Home / featured / ಶರಣೆ ಜಯದೇವಿತಾಯಿ ಲಿಗಾಡೆ, ಗಡಿಕನ್ನಡದ ಉಳಿವು

ಶರಣೆ ಜಯದೇವಿತಾಯಿ ಲಿಗಾಡೆ, ಗಡಿಕನ್ನಡದ ಉಳಿವು

ಸೊಲ್ಲಾಪುರ : ಕನ್ನಡ ಹೋರಾಟಗಳೆಂದರೆ‌ ಅರ್ದ ರಾತ್ರಿಯಾದರು ಸರಿಯೇ ದಂಡು ಸೇರಿಸಿ ಕನ್ನಡ ವಿರೋಧಿಗಳನ್ನ ಬಗ್ಗುಬಡಿಯುತ್ತಿದ್ದ ಗಡಿನಾಡ ಸಿಂಹಿಣಿ ಜಯದೇವಿತಾಯಿ ಲಿಗಾಡೆ ಹುಟ್ಟಿದ್ದು ಇದೆ ತಿಂಗಳ ಜೂನ ೨೩ ರಂದು ಹೀಗಾಗಿ ಈ ಸಂಪೂರ್ಣ ತಿಂಗಳನ್ನ ಈ ತಾಯಿಯನ್ನ ನೆನೆಯುತ್ತ ಅವರ ಬಗ್ಗೆ ತಿಳಿಯುತ್ತ ಕಳೆಯೋಣ, ಕನ್ನಡದ ಕ್ರಾಂತಿಯ ದೀಪಗಳು ಹೇಗೆ ಜಗಮಗಿಸಿ ಮುಂದಿನ ಪೀಳಿಗೆಯು ಸರಿದಾರಿಯಲ್ಲಿ ನಡೆಯಲು ಬೆಳಕನ್ನ ಚೆಲ್ಲಿದ ಈ ನಿಸ್ವಾರ್ಥ ಮಹಾಚೇತನಗಳು ಕನ್ನಡದ ಹಿರಿಮೆ.

೧೯ರ ದಶಕದಲ್ಲಿ ಮರಾಟಿ ಪ್ರಬಲ್ಯವಿದ್ದ ನಾಡಲ್ಲಿ, ಕರ್ನಾಟಕ, ಕನ್ನಡ ಮತ್ತು ಕನ್ನಡ ಜನರಿಗೋಸ್ಕರ ದೂರದ ಗಡಿ ಸೊಲ್ಲಾಪುರದಲ್ಲಿ ನಿಂತು ಗುಟುರು ಹಾಕಿ ಕನ್ನಡಿಗರ ಕೋಟೆ ಕಟ್ಟಿ ಅದನ್ನ ರಕ್ಷಣೆ ಮಾಡಿದ ಅಪ್ರತಿಮ ಹೋರಾಟಗಾರ್ತಿ ಗಡಿನಾಡ ಧೀರೋದ್ದಾತ ಮಹಿಳೆ ಗಡಿನಾಡ ಹುಲಿ ಬಿರುದಾಂಕಿತೆ ಜಯದೇವಿತಾಯಿ ಲಿಗಾಡೆ. ಆಧ್ಯಾತ್ಮ ಚಿಂತನಕಾರರು. ಕುಟುಂಬವತ್ಸಲೆ, ಸಾಹಿತ್ಯಸಾಧಕಿ, ಸಮಾಜಸೇವಕಿ ಹೀಗೆ ತ್ರಿವೇಣಿ ಸಂಗಮವಾಗಿದ್ದ ಈ ಜಂಗಮತಾಯಿ ತಾಯ್ನುಡಿಯ ಸೇವೆಗಾಗಿ ಸವೆದರು. ಕನ್ನಡ ನುಡಿಗೆ, ಕನ್ನಡ ನಾಡಿಗೆ ತನ್ನನ್ನು ಅರ್ಪಿಸಿಕೊಂಡು ಅಜರಾಮರ ಕೀರ್ತಿಪಾತ್ರರಾದ ಶ್ರೀಮತಿ ಜಯದೇವಿ ತಾಯಿ ಲಿಗಾಡೆ ಅವರ ಜೀವನ ದರ್ಶನವೆಂದರೆ ಅದೊಂದು ಯಶೋಗಾಥೆ.

ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆ, ‘ಗಡಿನಾಡ ದುರ್ಗಾ’ ಎಂದು ಬಿರುದಾಂಕಿತರಾಗಿರುವ ಅಖಂಡ ಕರ್ನಾಟಕದ ಕನಸು ಕಂಡು, ಕರ್ನಾಟಕದ ಏಕೀಕರಣಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಾ, ಕನ್ನಡನಾಡು-ನುಡಿಗಾಗಿ ದುಡಿಯುತ್ತ ಬರಿ ಮಾತಲ್ಲೇ ಹೇಳದೆ ಕೃತಿಯಲ್ಲಿ ಮಾಡಿ ತೋರಿಸಿದ ಗಟ್ಟಿಗಿತ್ತಿ.

ಬೆಳಗಾವಿಯಂಥ ಗಡಿ ಪ್ರದೇಶದಲ್ಲಿ ಕನ್ನಡದ ಗುಡಿ ಕಟ್ಟಲು ಮತ್ತು ರಕ್ಷಣೆ ಮಾಡಲು ಹೋರಾಡಿದ ಅಪ್ರತಿಮ ಹೋರಾಟಗಾರ್ತಿ, ಮಹಾರಾಷ್ಟ್ರದಲ್ಲಿ ಕನ್ನಡ ಪ್ರಧಾನವಾಗಿರುವ ಸೋಲ್ಲಾಪುರ, ಅಕ್ಕಲಕೋಟೆ, ಜತ್ತ, ಜೊತೆಗೆ ಕೇರಳದ ಕಾಸರಗೋಡು ಹಾಗೂ ಇತರ ಕನ್ನಡ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಅವರ ಜೀವನದುದ್ದಕ್ಕೂ ಹೋರಾಟ ನಡೆಸಿದ್ದಾರೆ.

ಕಾವೇರಿಯಿಂದ ಗೋದಾವರಿವರೆಗಿದ್ದ ಕನ್ನಡ ನಾಡು ಪರಕೀಯ ಆಳ್ವಿಕೆಗೆ ಒಳಪಟ್ಟು ಜರ್ಜರಿತವಾಗಿ ವಸಾಹತು ಶಾಹಿಗಳ ಕಾಲಕ್ಕೆ ಹಂಚಿ ಹರಿದು ಹೋಯಿತು. ಹೀಗೆ ಪರಕೀಯರಿಂದ ಸ್ವಾಂತಂತ್ರ್ಯ ಪಡೆಯುವುದು, ಕರ್ನಾಟಕ ಏಕೀಕರಣ ಮಾಡುವುದು ಜಯದೇವಿ ತಾಯಿಯವರಿಗೆ ಮುಖ್ಯವಾಗಿತ್ತು. ಹೈದ್ರಾಬಾದ ಕರ್ನಾಟಕ ವಿಮೋಚನೆಗೆ ದುಡಿದ ತಾಯಿಯವರು ಮುಂದೆ ಕರ್ನಾಟಕ ಏಕೀಕರಣಕ್ಕಾಗಿ ಪಣತೊಟ್ಟರು. ಆಗ ಕನ್ನಡ ನಾಡಿನ ಮಕ್ಕಳು, ನಮ್ಮ ತಾಯಿ ಅನೇಕ ಪ್ರಾಂತಗಳಲ್ಲಿ ಹಂಚಿ ಹೋದಾಗ ನಾವು ನೆಮ್ಮದಿಯಿಂದ ಇರುವುದು ಹೇಗೆ? ಒಡೆದು ಹೋದ ಕರ್ನಾಟಕ ಒಂದಾಗಬೇಕು. ಎಂದು ಬಲವಾಗಿ ಪ್ರತಿಪಾದಿಸಿದರು. ಅನೇಕರ ಅವಿರತ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣವಾಯಿತು.

ಗಡಿಯಲ್ಲಿ ಕಟ್ಟಿ ಕನ್ನಡದ ಕೋಟೆ, ಉಡಿಯಲ್ಲಿ

ಇಡಿಯ ನಾಡಕ್ಕರೆಯ ಮಕ್ಕಳಾಡುಂಬೊಲವೆ

ಒಡವೆಗಳನುಳಿದ ರುದ್ರಾಕ್ಷಿ ಕಂಕಣ ಬಲವೆ

ಇದ್ದಲ್ಲೇ ಮರಳಿ ಗೆದ್ದಿರಿ ತುತ್ತತುದಿಯಲ್ಲಿ..

ಜಯದೇವಿ ತಾಯಿಯವರ ಈ ಮಹಾ ಕವನ ಸಾಹಿತ್ಯವನ್ನು ಓದಿದ ಜನ ಇವರನ್ನು ಆಧುನಿಕ ಕಾಲದ ಅಕ್ಕಮಹಾದೇವಿ ಅಂತ ಕರೆದಿದ್ದುಂಟು. ಇವರು ಹಲವಾರು ಸಾಹಿತ್ಯಗಳಲ್ಲಿ ಮಹಿಳೆಯರ ಹಕ್ಕುಗಳ ಬಗೆಗೆ ದ್ವನಿ ಎತ್ತಿದ್ದಾರೆ. ರವೀಂದ್ರನಾಥ ಠಾಕೂರರ ಭಕ್ತಿಗೀತೆಯಂತೆ ಬರೆದ ಗೀತೆಗಳು ಈ ಕೃತಿಯಲ್ಲಿವೆ. ಇಲ್ಲಿನ ಕೆಲವು ಗೀತೆಗಳು ಭಾರತೀಯ ಕವಿತಾ ಪುಸ್ತಕದಲ್ಲೂ ಸೇರ್ಪಡೆಯಾಗಿವೆ. ಇವರ ಈ ಕೃತಿಯಲ್ಲಿ ಸಾಮಾಜಿಕ ಪ್ರಜ್ಞೆಯ ಜೊತೆಗೆ ಅಧ್ಯಾತ್ಮಿಕ ಭಾವವೂ ತುಂಬಿದೆ.

ಭಾರತ ಸ್ವಾತಂತ್ರ್ಯ, ಹೈದ್ರಾಬಾದ್ ಕರ್ನಾಟಕದ ವಿಮೋಚನೆ ಮತ್ತು ಕರ್ನಾಟಕ ಏಕೀಕರಣ, ಗಡಿಯಲ್ಲಿ ಕನ್ನಡ ಶಾಲೆಗಳನ್ನು ಕಟ್ಟಿದ್ದು ಒಳಗೊಂಡಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ದುಡಿದ ಜಯದೇವಿತಾಯಿಯವರಿಗೆ ಕರ್ನಾಟಕದಲ್ಲಿ ಅತ್ಯಂತ ಸಾಮಾನ್ಯ ಬರಹಗಾರರಿಗೆ ಸಂದ ಗೌರವ, ನೆರವು ಕೂಡಾ ಬಂದಿಲ್ಲವೆನ್ನುವುದು ವಿಷಾದನೀಯ. ಸೋಲಾಪೂರ ಕರ್ನಾಟಕಕ್ಕೆ ಸೇರಬೇಕೆಂಬ ಜಯದೇವಿತಾಯಿ ಲಿಗಾಡೆಯವರ ಹೋರಾಟ ಫಲಪ್ರದವಾಗದಾಗ ತಾವೇ 1980ರಲ್ಲಿ ಸೋಲಾಪೂರ ತೊರೆದು ಕರ್ನಾಟಕದ ಗಡಿಭಾಗ, ಬಸವಾದಿ ಶರಣರ ಕಾಯಕಭೂಮಿ ಬಸವಕಲ್ಯಾಣದಲ್ಲಿ ಭಕ್ತಿಭವನ ಕಟ್ಟಿಕೊಂಡು ನೆಲೆಸಿದರು. 1986ರ ಜುಲೈ 24ರಂದು ಕನ್ನಡ ನೆಲದಲ್ಲಿ ಕೊನೆಯುಸಿರೆಳೆದರು. ಬಸವಕಲ್ಯಾಣದಲ್ಲಿರುವ ಅವರ ಸಮಾಧಿ (ಗದ್ದುಗೆ)ಯನ್ನು ಸ್ಮಾರಕ ಮಾಡುವ ಸೌಜನ್ಯವನ್ನು ಕೂಡ ನಮ್ಮ ಸರಕಾರ ತೋರಿಸಲಿಲ್ಲ ತೋರುತ್ತಿಲ್ಲ.

ಕೊನೆಗೆ ಹನಿ : ಕನ್ನಡಿಗರೇ ಈ ರೀತಿಯಾಗಿ ಕನ್ನಡ ಉಳಿಸಲು ಬೆಳೆಸಲು ಅನೇಕರು ಹೋರಾಡಿದ್ದಾರೆ, ಆದರೆ ಆ ಹೋರಾಟದ ಹಾದಿಯಲ್ಲಿ ಬಂಗಾರದ ನಕ್ಷತ್ರ ಈ ನಮ್ಮ ತಾಯಿ ಜಯದೇವಿ ಲಿಗಾಡೆ. ಈ ತಾಯಿಯ ತತ್ವಗಳು ಸಮಾಜಪರ ಚಿಂತನೆಗಳು ಮತ್ತು ಕನ್ನಡ ನಾಡುನುಡಿಯ ವಿಚಾರಗಳನ್ನ ಮುಂದಿನ ಪೀಳಿಗೆಗೆ ಮುಟ್ಟಿಸುತ್ತ ಅವರ ಅಶೋತ್ತರಗಳನ್ನ ಇಡೆರಿಸಲು ನಾವೆಲ್ಲರೂ ಹೊರಡಲೇ ಬೇಕು ಎಂದು ಹೇಳುತ್ತಾ ನಿಮ್ಮವ

ಲೇಖನ: ಶರಣ ಶಿವಣ್ಣ ಗುಂಡಾನವರ

ಕನ್ನಡ ಹೋರಾಟಗಾರರು, ಪ್ರಗತಿಪರ ಚಿಂತಕರು

About Shivanand

Admin : Lingayat Kranti Monthly news paper 8884000008 [email protected]

Check Also

47ನೇ ತ್ರೈಮಾಸಿಕ ಶಿವಾನುಭವ-ಗುರುವಂದನೆ

  ಮುಂಡರಗಿ ಜುಲೈ 12: ೧೨ನೆಯ ಶತಮಾನದ ಬಸವಾದಿ ಶರಣರು ದೇವರ ಕಲ್ಪನೆಯನ್ನು ಇಷ್ಟಲಿಂಗದಲ್ಲಿ ಕಂಡರು.ಗರ್ಭಗುಡಿ ಸಂಸ್ಕೃತಿಯಿಂದ ಜನರನ್ನು ಹೊರತಂದು,ಇಷ್ಟಲಿಂಗ …

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ …

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ …

ನೇಗಿನಹಾಳ ಗ್ರಾಮದ ಸಮಸ್ಯೆಗಳ ಆಲಿಸಿದ ತಹಶಿಲ್ದಾರ್ ಬಸವರಾಜ ನಾಗರಾಳ್

ಗ್ರಾಮದ ಜನತಾ ಕಾಲನಿಯಲ್ಲಿ ನೀರು ನುಗ್ಗಿದ್ದರಿಂದ ಮನೆಗಳು ಬಿದ್ಧಿರುವ ಸ್ಥಳಗಳಿಗೆ ಬೇಟಿ ನೀಡಿದರು. ನೇಗಿನಹಾಳ (ಬೆಳಗಾವಿ) : ಗ್ರಾಮದಲ್ಲಿನ ಸಮಸ್ಯೆಗಳನ್ನು …

ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ

ಲಿಂಗಾಯತ ಕ್ರಾಂತಿ: ಎಂ.ಎಂ.ಕಲ್ಬುರ್ಗೀ ಸರ್ ಬರೆದಂತ ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ ಎನ್ನುವ ಶೀರ್ಷಿಕೆಯನ್ನು ಇಲ್ಲಿ ಬಳಸುತ್ತಿರುವೆ.ಕಲ್ಬುರ್ಗಿ ಸರ್ …

ವಚನ ಸಾಹಿತ್ಯ ಬೆಳಕಿಗೆ ತಂದವರು ಡಾ.ಫ.ಗು.ಹಳಕಟ್ಟಿಯವರು: ಡಾ. ಎಂ ಬಿ ಪಾಟೀಲ

  ವಿಜಯಪುರ: ಹರಿದು ಹಂಚಿ ಹೋಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಪ್ರಕಟಿಸಿ, ಪ್ರಚಾರ ಮಾಡಿ, ಬೆಳಕಿಗೆ ತಂದವರು ವಚನಪಿತಾಮಹರೆಂದೇ ಖ್ಯಾತರಾದವರು …

ಅಂಬೇಡ್ಕರ್ ತತ್ವಗಳನ್ನು ಅರಿತಾಗ ಸಂವಿಧಾನದ ಆಶಯಗಳ ಅನುಷ್ಠಾನ ಸಾಧ್ಯ: ನಿಜಗುಣಾನಂದ ಶ್ರೀ

  ಎಂ.ಕೆ.ಹುಬ್ಬಳ್ಳಿ: ಅಂಬೇಡ್ಕರ್ ಅವರ ತತ್ವಗಳನ್ನು ಕೇವಲ ಕಾನೂನು ನ್ಯಾಯಾಂಗದ ಚೌಕಟ್ಟಿನಲ್ಲಿ ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ. ಆದರೆ ಹೃದಯಾಳದಲ್ಲಿ ಅವರ …

ಕ್ರಿ.ಪೂ. 200 ವರ್ಷಗಳ ಹಿಂದೆ…

  ಲಿಂಗಾಯತ ಕ್ರಾಂತಿ: ಕ್ರಿ.ಪೂ. 200 ವರ್ಷಗಳ ಹಿಂದೆ ಅಲೆಕ್ಸಾಂಡರ್ ದಿ ಗ್ರೇಟ್ ಗ್ರೀಕ್ ದೇಶದ ಚಕ್ರವರ್ತಿಯಾಗಿದ್ದ. ಆತ ತುಂಬಾ …

ಪ್ರಕೃತಿಯ ಆರಾಧಕಳು ಅಕ್ಕ

  ಲಿಂಗಾಯತ ಕ್ರಾಂತಿ: ಪ್ರಕೃತಿಯ ಆರಾಧನೆ ಎಂದರೆ ಸತ್ಯ ಮತ್ತು ಸೌಂದರ್ಯದ ಅನುಸಂಧಾನದ ಪ್ರಕ್ರಿಯೆ. ಪಂಚಭೂತಗಳಿಂದ ಆವೃತವಾದ ಈ ಪ್ರಕೃತಿಯು …

‘ಲಿಂಗಾಯತ’ ಚಳವಳಿಗೆ ಕಿಚ್ಚು ಹಚ್ಚಿದವರೇ ಲಿಂಗಾನಂದ ಶ್ರೀ!

  ಲಿಂಗಾಯತ ಕ್ರಾಂತಿ:  ಆ ದುರ್ದಿನಗಳಲ್ಲಿ ಬಸವಾದಿ ಶರಣರನ್ನು ಹಳ್ಳಿ ಹಳ್ಳಿಗೂ ತಲುಪಿಸಿ, ಸಾಮಾನ್ಯರಲ್ಲಿ ‘ಲಿಂಗಾಯತ’ದ ಅರಿವು ಮೂಡಿಸಿದ್ದು ಲಿಂಗಾನಂದ …

ನಿಜಗುಣಪ್ರಭು ತೋಂಟದಾರ್ಯ ಶ್ರೀಗಳಿಗೆ ಇಂದು ಪ್ರಶಸ್ತಿ ಪ್ರದಾನ

  ಚನ್ನಮ್ಮನ ಕಿತ್ತೂರು: ಮೂರು ದಶಕಗಳಿಂದ ನಾನಾ ದೇಶಗಳನ್ನು ಸುತ್ತಿ ಬಸವ ತತ್ವಗಳನ್ನು ಬಿತ್ತುತ್ತಿರುವ ನಿಷ್ಕಲ ಮಂಟಪದ ಪೂಜ್ಯ ಶ್ರೀ …

ವಿಧಾನಸೌಧದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಸಿಎಂ ಸಿದ್ದತೆ

  ಬೆಂಗಳೂರು: ಲಿಂಗಾಯತ ಧರ್ಮೀಯರ ಬಹುದಿನಗಳ ಬೇಡಿಕೆಗೆ ಈಗ ಕಾಲ ಕೂಡಿಬಂದಿದೆ. ಹೌದು.! ವಿಧಾನಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ …

ಬ್ರಾಹ್ಮಣ್ಯ ಕೇವಲ 15% ರಷ್ಟಿರುವ ಸವರ್ಣೀಯರಲ್ಲಷ್ಟೇ ಆಚರಿಸಲ್ಪಡುತ್ತದೆಯೇ..?

ಬ್ರಾಹ್ಮಣ್ಯದ ಬಗ್ಗೆ ಇತ್ತೀಚೆಗೆ ಎಲ್ಲೆಡೆ ಬಹಳ ಚರ್ಚೆ ಆಗುತ್ತಿದೆ. ಹಾಗಾಗಿ ನನ್ನ ಸೀಮಿತ ಅರಿವಿನ ಪರಿಧಿಯಲ್ಲಿ ನನ್ನ ಅಭಿಪ್ರಾಯ ಹಂಚಿಕೊಳ್ಳಲು …

ಲಿಂಗಾಯತರಿಗೆ ಬೇಕಿರುವುದು ಬೆಲ್ಲದ್ ಅಲ್ಲ; ಎಂ.ಬಿ.ಪಾಟೀಲರಂತಹ ಸಕ್ಕರೆ!

  ಹೌದು. ಲಿಂಗಾಯತರ ಮೇಲೆ ಯಾರನ್ನೋ ತಂದು ಹೇರಬೇಡಿ. ಪರ್ಯಾಯ ನಾಯಕನನ್ನು ಹುಡುಕುವ ಮತ್ತು ಅವರ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ …

ರವಿಯೊಳಡಗಿದ ಪ್ರತಿಬಿಂಬದಂತೆ

  ಲಿಂಗಾಯತ ಕ್ರಾಂತಿ: 12 ನೇ ಶತಮಾನದ ಶರಣೆಯರಲ್ಲಿ ಆಧ್ಯಾತ್ಮಿಕ ಪಥವನ್ನು ಮುಟ್ಟಿದ ವಿಶಿಷ್ಟ ಶರಣೆ ಮುಕ್ತಾಯಕ್ಕ. ಶರಣೆ ಎನ್ನುವ …

Leave a Reply

Your email address will not be published. Required fields are marked *