Home / featured / ನಾ ಯಾಕ ಬುದ್ಧನ ಓದಲಿಲ್ಲ.?

ನಾ ಯಾಕ ಬುದ್ಧನ ಓದಲಿಲ್ಲ.?

 

ಲಿಂಗಾಯತ ಕ್ರಾಂತಿ: ಬುದ್ಧ ಅಕ್ಷರಗಳಲ್ಲಿ ಹುದಗಿದ್ದನಾ? ಇಲ್ಲ, ಇಲ್ಲೆ ನಮ್ಮ ಮನೆಗಳಲ್ಲಿ “ಶಾಂತ ಮೂರುತಿ”ಯಾಗಿ, ಹಳದಿ ಅರಬಿ ತೊಟಕೊಂಡು, ಗುಂಗುರಗೂದಲ ಇಟಕೊಂಡು, ಕಣ್ಣ ಮುಚ್ಟಿ ತಪ ಮಾಡುವ ಶಿಲೆಯಾಗಿ, ಸ್ತಬ್ಧವಾಗಿ ಬಿಟ್ಟನಾ?

ಅರಿವಿನ ವ್ಯಾಪ್ತಿ ವಿಸ್ತಾರ ಮಾಡಲು ಹೊರಟಂವ, ಸಾವಿಲ್ಲದ ಮನಿಯ ಸಾಸಿವೆ ಕಾಳ ತಗೊಂಡು ಬಾ ತಾಯಿ ಅಂದನಲ್ಲ? ಸಾವಿನ ಹೆದರಿಕೆ ಕಳೆಯಬೇಕೆಂಬ ಗುರಿಯಯಿತ್ತೆ? ಬುದ್ಧ ಜನಮಾನಸಸದಲ್ಲಿ, ಕಳಿದಿದ್ದೆಷ್ಟು? ಕೂಡಿಸಸಿದ್ದೆಷ್ಟು? ಈ ಗಣಿತದ ಮ್ಯಾಲ ನಾವು ಲೆಕ್ಕ ಹಾಕಿದರ, ಸಾವು ನೋವಿನ ಕಾರಣಗಳನ್ನೆ ನಮಗ ತಿಳಿಸಿದ ಮಾರ್ಗದರ್ಶಕನಾಗಿ, ತಾನು ನಡೆದು ಹೋದನೆ?

ಇಲ್ಲಾ ಬುದ್ಧ ನಮ್ಮೊಳಗೆ ಮಿಳಿತವಾಗಿ, ಸಮ ಸಮಾಜಕ್ಕ ಹಾತೊರೆಯುವ ಮನಗಳಿಗೆ, ಸುಪ್ತ ಮನಸ್ಸಿನಲ್ಲಿ ಸ್ಥೂಪವಾಗಿ ನೆಲೆಯೂರಿದನೆ? ನೆಲೆ ಉರುವ ಮನಸ್ತಿಥಿಯಯವನೆ? ಅಂತರಾಳದ ನದಿಯಾಗಿ ಹರಿಯುವವನನೆ?

ಈ ಎಲ್ಲ ಪ್ರಶ್ನೆಗಳು, ಅರಿವಿನ ವ್ಯಾಪ್ತಿ ವಿಸ್ತಾರಗೊಳಸಲಕ್ಕ, ಹೆಂಟಿ ಹೊಡದು, ಹೊಲವನ್ನ ಹದಗೊಳಿಸುವ ಪ್ರಯತ್ನ. ಈಗ ನನಗ ಯಾಕ ಬುದ್ಧನ ಒದಲಕ್ಕ ಯಾಕಾಗಲಿಲ್ಲ ಅನ್ನುವ ಪ್ರಶ್ನೆಯ ಉತ್ತರಗಳ ಹುಡಕಾಟದಲ್ಲಿ, ನನ್ನೊಳಗೆ ಬುದ್ಧ ನಿತ್ಯ ಹರಿಯುವ ನದಿಯೆ? ಅನ್ನುವ ಧನ್ಯದ ಭಾವ ಮೂಡಲಾರದೆ ಇಲ್ಲ, ಅದನ್ನ ಕಡಿಕ್ಕ ಹೇಳತಿನಿ.

ಹುಟ್ಟಿದ್ದು ಕಲಬುರಗಿಯಲ್ಲಿ, ಬೆಳೆದಿದ್ದು ಬಿಜಾಪೂರ, ಮಂಗಳೂರ ಮತ್ತು ಬೆಂಗಳೂರ ಜಿಲ್ಲೆಗಳಲ್ಲಿ, ಒದಿದ್ದು, ಕನ್ನಡ ಮಾದ್ಯಮದಲ್ಲಿ, ಇಂಜನೀಯರಿಂಗ (ಅಪೂರ್ಣ) ಮತ್ತು ನರ್ಸಿಂಗ ಅಧ್ಯಯನ ಮಾಡಿದ್ದು, ಹಿಗಾಗಿ ಬುದ್ಧನ ವಿಷಯ ಹತ್ತಿರ ಸುಳಿಯಲೆ ಇಲ್ಲ,

ಇನ್ನ ಊರಾಗ, ಮಡಿವಾಳಪ್ಪ, ಮೌಲಾಲಿ, ದುರ್ಗವ್ವ, ದ್ಯಾಮವ್ವ ಮತ್ತ ಹಣಮಂತ ದೇವರಾಗಿ “ಕ್ಷೇತ್ರಾಧಿಪತಿ”ಗಳಾಗಿ, ಮೌಢ್ಯಗಳ ಹೇರಿಕೆ ಅವ್ಯಾಹತವಾಗಿ ನಡಿದಿತ್ತು, ನಡಿತಾ ಇದೆ, ಮೊದಲ ಸುಮ್ಮ ಅಲ್ಲೆ ಗುಡ್ಯಾಗ ಭಜನ ನಡಿತಾ ಇತ್ತು ಈಗ ಲೌಡಸ್ಪೀಕರ್ ಹಚ್ಚಿ ನಡಿತಾದ.

ಹೈಸ್ಕೂಲನ್ಯಾಗ ಕೆಲವಂದೂ ಪುಸ್ತಕಗಳಲ್ಲಿ ಬುದ್ಧ ಇಣಕಿದ್ದ, ಸುತ್ತಮುತ್ತ ಇರೂ ಸ್ನೇಹಿತರು, ಬುದ್ಧ ಅಂದರ ದಲಿತರಂವ ಅನ್ನು ಅಂಬೋಣಗಳನ್ನ ಹಂಚತಿದ್ದರು, ಕಾಲೇಜನ್ಯಾಗ “ಎದ್ದೇಳು ಮಂಜನಾಥ್…” ಅನ್ನುವ ವಾತಾವರಣ.

ಹೊರದೇಶಗಳಲ್ಲಿ, ಬಹುತೇಕ ಭಾರತೀಯ ಹೋಟೆಲಗಳಲ್ಲಿ, ಬುದ್ಧ ಸ್ವಾಗತಕಾರ.

ಸರಕಾರಗಳ ಆಡಳಿತದಲ್ಲಿ, ಬುದ್ಧ “ಉತ್ಸವ”ದ ಮೂರುತಿ ಆದ ಆದರ ಅವನ ವಿಚಾರಗಳ ಅನುಷ್ಟಾನ ಆಗಲಿಲ್ಲ, ರಾಜಕಾರಣದ ನಿಲುವಗಳಾಗಲಿಲ್ಲ, ಆದರೆ ಬುದ್ಧ ಹರಿತಾನೆ ಇದ್ದ, ದಮನಿತರಲ್ಲಿ, ಬುದ್ಧ ಬಸವ ಅಂಬೇಡ್ಕರ ವೇದಿಕೆಯಾಗಿ, ದಮನಿತರಲ್ಲಿ ಈಗಲೂ ಬುದ್ಧನೆ ಅಂತರಯಾಮಿ, ಮಾಯಾವಿ ಅಲ್ಲ ಅರಿವಿನ ಬೆಳಕಾಗಿ.

ಬರಿ ಇಲ್ಲಗಳ ಪಟ್ಟಿ ಮಾಡಿದರ, ನಾ ಯಾಕ ಓದಲಿಲ್ಲ ಅನ್ನುವ ಪ್ರಶ್ನೆಗೆ ಪರಿಪೂರ್ಣವಾದ ಉತ್ತರ ಸಿಗಲಿಕ್ಕಿಲ್ಲ, ಬಹಿರಂಗದ ಕಾರಣಗಳನ್ನ ಪಟ್ಟಿ ಮಾಡಿದ ಉದ್ದೇಶ, ಅಂತರಂಗದ ಇಚ್ಛೆಗೆ ಪೂರಕ ವ್ಯವಸ್ಥೆ ನಿರ್ಮಾಣವಾಗಲಿ ಅನ್ನುದು ಹೆಬ್ಬಯಕೆ ವಿನಃ ದೋಷಾರೋಪಣೆ ಅಲ್ಲ.

ಹೀಗೆ, ಬುದ್ಧನ ವಿಚಾರ ಅರಿತಾ ಹೋಗುವ ಪ್ರಯತ್ನ ಜಾರಿಯಲ್ಲಿದೆ…

ಬುದ್ಧ, ನನ್ನ ಮನದಲ್ಸಿ ಹರಿಯುವ ನದಿ ಅಂತ ಕಡಿಗಿ ಹೇಳತೀನಿ ಅಂದಿದ್ದೆ ಅದಕ್ಕ ಸುಮಾರು ವರ್ಷಗಳ ಹಿಂದೆ, *ಧರೆಯ ಗರ್ಭದಲ್ಲಿ ಜನಿಸಿದ ವಿಚಾರ* ಅನ್ನುವ ಕವನ ನಿಮ್ಮ ಜೋತಿ ಹಂಚಕೊಂಡೀನೀ ಓದರಿ;

“ಧರೆಯ ಗರ್ಭದಲ್ಲಿ ಜನಿಸಿದ ವಿಚಾರ”

ಹೊಲದಲ್ಲಿ ಬಿಜವೊಂದು ಬಿದ್ದಿದೆ,
ಮುಗಿಲಲ್ಲಿ ಮೋಡಗಳ ಮಿಲನ,
ಭಾವಗಳ ಹನಿಯೊಡೆದು ಧರೆಯ ಗರ್ಭ ತುಂಬಿದೆ.

ಮೊಳಕೆ ಮಗುವಾಗಿ,
ಲೌಕಿಕದ ಗಾಳಿ, ನೀರು, ಬೆಳಕು ಮತ್ತು ಮಣ್ಣು ತಾಗುವ ಮುನ್ನ, ಹೆತ್ತ ತಾಯಿಯ ಅಲೌಕಿಕ ಸಂಬಂಧದ ಅರ್ಥ ನಾ ಅರಿಯೆ.

ನಾಮಕರಣ, ಧಾರ್ಮಿಕರಣ, ಜಾತಿಕರಣ, ಯಾವುದಕ್ಕೆ?
ಜೀವನಿತ್ತ ಧಾತುವಿಗೋ? ಪೋಸಿಷಿದ ರಕ್ತಕ್ಕೋ?
ಲೌಕಿಕ (ಜೀವಂತ) ಮೌಂಸ ಮುದ್ದೆಗೋ?

ಯಾರು? “ನನ್ನ” ಮಾಲೀಕ.
ಹೆಣ್ಣು-ಗಂಡಿನ ಮಿಲನವೇ?
ಅಥವಾ, ಮಿಲನದ ಕಾಲವೇ?
ಅಥವಾ, ಕಾಕತಾಳಿಯವೇ?

ಯಾರೋ? ಯಾವದೋ ಕಾಲದಲ್ಲಿ,
ಬರೆದಿಟ್ಟ ವಿಚಾರಗಳ ಆಧಾರದ ಮೇಲೆ “ನನ್ನ” ಶಾಸ್ತ್ರಿಕರಣಗೊಳಿಸಲು ಸಜ್ಜಾದ ವಾದಿಗಳೇ, ಯಾರು ಕೊಟ್ಟರು ನಿಮಗೆ, ಆ ಅಧಿಕಾರ!

ಹೊಲದಲ್ಲಿ ಬಿಜವೊಂದು ಬಿದ್ದಿದೆ,
ಮುಗಿಲಲ್ಲಿ ಮೋಡಗಳ ಮಿಲನ,
ಭಾವಗಳ ಹನಿಯೊಡೆದು ಧರೆಯ ಗರ್ಭ ತುಂಬಿದೆ.

ಮಂಜು”ಶ್ರೀ”ಪಾಟೀಲ್

ಬುದ್ಧಂ ಶರಣಂ ಗಚ್ಛಾಮಿ

ಧಮ್ಮಂ ಶರಣಂ ಗಚ್ಛಾಮಿ

ಲೇಖನ: ಬಸವ ಪಾಟೀಲ, ಕೊಂಡಗೂಳಿ ವಿಜಯಪುರ

About Shivanand

Admin : Lingayat Kranti Monthly news paper 8884000008 [email protected]

Check Also

47ನೇ ತ್ರೈಮಾಸಿಕ ಶಿವಾನುಭವ-ಗುರುವಂದನೆ

  ಮುಂಡರಗಿ ಜುಲೈ 12: ೧೨ನೆಯ ಶತಮಾನದ ಬಸವಾದಿ ಶರಣರು ದೇವರ ಕಲ್ಪನೆಯನ್ನು ಇಷ್ಟಲಿಂಗದಲ್ಲಿ ಕಂಡರು.ಗರ್ಭಗುಡಿ ಸಂಸ್ಕೃತಿಯಿಂದ ಜನರನ್ನು ಹೊರತಂದು,ಇಷ್ಟಲಿಂಗ …

ಬಸವಧರ್ಮದ ಕಾಯಕಯೋಗಿ ಬಸವ ಸಿದ್ಧಲಿಂಗ ಶ್ರೀಗಳಿಗೆ 50ವರ್ಷ

  ಲೇಖನ: ಶಿವಾನಂದ ಮೆಟ್ಯಾಲ ನೇಗಿನಹಾಳ ನೇಗಿನಹಾಳ: 12ನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ನಂತರ ಬಸವಾದಿ ಶರಣರು ವಚನ …

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ …

ನೇಗಿನಹಾಳ ಗ್ರಾಮದ ಸಮಸ್ಯೆಗಳ ಆಲಿಸಿದ ತಹಶಿಲ್ದಾರ್ ಬಸವರಾಜ ನಾಗರಾಳ್

ಗ್ರಾಮದ ಜನತಾ ಕಾಲನಿಯಲ್ಲಿ ನೀರು ನುಗ್ಗಿದ್ದರಿಂದ ಮನೆಗಳು ಬಿದ್ಧಿರುವ ಸ್ಥಳಗಳಿಗೆ ಬೇಟಿ ನೀಡಿದರು. ನೇಗಿನಹಾಳ (ಬೆಳಗಾವಿ) : ಗ್ರಾಮದಲ್ಲಿನ ಸಮಸ್ಯೆಗಳನ್ನು …

ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ

ಲಿಂಗಾಯತ ಕ್ರಾಂತಿ: ಎಂ.ಎಂ.ಕಲ್ಬುರ್ಗೀ ಸರ್ ಬರೆದಂತ ಬಸವಣ್ಣ ದಕ್ಷಿಣ ಭಾರತದ ಪರ್ಯಾಯ ಬುದ್ದ ಎನ್ನುವ ಶೀರ್ಷಿಕೆಯನ್ನು ಇಲ್ಲಿ ಬಳಸುತ್ತಿರುವೆ.ಕಲ್ಬುರ್ಗಿ ಸರ್ …

ವಚನ ಸಾಹಿತ್ಯ ಬೆಳಕಿಗೆ ತಂದವರು ಡಾ.ಫ.ಗು.ಹಳಕಟ್ಟಿಯವರು: ಡಾ. ಎಂ ಬಿ ಪಾಟೀಲ

  ವಿಜಯಪುರ: ಹರಿದು ಹಂಚಿ ಹೋಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಪ್ರಕಟಿಸಿ, ಪ್ರಚಾರ ಮಾಡಿ, ಬೆಳಕಿಗೆ ತಂದವರು ವಚನಪಿತಾಮಹರೆಂದೇ ಖ್ಯಾತರಾದವರು …

ಅಂಬೇಡ್ಕರ್ ತತ್ವಗಳನ್ನು ಅರಿತಾಗ ಸಂವಿಧಾನದ ಆಶಯಗಳ ಅನುಷ್ಠಾನ ಸಾಧ್ಯ: ನಿಜಗುಣಾನಂದ ಶ್ರೀ

  ಎಂ.ಕೆ.ಹುಬ್ಬಳ್ಳಿ: ಅಂಬೇಡ್ಕರ್ ಅವರ ತತ್ವಗಳನ್ನು ಕೇವಲ ಕಾನೂನು ನ್ಯಾಯಾಂಗದ ಚೌಕಟ್ಟಿನಲ್ಲಿ ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ. ಆದರೆ ಹೃದಯಾಳದಲ್ಲಿ ಅವರ …

ಕ್ರಿ.ಪೂ. 200 ವರ್ಷಗಳ ಹಿಂದೆ…

  ಲಿಂಗಾಯತ ಕ್ರಾಂತಿ: ಕ್ರಿ.ಪೂ. 200 ವರ್ಷಗಳ ಹಿಂದೆ ಅಲೆಕ್ಸಾಂಡರ್ ದಿ ಗ್ರೇಟ್ ಗ್ರೀಕ್ ದೇಶದ ಚಕ್ರವರ್ತಿಯಾಗಿದ್ದ. ಆತ ತುಂಬಾ …

ಪ್ರಕೃತಿಯ ಆರಾಧಕಳು ಅಕ್ಕ

  ಲಿಂಗಾಯತ ಕ್ರಾಂತಿ: ಪ್ರಕೃತಿಯ ಆರಾಧನೆ ಎಂದರೆ ಸತ್ಯ ಮತ್ತು ಸೌಂದರ್ಯದ ಅನುಸಂಧಾನದ ಪ್ರಕ್ರಿಯೆ. ಪಂಚಭೂತಗಳಿಂದ ಆವೃತವಾದ ಈ ಪ್ರಕೃತಿಯು …

‘ಲಿಂಗಾಯತ’ ಚಳವಳಿಗೆ ಕಿಚ್ಚು ಹಚ್ಚಿದವರೇ ಲಿಂಗಾನಂದ ಶ್ರೀ!

  ಲಿಂಗಾಯತ ಕ್ರಾಂತಿ:  ಆ ದುರ್ದಿನಗಳಲ್ಲಿ ಬಸವಾದಿ ಶರಣರನ್ನು ಹಳ್ಳಿ ಹಳ್ಳಿಗೂ ತಲುಪಿಸಿ, ಸಾಮಾನ್ಯರಲ್ಲಿ ‘ಲಿಂಗಾಯತ’ದ ಅರಿವು ಮೂಡಿಸಿದ್ದು ಲಿಂಗಾನಂದ …

ನಿಜಗುಣಪ್ರಭು ತೋಂಟದಾರ್ಯ ಶ್ರೀಗಳಿಗೆ ಇಂದು ಪ್ರಶಸ್ತಿ ಪ್ರದಾನ

  ಚನ್ನಮ್ಮನ ಕಿತ್ತೂರು: ಮೂರು ದಶಕಗಳಿಂದ ನಾನಾ ದೇಶಗಳನ್ನು ಸುತ್ತಿ ಬಸವ ತತ್ವಗಳನ್ನು ಬಿತ್ತುತ್ತಿರುವ ನಿಷ್ಕಲ ಮಂಟಪದ ಪೂಜ್ಯ ಶ್ರೀ …

ವಿಧಾನಸೌಧದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಸಿಎಂ ಸಿದ್ದತೆ

  ಬೆಂಗಳೂರು: ಲಿಂಗಾಯತ ಧರ್ಮೀಯರ ಬಹುದಿನಗಳ ಬೇಡಿಕೆಗೆ ಈಗ ಕಾಲ ಕೂಡಿಬಂದಿದೆ. ಹೌದು.! ವಿಧಾನಸೌಧದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ …

ಬ್ರಾಹ್ಮಣ್ಯ ಕೇವಲ 15% ರಷ್ಟಿರುವ ಸವರ್ಣೀಯರಲ್ಲಷ್ಟೇ ಆಚರಿಸಲ್ಪಡುತ್ತದೆಯೇ..?

ಬ್ರಾಹ್ಮಣ್ಯದ ಬಗ್ಗೆ ಇತ್ತೀಚೆಗೆ ಎಲ್ಲೆಡೆ ಬಹಳ ಚರ್ಚೆ ಆಗುತ್ತಿದೆ. ಹಾಗಾಗಿ ನನ್ನ ಸೀಮಿತ ಅರಿವಿನ ಪರಿಧಿಯಲ್ಲಿ ನನ್ನ ಅಭಿಪ್ರಾಯ ಹಂಚಿಕೊಳ್ಳಲು …

ಲಿಂಗಾಯತರಿಗೆ ಬೇಕಿರುವುದು ಬೆಲ್ಲದ್ ಅಲ್ಲ; ಎಂ.ಬಿ.ಪಾಟೀಲರಂತಹ ಸಕ್ಕರೆ!

  ಹೌದು. ಲಿಂಗಾಯತರ ಮೇಲೆ ಯಾರನ್ನೋ ತಂದು ಹೇರಬೇಡಿ. ಪರ್ಯಾಯ ನಾಯಕನನ್ನು ಹುಡುಕುವ ಮತ್ತು ಅವರ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ …

ರವಿಯೊಳಡಗಿದ ಪ್ರತಿಬಿಂಬದಂತೆ

  ಲಿಂಗಾಯತ ಕ್ರಾಂತಿ: 12 ನೇ ಶತಮಾನದ ಶರಣೆಯರಲ್ಲಿ ಆಧ್ಯಾತ್ಮಿಕ ಪಥವನ್ನು ಮುಟ್ಟಿದ ವಿಶಿಷ್ಟ ಶರಣೆ ಮುಕ್ತಾಯಕ್ಕ. ಶರಣೆ ಎನ್ನುವ …

Leave a Reply

Your email address will not be published. Required fields are marked *