Breaking News
Home / featured / ಅಕ್ಕನ ಧಾರ್ಮಿಕ ಸೇವೆ ಅನನ್ಯ

ಅಕ್ಕನ ಧಾರ್ಮಿಕ ಸೇವೆ ಅನನ್ಯ

 

ಅಕ್ಕ ಅಣ್ಣಪೂರ್ಣ ತಾಯಿಯವರು

ಬೀದರ : ಶರಣ ಲೋಕದ ಸರಳ ಚೇತನ ಸ್ವರೂಪಿ, ಕಲ್ಯಾಣ ನಾಡಿನ ಧೀಮಂತ ಹೆಮ್ಮೆಯ ಸುಪುತ್ರಿ, ಸಂಘಟನೆ, ಹೋರಾಟ,ಬರವಣಿಗೆ ಹಾಗೂ ಶರಣ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮಾಜದ ಹಾಗೂ ಬಸವ ತತ್ವ ಸೇವೆಯನ್ನು ಗೈಯುತ್ತ, ಕರುನಾಡಿನ ಪ್ರಸಿದ್ಧ ಪ್ರವಚನಕಾರರು ಎಂದೆ ಚಿರಪರಿಚಿತರಾದವರು ಅಕ್ಕ ಅನ್ನಪೂರ್ಣ ತಾಯಿ ಯವರು. ತತ್ವಜ್ಞಾನಿ, ಸಮಾ ಸಮಾಜದ ಕನಸು ಕಂಡ ಮಾಹಾಮಾನತವಾದಿ, ಸರ್ವರಿಗೂ ಲೇಸನ್ನೇ ಬಯಸಿದ ಮೇಧಾವಿ, ಸಮಾತವಾದದ ಸಹಕಾರ ಮೂರ್ತಿ, ಜಗತ್ತಿನ ಶ್ರೇಯಸ್ಸು ಬಯಸಿದ ವಿಶ್ವ ದಾರ್ಶನಿಕ, ಜನಸಾಮಾನ್ಯರ ಆರಾಧ್ಯ ಗುರು, ನೂಂದು – ಬೆಂದವರ ಕರುಣಾಮಯಿ ಅಣ್ಣ ಬಸವಣ್ಣನವರ ತತ್ವಗಳನ್ನು ಪ್ರವಚನದ ಮೂಲಕ ದೇಶ-ವಿದೇಶಗಳಲ್ಲಿ ಪಸರಿಸುತ್ತಿರುವ ಮಹಾನ್ ಮಾತೆಯರಲ್ಲಿ ಪೂಜ್ಯ ಶ್ರೀ ಅಕ್ಕ ಅನ್ನಪೂರ್ಣ ತಾಯಿ ಕೂಡ ಒಬ್ಬರು.
ಸಾಮಾನ್ಯ ಕುಟುಂಬದಿಂದ ಬಂದು ಇಷ್ಟೊಂದು ಅಪರೂಪದ ಅಪಾರವಾದ ಸಾಧನಾ ಸೇವೆ ಮಾಡುತ್ತಿರುವ ಅಕ್ಕನ ಶ್ರೇಯಸ್ಸು ಎಲ್ಲಾ ಕಡೆಗಳಿಂದಲೂ ಕೇಳಿಬರುತ್ತಿದೆ.ಇದು ಹೆಮ್ಮೆಯ ಪಡುವ ಸಂಗತಿಯಾಗಿದೆ.ಕರುನಾಡಿನ ಈ ಪುಣ್ಯಭೂಮಿಯಲ್ಲಿ ಜನಿಸುವ ಮೂಲಕ ಸರ್ವಾಂಗಿಣ ಅಭಿವೃದ್ಧಿಗಾಗಿ ಹಾಗೂ ಶರಣ ಸಾಹಿತ್ಯ ಲೋಕದ ಶ್ರೀಮಂತಿಕೆಗಾಗಿ ಹಗಲಿರಳು ದುಡಿಯುತ್ತಿರುವ ಹೃದಯ ಶ್ರೀಮಂತಿಕೆಯ ಸಾಕಾರ ಮೂರ್ತಿ ಅಕ್ಕ ಅನ್ನಪೂರ್ಣ ತಾಯಿ ಯವರು ಎಂದರೆ ತಪ್ಪಾಗಲಾರದು.
ಅಕ್ಕನವರ ಕೆಚ್ಚದೆಯ ಹೋರಾಟಕ್ಕೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲುವ ಮೂಲಕ ಅವರ ಸಾಧನಾ ಸಂದೇಶ ಜಗತ್ತಿನ ತುಂಬೆಲ್ಲಾ ಸಾರಬೇಕಾಗಿದೆ. ಅಲ್ಲದೇ ಅವರ ಮಾನವೀಯ ವೈಚಾರಿಕ ಮೌಲ್ಯಗಳ ವಿಚಾರಗಳು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ನಿರಂತರವಾಗಿ ಸಾಗಬೇಕಾಗಿದೆ.ಇಂತಹ ನಿಸ್ವಾರ್ಥ ಸೇವೆಯ ಸನ್ಮಾರ್ಗದಲ್ಲಿ ಸಾಗುತ್ತಿರುವ ಅಕ್ಕನ ಜೀವನ ಒಂದು ಯಶೋಗಾಥೆಯಂತೆ ನಮ್ಮ ಎದುರಿಗೆ ಕಾಣಿಸುತ್ತದೆ. ಹಾಗಾಗಿ ಅಕ್ಕ ಅನ್ನಪೂರ್ಣ ತಾಯಿ ಯವರ ಜೀವನದಲ್ಲಿ ಅನುಭವಿಸಿದ ಯಾತನೆ ಹೇಳತೀರದು. ಬಡತನದ ಮಧ್ಯೆ ಓದು,ಬಸವಾದಿ ಶರಣರ ಬಗೆ ಅಪಾರವಾದ ಅಭಿಮಾನ ಇಟ್ಟುಕೊಂಡು ಬೆಳೆದು ಬಂದ ಇವರು ಇಂದು ಸಮಾಜದ ಆಸ್ತಿಯಾಗಿದ್ದಾರೆ. ಇಲ್ಲಿಯವರೆಗೆ ಗುರುತಿಸಿಕೊಂಡದ್ದು ಇವರ ನಿಸ್ವಾರ್ಥ ಸೇವಾ ಸ್ವಭಾವ, ಸ್ವಾಭಿಮಾನದ ಪ್ರಯತ್ನ ಜೊತೆಗೆ ಅವರಿಗೆ ಯಾವ ಗಾಡಫಾದರ ಇಲ್ಲದೇ ಇಷ್ಟು ಎತ್ತರಕ್ಕೇ ಬೆಳೆದಿದ್ದು ಹೆಮ್ಮೆ ಪಡುವ ವಿಚಾರವಾಗಿದೆ.ಇದೆಲ್ಲವೂ ಬಸವಾದಿ ಪ್ರಮಥರ ಕರುಣೆಯಿಂದ ಮಾತ್ರ ಸಾಧ್ಯ ಎನ್ನುವುದಂತು ಸತ್ಯ ಶರಣ ಬಂಧುಗಳೆ.ಇಂತಹ ಮಾಹಾನ ತ್ಯಾಗ ಮೂರ್ತಿ ಅಕ್ಕ ಅನ್ನಪೂರ್ಣ ತಾಯಿ ಯವರ ಅಮೂಲ್ಯವಾದ ನಿಷ್ಕಳಂಕ ತ್ಯಾಗದ ಸೇವೆಯ ಸಾಧನೆ ಇಡೀ ದೇಶ ವಿದೇಶಗಳ ಜನತೆಗೆ ಮಾದರಿ ಹಾಗೂ ಪ್ರೇರಣೆಯಾಗಿದೆ. ಹೀಗಾಗಿ ಅವರು ಕೈಗೊಳ್ಳುತ್ತಿರುವ ಸಮಾಜಮುಖಿ ಬಸವ ತತ್ವ ಸೇವೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವಾ ಕಾರ್ಯಗಳನ್ನು ಇಲ್ಲಿ ಸ್ಮರಿಸುವ ಕೆಲಸ ಮಾಡಲಾಗಿದೆ.

ಜೀವನಶಿಕ್ಷಣಹವ್ಯಾಸಕಾಯಕ : – ಕರ್ನಾಟಕ ರಾಜ್ಯದ ಬೀದರ ನಗರದ ಹಾರೂರಗೇರಿ ಕಾಲೋನಿಯ ಶರಣ ಬಂಡೆಪ್ಪ ಹಂಗರಗಿ ಮತ್ತು ಶರಣೆ ಸೂಗಮ್ಮ ದಂಪತಿಗಳ ಮಗಳಾಗಿ ದಿನಾಂಕ
01 ಜೂನ್‌ 1963ರಂದು ಜನಿಸಿದರು.ಕನ್ನಡ ಸ್ನಾತಕ್ಕೋತ್ತರ ಪದವಿ, ಕಾನೂನು ಪದವೀಧರರಾಗಿದ್ದು.
ಓದು,ಬರಹ,ಸಂಗೀತ, ಸಮಾಜಮುಖಿ ಕೆಲಸದಲ್ಲಿ ಹೆಚ್ಚು ಆಸಕ್ತಿ ಇವರದಾಗಿದೆ. ಇನ್ನು
ಕನ್ನಡತ್ವ, ಬಸವ ತತ್ವದ ಏಳಿಗೆಗಾಗಿಯೇ ಸದಾ ದುಡಿಯುವ ಮನಸ್ಸು, ಸಾಹಿತ್ಯ, ಸಮಾಜೋಧಾರ್ಮಿಕ ಸೇವೆಗಳ ಮೂಲಕ ಜಾತಿ, ವರ್ಗ, ವರ್ಣ, ಲಿಂಗಭೇದಗಳಿಲ್ಲದ ಸಮಸಮಾಜ ಕಟ್ಟಲು ಅಹರ್ನಿಶಿಯಾಗಿ ಹಗಲಿರುಳು ದುಡಿಯುತ್ತಿದ್ದಾರೆ.

ಸಾಹಿತ್ಯ ಸೇವೆಸಾಹಿತ್ಯ ಕೃಷಿ :
ಸಾಹಿತ್ಯ ಕ್ಷೇತ್ರ ಅಂದರೆ ಅಕ್ಕನವರಿಗೆ ಬಹಳ ಅಚ್ಚುಮೆಚ್ಚು,ಸಾಹಿತ್ಯದ ವಿವಿಧ ಬಗೆಯ ಅನೇಕ ವಿಚಾರ – ವಿಷಯಗಳ ಮೇಲೆ ಉಪನ್ಯಾಸ ನೀಡಿದ್ದಾರೆ. ಮಹಿಳಾ ಕಾರ್ಯಕ್ರಮಗಳ ವಿಶೇಷ
ಗೋಷ್ಠಿಗಳಲ್ಲಿ ಉಪನ್ಯಾಸ ಸಹ ನೀಡಿರುವುದು ಇಲ್ಲಿ ಸ್ಮರಣೆ ಮಾಡಿಕೊಳ್ಳುವುದು ಅವಶ್ಯವಾಗಿದೆ.ಇನ್ನು ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ಅಲ್ಲದೇ ಇನ್ನಿತರ ಸಾಹಿತ್ಯ ಸೇವಾ ಸಂಸ್ಥೆಗಳ ಶ್ರೇಯಸ್ಸಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವುಗಳಲ್ಲದೆ ಸುಮಾರು ಹಲವು ಸೇವಾ ಸಂಸ್ಥೆಗಳ ಆಜೀವ ಸದಸ್ಯತ್ವ ಪಡೆದುಕೊಂಡಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಲೇಖನ ಬರೆಯುವುದರ ಮೂಲಕ ಸಾಹಿತ್ಯ ಸೇವೆಗೈಯುವ ಕೆಲಸವನ್ನು ನಿರಂತರವಾಗಿ ಮಾಡುತ್ತ ಬರುತ್ತಿದ್ದಾರೆ. ರಾಷ್ಟ್ರೀಯ, ರಾಜ್ಯ, ಜಿಲ್ಲಾ ತಾಲೂಕು, ಹೋಬಳಿ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ ವಿಶೇಷ ಉಪನ್ಯಾಸ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ.ಅಲ್ಲದೆ ಇವರಿಗೆ ಒಪ್ಪಿಸಿರುವ ಎಲ್ಲಾ ಕೆಲಸಗಳನ್ನು ಅತ್ಯಂತ ಭಕ್ತಿ – ಭಾವ ಶ್ರದ್ದೆಯಿಂದ ಮಾಡುವ ಮೂಲಕ ಜನಸಾಮಾನ್ಯರ ಹಾಗೂ ಸಾಹಿತಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಹೀಗಾಗಿ
ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಯ ಸಿಕ್ಕಾಗ ತಮ್ಮ ಬರವಣಿಗೆಯನ್ನು ಹೆಚ್ಚಿಸಿಕೊಳ್ಳುವ ಕಾರ್ಯ ನಿರಂತರವಾಗಿ ಮಾಡುತ್ತ ಬಂದಿದ್ದಾರೆ. ಇನ್ನು

ಅಕ್ಕನವರ ಪ್ರಕಟಿತ ಸಾಹಿತ್ಯ (ಪ್ರವಚನಗಳ)ಕೃತಿಗಳು ಹೀಗಿವೆ – ವಚನಕ್ಕೊಂದು ಕಥೆ, ಅನುಭವ ಮಂಟಪದಲ್ಲಿ ಸಿದ್ಧರಾಮ, ಸಂಸಾರದಲ್ಲಿ ಸದ್ಗತಿ, ಗುರು ಕರುಣೆ, ಅಕ್ಕನ ದರ್ಶನ, ಶ್ರಾವಣ ಸಂಪದ, ಜೀವನ ದರ್ಶನ, ನಿಷ್ಪತ್ತಿ, ಗುರುವಚನ ದೇವನೆಡೆಗೆ, ಶ್ರೀಗುರು ಬಸವೇಶ್ವರ ಪೂಜಾವ್ರತ, ವಚನ ಜೀವನ, ಸುಖ ಯಾವುದು ಬಸವಾಜ್ಞೆ, ಭಕ್ತ, ಇಷ್ಟಲಿಂಗ ಪೂಜೆ ವಿಧಾನ, ಬಸವಲಿಂಗ ಪ್ರಾರ್ಥನಾ ಹಾಗೂ ಭಕ್ತಿಗೀತೆಗಳು, ಮಹೇಶ ಸ್ಥಲ, ಬಸವ ಭಾವ, ಮಹಾಮಹಿಮ ಸಂಗನ ಬಸವಣ್ಣ (ನಾಟಕ). ಜೊತೆಗೆ ಇವರು

ಸಂಪಾದಿತ ಕೃತಿಗಳು ಹೀಗಿವೆ – ಲಿಂಗಾಯತ ಧರ್ಮ ಗ್ರಂಥ, ಗುರುವಚನ, ಪ್ರಾರ್ಥನಾ ಹಾಗೂ ಇಷ್ಟಲಿಂಗ ಪೂಜಾ ವಿಧಾನ, ಬಸವ ಸಂಪದ ಭಾಗ-1, ಬಸವ ಸಂಪದ ಭಾಗ-2, ಚೆನ್ನ ಸಂಪದ. ಅಕ್ಕನ ಸಂಪದ, ಪ್ರಭು ಸಂಪದ, ಮಾಚಿದೇವ ಸಂಪದ, ಸಿದ್ಧ ಸಂಪದ, ಶರಣ ಸಂಪದ, ಬಸವಲಿಂಗ ಪ್ರಾರ್ಥನಾ, ಶಿವರಣೆಯರ ಸಂಪದ, ಬಸವ ಸಂದೇಶ, ಅಂಬಿಗರ ಚೌಡಯ್ಯ ಸಂಪದ, ಜನಪದರು ಕಂಡ ಶರಣರು.
ಹಾಗೂ ಇವರ ಧ್ವನಿ ಸುರುಳಿಗಳು – ಮಂತ್ರಘೋಷ, ಬಸವಲಿಂಗ ಪ್ರಾರ್ಥನಾ, ಪಾಮಾಂ ಶರಣುಬಸವ, ಮಂತ್ರಾನುಸಂಧಾನ, ಬಸವ ಸುಪ್ರಭಾತ, ಹೀಗೆ ಹಲಾವಾರು ಕೃತಿಗಳನ್ನು ನೀಡಿದ್ದಲ್ಲದೆ ಬಸವ ಸೇವಾ ಪ್ರತಿಷ್ಠಾನದ ಮೂಲಕ ವಿವಿಧ ವಿದ್ವಾಂಸರ ಸುಮಾರು 50ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಅಕ್ಷರ ಪ್ರೀತಿ ಮೆರೆಯುತ್ತಲೆ ಪುಸ್ತಕ ಸಂಸ್ಕೃತಿ ಬೆಳೆಸುತ್ತಿದ್ದಾರೆ. ಹಲವಾರು ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ಸಮಾವೇಶಗಳ ರೂವಾರಿಗಳಾಗಿದ್ದಾರೆ. ಅಂತೆಯೇ ಬಸವಾದಿ ಶರಣರ ಆಶಯದಂತೆ ಸಮ ಸಮಾಜದ ಕನಸನ್ನು ಬಿತ್ತುವದು, ಮಕ್ಕಳಿಗೆ ಯುವಕರಿಗೆ ,ಮಹಿಳೆಯರಿಗೆ ಶಿವಶರಣ ಪ್ರೇರಣಾತ್ಮಕ ವಿಚಾರಗಳನ್ನು ತುಂಬಿ,ತಮ್ಮ ಬದುಕನ್ನು ತಾವೆ ಕಟ್ಟಿಕೊಳ್ಳುವಂತೆ ಪ್ರೇರೇಪಿಸುವದು.ಬದುಕನ್ನು ಕಟ್ಟುವಲ್ಲಿ,ಸಮಾಜದಲ್ಲಿ ನನ್ನ ಬದುಕು ಹೇಗಿರಬೇಕೆನ್ನಲು ಬಸವಾದಿ ಶರಣರ ವಚನಗಳ ಸಂದೇಶಗಳನ್ನು ತಿಳಿಸುವದು. ಹಳ್ಳಿಗಳನ್ನು ಪ್ರೀತಿ ಸುವದು,ಸ್ವಚ್ಛತೆ, ಸಮೃದ್ಧ ತೆ ಇರಬೇಕು ಎನ್ನುವ ನೀತಿಗಳು ಇವರ ಸಾಹಿತ್ಯ ಕೃಷಿಯಲ್ಲಿ ಕಾಣಬಹುದು. ಹೀಗೆ ವಿವಿಧ ಬಗೆಯ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಲೋಕಾರ್ಪಣೆ ಮಾಡಿದ್ದಾರೆ. ಈ ತನ್ಮೂಲಕ ಸಾಹಿತ್ಯ ಲೋಕಕ್ಕೆ ನಿಜವಾಗಿಯೂ ಸಲ್ಲಬೇಕಾದ ಗೌರವವನ್ನು ಸಲ್ಲಿಸುತ್ತಿದ್ದಾರೆ. ಹಾಗಾಗಿ ಅವರ ಸಾಹಿತ್ಯ ಅಮೂಲ್ಯ ಹಾಗೂ ಅಪಾರ – ಅದ್ಭುತವಾಗಿದೆ.

ಸಮಾಜಮುಖಿ ಸೇವೆ : ಈ ನಾಡಿನ ಪ್ರಖ್ಯಾತ ಬಸವತತ್ವ ಪ್ರಸಾರಕರಾದ ಪರಮ ಪೂಜ್ಯ ಶ್ರೀ ಅಕ್ಕನವರು ಅಪ್ಪಟ ಬಸವಾನುಯಾಯಿಗಳು, ಸಮಾಜ ಸೇವೆಯೇ- ಬಸವ ಸೇವೆ ಎಂದು ಬಾಳಿಬದುಕುತ್ತಿರುವವರು, ಬಸವತತ್ವ, ಶರಣ ತತ್ವ ಮತ್ತು ವಚನ ಸಾಹಿತ್ಯವನ್ನು ತಮ್ಮ ಉಸಿರಾಗಿಸಿಕೊಂಡವರು. ಬಸವ ತತ್ವದ ಕಾರ್ಯಕ್ರಮಗಳ ಮೂಲಕ ಬಡವರ, ಅನಾಥ ಮಕ್ಕಳ ಸಂರಕ್ಷಣೆಯ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.ಅಲ್ಲದೆ ಶಿಕ್ಷಣದ ಅಭಿವೃದ್ಧಿಯ ಜೊತೆಗೆ ಅವರ ಉನ್ನತಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ ಎನ್ನುವುದು ಇಲ್ಲಿ ಹೇಳಲೇಬೇಕಾಗಿದೆ. ಎಲ್ಲರೊಂದಿಗೆ ಆತ್ಮೀಯತೆಯ ಅಕ್ಕರೆಯ ಮಾತುಗಳ ಮೂಲಕ ಜನಸಾಮಾನ್ಯರ ಒಲವು ಮತ್ತು ಸ್ನೇಹವನ್ನು ಅಕ್ಕ ಸಂಪಾದಿಸಿದ್ದಾರೆ. ಸಮಾಜದ ಕೆಳಸ್ತರದಲ್ಲಿ ಬದುಕುವ ಜನರ ಅಭಿವೃದ್ಧಿಗಾಗಿ ಸದಾ ಚಿಂತನೆ ಮತ್ತು ಅವರ ಶ್ರೇಯೋಭಿವೃದ್ಧಿಗಾಗಿ ಹಂಬಲಿಸುವ ಮನ ಇವರದು.ವಿನೂತನ ಹೊಸ ವಿಶೇಷ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ನೊಂದವರ ಶ್ರೇಯಸ್ಸುಗಾಗಿ ಮುನ್ನುಗ್ಗಿ ಕೆಲಸ ಮಾಡುತ್ತಿರುವುದು ಮತ್ತೊಂದು ವಿಶೇಷ. ಇನ್ನು ವಿಶೇಷವಾಗಿ ಬಸವ ತತ್ವದ ಬಗ್ಗೆ ಅಪಾರವಾದ ಅಭಿಮಾನ, ಹೀಗಾಗಿ ಬಸವ ತತ್ವವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ. (ಬಸವ ತತ್ವವನ್ನು ಜನರ ಮನಸ್ಸುಗಳಿಗೆ ಮುಟ್ಟಿಸುವ ಕೆಲಸ )ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ನೀತಿಯ ಅಡಿಯಲ್ಲಿ ಅನೇಕ ಸಮಾಜದ ಸುಧಾರಣೆಗಾಗಿ ಜನ ಜಾಗೃತಿ ಕಾರ್ಯಕ್ರಮಗಳು ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೇ, ಸೇವೆಯೇ ಶ್ರೇಷ್ಠ ಜೀವನವೆಂದು ತಿಳಿಯುವ ಮನೊಭಾವನೇಯ ಮೆಧಾವಿ ಈ ಅಕ್ಕ. ಹಾಗಾಗಿ ಕಿಂಕರ ಶಕ್ತಿಯ ಯಶಸ್ವಿ ದಿಕ್ಕಿನಲ್ಲಿ ದಾಪುಗಾಲು ಹಾಕುತ್ತ ಬಡವರ ಕಣ್ಣೀರಿನ ಹನಿಗಳನ್ನು ಒರೆಸುತ್ತ ಬಡವರ ಪಾಲಿನ ಆಶಾಕಿರಣ ಮೂರ್ತಿಯಾಗಿ ಈ ಕಲ್ಯಾಣ ನಾಡಿನಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಾ, ಮಿನುಗುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಸಂಘಟನೆ: ಬಸವ ಸೇವಾ ಪ್ರತಿಷ್ಠಾನ ಹಾಗೂ ಲಿಂಗಾಯತ ಮಾಹಾಮಠ ಟ್ರಸ್ಟ್ ಮೂಲಕ ಸಂಘಟನೆಗೆ ಒತ್ತು ಕೊಟ್ಟು ಸಮಾಜವನ್ನು ಒಗ್ಗುಡಿಸುವ ಕೆಲಸವನ್ನು ನಿರಂತರ ಮತ್ತು ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದ್ದಾರೆ. ಈ ಮೂಲಕ ಬಸವ ತತ್ವವನ್ನು ಸರ್ವರಿಗೂ ತಲುಪುವಂತೆ ಮಾಡುವ ಪ್ರಯತ್ನ ಇವರದಾಗಿದೆ.

ಈ ಜಗತ್ತಿನಲ್ಲಿ ಸೂರ್ಯ ಮತ್ತು ಚಂದ್ರರಿರುವವರೆಗೂ ಶಾಶ್ವತವಾಗಿ ಇರುವ ವಚನ ಸಾಹಿತ್ಯಕ್ಕೆ ಪಟ್ಟಕಟ್ಟುವ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತರುವ ಮೂಲಕ ಅದುವರೆಗೊ ಕೇವಲ ವ್ಯಕ್ತಿಗೆ ಪಟ್ಟಕಟ್ಟ ಬಹುದು ಎಂದು ತಿಳಿದ್ದಿದವರಿಗೆ ತತ್ತ್ವಕ್ಕೂ ಪಟ್ಟಾಭಿಷೇಕ ಮಾಡಬಹುದು ಎಂಬುದನ್ನು ಸಂಘಟನೆ ಮೂಲಕ ತೋರಿಸಿ ಕೊಟ್ಟ 21 ನೇ ಶತಮಾನದ ಶರಣೆ ಅಕ್ಕ ನೀವು ಎನ್ನುವುದು ನಮ್ಮಗೆಲ್ಲರಿಗೂ ಪ್ರೇರಣೆ. ಪ್ರತಿದಿನನಿತ್ಯ ಬಸವ ಗಿರಿಯಲ್ಲಿ ವಚನ ಪಠಣ ಕಾರ್ಯ ಸದ್ದಿಲ್ಲದೆ ಸಾಗುತ್ತಿದೆ. ಶ್ರಾವಣ ಮಾಸದಲ್ಲಿ ವಿಶೇಷ ಪ್ರವಚನ ಸೇರಿದಂತೆ ವಿವಿಧ ಕೆಲಸ ಕಾರ್ಯಗಳು ಯಶಸ್ವಿಯಾಗಿ ಮುನ್ನಡೆಸುವ ಕಾಯಕದಲ್ಲಿ ಅಕ್ಕನವರು ಮಗ್ನರಾಗಿದ್ದಾರೆ. ಹೀಗೆ  ಇವರು ಸಮಾಜದ ಉನ್ನತಿಗಾಗಿ ಇವರ ಆರೋಗ್ಯವನ್ನು ಲೆಕ್ಕಿಸದೆ ಸದಾ ಸರ್ವ ಜನಾಂಗದ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಸನ್ನಿವೇಶ ನಾವೆಲ್ಲರೂ ಕಣ್ಣಾರೆ ಕಾಣುತ್ತಿದ್ದೇವೆ ಅಲ್ಲವೇ, ಹೀಗೆ ಆಯೋಜನೆ,ಸಂಯೋಜನೆ,ಮುಖ್ಯಸ್ಥರಾಗಿ
ಕಾರ್ಯಕ್ರಮಗಳ
ಮಾಡುವುದರ ಮೂಲಕ ಸೇವಾ ಚಟುವಟಿಕೆಗಳು ನಾಡಿನಾದ್ಯಂತ ಪಸರಿಸುವ ಕಾರ್ಯಗಳು ಯಶಸ್ವಿಗೊಳಿಸಿ,ಸಂಘಟನೆಗಳನ್ನು ಬಲಪಡಿಸುವ ದಿಕ್ಕಿನಲ್ಲಿ ದಾಪುಗಾಲು ಹಾಕುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಆದಕಾರಣ ಈ ಎಲ್ಲಾ ಸಂಘಟನೆಗಳ ಶ್ರೇಯಸ್ಸು ಅಕ್ಕನವರಿಗೆ ಸಲ್ಲುತ್ತದೆ.ಹೀಗಾಗಿ ಯಾವ ದಿಕ್ಕಿನಿಂದ ನೋಡಿದರು ಅಕ್ಕ ಪುಸ್ತುತ ಸಮಾಜಕ್ಕೆ ಅವಶ್ಯ ಮತ್ತು ಆಸ್ತಿ ಜೊತೆಗೆ ಸಮಾಜದ ಒಬ್ಬ ಆದರ್ಶ ಪೂಜ್ಯನೀಯರು ಎಂಬುದು ಸತ್ಯ.

ಅಕ್ಕನವರಿಗೆ ಒಲಿದ ಗೌರವ/ಪ್ರಶಸ್ತಿಗಳು :
ವಿವಿಧ ಸಂಘ, ಸಂಸ್ಥೆ ಮಠಗಳು,ಬಸವಕೇಂದ್ರ,ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಅನೇಕ ಗೌರವ ಸನ್ಮಾನಗಳು ಸಂಧಿವೆ. ಇನ್ನು ಇವರ ನಿಸ್ವಾರ್ಥ ಸೇವೆಗಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಮೈಸೂರು ಸಂಸ್ಥೆಯಿಂದ ಕದಳಿ ಶ್ರೀ ಪ್ರಶಸ್ತಿ( 2007), ಶ್ರೀ ಸಿದ್ದಗಂಗಾ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ., ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಜರುಗಿದ ವಿಭಾಗ ಮಟ್ಟದ ಕದಳಿ ಸಮಾವೇಶದ ಸರ್ವಾಧ್ಯಕ್ಷತೆಯ ಗೌರವ(2008), ಹಳಕಟ್ಟಿ ವಚನೋತ್ಸವ ರಾಷ್ಟ್ರ ಮಟ್ಟದ ಏಳನೇ ಸಮ್ಮೇಳನ 2013ರ ಸರ್ವಾಧ್ಯಕ್ಷತೆ ಹಾಗೂ ಬೀದರ್‌ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷತೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಪ್ರಶಸ್ತಿ ಪುರಸ್ಕಾರಗಳು ಇವರ ಸೇವಾ ಕೈಂಕರ್ಯಕ್ಕೆ ದೊರಕಿವೆ.

ಗೌರವದ ಮಾತು:
ನನ್ನಂತಹ ಕಿರಿಯವನಿಂದ ಹಿಡಿದು ವಯೋವೃದರಿಗೆ ಅಕ್ಕನವರ ಪ್ರವಚನವೆಂದರೆ ಅದೊಂದು ಬಾಯಾರಿ ಬಂದವನಿಗೆ ಕುಡಿಯಲು ಕೊಟ್ಟ ನೀರಿನಂತೆ. ಹಣ್ಣು ಹಣ್ಣಾದ ಮುದುಕನಿಗೆ ಹುರುಗೋಲು ಇದ್ದಂತೆ. ನೊಂದು ದುಃಖಿತರಾಗಿ ಬಂದವರಿಗೆ ಕಣ್ಣೆರು ಒರೆಸುವ ಕೈಗಳಂತೆ. ಸಮಾಜದಿಂದ ತಿರಸ್ಕಾರ ಗೊಂಡವರಿಗೆ ಅದೊಂದು ಭರವಸೆ ಅಪ್ಪುಗೆ ಇದ್ದಂತೆ. ಮಾನಸಿಕ ರೋಗಗಳಿಗೆ ಮದ್ದು ಇದ್ದಂತೆ. ಈಗ ತಾನೆ ಬೆಳೆಯುತ್ತಿರುವ ಬಳ್ಳಿಗೆ ಪಕ್ಕದಲ್ಲಿ ಆಸರೆಯಾಗಿ ಪಡೆಯಬಹುದಾದ ಹೆಮ್ಮೆರವಿದ್ದಂತೆ.ಹೀಗೆ ಒಂದಿಲ್ಲೊಂದು ವಿಷಯಗಳಿಂದ ರಾಜ್ಯ , ಹೊರ ರಾಜ್ಯ, ದೇಶ ಮತ್ತು ವಿದೇಶಗಳ ಅನೇಕ ಲಿಂಗಾಯತರ ಮತ್ತು ಬಸವತತ್ವ ಅನುಯಾಯಿಗಳ ಮನೆ ಮತ್ತು ಮನಸ್ಸುಗಳಿಗೆ ಅಕ್ಕನವರು ಚಿರಪರಿಚಿತರು. ಪ್ರತಿನಿತ್ಯ ವಚನ ಓದು, ವಾರಕ್ಕೊಮ್ಮೆ ವಚನ ಪ್ರಾರ್ಥನೆ ಮತ್ತು ವಚನ ಚಿಂತನೆ, ವಿಧ್ಯಾರ್ಥಿಗಳಿಗಾಗಿ ಬಸವ ಭಾರತೀ ಶಿಬಿರ, ವರ್ಷ ಕೊಮ್ಮೆ ಅಭೂತಪೂರ್ವವಾದ ವಚನ ವಿಜಯೋತ್ಸವ ಇಂತಹ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಬಸವ ಸೇವೆಯನ್ನು ನಾಡಿನಾದ್ಯಂತ ಪ್ರಸಾರ ಮಾಡುತ್ತಾ ಮನೆಮಾತಾಗಿದ್ದಾರೆ.ಶಿವಶರಣರ ವಾಣಿಯಂತೆ
ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ಮಾತನ್ನು ಸತ್ಯ ಮಾಡಿ ನಾಡಿನ ಸಮುದಾಯಕ್ಕೆ ತೋರಿಸಿಕೊಟ್ಟಿದ್ದಾರೆ. ಯಾವ ಮಠ ಪೀಠಗಳು ಬಸವ ತತ್ವವನ್ನು ಇವರಷ್ಟು ಸುವ್ಯವಸ್ಥಿತವಾಗಿ ಪ್ರಚಾರ – ಪ್ರಸಾರ ಮಾಡಿಲ್ಲ ಎಂದು ಹೇಳಿದರೆ ಅತಿಶಯೋಕ್ತಿಯ ಮಾತು ಅಲ್ಲವೇ ಅಲ್ಲ. ಸ್ವಾಮೀಜಿಗಳಾಗದೇ ಜನಸಾಮಾನ್ಯರಂತೆ ಸಾಮಾನ್ಯರಾಗಿ ಬಸವ ತತ್ವ ಕಟ್ಟುವಲ್ಲಿ ಇವರ ಕೊಡುಗೆ ಅಪಾರ ಎನ್ನಬಹುದು.ಯಾವುದೇ ಒಂದು ನಿಶ್ಚಿತ ಸಂಬಳ ಇಲ್ಲದಿದ್ದರೂ ಮುಖದಲ್ಲಿ ನಗೆ ಅರಳಿಸಿ ಬದುಕುವ ಎದೆಗಾರಿಕೆ ಇವರದು.ಇಂತಹ ಅಪರೂಪದ ತ್ಯಾಗದ ಸೇವೆಯ ಸೇವಕಿ ಈ ನಾಡಿನಲ್ಲಿ ಹುಟ್ಟಿದ್ದು ನಮ್ಮೆಲ್ಲರ ಪುಣ್ಯ ಬಂಧುಗಳೆ, ಸ್ವಾಭಿಮಾನ – ಅಭಿಮಾನದ ಮೂಲಕ ಪ್ರತಿಯೊಬ್ಬ ಪ್ರಜೆಗಳಲ್ಲಿ ಸೇವಾ ಕೈಂಕರ್ಯದ ಬೀಜವನ್ನು ಬಿತ್ತುವ ಕಾಯಕವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ನಿಜಕ್ಕೂ ಮಾನವೀಯ ಮೌಲ್ಯಗಳ ಸಂಕೇತ.ಜೊತೆಗೆ ಸೇವೆಯ ಹಾದಿಯಲ್ಲಿ ಸಾಗುತ್ತಿರುವ
ಅಕ್ಕ ಅನ್ನಪೂರ್ಣ ತಾಯಿಯವರಿಗೆ ಹಲವಾರು ಸಮಸ್ಯೆಗಳುಂಟು ಇದರ ನಡುವೆ ದಿಟ್ಟ ಹೋರಾಟ ಮಾಡುವ ಕೆಚ್ಚೆದೆಯ ಮನೋಭಾವದ ಎದೆಗಾರಿಕೆ ಇವರದು ಎಂಬುದು
ಯಾರು ಮರೆಯುವಂತಿಲ್ಲ.
ಸತ್ಯಕ್ಕಾಗಿ ಹಾಗೂ ಬಸವಾದಿ ಶರಣರು ಕಂಡ ಆದರ್ಶ ಸಮಾಜ ನಿರ್ಮಾಣ ಮಾಡಬೇಕೆಂಬ ಛಲದ ಮಾಹಾದಾಶೆಯ ಇವರದು ಹೀಗಾಗಿ ಆ ದಿಸೆಯಲ್ಲಿ ಮತ್ತೆ ಕಲ್ಯಾಣ ರಾಜ್ಯ ಕಟ್ಟುವ ಕಾಯಕದಲ್ಲಿ
ಕಾರ್ಯಪೃವತ್ತರಾಗಿದ್ದಾರೆ.ಆದಕಾರಣ ಬಸವ ತತ್ವ ಮಾರ್ಗದಲ್ಲಿ ಸಾಗುತ್ತಿರುವ ಅಕ್ಕ,ನಮ್ಮೆಲ್ಲರ ಚೈತನ್ಯದ ಚಿಲುಮೆಯಾಗಿ, ಸ್ಪೂರ್ತಿಯ ಅಕ್ಕನಾಗಿ,ಕರುನಾಡಿನ ಹೆಮ್ಮೆಯ ಮಗಳಾಗಿ, ಇಡೀ ದೇಶವೇ ಮೆಚ್ಚುವಂತಹ ನಿಸ್ವಾರ್ಥ ಸೇವೆ ಸಲ್ಲಿಸುವಂತಾಗಲಿ ಹಾಗೂ ವಿಶ್ವವೇ ಹೆಮ್ಮೆ ಪಡುವಂತ ಸೇವೆ ಮಾಡಲಿ ಎಂಬುವುದೆ ಪ್ರತಿಯೊಬ್ಬ ಬಸವಾಭಿಮಾನಿಗಳ ಆದಮ್ಯ ಬಯಕೆ.

ಬಸವರ ಶ್ರೀ ರಕ್ಷೆ ಅಕ್ಕನ ಮೇಲಿರಲಿ:
21ನೇ ಶತಮಾನದ ಅಕ್ಕನೆಂದರೆ ಎಲ್ಲರಿಗೂ ಧೈರ್ಯ, ಆತ್ಮ ಸ್ಥೈರ್ಯ ಮತ್ತು ವಿಶ್ವಾಸ.
ಇಂತಹ ಅಕ್ಕನವರು ಇಂದು ಅನಾರೋಗ್ಯಕ್ಕೆ ಇಡಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.ಇಂತಹ ಸಂದರ್ಭದಲ್ಲಿಯೂ ಅಕ್ಕ ಶ್ರಾವಣ ಮಾಸದಲ್ಲಿ ಸುಮಾರು 118 ದಿನಗಳ ಕಾಲ ವಿಶೇಷ ಪ್ರವಚನ ಮಾಡಿರುವುದು ನಮ್ಮಗೆಲ್ಲರಿಗೂ ಪ್ರೇರಣೆಯಾಗಬೇಕಿದೆ. ಆದ್ದರಿಂದ ಶರಣ ಬಂಧುಗಳೆ ಅವರ ಆರೋಗ್ಯ ಹದಗೆಟ್ಟ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರ ಅಭಿಮಾನಿಗಳಾದ ನಾವು, ನೀವೆಲ್ಲ ಅವರ ಆರೋಗ್ಯದ ಸುಧಾರಣೆಗಾಗಿ ಒಂದಿಷ್ಟು ಬಸವಾದಿ ಪ್ರಮಥರಲ್ಲಿ ಪ್ರಾರ್ಥಿಸಬೇಕಿದೆ. ಸದಾ ತನಗಾಗಿ ಎಂದು ದುಡಿಯದೆ ಸಮಾಜಕ್ಕಾಗಿ, ಸಮಾಜದ ಏಳಿಗೆಗಾಗಿ ಸದಾ ದುಡಿಯುತ್ತಿರುವ ಅಕ್ಕನವರು
ಇಂದಿನ ಆಧುನಿಕ ಸಮಾಜಕ್ಕೆ ಅವರ ಸೇವೆ ಅವಶ್ಯಕತೆ ಇದ್ದೆ ಇದೆ ಎನ್ನುವುದು ನಾವ್ಯಾರೂ ಮರೆಯುವಂತಿಲ್ಲ.ಆದಕಾರಣ ಬಸವ ಸೇವೆ ಹಿಂದಿಗಿಂತಲೂ ಇಂದು ತುಂಬ ಅವಶ್ಯಕತೆ ಇದೆ. ನೀವು ನಮ್ಮ ಮುಖ್ಯಸ್ಥರು ನಮ್ಮೆಲ್ಲರಿಗೂ ಸ್ಫೂರ್ತಿ, ನೀವು ನೇತೃತ್ವ ವಹಿಸಿ ಮುನ್ನಡೆದರೆ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸೀಗುವುದು ಖಂಡಿತ ಎನ್ನುವುದು ಇಲ್ಲಿ ಸ್ವಷ್ಟಪಡಿಸುತ್ತೇನೆ. ಆದ್ದರಿಂದ ಸಮಾಜದ ಆರೋಗ್ಯವನ್ನು ಕಾಪಾಡಿದ ನೀವು, ನಿಮ್ಮ ಆರೋಗ್ಯವನ್ನು ಧರ್ಮಗುರು ಬಸವ ತಂದೆ ಖಂಡಿತಾ ಕಾಪಾಡುವ ಮೂಲಕ ಪುನಃ ನಿಮ್ಮನ್ನು ಲಿಂಗಾಯತ ಧರ್ಮ ಸೇವಾ ಕೈಂಕರ್ಯಕ್ಕೆ ಸಿದ್ಧಗೊಳಿಸುತ್ತಾರೆ ಎನ್ನುವುದು ನಮ್ಮ ಬಲವಾದ ನಂಬಿಕೆ.ಆದಕಾರಣ ನಮೆಲ್ಲರ ಶಕ್ತಿ ನೀವು,ಅಸಂಖ್ಶಾತ ಬಸವ ಬಂಧುಗಳಿಗೆ ತಾಯಿ ತಂದೆ ನೀವಾಗಿ ಆತ್ಮವಿಶ್ವಾಸ ತುಂಬಿದವರು ನೀವು ಎನ್ನುವ ಹೃದಯಸ್ಪರ್ಶಿ ನೀತಿಯ ನುಡಿಗಳು ಇಲ್ಲಿ ಸ್ಪಷ್ಟ ಪಡಿಸುತ್ತಾ, ಅಕ್ಕ ನೀವು ನಮ್ಮ ಧರ್ಮದ ಬಹು ದೊಡ್ಡ ಅಸ್ತಿ, ಬೇಗ ಗುಣಮುಖರಾಗಿ ಬಸವ ಸೇವೆಗೆ ಸಿದ್ಧರಾಗಿ, ಸದಾ ಎಂದಿನಂತೆ ನಿಮ್ಮ ಸೇವೆ ಮುಂದುವರೆಯುತ್ತಲೇ ಇರಲಿ. ಲಿಂಗಾಯತ ಧರ್ಮದ ಉರಿಯುವ ದೀಪ ತಾವು, ಶೀಘ್ರವಾಗಿವಾಗಿ ಪ್ರಜ್ವಲಿಸಲಿ, ಸೃಷ್ಟಿಕರ್ತರ ಹಾಗು ಧರ್ಮ ಗುರುವಿನ ನೆನಹುವಿನೊಂದಿಗೆ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿಯವರ ಆರೋಗ್ಯ ಚೇತರಿಸಿ ಅಕ್ಕನ ವಾಣಿ ನಮ್ಮೆಲ್ಲರಿಗೆ ಮತ್ತೆ ಕೇಳುವಂತಾಗಲಿ
ಎಂಬುದೇ ಸಮಸ್ತ ಬಸವಾಭಿಮಾನಿಗಳ ಅದಮ್ಯ ಬಯಕೆಯ ಜೊತೆಗೆ ಧರ್ಮಗುರು,ವಿಶ್ವಗುರು ಭಕ್ತಿ ಭಂಡಾರಿ ಬಸವಣ್ಣನವರ ಕೃಪೆ ಆಶೀರ್ವಾದವೇ ಪರಮಪೂಜ್ಯ ಶ್ರೀ ಅಕ್ಕ ಅನ್ನಪೂರ್ಣ ತಾಯಿಯವರಿಗೆ ಶ್ರೀರಕ್ಷೆಯಾಗಿ ಕಾಪಾಡಲಿ. ಅಕ್ಕ ತಾಯಿಯವರು ಮಾಡಿದ ಸತ್ಕಾರ್ಯಗಳೆ ಅವರ ಜೀವನ ಪರ್ಯಂತ ಅವರಿಗೆ ಆಯುರಾರೋಗ್ಯ ಸಂತೃಪ್ತಿ ಸಮೃದ್ಧಿ ಸುಖ ಶಾಂತಿ ಕರುಣಿಸಲಿ ಹಾಗೂ ವಿಶ್ವ ದಾರ್ಶನಿಕರ ಆಶೀರ್ವಾದ,ಬಸವರ ಶ್ರೀ ರಕ್ಷೆ, ಸಾತ್ವಿಕ ಮಹಾ ಪೂಜ್ಯರ ಹಾರೈಕೆ, ಶರಣ ತಂದೆ ತಾಯಿಗಳ ಪ್ರೀತಿ ತುಂಬಿದ ಪ್ರಾರ್ಥನೆ ಇವರ ಮೇಲೆ ಸದಾ ಇರಲೆಂದು ಭಕ್ತಿಪೂರ್ವಕ,ಹೃದಯಪೂರ್ವಕ,ಮನಃಪೂರ್ವಕವಾಗಿ ಬಸವಾದಿ ಪ್ರಮಥರಲ್ಲಿ ಪ್ರಾರ್ಥಿಸುತ್ತೇವೆ.

ಲೇಖಕರುಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಶರಣರ ಪ್ರಗತಿಪರ ಚಿಂತನೆಗೆ ಧಕ್ಕೆ ಮಾಡದಿರಿ: ಬಸವರಾಜ ಹೊರಟ್ಟಿ

  ಹುಬ್ಬಳ್ಳಿ: ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಭೂಮಿಪೂಜೆ ಕಾರ್ಯಕ್ರಮದ ಕುರಿತು ಜ .6 ರಂದು ನೀಡಿದ ಜಾಹೀರಾತಿನಲ್ಲಿ ‘ಸನಾತನ …

ಸರಕಾರದ ವಿರುದ್ಧ ತೋಂಟದ ಸಿದ್ಧರಾಮ ಶ್ರೀಗಳ ಅಸಮಾಧಾನ

  ಲಿಂಗಾಯತ ಪ್ರಗತಿಪರ ಚಿಂತನೆಯ ಧರ್ಮವಾಗಿದೆ ಗದಗ : ಮಹಾಮಾನವತಾವಾದಿ ಪ್ರಗತಿಪರ ಚಿಂತಕ, ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದಲ್ಲಿ ನೂತನ …

ವೇದಕ್ಕೆ ಒರೆಯ ಕಟ್ಟುವೆ

ಭಾರತದ ಚರಿತ್ರೆಯಲ್ಲಿ ಶರಣ ಚಳುವಳಿಗೆ ಒಂದು ವಿಶಿಷ್ಟವಾದ ಸ್ಥಾನ ಸಿಗುತ್ತದೆ. ಬೌದ್ಧ ಧರ್ಮದ ನಂತರ ಭಾರತದಲ್ಲಿ ಮತ್ತೊಮ್ಮೆ ಸಮಾಜೋಧಾರ್ಮಿಕ ಕ್ರಾಂತಿ …

ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಿದ ತ್ಯಾಗವೀರ ಶಿರಸಂಗಿ ಲಿಂಗರಾಜರು

  ಲೇಖನ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತೋಂಟದಾರ್ಯ ಸಂಸ್ಥಾನ ಮಠ ಗದಗ ಬೆಳಗಾವಿ: ಕರ್ನಾಟಕವನ್ನು ಶೈಕ್ಷಣಿಕವಾಗಿ ಹಾಗು ಸಾಂಸ್ಕೃತಿಕವಾಗಿ …

ಸನಾತನ ಶಬ್ದಕ್ಕೆ ಗೊ.ರು.ಚನ್ನಬಸಪ್ಪ ವಿರೋಧ

  ಬಸವಕಲ್ಯಾಣ: ರಾಜ್ಯ ಸರ್ಕಾರ ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ನೂತನ ಅನುಭವ ಮಂಟಪ ನಿರ್ಮಾಣ’ …

ಸಮಗ್ರ ಚಿಂತನೆಯ ವಿಚಾರವಾದ ಮತ್ತು ಮುಲಾಜಿಗೆ ಬಸಿರಾಗುವ ಅರೆಬೆಂದ ವಿಚಾರವಾದ

ಕೆಲವು ಅಥವಾ ಹಲವು ಅರೆಬೆಂದ ವಿಚಾರವಾದಿಗಳು ಅನುಭವ ಮಂಟಪದ ನಿರ್ಮಾಣದ ಕುರಿತಾಗಿ ಆರ್ಥಿಕ ಸ್ಥಿತಿ ಮತ್ತು ಇತರೆ ಕಾರಣಗಳಿಂದ ೫೦೦ …

ಕಾಯಕದಲ್ಲೇ ದೇವರ ಕಂಡ ಕೇತಲಾದೇವಿ

  ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಸಮಕಾಲೀನ ಶಿವಶರಣೆ ಕೇತಲದೇವಿಯು ಶರಣ ಕುಂಬಾರ ಗುಂಡಯ್ಯನವರ ಧರ್ಮಪತ್ನಿ. ಕುಂಬಾರ ಗುಂಡಯ್ಯ ಮತ್ತು …

ಅನುಭವಮಂಟಪ ನಡೆದು ಬಂದ ದಾರಿ

ಬೀದರ್: ವಿಶ್ವರು ಬಸವಣ್ಣನವರು 12ನೇ ಶತಮಾನದಲ್ಲಿ ಜಗತ್ತಿನ ಮುಟ್ಟು ಮೊದಲು ಪ್ರಜಾಪ್ರಭುತ್ವದ ಮಾದರಿಯ ಅನುಭವ ಮಂಟಪವನ್ನು ಸ್ಥಾಪಿಸಿದರು. ಅನುಭವ ಮಂಟಪದಲ್ಲಿ …

ಲಿಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ್ ನಿಧನ

  ಬೆಳಗಾವಿ: ಬೆಳಗಾವಿ ಲಿಂಗಾಯತ ಸಂಘಟನೆಯ ಸಕ್ರಿಯ ಕಾರ್ಯಕರ್ತ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ರಾಜು …

2021ರ ಲಿಂಗಾಯತ ದಿನದರ್ಶಿಕೆ ಬಿಡುಗಡೆ ಹಾಗೂ ಶರಣ ಮೇಳದಲ್ಲಿ ಪಾಲ್ಗೊಳ್ಳಲು ಮನವಿ

ಗಜೇಂದ್ರಗಡ: ನಂಬಿಕೆಗೆ ಅರ್ಹವಲ್ಲದ ಪಂಚಾಂಗ, ಜ್ಯೋತಿಷ್ಯಕ್ಕೆ ಜೋತುಬಿದ್ದು, ಮೌಢ್ಯತೆಗೆ ಒಳಗಾಗಿ ನಮ್ಮ ಬದುಕನ್ನು ಕೆಡಿಸಿಕೊಳ್ಳುವುದರ ಬದಲಾಗಿ ಧರ್ಮಗುರು ಬಸವಣ್ಣ ಹಾಗೂ …

ಲಿಂಗಾಯತ– ವೀರಶೈವರ ‘ಒಬಿಸಿ ಬೇಡಿಕೆ’ ಮತ್ತು ಒಗ್ಗಟ್ಟಿನ ಹೋರಾಟ… ಧರ್ಮ, ರಾಜಕಾರಣ, ಸಾಮಾಜಿಕ ನ್ಯಾಯ

  ಲೇಖನ: ಡಾ. ಶಿವಮೂರ್ತಿ ಮುರುಘಾ ಶರಣರು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ದಿನವನ್ನು ರಾಷ್ಟ್ರದಾದ್ಯಂತ ಕಳೆದ ತಿಂಗಳು …

ಪತ್ರಕರ್ತ ಶಿವರಂಜನ್ ಸತ್ಯಂಪೇಟೆಗೆ ಪಿಎಚ್.ಡಿ.ಪದವಿ

  ಕಲಬುರಗಿ : ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ. ಗುಲ್ಬರ್ಗ ವಿವಿ …

“ನಿಜ ಹೇಳದಿದ್ದರೂ ಪರವಾಗಿಲ್ಲ ಸುಳ್ಳು ಹೇಳಬೇಡಿ”

  ೧) ಬಸವ ಪರಂಪರೆ, ಶರಣ ಪರಂಪರೆ, ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ …

ಇತಿಹಾಸ ತಿರುಚುವ ರಂಭಾಪುರಿ ಶ್ರೀಗಳ ಕೃತ್ಯ ಖಂಡನೀಯ

ರಾಮದುರ್ಗ: ಸುವರ್ಣ ಚಾನೆಲ್ ನವರು ಎಡೆಯೂರ ಸಿದ್ಧಲಿಂಗ ಶ್ರೀಗಳ ಬಗ್ಗೆ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಭಿನವ ಅಲ್ಲಮನೆಂದೇ …

ಇಳಕಲ್ ಗುರುಮಹಾಂತ ಶ್ರೀಗಳಿಗೆ ‘ಸಂಯಮ ಪ್ರಶಸ್ತಿ’ ಪ್ರದಾನ

  ಬಾಗಲಕೋಟೆ: ಇಳಕಲ್‌ನ ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳಿಗೆ ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ ಶನಿವಾರ …

Leave a Reply

Your email address will not be published. Required fields are marked *

error: Content is protected !!