Home / featured / ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಸಾಹಿತಿ ಮತ್ತು ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳ ಒಡನಾಡಿ ಶಿಷ್ಯರಾದ ಸಿದ್ದು ಯಾಪಲಪರವಿ ಅವರು ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ ಸಾಹಿತ್ಯಕ ಐತಿಹಾಸಿಕ ದಾಖಲೆಯಾಗಿದೆ. ಅಜ್ಜಾ ಅವರ ವೈಯಕ್ತಿಕ ಬದುಕಿನ ಅನೇಕ ಮರೆತು ಹೋದ ಘಟನೆಗಳನ್ನು ಆಪ್ತವಾಗಿ,ಸುಲಲಿತವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಹೊಸತು ಪತ್ರಿಕೆಯ ಸಂಪಾದಕ,ಜನಪರ ಹೋರಾಟಗಾರ ಡಾ.ಸಿದ್ಧನಗೌಡ ಪಾಟೀಲ ಅಭಿಪ್ರಾಯಪಟ್ಟರು. ಅವರು ಗದಗ ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ೨೫೫೨ನೇ ಶಿವಾನುಭವ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಡಾ.ಎಂ.ಎಂ.ಕಲಬುರ್ಗಿಯವರ ಸ್ಮರಣೆ ಹಾಗೂ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡುತ್ತಿದ್ದರು. ಕಲಬುರ್ಗಿಯವರ ಹುತಾತ್ಮ ದಿನಾಚರಣೆ ದಿನ ಅವರಿಗೆ ಅರ್ಪಿತವಾದ ಕೃತಿ ಬಿಡುಗಡೆ ಆಗುತ್ತಿರುವುದು ಯೋಗಾಯೋಗ ಎಂದರು. ಕಲಬುರ್ಗಿಯವರು ವೈದಿಕತೆಯನ್ನು ಸಂಶೋಧನಾತ್ಮಕವಾಗಿ ಖಂಡಿಸಿದ್ದರು.ಸಮಾಜ ಅದನ್ನು ಅರಗಿಸಿಕೊಳ್ಳಲು ವಿಫಲವಾಯಿತು ಎಂದರು.ತೋಂಟದಾರ್ಯ ಸ್ವಾಮಿಗಳ ಹೋರಾಟದ ಪ್ರತಿಫಲ ಇಂದು ನಾಡಿಗೆ ಲಭಿಸಿದೆ.ಅಂತಹ ಅನೇಕ ಘಟನೆಗಳನ್ನು ಲೇಖಕ ಸಿದ್ದು ಅದ್ಭುತವಾಗಿ ನಿರೂಪಿಸಿದ್ದಾರೆ ಎಂದರು.

ಪುಸ್ತಕ ಪ್ರಕಟಿಸಿದ ಸಂಡೂರು ವಿರಕ್ತ ಮಠದ ಪರಮಪೂಜ್ಯ ಪ್ರಭುಸ್ವಾಮಿಗಳು ಮಾತನಾಡಿ,ತೋಂಟದಾರ್ಯ ಜಗದ್ಗುರುಗಳ ಕುರಿತು ಮೂವತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿರುವುದು ಅವರ ಮೇರು ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.ಸಿದ್ದು ಯಾಪಲಪರವಿ ಅವರು ತುಂಬಾ ಮನೋಜ್ಞವಾಗಿ ಘಟನೆಗಳನ್ನು ದಾಖಲಿಸಿದ್ದಾರೆ.ಸಣ್ಣಪುಟ್ಟ ಸಂಗತಿಗಳನ್ನು ರಸವತ್ತಾಗಿ ವಿವರಿಸುವ ಆಪ್ತತೆ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದೆ ಎಂದರು. ಕಡಿಮೆ ಕಾಲಾವಧಿಯಲ್ಲಿ ಕೃತಿ ರಚಿಸಿದ ಲೇಖಕರು ಮತ್ತು ಗ್ರಂಥ ದಾಸೋಹಿಗಳನ್ನು ಅಭಿನಂದಿಸಿದರು.

ಲೇಖಕ ಸಿದ್ದು ಯಾಪಲಪರವಿ ಮಾತನಾಡಿ ಅಜ್ಜಾ ಅವರ ಪ್ರಭಾವ ಮತ್ತು ಸಂಸ್ಕಾರದ ಪ್ರತಿಫಲ ಕೃತಿ ರಚನೆಗೆ ಪ್ರೇರಣೆ ನೀಡಿದ್ದನ್ನು ಮೆಲುಕು ಹಾಕಿ, ಇಂದು ಜಾತ್ಯತೀತ ತೋಂಟದಾರ್ಯ ಪರಂಪರೆಯನ್ನು ಉಳಿಸುವ ಜವಾಬ್ದಾರಿ ಅವರ ಶಿಷ್ಯರ ಮೇಲಿದೆ,ಅವರು ನೀಡಿದ ಸಂಸ್ಕಾರದ ಲಾಭ ಪಡೆದವರು ಅವರೊಂದಿಗೆ ಇದ್ದ ಒಡನಾಟವನ್ನು ಪ್ರಾಮಾಣಿಕವಾಗಿ ದಾಖಲಿಸುವ ಅಗತ್ಯವಿದೆ.ಬಸವಾದಿ ಶರಣರ ಮತ್ತು ರಾಮಕೃಷ್ಣ ಮಠದ ಪರಂಪರೆಯಂತೆ ತೋಂಟದಾರ್ಯ ಪರಂಪರೆ ಉಳಿಯುವ ಕಾರ್ಯವಾಗಬೇಕು.ಪುಸ್ತಕಗಳು ಜಗತ್ತನ್ನು ಸದಾ ಆಳುತ್ತವೆ ಎಂಬ ಪೂಜ್ಯರ ಮಾತನ್ನು ಪುಸ್ತಕಗಳ ಮೂಲಕ ಶಾಶ್ವತಗೊಳಿಸಬೇಕು ಎಂದರು.

ಸಾನಿಧ್ಯವಹಿಸಿದ್ದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಕಲಬುರ್ಗಿಯವರ ಮತ್ತು ತೋಂಟದಾರ್ಯ ಪೂಜ್ಯರ ಅವಿನಾಭಾವ ಸಂಬಂಧವನ್ನು ಸ್ಮರಿಸಿಕೊಂಡರು.ಮಠದ ಪರಿಸರದಲ್ಲಿ ಬೆಳೆದ ಸಿದ್ದು ಯಾಪಲಪರವಿ ಅವರು ಅಜ್ಜಾ ಅವರ ವ್ಯಕ್ತಿತ್ವವನ್ನು ಸಹಜವಾಗಿ ನಿರೂಪಿಸಿದ್ದಾರೆ.ಇತಿಹಾಸ ಪುರುಷರನ್ನು ವಾಸ್ತವವಾಗಿ ಚಿತ್ರಿಸಬೇಕು,ಪುರಾಣದ ಪವಾಡ ಪುರುಷರನ್ನಾಗಿ ಮಾಡಬಾರದು. ಇತಿಹಾಸವನ್ನು ಸಾಹಿತ್ಯ ಭಾಷೆಯಲ್ಲಿ,ಓದಿಸಿಕೊಂಡು ಹೋಗುವ ರೀತಿಯಲ್ಲಿ ಬರೆದಿರುವುದು ವಿಶೇಷವಾಗಿದೆ. ಸರಳ, ಸುಲಲಿತ ಭಾಷೆ ಮತ್ತು ಪ್ರಾಮಾಣಿಕ ಅಭಿವ್ಯಕ್ತಿ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿಯ ವಿಶೇಷ ಎಂದರು.ಇಂದಿನ ಕಾರ್ಯಕ್ರಮ ಪ್ರಗತಿಪರರ ಸಮಾಗಮವಾಗಿದೆ.ಡಾ.ಕಲಬುರ್ಗಿಯವರ ಹುತಾತ್ಮ ದಿನದಂದು ಅವರ ಶಿಷ್ಯರಾದ ಡಾ.ಸಿದ್ಧನಗೌಡ ಪಾಟೀಲ, ಪ್ರೊ.ಸಿದ್ದು ಯಾಪಲಪರವಿ ಹಾಗೂ ಸಂಡೂರು ಪ್ರಭುಸ್ವಾಮಿಗಳು ಉತ್ತಮ ಕೃತಿಯ ಮೂಲಕ ಸಾರ್ಥಕಗೊಳಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಗ್ರಂಥ ದಾಸೋಹ ನೀಡಿದ ಕಾರಟಗಿಯ ಉದ್ಯಮಿ ವೀರೇಶಪ್ಪ ಚಿನಿವಾಲ ಅವರನ್ನು ಸನ್ಮಾನಿಸಲಾಯಿತು.

ವೇದಿಕೆ ಮೇಲೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಕೆ.ರವೀಂದ್ರನಾಥ ಹಾಗೂ ನಿವೃತ್ತ ಪೋಲೀಸ್ ಅಧಿಕಾರಿ ಶಿವರಾಯಪ್ಪ ಲಗಳಿ‌ ಉಪಸ್ಥಿತರಿದ್ದರು.ಧರ್ಮ ಗ್ರಂಥ ಪಯಣವನ್ನು ವೈಶಾಲಿ ಅಗನೂರು ಹಾಗೂ ವಚನ ಚಿಂತನೆಯನ್ನು ಜಯಶ್ರೀ ಸುರಕೋಡ ನೆರವೇರಿಸಿದರು‌.ವಚನ ಸಂಗೀತ ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಇವರಿಂದ ಜರುಗಿತು.ಬಾಹುಬಲಿ ಜೈನರ ನಿರೂಪಿಸಿದರು.ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದ ಪಾಟೀಲ ಸ್ವಾಗತಿಸಿದರು. ಸಂಘದ ಅಧ್ಯಕ್ಷರಾದ ದಾನಯ್ಯ ಗಣಾಚಾರಿ,ಮುರುಘರಾಜೇಂದ್ರ ಬಡ್ನಿ, ರತ್ನಕ್ಕ ಪಾಟೀಲ,ವೀರೇಶ ಬುಳ್ಳಾ,ಶಿವಬಸಪ್ಪ ಯಂಡಿಗೇರಿ,ಸೋಮಶೇಖರ ಪುರಾಣಿಕ,ಮಲ್ಲಿಕಾರ್ಜುನ ಖಂಡೆಮ್ಮನವರ, ಶಿವನಗೌಡ ಗೌಡರ, ಬಸವರಾಜ ಲಗಳಿ,ವಿನೋದ ಲಗಳಿ ಹಾಗೂ ಪೂಜ್ಯರ ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿ : ರವೀಂದ್ರ ಹೊನವಾಡ

About Shivanand

Admin : Lingayat Kranti Monthly news paper 8884000008 [email protected]

Check Also

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ …

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ …

ನೇಗಿನಹಾಳ ಗ್ರಾಮದ ಸಮಸ್ಯೆಗಳ ಆಲಿಸಿದ ತಹಶಿಲ್ದಾರ್ ಬಸವರಾಜ ನಾಗರಾಳ್

ಗ್ರಾಮದ ಜನತಾ ಕಾಲನಿಯಲ್ಲಿ ನೀರು ನುಗ್ಗಿದ್ದರಿಂದ ಮನೆಗಳು ಬಿದ್ಧಿರುವ ಸ್ಥಳಗಳಿಗೆ ಬೇಟಿ ನೀಡಿದರು. ನೇಗಿನಹಾಳ (ಬೆಳಗಾವಿ) : ಗ್ರಾಮದಲ್ಲಿನ ಸಮಸ್ಯೆಗಳನ್ನು …

ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ

ಲಿಂಗಾಯತ ಕ್ರಾಂತಿ: ಎಂ.ಎಂ.ಕಲ್ಬುರ್ಗೀ ಸರ್ ಬರೆದಂತ ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ ಎನ್ನುವ ಶೀರ್ಷಿಕೆಯನ್ನು ಇಲ್ಲಿ ಬಳಸುತ್ತಿರುವೆ.ಕಲ್ಬುರ್ಗಿ ಸರ್ …

ವಚನ ಸಾಹಿತ್ಯ ಬೆಳಕಿಗೆ ತಂದವರು ಡಾ.ಫ.ಗು.ಹಳಕಟ್ಟಿಯವರು: ಡಾ. ಎಂ ಬಿ ಪಾಟೀಲ

  ವಿಜಯಪುರ: ಹರಿದು ಹಂಚಿ ಹೋಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಪ್ರಕಟಿಸಿ, ಪ್ರಚಾರ ಮಾಡಿ, ಬೆಳಕಿಗೆ ತಂದವರು ವಚನಪಿತಾಮಹರೆಂದೇ ಖ್ಯಾತರಾದವರು …

ಅಂಬೇಡ್ಕರ್ ತತ್ವಗಳನ್ನು ಅರಿತಾಗ ಸಂವಿಧಾನದ ಆಶಯಗಳ ಅನುಷ್ಠಾನ ಸಾಧ್ಯ: ನಿಜಗುಣಾನಂದ ಶ್ರೀ

  ಎಂ.ಕೆ.ಹುಬ್ಬಳ್ಳಿ: ಅಂಬೇಡ್ಕರ್ ಅವರ ತತ್ವಗಳನ್ನು ಕೇವಲ ಕಾನೂನು ನ್ಯಾಯಾಂಗದ ಚೌಕಟ್ಟಿನಲ್ಲಿ ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ. ಆದರೆ ಹೃದಯಾಳದಲ್ಲಿ ಅವರ …

ಕ್ರಿ.ಪೂ. 200 ವರ್ಷಗಳ ಹಿಂದೆ…

  ಲಿಂಗಾಯತ ಕ್ರಾಂತಿ: ಕ್ರಿ.ಪೂ. 200 ವರ್ಷಗಳ ಹಿಂದೆ ಅಲೆಕ್ಸಾಂಡರ್ ದಿ ಗ್ರೇಟ್ ಗ್ರೀಕ್ ದೇಶದ ಚಕ್ರವರ್ತಿಯಾಗಿದ್ದ. ಆತ ತುಂಬಾ …

ಪ್ರಕೃತಿಯ ಆರಾಧಕಳು ಅಕ್ಕ

  ಲಿಂಗಾಯತ ಕ್ರಾಂತಿ: ಪ್ರಕೃತಿಯ ಆರಾಧನೆ ಎಂದರೆ ಸತ್ಯ ಮತ್ತು ಸೌಂದರ್ಯದ ಅನುಸಂಧಾನದ ಪ್ರಕ್ರಿಯೆ. ಪಂಚಭೂತಗಳಿಂದ ಆವೃತವಾದ ಈ ಪ್ರಕೃತಿಯು …

‘ಲಿಂಗಾಯತ’ ಚಳವಳಿಗೆ ಕಿಚ್ಚು ಹಚ್ಚಿದವರೇ ಲಿಂಗಾನಂದ ಶ್ರೀ!

  ಲಿಂಗಾಯತ ಕ್ರಾಂತಿ:  ಆ ದುರ್ದಿನಗಳಲ್ಲಿ ಬಸವಾದಿ ಶರಣರನ್ನು ಹಳ್ಳಿ ಹಳ್ಳಿಗೂ ತಲುಪಿಸಿ, ಸಾಮಾನ್ಯರಲ್ಲಿ ‘ಲಿಂಗಾಯತ’ದ ಅರಿವು ಮೂಡಿಸಿದ್ದು ಲಿಂಗಾನಂದ …

ನಿಜಗುಣಪ್ರಭು ತೋಂಟದಾರ್ಯ ಶ್ರೀಗಳಿಗೆ ಇಂದು ಪ್ರಶಸ್ತಿ ಪ್ರದಾನ

  ಚನ್ನಮ್ಮನ ಕಿತ್ತೂರು: ಮೂರು ದಶಕಗಳಿಂದ ನಾನಾ ದೇಶಗಳನ್ನು ಸುತ್ತಿ ಬಸವ ತತ್ವಗಳನ್ನು ಬಿತ್ತುತ್ತಿರುವ ನಿಷ್ಕಲ ಮಂಟಪದ ಪೂಜ್ಯ ಶ್ರೀ …

ವಿಧಾನಸೌಧದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಸಿಎಂ ಸಿದ್ದತೆ

  ಬೆಂಗಳೂರು: ಲಿಂಗಾಯತ ಧರ್ಮೀಯರ ಬಹುದಿನಗಳ ಬೇಡಿಕೆಗೆ ಈಗ ಕಾಲ ಕೂಡಿಬಂದಿದೆ. ಹೌದು.! ವಿಧಾನಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ …

ಬ್ರಾಹ್ಮಣ್ಯ ಕೇವಲ 15% ರಷ್ಟಿರುವ ಸವರ್ಣೀಯರಲ್ಲಷ್ಟೇ ಆಚರಿಸಲ್ಪಡುತ್ತದೆಯೇ..?

ಬ್ರಾಹ್ಮಣ್ಯದ ಬಗ್ಗೆ ಇತ್ತೀಚೆಗೆ ಎಲ್ಲೆಡೆ ಬಹಳ ಚರ್ಚೆ ಆಗುತ್ತಿದೆ. ಹಾಗಾಗಿ ನನ್ನ ಸೀಮಿತ ಅರಿವಿನ ಪರಿಧಿಯಲ್ಲಿ ನನ್ನ ಅಭಿಪ್ರಾಯ ಹಂಚಿಕೊಳ್ಳಲು …

ಲಿಂಗಾಯತರಿಗೆ ಬೇಕಿರುವುದು ಬೆಲ್ಲದ್ ಅಲ್ಲ; ಎಂ.ಬಿ.ಪಾಟೀಲರಂತಹ ಸಕ್ಕರೆ!

  ಹೌದು. ಲಿಂಗಾಯತರ ಮೇಲೆ ಯಾರನ್ನೋ ತಂದು ಹೇರಬೇಡಿ. ಪರ್ಯಾಯ ನಾಯಕನನ್ನು ಹುಡುಕುವ ಮತ್ತು ಅವರ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ …

ರವಿಯೊಳಡಗಿದ ಪ್ರತಿಬಿಂಬದಂತೆ

  ಲಿಂಗಾಯತ ಕ್ರಾಂತಿ: 12 ನೇ ಶತಮಾನದ ಶರಣೆಯರಲ್ಲಿ ಆಧ್ಯಾತ್ಮಿಕ ಪಥವನ್ನು ಮುಟ್ಟಿದ ವಿಶಿಷ್ಟ ಶರಣೆ ಮುಕ್ತಾಯಕ್ಕ. ಶರಣೆ ಎನ್ನುವ …

ವೈಚಾರಿಕ ಸಾಹಿತಿ ಡಾ.ಸಿದ್ದಲಿಂಗಯ್ಯ.

ಲಿಂಗಾಯತ ಕ್ರಾಂತಿ: ಕವಿ, ಸಾಹಿತಿ, ನಾಟಕಕಾರ, ಸಂಶೋಧಕ, ವಾಗ್ಮಿ, ಬಹುಮುಖ ಪ್ರತಿಭೆ, ಶೋಷಿತರ ಸಂವೇದನೆಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟ …

Leave a Reply

Your email address will not be published. Required fields are marked *