Home / featured / ಲಿಂಗಾಯತರಿಗೆ ಬೇಕಿರುವುದು ಬೆಲ್ಲದ್ ಅಲ್ಲ; ಎಂ.ಬಿ.ಪಾಟೀಲರಂತಹ ಸಕ್ಕರೆ!

ಲಿಂಗಾಯತರಿಗೆ ಬೇಕಿರುವುದು ಬೆಲ್ಲದ್ ಅಲ್ಲ; ಎಂ.ಬಿ.ಪಾಟೀಲರಂತಹ ಸಕ್ಕರೆ!

 

ಹೌದು. ಲಿಂಗಾಯತರ ಮೇಲೆ ಯಾರನ್ನೋ ತಂದು ಹೇರಬೇಡಿ.

ಪರ್ಯಾಯ ನಾಯಕನನ್ನು ಹುಡುಕುವ ಮತ್ತು ಅವರ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಗುದಮುರಗಿಗೆ ಈಗ ಬಿಜೆಪಿ ಬಿದ್ದಿದೆ. ಆದರೆ ಬರೀ ಆ ನಾಯಕ ಲಿಂಗಾಯತನಾಗಿದ್ದರೆ ಸಾಕು, ಅದೊಂದು ಕಾರಣಕ್ಕೆ ಲಿಂಗಾಯತರು ಬಿಜೆಪಿಗೆ ಕಣ್ಣು ಮುಚ್ಚಿ ಓಟು ಹಾಕುತ್ತಾರೆ, ‘ಮೇಲೆ ಹೇಗೂ ಮೋದಿ ಇದ್ದಾರೆ’ ಎನ್ನುವ ತಿಳಿವು ಬಿಜೆಪಿಗೆ ಇದ್ದಂತಿದೆ. ಅದಕ್ಕೆ ಕಾರಣವೂ ಇದೆ. ಯಡಿಯೂರಪ್ಪ ಬಿಟ್ಟರೆ ಬೆನ್ನೆಲುಬು ಗಟ್ಟಿಗಿರೋ ಮತ್ತೊಬ್ನ ನಾಯಕನೂ ಬಿಜೆಪಿಯಲ್ಲಿ ಇಲ್ಲದಿರುವುದು! ಹಾಗಂತ ಅವರ ಬಿಟ್ ಇವರು, ಇವರು ಬಿಟ್ ಅವರು ಅಂತ ಹಾಕ್ಯಾಡುವ ಸ್ಥಿತಿಗೆ ಬಿಜೆಪಿ ಬಂದಿದೆ. ಇದ್ದುದರಲ್ಲಿ ಬಸವನಗೌಡ ಯತ್ನಾಳ ಗಟ್ಟಿಯಾಗಿದ್ದರೂ ಅವರು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ. ಇನ್ನು ಶೆಟ್ಟರ್, ಬೊಮ್ಮಾಯಿ, ಸೌದಿ ಸೇರಿ ಯಾರೊಬ್ಬರೂ ಮತ ತರುವ ಮಾಸ್ ಲೀಡರ್‌ಗಳಲ್ಲ. ಹೀಗಿರುವ ಬಿಜೆಪಿಯ ಹಲವು ‘ಲಿಂಗಾಯತ ನಾಯಕ’ರ ಮುಖಕ್ಕೆ ಮತ ಬರುವುದಿರಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅವರು ಗೆದ್ದರೆ ಸಾಕೆನ್ನುವಂತಿದೆ.

ಇನ್ನು ಪಕಸಿದ್ಧಾಂತದಿಂದ ಬಂದ ಬೇರೆ ಸಮುದಾಯದ ಆಕರ್ಷಕ ಮುಖವೂ ಆ ಪಕ್ಷದಲ್ಲಿ ಸದ್ಯಕ್ಕಿಲ್ಲ.
ನಿಜಕ್ಕೂ ಇದು ಕರ್ನಾಟಕದ ಬಿಜೆಪಿಗೆ ಸತ್ವ ಪರೀಕ್ಷೆಯ ಕಾಲ. ಅದರ ರಾಷ್ಟ್ರೀಯ ನಾಯಕರ ಒದ್ದಾಟದಿಂದ ಇದು ಎದ್ದು ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಬಂದ ಹೆಸರು ಅರವಿಂದ್ ಬೆಲ್ಲದ್. ಇವರನ್ನು ಯಾವ ದಿಕ್ಕಿನಿಂದ ನೋಡಿದರೂ ನಾಯಕನ ಹಾಗೆ ಕಾಣುವುದಿಲ್ಲ. ಇದು ಯಡಿಯೂರಪ್ಪರಿಗೆ ತ್ರಾಸು ಕೊಡಲು ಆ ಪಕ್ಷದ ಪ್ರಮುಖ ನಾಯಕರೇ ತೇಲಿ ಬಿಟ್ಟ ಪ್ಲೇ ಕಾರ್ಡ್ ಇರಬೇಕು ಅಷ್ಟೇ. ಲಿಂಗಾಯತರೇನು ಮಳ್ಳ ಅಲ್ಲ, ಯಾರನ್ನು ತಂದು ನಿಲ್ಲಿಸಿದರೂ ಒಪ್ಪಿಕೊಳ್ಳಲು.
ಬಿಜೆಪಿ ಉತ್ತರ ಕರ್ನಾಟಕದ ಲಿಂಗಾಯತರಿಂದಲೇ ತನ್ನ ಕಮಲ ಅರಳಿಸಿಕೊಂಡಿದೆ.

ಯಡಿಯೂರಪ್ಪರ ಮುಖ, ಶ್ರಮ, ಹೋರಾಟವೂ ಇದಕ್ಕೆ ಮುಖ್ಯ ಕಾರಣ. ಹೀಗೆ ಪಕ್ಷ ಕಟ್ಟಿ ಬೆಳೆಸಿದ ಯಡಿಯೂರಪ್ಪರನ್ನು ಬಿಜೆಪಿಯ ಒಳ ಖೋಲಿಯ ಜನ ಮೊದಲಿಂದ ಮಾನಸಿಕವಾಗಿ ಹಿಂಸಿಸುತ್ತಲೇ ಬಂದಿದ್ದಾರೆ. ಇದನ್ನೂ ಲಿಂಗಾಯತರು ಗಮನಿಸುತ್ತಲೇ ಬಂದಿದ್ದಾರೆ. ಮತ್ತು ಅವರು ಕೆಜಿಪಿ ಕಟ್ಟಿದಾಗ ಬೆನ್ನಿಗೆ ನಿಂತು ಸೆಟೆದು ತೋರಿಸಿದ್ದಾರೆ. ಇಷ್ಟಿದ್ದೂ ಆ ಪಕ್ಷದ ದೆಹಲಿ ನಾಯಕರಿಗೆ ಈ ಸಮಯದ ವರೆಗೂ ತಮ್ಮ ಪಕ್ಷವನ್ನು ಪ್ರಾಮಾಣಿಕವಾಗಿ ಸಂಭಾಳಿಸುವುದು ಆಗುತ್ತಿಲ್ಲ. ಮೋದಿ ಮೇನಿಯಾದಲ್ಲೇ ಎಲ್ಲ ಮರೆತಂತಿದೆ.
ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ತನ್ನ ರಾಜಕೀಯ ಜಾಣ್ಮೆ ಮೆರೆಯಬೇಕಿದೆ. ಯಡಿಯೂರಪ್ಪ ಬಿಟ್ಟು ಯಾರನ್ನೇ ಮುಂದೆ ಮಾಡಿದರೂ ಲಿಂಗಾಯತರು ಬಿಜೆಪಿಯಿಂದ ವಿಮುಖರಾಗುವುದು ಶತಃ ಸಿದ್ಧ. ಅವರು ವಲಸೆಗೆ ಸಿದ್ಧರಾಗಿದ್ದಾರೆ ಮತ್ತು ಪರ್ಯಾಯ ನಾಯಕನನ್ನು ಹುಡುಕುತ್ತಿದ್ದಾರೆ.

ಈಗ ಕಾಂಗ್ರೆಸ್ ಎಂ.ಬಿ. ಪಾಟೀಲರನ್ನು ಮುಖ್ಯಮಂತ್ರಿ ಅಭ್ಯರ್ಥಿ ಅಂತ ಘೋಷಿಸಿದರೆ ಯಡಿಯೂರಪ್ಪರ ಕಾರಣಕ್ಕೆ ಬಿಜೆಪಿ ಬೆಂಬಲಿಸುತ್ತಿದ್ದ ಬಹುತೇಕ ಲಿಂಗಾಯತರೆಲ್ಲ ಇತ್ತ ವಾಲುತ್ತಾರೆ. ತಮಗೊಬ್ಬ ನಾಯಕ ಸಿಕ್ಕಾನು ಎನ್ನುವ ಇರಾದೆಗೆ ಅವರು ಮಣೆ ಹಾಕುವುದು ಖಂಡಿತ.

ಮಾಜಿ ಸಚಿವ ಎಂ.ಬಿ.ಪಾಟೀಲ್ ತಮ್ಮ ಅವಿರತ ಶ್ರಮದಿಂದ ಮಹತ್ವಾಕಾಂಕ್ಷೆಯ ನೀರಾವರಿ ಕೆಲಸಗಳನ್ನು ಸಾಕಾರಗೊಳಿಸಿ ಹೌದೆನ್ನಿಸಿಕೊಂಡವರು. ಲಿಂಗಾಯತ ಚಳವಳಿಯಿಂದ ರಾಜ್ಯದಲ್ಲಿ ಯಡಿಯೂರಪ್ಪರಿಗೆ ಪರ್ಯಾಯ ನಾಯಕರಾಗಿ ಬೆಳೆದಿದ್ದಾರೆ. ಇವರಲ್ಲಿ ಸಾಮಾನ್ಯರೆಡೆಗೆ ಮಿಡಿವ ನಾಯಕತ್ವದ ಗುಣ, ಮತ ಸೆಳೆವ ಮುಖವೂ ಇದೆ.

ಅನುಭವ, ಕಾರ್ಯಕ್ಷಮತೆ, ಹೊಸ ವಿಚಾರ, ವಿದ್ಯಾವಂತಿಕೆ, ಸರಳತೆ ಸೇರಿ ಎಲ್ಲ ಯೋಗ್ಯತೆಯೂ ಇದೆ. ಇದೆಲ್ಲವನ್ನು ಕಾಂಗ್ರಸ್ ಹೈಕಮಾಂಡ್ ಗಮನಿಸಿ ಗಂಭೀರವಾದರೆ ಅದಕ್ಕೆ ಅನುಕೂಲ. ರಾಜ್ಯಕ್ಕೂ ಹೊಸ ನಾಯಕ ಸಿಕ್ಕಾನು. ಇಂತಹ ಬೆಳವಣಿಗೆಗೆ ಕಾಲ ಕೂಡ ಪಕ್ವವಾಗುತ್ತಿದೆ. ಉಕದ ನೆಲದಲ್ಲೇ ಬಿಜೆಪಿಗೆ ಬಲವಿದೆ. ಪಾಟೀಲರನ್ನು ಅಖಾಡಕ್ಕೆ ಇಳಿಸಿದರೆ ಆ ಪಕ್ಷಕ್ಕೆ ಗೆಲ್ಲುವುದು ಕಷ್ಟ. ಇನ್ನು ಸರ್ವ ಜನಾಂಗದ ಹಿತ ಬಯಸುವುದೇ ಬಸವಾದಿ ಶರಣರ ಆಶಯದ ಲಿಂಗಾಯತ ಗುಣ. ಅದನ್ನು ಎಂ.ಬಿ.ಪಾಟೀಲರು ಅಳವಡಿಸಿಕೊಂಡಿದ್ದಾರೆ ಮತ್ತು ಆಚರಣೆಗೂ ತಂದು ತೋರಿದ್ದಾರೆ. ಈ ಕೋವಿಡ್ ಸಂದರ್ಭ ತಮ್ಮ blde ಆಸ್ಪತ್ರೆಯಲ್ಲಿ ಯಾರೇ ಬಂದರೂ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ಕೊಡಿಸಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು. ನೂರಾರು ಬೆಡ್‌ಗಳನ್ನು ಮೀಸಲಿಟ್ಟಿದ್ದರು. ನೀರಿಲ್ಲದೇ ಒಣಗಿ ಹೋಗಿದ್ದ ಬಿಜಾಪುರವನ್ನೀಗ ಹಸಿರ ನಾಡು ಮಾಡಿದ್ದಾರೆ. ಹೋಗದ ಜಾಗಕ್ಕೂ ಕಾಲುವೆ ಕೊರೆಸಿ ನೀರು ನೀಡಿದ್ದಾರೆ.ಲಕ್ಷಗಟ್ಟಲೇ ಮರಗಿಡಗಳನ್ನು ನೆಡಿಸಿದ್ದಾರೆ.

ಇಂತಹ ಒಬ್ಬ ಜನಪರ ನಾಯಕ ಮುನ್ನೆಲೆಗೆ ಬಂದರೆ ತಪ್ಪೇ? ನೀವೇ ಹೇಳಿ. ಕಾಂಗ್ರೆಸ್ ಮನಸ್ಸು ಮಾಡಬೇಕಷ್ಟೇ. ಸಕಾರಾತ್ಮಕ ವಿಚಾರದಿಂದ ಇದನ್ನು ಬರೆದಿರುವೆ. ಬೇರೆ ಉದ್ದೇಶವಿಲ್ಲ.

-ಶಿವಕುಮಾರ್ ಉಪ್ಪಿನ್, ಪತ್ರಕರ್ತ-ಬರಹಗಾರ

About Shivanand

Admin : Lingayat Kranti Monthly news paper 8884000008 [email protected]

Check Also

ಹಸಿರುಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಶ್ರೀ ಕಲ್ಯಾಣರಾವ್ ಜಿ ಮುಚಳಂಬಿ ಲಿಂಗೈಕ್ಯ

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಅವರು ಬೆಳಗಾವಿ …

ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಲು ನಿಜಗುಣಾನಂದ ಸ್ವಾಮೀಜಿ ಒತ್ತಾಯ

ಬೈಲೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಬೇಕು ಎಂದು ಬೈಲೂರು ನಿಷ್ಕಲ ಮಂಟಪದ …

ಅಕ್ಟೋಬರ್ 3ರಂದು “ಶಿವಬಸವ ಕಾರುಣ್ಯ” ದ ಗುರು ಪ್ರವೇಶ

ಲಿಂಗಾಯತ ಕ್ರಾಂತಿ: ಉತ್ತರಕನ್ನಡ ಜಿಲ್ಲೆ ಹಳಿಯಾಳದ ಅಂಗಡಿ ಕುಟುಂಬದ ನೂತನ ಮನೆ “ಶಿವಬಸವ ಗುರುಕಾರುಣ್ಯ” ದ ಗುರು ಪ್ರವೇಶವು ಅಕ್ಟೋಬರ್ …

ಅಕ್ಕನ ಸಮರ್ಪಣಾ ಭಾವ

ಭಾರತೀಯ ಭಕ್ತಿ ಸಾಹಿತ್ಯದ ಚರಿತ್ರೆಯಲ್ಲಿ ಅಕ್ಕಮಹಾದೇವಿ ಒಬ್ಬ ವಿಶಿಷ್ಟ ಸಾಧಕಿ, ಯೋಗಿಣಿಯಾಗಿ ಕಂಡುಬರುತ್ತಾಳೆ. ಆಕೆಯ ಪ್ರೀತಿ ಪ್ರೇಮ ವಿನೂತನ ವಿಸ್ಮಯದ …

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ …

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು …

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” …

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ …

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ …

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು …

“ನೊಬೆಲ್” ಎಂಬ ಮನುಕುಲದ ದ್ರುವತಾರೆ…🌟

ನೂರು ವರ್ಷಗಳ ಹಿಂದೆ ಒಬ್ಬ ಉದ್ಯಮಿ ಬೆಳಗಿನ ಕಾಫ಼ಿ ಸೇವಿಸುತ್ತ ಅಂದಿನ ದಿನಪತ್ರಿಕೆಯೊಂದನ್ನ ಕೈಗೆತ್ತಿಕೊಂಡು ಓದಲು ಪ್ರಾರಂಭಿಸುತ್ತಾನೆ. ಅದರಲ್ಲಿನ ಒಂದು …

ಸಂಸ್ಕೃತಿ & ಸಂಸ್ಕಾರಗಳ ಬೆನ್ನೇರಿದ ಯುವ ಸನ್ಯಾಸಿಗಳು : ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು

ಬೈಲೂರ: ತಮ್ಮ ಯೌವ್ವನದಲ್ಲಿ ಧರ್ಮದ ಕಂಕಣ ಕಟ್ಟಿಕೊಂಡು‌ ನಿಂತ ಯುವ ಸನ್ಯಾಸಿಗಳ ನೋಡಿದರೆ ತುಂಬ ಸಂತೋಷವಾಗುತ್ತದೆ ಜೊತೆಗೆ ಜೀವನ ಸಾರ್ಥಕವಾಯಿತು …

ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ಲಿಂಗಾಯತ ಉಪಪಂಗಡಗಳು ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ: ಎಂ ಬಿ ಪಾಟೀಲ

ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಶ್ರೀ ಎಂ.ಬಿ.ಪಾಟೀಲ ಅವರು ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು …

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಮೊದಲು ಮೂರು ನೀತಿಕಥೆಗಳನ್ನು ನೊಡೋಣ ಆನಂತರ ವಿಷಯಕ್ಕೆ ಬರೋಣ.ಬೆಳಗಿನ ಜಾವ ಯಾರೋ ಒಬ್ಬರು ಸಮುದ್ರ ತೀರದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅಂದು …

ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಸಾಹಿತಿ ಮತ್ತು ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳ ಒಡನಾಡಿ ಶಿಷ್ಯರಾದ ಸಿದ್ದು ಯಾಪಲಪರವಿ ಅವರು ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ …

Leave a Reply

Your email address will not be published. Required fields are marked *