Home / featured / ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ

ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು ಎನ್ನುವ ಟೀಕೆ ಮಾಡಿದ್ದು ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಶೋಭೆ ತರುವುದಲ್ಲ ಎಂದು ಬರಹಗಾರ, ಲಿಂಗಾಯತ ಹೋರಾಟಗಾರ ಶಿವಕುಮಾರ್ ಉಪ್ಪಿನ ಕಳವಳ ವ್ಯಕ್ತಪಡಿಸಿದ್ದಾರೆ.

ಧರ್ಮ ವಿಭಜನೆ ಮಾಡಿದ್ದಲ್ಲ, ಬಸವಣ್ಣರ ಕೆಲಸವನ್ನು ನಾನು ಮುಂದುವರಿಸಿದ್ದೇನೆ ಎಂದು ಆ ನಿರ್ಧಾರಕ್ಕೆ ಕಾರಣರಾದ ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರೇ ಎಷ್ಟೋ ಸಲ ಸ್ಪಷ್ಟಪಡಿಸಿದ್ದಾರೆ. ಕೆಲ ಕಿಡಿಗೇಡಿತನ, ಅಪ ಪ್ರಚಾರದಿಂದ ತಮ್ಮ ನಿರ್ಧಾರಕ್ಕೆ ಮಸಿ ಬಳಿದು ಜನರ ದಾರಿ ತಪ್ಪಿಸಲಾಯಿತು. ಲಿಂಗಾಯತ ಧರ್ಮ ವಿಭಜನೆ ಮಾಡಿಲ್ಲ. ಅದು ಯಾವತ್ತೋ ಧರ್ಮವಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮೊನ್ನೆಯ ವಿಶ್ವ ವಾಣಿ ಸಂವಾದದಲ್ಲೂ ಇದನ್ನು ಮಾತಾಡಿದ್ದಾರೆ. ಇದೆಲ್ಲ ಗೊತ್ತಿದ್ದೂ ಯಶವಂತರಾಯರು ಎಂ.ಬಿ. ಪಾಟೀಲರನ್ನು ಗುರಿಯಾಗಿಟ್ಟಕೊಂಡು ಹೀಗೆ ಹೇಳಿಕೆ ನೀಡಿದ್ದು ಲಿಂಗಾಯತ ಸಮುದಾಯಕ್ಕೇ ಮಾಡಿದ ಹಾನಿ ಎಂದು ಶಿವಕುಮಾರ್ ಖೇದ ವ್ಯಕ್ತಪಡಿಸಿದ್ದಾರೆ.

ಎಂ.ಬಿ. ಪಾಟೀಲರು ನಿಜ ಲಿಂಗಾಯತ ಧರ್ಮ, ಬಸವಾದಿ ಶರಣರ ಸಾಮಾಜಿಕ, ಸಮಾನತೆಯ ಕ್ರಾಂತಿಯನ್ನು ಮನನ ಮಾಡಿಕೊಂಡು ಅರಿವು ಬಿತ್ತುವ ಕೆಲಸ ಮಾಡಿದ್ದಾರೆ. ಇದರಿಂದ ಲಿಂಗಾಯತದ ಬಗ್ಗೆ ಮಹತ್ತರ ಬೆಳಕು ಚೆಲ್ಲಲು ಅನುವಾಗಿದ್ದಾರೆ. ಹಳೆಯ ಮೈಸೂರು ಭಾಗದಿಂದ ಉತ್ತರ ಕರ್ನಾಟಕದ ಎಲ್ಲೆಡೆ ಇದರಿಂದ ಜಾಗೃತಿ ಮೂಡಿದೆ.

ನಾಡಿನ ಬಸವಾದಿ ಪರಂಪರೆಯ ಮಠಗಳ ಅಗ್ರಗಣ್ಯ ಮಠಾಧೀಶರು, ಪ್ರಗತಿಪರರು ಈ ಚಳವಳಿಗೆ ಕಾರಣರಾಗಿದ್ದರು. ಸಮಾಜವಾದಿ ಹಿನ್ನೆಲೆಯಿಂದ ಬಂದ, ಬಸವಾನುಯಾಯಿ ಸಿದ್ದರಾಮಯ್ಯರು ಇದ್ದಕ್ಕೆ ತಾರ್ಕಿಕ ಅಂತ್ಯ ಕಾಣಿಸಿದ್ದು ಮರೆಯಬಾರದು. ಹಾಗಾಗಿ ತಮ್ಮದೇ ಪಕ್ಷದ ನಾಯಕರ ನಿರ್ಧಾರವನ್ನು ಪ್ರಶ್ನಿಸಿದಂತಾಗಿ, ಲಿಂಗಾಯತದ ಬೆಳವಣಿಗೆಗೆ ಯಶವಂತರಾಯ ಪಾಟೀಲರೇ ಅಡ್ಡಲಾದಂತೆ ಆಗುತ್ತದೆ ಎಂದು ಉಪ್ಪಿನ್ ನೋವಿನಿಂದ ಪ್ರತಿಕ್ರಿಯಿಸಿದ್ದಾರೆ.
ಇಂಡಿಯ ಶಾಸಕರು ಲಿಂಗಾಯತ ಪರಂಪರೆ ಅರಿತು, ಇನ್ನಾದರೂ ಎಲ್ಲ ನಾಯಕರು ಒಟ್ಟಾದರೆ ಬಸವಣ್ಣನವರು ಬಯಸಿದ್ದ ಕಲ್ಯಾಣ ಕರ್ನಾಟಕ ಕಟ್ಟಲು ಸಾಧ್ಯ. ಅದು ಬಿಟ್ಟು ನಮ್ಮವರೇ ನಮ್ಮ ಕಾಲು ಎಳೆದರೆ, ನೋಡಿದವರು ನಗಾಡುತ್ತಾರೆ.

ಇನ್ನು ಎಂ.ಬಿ. ಪಾಟೀಲರು ಬಿಎಲ್‌ಡಿಇ ಶಿಕ್ಷಣ ಸಂಸ್ಥೆಯನ್ನು ಉನ್ನತೀಕರಿಸಿ, ಸಾಮಾನ್ಯನಿಗೂ ಅದರ ಲಾಭ ಸಿಗುವಂತೆ ಮಾಡಿದ್ದಾರೆ. ಬಂಥನಾಳ ಶಿವಯೋಗಿಗಳು ಸೇರಿದಂತೆ ಹಲವರ ಒತ್ತಾಸೆಗೆ ನೀರು ಎರೆಯುತ್ತಿದ್ದಾರೆ. ಕರೋನಾ ಸಂದರ್ಭದಲ್ಲಿ ಇವರು ಮಾಡಿದ ಕಾರ್ಯ ದೇಶದ ಜನರ ಗಮನ ಸೆಳೆದಿದ್ದೇ ಇದಕ್ಕೆ ಸಾಕ್ಷಿ ಎಂದು ಶಿವಕುಮಾರ್ ಹೇಳಿದ್ದು, ಬ್ರಿಟೀಷರ ಕಾಲದಲ್ಲೇ ಲಿಂಗಾಯತ ಧರ್ಮ ಪ್ರತ್ಯೇಕವಾಗಿತ್ತು. ಅದನ್ನು ಯಾರೂ ಒಡೆದಿಲ್ಲ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹಾನಿಯೂ ಆಗಿಲ್ಲ. ಏನೇ ಕೆಲಸ ಮಾಡಿದರೂ ಜನ ಸರಕಾರ ಬದಲಿಸೋದು ಮೊದಲಿನಿಂದಲೂ ಬಂದಿದೆ. ಈಗಲೂ ಅಷ್ಟೇ ಆಗಿದೆ ಎಂದು ತಿಳಿಸಿದ್ದಾರೆ.

About Shivanand

Admin : Lingayat Kranti Monthly news paper 8884000008 [email protected]

Check Also

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ …

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ …

ನೇಗಿನಹಾಳ ಗ್ರಾಮದ ಸಮಸ್ಯೆಗಳ ಆಲಿಸಿದ ತಹಶಿಲ್ದಾರ್ ಬಸವರಾಜ ನಾಗರಾಳ್

ಗ್ರಾಮದ ಜನತಾ ಕಾಲನಿಯಲ್ಲಿ ನೀರು ನುಗ್ಗಿದ್ದರಿಂದ ಮನೆಗಳು ಬಿದ್ಧಿರುವ ಸ್ಥಳಗಳಿಗೆ ಬೇಟಿ ನೀಡಿದರು. ನೇಗಿನಹಾಳ (ಬೆಳಗಾವಿ) : ಗ್ರಾಮದಲ್ಲಿನ ಸಮಸ್ಯೆಗಳನ್ನು …

ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ

ಲಿಂಗಾಯತ ಕ್ರಾಂತಿ: ಎಂ.ಎಂ.ಕಲ್ಬುರ್ಗೀ ಸರ್ ಬರೆದಂತ ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ ಎನ್ನುವ ಶೀರ್ಷಿಕೆಯನ್ನು ಇಲ್ಲಿ ಬಳಸುತ್ತಿರುವೆ.ಕಲ್ಬುರ್ಗಿ ಸರ್ …

ವಚನ ಸಾಹಿತ್ಯ ಬೆಳಕಿಗೆ ತಂದವರು ಡಾ.ಫ.ಗು.ಹಳಕಟ್ಟಿಯವರು: ಡಾ. ಎಂ ಬಿ ಪಾಟೀಲ

  ವಿಜಯಪುರ: ಹರಿದು ಹಂಚಿ ಹೋಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಪ್ರಕಟಿಸಿ, ಪ್ರಚಾರ ಮಾಡಿ, ಬೆಳಕಿಗೆ ತಂದವರು ವಚನಪಿತಾಮಹರೆಂದೇ ಖ್ಯಾತರಾದವರು …

ಅಂಬೇಡ್ಕರ್ ತತ್ವಗಳನ್ನು ಅರಿತಾಗ ಸಂವಿಧಾನದ ಆಶಯಗಳ ಅನುಷ್ಠಾನ ಸಾಧ್ಯ: ನಿಜಗುಣಾನಂದ ಶ್ರೀ

  ಎಂ.ಕೆ.ಹುಬ್ಬಳ್ಳಿ: ಅಂಬೇಡ್ಕರ್ ಅವರ ತತ್ವಗಳನ್ನು ಕೇವಲ ಕಾನೂನು ನ್ಯಾಯಾಂಗದ ಚೌಕಟ್ಟಿನಲ್ಲಿ ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ. ಆದರೆ ಹೃದಯಾಳದಲ್ಲಿ ಅವರ …

ಕ್ರಿ.ಪೂ. 200 ವರ್ಷಗಳ ಹಿಂದೆ…

  ಲಿಂಗಾಯತ ಕ್ರಾಂತಿ: ಕ್ರಿ.ಪೂ. 200 ವರ್ಷಗಳ ಹಿಂದೆ ಅಲೆಕ್ಸಾಂಡರ್ ದಿ ಗ್ರೇಟ್ ಗ್ರೀಕ್ ದೇಶದ ಚಕ್ರವರ್ತಿಯಾಗಿದ್ದ. ಆತ ತುಂಬಾ …

ಪ್ರಕೃತಿಯ ಆರಾಧಕಳು ಅಕ್ಕ

  ಲಿಂಗಾಯತ ಕ್ರಾಂತಿ: ಪ್ರಕೃತಿಯ ಆರಾಧನೆ ಎಂದರೆ ಸತ್ಯ ಮತ್ತು ಸೌಂದರ್ಯದ ಅನುಸಂಧಾನದ ಪ್ರಕ್ರಿಯೆ. ಪಂಚಭೂತಗಳಿಂದ ಆವೃತವಾದ ಈ ಪ್ರಕೃತಿಯು …

‘ಲಿಂಗಾಯತ’ ಚಳವಳಿಗೆ ಕಿಚ್ಚು ಹಚ್ಚಿದವರೇ ಲಿಂಗಾನಂದ ಶ್ರೀ!

  ಲಿಂಗಾಯತ ಕ್ರಾಂತಿ:  ಆ ದುರ್ದಿನಗಳಲ್ಲಿ ಬಸವಾದಿ ಶರಣರನ್ನು ಹಳ್ಳಿ ಹಳ್ಳಿಗೂ ತಲುಪಿಸಿ, ಸಾಮಾನ್ಯರಲ್ಲಿ ‘ಲಿಂಗಾಯತ’ದ ಅರಿವು ಮೂಡಿಸಿದ್ದು ಲಿಂಗಾನಂದ …

ನಿಜಗುಣಪ್ರಭು ತೋಂಟದಾರ್ಯ ಶ್ರೀಗಳಿಗೆ ಇಂದು ಪ್ರಶಸ್ತಿ ಪ್ರದಾನ

  ಚನ್ನಮ್ಮನ ಕಿತ್ತೂರು: ಮೂರು ದಶಕಗಳಿಂದ ನಾನಾ ದೇಶಗಳನ್ನು ಸುತ್ತಿ ಬಸವ ತತ್ವಗಳನ್ನು ಬಿತ್ತುತ್ತಿರುವ ನಿಷ್ಕಲ ಮಂಟಪದ ಪೂಜ್ಯ ಶ್ರೀ …

ವಿಧಾನಸೌಧದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಸಿಎಂ ಸಿದ್ದತೆ

  ಬೆಂಗಳೂರು: ಲಿಂಗಾಯತ ಧರ್ಮೀಯರ ಬಹುದಿನಗಳ ಬೇಡಿಕೆಗೆ ಈಗ ಕಾಲ ಕೂಡಿಬಂದಿದೆ. ಹೌದು.! ವಿಧಾನಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ …

ಬ್ರಾಹ್ಮಣ್ಯ ಕೇವಲ 15% ರಷ್ಟಿರುವ ಸವರ್ಣೀಯರಲ್ಲಷ್ಟೇ ಆಚರಿಸಲ್ಪಡುತ್ತದೆಯೇ..?

ಬ್ರಾಹ್ಮಣ್ಯದ ಬಗ್ಗೆ ಇತ್ತೀಚೆಗೆ ಎಲ್ಲೆಡೆ ಬಹಳ ಚರ್ಚೆ ಆಗುತ್ತಿದೆ. ಹಾಗಾಗಿ ನನ್ನ ಸೀಮಿತ ಅರಿವಿನ ಪರಿಧಿಯಲ್ಲಿ ನನ್ನ ಅಭಿಪ್ರಾಯ ಹಂಚಿಕೊಳ್ಳಲು …

ಲಿಂಗಾಯತರಿಗೆ ಬೇಕಿರುವುದು ಬೆಲ್ಲದ್ ಅಲ್ಲ; ಎಂ.ಬಿ.ಪಾಟೀಲರಂತಹ ಸಕ್ಕರೆ!

  ಹೌದು. ಲಿಂಗಾಯತರ ಮೇಲೆ ಯಾರನ್ನೋ ತಂದು ಹೇರಬೇಡಿ. ಪರ್ಯಾಯ ನಾಯಕನನ್ನು ಹುಡುಕುವ ಮತ್ತು ಅವರ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ …

ರವಿಯೊಳಡಗಿದ ಪ್ರತಿಬಿಂಬದಂತೆ

  ಲಿಂಗಾಯತ ಕ್ರಾಂತಿ: 12 ನೇ ಶತಮಾನದ ಶರಣೆಯರಲ್ಲಿ ಆಧ್ಯಾತ್ಮಿಕ ಪಥವನ್ನು ಮುಟ್ಟಿದ ವಿಶಿಷ್ಟ ಶರಣೆ ಮುಕ್ತಾಯಕ್ಕ. ಶರಣೆ ಎನ್ನುವ …

ವೈಚಾರಿಕ ಸಾಹಿತಿ ಡಾ.ಸಿದ್ದಲಿಂಗಯ್ಯ.

ಲಿಂಗಾಯತ ಕ್ರಾಂತಿ: ಕವಿ, ಸಾಹಿತಿ, ನಾಟಕಕಾರ, ಸಂಶೋಧಕ, ವಾಗ್ಮಿ, ಬಹುಮುಖ ಪ್ರತಿಭೆ, ಶೋಷಿತರ ಸಂವೇದನೆಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟ …

Leave a Reply

Your email address will not be published. Required fields are marked *