್ರೇಟ್ ಗ್ರೀಕ್ ದೇಶದ ಚಕ್ರವರ್ತಿಯಾಗಿದ್ದ. ಆತ ತುಂಬಾ …

ಪ್ರಕೃತಿಯ ಆರಾಧಕಳು ಅಕ್ಕ

  ಲಿಂಗಾಯತ ಕ್ರಾಂತಿ: ಪ್ರಕೃತಿಯ ಆರಾಧನೆ ಎಂದರೆ ಸತ್ಯ ಮತ್ತು ಸೌಂದರ್ಯದ ಅನುಸಂಧಾನದ ಪ್ರಕ್ರಿಯೆ. ಪಂಚಭೂತಗಳಿಂದ ಆವೃತವಾದ ಈ ಪ್ರಕೃತಿಯು …

‘ಲಿಂಗಾಯತ’ ಚಳವಳಿಗೆ ಕಿಚ್ಚು ಹಚ್ಚಿದವರೇ ಲಿಂಗಾನಂದ ಶ್ರೀ!

  ಲಿಂಗಾಯತ ಕ್ರಾಂತಿ:  ಆ ದುರ್ದಿನಗಳಲ್ಲಿ ಬಸವಾದಿ ಶರಣರನ್ನು ಹಳ್ಳಿ ಹಳ್ಳಿಗೂ ತಲುಪಿಸಿ, ಸಾಮಾನ್ಯರಲ್ಲಿ ‘ಲಿಂಗಾಯತ’ದ ಅರಿವು ಮೂಡಿಸಿದ್ದು ಲಿಂಗಾನಂದ …

ನಿಜಗುಣಪ್ರಭು ತೋಂಟದಾರ್ಯ ಶ್ರೀಗಳಿಗೆ ಇಂದು ಪ್ರಶಸ್ತಿ ಪ್ರದಾನ

  ಚನ್ನಮ್ಮನ ಕಿತ್ತೂರು: ಮೂರು ದಶಕಗಳಿಂದ ನಾನಾ ದೇಶಗಳನ್ನು ಸುತ್ತಿ ಬಸವ ತತ್ವಗಳನ್ನು ಬಿತ್ತುತ್ತಿರುವ ನಿಷ್ಕಲ ಮಂಟಪದ ಪೂಜ್ಯ ಶ್ರೀ …

ವಿಧಾನಸೌಧದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಸಿಎಂ ಸಿದ್ದತೆ

  ಬೆಂಗಳೂರು: ಲಿಂಗಾಯತ ಧರ್ಮೀಯರ ಬಹುದಿನಗಳ ಬೇಡಿಕೆಗೆ ಈಗ ಕಾಲ ಕೂಡಿಬಂದಿದೆ. ಹೌದು.! ವಿಧಾನಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ …

ಬ್ರಾಹ್ಮಣ್ಯ ಕೇವಲ 15% ರಷ್ಟಿರುವ ಸವರ್ಣೀಯರಲ್ಲಷ್ಟೇ ಆಚರಿಸಲ್ಪಡುತ್ತದೆಯೇ..?

ಬ್ರಾಹ್ಮಣ್ಯದ ಬಗ್ಗೆ ಇತ್ತೀಚೆಗೆ ಎಲ್ಲೆಡೆ ಬಹಳ ಚರ್ಚೆ ಆಗುತ್ತಿದೆ. ಹಾಗಾಗಿ ನನ್ನ ಸೀಮಿತ ಅರಿವಿನ ಪರಿಧಿಯಲ್ಲಿ ನನ್ನ ಅಭಿಪ್ರಾಯ ಹಂಚಿಕೊಳ್ಳಲು …

ಲಿಂಗಾಯತರಿಗೆ ಬೇಕಿರುವುದು ಬೆಲ್ಲದ್ ಅಲ್ಲ; ಎಂ.ಬಿ.ಪಾಟೀಲರಂತಹ ಸಕ್ಕರೆ!

  ಹೌದು. ಲಿಂಗಾಯತರ ಮೇಲೆ ಯಾರನ್ನೋ ತಂದು ಹೇರಬೇಡಿ. ಪರ್ಯಾಯ ನಾಯಕನನ್ನು ಹುಡುಕುವ ಮತ್ತು ಅವರ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ …

ರವಿಯೊಳಡಗಿದ ಪ್ರತಿಬಿಂಬದಂತೆ

  ಲಿಂಗಾಯತ ಕ್ರಾಂತಿ: 12 ನೇ ಶತಮಾನದ ಶರಣೆಯರಲ್ಲಿ ಆಧ್ಯಾತ್ಮಿಕ ಪಥವನ್ನು ಮುಟ್ಟಿದ ವಿಶಿಷ್ಟ ಶರಣೆ ಮುಕ್ತಾಯಕ್ಕ. ಶರಣೆ ಎನ್ನುವ …

ವೈಚಾರಿಕ ಸಾಹಿತಿ ಡಾ.ಸಿದ್ದಲಿಂಗಯ್ಯ.

ಲಿಂಗಾಯತ ಕ್ರಾಂತಿ: ಕವಿ, ಸಾಹಿತಿ, ನಾಟಕಕಾರ, ಸಂಶೋಧಕ, ವಾಗ್ಮಿ, ಬಹುಮುಖ ಪ್ರತಿಭೆ, ಶೋಷಿತರ ಸಂವೇದನೆಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟ …

Leave a Reply

Your email address will not be published. Required fields are marked *