Home / featured / ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಸಿ: ಡಾ. ಗಂಗಾಮಾತಾಜಿ ಕರೆ ವಿಶ್ವಗುರು ಬಸವೇಶ್ವರರು 12ನೇ ಶತಮಾನದಲ್ಲಿ ಸ್ಥಾಪಿಸಿರುವ ಜಗತ್ತಿನ ವಿನೂತನ, ವಿಶಿಷ್ಟ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಲೇಬೇಕು. 2021ರ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ಕೂಡಲಸಂಗಮದ ಬಸವಧರ್ಮ ಪೀಠದ ಡಾ.ಗಂಗಾ ಮಾತಾಜಿ ಕರೆ ನೀಡಿದರು. ರವಿವಾರ ಬೆಳಗಾವಿಯ ಗಾಂಧಿ ಭವನದಲ್ಲಿ ಜಿಲ್ಲಾ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಸಂಘಟನೆಗಳ ಆಶ್ರಯದಲ್ಲಿ ವಿಶ್ವದ ಮೊಟ್ಟ ಮೊದಲ ಮಹಿಳಾ ಜಗದ್ಗುರು ಕೂಡಲಸಂಗಮ ಬಸವಧರ್ಮ ಪೀಠದ ಲಿಂಗೈಕ್ಯ ಡಾ. ಮಾತೆ ಮಹಾದೇವಿ ಅವರ 2ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಿಮಿತ್ಯ ಲಿಂಗಾಯತ ಧರ್ಮ ಜನಗಣತಿ 2021ರ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ವೇದಿಕೆ ಮೇಲೆ ಆಸೀನರಾಗಿದ್ದ ಗಣ್ಯರು ವಿಶ್ವಗುರು ಬಸವೇಶ್ವರರು, ಲಿಂಗೈಕ್ಯ ಪರಮಪೂಜ್ಯ ಲಿಂಗಾನಂದ ಮಹಾಸ್ವಾಮೀಜಿ, ಡಾ.ಮಾತೆ ಮಹಾದೇವಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜಯಘೋಷ ಕೂಗಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ.ಮಾತೆ ಗಂಗಾ ಮಾತಾಜಿ ಅವರು ಪರಮಪೂಜ್ಯ ಡಾ.ಮಾತೆ ಮಹಾದೇವಿ ತಾಯಿಯವರ ಎರಡನೇ ಪುಣ್ಯಸ್ಮರಣೆ ದಿನ ನಾವೆಲ್ಲಾ ಸಂಕಲ್ಪ ಮಾಡಬೇಕಿದೆ. ಈ ಬಾರಿಯ ಜನಗಣತಿಯಲ್ಲಿ ಲಿಂಗಾಯತ ಧರ್ಮ ಎಂದು ಬರೆಸುವ ಸಂಕಲ್ಪ ಮಾಡೋಣ. ಜಾಗತಿಕವಾಗಿ ಲಿಂಗಾಯತ ಧರ್ಮಕ್ಕೆ ಸ್ಥಾನಮಾನ ಸಿಗುವವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು. ಬೆಂಗಳೂರು ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ಭಕ್ತಿ, ಶ್ರದ್ಧೆಯಿಂದ ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲದೇ ಬೇರೆ ಬೇರೆ ರಾಜ್ಯಗಳಿಂದಗಳು ಬಸವಾಭಿಮಾನಿಗಳು ಆಗಮಿಸಿದ್ದಾರೆ. ಅದೇ ರೀತಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ಅದೇ ರೀತಿ 2021 ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಎಲ್ಲರೂ ಬರೆಸಬೇಕು. ಅದೇ ರೀತಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನದ ಮಾನ್ಯತೆ ದೊರೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ್, ಬೀದರ ಬಸವ ಮಂಟಪದ ಪರಮಪೂಜ್ಯ ಸತ್ಯಾದೇವಿ ಮಾತಾಜಿ, ಬೆಳಗಾವಿ ವಿಶ್ವಗುರು ಬಸವಮಂಟಪದ ಸದ್ಗುರು ಪ್ರಭುಲಿಂಗ ಸ್ವಾಮೀಜಿ,ಬೆಳಗಾವಿ ರಾಷ್ಟ್ರೀಯ ಬಸವದಳದ ಹಿರಿಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಸಿ: ಡಾ. ಗಂಗಾಮಾತಾಜಿ ಕರೆ ವಿಶ್ವಗುರು ಬಸವೇಶ್ವರರು 12ನೇ ಶತಮಾನದಲ್ಲಿ ಸ್ಥಾಪಿಸಿರುವ ಜಗತ್ತಿನ ವಿನೂತನ, ವಿಶಿಷ್ಟ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಲೇಬೇಕು. 2021ರ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ಕೂಡಲಸಂಗಮದ ಬಸವಧರ್ಮ ಪೀಠದ ಡಾ.ಗಂಗಾ ಮಾತಾಜಿ ಕರೆ ನೀಡಿದರು. ರವಿವಾರ ಬೆಳಗಾವಿಯ ಗಾಂಧಿ ಭವನದಲ್ಲಿ ಜಿಲ್ಲಾ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಸಂಘಟನೆಗಳ ಆಶ್ರಯದಲ್ಲಿ ವಿಶ್ವದ ಮೊಟ್ಟ ಮೊದಲ ಮಹಿಳಾ ಜಗದ್ಗುರು ಕೂಡಲಸಂಗಮ ಬಸವಧರ್ಮ ಪೀಠದ ಲಿಂಗೈಕ್ಯ ಡಾ. ಮಾತೆ ಮಹಾದೇವಿ ಅವರ 2ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಿಮಿತ್ಯ ಲಿಂಗಾಯತ ಧರ್ಮ ಜನಗಣತಿ 2021ರ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ವೇದಿಕೆ ಮೇಲೆ ಆಸೀನರಾಗಿದ್ದ ಗಣ್ಯರು ವಿಶ್ವಗುರು ಬಸವೇಶ್ವರರು, ಲಿಂಗೈಕ್ಯ ಪರಮಪೂಜ್ಯ ಲಿಂಗಾನಂದ ಮಹಾಸ್ವಾಮೀಜಿ, ಡಾ.ಮಾತೆ ಮಹಾದೇವಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜಯಘೋಷ ಕೂಗಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ.ಮಾತೆ ಗಂಗಾ ಮಾತಾಜಿ ಅವರು ಪರಮಪೂಜ್ಯ ಡಾ.ಮಾತೆ ಮಹಾದೇವಿ ತಾಯಿಯವರ ಎರಡನೇ ಪುಣ್ಯಸ್ಮರಣೆ ದಿನ ನಾವೆಲ್ಲಾ ಸಂಕಲ್ಪ ಮಾಡಬೇಕಿದೆ. ಈ ಬಾರಿಯ ಜನಗಣತಿಯಲ್ಲಿ ಲಿಂಗಾಯತ ಧರ್ಮ ಎಂದು ಬರೆಸುವ ಸಂಕಲ್ಪ ಮಾಡೋಣ. ಜಾಗತಿಕವಾಗಿ ಲಿಂಗಾಯತ ಧರ್ಮಕ್ಕೆ ಸ್ಥಾನಮಾನ ಸಿಗುವವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು. ಬೆಂಗಳೂರು ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ಭಕ್ತಿ, ಶ್ರದ್ಧೆಯಿಂದ ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲದೇ ಬೇರೆ ಬೇರೆ ರಾಜ್ಯಗಳಿಂದಗಳು ಬಸವಾಭಿಮಾನಿಗಳು ಆಗಮಿಸಿದ್ದಾರೆ. ಅದೇ ರೀತಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ಅದೇ ರೀತಿ 2021 ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಎಲ್ಲರೂ ಬರೆಸಬೇಕು. ಅದೇ ರೀತಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನದ ಮಾನ್ಯತೆ ದೊರೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ್, ಬೀದರ ಬಸವ ಮಂಟಪದ ಪರಮಪೂಜ್ಯ ಸತ್ಯಾದೇವಿ ಮಾತಾಜಿ, ಬೆಳಗಾವಿ ವಿಶ್ವಗುರು ಬಸವಮಂಟಪದ ಸದ್ಗುರು ಪ್ರಭುಲಿಂಗ ಸ್ವಾಮೀಜಿ,ಬೆಳಗಾವಿ ರಾಷ್ಟ್ರೀಯ ಬಸವದಳದ ಹಿರಿಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

About Shivanand

Admin : Lingayat Kranti Monthly news paper 8884000008 [email protected]

Check Also

ಕುಂದಾಪೂರದ ಶರಣೆ ಸುರು ಪೂಜಾರಿ ಲಿಂಗೈಕ್ಯ

ಕುಂದಾಪುರ ತಾಲೂಕಿನ ಬೈಂದೂರು ಗ್ರಾಮದ ಶರಣ ಸಂತೋಷ ಬಿಲ್ಲವ ಅವರ ತಾಯಿಯಾದ ಸೂರು ಪೂಜಾರಿ 87ವರ್ಷ ವಯಸ್ಸಾಗಿತು. ಅವರು ಇಂದು …

ಶರಣೆ ಜಯದೇವಿತಾಯಿ ಲಿಗಾಡೆ, ಗಡಿಕನ್ನಡದ ಉಳಿವು

ಸೊಲ್ಲಾಪುರ : ಕನ್ನಡ ಹೋರಾಟಗಳೆಂದರೆ‌ ಅರ್ದ ರಾತ್ರಿಯಾದರು ಸರಿಯೇ ದಂಡು ಸೇರಿಸಿ ಕನ್ನಡ ವಿರೋಧಿಗಳನ್ನ ಬಗ್ಗುಬಡಿಯುತ್ತಿದ್ದ ಗಡಿನಾಡ ಸಿಂಹಿಣಿ ಜಯದೇವಿತಾಯಿ …

ನೂಲಿಯ ಚೆಂದಯ್ಯ ಬಸವಣ್ಣನ ಪ್ರಭಾವಕ್ಕೆ ಒಳಗಾಗಿ ಲಿಂಗದೀಕ್ಷೆ ಪಡೆದಂತ ಶರಣ

  ಲಿಂಗಾಯತ ಕ್ರಾಂತಿ: ಚೆಂದಯ್ಯ ಒಬ್ಬ ಕೊರವರ ಜನಾಂಗದವನು, ನಾರನ್ನು ನೀರಿನಲ್ಲಿ ನೆನೆಯಿಟ್ಟು, ಒಣಗಿಸಿ ಅದರಿಂದ ಹಗ್ಗ, ಮಗಡ, ಮಿಡಿ, …

ನೇಗಿನಹಾಳ ಗ್ರಾಮಕ್ಕೆ ಜಿಲ್ಲಾಧಿಕಾರಿ ಎಮ್.ಜಿ ಹಿರೇಮಠ ದಿಢೀರ ಬೇಟಿ

ನೇಗಿನಹಾಳ : ಗ್ರಾಮದಲ್ಲಿ ಹೆಚ್ಚಿದ ಕೊರೊನಾ ಸೋಂಕು ಹಾಗೂ ಮೃತರ ಸಂಖ್ಯೆಯನ್ನು ಅರಿತು ಇಲ್ಲಿನ ವಾಸ್ಥವ ಸಮಸ್ಯೆಗಳನ್ನು ಪರಿವೀಕ್ಷಣೆ ಮಾಡಲು …

ಕೊರೊನಾ ವೈದ್ಯಕೀಯ ಸೇವೆಗಿಳಿದ ಬೈಲಹೊಂಗಲ ಮಾಜಿಶಾಸಕ, ಡಾ. ವಿಶ್ವನಾಥ ಆಯ್ ಪಾಟೀಲ

ಕ್ಷೇತ್ರದ ಜನತೆಗಾಗಿ ಸದಾ ಮನಮಿಡಿಯುವ ನಾಯಕ ಬೈಲಹೊಂಗಲ: ಒಬ್ಬ ಜನಸೇವಕ ಸಮಾಜಸೇವೆಗೆಂದು ನಿಂತರೆ ಅವರಲ್ಲಿ ಮಾನವೀಯತೆಯ ಗುಣಗಳು ಬೆಳೆಸಿಕೊಂಡು ಕ್ಷೇತ್ರದಲ್ಲಿ …

ವಚನಗಳಲ್ಲಿ ಹುಟ್ಟು-ಸಾವಿನ ಉಲ್ಲೇಖ

“ಹೆರದ ಮುನ್ನವೇ ಹುಟ್ಟಿ ಹೆತ್ತಲ್ಲಿಯೆ ಸತ್ತುದು ನೋಡಾ! ಅದು ಮಾಯದ ಕೃತಕದ ಗರ್ಭದ ನೆಳಲಿನ ಸುಳುಹು. ಆದಲ್ಲಿ ಆಯಿತ್ತು,ಹೋದಲ್ಲಿ ಹೊಯಿತ್ತು. …

ಶರಣಜೀವಿ ಎಚ್ ಎಸ್ ದೊರೆಸ್ವಾಮಿ ಲಿಂಗೈಕ್ಯ : ಬೈಲೂರು ನಿಜಗುಣಾನಂದಶ್ರೀ ಸಂತಾಪ

ಬೈಲೂರ(ಚನ್ನಮ್ಮನ ಕಿತ್ತೂರು): ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶರಣಜೀವಿ: ಎಚ್ ಎಸ್ ದೊರೆಸ್ವಾಮಿ ಲಿಂಗೈಕ್ಯರಾದ ಸುದ್ಧಿ ತಿಳಿದು ಮನಸ್ಸಿಗೆ ನೋವಾಯಿತು. ಎರಡ-ಮೂರು …

ನಾ ಯಾಕ ಬುದ್ಧನ ಓದಲಿಲ್ಲ.?

  ಲಿಂಗಾಯತ ಕ್ರಾಂತಿ: ಬುದ್ಧ ಅಕ್ಷರಗಳಲ್ಲಿ ಹುದಗಿದ್ದನಾ? ಇಲ್ಲ, ಇಲ್ಲೆ ನಮ್ಮ ಮನೆಗಳಲ್ಲಿ “ಶಾಂತ ಮೂರುತಿ”ಯಾಗಿ, ಹಳದಿ ಅರಬಿ ತೊಟಕೊಂಡು, …

ಶರಣರ ಮಹಿಳಾ ಸಬಲೀಕರಣ ಮತ್ತು ಧಾರ್ಮಿಕ ಸ್ವಾತಂತ್ರ್ಯ

ರಾಯಚೂರು: ಹನ್ನೆರಡನೇ ಶತಮಾನದ ಸ್ತ್ರೀ ವಾದವನ್ನು ಮಹಿಳಾವಾದ ವೆಂದು ಮಹಿಳಾ ಸಬಲೀಕರಣ ವೆಂದು ಚಚೆ೯ ಗೆ ತೆಗೆದುಕೊಳ್ಳುತ್ತೇವೆ. ಅಂದು ಪ್ರತಿಗಾಮಿ …

ಜಗತ್ತಿನ ಪ್ರಪ್ರಥಮ ಆಧ್ಯಾತ್ಮಿಕ ಚಿಂತಕ ಗೌತಮಬುದ್ಧ

  ಆಧ್ಯಾತ್ಮದ ದೃವತಾರೆ ಬೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧರ ಜಯಂತಿಯ ಹಾರ್ದಿಕ ಶುಭಾಶಯಗಳು ಬೀದರ: ಇಡೀ ವಿಶ್ವಕ್ಕೆ ಶಾಂತಿಯನ್ನು …

ಸ್ತ್ರೀ ವಾದಿ ಶರಣೆ ಸತ್ಯಕ್ಕ

  ಸತ್ಯಕ್ಕ ೧೨ ನೇಶತಮಾನದ ಶ್ರೇಷ್ಠ ನಿಷ್ಠುರ ಅಭಿವ್ಯಕ್ತಿಗೆ ಹೆಸರಾದ ಶರಣೆ.ವಚನ ಚಳುವಳಿಯ ಆಶಯವನ್ನು ನಿರ್ದಿಷ್ಟ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿ …

ಪ್ರವಚನ ಪಿತಾಮಹ ಲಿಂಗಾನಂದಪ್ಪಾಜಿಗಳು…

ಲಿಂಗಾಯತ ಕ್ರಾಂತಿ: ನಾನು ಹತ್ತನೇ ತರಗತಿ ಓದುವ ಸಮಯದಲ್ಲಿ ಹಲವು ಧರ್ಮಗಳ ಸಾರವ ಓದಿ ಮುಗಿಸಿ ಅವುಗಳ ನಿಲುವ ಅರಿತದ್ದೆ, …

ತಾಕತ್ ಇದೆಯಾ…?

  ಶರಣ: ಶರಣು ಶಿಣ್ಣೂರ್ ವಿಚಾರವಾದಿ ಸಾಹಿತಿಗಳು ಕಲಬುರಗಿ ಲಿಂಗಾಯತ ಧರ್ಮಗುರು ಬಸವಣ್ಣನವರ ಹಾಗೂ ಬಸವಾದಿ ಶರಣರ ವಿಚಾರಗಳನ್ನು ಮುಟ್ಟಬೇಕಾದರೆ …

ದೇವನಾಗಲೂಬಹುದು ಬಸವಣ್ಣನಾಗಲು ಬಾರದಯ್ಯ…!

  ಲಿಂಗಾಯತ ಕ್ರಾಂತಿ ವಿಶೇಷ : ಸ್ವರ್ಗ-ನರಕ, ಪಾಪ-ಪುಣ್ಯ, ಮಂತ್ರ-ತಂತ್ರ, ಜ್ಯೋತಿಷ್ಯ-ಪಂಚಾಂಗ, ನೇಮ-ನಿತ್ಯ, ದೇವ-ದಾನವ ಇತ್ಯಾದಿ ಕಂದಾಚಾರಗಳ ಆಧಾರದ ಮೇಲೆ …

ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ: ಜಯಂತಿ- ಏಪ್ರೀಲ್27

ಅಂಕಿತ: ಚೆನ್ನಮಲ್ಲಿಕಾರ್ಜುನ ಗೋಮುಖ ವ್ಯಾಘ್ರಂಗಳಂದದ ಕಾಮ ಮೊದಲಾದಖಿಳ ವಿಷಯ ಸ್ತೋಮವನು ಮುರಿದಿಕ್ಕಿ ಮುಂಬರಿದಂತರಂಗದಲಿ ಆ ಮಹಾ ಶಿವಲಿಂಗ ಸಂಗ ಪ್ರೇಮಿಯಾಗಿ …

Leave a Reply

Your email address will not be published. Required fields are marked *