Home / featured / ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

 

ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ

ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ ಸಾಹಿತ್ಯ ರಕ್ಷಣೆಗೆ ಉಳವಿಯತ್ತ ಧಾವಿಸಿದ ಕಿತ್ತೂರು ನಾಡಿನಲ್ಲಿ ಬಿಜ್ಜಳನ ಸೈನ್ಯ ಸೋತು ವಚನ ಸಾಹಿತ್ಯ ಸಂರಕ್ಷಣೆಯಾಯಿತು. ಸುತ್ತಮುತ್ತಲಿನ ಸ್ಥಳದಲ್ಲಿ ಹಲವಾರು ಶರಣರು ಲಿಂಗೈಕ್ಯರಾದರು, ಕೆಲವರು ಇಲ್ಲಿಯೇ ವಚನ ಸಾಹಿತ್ಯ ಪ್ರಸಾರ ಮಾಡುತ್ತಾ ಲಿಂಗೈಕ್ಯರಾದರು. ಇತಂಹ ಪುಣ್ಯಭೂಮಿಯಲ್ಲಿ ಅಂದಿನಿಂದ ಶತ-ಶತಮಾನಗಳವರೆಗೆ ಹಲವಾರು ಪುಣ್ಯಪುರುಷರು, ಸಾಧು-ಸಂತರು ಜನಸಿ ಸಮಾಜ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು. ನಂತರ 18-19ಶತಮಾನದಲ್ಲಿ ಆಳುತ್ತಿದ್ದ ಕಿತ್ತೂರು ಸಂಸ್ಥಾನ ಅಪ್ಪಟ ಬಸವತತ್ವದಡಿಯಲ್ಲಿ ತನ್ನ ಧಾರ್ಮಿಕ ಆಚರಣೆಯ ಮೂಲಕ ಆಡಳಿತ ನಡೆಸುತ್ತಿತ್ತು. ಈ ಸಂಸ್ಥಾನದ ರಾಜಗುರುಗಳಾಗಿ ಆಯ್ಕೆಯಾಗಬೇಕಿದ್ದ ಅಪ್ಪಟ್ಟ ಬಸವಾನುಯಾಯಿ, ಇಷ್ಟಲಿಂಗ ಪೂಜಾನಿಷ್ಠರಾದ ಶಿವಯೋಗಿ ಗುರು ಮಡಿವಾಳೇಶ್ವರರು ಭಕ್ತವರ್ಗದವರೆಂದು ಮೋಸದಿಂದ ಬೇರೆಯವರನ್ನು ರಾಜಗುರುಗಳಾಗಿ ಮಾಡಲಾಯಿತು.

ಇತಂಹ ಘಟನೆಗಳಿಂದ ಆಸ್ಥಾನವನ್ನು ತೊರೆದು ಅಲ್ಲಿಂದ ಹೊರಬಂದ ಮಡಿವಾಳೇಶ್ವರರು ಹಲವಾರು ವೈಚಾರಿಕತೆಯ ಕ್ರಾಂತಿಕಾರಿ ಪ್ರವಚನ ಆರಂಭಿಸಿದರು. ಹಳ್ಳಿ-ಹಳ್ಳಿಗೆ ತೆರೆಳಿ ವೈದ್ಧಿಕರ ಹುಟ್ಟಡಗಿಸಿ ಜನರಲ್ಲಿರುವ ಮೌಡ್ಯತೆ, ಕಂದಾಚಾರ, ಅಂಧಾನುಕರಣೆಯ ವಿರುದ್ಧ ನುಡಿದರು. ಅವರ ಸಂಚಾರ ದಿನಗಳಲ್ಲಿ ನೇಗಿನಹಾಳ ಗ್ರಾಮಕ್ಕೆ ಬಂದು ಹಲವಾರು ದಿನಗಳವರೆಗೆ ಇದ್ದು ನಂತರ ಇಲ್ಲಿಂದ ಧಾರವಾಡ ಜಿಲ್ಲೆಯ ಗರಗದಲ್ಲಿ ನೆಲೆನಿಂತು ಲಿಂಗದಲ್ಲಿ ಲೀನವಾದರು.

ಬಸವ ಸಿದ್ಧಲಿಂಗ ಮಹಾಸ್ವಾಮಿಗಳು ಪರಿಚಯ:

ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಪ್ರತಿಷ್ಠಿತ ರೈತ ಕುಟುಂಬದಲ್ಲಿ ಬಸವಾದಿ ಶರಣರ ಆಶಯಗಳನ್ನು ಹೊತ್ತುಕೊಂಡು ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳು ದಿವ್ಯ ಆಶೀರ್ವಾದದೊಂದಿಗೆ ಮೂರಗೋಡ ಮಹಾಂತ ಶಿವಯೋಗಿಗಳ ಲಿಂಗೈಕ್ಯ ದಿನದಂದು 10 ಜುಲೈ1972 ರಂದು ಶರಣ ದಂಪತಿಗಳಾದ ರಾಮಪ್ಪ ಮತ್ತು ಕಾಶಮ್ಮನವರ ಚಿತ್ತಗರ್ಭದಲ್ಲಿ ಇಂಚಲದ ಪ್ರತಿಷ್ಠಿತ ಮನೆತನದಲ್ಲಿ ಜನಿಸಿದರು.

ಬಾಲ್ಯ ಶಿಕ್ಷಣ:

ಗ್ರಾಮದ ಸರಕಾರಿ ಮಾದರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಡಿ.ಬಿ ಇನಾಮದಾರ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಪಿ.ಯು.ಸಿ ಹಾಗೂ ಪದವಿ ಶಿಕ್ಷಣ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಮುಗಿಸಿದರು. ಬಾಲ್ಯದಲ್ಲಿ ಕುಸ್ತಿ, ವಾಲಿಬಾಲ್ ಹಾಗೂ ಕಬಡ್ಡಿ ಕ್ರೀಡೆಗಳಲ್ಲಿ ಬಾಲ್ಯದಲ್ಲಿಯೇ ಅತ್ಯಂತ ಆಸಕ್ತಿ ಹೊಂದಿದ್ದರಿಂದ ಸಿ.ಪಿ.ಯಡ್ ವೃತ್ತಿ ಶಿಕ್ಷಣ ಮುಗಿಸಿದರು.

ಧಾರ್ಮಿಕ ಆಸಕ್ತಿ:

ಬಾಲ್ಯದಲ್ಲಿ ಕುಸ್ತಿ ಕ್ರೀಡೆಗೆ ಮಾರುಹೋಗಿದ್ದ ಪೂಜ್ಯರು ಪ್ರತಿದಿನ ತಾಲೀಮು ಬಯಸಿ ಬರುತ್ತಿದ್ದರು ಆಗಲೇ ಪಕ್ಕದಲ್ಲಿದ್ದ ಮಡಿವಾಳೇಶ್ವರ ಮಠಕ್ಕೆ ತೆರಳಲು ಆರಂಭಿಸಿ ಶ್ರದ್ಧಾ-ಭಕ್ತಿಯಿಂದ ಮಡಿವಾಳೇಶ್ವರ ಮಠದಲ್ಲಿ ಸೇವೆ ಆರಂಭಿಸಿದರು.

ಬಾಲ್ಯದಲ್ಲಿ ನಿಜಗುಣ ಶಿವಯೋಗಿಗಳ ಜೀವನ ಚರಿತ್ರೆ ಹಾಗೂ ಕೈವಲ್ಯಗಳನ್ನು ಓದುತ್ತಿದ್ದ ಪೂಜ್ಯರ ನಂತರ ಪೂಜ್ಯ ಅಡಿವೆಪ್ಪಜ್ಜನವರ ನೆಚ್ಚಿನ ಶಿಷ್ಯರಾಗಿ ಸಂಸಾರದ ಬಂಧನದಿಂದ ಮುಕ್ತರಾಗಿ ಧಾರ್ಮಿಕತೆಯನ್ನು ಹೊತ್ತುಕೊಂಡು ಬೆಳೆದರು.

ಚಿರ್ತದುರ್ಗ ಮುರಘಾ ಶರಣರ ನೆಚ್ಚಿನ ಶಿಷ್ಯ:

ಪೂಜ್ಯ ಅಡಿವೆಪ್ಪ ಮಹಾಸ್ವಾಮಿಗಳಿಗೆ ಇಳಿವಯಸ್ಸು ಮಠದಲ್ಲಿ ಶ್ರದ್ಧಾಭಕ್ತಿಯಿಂದ ಸೇವೆಯಲ್ಲಿ ತಲ್ಲಿನರಾಗಿದ್ದ
ಪೂಜ್ಯ ಬಸವ ಸಿದ್ಧಲಿಂಗ ಮಹಾಸ್ವಾಮಿಗಳನ್ನು ಧಾರ್ಮಿಕ ಶಿಕ್ಷಣ ಪಡೆಯಲು ರಾಜ್ಯದ ಬೇರೆ-ಬೇರೆ ಮಠಗಳಿಗೆ ಕಳುಹಿಸಿದರು ಕೆಲವು ದಿನಗಳ ನಂತರ ಚಿತ್ರದುರ್ಗದ ಬಸವತತ್ವ ಮಹಾವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಪಡೆದು ಸಮಾಜಸೇವಾ ದೀಕ್ಷೆಯನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಶಿಕ್ಷಣ ಪೂರೈಸಿದರು. ನಂತರ 2003ರಲ್ಲಿ ಕೂಡಲಸಂಗಮದಲ್ಲಿ ಪೂಜ್ಯರಿಗೆ ಜಂಗಮ ದೀಕ್ಷೆ ನೀಡಿದರು.

ಪೂಜ್ಯರು ಮುರಘಾ ಶರಣರ ಹಾಕಿಕೊಟ್ಟ ಮಾರ್ಗದಲ್ಲಿ ಹಾಗೂ ಲಿಂಗಾಯತ ಧರ್ಮದ ನಿಜಾಚರಣೆಯನ್ನು ಮಾಡುವಲ್ಲಿ ಬಹಳಷ್ಟು ಪರಿಣೀತರಾಗಿದ್ದರು.

ಗ್ರಾಮಸ್ಥರ ಮನವಿಗೆ ಪೂಜ್ಯರನ್ನು ಕಳುಹಿಸಲು ಒಪ್ಪಿದ ಮುರಘಾ ಶರಣರು:

ಸನ್ಯಾಸತ್ವ ಸ್ವೀಕರಿಸಿ ಪ್ರಾಮಾಣಿಕ ಹಾಗೂ ಪರಿಶುದ್ಧ ಜೀವನ ನಡೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ ಹಾಗೂ ಸನ್ಯಾಸಿಗಳ ಪ್ರವೃತ್ತಿ ಹಾಗೂ ಅವರ ಚಾರಿತ್ರ್ಯ ಕುರಿತು ಅವರಿಗೆ ಕಲಿಸಿದ ಗುರುಗಳಿಗೆ ಮಾತ್ರ ತಿಳಿದುವಂತಹದ್ದು ಇವರ ನಿಸ್ವಾರ್ಥ ಸೇವೆ ಪೂಜ್ಯರಿಗೆ ಬಹಳಷ್ಟು ಮೆಚ್ಚುಗೆಯಾಗಿತು.
ಗ್ರಾಮದ ಸುಮಾರು 50ಕ್ಕೂ ಅಧಿಕ ಹಿರಿಯರು ಚಿತ್ರದುರ್ಗದ ಮುರಘಾ ಮಠಕ್ಕೆ ಬೇಟಿ ನೀಡಿ ಶಿವಮೂರ್ತಿ ಶರಣರಿಗೆ ನಮ್ಮೂರಿನ ಪೂಜ್ಯರನ್ನು ಕರೆದುಕೊಂಡು ಹೋಗಲು ಬಂದಿದ್ದೇವೆ ಎಂದು ತಿಳಿಸಿದ ಮರು ಕ್ಷಣವೇ ಇಲ್ಲಾ ಇವರನ್ನು ಬೇರೆ ಮಠಕ್ಕೆ ಮಾಡಲು ಇಚ್ಛಿಸಿದ್ದೇವೆ ನಿಮ್ಮೂರಿಗೆ ಬೇಕಾದರೆ ಬೇರೆಯವರನ್ನು ಕಳುಹಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಪೂಜ್ಯರೊಂದಿಗೆ ಒತ್ತಾಯಪೂರ್ವಕವಾಗಿ ನಮ್ಮ ಗ್ರಾಮಕ್ಕೆ ಇವರೇ ಬೇಕು ದಯಮಾಡಿ ಕಳುಹಿಸಿ ಎಂದು ತಿಳಿಸಿದರು. ಆಗ ಬಹಳಷ್ಟು ಆಲೋಚಿಸಿ ಪೂಜ್ಯರಿಗೆ ತಾವೆಲ್ಲ ತೋರಿಸುತ್ತಿರುವ ಪ್ರೀತಿ-ವಾತ್ಸಲ್ಯಕ್ಕೆ ನಮ್ಮ ಮನಃಸೋತಿದೆ ಆದರೆ ನೀವುಗಳು ಅವರನ್ನು ಚನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಸ್ಟಾಂಪ್ ಮೇಲೆ ಒಪ್ಪಂದಕ್ಕೆ ಸಹಿ ಮಾಡಿ ನಂತರ ಕಳುಹಿಸುವುದಾಗಿ ತಿಳಿಸಿದ ಘಟನೆ ನಡೆಯಿತು. ಆಗಲಿ ಎಂದು ಒಪ್ಪಿಕೊಂಡು ಪೂಜ್ಯ ಬಸವ ಸಿದ್ಧಲಿಂಗ ಮಹಾಸ್ವಾಮಿಗಳನ್ನು ನೇಗಿನಹಾಳಕ್ಕೆ ಕರೆತಂದರು.

ಬಸವ ಸಿದ್ಧಲಿಂಗ ಶ್ರೀಗಳ ಆಗಮನ & ಬಸವ ಕೇಂದ್ರ ಸ್ಥಾಪನೆ:

2006-07ರಲ್ಲಿ ನೇಗಿನಹಾಳ ಗ್ರಾಮದ ಮಡಿವಾಳೇಶ್ವರ ಮಠಕ್ಕೆ ಜಂಗಮದೀಕ್ಷೆ ಪಡೆದು ಪೂಜ್ಯರಾಗಿ ಆಗಮಿಸಿ ಪೂಜ್ಯ ಬಸವ ಸಿದ್ಧಲಿಂಗ ಮಹಾಸ್ವಾಮಿಗಳು ಮಾಡಿದ ಮೊದಲ ಕಾರ್ಯಗಳು ಹಲವಾರು ಅವರ ನೇರ-ನಿಷ್ಠುರ ನುಡಿಗಳು, ಕಾಯಕತತ್ವ, ವಚನ ಸಾಹಿತ್ಯ ಪ್ರಸಾರ ವಿಚಾರಗಳಿಗೆ ಸ್ಪಂಧಿಸುವಲ್ಲಿ ನಮ್ಮೂರ ಜನತೆ ವಿಫಲರಾಗಿದ್ದೇವೆ.

ಬಸವ ಕೇಂದ್ರ ಆರಂಭ:

ನೇಗಿನಹಾಳ ಹಾಗೂ ಸುತ್ತಮುತ್ತಲಿನ ಜನತೆ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮೇಲೆ ಅಪಾರವಾದ ನಂಭಿಕೆ, ಶ್ರದ್ಧಾ-ಭಕ್ತಿಯನ್ನು ಹೊಂದಿದ್ದಾರೆ. ಮಠವೆಂದರೆ ಹೇಗಿರಬೇಕು, ಅಲ್ಲಿರುವ ಜಂಗಮರ ಕೆಲಸ ಏನು ಎಂಬುವುದನ್ನು ಜಗತ್ತಿಗೆ ಮಾದರಿಯಾಗುವಂತೆ ತೋರಿಸಿದವರು ನೇಗಿನಹಾಳದ ಪೂಜ್ಯ ಬಸವ ಸಿದ್ಧಲಿಂಗ ಮಹಾಸ್ವಾಮಿಗಳು.

ಹಲವಾರು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಮಠ ಕೇವಲ ವರ್ಷಕ್ಕೊಮ್ಮೆ ಜಾತ್ರೆ, ಪ್ರಸಾದ, ರಥೋತ್ಸವ ಮಾಡುವುದು ಮಾತ್ರ ನಡೆಯುತ್ತದ್ದ ಮಠದಲ್ಲಿ ಬಸವತತ್ವ ಸಮಾವೇಶ ಎಂದು ವೇದಿಕೆ ಸೃಷ್ಟಿಸಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಆರಂಭಿಸಿದರು.

ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ಪೂಜ್ಯರು, ಸಾಹಿತಿಗಳು, ವೈಚಾರಿಕತೆ ಚಿಂತಕರನ್ನು ಕರೆತಂದು ಜನರಲ್ಲಿ ಆಧುನಿಕತೆಯೊಂದಿಗೆ ಸರಳ ಮತ್ತು ವೈಚಾರಿಕ ಪ್ರಜ್ಞೆಯನ್ನು ಬೆಳೆಸಲಾರಂಭಿಸಿದರು.

ಚಟಮುಕ್ತ ಗ್ರಾಮದ ಸಂಕಲ್ಪಹೊತ್ತ ಶ್ರೀಗಳು:

ಗ್ರಾಮದಲ್ಲಿರುವ ಯುವಕರು, ಬಡವರು ಚಟಗಳಿಗೆ ದಾಸರಾಗಿ ತಮ್ಮ ಕುಟುಂಬವನ್ನು ಬೀದಿ ತರುವುದನ್ನು ತಡೆಯಬೇಕೆಂಬ ಸಂಕಲ್ಪದೊಂದಿಗೆ ಪ್ರತಿ ಸೋಮವಾರ ಬೀದಿ-ಬೀದಿಗಳಿಗೆ ಸಂಚರಿಸಿ ಯುವಕರಿಗೆ ತಿಳಿಹೇಳುವ ಕಾರ್ಯ ಆರಂಭಿಸಿದರು. ಹಲವಾರು ಯುವಕರು ಸ್ವಇಚ್ಛೆಯಿಂದ ತಮ್ಮ ದುಷ್ಟಚಟಗಳಿಂದ ದೂರವಿರಲು ಮುಂದೆ ಬಂದು ಪೂಜ್ಯರ ಜೋಳಿಗೆಗೆ ಹಾಕಿ ಇಷ್ಟಲಿಂಗ ದೀಕ್ಷೆ ಪಡೆದು ಆದರ್ಶ ಜೀವನ ಆರಂಭಿಸಿದರು.

ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ:

ಬಸವ ಕೇಂದ್ರ ಹಾಗೂ ಅಕ್ಕನ ಬಳಗದ ಮೂಲಕ ಯುವಕ-ಯುವತಿಯರಿಗೆ ಬಸವತತ್ವ ಸಂಸ್ಕಾರ ನೀಡುವದರ ಜೊತೆಗೆ ಇಷ್ಟಲಿಂಗ ದೀಕ್ಷೆ ನೀಡಿ ಏಕದೇವೂಪಾಸನೆ ಹಾಗೂ ಶಿವಯೋಗದ ಕುರಿತು ಮಾರ್ಗದರ್ಶನ ಮಾಡಿದರು. ಪ್ರತಿವರ್ಷ ಬಸವತತ್ವ ಸಮಾವೇಶದಲ್ಲಿ ಸಾವಿರಾರು ಜನರಿಗೆ ಇಷ್ಟಲಿಂಗ ದೀಕ್ಷೆ ನೀಡಿದರು.

ಶ್ರೀಗಳು ಕಾಯಕಜೀವಿಗಳಿಗೆ ಮಾರ್ಗದರ್ಶಕರು.
ರೈತ ಕುಟುಂಬದಲ್ಲಿ ಜನಸಿದ ಪೂಜ್ಯರು ಬಾಲ್ಯದಿಂದಲೂ ಕೃಷಿ ಕಾಯಕದಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದು ಜಂಗಮರು ಮಠದಲ್ಲಿ ಕುಳಿತು ಬೋಧನೆ ಮಾಡುವುದಷ್ಟೇ ಅಲ್ಲದೇ ತಮ್ಮ ನಿತ್ಯದ ಸಮಯದಲ್ಲಿ ಅಲ್ಪಾವಧಿ ಸಮಯವನ್ನಾದರೂ ದೈಹಿಕ ಶ್ರಮ ಮಾಡಬೇಕು ಎಂಬುವುದು ಇತರ ಎಲ್ಲರಿಗೂ ಮಾದರಿಯಾಗಿದೆ.

ಪೂಜ್ಯರು ವಚನ ಸಾಹಿತ್ಯ ಪ್ರಸಾರ, ಕೃಷಿ ಕಾಯಕ, ನೀರಾವರಿ, ತೋಟಗಾರಿಕೆ, ಗೋಶಾಲೆ, ಸಾಮಾಜಿಕ ಕಾರ್ಯಕ್ರಮಗಳ ಮಾಡುವುದರ ಜೊತೆಗೆ ಸರ್ವಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಮೌಢ್ಯ-ಕಂದಾಚಾರ, ಅಂದ ಅನುಕರಣೆಯ ಕುರಿತು ಅರಿವು ಮೂಡಿಸಿ ಜನರಲ್ಲಿ ವೈಚಾರಿಕ ಚಿಂತನೆ ಬೆಳೆಸಿದರು.

ಪೂಜ್ಯರಿಗೆ ಸಂಪ್ರದಾಯವಾದಿಗಳಿಂದ ಅಡಚಣೆ:

ಬಸವತತ್ವ ಪ್ರಸಾರಕರು, ನಾವೇ ಲಿಂಗಾಯತ ಧರ್ಮದ ಹೋರಾಟದ ಮುಂಚೂಣಿ ಮಾರ್ಗದರ್ಶಕರು ಎಂದು ಪ್ರಚಾರ ಪಡೆದು ಮರಳಿ ಒಳಗೆ ವೈದ್ಧಿಕೆಯನ್ನು ನೆಚ್ಚಿಕೊಂಡು ಜಾತಿಯ ವಾಸನೆಯನ್ನು ತೆಲೆಮೇಲೆ ಮೆರೆಸಿಕೊಂಡು ಬಸವತತ್ವ ನಿಷ್ಠರನ್ನು ಮೂಲೆ ಗುಂಪು ಮಾಡುವ ಹಲವಾರು ಸ್ವಾಮಿಗಳನ್ನು ಕಾಣಬಹುದು. ಆದರೆ ನೇಗಿನಹಾಳದ ಪೂಜ್ಯರು ನೇರ ನಿಷ್ಠುರ ಹಾಗೂ ನಡೆದಂತೆ ನುಡಿಯುವ ಕಾಯಕಜೀವಿಗಳು ಇವರು ಇದ್ದಾರೆ ಎಂದು ಬಹುತೇಕ ಜಂಗಮರಿಗೆ ಒಳಗೆ ಅಳುಕ ಉಂಟಾಗುತ್ತದೆ. ಅವರು ಭಕ್ತವರ್ಗದವರು ಎಂಬ ಭಾವನೆಯಿಂದ ಅವರಿಗೆ ಪ್ರಾಧಾನ್ಯತೆಯನ್ನು ನೀಡದೆ ಹೊರಗಿಟ್ಟು ಕೆಲಸ ಮಾಡುವ ಕಾರ್ಯಗಳು ಬಹಳಷ್ಟು ನಡೆಯುತ್ತಾ ಬಂದಿವೆ.

ಪೂಜ್ಯರು ನಿರ್ಮಿಸಿದ ಗಣಾಚಾರಿಗಳು:

ಪೂಜ್ಯರು ತಾವು ಬಾಲದಿಂದಲೂ ಕ್ರೀಡೆ ಹಾಗೂ ಧಾರ್ಮಿಕ ಆಸಕ್ತಿಯಿಂದ ಬೆಳೆದಿದ್ದರಿಂದ ಅವರಿಗೆ ಯುವಕರನ್ನು ಸರಿದಾರಿಗೆ ತರುವಲ್ಲಿ ಬಹುತೇಕ ಯಶಸ್ವಿಯಾದರು. ಮಠದಲ್ಲಿ ತಾವು ಕೃಷಿ ಕಾಯಕ ಮಾಡುತ್ತ ಬಂದ ಆದಾಯದಲ್ಲಿ ಅತ್ಯಂತ ಕಡುಬಡವರಿಗೆ ಮಠದಲ್ಲಿ ಇರಿಸಿಕೊಂಡು ಶಿಕ್ಷಣದ ವೆಚ್ಚಕ್ಕೆ ಸಹಕರಿಸಿ ಅವರಿಗೆ ಉತ್ತಮ ಮಾರ್ಗದರ್ಶನ ಮಾಡಿದರು. ನಿರುದ್ಯೋಗಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ಓದಲು ಮಠದಲ್ಲಿ ಅವಕಾಶ ಕಲ್ಪಿಸಿದರು, ಹಲವಾರು ಜನರಿಗೆ ಸ್ವ-ಉದ್ಯೋಗ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಿದರು. ಇದರಿಂದ ನೂರಾರು ಯುವಕರು ಸರಕಾರಿ ಉದ್ಯೋಗ, ಯಶಸ್ವಿ ಉದ್ಯಮಿಗಳಾದರು. ಜೊತೆಗೆ ಅವರೆಲ್ಲರಿಗೂ ಅಪ್ಪಟ ಬಸವತತ್ವದ ಆಚರಣೆಯಲ್ಲಿ ಸದಾ ಪೂಜ್ಯರ ಮಾರ್ಗದರ್ಶನದಲ್ಲಿ ಬೆಳೆಯುತ್ತಿದ್ದಾರೆ.

ಇಂದು ಗ್ರಾಮದಲ್ಲಿ ನೂರಾರು ಯುವಕರು ಬಸವತತ್ವ ನಿಜಾಚರಣೆ, ವಚನ ಸಾಹಿತ್ಯದ ಪ್ರಜ್ಞೆಯನ್ನು ಹೊಂದಿ ಪ್ರವಚನಗಳನ್ನು ಮಾಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ.

ಲಿಂಗಾಯತ ಅಭಿವೃದ್ಧಿ ಸಂಸ್ಥೆಗೆ ಮಾರ್ಗದರ್ಶನ

ನಾವೆಲ್ಲ ಬಸವ ಜಯಂತಿ ಅಂದರೆ ಅವತ್ತು ಎತ್ತುಗಳ ಮೆರವಣಿಗೆ, ಒಂದು ಟ್ರ್ಯಾಕ್ಟರಗೆ ಬಸವಣ್ಣನವರ ಪೋಟೋ ಹಾಕಿ ಇಷ್ಟವಾದ ಹಾಡುಗಳನ್ನು ಹಾಕಿ ಊರೆಲ್ಲ ಸುತ್ತಿ ಬಂದು ಮಠದಲ್ಲಿ ಪ್ರಸಾದ ಮಾಡಿ ಹೋಗುವುದು ಎಂದು ತಿಳಿದವರು. 2015 ರ ಬಸವಜಯಂತಿ ಅಂದು ಮಠದಲ್ಲಿ ಕರೆದ ಮೊದಲ ಪೂರ್ವಭಾವಿ ಸಭೆ ಹಾಜರಾದ ತಿಳಿಯಿತು ಬಸವ ಜಯಂತಿ ಅಂದರೆ ಎತ್ತುಗಳ ಮೆರವಣಿಗೆ ಅಲ್ಲಾ, ಸಿಕ್ಕ-ಸಿಕ್ಕ ಹಾಡುಗಳ ಹಾಕಿ ಕುಣಿಯುವುದು ಅಲ್ಲಾ ಅಂತಾ. ಬಸವಣ್ಣನವರ ಕುರಿತು ಪುಸ್ತಕದಲ್ಲಿ ಎಲ್ಲರಂತೆ ಇವರು ಒಬ್ಬ ದಾರ್ಶನಿಕರು ಅಂತ ಅಷ್ಟೇ ತಿಳಿದಿದ್ದು ಆದರೆ ಅವರ ಮಾಡಿದ ಸಾಮಾಜಿಕ ಧಾರ್ಮಿಕ ಚಳುವಳಿ ಜಗತ್ತಿಗೆ ಮಾದರಿಯಾಗಿದೆ. ಬಸವಣ್ಣನವರು ಲಿಂಗಾಯತ ಧರ್ಮದ ಗುರುಗಳು, ಲಿಂಗಾಯತ ಧರ್ಮ ಎಂದರೆ ನೂರಾರು ಕಾಯಕಜೀವಿಗಳು ಸೇರಿದ ಒಂದು ಸಮಾನತೆಯ ಸಮಾಜ ಎಂದು ಅರ್ಥಮಾಡಿಸಿದ್ದು ಪೂಜ್ಯ ಬಸವ ಸಿದ್ಧಲಿಂಗ ಮಹಾಸ್ವಾಮಿಗಳು. ಆಗಲೇ ಮಠದಲ್ಲಿರುವ ಸಹೋದರರೊಂದಿಗೆ ಬೆರೆತು ಪೂಜ್ಯರ ಮಾರ್ಗದರ್ಶನ ಅರಿಯುತ್ತ ಮುನ್ನಡೆದವು. ನಂತರದ ದಿನಗಳಲ್ಲಿ ಬಸವತತ್ವ ಪ್ರಸಾರಕ್ಕಾಗಿ ಹಾಗೂ ಸರಕಾರದಿಂದ ಸಹಾಯ-ಸಹಕಾರ ಪಡೆಯಬೇಕೆಂದು ಲಿಂಗಾಯತ ಅಭಿವೃದ್ಧಿ ಸಂಸ್ಥೆ ಆರಂಭಿಸಿದೆವು. ಅಂದು ಆರಂಭಿಸಿದ ಸಂಸ್ಥೆ ನನ್ನನ್ನು ಇಂದು ಬಹಳಷ್ಟು ಅನುಭವಗಳನ್ನು, ಸಮಾಜಸೇವೆ ಮಾಡಿದ ತೃಪ್ತಿಯನ್ನು ನೀಡಿತು.
ಪೂಜ್ಯರ ಮಾರ್ಗದರ್ಶನದಲ್ಲಿ ಶರಣರ ಜಯಂತಿಗಳು, ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಧರ್ಮಕ್ಷೇತ್ರ ಪ್ರವಾಸ, ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮಗಳು, ಬಸವಜ್ಯೋತಿ ಕಾರ್ಯಕ್ರಮಗಳು, ಬಸವ ಪಂಚಮಿ, ಶರಣರ ದಿನದರ್ಶಿಕೆ, ಪ್ರತಿಭಾವಂತರಿಗೆ ಸತ್ಕಾರ, ಹೀಗೆ ಹತ್ತಾರು ಕಾರ್ಯಕ್ರಮ ಮಾಡುವ ಮೂಲಕ ನಮ್ಮಲ್ಲಿ ಬಸವತತ್ವ ಗಟ್ಟಿಗೊಂಡಿತು.
ನೇಗಿನಹಾಳದ ಕಳಸಪ್ರಾಯವಾದ ಬಸವಣ್ಣನವರ ಮೂರ್ತಿ ಪ್ರತಿಷ್ಠಾನ ಮಾಡುವ ಮೂಲಕ ಸಂಸ್ಥೆಯ ಕಾರ್ಯ ಶಾಶ್ವತವಾಗಿ ಅಚ್ಚಳಿಯದೆ ಉಳಿಯಿತು.

ಲಿಂಗಾಯತ ಹೋರಾಟದಲ್ಲಿ ಭಾಗಿಯಾಗಲು ಪ್ರೇರಣೆ ನೀಡಿದ ಪೂಜ್ಯರು.

ನಾವು ಬೈಲಹೊಂಗಲದ ಬಸವರಾಜ ಹುಬ್ಬಳ್ಳಿ ಸರ್ ವಿರೇಶ ಹಲಕಿ ಅಣ್ಣಾ ಹಾಗೂ ಕಿತ್ತೂರು ಬಸವರಾಜ ಕಡೇಮನಿ ಅವರ ಜೊತೆಗೂಡಿ ಬಸವತತ್ವದ ಕಾರ್ಯಗಳನ್ನು ತಪ್ಪದೇ ಭಾಗವಹಿಸಲು ಆರಂಭಿಸಿದೆವು. ನಂತರ ಬೆಳಗಾವಿಯ ಶಂಕರ ಗುಡಸ ಕಾಕಾ ನಮ್ಮ ಗ್ರಾಮದ ಯುವಕರನ್ನು ರಾಜ್ಯಮಟ್ಟದ ಎಲ್ಲ ಕಾರ್ಯಕ್ರಮಗಳಿಗೆ ಕರೆದೊಯ್ಯುವ ಮೂಲಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಭಾಗಿಯಾಗಿಸಿದರು.
ಬೀದರ ಸಮಾವೇಶ ಮುಗಿದ ತಕ್ಷಣ ನಮ್ಮ ಪೂಜ್ಯರು ಬೆಳಗಾವಿಯಲ್ಲಿ ಒಂದು ದೊಡ್ಡ ಕಾರ್ಯಕ್ರಮ ನಡೆಯಬೇಕು ಎಂದು ಚರ್ಚಿಸಲಾರಂಭಿಸಿದ್ದರು. ಇದೇ ಸಂದರ್ಭದಲ್ಲಿ ಬೆಳಗಾವಿಯ ಲಿಂಗಾಯತ ಸಮಾವೇಶ ದಿನಾಂಕ ನಿಗದಿಯಾಯಿತು. ನಿಗದಿಯಾದ ದಿನದಿಂದ ಸಮಾವೇಶದ ಹಿಂದಿನ ದಿನ ರಾತ್ರಿ 11:00 ಗಂಟೆಯವರೆಗೆ ಬಿಡುವಿಲ್ಲದೆ ಹಳ್ಳಿ-ಹಳ್ಳಿಗೆ ತಿರುಗಿ ಜನರನ್ನು ಸಮಾವೇಶಕ್ಕೆ ಬರಲು ಆಹ್ವಾನಿಸಿದರು. ಮನೆ-ಮನೆಗೆ ಕರಪತ್ರ ಹಂಚಲು ನಮ್ಮನೆಲ್ಲ ಕರೆದುಕೊಂಡು ಹೋಗಿದ್ದು ಇತಿಹಾಸದಲ್ಲಿ ಉಳಿಯುವಂತೆ ಮಾಡಿದರು.
ನಂತರ ನಡೆದ ಎಲ್ಲ ಸಮಾವೇಶಗಳಲ್ಲಿ ತಪ್ಪದೇ ಭಾಗಿಯಾಗಿ ನಮ್ಮೂರಿನಿಂದ ಪ್ರತಿ ಸಮಾವೇಶಗಳಲ್ಲಿ ನೂರಾರು ಯುವಕರು ಸೇರುವಂತೆ ಮಾಡಿದರು.

ಪೂಜ್ಯರು ದೆಹಲಿ ಲಿಂಗಾಯತ ಹೋರಾಟದಲ್ಲಿ ಭಾಗಿ

ಬೆಳಗಾವಿ ಜಿಲ್ಲೆಯ ನೇಗಿನಹಾಳ ಎಂಬ ಚಿಕ್ಕ ಗ್ರಾಮದಿಂದ ಸಾವಿರಾರು ಕಿ‌.ಮೀ ದೂರದ ದೆಹಲಿಯ ಲಿಂಗಾಯತ ಹೋರಾಟಕ್ಕಾಗಿ ಗ್ರಾಮದ ಯುವಕರನ್ನು ಒಂದುಗೂಡಿಸಿ 80ಕ್ಕೂ ಅಧಿಕ ಜನರನ್ನು ಕರೆದುಕೊಂಡು ಹೋಗಿ ಭಾರತ ದೇಶದ ತುತ್ತತುದಿಯಲ್ಲಿನ ಕಾಶ್ಮೀರದಿಂದ, ಹಿಮಾಚಲ ಪ್ರದೇಶ, ಪಂಜಾಬ, ಹರಿಯಾಣ, ಉತ್ತರ ಪ್ರದೇಶ ಪ್ರವಾಸ ಮಾಡಿಸಿ ನಂತರ ಮೂರು ದಿನಗಳ ಕಾಲ ದೆಹಲಿ ಲಿಂಗಾಯತ ಸಮಾವೇಶದಲ್ಲಿ ಭಾಗಿಯಾಗುವ ಮೂಲಕ ನೇಗಿನಹಾಳದ ಕೀರ್ತಿ ಪತಾಕೆ ಹಾರಿಸಿದರು. ದೆಹಲಿಯಲ್ಲಿ ನಡೆದ ಪಾದಯಾತ್ರೆಯಲ್ಲಿ ಪೂಜ್ಯರ ಉತ್ಸಾಹ, ಹುಮ್ಮಸ್ಸು, ಪ್ರತಿಯೊಬ್ಬರ ಮೇಲೆ ಕಾಳಜಿ ತಾಯಿಯ ಮಮತೆಯನ್ನು ಮೀರಿಸಿತು. ಇವರನ್ನು ಪಡೆದ ನಾವೇ ದನ್ಯರು.

ಗ್ರಾಮದಲ್ಲಿ ಹಳ್ಳ ಹಾಗೂ ಕೆರೆಯಿಂದ ಗ್ರಾಮಸ್ಥರಿಗೆ ತೊಂದರೆಯಾದಗ ಮಠದಲ್ಲಿ ಸಂಘಸಂಸ್ಥೆಗಳ ಸಹಾಯದಿಂದ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು

 

ಪೂಜ್ಯರಿಂದ ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶನ:

ನಾನು ಸಹ ಬಸವತತ್ವದ ಗಂಧ-ಗಾಳಿ ಅರಿಯದೆ ಮಠದಿಂದ ಬಹಳಷ್ಟು ದೂರದಲ್ಲೇ ಕುಳಿತು ಜೀವನ ನಡೆಸುತ್ತಿದ್ದ ವ್ಯಕ್ತಿ. ಇವತ್ತು ನನ್ನಂತಹ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಜಗತ್ತಿನ ತುಂಬೆಲ್ಲಾ ಪರಿಚಯಿಸಿದ್ದು ನಮ್ಮೂರಿನ ಪೂಜ್ಯರ ಮಾರ್ಗದರ್ಶನದಿಂದಲೇ ಸಾಧ್ಯವಾಗಿದೆ.

2015ರ ನಂತರ ಪೂಜ್ಯರ ಸಂಪರ್ಕಕ್ಕೆ ಬಂದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಗ್ರಾಮದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುವುದ ಮೂಲಕ ಪರಿಚಿತವಾಗಲು ಕಾರಣವಾದೆ. ನಂತರ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರನಾಗಿ ತಾಲೂಕಿನಲ್ಲಿ ಬೆಳೆದು ಲಿಂಗಾಯತ ಧರ್ಮದ ಹೋರಾಟ, ಲಿಂಗಾಯತ ಕ್ರಾಂತಿ ಪತ್ರಿಕೆಯಿಂದ ಇಂದು ಲಕ್ಷಾಂತರ ಜನರು ನೇಗಿನಹಾಳ ಗ್ರಾಮದ ವಿಳಾಸ ಓದುವಂತೆ ಆಗಿದ್ದು ಸಹ ನಮ್ಮ ಪೂಜ್ಯರ ಮಾರ್ಗದರ್ಶನದಿಂದಲೇ ಎಂದು ತಿಳಿಸಲು ಹೆಮ್ಮೆಯಾಗುತ್ತದೆ.

ಮುಂದುವರೆಯುವುದು………….

About Shivanand

Admin : Lingayat Kranti Monthly news paper 8884000008 [email protected]

Check Also

ಸೆ. 25ರಂದು “ಮಹಾತ್ಮರ ಚರಿತಾಮೃತ” ಲೋಕಾರ್ಪಣೆ

ಅಥಣಿ: ಗಡಿಭಾಗದಲ್ಲಿ ನಾಡು-ನುಡಿ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಂತ-ಮಹಾಂತರ …

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು …

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ …

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ …

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ …

ಕ್ರೀಡೆ, ಕಲೆ, ಸಾಹಿತ್ಯದಂಥ ರಂಗಗಳು ಜಾತಿ, ಸಂಕುಚಿತತೆ ನಿರ್ಮೂಲನೆಯ ಮಹಾಸಾಧನಗಳು

  ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಮತ ಮುಂಡರಗಿ ಆಗಷ್ಟ್ 07: ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. …

ಪ್ರಮಾಣ ವಚನ ನೇರಪ್ರಸಾರ; ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ರಾಜಭವನದಿಂದ ನೇರ ಪ್ರಸಾರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇಂದು ಮಧ್ಯಾಹ್ನ 2:15ಕ್ಕೆ …

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

  ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ …

ತ್ರಿಭಾಷೆಗಳಲ್ಲಿ ಮೂಡಿಬಂದ ಮಹಾಜಂಗಮ

ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ …

ಹಡಪದರನ್ನು ನೋಡುವ ನೋಟ ಬದಲಾಗಲಿ

ಗಜೇಂದ್ರಗಡ ಜುಲೈ 25: ಅಸಮಾನತೆ, ಜಾತಿವಾದ ವ್ಯವಸ್ಥೆಯ ಈ ಸಮಾಜದಲ್ಲಿ ದಲಿತ ಜನಾಂಗದವರು ಮುಟ್ಟಿಸಿಕೊಳ್ಳದ ಅಸ್ಪೃಶ್ಯತೆಯ ಅವಮಾನಕ್ಕೊಳಗಾಗುತ್ತಿದ್ದಾರೆ. ಹಾಗೆಯೇ ಹಡಪದ …

ಯಡಿಯೂರಪ್ಪ ಅವರನ್ನು ಘನತೆಯಿಂದ ನಡೆಸಿಕೊಳ್ಳಿ- ಡಾ. ಎಂ ಬಿ ಪಾಟೀಲ

ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದು, ಬಿ.ಎಸ್. ಯಡಿಯೂರಪ್ಪ …

ನಾಗನೂರ ರುದ್ರಾಕ್ಷಿಮಠಕ್ಕೆ ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ ಬೇಟಿ

ಅಂತರರಾಷ್ಟ್ರೀಯ ಬಸವ ಗ್ರಂಥಾಲಯ ನಿರ್ಮಾಣದ ಕುರಿತು ಚಿಂತನೆ ಬೆಳಗಾವಿ : ಶುಕ್ರವಾರ ಶಿವಬಸವ ನಗರದ ನಾಗನೂರ ರುದ್ರಾಕ್ಷಿಮಠಕ್ಕೆ ಬೇಟಿ ನೀಡಿ …

47ನೇ ತ್ರೈಮಾಸಿಕ ಶಿವಾನುಭವ-ಗುರುವಂದನೆ

  ಮುಂಡರಗಿ ಜುಲೈ 12: ೧೨ನೆಯ ಶತಮಾನದ ಬಸವಾದಿ ಶರಣರು ದೇವರ ಕಲ್ಪನೆಯನ್ನು ಇಷ್ಟಲಿಂಗದಲ್ಲಿ ಕಂಡರು.ಗರ್ಭಗುಡಿ ಸಂಸ್ಕೃತಿಯಿಂದ ಜನರನ್ನು ಹೊರತಂದು,ಇಷ್ಟಲಿಂಗ …

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ …

ನೇಗಿನಹಾಳ ಗ್ರಾಮದ ಸಮಸ್ಯೆಗಳ ಆಲಿಸಿದ ತಹಶಿಲ್ದಾರ್ ಬಸವರಾಜ ನಾಗರಾಳ್

ಗ್ರಾಮದ ಜನತಾ ಕಾಲನಿಯಲ್ಲಿ ನೀರು ನುಗ್ಗಿದ್ದರಿಂದ ಮನೆಗಳು ಬಿದ್ಧಿರುವ ಸ್ಥಳಗಳಿಗೆ ಬೇಟಿ ನೀಡಿದರು. ನೇಗಿನಹಾಳ (ಬೆಳಗಾವಿ) : ಗ್ರಾಮದಲ್ಲಿನ ಸಮಸ್ಯೆಗಳನ್ನು …

Leave a Reply

Your email address will not be published. Required fields are marked *