Home / featured / ರವಿಯೊಳಡಗಿದ ಪ್ರತಿಬಿಂಬದಂತೆ

ರವಿಯೊಳಡಗಿದ ಪ್ರತಿಬಿಂಬದಂತೆ

 

ಲಿಂಗಾಯತ ಕ್ರಾಂತಿ: 12 ನೇ ಶತಮಾನದ ಶರಣೆಯರಲ್ಲಿ ಆಧ್ಯಾತ್ಮಿಕ ಪಥವನ್ನು ಮುಟ್ಟಿದ ವಿಶಿಷ್ಟ ಶರಣೆ ಮುಕ್ತಾಯಕ್ಕ. ಶರಣೆ ಎನ್ನುವ ಶಬ್ದ ಮೋಕ್ಷವನ್ನು ಬೇಡುವುದು. ಗುರುವೆಂಬ ಶಿವನಲ್ಲಿ ವಿಲೀನವಾಗುವುದು. ತನ್ನ ಬೆಡಗಿನ ವಚನಗಳ ಮೂಲಕ ಮೇರು ಶಿಖರವಾದ ಅಲ್ಲಮನ ಪ್ರಶ್ನೆಗಳಿಗೆ ಎದುರಿಸಿ ಸವಾಲು ಹಾಕಿದ ವೈಚಾರಿಕ ದಿಟ್ಟ ಶರಣೆ.

ಶರಣರು ಸಾಕ್ಷಾತ್ ಶಿವನ ಸ್ವರೂಪದವರು. ಎಲ್ಲೆಲ್ಲೂ ಶಿವನ ದರ್ಶನವನ್ನು ಕಾಣಬಲ್ಲರು. ಸೃಷ್ಟಿ-ಸ್ಥಿತಿ-ಲಯ ನಿಗ್ರಹ ಅನುಗ್ರಹಗಳೆಂಬವುಗಳು. ಇವು ಪಂಚದರ್ಶನಗಳು. ಪರಶಿವನ ಸ್ವರೂಪಿಗಳಾದ ಆರಾಧಕರಿಗೆ ಶಿವನೇ ಭಕ್ತರ ರಕ್ಷಕ. ಮತ್ತಾರೂ ಅಲ್ಲ. “ಲಿಂಗ ಪ್ರಸಾದ ಮೇಲೆ ಗುರುಪ್ರಸಾದವನು ಇಕ್ಕಿಹೆನೆಂಬ ಗುರು ದ್ರೋಹಿಗಳ ಏನೆಂಬೆ ಇದು ಕಾರಣ, ಗುರು ಲಿಂಗ ಜಂಗಮ ತತ್ವವು ಆಧ್ಯಾತ್ಮಿಕ ಸೀಮೆಯ ಸಾಮಾಜಿಕ ರಕ್ಷಣೆಯಾಗಿ ಕಂಡಿತು. ಹೀಗಾಗಿ ಶಿವಶರಣರು ಆಧ್ಯಾತ್ಮಿಕ ಸಂಕಲ್ಪದ ಸಾಮಾಜಿಕ ರೂಪವನ್ನು ಆಂತರಿಕವಾಗಿಸಿದರು. ಮುಕ್ತಾಯಕ್ಕನ ಈ ವಚನ..

ಅಲರೊಳಗಡಗಿದ | ಪರಿಮಳದಂತೆ ||
ಪತಂಗದೊಳಡಗಿದ | ಅನಲದಂತೆ ||
ಶಶಿಯೊಳಡಗಿದ | ಷೋಡಶ ಕಳೆಯಂತೆ ||
ಉಲು ಹಡಗಿದ | ವಾಯುವಿನಂತೆ ||
ಸಿಡಿಲೊಳಡಗಿದ ಗಾತ್ರದ | ತೇಜದಂತಿರಬೇಕಯ್ಯಾ ಅಜಗಣ್ಣ ತಂದೆ ||

ಯೋಗದಲ್ಲಿ ದೇಹವನ್ನು ವಜ್ರಕಾಯವಾಗಿಸಿ ಕೊಳ್ಳುವುದು ಸಾಧಕರ ಸಾಧನೆ. ಕಾಯಕ್ಕೆ ಬಲಿಷ್ಠತೆ ಬರಬೇಕಾದರೆ ದೇಹದಂಡನೆಯ ಕಠಿಣ ವೃತ ಮಾಡಬೇಕಾಗುತ್ತದೆ. ಸಂಸಾರ ವ್ಯಾಮೋಹದ ಹಂಗು ಹರಿಯ ಬೇಕಾಗುತ್ತದೆ. ಶರೀರ ರಹಸ್ಯದ ಬೆನ್ನು ಹತ್ತಿದವನಿಗೆ ವಿರಕ್ತಿ ನಿರಾಕರಣೆ ದೇಹಕ್ಕೆ ಪ್ರಖರತೆ ಕೊಡುವ ರೂಪಗಳು. ಯೋಗದಲ್ಲಿ ಪರಮ ಶ್ರೇಷ್ಠತೆಯನ್ನು ಕಾಣಬೇಕಾದರೆ ಬೆಡಗಿನ ಅರ್ಥಕೋಶದಲ್ಲಿ ಹುಡುಕಬೇಕು. ಪತಂಗ ದೀಪದ ಬೆಳಕಿನ ಸುಂದರತೆಗೆ ಮಾರು ಹೋದರೆ ರೆಕ್ಕೆಯನ್ನು ಸುಟ್ಟು ಕೊಳ್ಳಬೇಕಾಗುತ್ತದೆ. ಸಾಧಕನು ತನ್ನ ಅಂತರಂಗದ ಅ ಜ್ಞಾನವನ್ನು ಕಳಚಿದಾಗ ಮಾತ್ರ ಪರಿಶುಭ್ರವಾದ ಹುಣ್ಣಿಮೆ ಚಂದ್ರನ ಷೋಡಶ ರೂಪದ ಸುಂದರತೆ ನಿನಗೊಲಿದು ಕಾಣಲಾಗುತ್ತದೆ. ಸಿಡಿಲಿನಲ್ಲಿ ಅಡಗಿದ ಬೆಳಕು ಭಾವ ಸನ್ನಿಹಿತವಾದ ಅಂತರಂಗದಲ್ಲಿ ಶಿವೋಹಂ ಎಂಬ ಪ್ರಣವ ತೇಜಪುಂಜ ಪ್ರತಿದ್ವನಿಸುತ್ತದೆ. ಸ್ಥೂಲ-ಸೂಕ್ಷ್ಮ-ಸಮತೆ ದಾರ್ಶನಿಕ ನೈತಿಕಾರ್ಥಗಳಾಗಿವೆ. ಈ ವಚನದಲ್ಲಿ ಅಡಗಿರುವ ರೂಪಕ ಶಕ್ತಿ ಮುಕ್ತಾಯಕ್ಕನ ಅರಿವಿನ ಸಂಕಲ್ಪವೆಂದು ಸ್ಪಷ್ಟಪಡಿಸ ಬಹುದು. ಈ ವಚನ…

ರವಿಯಳಗಿದ ಪ್ರತಿಬಿಂಬದಂತೆ | ಹಿಡಿವರಿಗಳವಲ್ಲದಿರಬೇಕು ಅಣ್ಣಾ ||
ನಿನ್ನೊಳು ಅಡಗಿದ ಭೇದವ ಭಿನ್ನವ | ಮಾಡುವರೆ ಅಣ್ಣಾ ||
ನಿನ್ನ ನುಡಿಯೆಲ್ಲ | ಪ್ರತಿಬಿಂಬಗಳಾದವೆ ಅಣ್ಣ ||
ಕೊಡನೊಳಗಣ ಜ್ಯೊತಿಯ | ಅಡಗಿಸಲರಿಯದದೆಮಗೆ ||
ಏರಿದಂತಾದೆಯೋ | ಅಜಗಣ್ಣ ||

ಮುಕ್ತಾಯಕ್ಕ ತನ್ನ ಅಣ್ಣನನ್ನು ಗುರುವೆಂದು ನಂಬಿದಾಕೆ. ಅವನ ವಿಶಿಷ್ಟ ಜ್ಞಾನ ಮತ್ತು ವ್ಯಕ್ತಿತ್ವವನ್ನು ಗೌರವಿಸಿದಾಕೆ. ತನ್ನ ಜೀವನದ ಕಥಾನಕ ಮಾದರಿಗಳಿಗೆ ತಾತ್ವಿಕ ಸಾಮರಸ್ಯದ ಸಮರ್ಥನೆಯನ್ನು ತನ್ನ ವಚನಗಳಲ್ಲಿ ಅಭಿವ್ಯಕ್ತಿಸಿದ್ದಾಳೆ. ಅಣ್ಣ ತಂಗಿಯರ ಅನುಭಾವದ ಅನಾವರಣಗಗಳು ತಾತ್ವಿಕ ಸಂವಾದಗಳು ರಸಾನಂದಪೂರಿತವಾದವುಗಳೆಂದು ವಿಮರ್ಶಕರ ವಾದ.

ಅಣ್ಣನ ವ್ಯಕ್ತಿತ್ವವನ್ನು ರವಿಯ ಚಿತ್ ಪ್ರಭೆಯ ಬೆಳಕೆಂದು ಘನಲಿಂಗ ಮಹಿಮನೆಂಬುದು ಆಕೆಯವಾದ. ರವಿಯೊಳಡಗಿದ ಪ್ರತಿಬಿಂಬ ಎನ್ನುವಲ್ಲಿ ….ಬರೀ ರವಿಯಲ್ಲ ಪ್ರಕಾಶಮಯವಾದ ಜ್ಞಾನವಂತನು ಮುಕ್ತಾಯಕ್ಕಗೆ. ಅಣ್ಣನ ವ್ಯಕ್ತಿತ್ವವನ್ನು ತತ್ವವಾಗಿಸುತ್ತಾಳೆ. ಅಜಗಣ್ಣನ ಜ್ಞಾನವನ್ನು ಅದ್ವೈತ ನೆಲೆಯಲ್ಲಿ ಕಾಣುತ್ತಾಳೆ. ಅವಳ ಒಂದೊಂದು ವಚನದ ಮಾತುಗಳು “ನಿನ್ನ ನುಡಿಗ ಳು ಕೊಡದೊಳಗಿನ ಪ್ರತಿಬಿಂಬದಂತೆ” ಎನ್ನುವ ಸ್ಥೂಲರೂಪವು ಮುಕ್ತಾಯಕ್ಕನ ಭಾವರೂಪವೂ ಹೌದು. ತುಂಬಿದ ಕೊಡದ ಜ್ಞಾನದ ಜ್ಯೊತಿಯನ್ನು ಅಜಗಣ್ಣನ ದಾರ್ಶನಿಕತೆಯನ್ನು, ಗುರು ಶಿಷ್ಯರ ಸಂಬಂದದ ಮೂಲಕ ಮುಖಾಮುಖಿಯಾಗಿಸುತ್ತಾಳೆ. ಎಲ್ಲೆಲ್ಲೂ ಆವರಿಸಿರುವ ತನ್ನ ಅಣ್ಣನ ಆಧ್ಯಾತ್ಮಿಕ ಮೌಲ್ಯದ ದರ್ಶನವನ್ನು ಗೌರವಿಸುತ್ತಾಳೆ.

ಸಾಧನೆಯ ಆರಾಧನೆಯನ್ನು ಗುರುವಿನಲ್ಲಿ ಕಾಣುವ ಮುಕ್ತಾಯಕ್ಕ ಸಮಷ್ಟಿ ಪ್ರಜ್ಞೆಯನ್ನು ಅಜಗಣ್ಣನ ಅನುಭಾವದ ಪ್ರತಿಮೆಯಲ್ಲಿ ಕಾಣುತ್ತಾಳೆ. ತಾಯಿಯಾಗಿ ಜೋಗುಳವಾಡುತ್ತಾ ನಿರಾಕಾರ ಲಿಂಗವನ್ನು ಕಾಣುವ ಅವಳ ನಿವೇದನೆ ಆಧ್ಯಾತ್ಮಿಕ ರಹಸ್ಯದ ಬೆಡಗು….

ನೀರ ಬೊಂಬೆಗೆ | ನಿರಾಳದ ಗೆಜ್ಜೆಯ ಕಟ್ಟಿ ||
ಬಯಲು ಬೊಂಬೆಯ ಕೈಯಲ್ಲಿ | ಕೊಟ್ಟು ಮುದ್ದಾಡಿಸುತ್ತಿರ್ದೆನಯ್ಯಾ ||
ಕರ್ಪೂರದ ಪುತ್ಥಳಿಗೆ | ಅಗ್ನಿಯ ಸಿಂಹಾಸನವನಿವಿಕ್ಕಿ ||
ಬೆರಗಾದೆನಯ್ಯಾರಿನ್ನು | ಅಜಗಣ್ಣನ ಯೋಗಕ್ಕೆ ||

ಮುಕ್ತಾಯಕ್ಕನಿಗೆ ಆಧ್ಯಾತ್ಮಿಕ ಪಯಣದಲ್ಲಿ ಅಜಗಣ್ಣ ಎಷ್ಟು ಮುಖ್ಯವೋ ಅವಳ ಮನದಲ್ಲಿ ನೆಲೆಯೂರಿದ ತನ್ನ ಆತ್ಮದರ್ಶನದಲ್ಲಿ ಅವನ ಸಾಂಸ್ಥಿಕ ರೂಪವು ಮುಖ್ಯವಾಗಿದೆ. ಹೀಗಾಗಿ ಆಕೆ ಮನವೆಂಬ ನೀರ ಬೊಂಬೆಯಲ್ಲಿ ಶಿವ ಚೈತನ್ಯದ ನಿರಾಕಾರವೆಂಬ ಬಯಲ ಬೊಂಬೆಗೆ ಗೆಜ್ಜೆಯನ್ನು ಕಟ್ಟಿ ಕುಣಿಸುತ್ತಾಳೆ. ಚಿತ್ ಚೈತನ್ಯದ ಬೊಂಬೆಯನ್ನು ಮನದ ಸಿಂಹಾಸನದಲ್ಲಿ ಸ್ಥಾಪಿಸುತ್ತಾಳೆ. ಗೆಜ್ಜೆ, ಗೊಂಬೆ, ನಿರಾಳ ಪದಗಳು ವಚನವನ್ನು ಓದುವಿಕೆಯಲ್ಲಿ ತನ್ಮಯ ಭಾವದ ಆನಂದ ಪಡೆಯುತ್ತಾಳೆ. ಸ್ವಾನುಭಾವವೆಂಬ ಕರ್ಪೂರದ ಪುತ್ಥಳಿ ಮನವೆಂಬ ಬೆಂಕಿಯಲ್ಲಿ ದಹಿಸುವಾಗ ಸುಜ್ಞಾನದ ಸಿಂಹಾಸನದಲ್ಲಿ ಬೆಳಕಾಗಿ ಪ್ರಕಾಶಿಸಿದೆ. ಮನದ ಅದ್ವೈತದ ಭಕ್ತಿಯಲ್ಲಿ ಆಕೆಗೆ ಬೆಡಗಾಗಿದೆ. ಮುಕ್ತಾಯಕ್ಕನ ಈ ವಚನದ ಸಂವೇದನೆ ತತ್ವಾನುಭೂತಿಯನ್ನು ಕೊಡುವುದರ ಜೊತೆಗೆ ಗುರುವಾದ ಅಜಗಣ್ಣನನ್ನು ವ್ಯಕ್ತಿ ವಿಶಿಷ್ಟ ಸಾಧಕನಂತೆ ಪರಿಚಯಿಸಿ ಬೆರಗು ಕೊಡುತ್ತಾಳೆ. ಬೆರಗಾದೆನಯ್ಯ ಅಜಗಣ್ಣ ನಿನ್ನ ಯೋಗಕ್ಕೆ ನಿರಾಳ ಶಿವ ತತ್ವಕ್ಕೆ ಕರ್ಪೂರದ ಸುವಾಸನೆಯನ್ನು ಕೊಡುವುದು ಆಕೆಯ ಆಳವಾದ, ಬೆಡಗಿನ ಲಾಲಿತ್ಯವೆಂದು ಹೇಳಬಹುದು.

ಡಾ. ಸರ್ವಮಂಗಳಾ ಸಕ್ರಿ
ಕನ್ನಡ ಉಪನ್ಯಾಸಕರು.
ರಾಯಚೂರು.

About Shivanand

Admin : Lingayat Kranti Monthly news paper 8884000008 [email protected]

Check Also

47ನೇ ತ್ರೈಮಾಸಿಕ ಶಿವಾನುಭವ-ಗುರುವಂದನೆ

  ಮುಂಡರಗಿ ಜುಲೈ 12: ೧೨ನೆಯ ಶತಮಾನದ ಬಸವಾದಿ ಶರಣರು ದೇವರ ಕಲ್ಪನೆಯನ್ನು ಇಷ್ಟಲಿಂಗದಲ್ಲಿ ಕಂಡರು.ಗರ್ಭಗುಡಿ ಸಂಸ್ಕೃತಿಯಿಂದ ಜನರನ್ನು ಹೊರತಂದು,ಇಷ್ಟಲಿಂಗ …

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ …

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ …

ನೇಗಿನಹಾಳ ಗ್ರಾಮದ ಸಮಸ್ಯೆಗಳ ಆಲಿಸಿದ ತಹಶಿಲ್ದಾರ್ ಬಸವರಾಜ ನಾಗರಾಳ್

ಗ್ರಾಮದ ಜನತಾ ಕಾಲನಿಯಲ್ಲಿ ನೀರು ನುಗ್ಗಿದ್ದರಿಂದ ಮನೆಗಳು ಬಿದ್ಧಿರುವ ಸ್ಥಳಗಳಿಗೆ ಬೇಟಿ ನೀಡಿದರು. ನೇಗಿನಹಾಳ (ಬೆಳಗಾವಿ) : ಗ್ರಾಮದಲ್ಲಿನ ಸಮಸ್ಯೆಗಳನ್ನು …

ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ

ಲಿಂಗಾಯತ ಕ್ರಾಂತಿ: ಎಂ.ಎಂ.ಕಲ್ಬುರ್ಗೀ ಸರ್ ಬರೆದಂತ ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ ಎನ್ನುವ ಶೀರ್ಷಿಕೆಯನ್ನು ಇಲ್ಲಿ ಬಳಸುತ್ತಿರುವೆ.ಕಲ್ಬುರ್ಗಿ ಸರ್ …

ವಚನ ಸಾಹಿತ್ಯ ಬೆಳಕಿಗೆ ತಂದವರು ಡಾ.ಫ.ಗು.ಹಳಕಟ್ಟಿಯವರು: ಡಾ. ಎಂ ಬಿ ಪಾಟೀಲ

  ವಿಜಯಪುರ: ಹರಿದು ಹಂಚಿ ಹೋಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಪ್ರಕಟಿಸಿ, ಪ್ರಚಾರ ಮಾಡಿ, ಬೆಳಕಿಗೆ ತಂದವರು ವಚನಪಿತಾಮಹರೆಂದೇ ಖ್ಯಾತರಾದವರು …

ಅಂಬೇಡ್ಕರ್ ತತ್ವಗಳನ್ನು ಅರಿತಾಗ ಸಂವಿಧಾನದ ಆಶಯಗಳ ಅನುಷ್ಠಾನ ಸಾಧ್ಯ: ನಿಜಗುಣಾನಂದ ಶ್ರೀ

  ಎಂ.ಕೆ.ಹುಬ್ಬಳ್ಳಿ: ಅಂಬೇಡ್ಕರ್ ಅವರ ತತ್ವಗಳನ್ನು ಕೇವಲ ಕಾನೂನು ನ್ಯಾಯಾಂಗದ ಚೌಕಟ್ಟಿನಲ್ಲಿ ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ. ಆದರೆ ಹೃದಯಾಳದಲ್ಲಿ ಅವರ …

ಕ್ರಿ.ಪೂ. 200 ವರ್ಷಗಳ ಹಿಂದೆ…

  ಲಿಂಗಾಯತ ಕ್ರಾಂತಿ: ಕ್ರಿ.ಪೂ. 200 ವರ್ಷಗಳ ಹಿಂದೆ ಅಲೆಕ್ಸಾಂಡರ್ ದಿ ಗ್ರೇಟ್ ಗ್ರೀಕ್ ದೇಶದ ಚಕ್ರವರ್ತಿಯಾಗಿದ್ದ. ಆತ ತುಂಬಾ …

ಪ್ರಕೃತಿಯ ಆರಾಧಕಳು ಅಕ್ಕ

  ಲಿಂಗಾಯತ ಕ್ರಾಂತಿ: ಪ್ರಕೃತಿಯ ಆರಾಧನೆ ಎಂದರೆ ಸತ್ಯ ಮತ್ತು ಸೌಂದರ್ಯದ ಅನುಸಂಧಾನದ ಪ್ರಕ್ರಿಯೆ. ಪಂಚಭೂತಗಳಿಂದ ಆವೃತವಾದ ಈ ಪ್ರಕೃತಿಯು …

‘ಲಿಂಗಾಯತ’ ಚಳವಳಿಗೆ ಕಿಚ್ಚು ಹಚ್ಚಿದವರೇ ಲಿಂಗಾನಂದ ಶ್ರೀ!

  ಲಿಂಗಾಯತ ಕ್ರಾಂತಿ:  ಆ ದುರ್ದಿನಗಳಲ್ಲಿ ಬಸವಾದಿ ಶರಣರನ್ನು ಹಳ್ಳಿ ಹಳ್ಳಿಗೂ ತಲುಪಿಸಿ, ಸಾಮಾನ್ಯರಲ್ಲಿ ‘ಲಿಂಗಾಯತ’ದ ಅರಿವು ಮೂಡಿಸಿದ್ದು ಲಿಂಗಾನಂದ …

ನಿಜಗುಣಪ್ರಭು ತೋಂಟದಾರ್ಯ ಶ್ರೀಗಳಿಗೆ ಇಂದು ಪ್ರಶಸ್ತಿ ಪ್ರದಾನ

  ಚನ್ನಮ್ಮನ ಕಿತ್ತೂರು: ಮೂರು ದಶಕಗಳಿಂದ ನಾನಾ ದೇಶಗಳನ್ನು ಸುತ್ತಿ ಬಸವ ತತ್ವಗಳನ್ನು ಬಿತ್ತುತ್ತಿರುವ ನಿಷ್ಕಲ ಮಂಟಪದ ಪೂಜ್ಯ ಶ್ರೀ …

ವಿಧಾನಸೌಧದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಸಿಎಂ ಸಿದ್ದತೆ

  ಬೆಂಗಳೂರು: ಲಿಂಗಾಯತ ಧರ್ಮೀಯರ ಬಹುದಿನಗಳ ಬೇಡಿಕೆಗೆ ಈಗ ಕಾಲ ಕೂಡಿಬಂದಿದೆ. ಹೌದು.! ವಿಧಾನಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ …

ಬ್ರಾಹ್ಮಣ್ಯ ಕೇವಲ 15% ರಷ್ಟಿರುವ ಸವರ್ಣೀಯರಲ್ಲಷ್ಟೇ ಆಚರಿಸಲ್ಪಡುತ್ತದೆಯೇ..?

ಬ್ರಾಹ್ಮಣ್ಯದ ಬಗ್ಗೆ ಇತ್ತೀಚೆಗೆ ಎಲ್ಲೆಡೆ ಬಹಳ ಚರ್ಚೆ ಆಗುತ್ತಿದೆ. ಹಾಗಾಗಿ ನನ್ನ ಸೀಮಿತ ಅರಿವಿನ ಪರಿಧಿಯಲ್ಲಿ ನನ್ನ ಅಭಿಪ್ರಾಯ ಹಂಚಿಕೊಳ್ಳಲು …

ಲಿಂಗಾಯತರಿಗೆ ಬೇಕಿರುವುದು ಬೆಲ್ಲದ್ ಅಲ್ಲ; ಎಂ.ಬಿ.ಪಾಟೀಲರಂತಹ ಸಕ್ಕರೆ!

  ಹೌದು. ಲಿಂಗಾಯತರ ಮೇಲೆ ಯಾರನ್ನೋ ತಂದು ಹೇರಬೇಡಿ. ಪರ್ಯಾಯ ನಾಯಕನನ್ನು ಹುಡುಕುವ ಮತ್ತು ಅವರ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ …

ವೈಚಾರಿಕ ಸಾಹಿತಿ ಡಾ.ಸಿದ್ದಲಿಂಗಯ್ಯ.

ಲಿಂಗಾಯತ ಕ್ರಾಂತಿ: ಕವಿ, ಸಾಹಿತಿ, ನಾಟಕಕಾರ, ಸಂಶೋಧಕ, ವಾಗ್ಮಿ, ಬಹುಮುಖ ಪ್ರತಿಭೆ, ಶೋಷಿತರ ಸಂವೇದನೆಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟ …

Leave a Reply

Your email address will not be published. Required fields are marked *