Home / featured / ಹಡಪದರನ್ನು ನೋಡುವ ನೋಟ ಬದಲಾಗಲಿ

ಹಡಪದರನ್ನು ನೋಡುವ ನೋಟ ಬದಲಾಗಲಿ

ವರದಿ ರವೀಂದ್ರ ಹೊನವಾಡ. ಗಜೇಂದ್ರ ಗಡ

ನಿಜಸುಖಿ ಶರಣ ಹಡಪದ ಅಪ್ಪಣನವರ 887ನೇ ಜಯಂತ್ಯೋತ್ಸವ

ಗಜೇಂದ್ರಗಡ ಜುಲೈ 25: ಅಸಮಾನತೆ, ಜಾತಿವಾದ ವ್ಯವಸ್ಥೆಯ ಈ ಸಮಾಜದಲ್ಲಿ ದಲಿತ ಜನಾಂಗದವರು ಮುಟ್ಟಿಸಿಕೊಳ್ಳದ ಅಸ್ಪೃಶ್ಯತೆಯ ಅವಮಾನಕ್ಕೊಳಗಾಗುತ್ತಿದ್ದಾರೆ. ಹಾಗೆಯೇ ಹಡಪದ ವೃತ್ತಿಯ ಜನಾಂಗದವರನ್ನು ನೋಡಬಾರದು ಎಂಬ ಅಸ್ಪೃಶ್ಯತೆಯ ಅವಮಾನಕ್ಕೆ ಈಡು ಮಾಡಲಾಗಿರುವುದು ತುಂಬಾ ವಿಷಾದನೀಯ. ಇದು ಇಪ್ಪತ್ತೊಂದನೆ ಶತಮಾನದಲ್ಲೂ ಮುಂದುವರೆದಿರುವುದು ದುರಂತ. ಕ್ಷೌರಿಕ ವೃತ್ತಿಯವರನ್ನು ನೋಡುವ ನೋಟವನ್ನು ಸಮಾಜ ಇನ್ನಾದರೂ ಬದಲಾಯಿಸಿಕೊಳ್ಳಬೇಕು. ಅವರೂ ಸಹ ತಮ್ಮಂತೆ ಮನುಷ್ಯರು ಎಂಬುದನ್ನು ಮನಗಾಣಬೇಕು ಎಂದು ಕಲಾವಿದ, ಸಾಹಿತಿ ಪುಂಡಲೀಕ ಕಲ್ಲಿಗನೂರ ಹೇಳಿದರು.

ಅವರು ಶನಿವಾರ ಸಂಜೆ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸಿ.ಬಿ.ಎಸ್.ಇ.ಶಾಲೆಯಲ್ಲಿ,ಗಜೇಂದ್ರಗಡ ತಾಲ್ಲೂಕ ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ನಡೆದ, ಹನ್ನೆರಡನೇ ಶತಮಾನದ ನಿಜಸುಖಿ ಶರಣ ಹಡಪದ ಅಪ್ಪಣ್ಣನವರ 887ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಅಂದು ಮತ್ತು ಇಂದು ಅಧಿಕಾರಸ್ಥರು ಪಟ್ಟ ಏರಬೇಕಾದರೆ ಹಡಪದರಿಂದ ಕ್ಷೌರ ಮಾಡಿಸಿಕೊಂಡೆ ಪಟ್ಟ ಏರುತ್ತಾರೆ.ಕ್ಷೌರಿಕ ವೃತ್ತಿ ಅಷ್ಟು ಮಹತ್ವ ಮತ್ತು ಗೌರವಯುತವಾಗಿದೆ.ಹೀಗಿದ್ದು ಸಮಾಜ ಈ ವೃತ್ತಿಯನ್ನು ಅಸಡ್ಡೆ,ಅವಮಾನಕ್ಕೊಳಪಡಿಸುವುದನ್ನು ಬಿಟ್ಟು ಸೂಕ್ತ ಸ್ಥಾನಮಾನದ ವ್ಯವಸ್ಥೆ ಕಲ್ಪಿಸಬೇಕೆಂದರು. ಬಸವಾದಿ ಶರಣರ ಕಲ್ಯಾಣ ರಾಜ್ಯದ ಗುರಿಯಲ್ಲಿ ಕ್ಷೌರಿಕ ವೃತ್ತಿ ಸೇರಿದಂತೆ ಎಲ್ಲ ವೃತ್ತಿಗಳನ್ನು ಸಮಾನವಾಗಿ ಕಂಡು ಅತ್ಯಂತ ಮಹತ್ವ ನೀಡಲಾಯಿತು. ವೃತ್ತಿಗಳನ್ನು ಕಾಯಕವೆಂದು ಕರೆದು ಎತ್ತರದ ಸ್ಥಾನಮಾನವನ್ನು ಅಲ್ಲಿ ನೀಡಲಾಯಿತು. ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯಗೈದ ಹಡಪದ ಅಪ್ಪಣ್ಣನವರು ಅನುಭವ ಮಂಟಪದಲ್ಲಿ ಬಹು ಮಹತ್ವದ ಕಾರ್ಯ ನಿರ್ವಹಿಸಿದರು ಎಂದು ಕಲ್ಲಿಗನೂರ ಹೇಳಿದರು.

ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಚಿದಾನಂದಪ್ಪ ಹಡಪದ, ಚಿಂತಕ ಬಿ.ಎ.ಕೆಂಚರಡ್ಡಿ, ವಕೀಲರಾದ ಎಂ.ಎಸ್.ಹಡಪದ, ಉಪನ್ಯಾಸಕ ಬಸವರಾಜ ಶೀಲವಂತರ, ಜೆ.ಎಲ್.ಎಂ.ಜಿಲ್ಲಾ ಮುಖಂಡ ರವೀಂದ್ರ ಹೊನವಾಡ, ಕೆ.ಎಸ್.ಸಾಲಿಮಠ ಮಾತನಾಡಿ, ಇಂದಿಗೂ ಬ್ರಾಹ್ಮಣ್ಯ ವ್ಯವಸ್ಥೆ ಜನರನ್ನು ತೀವ್ರ ಶೋಷಣೆ, ಅನ್ಯಾಯಕ್ಕೀಡು ಮಾಡುತ್ತಲೇ ಸಾಗಿದೆ.ಬಸವಣ್ಣ, ಅಪ್ಪಣ್ಣ ಸೇರಿದಂತೆ ಶರಣರೆಲ್ಲ ಕಲ್ಯಾಣದಲ್ಲಿ ಸೇರಿ ಸರ್ವರ ಹಿತಕಾಯುವ ಲಿಂಗಾಯತ ಧರ್ಮ ಸಂಸ್ಥಾಪಿಸಿ ಬ್ರಾಹ್ಮಣಶಾಹಿ, ಪುರೋಹಿತಶಾಹಿ ವ್ಯವಸ್ಥೆ ವಿರುದ್ಧ ಸೆಣಸಿದರೆಂದು ಅಭಿಪ್ರಾಯಪಟ್ಟರು. ಲಿಂಗಾಯತ, ಶರಣ, ಬಸವ, ವಚನ ತತ್ವವನ್ನು ನಾವೆಲ್ಲ ಅರಿತು, ಅನುಸರಿಸುವ ಅವಶ್ಯಕತೆಯಿಂದು ಹೆಚ್ಚಾಗಿದೆಯೆಂದು ಹೇಳಿದರು. ಅಧ್ಯಕ್ಷತೆಯನ್ನು ಜೆ.ಎಲ್.ಎಂ.ತಾಲ್ಲೂಕ ಸಂಚಾಲಕ ಗುರುಲಿಂಗಯ್ಯ ಓದಸುಮಠ ವಹಿಸಿದ್ದರು.

ಈಚೆಗೆ ಅಗಲಿದ ಕೊಪ್ಪಳದ ಹಿರಿಯ ಪತ್ರಕರ್ತ, ಹೋರಾಟಗಾರ ವಿಟ್ಠಪ್ಪ ಗೋರಂಟ್ಲಿ ಅವರ ಸೇವೆ ಸ್ಮರಿಸಿ,ಅವರ ಗೌರವಾರ್ಥ ಮೌನಾಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಲಕ್ಕಲಕಟ್ಟಿ, ಸುರೇಶ ಹಡಪದ, ಶರಣು ಪೂಜಾರ, ಬಸವರಾಜ ಅಂಗಡಿ, ಮಂಜುನಾಥ ಹೂಗಾರ, ಆನಂದ ಸಜ್ಜನ, ಬಿ.ಸಿ.ಹೊಳಿ, ಶರಣಪ್ಪ ಹಡಪದ, ಬಿ.ಎಸ್.ಜಂತ್ಲಿ, ಮಂಜುನಾಥ ಕಲ್ಲಿಗನೂರ, ನೀಲಪ್ಪ ಹಡಪದ, ಚಂದ್ರಶೇಖರ ಮುಶಿಗೇರಿ, ಈಶಪ್ಪ ಹಡಪದ, ವೀರಣ್ಣ ಹಡಪದ, ಬಸವರಾಜ ಹಡಪದ, ನೀಲಪ್ಪ ಹಡಪದ, ಪ್ರಮೋದ ಕುಂಬಾರ ಮತ್ತೀತರರು ಉಪಸ್ಥಿತರಿದ್ದರು.

About Shivanand

Admin : Lingayat Kranti Monthly news paper 8884000008 [email protected]

Check Also

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

“ನೊಬೆಲ್” ಎಂಬ ಮನುಕುಲದ ದ್ರುವತಾರೆ…🌟

ನೂರು ವರ್ಷಗಳ ಹಿಂದೆ ಒಬ್ಬ ಉದ್ಯಮಿ ಬೆಳಗಿನ ಕಾಫ಼ಿ ಸೇವಿಸುತ್ತ ಅಂದಿನ ದಿನಪತ್ರಿಕೆಯೊಂದನ್ನ ಕೈಗೆತ್ತಿಕೊಂಡು ಓದಲು ಪ್ರಾರಂಭಿಸುತ್ತಾನೆ. ಅದರಲ್ಲಿನ ಒಂದು …

ಸಂಸ್ಕೃತಿ & ಸಂಸ್ಕಾರಗಳ ಬೆನ್ನೇರಿದ ಯುವ ಸನ್ಯಾಸಿಗಳು : ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು

ಬೈಲೂರ: ತಮ್ಮ ಯೌವ್ವನದಲ್ಲಿ ಧರ್ಮದ ಕಂಕಣ ಕಟ್ಟಿಕೊಂಡು‌ ನಿಂತ ಯುವ ಸನ್ಯಾಸಿಗಳ ನೋಡಿದರೆ ತುಂಬ ಸಂತೋಷವಾಗುತ್ತದೆ ಜೊತೆಗೆ ಜೀವನ ಸಾರ್ಥಕವಾಯಿತು …

ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ಲಿಂಗಾಯತ ಉಪಪಂಗಡಗಳು ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ: ಎಂ ಬಿ ಪಾಟೀಲ

ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಶ್ರೀ ಎಂ.ಬಿ.ಪಾಟೀಲ ಅವರು ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು …

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಮೊದಲು ಮೂರು ನೀತಿಕಥೆಗಳನ್ನು ನೊಡೋಣ ಆನಂತರ ವಿಷಯಕ್ಕೆ ಬರೋಣ.ಬೆಳಗಿನ ಜಾವ ಯಾರೋ ಒಬ್ಬರು ಸಮುದ್ರ ತೀರದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅಂದು …

ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಸಾಹಿತಿ ಮತ್ತು ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳ ಒಡನಾಡಿ ಶಿಷ್ಯರಾದ ಸಿದ್ದು ಯಾಪಲಪರವಿ ಅವರು ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ …

Leave a Reply

Your email address will not be published. Required fields are marked *