Home / featured / ವೈಚಾರಿಕ ಸಾಹಿತಿ ಡಾ.ಸಿದ್ದಲಿಂಗಯ್ಯ.

ವೈಚಾರಿಕ ಸಾಹಿತಿ ಡಾ.ಸಿದ್ದಲಿಂಗಯ್ಯ.

ಲಿಂಗಾಯತ ಕ್ರಾಂತಿ: ಕವಿ, ಸಾಹಿತಿ, ನಾಟಕಕಾರ, ಸಂಶೋಧಕ, ವಾಗ್ಮಿ, ಬಹುಮುಖ ಪ್ರತಿಭೆ, ಶೋಷಿತರ ಸಂವೇದನೆಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟ ಪ್ರಗತಿಪರ ಚಿಂತಕ,ಬಡವರ, ದುರ್ಬಲರ, ವಂಚಿತರ ಧ್ವನಿಯಾಗಿ ಸಾಮಾಜಿಕ ಅಸಮಾನತೆ,  ಶೋಷಣೆಯ ವಿರುದ್ಧ ತಮ್ಮ ಹರಿತ ಬರಹ, ಕಾವ್ಯಗಳೆಂಬ ಶಸ್ತ್ರ ಹಿಡಿದು ಹೋರಾಡಿದ ಕನ್ನಡದ ಹಿರಿಯ ಚೇತನ,ಕರುನಾಡಿನ ಹಿತಚಿಂತಕರಾಗಿ, ಹೋರಾಟದ ಸಾಗರಕ್ಕೆ ಸಾವಿರಾರು ಮನಸ್ಸುಗಳು ಸೇರಬೇಕೆಂದು ಹಂಬಲಿಸಿದ್ದ ಮನ, ಜನಪರ ಹಾಗೂ ಬಡವರ, ಶೋಷಿತ ವರ್ಗಗಳ ಧ್ವನಿಯಾಗಿದ್ದ ನಾಡೋಜ  ಸಿದ್ಧಲಿಂಗಯ್ಯನವರು ಕರ್ನಾಟಕ ರಾಜ್ಯ ಕಂಡ ಪ್ರಮುಖ ಕವಿ ಹಾಗೂ ಲೇಖಕರಲ್ಲೊಬ್ಬರು. ‘ವೈಚಾರಿಕ ಸಾಹಿತಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಹಲವು ಸಾಹಿತ್ಯಗಳನ್ನು ರಚಿಸಿದ್ದಾರೆ. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿ ಭೇಷ ಎನಿಸಿಕೊಂಡವರು. ಇನ್ನು ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕನ್ನಡ ನಾಡಿನ ಜನಸಾಮಾನ್ಯರ ಸೇವೆ ಸಲ್ಲಿಸುತ್ತಾ,
ಅಧ್ಯಾಪನ-ಬರವಣಿಗೆಗಳಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಕೊಂಡಿದ್ದವರು.
ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಎಂಬಂತ ಬಂಡಾಯದ ಗೀತೆಗಳನ್ನು ಹಾಡಿ, ಕ್ರಾಂತಿಯ ತಲ್ಲಣಗಳನ್ನು ಎಬ್ಬಿಸಿದ್ದ ಖ್ಯಾತ ವೈಚಾರಿಕ ವಿಚಾರವಾಧಿ ಡಾ.ಸಿದ್ಧಲಿಂಗಯ್ಯನವರು ಇಂದು ನಮ್ಮೆಲ್ಲರನ್ನು ಅಗಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ ಡಾ.ಸಿದ್ದಲಿಂಗಯ್ಯನವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಲಿಂಗೈಕ್ಯರಾಗಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿ,
ಕನ್ನಡ ನಾಡಿಗೆ ಅಪಾರ ನಷ್ಟವಾಗಿದೆ. ಹಾಗೆ ಕನ್ನಡ ಸಾಹಿತ್ಯ ಲೋಕಕ್ಕೂ ಸಹ ತುಂಬುಲಾರದ ನಷ್ಟ ಉಂಟುಮಾಡಿದೆ ಬಂಧುಗಳೆ.
ಜೀವನ-ಸೇವೆ-ಸಾಹಿತಿ :
ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ‘ಮಾಗಡಿ’ ತಾಲ್ಲೋಕಿನ ‘ಮಂಚನಬೆಲೆ’ ಗ್ರಾಮದ
ದೇವಯ್ಯ ಮತ್ತು ವೆಂಕಮ್ಮ ದಂಪತಿಗಳ ಮಗನಾಗಿ ಜನಿಸಿದರು.
ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಇವರ ವಿಧ್ಯಾಭ್ಯಾಸವಾಯಿತು. ಆ ಸಮಯದಲ್ಲಿಯೇ ಸಾಹಿತ್ಯದ ಬಗೆ ವಿಶೇಷ ಆಸಕ್ತಿ ವಹಿಸಿ, ಕವಿತೆ ಬರೆಯುವ ಅಭ್ಯಾಸ ರೂಡಿಸಿಕೊಂಡಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಸಾಹಿತಿಯಾಗಿ, ಅತ್ಯುತ್ತಮ ಭಾಷಣಕಾರರಾಗಿ ಸೈ ಎನಿಸಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದರು. ಹೀಗೆ ಸಾಹಿತ್ಯದ ಒಲುಮೆಯ ಜೊತೆಗೆ ಬಸವಣ್ಣ,ಅಂಬೇಡ್ಕರ್, ಪೆರಿಯಾರ್, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಪ್ರೇರಿತರಾಗಿ ಸಮಾಜ ಮುಖಿ ಸೇವೆಗಳಲ್ಲಿಯೂ ಹೆಜ್ಜೆ ಹಾಕಿದವರು. ಆದರಿಂದಲೇ ರಾಜ್ಯದಲ್ಲಿ ದಲಿತ ಬಂಡಾಯ ಚಳುವಳಿಗಳು ಹುಟ್ಟು ಹಾಕಿ ಬಡವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಹಾಗೂ ಅವರ ವಿಶಿಷ್ಟ ಸಾಹಿತ್ಯ ಸೇವೆಯ ಮೂಲಕ ಬಂಡಾಯ ಕವಿ ಎಂದೇ ಪ್ರಸಿದ್ಧರಾಗಿ,ನಾಡು – ನುಡಿಯ ಸಂರಕ್ಷಣೆಗಾಗಿ ಹಗಲಿರುಳು ದುಡಿದಿದ್ದಾರೆ.
ಸಿದ್ಧಲಿಂಗಯ್ಯನವರ ಕೃತಿಗಳು :  ಸಂಶೋಧನಾ ಪ್ರಬಂಧ – ಗ್ರಾಮ ದೇವತೆಗಳು.,ಅದೇ ರೀತಿ ಇವರ ಕವನಗಳ ಕೃತಿಗಳು : ಹೊಲೆ ಮಾದಿಗರ ಹಾಡು,ಮೆರವಣಿಗೆ, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಆಯ್ದಕವಿತೆಗಳು, ಅಲ್ಲೆಕುಂತವರೆ,ನನ್ನ ಜನಗಳು ಮತ್ತು ಇತರ ಕವಿತೆಗಳು, ಸಮಕಾಲೀನ ಕನ್ನಡ ಕವಿತೆ ಭಾಗ-3, 4., ವಿಮರ್ಶನಾ ಕೃತಿಗಳು ಹೀಗಿವೆ – ಹಕ್ಕಿ ನೋಟ, ರಸಗಳಿಗೆಗಳು,ಎಡಬಲ,ಉರಿಕಂಡಾಯ. ಲೇಖನಗಳ ಸಂಕಲನ – ಅವತಾರಗಳು, ಸದನದಲ್ಲಿ ಸಿದ್ದಲಿಂಗಯ್ಯ ಭಾಗ -1,ಸದನದಲ್ಲಿ ಸಿದ್ದಲಿಂಗಯ್ಯ ಭಾಗ -2, ಜನಸಂಸ್ಕೃತಿ., ನಾಟಕಗಳು – ಏಕಲವ್ಯ, ನೆಲಸಮ, ಪಂಚಮ. ಆತ್ಮಕಥೆ -ಊರುಕೇರಿ- ಭಾಗ-1, ಊರುಕೇರಿ- ಭಾಗ-2.ಹೀಗೆ ಅನೇಕ ಕೃತಿಗಳು ಕನ್ನಡ ನಾಡಿಗೆ ಧಾರೆಯೆರೆದಿದ್ದಾರೆ.
ಸಿದ್ಧಲಿಂಗಯ್ಯನವರಿಗೆ ದೊರೆತ ಗೌರವ, ಪ್ರಶಸ್ತಿಗಳು :
ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿ.,ರಾಜ್ಯೋತ್ಸವ ಪ್ರಶಸ್ತಿ -ಕರ್ನಾಟಕ ಸರ್ಕಾರ.,ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ., ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ .,
ಜಾನಪದ ತಜ್ಞ ಪ್ರಶಸ್ತಿ.,ಸಂದೇಶ್ ಪ್ರಶಸ್ತಿ., ಡಾ.ಅಂಬೇಡ್ಕರ್ ಪ್ರಶಸ್ತಿ.,ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ.
 ಬಾಬುಜಗಜೀವನರಾಮ್ ಪ್ರಶಸ್ತಿ.,ನಾಡೋಜ ಪ್ರಶಸ್ತಿ.,
ಪ್ರೆಸಿಡೆನ್ಸಿ ಇನ್ಷಿಟ್ಯೂಷನ್ ಪ್ರಶಸ್ತಿ.,ಆಳ್ವಾಸ್ ನುಡಿಸಿರಿ ಪ್ರಶಸ್ತಿ.,ನೃಪತುಂಗ ಪ್ರಶಸ್ತಿ.,ಪಂಪ ಪ್ರಶಸ್ತಿ ಸೇರಿದಂತೆ
ಶ್ರವಣಬೆಳಗೊಳದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಮೆರೆಗು ತಂದಿದ್ದಾರೆ. ಹೀಗೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂಧಿವೆ.
ಭಕ್ತಿ ಭಾವಪೂರ್ಣ ಶ್ರದ್ಧಾಂಜಲಿ:
ಸಿದ್ಧಲಿಂಗಯ್ಯನವರು ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ ಆದರೆ ಅವರ ಭೌದ್ಧಿಕ ಆಸ್ತಿ ಸಾಹಿತ್ಯ – ಬರಹಗಳು ಶಾಶ್ವತವಾಗಿ ಸದಾ ನಮ್ಮ ಜೊತೆ ಇವೆ ಹಾಗೂ ನಮಗೆ ಪ್ರೇರಣೆಯಾಗಿ
ನಿಲ್ಲುತ್ತವೆ.ಹಾಗಾಗಿ ಸಿದ್ಧಲಿಂಗಯ್ಯನವರ
ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಿಸಿದ ಅನುಪಮ ಸೇವೆ ಮತ್ತು ಜನಪರ ಹೋರಾಟಗಳನ್ನು ಸ್ಮರಿಸಿಕೊಳ್ಳುತ್ತಾ.
ಅವರ ಅತ್ಮಕ್ಕೆ ಶಾಂತಿಯನ್ನು ಕರುಣಿಸಲೆಂದು
ಬಸವಾದಿ ಪ್ರಮಥರಲ್ಲಿ ಪ್ರಾರ್ಥಿಸುತ್ತಾ,
ಕಂಬನಿಧಾರೆಯ ವಿದಾಯ ಹೇಳಿ, ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ. ಹಾಗೂ ಈ
ಸಮಯದಲ್ಲಿ ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೂ ದುಃಖವನ್ನು ಭರಿಸುವ ಶಕ್ತಿಯನ್ನು ಬಸವಾದಿ ಶಿವಶರಣರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
*************
ಲೇಖಕರು : ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ.

About Shivanand

Admin : Lingayat Kranti Monthly news paper 8884000008 [email protected]

Check Also

47ನೇ ತ್ರೈಮಾಸಿಕ ಶಿವಾನುಭವ-ಗುರುವಂದನೆ

  ಮುಂಡರಗಿ ಜುಲೈ 12: ೧೨ನೆಯ ಶತಮಾನದ ಬಸವಾದಿ ಶರಣರು ದೇವರ ಕಲ್ಪನೆಯನ್ನು ಇಷ್ಟಲಿಂಗದಲ್ಲಿ ಕಂಡರು.ಗರ್ಭಗುಡಿ ಸಂಸ್ಕೃತಿಯಿಂದ ಜನರನ್ನು ಹೊರತಂದು,ಇಷ್ಟಲಿಂಗ …

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ …

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ …

ನೇಗಿನಹಾಳ ಗ್ರಾಮದ ಸಮಸ್ಯೆಗಳ ಆಲಿಸಿದ ತಹಶಿಲ್ದಾರ್ ಬಸವರಾಜ ನಾಗರಾಳ್

ಗ್ರಾಮದ ಜನತಾ ಕಾಲನಿಯಲ್ಲಿ ನೀರು ನುಗ್ಗಿದ್ದರಿಂದ ಮನೆಗಳು ಬಿದ್ಧಿರುವ ಸ್ಥಳಗಳಿಗೆ ಬೇಟಿ ನೀಡಿದರು. ನೇಗಿನಹಾಳ (ಬೆಳಗಾವಿ) : ಗ್ರಾಮದಲ್ಲಿನ ಸಮಸ್ಯೆಗಳನ್ನು …

ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ

ಲಿಂಗಾಯತ ಕ್ರಾಂತಿ: ಎಂ.ಎಂ.ಕಲ್ಬುರ್ಗೀ ಸರ್ ಬರೆದಂತ ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ ಎನ್ನುವ ಶೀರ್ಷಿಕೆಯನ್ನು ಇಲ್ಲಿ ಬಳಸುತ್ತಿರುವೆ.ಕಲ್ಬುರ್ಗಿ ಸರ್ …

ವಚನ ಸಾಹಿತ್ಯ ಬೆಳಕಿಗೆ ತಂದವರು ಡಾ.ಫ.ಗು.ಹಳಕಟ್ಟಿಯವರು: ಡಾ. ಎಂ ಬಿ ಪಾಟೀಲ

  ವಿಜಯಪುರ: ಹರಿದು ಹಂಚಿ ಹೋಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಪ್ರಕಟಿಸಿ, ಪ್ರಚಾರ ಮಾಡಿ, ಬೆಳಕಿಗೆ ತಂದವರು ವಚನಪಿತಾಮಹರೆಂದೇ ಖ್ಯಾತರಾದವರು …

ಅಂಬೇಡ್ಕರ್ ತತ್ವಗಳನ್ನು ಅರಿತಾಗ ಸಂವಿಧಾನದ ಆಶಯಗಳ ಅನುಷ್ಠಾನ ಸಾಧ್ಯ: ನಿಜಗುಣಾನಂದ ಶ್ರೀ

  ಎಂ.ಕೆ.ಹುಬ್ಬಳ್ಳಿ: ಅಂಬೇಡ್ಕರ್ ಅವರ ತತ್ವಗಳನ್ನು ಕೇವಲ ಕಾನೂನು ನ್ಯಾಯಾಂಗದ ಚೌಕಟ್ಟಿನಲ್ಲಿ ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ. ಆದರೆ ಹೃದಯಾಳದಲ್ಲಿ ಅವರ …

ಕ್ರಿ.ಪೂ. 200 ವರ್ಷಗಳ ಹಿಂದೆ…

  ಲಿಂಗಾಯತ ಕ್ರಾಂತಿ: ಕ್ರಿ.ಪೂ. 200 ವರ್ಷಗಳ ಹಿಂದೆ ಅಲೆಕ್ಸಾಂಡರ್ ದಿ ಗ್ರೇಟ್ ಗ್ರೀಕ್ ದೇಶದ ಚಕ್ರವರ್ತಿಯಾಗಿದ್ದ. ಆತ ತುಂಬಾ …

ಪ್ರಕೃತಿಯ ಆರಾಧಕಳು ಅಕ್ಕ

  ಲಿಂಗಾಯತ ಕ್ರಾಂತಿ: ಪ್ರಕೃತಿಯ ಆರಾಧನೆ ಎಂದರೆ ಸತ್ಯ ಮತ್ತು ಸೌಂದರ್ಯದ ಅನುಸಂಧಾನದ ಪ್ರಕ್ರಿಯೆ. ಪಂಚಭೂತಗಳಿಂದ ಆವೃತವಾದ ಈ ಪ್ರಕೃತಿಯು …

‘ಲಿಂಗಾಯತ’ ಚಳವಳಿಗೆ ಕಿಚ್ಚು ಹಚ್ಚಿದವರೇ ಲಿಂಗಾನಂದ ಶ್ರೀ!

  ಲಿಂಗಾಯತ ಕ್ರಾಂತಿ:  ಆ ದುರ್ದಿನಗಳಲ್ಲಿ ಬಸವಾದಿ ಶರಣರನ್ನು ಹಳ್ಳಿ ಹಳ್ಳಿಗೂ ತಲುಪಿಸಿ, ಸಾಮಾನ್ಯರಲ್ಲಿ ‘ಲಿಂಗಾಯತ’ದ ಅರಿವು ಮೂಡಿಸಿದ್ದು ಲಿಂಗಾನಂದ …

ನಿಜಗುಣಪ್ರಭು ತೋಂಟದಾರ್ಯ ಶ್ರೀಗಳಿಗೆ ಇಂದು ಪ್ರಶಸ್ತಿ ಪ್ರದಾನ

  ಚನ್ನಮ್ಮನ ಕಿತ್ತೂರು: ಮೂರು ದಶಕಗಳಿಂದ ನಾನಾ ದೇಶಗಳನ್ನು ಸುತ್ತಿ ಬಸವ ತತ್ವಗಳನ್ನು ಬಿತ್ತುತ್ತಿರುವ ನಿಷ್ಕಲ ಮಂಟಪದ ಪೂಜ್ಯ ಶ್ರೀ …

ವಿಧಾನಸೌಧದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಸಿಎಂ ಸಿದ್ದತೆ

  ಬೆಂಗಳೂರು: ಲಿಂಗಾಯತ ಧರ್ಮೀಯರ ಬಹುದಿನಗಳ ಬೇಡಿಕೆಗೆ ಈಗ ಕಾಲ ಕೂಡಿಬಂದಿದೆ. ಹೌದು.! ವಿಧಾನಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ …

ಬ್ರಾಹ್ಮಣ್ಯ ಕೇವಲ 15% ರಷ್ಟಿರುವ ಸವರ್ಣೀಯರಲ್ಲಷ್ಟೇ ಆಚರಿಸಲ್ಪಡುತ್ತದೆಯೇ..?

ಬ್ರಾಹ್ಮಣ್ಯದ ಬಗ್ಗೆ ಇತ್ತೀಚೆಗೆ ಎಲ್ಲೆಡೆ ಬಹಳ ಚರ್ಚೆ ಆಗುತ್ತಿದೆ. ಹಾಗಾಗಿ ನನ್ನ ಸೀಮಿತ ಅರಿವಿನ ಪರಿಧಿಯಲ್ಲಿ ನನ್ನ ಅಭಿಪ್ರಾಯ ಹಂಚಿಕೊಳ್ಳಲು …

ಲಿಂಗಾಯತರಿಗೆ ಬೇಕಿರುವುದು ಬೆಲ್ಲದ್ ಅಲ್ಲ; ಎಂ.ಬಿ.ಪಾಟೀಲರಂತಹ ಸಕ್ಕರೆ!

  ಹೌದು. ಲಿಂಗಾಯತರ ಮೇಲೆ ಯಾರನ್ನೋ ತಂದು ಹೇರಬೇಡಿ. ಪರ್ಯಾಯ ನಾಯಕನನ್ನು ಹುಡುಕುವ ಮತ್ತು ಅವರ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ …

ರವಿಯೊಳಡಗಿದ ಪ್ರತಿಬಿಂಬದಂತೆ

  ಲಿಂಗಾಯತ ಕ್ರಾಂತಿ: 12 ನೇ ಶತಮಾನದ ಶರಣೆಯರಲ್ಲಿ ಆಧ್ಯಾತ್ಮಿಕ ಪಥವನ್ನು ಮುಟ್ಟಿದ ವಿಶಿಷ್ಟ ಶರಣೆ ಮುಕ್ತಾಯಕ್ಕ. ಶರಣೆ ಎನ್ನುವ …

Leave a Reply

Your email address will not be published. Required fields are marked *