Breaking News
Home / featured / ರಾಷ್ಟ್ರೀಯ ಬಸವ ಸೈನ್ಯ – 20 ವರ್ಷಗಳ ಸಾರ್ಥಕ ಸೇವೆ

ರಾಷ್ಟ್ರೀಯ ಬಸವ ಸೈನ್ಯ – 20 ವರ್ಷಗಳ ಸಾರ್ಥಕ ಸೇವೆ

ಲಿಂಗಾಯತ ಕ್ರಾಂತಿ ವಿಶೇಷ: ಲಿಂಗಾಯತ ಧರ್ಮದ ಹೋರಾಟಗಾರ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಯುವ ನಾಯಕ ಶರಣ ಶಂಕರಗೌಡ ಬಿರಾದಾರ 2001 ರಲ್ಲಿ ಹತ್ತಾರು ಯುವಕರೊಂದಿಗೆ ಲಿಂಗಾಯತ ಧರ್ಮ, ವಚನ ಸಾಹಿತ್ಯ, ಬಸವತತ್ವ ಪ್ರಸಾರ ಹಾಗೂ ಸಾಮಾಜಿಕ ಸೇವಾ ಕಾರ್ಯನಿರ್ವಹಿಸಬೇಕೆಂದು ರಾಷ್ಟ್ರೀಯ ಬಸವಸೇನೆಯನ್ನು ಸ್ಥಾಪಿಸಿದರು. 20 ವರ್ಷಗಳ ಹಿಂದೆ ಸ್ಥಾಪಿಸಿದ ಸಂಘಟನೆಯು ಇಂದು ಹೆಮ್ಮರವಾಗಿ ಬೆಳೆದು ಬಹಳಷ್ಟು ಸಮಾಜಸೇವಾ ಕಾರ್ಯಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಸವತತ್ವ ಪ್ರಸಾರ ಮಾಡುತ್ತಿದೆ. ಈ ಸಂಘಟನೆಗೆ ಈಗ 20 ವರ್ಷ ತುಂಬಿರುವುದು ಸಂತಸದ ವಿಷಯವಾಗಿದೆ.

ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಮಹಾತ್ಮ ಅಪ್ಪ ಬಸವಣ್ಣನವರು ಜನಿಸಿದ ಬಸವನಬಾಗೇವಾಡಿ ಅಭಿವೃದ್ಧಿ ಕಾಣದೆ ಹಾಳು ಕೊಂಪೆಯಾಗಿತ್ತು 2001 ರಲ್ಲಿ ಬಸವನಬಾಗೇವಾಡಿಯ ಪಟ್ಟಣದ ಯುವಕರು ಎಲ್ಲರೂ ಸೇರಿ ರಾಷ್ಟ್ರೀಯ ಬಸವ ಸೈನ್ಯ ಎಂಬ ಸಂಘಟನೆಯನ್ನು ಲಿಂಗೈಕ್ಯ ಅಪ್ಪು ಜಾಲಗೇರಿ ಶಂಕರಗೌಡ ಎಸ್ ಬಿರಾದಾರ ಅವರು ಸ್ಥಾಪಿಸಿದರು.

ವಿಜಯಪುರದ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿ ಅವರ ಅಮೃತಹಸ್ತದಿಂದ ಉದ್ಘಾಟನೆಗೊಂಡ ರಾಷ್ಟ್ರೀಯ ಬಸವಸೈನ್ಯ ಸಂಘಟನೆಯು ಈ ಇಂದು ನಾಡಿನಾದ್ಯಂತ ಬಸವ ಧರ್ಮ, ಬಸವ ತತ್ವ ಏಳಿಗೆಗೆ ಶ್ರಮಿಸುವ ಸಂಘಟನೆಯಾಗಿ ಹೊರಹೊಮ್ಮಿದೆ.

ಸಂಘಟನೆಯ ಉದ್ದೇಶ: ಯುವಕರಲ್ಲಿ ರಾಷ್ಟ್ರೀಯತೆ ಬೆಳೆಸುವುದರ ಮೂಲಕ ಬಸವ ಧರ್ಮದ ಏಳಿಗೆ ವಚನ ಸಾಹಿತ್ಯದ ಅರಿವು ಮೂಡಿಸುವುದು ಸಮಾಜದಲ್ಲಿ ಆಗುವ ಅನ್ಯಾಯದ ವಿರುದ್ಧ ಹೋರಾಡುವುದು ಸಂಘಟನೆಯ ಮುಖ್ಯ ಉದ್ದೇಶಗಳಾಗಿವೆ.

ಹೋರಾಟಗಳು: ಸಂಘಟನೆಯು ಅಂದು ಬಸವ ಜನ್ಮಸ್ಥಳ ಅಭಿವೃದ್ಧಿ ಪ್ರಾಧಿಕಾರ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಅನೇಕ ಹೋರಾಟಗಳನ್ನು ರೂಪಿಸಿ, ನಾಡಿನ ಎಲ್ಲ ಸಂಘಟನೆಗಳ ಸಹಕಾರದೊಂದಿಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿ, ಅಂದಿನ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ಅವರು ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಲಿಂಗೈಕ್ಯ ಬಿ.ಎಸ್ ಪಾಟೀಲ್ (ಸಾಸನೂರ್) ಅವರು ಧರಣಿ ಸತ್ಯಾಗ್ರಹಕ್ಕೆ ಬಂದು ನಿಮ್ಮ ಬೇಡಿಕೆಗಳನ್ನು ನಾನು ಈಡೇರಿಸುತ್ತೇನೆ ಧರಣಿಯನ್ನು ಕೈಬಿಡಿ ಅಂದಾಗ ಶಂಕರಗೌಡ ಬಿರಾದಾರ್ ಅವರು ನೀವು ಲಿಖಿತವಾಗಿ ಬರೆದುಕೊಡಿ ಅಂದರೆ ನಮ್ಮ ಧರಣಿ ಸತ್ಯಾಗ್ರಹವನ್ನು ಮುಕ್ತಾಯಗೊಳಿಸುತ್ತೇವೆ ಎಂದು ಹೇಳಿದರು ಆಗ ಸಚಿವರು ನಾನು ಬಸವ ಭಕ್ತ ನಾನು ಕೂಡ ನಿಮ್ಮ ತಾಲ್ಲೂಕಿನವನು ಒಂದು ಅವಕಾಶ ಕೊಟ್ಟು ನೋಡಿ ಅಂದರು ಆಗ ಧರಣಿ ಸತ್ಯಾಗ್ರಹ ಹಿಂದಕ್ಕೆ ಪಡೆಯಲಾಯಿತು ಮುಂದೆ ಸಚಿವ ಸಂಪುಟದಲ್ಲಿ ಬಸವ ಜನ್ಮಸ್ಥಳ ಬಸವನ ಬಾಗೇವಾಡಿಯನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಯಲ್ಲಿ ಸೇರ್ಪಡೆ ಮಾಡಿ ಆದೇಶ ಹೊರಡಿಸಿದರು ನಂತರ ರಾಷ್ಟ್ರೀಯ ಬಸವ ಸೈನ್ಯದ ಕಾರ್ಯಕರ್ತರು ಹಾಗೂ ಸರಕಾರ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತರಾದ ಡಾ ಶಿವಾನಂದ ಜಾಮದಾರ್ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಕ ಮಾಡಿತು ಅಪ್ಪ ಬಸವಣ್ಣ ಹುಟ್ಟಿದ ಮನೆಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು ಅಲ್ಲಿ ಭವ್ಯವಾದ ಬಸವಜನ್ಮ ಸ್ಮಾರಕ ವನ್ನು ನಿರ್ಮಾಣ ಮಾಡಿತು ಜಾಮದಾರ ಅವರು ವಿಶೇಷ ಕಾಳಜಿ ವಹಿಸಿ ಮೂಲ ನಂದೀಶ್ವರ ದೇವಾಲಯ ವನ್ನು ನವೀಕರಣ ಮಾಡಿದರು ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನವನ್ನು ತಂದು ಇಂದು ಬಸವ ಜನ್ಮಸ್ಥಳ ಒಂದು ಪ್ರವಾಸಿ ತಾಣವಾಗಿ ಬೆಳೆಯಲು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ್ ಹಾಗೂ ಅವರು ಕಾರಣೀಭೂತರು.

9ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿಗಳಾದ ಡಿ.ವಿ ಸದಾನಂದ ಗೌಡ ಅವರಿಗೆ ಬಸವ ಜನ್ಮಸ್ಥಳ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ರಾಜ್ಯ ಸರಕಾರ ನೀಡುವ ಬಸವ ಪುರಸ್ಕಾರವನ್ನು ಹಾಗೂ ಬಸವ ಉತ್ಸವವನ್ನು ಬಸವನಬಾಗೇವಾಡಿಯಲ್ಲಿ ಆಚರಿಸಬೇಕೆಂದು ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ನೇತೃತ್ವದಲ್ಲಿ ಮನವಿ ಸಲ್ಲಿಸಿದ ನೆನಪು..

ಬಸವ ಸಾಧಕ ರಾಷ್ಟ್ರೀಯ ಪ್ರಶಸ್ತಿ: ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ವತಿಯಿಂದ ಪ್ರತಿ ವರ್ಷ ಸಂಘಟನೆಯ ವಾರ್ಷಿಕೋತ್ಸವದ ಪ್ರಯುಕ್ತ ಬಸವ ಮೇಳ ಹಾಗೂ ಬಸವ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಿ ಬಸವ ಧರ್ಮದ ಏಳ್ಗೆಗೆ ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ ಶರಣರನ್ನು ಗುರ್ತಿಸಿ ಬಸವ ಸಾಧಕ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಸವ ಜನ್ಮಸ್ಥಳದಲ್ಲಿ ಕೊಡುತ್ತಾ ಬಂದಿದ್ದಾರೆ ಈ ಪಟ್ಟಿಯಲ್ಲಿ ಲಿಂಗಣ್ಣ ಸತ್ಯಂಪೇಟ್ ದನ್ನೂರು ಗುರುಗಳು. ಶಿರಗುಪ್ಪಿ ಗುರುಗಳು ಹೀಗೆ ಹಲವಾರು ಶರಣರನ್ನು ಗುರುತಿಸಿ ಅವರಿಗೆ ಬಸವ ಸಾಧಕ ಪ್ರಶಸ್ತಿ ಕೊಡುವುದರ ಮೂಲಕ ಸಂಘಟನೆಯು ಅವರನ್ನು ಗೌರವಿಸಿದೆ.

ಸತತ ಬರಗಾಲದಿಂದ ತತ್ತರಿಸಿರುವ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ನೀರಾವರಿ ಯೋಜನೆಗಳಾದ ಮುಳವಾಡ ಚಿಮ್ಮಲಗಿ ಏತ ನೀರಾವರಿಗಳು ಆಗಬೇಕು ಎಂದು ಆಗ್ರಹಿಸಿ ಸಂಘಟನೆ ಅನೇಕ ಹೋರಾಟಗಳನ್ನು ಮಾಡಿದೆ ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ಜನ್ಮಸ್ಥಳ ಬಸವನ ಬಾಗೇವಾಡಿಯನ್ನು ಪ್ರತ್ಯೇಕಿಸಿ ಬಸವ ಜನ್ಮಸ್ಥಳ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಬೇಕೆಂದು ರಾಜ್ಯವನ್ನು ಆಳಿದ ಎಚ್ ಡಿ ಕುಮಾರಸ್ವಾಮಿ ಧರ್ಮಸಿಂಗ್ ಬಿ ಎಸ್ ಯಡಿಯೂರಪ್ಪ ಡಿ ವಿ ಸದಾನಂದಗೌಡ ಜಗದೀಶ್ ಶೆಟ್ಟರ್ ಸಿದ್ದರಾಮಯ್ಯ ಅವರಿಗೆ ಹಲವಾರು ಮನವಿ ಸಲ್ಲಿಸಲಾಗಿದೆ ಪ್ರತ್ಯೇಕ ಪ್ರಾಧಿಕಾರ ಆಗುವವರೆಗೂ ರಾಷ್ಟ್ರೀಯ ಬಸವಸೈನ್ಯ ನಿರಂತರ ಹೋರಾಟವನ್ನು ಮಾಡುತ್ತದೆ ರೈತರಿಗೆ ಅನ್ಯಾಯಗಳು ಆದರೆ ಸಂಘಟನೆ ನಿರಂತರ ಹೋರಾಡುತ್ತದೆ ಹನ್ನೆರಡನೆಯ ಶತಮಾನದ ಎಲ್ಲ ಶರಣರ ಜಯಂ ತ್ಯೋತ್ಸವ ಕಾರ್ಯಕ್ರಮಗಳನ್ನು ಸಂಘಟನೆ ಹಾಕಿಕೊಳ್ಳುತ್ತದೆ ದೇಶದಲ್ಲಿ ಬಸವ ಧರ್ಮಕ್ಕೆ ವಚನ ಸಾಹಿತ್ಯಕ್ಕೆ ಧಕ್ಕೆಯಾದಲ್ಲಿ ಅಂಥವರ ವಿರುದ್ಧ ಉಗ್ರ ಹೊರಟ ಮಾಡುತ್ತ ಸಂಘಟನೆ ಮುಂಚೂಣಿಯಲ್ಲಿದೆ.

ಪ್ರವಚನ ಆಯೋಜನೆ: ನಾಡಿನ ಹೆಸರಾಂತ ಪ್ರವಚನಕಾರರಾದ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮಿಗಳು ಬೀದರಿನ ಅಕ್ಕ ಅನ್ನಪೂರ್ಣ ತಾಯಿಯವರು ಅತ್ತಿವೇರಿಯ ಮಾತಾ ಬಸವೇಶ್ವರಿ ಸೊನ್ನದ ಶಿವಾನಂದ ಸ್ವಾಮಿಗಳು ಈಶ್ವರ ಮಂಟೂರ ಹಾಗೂ ನಾಡಿನ ವಿವಿಧ ಮಠಾಧೀಶರನ್ನು ಕರೆಸಿ ಬಸವ ಧರ್ಮದ ಕುರಿತು ಪ್ರವಚನ ಕಾರ್ಯಕ್ರಮಗಳನ್ನು ಏರ್ಪಡಿಸಿ ಯಶಸ್ವಿಯಾಗಿದ್ದಾರೆ.

ಅಂತರರಾಜ್ಯ ಘಟಕಗಳು: ರಾಷ್ಟ್ರೀಯ ಬಸವಸೈನ್ಯ ಸಂಘಟನೆಯು ನೆರೆಯ ಮಹಾರಾಷ್ಟ್ರದ ಪುಣೆ ಮುಂಬೈ ಸೋಲಾಪುರ ನಾಂದೇಡ್ ಕೊಲ್ಲಾಪುರ ಹಾಗೂ ಗೋವಾದ ಪಣಜಿ ಪೊಂಡಾ ವಾಸ್ಕೋ ಕಾಂದೊಲಿಯಮ ನಗರದಲ್ಲಿ ಇರುವ ಬಸವ ಭಕ್ತರನ್ನು ಸಂಘಟಿಸಿ ಅಲ್ಲಿ ಕೂಡ ತನ್ನ ಶಾಖೆಯನ್ನು ಪ್ರಾರಂಭಿಸಿ ಅಲ್ಲಿ ಬಸವ ಧರ್ಮದ ಪ್ರಚಾರ ಮಾಡುತ್ತಿದೆ.

ಸಂಘಟನೆಯು ಬಸವನಬಾಗೇವಾಡಿ ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿ ಗ್ರಾಮ ಘಟಕಗಳನ್ನು ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿದೆ.

 

 

 

 

9ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿಗಳಾದ ಡಿ.ವಿ ಸದಾನಂದ ಗೌಡ ಅವರಿಗೆ ಬಸವ ಜನ್ಮಸ್ಥಳ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ರಾಜ್ಯ ಸರಕಾರ ನೀಡುವ ಬಸವ ಪುರಸ್ಕಾರವನ್ನು ಹಾಗೂ ಬಸವ ಉತ್ಸವವನ್ನು  ಬಸವನಬಾಗೇವಾಡಿಯಲ್ಲಿ ಆಚರಿಸಬೇಕೆಂದು ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ನೇತೃತ್ವದಲ್ಲಿ ಮನವಿ ಸಲ್ಲಿಸಿದ ನೆನಪು

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಎಲ್ಲೆಡೆ ಮಾನವೀಯ ಮೌಲ್ಯಗಳು ಕುಸಿದಿರುವಾಗ ಶರಣರ ಈ ನಾಡಿನಲ್ಲಿ ಇನ್ನೂ ಮೌಲ್ಯಗಳು ಜೀವಂತವಾಗಿವೆ

  ವಿಜಯಪುರ: ಎಲ್ಲೆಡೆ ಮಾನವೀಯ ಮೌಲ್ಯಗಳು ಕುಸಿದಿರುವಾಗ ಶರಣರ ಈ ನಾಡಿನಲ್ಲಿ ಇನ್ನೂ ಮೌಲ್ಯಗಳು ಜೀವಂತವಾಗಿವೆ. ಅಧಿಕಾರ, ಹಣ ಮತ್ತು …

ಶರಣರ ಚಿಂತನೆಗಳ ಅನುಭವ ಮಂಟಪ ನಿರ್ಮಿಸಿ: ಬಸವರಾಜ ಧನ್ನೂರ

  ‘ಸನಾತನ ಚಿಂತನೆಗಳ ಮರು ಸೃಷ್ಟಿ’ ಶೀರ್ಷಿಕೆಗೆ ಆಕ್ಷೇಪ ಬೀದರ್: ನೂತನ ಅನುಭವ ಮಂಟಪ ಭೂಮಿ ಪೂಜೆ ಕಾರ್ಯಕ್ರಮ ಕುರಿತು …

ಶರಣರ ಪ್ರಗತಿಪರ ಚಿಂತನೆಗೆ ಧಕ್ಕೆ ಮಾಡದಿರಿ: ಬಸವರಾಜ ಹೊರಟ್ಟಿ

  ಹುಬ್ಬಳ್ಳಿ: ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಭೂಮಿಪೂಜೆ ಕಾರ್ಯಕ್ರಮದ ಕುರಿತು ಜ .6 ರಂದು ನೀಡಿದ ಜಾಹೀರಾತಿನಲ್ಲಿ ‘ಸನಾತನ …

ಸರಕಾರದ ವಿರುದ್ಧ ತೋಂಟದ ಸಿದ್ಧರಾಮ ಶ್ರೀಗಳ ಅಸಮಾಧಾನ

  ಲಿಂಗಾಯತ ಪ್ರಗತಿಪರ ಚಿಂತನೆಯ ಧರ್ಮವಾಗಿದೆ ಗದಗ : ಮಹಾಮಾನವತಾವಾದಿ ಪ್ರಗತಿಪರ ಚಿಂತಕ, ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದಲ್ಲಿ ನೂತನ …

ವೇದಕ್ಕೆ ಒರೆಯ ಕಟ್ಟುವೆ

ಭಾರತದ ಚರಿತ್ರೆಯಲ್ಲಿ ಶರಣ ಚಳುವಳಿಗೆ ಒಂದು ವಿಶಿಷ್ಟವಾದ ಸ್ಥಾನ ಸಿಗುತ್ತದೆ. ಬೌದ್ಧ ಧರ್ಮದ ನಂತರ ಭಾರತದಲ್ಲಿ ಮತ್ತೊಮ್ಮೆ ಸಮಾಜೋಧಾರ್ಮಿಕ ಕ್ರಾಂತಿ …

ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಿದ ತ್ಯಾಗವೀರ ಶಿರಸಂಗಿ ಲಿಂಗರಾಜರು

  ಲೇಖನ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತೋಂಟದಾರ್ಯ ಸಂಸ್ಥಾನ ಮಠ ಗದಗ ಬೆಳಗಾವಿ: ಕರ್ನಾಟಕವನ್ನು ಶೈಕ್ಷಣಿಕವಾಗಿ ಹಾಗು ಸಾಂಸ್ಕೃತಿಕವಾಗಿ …

ಸನಾತನ ಶಬ್ದಕ್ಕೆ ಗೊ.ರು.ಚನ್ನಬಸಪ್ಪ ವಿರೋಧ

  ಬಸವಕಲ್ಯಾಣ: ರಾಜ್ಯ ಸರ್ಕಾರ ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ನೂತನ ಅನುಭವ ಮಂಟಪ ನಿರ್ಮಾಣ’ …

ಸಮಗ್ರ ಚಿಂತನೆಯ ವಿಚಾರವಾದ ಮತ್ತು ಮುಲಾಜಿಗೆ ಬಸಿರಾಗುವ ಅರೆಬೆಂದ ವಿಚಾರವಾದ

ಕೆಲವು ಅಥವಾ ಹಲವು ಅರೆಬೆಂದ ವಿಚಾರವಾದಿಗಳು ಅನುಭವ ಮಂಟಪದ ನಿರ್ಮಾಣದ ಕುರಿತಾಗಿ ಆರ್ಥಿಕ ಸ್ಥಿತಿ ಮತ್ತು ಇತರೆ ಕಾರಣಗಳಿಂದ ೫೦೦ …

ಕಾಯಕದಲ್ಲೇ ದೇವರ ಕಂಡ ಕೇತಲಾದೇವಿ

  ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಸಮಕಾಲೀನ ಶಿವಶರಣೆ ಕೇತಲದೇವಿಯು ಶರಣ ಕುಂಬಾರ ಗುಂಡಯ್ಯನವರ ಧರ್ಮಪತ್ನಿ. ಕುಂಬಾರ ಗುಂಡಯ್ಯ ಮತ್ತು …

ಅನುಭವಮಂಟಪ ನಡೆದು ಬಂದ ದಾರಿ

ಬೀದರ್: ವಿಶ್ವರು ಬಸವಣ್ಣನವರು 12ನೇ ಶತಮಾನದಲ್ಲಿ ಜಗತ್ತಿನ ಮುಟ್ಟು ಮೊದಲು ಪ್ರಜಾಪ್ರಭುತ್ವದ ಮಾದರಿಯ ಅನುಭವ ಮಂಟಪವನ್ನು ಸ್ಥಾಪಿಸಿದರು. ಅನುಭವ ಮಂಟಪದಲ್ಲಿ …

ಲಿಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ್ ನಿಧನ

  ಬೆಳಗಾವಿ: ಬೆಳಗಾವಿ ಲಿಂಗಾಯತ ಸಂಘಟನೆಯ ಸಕ್ರಿಯ ಕಾರ್ಯಕರ್ತ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ರಾಜು …

2021ರ ಲಿಂಗಾಯತ ದಿನದರ್ಶಿಕೆ ಬಿಡುಗಡೆ ಹಾಗೂ ಶರಣ ಮೇಳದಲ್ಲಿ ಪಾಲ್ಗೊಳ್ಳಲು ಮನವಿ

ಗಜೇಂದ್ರಗಡ: ನಂಬಿಕೆಗೆ ಅರ್ಹವಲ್ಲದ ಪಂಚಾಂಗ, ಜ್ಯೋತಿಷ್ಯಕ್ಕೆ ಜೋತುಬಿದ್ದು, ಮೌಢ್ಯತೆಗೆ ಒಳಗಾಗಿ ನಮ್ಮ ಬದುಕನ್ನು ಕೆಡಿಸಿಕೊಳ್ಳುವುದರ ಬದಲಾಗಿ ಧರ್ಮಗುರು ಬಸವಣ್ಣ ಹಾಗೂ …

ಲಿಂಗಾಯತ– ವೀರಶೈವರ ‘ಒಬಿಸಿ ಬೇಡಿಕೆ’ ಮತ್ತು ಒಗ್ಗಟ್ಟಿನ ಹೋರಾಟ… ಧರ್ಮ, ರಾಜಕಾರಣ, ಸಾಮಾಜಿಕ ನ್ಯಾಯ

  ಲೇಖನ: ಡಾ. ಶಿವಮೂರ್ತಿ ಮುರುಘಾ ಶರಣರು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ದಿನವನ್ನು ರಾಷ್ಟ್ರದಾದ್ಯಂತ ಕಳೆದ ತಿಂಗಳು …

ಪತ್ರಕರ್ತ ಶಿವರಂಜನ್ ಸತ್ಯಂಪೇಟೆಗೆ ಪಿಎಚ್.ಡಿ.ಪದವಿ

  ಕಲಬುರಗಿ : ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ. ಗುಲ್ಬರ್ಗ ವಿವಿ …

“ನಿಜ ಹೇಳದಿದ್ದರೂ ಪರವಾಗಿಲ್ಲ ಸುಳ್ಳು ಹೇಳಬೇಡಿ”

  ೧) ಬಸವ ಪರಂಪರೆ, ಶರಣ ಪರಂಪರೆ, ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ …

Leave a Reply

Your email address will not be published. Required fields are marked *

error: Content is protected !!