Home / featured / “ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ ನಾಯಕ, ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ, ಶಾಸಕ ಡಾ. ಎಂ ಬಿ ಪಾಟೀಲ ಮಾನ್ಯ ಮುಖ್ಯಮಂತ್ರಿಯವರನ್ನು ಬೆಂಗಳೂರಿನಲ್ಲಿ ಇಂದು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಕಾರಾತ್ಮವಾಗಿ ಸ್ಪಂದಿಸಿರುವುದಾಗಿ ಅವರು ತಿಳಿಸಿದ್ದಾರೆ.

ವಚನಪಿತಾಮಹ ಡಾ. ಫ.ಗು.ಹಳಕಟ್ಟಿಯವರ ಕುರಿತು: ಅನುಭಾವಿ, ವಚನ ಗುಮ್ಮಟದ ಶರಣ ಎಂದು ಜನಮಾನಸದಲ್ಲಿ ಉಳಿದುಕೊಂಡವರು.

ಅವರು ಹಲವು ಶಕ್ತಿಗಳ ಸಂಗಮ. ಒಂದು ವಿಶ್ವವಿದ್ಯಾಲಯ, ಒಂದು ಸರಕಾರಿ ಅಥವಾ ಸಹಕಾರಿ ಸಂಸ್ಥೆ ಮಾಡಬಹುದಾದ ಬೃಹತ್ ಕಾರ್ಯಗಳನ್ನು ಏಕಾಂಗಿವೀರರಾಗಿ ಸಾಧಿಸಿ ತೋರಿಸಿದ ಧೀರರು.

ವಕೀಲರಾಗಿ, ಸಾಹಿತ್ಯ ಸಂಪಾದಕರಾಗಿ, ಪತ್ರಿಕಾ ಸಂಪಾಕರಾಗಿ, ಮುಂಬಯಿ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾಗಿ, ಸಂಘ-ಸಂಸ್ಥೆಗಳ ಸಂಸ್ಥಾಪಕರಾಗಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ನಾಡು-ನುಡಿಯ ಏಳಿಗೆಗಾಗಿ ನಿರಂತರ ಹೋರಾಟ ಮಾಡುತ್ತ, ತಾವು ನೋವನ್ನುಂಡು ಪರರಿಗೆ ಸಂತೋಷವನ್ನು ನೀಡಿದ ತ್ಯಾಗಮಯಿ ಜೀವಿ ಅವರು.

ಬಸವಾದಿ ಶರಣ-ಶರಣೆಯರಿಂದ ರಚಿಸಲ್ಪಟ್ಟ ವಚನ-ಸ್ವರ ವಚನ ಸಾಹಿತ್ಯವು ಕಾರಣಾಂತರಗಳಿಂದ ಜನಸಾಮಾನ್ಯರ ಗಮನಕ್ಕೆ ಬಾರದೆ, 19 ನೆಯ ಶತಮಾನದ ಕೊನೆಯ ವರೆಗೆ ಗುಪ್ತವಾಗಿಯೇ ಉಳಿದಿತ್ತು. ಈ ಸಾಹಿತ್ಯ ನಿಧಿಯನ್ನು ಲೋಕದ ಗಮನಕ್ಕೆ ತರುವ ಮಹತ್ಕಾರ್ಯವು 20 ನೆಯ ಶತಮಾನದ ಆದಿಯಲ್ಲಿ ಪ್ರಾರಂಭವಾಯಿತು.

ಡಾ. ಹಳಕಟ್ಟಿ ಅವರ ಅವಿರತ ಪರಿಶ್ರಮದ ಫಲವಾಗಿ ವಚನ ಸಾಹಿತ್ಯವು ಬೃಹತ್ ಪ್ರಮಾಣದಲ್ಲಿ ಬೆಳಕು ಕಂಡಿತು. ಶರಣ ಸಾಹಿತ್ಯವನ್ನು ಕನ್ನಡಿಗರೆಲ್ಲರ ಗಮನಕ್ಕೆ ತರುವ ಘನ ಉದ್ದೇಶದಿಂದ ಅವರು “ಶಿವಾನುಭವ” ಎಂಬ ನಿಯತಕಾಲಿಕವನ್ನು ಫೆಬ್ರುವರಿ 1926 ರಲ್ಲಿ ಪ್ರಾರಂಭಿಸಿದರು. ಈ ಪತ್ರಿಕೆಯು ಫೆಬ್ರುವರಿ 1926 ರಿಂದ ಮಾರ್ಚ 1931 ರವರೆಗೆ ತ್ರೈಮಾಸಿಕವಾಗಿ, ಎಪ್ರಿಲ್ 1931 ರಿಂದ ಜೂನ 1936 ರ ವರೆಗೆ ದೈಮಾಸಿಕವಾಗಿ, ಅಗಸ್ಟ 1936 ರಿಂದ ಫೆಬ್ರುವರಿ 1961 ರ ವರೆಗೆ ಮಾಸಿಕವಾಗಿ, ಪತ್ರಿಕೆಯು ಸತತವಾಗಿ 35 ವರುಷಗಳ ಪರ್ಯಂತ ಸಾಹಿತ್ಯ ಸೇವೆಯನ್ನು ಮುಂದುವರಿಸಿಕೊಂಡು ಬಂದಿತು.

ಪತ್ರಿಕೆಯಲ್ಲಿ ಡಾ. ಹಳಕಟ್ಟಿಯವರು ತಾವು ಬರೆಯುವುದಲ್ಲದೆ, ಸಮಕಾಲೀನ ಸುಮಾರು 1300 ವಿದ್ವಾಂಸರು ವಿವಿಧ ವಿಷಯಗಳ ಮೇಲೆ ಮೌಖಿಕವಾದ ಲೇಖನಗಳನ್ನು ಬರೆದಿದ್ದಾರೆ.

ಉತ್ತರ ಕರ್ನಾಟಕದಿಂದ ಹಳಕಟ್ಟಿಯವರಲ್ಲದೆ ಡಾ. ನಂದೀಮಠ, ಡಾ. ಮಾಳವಾಡ, ಡಾ.ಕೆ.ಜಿ.ಕುಂದಣಗಾರ, ಮಧುರಚೆನ್ನರು, ದಕ್ಷಿಣ ಕರ್ನಾಟಕದಿಂದ, ಬಿ.ಶಿವಮೂರ್ತಿ ಶಾಸ್ತ್ರಿಗಳು, ಎಂ.ಬಿ.ನಂಜುಂಡಾರಾಧ್ಯ, ಮಲ್ಲಪ್ಪ, ಎಂ.ಆರ್.ಶ್ರೀನಿವಾಸಮೂರ್ತಿ ಮೊದಲಾದ ಅಂದಿನ ಶ್ರೇಷ್ಠ ವಿದ್ವಾಂಸರು ಲೇಖನಗಳನ್ನು ಬರೆದಿದ್ದಾರೆ.

ಅಲ್ಲದೆ ಓರ್ವ ವೀರಶೈವ, ಓರ್ವ ಸಮಾಜ ಸೇವಕ, ಶಿವಸುತ, ಸಮಾಜ ಶಿಸು, ಓರ್ವ ವೀರಶೈವಾಭಿಮಾನಿ ಇತ್ಯಾದಿ ಗುಪ್ತ ನಾಮಗಳಿಂದಲೂ ಬರೆದಿದ್ದಾರೆ .

ಶಿವಾನುಭವ ಪತ್ರಿಕೆಯ ಸಂಚಿಕೆಗಳು ಈಗ ಬಹುತೇಕವಾಗಿ ಎಲ್ಲಿಯೂ ದೊರೆಯುವದಿಲ್ಲ.

ಇದರಲ್ಲಿ ಶಾಸನಗಳು, ಹಸ್ತಪ್ರತಿಗಳು, ಗ್ರಂಥ ಸೂಚಿಗಳು, ಗ್ರಂಥ ವಿಮರ್ಶೆಗಳು, ಸಂಶೋಧನೆ, ತತ್ವಶಾಸ್ತ್ರ, ಮನೋವಿಜ್ಞಾನ ಅವಸ್ಥೆಗಳು, ನೀತಿಶಾಸ್ತ್ರ, ವೀರಶೈವ ಧರ್ಮ, ಇತ್ಯಾದಿ ಅನೇಕ ಮೌಖಿಕ ವಿಷಯಗಳ ಮೇಲೆ ಹಲವಾರು ಸಣ್ಣ ಮತ್ತು ದೀರ್ಘ ಲೇಖನಗಳಿವೆ.

ಇವುಗಳು ಮತ್ತೆಲ್ಲೂ ಪ್ರಕಟವಾಗಿಲ್ಲ ಎಂದು ಕಂಡು ಬರುತ್ತದೆ. ಆದ್ದರಿಂದ ಕರ್ನಾಟಕದ ಇತಿಹಾಸ, ಸಂಸ್ಕೃತಿ, ಕಲೆ, ಸಾಹಿತ್ಯವನ್ನು ತಿಳಿದುಕೊಳ್ಳಲು ಶಿವಾನುಭವ ಪತ್ರಿಕೆಗಳ ಮರುಮುದ್ರಣ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಚನಪಿತಾಮಹ ಡಾ. ಫ ಗು ಹಳಕಟ್ಟಿ ಸಂಶೋಧನ ಕೇಂದ್ರವು ಕಳೆದ 15 ವರುಷಗಳಿಂದ ಕಾರ್ಯ ಮಾಡುತ್ತಿದೆ.

ಸಂಶೋಧನ ಕೇಂದ್ರವು ಕನ್ನಡ ವಿಶ್ವವಿದ್ಯಾಲಯ, ಹಂಪಿಗೆ ಸಂಲಗ್ನವಾಗಿದೆ. ಇಲ್ಲಿ ಪಿಹೆಚ್.ಡಿ ಮಟ್ಟದ ಅಭ್ಯಾಸ ನಡೆಯುತ್ತಲಿದ್ದು, ಆಗಲೇ ಹತ್ತು ವಿದ್ಯಾರ್ಥಿಗಳು ಪದವಿಯನ್ನು ಪಡೆದಿದ್ದಾರೆ. ಮತ್ತೆ ಹತ್ತು ಜನರು ಅಭ್ಯಸಿಸುತ್ತಿದ್ದಾರೆ.

ಸಂಶೋಧನ ಕೇಂದ್ರವು ಡಾ. ಹಳಕಟ್ಟಿ ಅವರ ಸಮಗ್ರ ಸಾಹಿತ್ಯವನ್ನು 15 ಸಂಪುಟಗಳಲ್ಲಿ, ಆದಿಲಶಾಹಿಗಳ ಸಮಕಾಲೀನ ಪರ್ಶಿಯನ್, ಅರೇಬಿಕ್, ದಖಣಿ ಉರ್ದು ಭಾಷೆಗಳಲ್ಲಿರುವ ಸಾಹಿತ್ಯದ ಅನುವಾದ ಮಾಡಿ ಪ್ರಕಟಿಸಿದ 18 ಸಂಪುಟಗಳು ಮತ್ತು ಇದೀಗ ಡಾ. ಎಂ ಎಂ ಕಲಬುರ್ಗಿ ಸಮಗ್ರ ಸಾಹಿತ್ಯವನ್ನು 40 ಸಂಪುಟಗಳಲ್ಲಿ ಪ್ರಕಟಿಸಿದೆ.

ಡಾ. ಹಳಕಟ್ಟಿ ಸಂಶೋಧನ ಕೇಂದ್ರವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದುದಲ್ಲದೆ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದೆ.

About Shivanand

Admin : Lingayat Kranti Monthly news paper 8884000008 [email protected]

Check Also

ಸೆ. 25ರಂದು “ಮಹಾತ್ಮರ ಚರಿತಾಮೃತ” ಲೋಕಾರ್ಪಣೆ

ಅಥಣಿ: ಗಡಿಭಾಗದಲ್ಲಿ ನಾಡು-ನುಡಿ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಂತ-ಮಹಾಂತರ …

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು …

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ …

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ …

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ …

ಕ್ರೀಡೆ, ಕಲೆ, ಸಾಹಿತ್ಯದಂಥ ರಂಗಗಳು ಜಾತಿ, ಸಂಕುಚಿತತೆ ನಿರ್ಮೂಲನೆಯ ಮಹಾಸಾಧನಗಳು

  ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಮತ ಮುಂಡರಗಿ ಆಗಷ್ಟ್ 07: ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. …

ಪ್ರಮಾಣ ವಚನ ನೇರಪ್ರಸಾರ; ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ರಾಜಭವನದಿಂದ ನೇರ ಪ್ರಸಾರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇಂದು ಮಧ್ಯಾಹ್ನ 2:15ಕ್ಕೆ …

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

  ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ …

ತ್ರಿಭಾಷೆಗಳಲ್ಲಿ ಮೂಡಿಬಂದ ಮಹಾಜಂಗಮ

ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ …

ಹಡಪದರನ್ನು ನೋಡುವ ನೋಟ ಬದಲಾಗಲಿ

ಗಜೇಂದ್ರಗಡ ಜುಲೈ 25: ಅಸಮಾನತೆ, ಜಾತಿವಾದ ವ್ಯವಸ್ಥೆಯ ಈ ಸಮಾಜದಲ್ಲಿ ದಲಿತ ಜನಾಂಗದವರು ಮುಟ್ಟಿಸಿಕೊಳ್ಳದ ಅಸ್ಪೃಶ್ಯತೆಯ ಅವಮಾನಕ್ಕೊಳಗಾಗುತ್ತಿದ್ದಾರೆ. ಹಾಗೆಯೇ ಹಡಪದ …

ಯಡಿಯೂರಪ್ಪ ಅವರನ್ನು ಘನತೆಯಿಂದ ನಡೆಸಿಕೊಳ್ಳಿ- ಡಾ. ಎಂ ಬಿ ಪಾಟೀಲ

ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದು, ಬಿ.ಎಸ್. ಯಡಿಯೂರಪ್ಪ …

ನಾಗನೂರ ರುದ್ರಾಕ್ಷಿಮಠಕ್ಕೆ ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ ಬೇಟಿ

ಅಂತರರಾಷ್ಟ್ರೀಯ ಬಸವ ಗ್ರಂಥಾಲಯ ನಿರ್ಮಾಣದ ಕುರಿತು ಚಿಂತನೆ ಬೆಳಗಾವಿ : ಶುಕ್ರವಾರ ಶಿವಬಸವ ನಗರದ ನಾಗನೂರ ರುದ್ರಾಕ್ಷಿಮಠಕ್ಕೆ ಬೇಟಿ ನೀಡಿ …

47ನೇ ತ್ರೈಮಾಸಿಕ ಶಿವಾನುಭವ-ಗುರುವಂದನೆ

  ಮುಂಡರಗಿ ಜುಲೈ 12: ೧೨ನೆಯ ಶತಮಾನದ ಬಸವಾದಿ ಶರಣರು ದೇವರ ಕಲ್ಪನೆಯನ್ನು ಇಷ್ಟಲಿಂಗದಲ್ಲಿ ಕಂಡರು.ಗರ್ಭಗುಡಿ ಸಂಸ್ಕೃತಿಯಿಂದ ಜನರನ್ನು ಹೊರತಂದು,ಇಷ್ಟಲಿಂಗ …

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ …

ನೇಗಿನಹಾಳ ಗ್ರಾಮದ ಸಮಸ್ಯೆಗಳ ಆಲಿಸಿದ ತಹಶಿಲ್ದಾರ್ ಬಸವರಾಜ ನಾಗರಾಳ್

ಗ್ರಾಮದ ಜನತಾ ಕಾಲನಿಯಲ್ಲಿ ನೀರು ನುಗ್ಗಿದ್ದರಿಂದ ಮನೆಗಳು ಬಿದ್ಧಿರುವ ಸ್ಥಳಗಳಿಗೆ ಬೇಟಿ ನೀಡಿದರು. ನೇಗಿನಹಾಳ (ಬೆಳಗಾವಿ) : ಗ್ರಾಮದಲ್ಲಿನ ಸಮಸ್ಯೆಗಳನ್ನು …

Leave a Reply

Your email address will not be published. Required fields are marked *