Home / featured / ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

 

ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ ಡಾ. ಅರುಣ ಇನಾಮವಾರ ಅವರಿಗೆ ಸಲ್ಲುತ್ತದೆ ಎಂದು ಹಿರಿಯ ಪತ್ರಕರ್ತ ರಾಜು ವಿಜಾಪುರ ಹೇಳಿದರು.

ನಗರದ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ನಡೆದ ಡಾ. ಎಂ.ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ ಸಂಪುಟಗಳನ್ನು ಬಿ ಎಂ ಪಾಟೀಲ ಅವರ ಚೇತನಕ್ಕೆ ಸಮರ್ಪಣೆ, ರೇಡಿಯನ್ಸ್ ಆಫ್ ವಚನ (ವಚನ ಪ್ರಭೆ) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಹುಭಾಷಾ ತಜ್ಞ ಎ.ಕೆ.ರಾಮಾನುಜನ್ ಶಿಕಾಗೋ ವಿವಿಯಲ್ಲಿ ಸಂಶೋಧನೆ ಮಾಡುವಾಗ ಬಸವಣ್ಣನವರ ವಚನಗಳನ್ನು ಇಲ್ಲಿಗೆ ಭಾಷಾಂತರ ಮಾಡಿದ್ದರು.

ಇಂಗ್ಲಿಷ್‌ಗೆ ಭಾಷಾಂತರಿಸಿದ ವಚನಗಳನ್ನು ಅಲ್ಲಿನ ಸ್ಥಳೀಯ ಸರ್ಕಾರ ಬಸ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ಮಾಡುವ ಮೂಲಕ ವಚನಗಳ ಮಹತ್ವವನ್ನು ಸಾರಿತ್ತು. ಈಗ ಅಲ್ಲಮಪ್ರಭುಗಳ ವಚನಗಳನ್ನು ಡಾ. ಅರುಣ ಇನಾಮದಾರ ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದ್ದಾರೆ. ಅಲ್ಲಮಪ್ರಭುಗಳ ವಚನಗಳು ಓದಿದರೆ ಒಂದು ಅರ್ಥ ನೀಡುತ್ತವೆ.

ಆದರೆ ಅವುಗಳ ಹಿಂದೆ ಕಾಣದೆ ಇರುವ ಅರ್ಥಗಳು ನೂರಾರು, ಇಂತಹ ಕಠಿಣ ವಚನಗಳನ್ನು ಅನ್ಯಭಾಷಿಕರಿಗೆ ಸರಳವಾಗಿ ತಿಳಿಯುವಂತೆ ಭಾಷಾಂತರ ಮಾಡುವ ಮೂಲಕ ಇನಾಮದಾರ ಅವರು ಅಲ್ಲಮಪ್ರಭುಗಳ ವಚನಗಳ ಸಾರವನ್ನು ಜಗತ್ತಿಗೆ ಪಸರಿಸಲು ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.

ವಚನ ಪ್ರಭೆ ಪುಸ್ತಕದ ಭಾಷಾಂತರಕಾರ ಡಾ. ಅರುಣ ಇನಾಮದಾರ ಮಾತನಾಡಿ, ಚಿಕ್ಕಂದಿನಿಂದ ತಮ್ಮ ತಾಯಿ-ತಂದೆ , ಬಂಧು-ಬಳಗದವರು ನೀಡಿದ ಸಂಸ್ಕಾರ ತಾವು ವಚನಗಳ ಕಡೆಗೆ ಆಕರ್ಷಿತರಾಗಲು ಕಾರಣವಾಗಿದೆ. ಅಲ್ಲಮಪ್ರಭುಗಳ ವಚನಗಳನ್ನು ಭಾಷಾಂತರಕ್ಕೆ ಕೈಗೆತ್ತಿಕೊಂಡಾಗ ಅವುಗಳ ಮೂಲ ಅರ್ಥವನ್ನು ಭಾಷಾಂತರಿಸುವ ಆತಂಕವಿತ್ತು. ಆಗ ಅನುವಾದಿತ ವಚನಗಳನ್ನು ಸ್ನೇಹಿತರಿಗೆ ಕಳುಹಿಸುತ್ತಿದ್ದೆ ಡಾ‌. ಎಂ.ಎಸ್.ಬಿರಾದಾರ, ಡಾ. ಅರವಿಂದ ಪಾಟೀಲ, ಡಾ. ಆರ್. ಎಸ್. ಮುಧೋಳ ಮತ್ತು ಡಾ. ಮಹಾಂತೇಶ ಬಿರಾದಾರ ಅವರಿಗೆ ಕಳುಹಿಸಿದೆ. ಅವರಿಂದ ಸಿಕ್ಕ ಪ್ರೋತ್ಸಾಹ ಮತ್ತು ಸಹಕಾರದಿಂದ ಇಂದು ಈ ಪುಸ್ತಕ ಬಿಡುಗಡೆಗೆ ಕಾರಣವಾಗಿದೆ.

ನನ್ನ ಈ ಕಾರ್ಯದ ಬಗ್ಗೆ ಡಾ. ಎಸ್. ಎಂ. ಜಾಮದಾರ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ಹಾಗೂ ನನ್ನ ಪತ್ನಿ ಡಾ. ಶೈಲಜಾ ಇನಾಮದಾರ ಹಾಗೂ ಈ ಪುಸ್ತಕ ಪ್ರಕಟಣೆಗೆ ಕಾರಣರಾದ ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷ ಶಾಸಕರಾದ ಡಾ. ಎಂ.ಬಿ.ಪಾಟೀಲ, ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಕೃಷ್ಣಕೊಲ್ಲಾರ ಕುಲಕರ್ಣಿ, ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ, ಸಂಯೋಜಕ ಡಾ. ವಿ.ಡಿ. ಐಹೊಳ್ಳಿ, ಎ.ಬಿ. ಬೂದಿಹಾಳ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ | ಕೃಷ್ಣಕೊಲ್ಲಾರ ಕುಲಕರ್ಣಿ ಮಾತನಾಡಿ, ಅನ್ಯ ಭಾಷೆಗಳಲ್ಲಿರುವ ವಚನ ಸಾಹಿತ್ಯಗಳ ಸಮಗ್ರ ಸಂಪುಟ ಹೊರತರುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಬಿಎಲ್‌ಡಿಇ ಅಧ್ಯಕ್ಷ ಶಾಸಕ ಎಂ ಬಿ ಪಾಟೀಲ ಅವರು ಡಾ‌. ಎಂ.ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ ಸಂಪುಟಗಳನ್ನು ದಿ| ಬಿ.ಎಂ ಪಾಟೀಲ ಅವರ ಚೇತನಕ್ಕೆ ಸಮರ್ಪಣೆ, ರೇಡಿಯನ್ಸ್ ಆಫ್ ವಚನ (ವಚನ ಪ್ರಭ) ಪ್ರಸ್ತಕ ಬಿಡುಗಡೆ ಮಾಡಿದರು.

ಬಿಎಲ್‌ಡಿಇ ಡೀಮ್ ವಿವಿ ಉಪ ಕುಲಪತಿ ಡಾ. ಆರ್‌.ಎಸ್. ಮುಧೋಳ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಸಂಗು ಸಜ್ಜನ, ಡಾ. ರಾಘವೇಂದ್ರ ಕುಲಕರ್ಣಿ, ಡಾ. ಅರವಿಂದ ಪಾಟೀಲ, ಶಶಿಕಾಂತಗೌಡ ಪಾಟೀಲ, ರಾಜೇಶ ತೊನ್ನುಟಗಿ ವೇದಿಕೆಯಲ್ಲಿದ್ದರು.

ಕೆ.ಜಿ. ಪೂಜಾರಿ, ವಿ.ಎಸ್. ಶಾಳಪ್ಪನವರ, ಬಸವರಾಜ ಎಲಿಗಾರ, ಡಾ. ಎಂ.ಎಸ್ , ಮದಭಾವಿ, ಡಾ ಶೈಲಜಾ ಇನಾಮದಾರ ಇದ್ದರು. ಡಾ. ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಎ.ಬಿ. ಬೂದಿಹಾಳ ನಿರೂಪಿಸಿದರು. ಜ್ಯೋತಿ ಗೆಜ್ಜೆ ವಚನ ಗಾಯನ ನಡೆಸಿಕೊಟ್ಟರು. ಡಾ. ವಿ.ಡಿ. ಐಹೊಳ್ಳಿ ವಂದಿಸಿದರು.

About Shivanand

Admin : Lingayat Kranti Monthly news paper 8884000008 [email protected]

Check Also

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ …

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ …

ನೇಗಿನಹಾಳ ಗ್ರಾಮದ ಸಮಸ್ಯೆಗಳ ಆಲಿಸಿದ ತಹಶಿಲ್ದಾರ್ ಬಸವರಾಜ ನಾಗರಾಳ್

ಗ್ರಾಮದ ಜನತಾ ಕಾಲನಿಯಲ್ಲಿ ನೀರು ನುಗ್ಗಿದ್ದರಿಂದ ಮನೆಗಳು ಬಿದ್ಧಿರುವ ಸ್ಥಳಗಳಿಗೆ ಬೇಟಿ ನೀಡಿದರು. ನೇಗಿನಹಾಳ (ಬೆಳಗಾವಿ) : ಗ್ರಾಮದಲ್ಲಿನ ಸಮಸ್ಯೆಗಳನ್ನು …

ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ

ಲಿಂಗಾಯತ ಕ್ರಾಂತಿ: ಎಂ.ಎಂ.ಕಲ್ಬುರ್ಗೀ ಸರ್ ಬರೆದಂತ ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ ಎನ್ನುವ ಶೀರ್ಷಿಕೆಯನ್ನು ಇಲ್ಲಿ ಬಳಸುತ್ತಿರುವೆ.ಕಲ್ಬುರ್ಗಿ ಸರ್ …

ವಚನ ಸಾಹಿತ್ಯ ಬೆಳಕಿಗೆ ತಂದವರು ಡಾ.ಫ.ಗು.ಹಳಕಟ್ಟಿಯವರು: ಡಾ. ಎಂ ಬಿ ಪಾಟೀಲ

  ವಿಜಯಪುರ: ಹರಿದು ಹಂಚಿ ಹೋಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಪ್ರಕಟಿಸಿ, ಪ್ರಚಾರ ಮಾಡಿ, ಬೆಳಕಿಗೆ ತಂದವರು ವಚನಪಿತಾಮಹರೆಂದೇ ಖ್ಯಾತರಾದವರು …

ಅಂಬೇಡ್ಕರ್ ತತ್ವಗಳನ್ನು ಅರಿತಾಗ ಸಂವಿಧಾನದ ಆಶಯಗಳ ಅನುಷ್ಠಾನ ಸಾಧ್ಯ: ನಿಜಗುಣಾನಂದ ಶ್ರೀ

  ಎಂ.ಕೆ.ಹುಬ್ಬಳ್ಳಿ: ಅಂಬೇಡ್ಕರ್ ಅವರ ತತ್ವಗಳನ್ನು ಕೇವಲ ಕಾನೂನು ನ್ಯಾಯಾಂಗದ ಚೌಕಟ್ಟಿನಲ್ಲಿ ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ. ಆದರೆ ಹೃದಯಾಳದಲ್ಲಿ ಅವರ …

ಕ್ರಿ.ಪೂ. 200 ವರ್ಷಗಳ ಹಿಂದೆ…

  ಲಿಂಗಾಯತ ಕ್ರಾಂತಿ: ಕ್ರಿ.ಪೂ. 200 ವರ್ಷಗಳ ಹಿಂದೆ ಅಲೆಕ್ಸಾಂಡರ್ ದಿ ಗ್ರೇಟ್ ಗ್ರೀಕ್ ದೇಶದ ಚಕ್ರವರ್ತಿಯಾಗಿದ್ದ. ಆತ ತುಂಬಾ …

ಪ್ರಕೃತಿಯ ಆರಾಧಕಳು ಅಕ್ಕ

  ಲಿಂಗಾಯತ ಕ್ರಾಂತಿ: ಪ್ರಕೃತಿಯ ಆರಾಧನೆ ಎಂದರೆ ಸತ್ಯ ಮತ್ತು ಸೌಂದರ್ಯದ ಅನುಸಂಧಾನದ ಪ್ರಕ್ರಿಯೆ. ಪಂಚಭೂತಗಳಿಂದ ಆವೃತವಾದ ಈ ಪ್ರಕೃತಿಯು …

‘ಲಿಂಗಾಯತ’ ಚಳವಳಿಗೆ ಕಿಚ್ಚು ಹಚ್ಚಿದವರೇ ಲಿಂಗಾನಂದ ಶ್ರೀ!

  ಲಿಂಗಾಯತ ಕ್ರಾಂತಿ:  ಆ ದುರ್ದಿನಗಳಲ್ಲಿ ಬಸವಾದಿ ಶರಣರನ್ನು ಹಳ್ಳಿ ಹಳ್ಳಿಗೂ ತಲುಪಿಸಿ, ಸಾಮಾನ್ಯರಲ್ಲಿ ‘ಲಿಂಗಾಯತ’ದ ಅರಿವು ಮೂಡಿಸಿದ್ದು ಲಿಂಗಾನಂದ …

ನಿಜಗುಣಪ್ರಭು ತೋಂಟದಾರ್ಯ ಶ್ರೀಗಳಿಗೆ ಇಂದು ಪ್ರಶಸ್ತಿ ಪ್ರದಾನ

  ಚನ್ನಮ್ಮನ ಕಿತ್ತೂರು: ಮೂರು ದಶಕಗಳಿಂದ ನಾನಾ ದೇಶಗಳನ್ನು ಸುತ್ತಿ ಬಸವ ತತ್ವಗಳನ್ನು ಬಿತ್ತುತ್ತಿರುವ ನಿಷ್ಕಲ ಮಂಟಪದ ಪೂಜ್ಯ ಶ್ರೀ …

ವಿಧಾನಸೌಧದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಸಿಎಂ ಸಿದ್ದತೆ

  ಬೆಂಗಳೂರು: ಲಿಂಗಾಯತ ಧರ್ಮೀಯರ ಬಹುದಿನಗಳ ಬೇಡಿಕೆಗೆ ಈಗ ಕಾಲ ಕೂಡಿಬಂದಿದೆ. ಹೌದು.! ವಿಧಾನಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ …

ಬ್ರಾಹ್ಮಣ್ಯ ಕೇವಲ 15% ರಷ್ಟಿರುವ ಸವರ್ಣೀಯರಲ್ಲಷ್ಟೇ ಆಚರಿಸಲ್ಪಡುತ್ತದೆಯೇ..?

ಬ್ರಾಹ್ಮಣ್ಯದ ಬಗ್ಗೆ ಇತ್ತೀಚೆಗೆ ಎಲ್ಲೆಡೆ ಬಹಳ ಚರ್ಚೆ ಆಗುತ್ತಿದೆ. ಹಾಗಾಗಿ ನನ್ನ ಸೀಮಿತ ಅರಿವಿನ ಪರಿಧಿಯಲ್ಲಿ ನನ್ನ ಅಭಿಪ್ರಾಯ ಹಂಚಿಕೊಳ್ಳಲು …

ಲಿಂಗಾಯತರಿಗೆ ಬೇಕಿರುವುದು ಬೆಲ್ಲದ್ ಅಲ್ಲ; ಎಂ.ಬಿ.ಪಾಟೀಲರಂತಹ ಸಕ್ಕರೆ!

  ಹೌದು. ಲಿಂಗಾಯತರ ಮೇಲೆ ಯಾರನ್ನೋ ತಂದು ಹೇರಬೇಡಿ. ಪರ್ಯಾಯ ನಾಯಕನನ್ನು ಹುಡುಕುವ ಮತ್ತು ಅವರ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ …

ರವಿಯೊಳಡಗಿದ ಪ್ರತಿಬಿಂಬದಂತೆ

  ಲಿಂಗಾಯತ ಕ್ರಾಂತಿ: 12 ನೇ ಶತಮಾನದ ಶರಣೆಯರಲ್ಲಿ ಆಧ್ಯಾತ್ಮಿಕ ಪಥವನ್ನು ಮುಟ್ಟಿದ ವಿಶಿಷ್ಟ ಶರಣೆ ಮುಕ್ತಾಯಕ್ಕ. ಶರಣೆ ಎನ್ನುವ …

ವೈಚಾರಿಕ ಸಾಹಿತಿ ಡಾ.ಸಿದ್ದಲಿಂಗಯ್ಯ.

ಲಿಂಗಾಯತ ಕ್ರಾಂತಿ: ಕವಿ, ಸಾಹಿತಿ, ನಾಟಕಕಾರ, ಸಂಶೋಧಕ, ವಾಗ್ಮಿ, ಬಹುಮುಖ ಪ್ರತಿಭೆ, ಶೋಷಿತರ ಸಂವೇದನೆಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟ …

Leave a Reply

Your email address will not be published. Required fields are marked *