Home / featured / ಲಿಂಗಾಯತ ಹೋರಾಟಗಾರ, ಸಾಹಿತಿ ಶಿವಕುಮಾರ್ ಉಪ್ಪಿನ ಕಾಂಗ್ರೆಸ್ ಗೆ?

ಲಿಂಗಾಯತ ಹೋರಾಟಗಾರ, ಸಾಹಿತಿ ಶಿವಕುಮಾರ್ ಉಪ್ಪಿನ ಕಾಂಗ್ರೆಸ್ ಗೆ?

 

ಸಾಹಿತಿ ಶಿವಕುಮಾರ ಉಪ್ಪಿನ

ವಿಜಯಪುರ: ಲಿಂಗಾಯತ ಮಾನ್ಯತೆಯ ಹೋರಾಟದಲ್ಲಿ ಸಕ್ರಿಯವಾಗಿದ್ದ ಇಲ್ಲಿನ ಬರಹಗಾರ ಶಿವಕುಮಾರ್ ಉಪ್ಪಿನ ಶೀಘ್ರದಲ್ಲೇ ಕಾಂಗ್ರೆಸ್ ಸೇರುವುದು ಖಚಿತವಾಗಿದೆ.

ಜಿಲ್ಲೆಯ ಪ್ರಭಾವಿ ಮುಖಂಡ ಎಂ.ಬಿ.ಪಾಟೀಲರ ಜೊತೆ ನಿಕಟ ಸಂಪರ್ಕ ಹೊಂದಿರುವ, ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರು ಮೊನ್ನೆ ಬೆಂಗಳೂರಿನ ಅವರ ಮನೆಯಲ್ಲಿ ಪಾಟೀಲರನ್ನು ಭೇಟಿಯಾಗಿ ಸಕ್ರಿಯ ರಾಜಕಾರಣಕ್ಕೆ ಸೇರುವ ಕುರಿತು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ. ಬಹುತೇಕ ಪಾಟೀಲರಿಂದ ಹಸಿರು ನಿಶಾನೆ ಸಿಕ್ಕಿದ್ದು, ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲಲು ಶಿವಕುಮಾರ್ ನಿರ್ಧರಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದಿದೆ. ಒಂದೆರಡು ವರ್ಷಗಳ ಹಿಂದೆಯೇ ಇವರಿಗೆ ರಾಜಕೀಯ ಸೇರಲು ಒತ್ತಡವಿತ್ತು. ಇವರ ಜತೆ ಈಗ ಅನೇಕ ಸಮಾನ ಮನಸ್ಕ ಸ್ನೇಹಿತರು, ಬೇರೆ ಬೇರೆ ವರ್ಗದ ಜನರೂ ತೊಡಗುವುದರಿಂದ ಈ ಉಪ ಚುನಾವಣೆ ವಿಭಿನ್ನವಾಗಿ ರಂಗೇರಲಿದೆ.

ಹಿನ್ನೆಲೆ: ಶಿವಕುಮಾರರ ಅಜ್ಜ ರಂಗಕರ್ಮಿ ಗಂಗಾಧರಪ್ಪ ಉಪ್ಪಿನರದು ಮೊದಲಿಂದಲೂ ಈ ಭಾಗದಲ್ಲಿ ದೊಡ್ಡ ಹೆಸರಿದೆ. ಇವರ ತಂದೆ ಸಿದ್ಧರಾಮ ಉಪ್ಪಿನರು ಕೂಡ ಸಾಹಿತಿ. ತಾಲೂಕಿನಲ್ಲಿ ಇವರ ಮನೆತನ ಕಲೆ, ಸಾಹಿತ್ಯ, ಸಂಘಟನೆ, ಸಾಮಾಜಿಕ ಹಿನ್ನೆಲೆಯಿಂದ ಪರಿಚಿತವಾಗಿದೆ. ಶಿವಕುಮಾರ್ ಪತ್ರಕರ್ತರಾಗಿ ಹತ್ತಾರು ವರ್ಷಗಳ ಕಾಲ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ದುಡಿದಿದ್ದು, ತಮ್ಮ ನೇರ ಬರಹಗಳಿಂದ ಹೆಸರು ಪಡೆದಿದ್ದಾರೆ. ಪತ್ರಿಕೋದ್ಯಮವೂ ಸೇರಿ ರಾಜ್ಯದ ಎಲ್ಲ ರಂಗಗಳ ಪ್ರಮುಖರೊಂದಿಗೆ ಇವರ ಒಡನಾಟವಿದೆ. ಇವರ ಸೋದರ ಮಾವ ಈ ಹಿಂದೆ ಸಿಂದಗಿಯ ಶಾಸಕರಾಗಿದ್ದರು. ಇಷ್ಟೆಲ್ಲ ಹಿನ್ನೆಲೆ ಇರುವ ಇವರು ಈಗ ಕಾಂಗ್ರೆಸ್ ಸೇರುತ್ತಾರೆನ್ನುವುದು ಚರ್ಚೆಗೆ ಕಾರಣವಾಗಿದೆ. ಈ ಭಾಗದಲ್ಲಿ ಒಂದಿಷ್ಟಾದರೂ ಬದಲಾವಣೆಗೆ ಇದು ಪೂರಕವಾಗಬಹುದು. ಸಂಭಾವಿತರೂ ರಾಜಕೀಯಕ್ಕೆ ಬರುವುದು ಉತ್ತಮ ಬೆಳವಣಿಗೆ.

ಜಿಲ್ಲೆಯ ಜನಪರ ನಾಯಕರಾದ ಎಂ.ಬಿ.ಪಾಟೀಲ್ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಬಿಟ್ಟರೆ ಈ ಸಂದರ್ಭದಲ್ಲಿ ತಮಗೆ ಬೇರೆ ಆಯ್ಕೆ ಕಾಣಿಸುತ್ತಿಲ್ಲ ಎಂದು ಶಿವಕುಮಾರ್ ಉಪ್ಪಿನ ಪ್ರತಿಕ್ರಿಯಿಸಿದ್ದಾರೆ.

‘ರಾಜಕಾರಣ ಎಂದರೆ ಹೊಲಸು’ ಎಂದು ಎಲ್ಲರೂ ಮೂಗು ಮುರಿಯುತ್ತ ಕುಳಿತರೆ ಅದನ್ನು ಸುಧಾರಿಸುವವರು ಯಾರು? ಸಿಂದಗಿಯ ಅಭಿವೃದ್ಧಿ, ಸಹ್ಯ ವಾತಾವರಣದ ಕಾರಣ ಸಕ್ರಿಯ ರಾಜಕಾರಣ ಅನಿವಾರ್ಯ ಎನಿಸಿದೆ. ಸಾಮಾನ್ಯರೊಂದಿಗೆ ತೊಡಗಿ ನಾವೆಲ್ಲ ಸಮಾಜಕ್ಕೆ ಏನಾದರೂ ನೀಡುವುದರ ಜತೆಗೆ, ನಮ್ಮ ಭವಿಷ್ಯವನ್ನೂ ರೂಪಿಸಿಕೊಳ್ಳುವ ಕೆಲಸ ಮಾಡಬೇಕಿದೆ ಎಂದು ಉಪ್ಪಿನ್ ತಿಳಿಸಿದ್ದು, ಇಷ್ಟರಲ್ಲೇ ತಮ್ಮ ನಿರ್ಧಾರ ಹೇಳುತ್ತೇನೆ ಎಂದಿದ್ದಾರೆ.

About Shivanand

Admin : Lingayat Kranti Monthly news paper 8884000008 [email protected]

Check Also

ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಸಿ: ಡಾ. ಗಂಗಾಮಾತಾಜಿ ಕರೆ ವಿಶ್ವಗುರು ಬಸವೇಶ್ವರರು 12ನೇ ಶತಮಾನದಲ್ಲಿ ಸ್ಥಾಪಿಸಿರುವ ಜಗತ್ತಿನ ವಿನೂತನ, ವಿಶಿಷ್ಟ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಲೇಬೇಕು. 2021ರ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ಕೂಡಲಸಂಗಮದ ಬಸವಧರ್ಮ ಪೀಠದ ಡಾ.ಗಂಗಾ ಮಾತಾಜಿ ಕರೆ ನೀಡಿದರು. ರವಿವಾರ ಬೆಳಗಾವಿಯ ಗಾಂಧಿ ಭವನದಲ್ಲಿ ಜಿಲ್ಲಾ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಸಂಘಟನೆಗಳ ಆಶ್ರಯದಲ್ಲಿ ವಿಶ್ವದ ಮೊಟ್ಟ ಮೊದಲ ಮಹಿಳಾ ಜಗದ್ಗುರು ಕೂಡಲಸಂಗಮ ಬಸವಧರ್ಮ ಪೀಠದ ಲಿಂಗೈಕ್ಯ ಡಾ. ಮಾತೆ ಮಹಾದೇವಿ ಅವರ 2ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಿಮಿತ್ಯ ಲಿಂಗಾಯತ ಧರ್ಮ ಜನಗಣತಿ 2021ರ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ವೇದಿಕೆ ಮೇಲೆ ಆಸೀನರಾಗಿದ್ದ ಗಣ್ಯರು ವಿಶ್ವಗುರು ಬಸವೇಶ್ವರರು, ಲಿಂಗೈಕ್ಯ ಪರಮಪೂಜ್ಯ ಲಿಂಗಾನಂದ ಮಹಾಸ್ವಾಮೀಜಿ, ಡಾ.ಮಾತೆ ಮಹಾದೇವಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜಯಘೋಷ ಕೂಗಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ.ಮಾತೆ ಗಂಗಾ ಮಾತಾಜಿ ಅವರು ಪರಮಪೂಜ್ಯ ಡಾ.ಮಾತೆ ಮಹಾದೇವಿ ತಾಯಿಯವರ ಎರಡನೇ ಪುಣ್ಯಸ್ಮರಣೆ ದಿನ ನಾವೆಲ್ಲಾ ಸಂಕಲ್ಪ ಮಾಡಬೇಕಿದೆ. ಈ ಬಾರಿಯ ಜನಗಣತಿಯಲ್ಲಿ ಲಿಂಗಾಯತ ಧರ್ಮ ಎಂದು ಬರೆಸುವ ಸಂಕಲ್ಪ ಮಾಡೋಣ. ಜಾಗತಿಕವಾಗಿ ಲಿಂಗಾಯತ ಧರ್ಮಕ್ಕೆ ಸ್ಥಾನಮಾನ ಸಿಗುವವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು. ಬೆಂಗಳೂರು ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ಭಕ್ತಿ, ಶ್ರದ್ಧೆಯಿಂದ ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲದೇ ಬೇರೆ ಬೇರೆ ರಾಜ್ಯಗಳಿಂದಗಳು ಬಸವಾಭಿಮಾನಿಗಳು ಆಗಮಿಸಿದ್ದಾರೆ. ಅದೇ ರೀತಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ಅದೇ ರೀತಿ 2021 ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಎಲ್ಲರೂ ಬರೆಸಬೇಕು. ಅದೇ ರೀತಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನದ ಮಾನ್ಯತೆ ದೊರೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ್, ಬೀದರ ಬಸವ ಮಂಟಪದ ಪರಮಪೂಜ್ಯ ಸತ್ಯಾದೇವಿ ಮಾತಾಜಿ, ಬೆಳಗಾವಿ ವಿಶ್ವಗುರು ಬಸವಮಂಟಪದ ಸದ್ಗುರು ಪ್ರಭುಲಿಂಗ ಸ್ವಾಮೀಜಿ,ಬೆಳಗಾವಿ ರಾಷ್ಟ್ರೀಯ ಬಸವದಳದ ಹಿರಿಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ಮಠದ ಉತ್ತರಾಧಿಕಾರಿಯಾಗಿ ಮಹಿಳೆ: ಘೋಷಣೆ

  ರಾಮದುರ್ಗ: ಬಸವವಾದಿ ಶರಣರ ಸಮಾನತೆಯ ತತ್ವ ಅಳವಡಿಸಿ ಕೊಂಡಿರುವ ತಾವು ಕಲಬುರ್ಗಿ ಜಿಲ್ಲೆಯ ಅಳಂದ ತಾಲ್ಲೂಕಿನ ಖಜೂರಿ ಕೋರಣೇಶ್ವರಮಠದ …

ಅಕ್ಕನ ಧಾರ್ಮಿಕ ಸೇವೆ ಅನನ್ಯ

  ಬೀದರ : ಶರಣ ಲೋಕದ ಸರಳ ಚೇತನ ಸ್ವರೂಪಿ, ಕಲ್ಯಾಣ ನಾಡಿನ ಧೀಮಂತ ಹೆಮ್ಮೆಯ ಸುಪುತ್ರಿ, ಸಂಘಟನೆ, ಹೋರಾಟ,ಬರವಣಿಗೆ …

ರಾಷ್ಟ್ರೀಯ ಬಸವ ದಳ: ಪದಾಧಿಕಾರಿಗಳ ನೇಮಕ

  ಬೆಂಗಳೂರು: ರಾಷ್ಟ್ರೀಯ ಬಸವ ದಳದ ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ರಾಷ್ಟ್ರೀಯ ಬಸವ ದಳ …

ಮಾರ್ಚ್ 31 ರಂದು ಲಿಂಗಾಯತ ಧರ್ಮದ ವಿಜಯೋತ್ಸವ ಹಾಗೂ ಬಲಿದಾನ ದಿನ

  ಬೆಳಗಾವಿ: ಮಾರ್ಚ 19 ರಂದು ಆಯೋಜಿಸಲಾಗಿದ್ದ, ಡಾ.ನಾಗಮೋಹನ ದಾಸ ಅವರ ನೇತೃತ್ವದ ಉನ್ನತಾಧಿಕಾರ ಸಮಿತಿಯ ಸಪ್ತರ್ಷಿಗಳು 2018 ರಲ್ಲಿ …

ಮಠಾಧಿಶರಿಗೆ ಮೈಲುಗಲ್ಲಾದ ಪೂಜ್ಯ ಡಾ ಮಾತೆ ಮಹಾದೇವಿ”

  ಇಂದು ಪೂ.ಡಾ ಮಾತೆ ಮಹಾದೇವಿಯವರ ಜನನ ಹಾಗೂ ಲಿಂಗೈಕ್ಯ ಸ್ಮರಣೆಯ ಕಾರಣ, ಅವರ ಕಾರ್ಯ ಸ್ಮರಣೆ. ಶರಣರ ಅಭಿಪ್ರಾಯದಂತೆ …

ನಿತ್ಯ ಶಿವಯೋಗವೇ ಶಿವರಾತ್ರಿ

  ಶಿವ ಶಿವಾ, ಶಿವ ಶಿವಾ, ಶಿವ ಶಿವಾ ಎಂದೊಮ್ಮೆ ಶಿವನಾಗಿ ಶಿವನ ಪೂಜಿಸು ಮನವೆ. ಹರ ಹರಾ, ಹರ …

ಯುಗ ಪ್ರವರ್ತಕ ಬಸವಣ್ಣ

  ರಾಯಚೂರು: ಸಂಸ್ಕೃತಿ ಸಂಸ್ಕಾರಗಳ ಆಗರವಾಗಿರುವ ತಮ್ಮ ತಮ್ಮ ಧರ್ಮಗಳು ಶ್ರೇಷ್ಠ ಎನ್ನುವ ವಿತಂಡ ವಾದದಲ್ಲಿ ತೊಡಗಿರುವುದು ಅಚ್ಚರಿಯೇ ಸರಿ. …

ಲೇಖಕಿ ಡಾ.ಅನುಪಮಾ ಅವರಿಗೆ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿ ಪ್ರದಾನ

  ಅಣ್ಣಿಗೇರಿ: ವಿಚಾರಗಳು ಹಾಗೂ ಸಂಘಟನೆಗಳ ಭಾಗ ಆಗಿರುವ ಲೇಖಕಿ,ಹೋರಾಟಗಾರ್ತಿ ಎಚ್.ಎಸ್.ಅನುಪಮಾ ಅವರು ಈ ಸಮಾಜ ನನ್ನನ್ನು ಪ್ರಶಸ್ತಿಗಳ ಮೂಲಕ …

ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕರೆ ಭಾರತ ವಿಶ್ವಗುರು: ನಿಜಗುಣಾನಂದ ಸ್ವಾಮೀಜಿ ಅಭಿಮತ

ನೇಗಿನಹಾಳ: ಲಿಂಗಾಯತ ಧರ್ಮಕ್ಕೆ  ಸಾಂವಿಧಾನಿಕ ಮಾನ್ಯತೆ ದೊರಕಿದ್ರೆ ಮಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ ಎಂದು ಬೈಲೂರು ನಿಷ್ಕಲ ಮಂಟಪದ …

ಭಾವೈಕ್ಯ ದಿನ ಆಚರಿಸಲು ಒತ್ತಾಯ

  ಗದಗ ತೋಂಟದಾರ್ಯ ಮಠದಲ್ಲಿ ಭಾನುವಾರ ನಡೆದ ಲಿಂ.ಡಾ. ತೋಂಟದ ಸಿದ್ಧಲಿಂಗ ಶ್ರೀ ಜಯಂತಿಯಲ್ಲಿ ಲಿಂ. ಡಾ.ತೋಂಟದ ಸಿದ್ಧಲಿಂಗ ಶ್ರೀ …

ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳ ಪದಗ್ರಹಣ

  ಬೆಳಗಾವಿ: ಇಲ್ಲಿನ ಬಾಳೆಕುಂದ್ರಿ ಸಭಾಭವನ (SGBIT) (ನಾಗನೂರು ಮಠ)ದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲಾ …

ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ನೀಡಿದವರು ವಿಶ್ವಗುರು ಬಸವಣ್ಣ: ಹಮೀದಾಬೇಗಂ ದೇಸಾಯಿ

    ಬೆಳಗಾವಿ: ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರು ಕೇವಲ ಆಧ್ಯಾತ್ಮಿಕ ಸಾಧನೆ ಮಾತ್ರವಲ್ಲದೆ ಸಾಮಾಜಿಕ ಸುಧಾರಣೆಗೂ ಕೂಡ ಶ್ರಮವಹಿಸಿ, …

ಬಸವ ಭಕ್ತಿಯ ಬೀಜಕ್ಕೆ ಅಲ್ಲಮನೆಂಬ ಮಹಾವೃಕ್ಷ

  ರಾಯಚೂರು: ವಚನ ಸಾಹಿತ್ಯದ ಚರಿತ್ರೆಯಲ್ಲಿ ಕನ್ನಡ ಭಾಷೆ ಕಂಡ ಅತ್ಯಂತ ವಿಶಿಷ್ಟ ಅನುಭಾವಿ ವೈರಾಗ್ಯ ನಿಧಿ ಕವಿ ಅಲ್ಲಮನಾಗಿದ್ದಾನೆ. …

ತರಳಬಾಳು ಹುಣ್ಣಿಮೆ ಮಹೋತ್ಸವ ಅಂತರ್ಜಾಲದಲ್ಲಿ ಆಚರಿಸಲು ತರಳಬಾಳು ಶ್ರೀ ಜಗದ್ಗುರುಗಳವರ ಸಂಕಲ್ಪ

  ಕೊರೊನಾ ಸಂಕಷ್ಟದ ಕಾರಣದಿಂದ ಕೊಟ್ಟೂರು ತರಳಬಾಳು ಹುಣ್ಣಿಮೆ ಮಹೋತ್ಸವ ಮುಂದೂಡಿಕೆ ಲಕ್ಷಾಂತರ ಭಕ್ತಾದಿಗಳ ಜಮಾವಣೆಯಲ್ಲಿ ವೈಭವದಿಂದ ನಾಡಿನ ಒಳ …

Leave a Reply

Your email address will not be published. Required fields are marked *