Home / General News / 47ನೇ ತ್ರೈಮಾಸಿಕ ಶಿವಾನುಭವ-ಗುರುವಂದನೆ

47ನೇ ತ್ರೈಮಾಸಿಕ ಶಿವಾನುಭವ-ಗುರುವಂದನೆ

 

ಮುಂಡರಗಿ ಜುಲೈ 12: ೧೨ನೆಯ ಶತಮಾನದ ಬಸವಾದಿ ಶರಣರು ದೇವರ ಕಲ್ಪನೆಯನ್ನು ಇಷ್ಟಲಿಂಗದಲ್ಲಿ ಕಂಡರು.ಗರ್ಭಗುಡಿ ಸಂಸ್ಕೃತಿಯಿಂದ ಜನರನ್ನು ಹೊರತಂದು,ಇಷ್ಟಲಿಂಗ ಎಡಗೈಲಿ ಇಡುವ ಮೂಲಕ ದೈಹಿಕ ಅಸ್ಪೃಶ್ಯತೆ ಹಾಗೂ ಮೌಢ್ಯ ನಿವಾರಿಸಿ ಪ್ರಗತಿಪರತೆಯ ದಾರಿಯನ್ನು ತೋರಿದ್ದಾರೆ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಜಿ ಹೇಳಿದರು.

ಪಟ್ಟಣದ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದಲ್ಲಿ ನಡೆದ ೪೭ನೆಯ ತ್ರೈಮಾಸಿಕ ಶಿವಾನುಭವ, ಗುರುವಂದನೆ,ಆಷಾಡ ಮಾಸದ ಪ್ರವಚನ ಪ್ರಾರಂಭ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

ಬಸವಾದಿ ಶರಣರು ಇಷ್ಟಲಿಂಗ ನೀಡಿ, ದೈಹಿಕ ಅಸ್ಪಶ್ಯತೆಯನ್ನು ನಿವಾರಿಸಿ,ಪ್ರಗತಿಪರತೆಯ ದಾರಿ ತೋರಿದ್ದಾರೆ.

– ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಜಿ.

ಪ್ರಗತಿಪರತೆ ಎನ್ನುವದು ಧರ್ಮ ವಿರೋಧಿ ಆಗಿರದೇ ಪ್ರತಿಯೊಬ್ಬರಿಗೂ ಬದುಕಲು ಅವಕಾಶ ಮಾಡಿಕೊಡುವುದಾಗಿದೆ. ಮಾನವನಲ್ಲಿರುವ ಅಜ್ಞಾನ ತೆಗೆದು ಹಾಕಿ ಪವಿತ್ರವಾದ ಸುಜ್ಞಾನವನ್ನು ಮೂಡಿಸುವ ಕಾರ್ಯದ ವೈಚಾರಿಕ ಪ್ರಭೆಯನ್ನು ಶರಣರು ತಂದರು. ಜನರಲ್ಲಿ ದೇವರು-ಧರ್ಮಗಳ ಬಗ್ಗೆ ಆಳದಲ್ಲಿ ಭಯವಿದೆ.ಆ ಭಯವನ್ನು ಹೋಗಲಾಡಿಸುವ ಮೂಲಕ ಬಸವಾದಿ ಪ್ರಮಥರು ಹಾಕಿಕೊಟ್ಟಿರುವ ವಚನಗಳ ಬೆಳಕಿನಲ್ಲಿ ಸಾಗುವುದಾಗಿದೆ. ಧರ್ಮ-ದೇವರ ಹೆಸರಲ್ಲಿ ಹಣ ದೋಚುವ ಧರ್ಮದ್ರೋಹಿಗಳ ವಿರುದ್ದ ಜಾಗೃತಿ ಮೂಡಿಸುವುದಾಗಿದೆ.ವಚನಗಳ ವಾಸ್ತವಿಕತೆಯ ಸತ್ಯವನ್ನು ಹೇಳಿದಕ್ಕೆ ಡಾ.ಎಂ.ಎಂ.ಕಲಬುರ್ಗಿಯವರು ಸಂಪ್ರದಾಯವಾದಿಗಳ ಗುಂಡಿಗೆ ಬಲಿಯಾದರು. ಹಂತಕರು ಬಸವಾದಿ ಕಾಲಘಟ್ಟ ಸೇರಿದಂತೆ ಈಗಲೂ ವಿಜೃಂಭಿಸುತ್ತಿದ್ದಾರೆ.ಹಂತಕರಿಗೆ ಶಿಕ್ಷೆಯಾಗಿ ಕಲಬುರ್ಗಿಯವರ ಕುಟುಂಬಕ್ಕೆ ನ್ಯಾಯ ಸಿಕ್ಕಾಗಲೇ ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ ಪಡೆದಿರುವದಕ್ಕೆ ಗೌರವ ಸಿಗಲಿದೆ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು  ನುಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಾಹಿತಿ ಸಿದ್ದು ಯಾಪಲಪರವಿ ಕರ್ನಾಟಕವು ಬಸವಣ್ಣ ಮತ್ತು ಶರಣರ ತತ್ವಗಳನ್ನು ಆದರ್ಶವಾಗಿಟ್ಟುಕೊಂಡು ನಡೆದುಕೊಂಡಿದ್ದರೇ ಮಾದರಿ ರಾಜ್ಯವಾಗುತ್ತಿತ್ತು. ಇಂಗ್ಲೆಂಡಿನ ಜನರಿಂದ ಥೇಮ್ಸ್ ನದಿದಂಡೆಯ ಮೇಲೆ ಶ್ರೀ ಬಸವಣ್ಣನವರ ಪ್ರತಿಮೆ ಸ್ಥಾಪನೆಯು ಐತಿಹಾಸಿಕ ಘಟನೆಯಾಗಿದೆ.ಆನಂತರವೇ ಬಸವಾದಿ ಪ್ರಮಥರ ವಚನಗಳ ಬಗ್ಗೆ ಹೊರಳಿ ನೋಡಿ ಭಾರತೀಯರು ಗಮನ ಹರಿಸುವಂತೆ ಆಗಿದೆ. ಬಸವಣ್ಣನವರ ಲಿಂಗಾಯತ ಧರ್ಮದ ಹೆಸರು ಹೇಳಿಕೊಂಡು ಹೊರಟಿರುವ ವಿರಕ್ತ ಮಠಗಳು ವ್ಯಾಪಾರಿ ಕೇಂದ್ರಗಳಾಗಿರುವದು ದುರಂತವಾಗಿದೆ. ಬಸವಣ್ಣ, ಅಲ್ಲಮಪ್ರಭು, ಶರಣರು ಲಿಂಗಾಯತದ ಮೂಲದಲ್ಲಿ ಇದ್ದಾರೆ. ಬಸವಾದಿ ಪರಂಪರೆಯನ್ನು ಶ್ರೀ ಲಿಂಗಾನಂದರು,ಮಾತೆ ಮಹಾದೇವಿಯರು ಪ್ರಚುರಗೊಳಿಸಿ,ಶಿಷ್ಯ ಪರಂಪರೆಯನ್ನು ಬೆಳೆಸಿ ಹೋಗಿದ್ದಾರೆ. ಆ ಪರಂಪರೆಯನ್ನು ಲಿಂ.ತೋಂಟದ ಸಿದ್ದಲಿಂಗ ಶ್ರೀ,ಇಲಕಲ್ ಮಹಾಂತಪ್ಪರವರು ಶ್ರೀ ನಿಜಗುಣಪ್ರಭು ತೋಂಟದಾರ್ಯರರಿಗೆ ಪಟ್ಟಾಧಿಕಾರ ಮಾಡುವ ಮೂಲಕ ಬಸವ ಪರಂಪರೆಯಾಗಿ ದೊಡ್ಡ ಮರವಾಗಿ ಬೆಳೆಸಿದ್ದಾರೆ ಎಂದರು.

ಸಭೆಯಲ್ಲಿ ವಿಜಯ ದೊಡ್ಡವಾಡ, ವಿರೇಶ ಹಲಕಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಕ್ತಿಸೇವೆಗೈದ ಕಲಾವತಿ, ಡಾ.ನಿಂಗೂ ಸೊಲಗಿ ದಂಪತಿಗಳು, ನಿವೃತ್ತರಾದ ಸದಾಶಿವಯ್ಯ ಕಬ್ಬೂರುಮಠ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೊಟ್ರೇಶ ಅಂಗಡಿ, ಶಿವಯೋಗಿ ಕೊಪ್ಪಳ, ನಾಗೇಶ ಹುಬ್ಬಳ್ಳಿ,ದ್ರುವಕುಮಾರ ಹೊಸಮನಿ, ಪಾಲಾಕ್ಷಿ ಗಣದಿನ್ನಿ, ಬಸವರಾಜ ಹೊಸಮನಿ, ಡಾ.ಜಿ.ಬಿ.ಪಾಟೀಲ, ಎ.ಪಿ.ದಂಡೀನ್,ಸುರೇಶ ಬಣಕಾರ, ಬಿ.ವಿ.ಮುದ್ದಿ, ದೇವಪ್ಪ ರಾಮೇನಹಳ್ಳಿ,ರವೀಂದ್ರ ಹೊನವಾಡ, ಕೆ.ಎಸ್.ಸಾಲಿಮಠ, ಗುರುಲಿಂಗಯ್ಯ ಓದಸುಮಠ, ಮಂಜು ರೊಟ್ಟಿ, ಬಸವರಾಜ ಅಂಗಡಿ, ಶರಣಪ್ಪ ಕುಬಸದ, ಶಂಕರಣ್ಣ ಅಂಗಡಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಡಾ.ನಿಂಗೂ ಸೊಲಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಕೆ.ಮುಲ್ಲಾನವರ ನಿರೂಪಿಸಿದರು. ಜಯಶ್ರೀ ಅಳವಂಡಿ ಗಾಯನ, ಶಿವಕುಮಾರ ಕುಬಸದ ತಬಲಾ ಸಾಥ್ ನೀಡಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯಮಠದಲ್ಲಿ ನಡೆದ ೪೭ನೇಯ ತ್ರೈಮಾಸಿಕ ಶಿವಾನುಭವ,ಆಷಾಡ ಮಾಸದ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಜಿಯವರಿಗೆ ಭಕ್ತರಿಂದ ಗುರುವಂದನೆ.

– ರವೀಂದ್ರ ಹೊನವಾಡ

About Shivanand

Admin : Lingayat Kranti Monthly news paper 8884000008 [email protected]

Check Also

ಶರಣೆ ಜಯದೇವಿತಾಯಿ ಲಿಗಾಡೆ, ಗಡಿಕನ್ನಡದ ಉಳಿವು

ಸೊಲ್ಲಾಪುರ : ಕನ್ನಡ ಹೋರಾಟಗಳೆಂದರೆ‌ ಅರ್ದ ರಾತ್ರಿಯಾದರು ಸರಿಯೇ ದಂಡು ಸೇರಿಸಿ ಕನ್ನಡ ವಿರೋಧಿಗಳನ್ನ ಬಗ್ಗುಬಡಿಯುತ್ತಿದ್ದ ಗಡಿನಾಡ ಸಿಂಹಿಣಿ ಜಯದೇವಿತಾಯಿ …

ನೂಲಿಯ ಚೆಂದಯ್ಯ ಬಸವಣ್ಣನ ಪ್ರಭಾವಕ್ಕೆ ಒಳಗಾಗಿ ಲಿಂಗದೀಕ್ಷೆ ಪಡೆದಂತ ಶರಣ

  ಲಿಂಗಾಯತ ಕ್ರಾಂತಿ: ಚೆಂದಯ್ಯ ಒಬ್ಬ ಕೊರವರ ಜನಾಂಗದವನು, ನಾರನ್ನು ನೀರಿನಲ್ಲಿ ನೆನೆಯಿಟ್ಟು, ಒಣಗಿಸಿ ಅದರಿಂದ ಹಗ್ಗ, ಮಗಡ, ಮಿಡಿ, …

ನೇಗಿನಹಾಳ ಗ್ರಾಮಕ್ಕೆ ಜಿಲ್ಲಾಧಿಕಾರಿ ಎಮ್.ಜಿ ಹಿರೇಮಠ ದಿಢೀರ ಬೇಟಿ

ನೇಗಿನಹಾಳ : ಗ್ರಾಮದಲ್ಲಿ ಹೆಚ್ಚಿದ ಕೊರೊನಾ ಸೋಂಕು ಹಾಗೂ ಮೃತರ ಸಂಖ್ಯೆಯನ್ನು ಅರಿತು ಇಲ್ಲಿನ ವಾಸ್ಥವ ಸಮಸ್ಯೆಗಳನ್ನು ಪರಿವೀಕ್ಷಣೆ ಮಾಡಲು …

ಕೊರೊನಾ ವೈದ್ಯಕೀಯ ಸೇವೆಗಿಳಿದ ಬೈಲಹೊಂಗಲ ಮಾಜಿಶಾಸಕ, ಡಾ. ವಿಶ್ವನಾಥ ಆಯ್ ಪಾಟೀಲ

ಕ್ಷೇತ್ರದ ಜನತೆಗಾಗಿ ಸದಾ ಮನಮಿಡಿಯುವ ನಾಯಕ ಬೈಲಹೊಂಗಲ: ಒಬ್ಬ ಜನಸೇವಕ ಸಮಾಜಸೇವೆಗೆಂದು ನಿಂತರೆ ಅವರಲ್ಲಿ ಮಾನವೀಯತೆಯ ಗುಣಗಳು ಬೆಳೆಸಿಕೊಂಡು ಕ್ಷೇತ್ರದಲ್ಲಿ …

ವಚನಗಳಲ್ಲಿ ಹುಟ್ಟು-ಸಾವಿನ ಉಲ್ಲೇಖ

“ಹೆರದ ಮುನ್ನವೇ ಹುಟ್ಟಿ ಹೆತ್ತಲ್ಲಿಯೆ ಸತ್ತುದು ನೋಡಾ! ಅದು ಮಾಯದ ಕೃತಕದ ಗರ್ಭದ ನೆಳಲಿನ ಸುಳುಹು. ಆದಲ್ಲಿ ಆಯಿತ್ತು,ಹೋದಲ್ಲಿ ಹೊಯಿತ್ತು. …

ಶರಣಜೀವಿ ಎಚ್ ಎಸ್ ದೊರೆಸ್ವಾಮಿ ಲಿಂಗೈಕ್ಯ : ಬೈಲೂರು ನಿಜಗುಣಾನಂದಶ್ರೀ ಸಂತಾಪ

ಬೈಲೂರ(ಚನ್ನಮ್ಮನ ಕಿತ್ತೂರು): ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶರಣಜೀವಿ: ಎಚ್ ಎಸ್ ದೊರೆಸ್ವಾಮಿ ಲಿಂಗೈಕ್ಯರಾದ ಸುದ್ಧಿ ತಿಳಿದು ಮನಸ್ಸಿಗೆ ನೋವಾಯಿತು. ಎರಡ-ಮೂರು …

ನಾ ಯಾಕ ಬುದ್ಧನ ಓದಲಿಲ್ಲ.?

  ಲಿಂಗಾಯತ ಕ್ರಾಂತಿ: ಬುದ್ಧ ಅಕ್ಷರಗಳಲ್ಲಿ ಹುದಗಿದ್ದನಾ? ಇಲ್ಲ, ಇಲ್ಲೆ ನಮ್ಮ ಮನೆಗಳಲ್ಲಿ “ಶಾಂತ ಮೂರುತಿ”ಯಾಗಿ, ಹಳದಿ ಅರಬಿ ತೊಟಕೊಂಡು, …

ಶರಣರ ಮಹಿಳಾ ಸಬಲೀಕರಣ ಮತ್ತು ಧಾರ್ಮಿಕ ಸ್ವಾತಂತ್ರ್ಯ

ರಾಯಚೂರು: ಹನ್ನೆರಡನೇ ಶತಮಾನದ ಸ್ತ್ರೀ ವಾದವನ್ನು ಮಹಿಳಾವಾದ ವೆಂದು ಮಹಿಳಾ ಸಬಲೀಕರಣ ವೆಂದು ಚಚೆ೯ ಗೆ ತೆಗೆದುಕೊಳ್ಳುತ್ತೇವೆ. ಅಂದು ಪ್ರತಿಗಾಮಿ …

ಸ್ತ್ರೀ ವಾದಿ ಶರಣೆ ಸತ್ಯಕ್ಕ

  ಸತ್ಯಕ್ಕ ೧೨ ನೇಶತಮಾನದ ಶ್ರೇಷ್ಠ ನಿಷ್ಠುರ ಅಭಿವ್ಯಕ್ತಿಗೆ ಹೆಸರಾದ ಶರಣೆ.ವಚನ ಚಳುವಳಿಯ ಆಶಯವನ್ನು ನಿರ್ದಿಷ್ಟ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿ …

ಪ್ರವಚನ ಪಿತಾಮಹ ಲಿಂಗಾನಂದಪ್ಪಾಜಿಗಳು…

ಲಿಂಗಾಯತ ಕ್ರಾಂತಿ: ನಾನು ಹತ್ತನೇ ತರಗತಿ ಓದುವ ಸಮಯದಲ್ಲಿ ಹಲವು ಧರ್ಮಗಳ ಸಾರವ ಓದಿ ಮುಗಿಸಿ ಅವುಗಳ ನಿಲುವ ಅರಿತದ್ದೆ, …

ತಾಕತ್ ಇದೆಯಾ…?

  ಶರಣ: ಶರಣು ಶಿಣ್ಣೂರ್ ವಿಚಾರವಾದಿ ಸಾಹಿತಿಗಳು ಕಲಬುರಗಿ ಲಿಂಗಾಯತ ಧರ್ಮಗುರು ಬಸವಣ್ಣನವರ ಹಾಗೂ ಬಸವಾದಿ ಶರಣರ ವಿಚಾರಗಳನ್ನು ಮುಟ್ಟಬೇಕಾದರೆ …

ದೇವನಾಗಲೂಬಹುದು ಬಸವಣ್ಣನಾಗಲು ಬಾರದಯ್ಯ…!

  ಲಿಂಗಾಯತ ಕ್ರಾಂತಿ ವಿಶೇಷ : ಸ್ವರ್ಗ-ನರಕ, ಪಾಪ-ಪುಣ್ಯ, ಮಂತ್ರ-ತಂತ್ರ, ಜ್ಯೋತಿಷ್ಯ-ಪಂಚಾಂಗ, ನೇಮ-ನಿತ್ಯ, ದೇವ-ದಾನವ ಇತ್ಯಾದಿ ಕಂದಾಚಾರಗಳ ಆಧಾರದ ಮೇಲೆ …

ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ: ಜಯಂತಿ- ಏಪ್ರೀಲ್27

ಅಂಕಿತ: ಚೆನ್ನಮಲ್ಲಿಕಾರ್ಜುನ ಗೋಮುಖ ವ್ಯಾಘ್ರಂಗಳಂದದ ಕಾಮ ಮೊದಲಾದಖಿಳ ವಿಷಯ ಸ್ತೋಮವನು ಮುರಿದಿಕ್ಕಿ ಮುಂಬರಿದಂತರಂಗದಲಿ ಆ ಮಹಾ ಶಿವಲಿಂಗ ಸಂಗ ಪ್ರೇಮಿಯಾಗಿ …

ರಾಷ್ಟ್ರೀಯ ಬಸವ ಸೈನ್ಯ – 20 ವರ್ಷಗಳ ಸಾರ್ಥಕ ಸೇವೆ

ಲಿಂಗಾಯತ ಕ್ರಾಂತಿ ವಿಶೇಷ: ಲಿಂಗಾಯತ ಧರ್ಮದ ಹೋರಾಟಗಾರ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಯುವ ನಾಯಕ ಶರಣ ಶಂಕರಗೌಡ ಬಿರಾದಾರ 2001 …

ಶಿವಯೋಗದಿಂದ ಎಲ್ಲವೂ ಸಾಧ್ಯ: ನಿಜಗುಣಾನಂದ ಶ್ರೀಗಳು

  ಹುಬ್ಬಳ್ಳಿ(ಉಣಕಲ್): ಜಗತ್ತಿನ ಎಲ್ಲ ಧರ್ಮದ ವಿಚಾರಗಳನ್ನು ಹೇಳುವವರು ಮತ್ತು ಕೇಳುವವರು ಇರುತ್ತಾರೆ ಆದರೆ ಶರಣ ಧರ್ಮದಲ್ಲಿ ಹೇಳುವವರು ಗುರುವಾದರೆ …

Leave a Reply

Your email address will not be published. Required fields are marked *