Home / featured / ಬ್ರಾಹ್ಮಣ್ಯ ಕೇವಲ 15% ರಷ್ಟಿರುವ ಸವರ್ಣೀಯರಲ್ಲಷ್ಟೇ ಆಚರಿಸಲ್ಪಡುತ್ತದೆಯೇ..?

ಬ್ರಾಹ್ಮಣ್ಯ ಕೇವಲ 15% ರಷ್ಟಿರುವ ಸವರ್ಣೀಯರಲ್ಲಷ್ಟೇ ಆಚರಿಸಲ್ಪಡುತ್ತದೆಯೇ..?

ಬ್ರಾಹ್ಮಣ್ಯದ ಬಗ್ಗೆ ಇತ್ತೀಚೆಗೆ ಎಲ್ಲೆಡೆ ಬಹಳ ಚರ್ಚೆ ಆಗುತ್ತಿದೆ. ಹಾಗಾಗಿ ನನ್ನ ಸೀಮಿತ ಅರಿವಿನ ಪರಿಧಿಯಲ್ಲಿ ನನ್ನ ಅಭಿಪ್ರಾಯ ಹಂಚಿಕೊಳ್ಳಲು ಬಯಸುವೆ.

ಬ್ರಾಹ್ಮಣ್ಯ ಎಂದರೇನು? ಇದೊಂದು ಧರ್ಮವೋ, ವರ್ಣವೋ, ಜಾತಿಯೋ, ವರ್ಗವೋ ಅಂದಾಗ ಆವಾವು ಅಲ್ಲ. ಹೇಗೆ ಹಿಂದೂ ಶಬ್ಧ ಧರ್ಮವಾಚಕ ಅಲ್ಲವೋ ಹಾಗೆಯೇ ಬ್ರಾಹ್ಮಣ್ಯ ಮೇಲಿನ ಯಾವುದು ಅಲ್ಲ. ಹಾಗಾದರೆ ಹಿಂದೂ ಎಂದರೇನು? ಬ್ರಾಹ್ಮಣ್ಯವೆಂದರೇನು?.

ಮೊದಲು ಹಿಂದೂ ಶಬ್ದದ ಅರ್ಥ ತಿಳಿದುಕೊಳ್ಳೋಣ. ಹಿಂದೂ ಶಬ್ಧ ಮೊಟ್ಟ ಮೊದಲಿಗೆ ಪರ್ಶಿಯನ್ನರು ಸುಮಾರು 8ನೆ ಶತಮಾನದ ಕಾಲದಲ್ಲಿ ಬಳಸಿದ್ದಾರೆ. ಈ ಶಬ್ದ 13-14ನೆ ಶತಮಾನದಲ್ಲಿ ಮೊದಲ ಸಲ ಇಂಗ್ಲಿಷ್ ಡಿಕ್ಷನರಿಯಲ್ಲಿ ಕಂಡು ಬರುತ್ತದೆ. ಪರ್ಶಿಯನ್ನರು ಒಟ್ಟಾರೆ ಸಿಂಧುನದಿಯಾಚೆ ನೆಲೆಸಿರುವವರನ್ನ ಕುರಿತು ಈ ಶಬ್ದ ಉಪಯೋಗಿಸಿದ್ದಾರೆ. ಪರ್ಷಿಯನ್ನ ಭಾಷೆಯಲ್ಲಿ “ಸ”ಕಾರ ಇಲ್ಲದ್ದರಿಂದ “ಹ”ಕಾರವಾಗಿ ಉಚ್ಚಾರವಾಗಿದೆ. ಅಂದರೆ ಹಿಂದೂ ಒಂದು ನಾಗರೀಕತೆ ಅಥವಾ ಒಂದು ಭೌಗೋಳಿಕ ಗುರುತು, ಅದು ಧಾರ್ಮಿಕ ಪದ ಅಲ್ಲವೇ ಅಲ್ಲ. ಒಂದೊಮ್ಮೆ ಧಾರ್ಮಿಕವಾದ ವ್ಯಾಖ್ಯಾನ ಕೊಡಬೇಕೆಂದರೆ ಹಿಂದೂ ಎಂದರೆ ಒಂದು ಫೆಡರೇಷನ್, ಒಂದು ಕಾಂಪ್ಲೆಕ್ಸ್, ಸಮುಚ್ಚಯ, ಭಾರತದ ನೆಲದಲ್ಲಿ ಹುಟ್ಟಿರುವ ಎಲ್ಲ ಧರ್ಮಗಳ ಸಮುಚ್ಚಯ ಎಂದು ವ್ಯಾಖ್ಯಾನ ಕೊಡಬಹುದು. ಅಂದರೆ, ಸನಾತನ ಅಥವಾ ವೈದಿಕ, ಜೈನ, ಬೌದ್ಧ, ಲಿಂಗಾಯತ ಮತ್ತು ಸಿಖ್ ಧರ್ಮಗಳೆಲ್ಲವು ಸೇರಿದ ಒಂದು ಕಾಂಪ್ಲೆಕ್ಸ್, ಫೆಡರೇಷನಗೆ ಹಿಂದೂ ಎಂದು ಕರೆಯಬಹುದು. ಆದ್ದರಿಂದ ಹಿಂದೂ ಒಂದು ಧರ್ಮವಲ್ಲ, ಹಿಂದೂ ಅಂದರೆ ವೈದಿಕ ಅಥವಾ ಸನಾತನ ಧರ್ಮ ಮಾತ್ರವಲ್ಲ, ಭಾರತೀಯ ಧರ್ಮಗಳ ಗುಚ್ಛ ಎಂದರ್ಥ. ಇತ್ತೀಚೆಗೆ ಈ ಶಬ್ಧವನ್ನ ರಾಜಕೀಯ ಲಾಭಕ್ಕಾಗಿ ಒಂದು ಧರ್ಮಕ್ಕೆ ಮಾತ್ರ ಸಿಮಿತವಾಗಿಸಿ ಆ ಶಬ್ಧದ ಪರಿಧಿಯನ್ನ ಸಂಕುಚಿತಗೊಳಿಸಿದ್ದು ಆ ಶಬ್ದಕ್ಕೆ ಬಗೆದ ದೊಡ್ಡ ಅಪಚಾರ.

ಇನ್ನು ಬ್ರಾಹ್ಮಣ್ಯವೆಂದರೆ ಮೊದಲೇ ಹೇಳಿದ ಹಾಗೆ ಒಂದು ಧರ್ಮ, ಒಂದು ವರ್ಗ, ಒಂದು ಜಾತಿ, ಒಂದು ವರ್ಣ ಇವಾವು ಅಲ್ಲ. ಇದೊಂದು ಶ್ರೇಷ್ಠತೆಯ ವ್ಯಸನ, ಇದು ಎಲ್ಲರಲ್ಲಿಯೂ, ಎಲ್ಲ ಕಡೆಯೂ ಮತ್ತು ಬಹುತೇಕ ಸಂದರ್ಭಗಳಲ್ಲಿ ಕಾಣಸಿಗುವುದು. ಉದಾಹರಣೆಗೆ, ಹುಟ್ಟಿನಿಂದಲೇ ಮನುಷ್ಯರನ್ನ ತಮೋಯೋಗ್ಯ, ಮುಕ್ತಿಯೋಗ್ಯ ಎಂಬ ವಿಂಗಡಣೆ ಬ್ರಾಹ್ಮಣ್ಯವೆನಿಸುತ್ತದೆ, ಮನುಷ್ಯನ ವರ್ಣ ನೋಡಿ ತಾರತಮ್ಯ ಮಾಡೋದು ಬ್ರಾಹ್ಮಣ್ಯ ಎನಿಸುತ್ತದೆ, ಮನುಷ್ಯನನ್ನ ಜಾತಿ ಆಧಾರದ ಮೇಲೆ ಮೇಲೆ-ಕೀಳು ಎಂಬ ವಿಂಗಡಣೆ ಬ್ರಾಹ್ಮಣ್ಯ ಎನಿಸುತ್ತದೆ. ಮೊನ್ನೆ ಕರ್ನಾಟಕದಲ್ಲಿ ಕೆಳವರ್ಗದವನೊಬ್ಬನಿಗೆ ಮೂತ್ರ ಕುಡಿಸಲಾಯಿತು, ಕರ್ನಾಟಕದ ಊರಲ್ಲೊಂದು ಭಾವಿಯಲ್ಲಿ ನೀರು ಸೇದಲು ಒಂದು ಕೆಳ ವರ್ಗದ ಇಡೀ ಸಮುದಾಯವನ್ನೇ ನಿಷೇದಿಸಲಾಯಿತು, ಒಂದೇ ಧರ್ಮದ ಒಂದು ವರ್ಗ ಇನ್ನೊಂದು ವರ್ಗದ ಶವಗಳನ್ನು ಸುಡಲು ಅಥವಾ ಹೂಳಲು ರುದ್ರಭೂಮಿಯನ್ನ ನಿಷೇಧಿಸಿತು, ರಾಜಸ್ತಾನದಲ್ಲಿ ಕೆಳವರ್ಗದವನೊಬ್ಬನಿಗೆ ಮೀಸೆ ಬಿಟ್ಟಿದ್ದಕ್ಕೆ ಅಟ್ಟಾಡಿಸಿ ಹೊಡೆದದ್ದು, ಉತ್ತರಪ್ರದೇಶದಲ್ಲಿ ಕೆಳವರ್ಗದವನೊಬ್ಬ ಮದುಮಗ ಕುದುರೆಮೇಲೆ ಕುಂತಿದ್ದಕ್ಕೆ ಹೊಡೆದದ್ದು, ಕೆಳವರ್ಗದವನೊಬ್ಬ ಹಸಿದು ಕದ್ದು ತಿಂದಿದ್ದಕ್ಕೆ ಅವನನ್ನ ಹಿಗ್ಗಾ ಮುಗ್ಗಾ ಥಳಿಸಿ ಪ್ರಾಣ ತೆಗೆದಿದ್ದು…ಇತ್ಯಾದಿ ಇತ್ಯಾದಿ ಗಳು ಜರುಗಿದ್ದು ಸವರ್ಣಿಯರಂದಲ್ಲ, ಅವರ್ಣಿಯವರಿಂದಲೇ..ಆದರೆ ಬ್ರಾಹ್ಮಣ್ಯದ ಮೂಲ ಬೇರು ಅಲ್ಲಿದೆ. ಕಾರಣ ಮೊನ್ನೆ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿಗೆ ಒರಿಸ್ಸಾದ ಮಂದಿರವೊಂದರಲ್ಲಿ ಒಳಗೆ ಪ್ರವೇಶ ನಿರಾಕರಿಸಿದರೆ ಮತ್ತದೇ ರಾಷ್ಟ್ರಪತಿಯೊಂದಿಗೆ ಪ್ರತಿಷ್ಠಿತ ಮಠವೊಂದು ಅವರು ಕೆಳವರ್ಗದವರೆಂಬ ಕಾರಣಕ್ಕೆ ಸಹಪಂಕ್ತಿ ಭೋಜನ ನಿರಾಕರಿಸಿತು..ಹಾಗಾಗಿ ಬ್ರಾಹ್ಮಣ್ಯ ಬೇರುಬಿಟ್ಟು ದೊಡ್ಡ ಮರವಾಗಿ ರೆಂಬೆ ಕೊಂಬೆಗಳನ್ನ ಹರಡಿ ಸರ್ವಜನಾಂಗದ ಶಾಂತಿಯ ತೋಟವಾಗಬೇಕಿದ್ದ ಭಾರತವನ್ನ ಕಿತ್ತು ತಿನ್ನುತ್ತಿದೆ.. ದೇಶದ ಅಭಿವೃದ್ಧಿಗೆ ಅಡ್ಡಗಾಲಾಗಿದೆ..

ಇತಿಹಾಸದ ಬಹುತೇಕ ಕಾಲ ಸನಾತನ ಪರಂಪರೆ ಮೇಲುಗೈ ಸಾಧಿಸಿದ್ದರಿಂದ ವರ್ಣಗಳು ಜಾತಿಗಳಾಗಿ ಮಾರ್ಪಟ್ಟವು. ಹೀಗಾಗಿ ಶ್ರೇಣೀಕೃತ ವ್ಯವಸ್ಥೆ ಜಾರಿಗೆ ಬಂದಿತು. ಅಲ್ಲಿ ಬ್ರಾಹ್ಮಣ, ಕ್ಸತ್ರಿಯ ಮತ್ತು ವೈಶ್ಯರನ್ನ ಸವರ್ಣಿಯನ್ನಾಗಿಸಿದರೆ ಶೂದ್ರ, ಅತಿಶೂದ್ರ, ಪಂಚಮ, ಅಸ್ಪ್ರಶ್ಯರನ್ನ ಅವರ್ಣಿಯರನ್ನಾಗಿಸಿತು. ನಮ್ಮ ದೇಶದಲ್ಲಿ ಸವರ್ಣಿಯರ ಸಂಖ್ಯೆ ಸುಮಾರು 15% ಮತ್ತು ಉಳಿದವರು ಅವರ್ಣಿಯರು.

ಹಾಗಾದರೆ ಬ್ರಾಹ್ಮಣ್ಯ ಕೇವಲ 15% ಸವರ್ಣಿಯರಿಂದ ಮಾತ್ರ ಆಚರಿಸಲ್ಪಡುತ್ತದೆಯೇ ಎಂದರೆ ಇಲ್ಲ ಬ್ರಾಹ್ಮಣ್ಯ, ಈ ಶ್ರೇಷ್ಠತೆಯ ವ್ಯಸನ ಸವರ್ಣಿಯರಿಯರಲ್ಲೂ, ಅವರ್ಣಿಯರಲ್ಲೂ ಇಬ್ಬರಲ್ಲೂ ಇದೆ. ಶ್ರೇಷ್ಠತೆಯ ವ್ಯಸನ ಅಂದ್ರೆ ಜಾತಿ ಆಧಾರದ ಮೇಲೆ ನಾನು ಶ್ರೇಷ್ಠ ಉಳಿದವರು ಕನಿಷ್ಠ ಎನ್ನುವುದೇ ಬ್ರಾಹ್ಮಣ್ಯ. ಇದಕ್ಕೆ ಯಾವ ಮೂಲ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿಲ್ಲ, ಆಧಾರವಿಲ್ಲ ಆದರೆ ನಡೆದುಕೊಂಡು ಬಂದದ್ದು ಮಾತ್ರ ನಿಜ. ಸವರ್ಣಿಯರು ಅವರ್ಣಿಯರನ್ನ ಶೋಷಣೆ ಮಾಡಿದ್ದು ನಿಜ, ಉತ್ತಮರು, ಸವರ್ಣಿಯರೆಂದು ಸಮಾಜದಲ್ಲಿ ಪ್ರತಿಯೊಂದರ ಮೇಲು ಮೊದಲ ಹಕ್ಕು ಜಮಾಯಿಸಿದ್ದು ನಿಜ. ಇಂತಹ ಬ್ರಾಹ್ಮಣ್ಯ, ಈ ತಾರತಮ್ಯ 21ನೆ ಶತಮಾನದಲ್ಲಿ ಅಪ್ರಸ್ತುತ, ಭಾರತದಲ್ಲಿ ಸಂವಿಧಾನ ಜಾರಿಯಾದ ಮೇಲಂತೂ ಅಂತಹ ಶ್ರೇಷ್ಠತೆಯ ವ್ಯಸನಕ್ಕೆ ಯಾವ ಜಾಗವು ಇಲ್ಲ.

ಈ ಶ್ರೇಷ್ಠತೆಯ ವ್ಯಸನವನ್ನ ಬೇರುಸಹಿತ ಕಿತ್ತೊಗೆಯಲು ಬುದ್ಧ, ಬಸವ, ಅಂಬೇಡ್ಕರ, ಪೇರಿಯಾರ, ಮಹರ್ಷಿ ದಯಾನಂದ ಸರಸ್ವತಿ, ಮಹಾತ್ಮ ಫುಲೆ, ಮಹಾತ್ಮ ಗಾಂಧಿ ಮತ್ತು ವಿವೇಕಾನಂದರು ಕೂಡ ಪ್ರಯತ್ನಿಸಿದರು. ಆದರೂ ಹಿಂದಿನ ಬಾಗಿಲಿನಿಂದ ಬ್ರಾಹ್ಮಣ್ಯ ಮತ್ತೆ ಮತ್ತೆ ಪ್ರವೇಶಿಸುತ್ತಲೇ ಇದೆ. ಈಗ ಮತ್ತೆ ಇದರ ವಿರುದ್ಧ ಧ್ವನಿ ಎತ್ತಲಾಗಿದೆ, ಇದನ್ನ ವಿರೋಧಿಸದೆ ಎಲ್ಲರೂ ಸೇರಿ ಹೋರಾಡಿದರೆ ಅದನ್ನ ಬೇರು ಸಹಿತ ಕಿತ್ತು ಹಾಕಿ ಸಂವಿಧಾನದ ಆಶಯ, ಬುದ್ಧ ಬಸವನ ಆಶಯದಂತೆ ಸಮಸಮಾಜ, ಸಮಾನತೆ, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಕಲ್ಪಿಸುವ ಸುಂದರ ಸಮಾಜಕ್ಕೆ ನಾಂದಿ ಹಾಡುಬಹುದು, ಬನ್ನಿ ಕೈಜೋಡಿಸಿ…

ಶರಣು ಶರಣಾರ್ಥಿ..🙏🌹🙏

ಲೇಖನ: ಶರಣ ಪ್ರಕಾಶ ಉಳ್ಳಾಗಡ್ಡಿ ಮಹಾಲಿಂಗಪೂರ(ಮಸ್ಕತ್)

About Shivanand

Admin : Lingayat Kranti Monthly news paper 8884000008 [email protected]

Check Also

47ನೇ ತ್ರೈಮಾಸಿಕ ಶಿವಾನುಭವ-ಗುರುವಂದನೆ

  ಮುಂಡರಗಿ ಜುಲೈ 12: ೧೨ನೆಯ ಶತಮಾನದ ಬಸವಾದಿ ಶರಣರು ದೇವರ ಕಲ್ಪನೆಯನ್ನು ಇಷ್ಟಲಿಂಗದಲ್ಲಿ ಕಂಡರು.ಗರ್ಭಗುಡಿ ಸಂಸ್ಕೃತಿಯಿಂದ ಜನರನ್ನು ಹೊರತಂದು,ಇಷ್ಟಲಿಂಗ …

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ …

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ …

ನೇಗಿನಹಾಳ ಗ್ರಾಮದ ಸಮಸ್ಯೆಗಳ ಆಲಿಸಿದ ತಹಶಿಲ್ದಾರ್ ಬಸವರಾಜ ನಾಗರಾಳ್

ಗ್ರಾಮದ ಜನತಾ ಕಾಲನಿಯಲ್ಲಿ ನೀರು ನುಗ್ಗಿದ್ದರಿಂದ ಮನೆಗಳು ಬಿದ್ಧಿರುವ ಸ್ಥಳಗಳಿಗೆ ಬೇಟಿ ನೀಡಿದರು. ನೇಗಿನಹಾಳ (ಬೆಳಗಾವಿ) : ಗ್ರಾಮದಲ್ಲಿನ ಸಮಸ್ಯೆಗಳನ್ನು …

ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ

ಲಿಂಗಾಯತ ಕ್ರಾಂತಿ: ಎಂ.ಎಂ.ಕಲ್ಬುರ್ಗೀ ಸರ್ ಬರೆದಂತ ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ ಎನ್ನುವ ಶೀರ್ಷಿಕೆಯನ್ನು ಇಲ್ಲಿ ಬಳಸುತ್ತಿರುವೆ.ಕಲ್ಬುರ್ಗಿ ಸರ್ …

ವಚನ ಸಾಹಿತ್ಯ ಬೆಳಕಿಗೆ ತಂದವರು ಡಾ.ಫ.ಗು.ಹಳಕಟ್ಟಿಯವರು: ಡಾ. ಎಂ ಬಿ ಪಾಟೀಲ

  ವಿಜಯಪುರ: ಹರಿದು ಹಂಚಿ ಹೋಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಪ್ರಕಟಿಸಿ, ಪ್ರಚಾರ ಮಾಡಿ, ಬೆಳಕಿಗೆ ತಂದವರು ವಚನಪಿತಾಮಹರೆಂದೇ ಖ್ಯಾತರಾದವರು …

ಅಂಬೇಡ್ಕರ್ ತತ್ವಗಳನ್ನು ಅರಿತಾಗ ಸಂವಿಧಾನದ ಆಶಯಗಳ ಅನುಷ್ಠಾನ ಸಾಧ್ಯ: ನಿಜಗುಣಾನಂದ ಶ್ರೀ

  ಎಂ.ಕೆ.ಹುಬ್ಬಳ್ಳಿ: ಅಂಬೇಡ್ಕರ್ ಅವರ ತತ್ವಗಳನ್ನು ಕೇವಲ ಕಾನೂನು ನ್ಯಾಯಾಂಗದ ಚೌಕಟ್ಟಿನಲ್ಲಿ ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ. ಆದರೆ ಹೃದಯಾಳದಲ್ಲಿ ಅವರ …

ಕ್ರಿ.ಪೂ. 200 ವರ್ಷಗಳ ಹಿಂದೆ…

  ಲಿಂಗಾಯತ ಕ್ರಾಂತಿ: ಕ್ರಿ.ಪೂ. 200 ವರ್ಷಗಳ ಹಿಂದೆ ಅಲೆಕ್ಸಾಂಡರ್ ದಿ ಗ್ರೇಟ್ ಗ್ರೀಕ್ ದೇಶದ ಚಕ್ರವರ್ತಿಯಾಗಿದ್ದ. ಆತ ತುಂಬಾ …

ಪ್ರಕೃತಿಯ ಆರಾಧಕಳು ಅಕ್ಕ

  ಲಿಂಗಾಯತ ಕ್ರಾಂತಿ: ಪ್ರಕೃತಿಯ ಆರಾಧನೆ ಎಂದರೆ ಸತ್ಯ ಮತ್ತು ಸೌಂದರ್ಯದ ಅನುಸಂಧಾನದ ಪ್ರಕ್ರಿಯೆ. ಪಂಚಭೂತಗಳಿಂದ ಆವೃತವಾದ ಈ ಪ್ರಕೃತಿಯು …

‘ಲಿಂಗಾಯತ’ ಚಳವಳಿಗೆ ಕಿಚ್ಚು ಹಚ್ಚಿದವರೇ ಲಿಂಗಾನಂದ ಶ್ರೀ!

  ಲಿಂಗಾಯತ ಕ್ರಾಂತಿ:  ಆ ದುರ್ದಿನಗಳಲ್ಲಿ ಬಸವಾದಿ ಶರಣರನ್ನು ಹಳ್ಳಿ ಹಳ್ಳಿಗೂ ತಲುಪಿಸಿ, ಸಾಮಾನ್ಯರಲ್ಲಿ ‘ಲಿಂಗಾಯತ’ದ ಅರಿವು ಮೂಡಿಸಿದ್ದು ಲಿಂಗಾನಂದ …

ನಿಜಗುಣಪ್ರಭು ತೋಂಟದಾರ್ಯ ಶ್ರೀಗಳಿಗೆ ಇಂದು ಪ್ರಶಸ್ತಿ ಪ್ರದಾನ

  ಚನ್ನಮ್ಮನ ಕಿತ್ತೂರು: ಮೂರು ದಶಕಗಳಿಂದ ನಾನಾ ದೇಶಗಳನ್ನು ಸುತ್ತಿ ಬಸವ ತತ್ವಗಳನ್ನು ಬಿತ್ತುತ್ತಿರುವ ನಿಷ್ಕಲ ಮಂಟಪದ ಪೂಜ್ಯ ಶ್ರೀ …

ವಿಧಾನಸೌಧದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಸಿಎಂ ಸಿದ್ದತೆ

  ಬೆಂಗಳೂರು: ಲಿಂಗಾಯತ ಧರ್ಮೀಯರ ಬಹುದಿನಗಳ ಬೇಡಿಕೆಗೆ ಈಗ ಕಾಲ ಕೂಡಿಬಂದಿದೆ. ಹೌದು.! ವಿಧಾನಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ …

ಲಿಂಗಾಯತರಿಗೆ ಬೇಕಿರುವುದು ಬೆಲ್ಲದ್ ಅಲ್ಲ; ಎಂ.ಬಿ.ಪಾಟೀಲರಂತಹ ಸಕ್ಕರೆ!

  ಹೌದು. ಲಿಂಗಾಯತರ ಮೇಲೆ ಯಾರನ್ನೋ ತಂದು ಹೇರಬೇಡಿ. ಪರ್ಯಾಯ ನಾಯಕನನ್ನು ಹುಡುಕುವ ಮತ್ತು ಅವರ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ …

ರವಿಯೊಳಡಗಿದ ಪ್ರತಿಬಿಂಬದಂತೆ

  ಲಿಂಗಾಯತ ಕ್ರಾಂತಿ: 12 ನೇ ಶತಮಾನದ ಶರಣೆಯರಲ್ಲಿ ಆಧ್ಯಾತ್ಮಿಕ ಪಥವನ್ನು ಮುಟ್ಟಿದ ವಿಶಿಷ್ಟ ಶರಣೆ ಮುಕ್ತಾಯಕ್ಕ. ಶರಣೆ ಎನ್ನುವ …

ವೈಚಾರಿಕ ಸಾಹಿತಿ ಡಾ.ಸಿದ್ದಲಿಂಗಯ್ಯ.

ಲಿಂಗಾಯತ ಕ್ರಾಂತಿ: ಕವಿ, ಸಾಹಿತಿ, ನಾಟಕಕಾರ, ಸಂಶೋಧಕ, ವಾಗ್ಮಿ, ಬಹುಮುಖ ಪ್ರತಿಭೆ, ಶೋಷಿತರ ಸಂವೇದನೆಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟ …

One comment

  1. Dr. N. Siddaraju

    A meaningful article. My sincere thanks to the author.

Leave a Reply

Your email address will not be published. Required fields are marked *