Home / featured / ‘ಲಿಂಗಾಯತ’ ಚಳವಳಿಗೆ ಕಿಚ್ಚು ಹಚ್ಚಿದವರೇ ಲಿಂಗಾನಂದ ಶ್ರೀ!

‘ಲಿಂಗಾಯತ’ ಚಳವಳಿಗೆ ಕಿಚ್ಚು ಹಚ್ಚಿದವರೇ ಲಿಂಗಾನಂದ ಶ್ರೀ!

 

ಲಿಂಗಾಯತ ಕ್ರಾಂತಿ:  ಆ ದುರ್ದಿನಗಳಲ್ಲಿ ಬಸವಾದಿ ಶರಣರನ್ನು ಹಳ್ಳಿ ಹಳ್ಳಿಗೂ ತಲುಪಿಸಿ, ಸಾಮಾನ್ಯರಲ್ಲಿ ‘ಲಿಂಗಾಯತ’ದ ಅರಿವು ಮೂಡಿಸಿದ್ದು ಲಿಂಗಾನಂದ ಶ್ರೀಗಳು.

ಇವತ್ತು ಅವರ ಪುಣ್ಯ ಸ್ಮರಣೆ. ತಮ್ಮ ನಂತರ ಮಾತೆ ಮಹಾದೇವಿ, ನಿಜಗುಣಾನಂದ ಶ್ರೀಗಳಂತಹ ಅನೇಕರನ್ನು ತಯಾರು ಮಾಡಿ, ಏನೇನು ಹೋರಾಟಕ್ಕೆ ಕಾರಣರಾದರು ಅಂತ ಈ ನಾಡು ನೋಡಿದೆ.
ಬಸವಣ್ಣ ಎಂದರೆ ನಾಲ್ಕು ಕಾಲಿನ ಎತ್ತು ಎಂದು ತೋರಿಸಿ, ಕಲ್ಯಾಣ ಕ್ರಾಂತಿಯನ್ನು ಮರೆ ಮಾಡುವ ಹುನ್ನಾರದ ಮುಂದುವರಿದ ದಿನಗಳಾಗಿದ್ದವು ಅವು. ಅದನ್ನು ತಮ್ಮ ಪ್ರವಚನಗಳ ಮೂಲಕ ಸತ್ಯ ಬಿಚ್ಚಿಡಲು ಪರಿಣಾಮಕಾರಿಯಾಗಿ ಹೆಣಗಾಡಿದವರು ಲಿಂಗಾನಂದರು. ಸಾಮಾನ್ಯರಿಗೆ ಶರಣ ಸಂಸ್ಕೃತಿಯ ‘ಚೌಕಟ್ಟು’ ಹಾಕಲು ಅನೇಕರ ವಿರೋಧ ಎದುರಿಸಿದರು, ಕಲ್ಲಿನಿಂದ ಹೊಡೆಸಿಕೊಂಡರು! ಎಂಟು ನೂರು ವರ್ಷಗಳ ನಂತರವೂ ‘ಲಿಂಗಾಯತ’ದ ಸ್ಥಿತಿ ಹಾಗಿತ್ತು. ಈಗಲೂ ಇದೆ. ಆದರೆ, ಒಂದಷ್ಟು ಬದಲಾವಣೆ ಗಾಳಿ ಬೀಸಿದೆ.

ಕೆಲ ವೀರಶೈವ ಮಠಾಧೀಶರು ಇವರನ್ನು ಕಂಡರೆ ಬೆಂಕಿಯಾಗುತ್ತಿದ್ದರು. ಅವರಿಗೆ ಲಿಂಗಾಯತರಲ್ಲಿ ಪ್ರಜ್ಞೆ ಮೂಡಿ, ತಮ್ಮ ಮಠದ ‘ಗಳಿಕೆ’ ನಿಂದ್ರೋದು ಬೇಕಿರಲಿಲ್ಲ. ಪಗಡೆ ಹಾಕಿ, ಪಂಚಾಂಗ ಓದಿ, ಚೀಟಿ ಕಟ್ಟಿ, ಬಂದವರಿಗೆ ಒಂದು ರೊಟ್ಟಿ ಕೊಡದೆ ಊದಿನ ಕಡ್ಡಿ ಬೂದಿಯನ್ನೇ ‘ಪ್ರಸಾದ’ ಎಂದು ಹಣೆಗೆ ಹಚ್ಚಿ ಕಳಿಸಿದವರೇ ಹೆಚ್ಚು! ಅದು ಇವತ್ತೂ ಪೂರ್ಣ ನಿಂತಿಲ್ಲ.
..
ಬಸವನ ಬಾಗೇವಾಡಿ ಬಳಿಯ ಮನಗೂಳಿಯಲ್ಲಿ ಜನಿಸಿದ್ದ ಲಿಂಗಾನಂದರು ಇದೆಲ್ಲ ಜನಕ್ಕೆ ತಿಳಿ ಹೇಳಲು ಪಡಬಾರದ ಕಷ್ಟ ಪಟ್ಟರು. ಇದು ಒಂದಿನದ ಕೆಲಸವಾಗಿರಲಿಲ್ಲ. ಅದು ಅವರ ನಿರಂತರ ಹಪಹಪಿಯಾಗಿತ್ತು. ಸೊನ್ನೆಯಿಂದ ಶುರುವಾಗಿ ಎಲ್ಲೆಡೆ ಬಸವ ಮಂಟಪಗಳನ್ನು ಕಟ್ಟಿ, ಬಸವ ಪಡೆ ನಿರ್ಮಿಸುವ ವರೆಗಿನ ತಪಸ್ಸಾಗಿತ್ತು. ಇಷ್ಟಲಿಂಗ ಪೂಜೆಯ ಅರಿವು ಬಿತ್ತಿ, ‘ಕೋಟಿ ದೇವರು’ಗಳ ಕಡೆಗಿದ್ದ ಲಿಂಗಾಯತರನ್ನು ‘ಒಂದೇ’ ದಾರಿಗೆ ತಂದರು. ಇವತ್ತು ಬಸವಾದಿ ಶರಣರ ತತ್ವಕ್ಕಾಗಿ ಸಾವಿರಾರು ಜನ ರಾತ್ರೋರಾತ್ರಿ ಎದ್ದು ನಿಲ್ಲುವಂಗೆ ಮಾಡಿದವರು ಇವರು ಮತ್ತು ಮಾತೆ ಮಹಾದೇವಿಯವರು. ಈಗಿನ ಲಿಂಗಾಯತ ಚಳವಳಿಗೆ ಬಲ ಬಂದಿದ್ದೇ ಇವರುಗಳು ಹಚ್ಚಿದ ಕಿಚ್ಚಿನಿಂದ. ವಚನ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸಿದರು.
ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿದ್ದಾಗ ನಮ್ಮೂರಿಗೆ ಈಗಿನ ಗಂಗಾಮಾತೆಯವರು ಬಂದು ಪ್ರವಚನ ನೀಡಿದ್ದು ನೆನಪಿದೆ. ನಮ್ಮೂರವರ ಸ್ಪಂದನೆ ಹೇಗಿತ್ತು ಅಂತಲೂ ಗೊತ್ತಿದೆ.

ಕೆಲ ಟೀಕೆಗಳು ಇರಬಹುದು. ಆದರೆ, ಅದೇ ಕಾರಣಕ್ಕೆ ಇವರೆಲ್ಲ ತಮ್ಮ ಜೀವನವೇ ಅಡವಿಟ್ಟು ಹಾಕಿದ ಇಂತಹ ಬುನಾದಿಯ ಬಗ್ಗೆ ನಾವಿಂದು ಒಂಜರವಾದರೂ ಮಾತನಾಡದೇ ಇದ್ದರೆ, ನಾವು ‘ಉಪಗಾರಗೇಡಿ’ಗಳಾಗುತ್ತೇವೆ. ನಾವು ಇವರನ್ನು ಸ್ಮರಿಸಲೇ ಬೇಕು. ಬಸವಾದಿ ಶರಣರ ಬಂಡಿ ಎಳೆದವರು ಇವರು. ಇವರಿಬ್ಬರ ಚೇತನಕ್ಕೂ ಈ ಸಂದರ್ಭದಲ್ಲಿ ಶರಣು.

-ಶಿವಕುಮಾರ್ ಉಪ್ಪಿನ್,
ಪತ್ರಕರ್ತ-ಬರಹಗಾರ
(88809 59555)

About Shivanand

Admin : Lingayat Kranti Monthly news paper 8884000008 [email protected]

Check Also

47ನೇ ತ್ರೈಮಾಸಿಕ ಶಿವಾನುಭವ-ಗುರುವಂದನೆ

  ಮುಂಡರಗಿ ಜುಲೈ 12: ೧೨ನೆಯ ಶತಮಾನದ ಬಸವಾದಿ ಶರಣರು ದೇವರ ಕಲ್ಪನೆಯನ್ನು ಇಷ್ಟಲಿಂಗದಲ್ಲಿ ಕಂಡರು.ಗರ್ಭಗುಡಿ ಸಂಸ್ಕೃತಿಯಿಂದ ಜನರನ್ನು ಹೊರತಂದು,ಇಷ್ಟಲಿಂಗ …

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ …

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ …

ನೇಗಿನಹಾಳ ಗ್ರಾಮದ ಸಮಸ್ಯೆಗಳ ಆಲಿಸಿದ ತಹಶಿಲ್ದಾರ್ ಬಸವರಾಜ ನಾಗರಾಳ್

ಗ್ರಾಮದ ಜನತಾ ಕಾಲನಿಯಲ್ಲಿ ನೀರು ನುಗ್ಗಿದ್ದರಿಂದ ಮನೆಗಳು ಬಿದ್ಧಿರುವ ಸ್ಥಳಗಳಿಗೆ ಬೇಟಿ ನೀಡಿದರು. ನೇಗಿನಹಾಳ (ಬೆಳಗಾವಿ) : ಗ್ರಾಮದಲ್ಲಿನ ಸಮಸ್ಯೆಗಳನ್ನು …

ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ

ಲಿಂಗಾಯತ ಕ್ರಾಂತಿ: ಎಂ.ಎಂ.ಕಲ್ಬುರ್ಗೀ ಸರ್ ಬರೆದಂತ ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ ಎನ್ನುವ ಶೀರ್ಷಿಕೆಯನ್ನು ಇಲ್ಲಿ ಬಳಸುತ್ತಿರುವೆ.ಕಲ್ಬುರ್ಗಿ ಸರ್ …

ವಚನ ಸಾಹಿತ್ಯ ಬೆಳಕಿಗೆ ತಂದವರು ಡಾ.ಫ.ಗು.ಹಳಕಟ್ಟಿಯವರು: ಡಾ. ಎಂ ಬಿ ಪಾಟೀಲ

  ವಿಜಯಪುರ: ಹರಿದು ಹಂಚಿ ಹೋಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಪ್ರಕಟಿಸಿ, ಪ್ರಚಾರ ಮಾಡಿ, ಬೆಳಕಿಗೆ ತಂದವರು ವಚನಪಿತಾಮಹರೆಂದೇ ಖ್ಯಾತರಾದವರು …

ಅಂಬೇಡ್ಕರ್ ತತ್ವಗಳನ್ನು ಅರಿತಾಗ ಸಂವಿಧಾನದ ಆಶಯಗಳ ಅನುಷ್ಠಾನ ಸಾಧ್ಯ: ನಿಜಗುಣಾನಂದ ಶ್ರೀ

  ಎಂ.ಕೆ.ಹುಬ್ಬಳ್ಳಿ: ಅಂಬೇಡ್ಕರ್ ಅವರ ತತ್ವಗಳನ್ನು ಕೇವಲ ಕಾನೂನು ನ್ಯಾಯಾಂಗದ ಚೌಕಟ್ಟಿನಲ್ಲಿ ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ. ಆದರೆ ಹೃದಯಾಳದಲ್ಲಿ ಅವರ …

ಕ್ರಿ.ಪೂ. 200 ವರ್ಷಗಳ ಹಿಂದೆ…

  ಲಿಂಗಾಯತ ಕ್ರಾಂತಿ: ಕ್ರಿ.ಪೂ. 200 ವರ್ಷಗಳ ಹಿಂದೆ ಅಲೆಕ್ಸಾಂಡರ್ ದಿ ಗ್ರೇಟ್ ಗ್ರೀಕ್ ದೇಶದ ಚಕ್ರವರ್ತಿಯಾಗಿದ್ದ. ಆತ ತುಂಬಾ …

ಪ್ರಕೃತಿಯ ಆರಾಧಕಳು ಅಕ್ಕ

  ಲಿಂಗಾಯತ ಕ್ರಾಂತಿ: ಪ್ರಕೃತಿಯ ಆರಾಧನೆ ಎಂದರೆ ಸತ್ಯ ಮತ್ತು ಸೌಂದರ್ಯದ ಅನುಸಂಧಾನದ ಪ್ರಕ್ರಿಯೆ. ಪಂಚಭೂತಗಳಿಂದ ಆವೃತವಾದ ಈ ಪ್ರಕೃತಿಯು …

ನಿಜಗುಣಪ್ರಭು ತೋಂಟದಾರ್ಯ ಶ್ರೀಗಳಿಗೆ ಇಂದು ಪ್ರಶಸ್ತಿ ಪ್ರದಾನ

  ಚನ್ನಮ್ಮನ ಕಿತ್ತೂರು: ಮೂರು ದಶಕಗಳಿಂದ ನಾನಾ ದೇಶಗಳನ್ನು ಸುತ್ತಿ ಬಸವ ತತ್ವಗಳನ್ನು ಬಿತ್ತುತ್ತಿರುವ ನಿಷ್ಕಲ ಮಂಟಪದ ಪೂಜ್ಯ ಶ್ರೀ …

ವಿಧಾನಸೌಧದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಸಿಎಂ ಸಿದ್ದತೆ

  ಬೆಂಗಳೂರು: ಲಿಂಗಾಯತ ಧರ್ಮೀಯರ ಬಹುದಿನಗಳ ಬೇಡಿಕೆಗೆ ಈಗ ಕಾಲ ಕೂಡಿಬಂದಿದೆ. ಹೌದು.! ವಿಧಾನಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ …

ಬ್ರಾಹ್ಮಣ್ಯ ಕೇವಲ 15% ರಷ್ಟಿರುವ ಸವರ್ಣೀಯರಲ್ಲಷ್ಟೇ ಆಚರಿಸಲ್ಪಡುತ್ತದೆಯೇ..?

ಬ್ರಾಹ್ಮಣ್ಯದ ಬಗ್ಗೆ ಇತ್ತೀಚೆಗೆ ಎಲ್ಲೆಡೆ ಬಹಳ ಚರ್ಚೆ ಆಗುತ್ತಿದೆ. ಹಾಗಾಗಿ ನನ್ನ ಸೀಮಿತ ಅರಿವಿನ ಪರಿಧಿಯಲ್ಲಿ ನನ್ನ ಅಭಿಪ್ರಾಯ ಹಂಚಿಕೊಳ್ಳಲು …

ಲಿಂಗಾಯತರಿಗೆ ಬೇಕಿರುವುದು ಬೆಲ್ಲದ್ ಅಲ್ಲ; ಎಂ.ಬಿ.ಪಾಟೀಲರಂತಹ ಸಕ್ಕರೆ!

  ಹೌದು. ಲಿಂಗಾಯತರ ಮೇಲೆ ಯಾರನ್ನೋ ತಂದು ಹೇರಬೇಡಿ. ಪರ್ಯಾಯ ನಾಯಕನನ್ನು ಹುಡುಕುವ ಮತ್ತು ಅವರ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ …

ರವಿಯೊಳಡಗಿದ ಪ್ರತಿಬಿಂಬದಂತೆ

  ಲಿಂಗಾಯತ ಕ್ರಾಂತಿ: 12 ನೇ ಶತಮಾನದ ಶರಣೆಯರಲ್ಲಿ ಆಧ್ಯಾತ್ಮಿಕ ಪಥವನ್ನು ಮುಟ್ಟಿದ ವಿಶಿಷ್ಟ ಶರಣೆ ಮುಕ್ತಾಯಕ್ಕ. ಶರಣೆ ಎನ್ನುವ …

ವೈಚಾರಿಕ ಸಾಹಿತಿ ಡಾ.ಸಿದ್ದಲಿಂಗಯ್ಯ.

ಲಿಂಗಾಯತ ಕ್ರಾಂತಿ: ಕವಿ, ಸಾಹಿತಿ, ನಾಟಕಕಾರ, ಸಂಶೋಧಕ, ವಾಗ್ಮಿ, ಬಹುಮುಖ ಪ್ರತಿಭೆ, ಶೋಷಿತರ ಸಂವೇದನೆಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟ …

Leave a Reply

Your email address will not be published. Required fields are marked *