Home / featured / ಮಠಾಧಿಶರಿಗೆ ಮೈಲುಗಲ್ಲಾದ ಪೂಜ್ಯ ಡಾ ಮಾತೆ ಮಹಾದೇವಿ”
ಮಾತೆ ಮಹಾದೇವಿ

ಮಠಾಧಿಶರಿಗೆ ಮೈಲುಗಲ್ಲಾದ ಪೂಜ್ಯ ಡಾ ಮಾತೆ ಮಹಾದೇವಿ”

 

ಇಂದು ಪೂ.ಡಾ ಮಾತೆ ಮಹಾದೇವಿಯವರ ಜನನ ಹಾಗೂ ಲಿಂಗೈಕ್ಯ ಸ್ಮರಣೆಯ ಕಾರಣ, ಅವರ ಕಾರ್ಯ ಸ್ಮರಣೆ.

ಶರಣರ ಅಭಿಪ್ರಾಯದಂತೆ ಹುಟ್ಟು ಹಬ್ಬ, ಪುಣ್ಯತಿಥಿಗಳು,ಶ್ರಾದ್ಧಗಳು ,ಮೂಹೂರ್ತ ತಿಥಿಗಳು ,ನಾವು ನಂಬುವಂತಿಲ್ಲಾ ಹಾಗೂ ಆಚರಿಸುವಂತಿಲ್ಲಾ ,
ಸಿದ್ದರಾಮೇಶ್ವರ ಆದೇಶದಂತೆ
“ಹಬ್ಬಗಳೆಲ್ಲಾ ಉಬ್ಬುಬ್ಬಿ ಲಿಂಗದ ಹಬ್ಬಕ್ಕೆ ಬಂದಬ್ಬರವ ನೋಡಾ!
ಲಿಂಗದ ಹಬ್ಬ ನಿಮ್ಮ ಬಾಯಿಗೆ ಒಬ್ಬಿಯಲ್ಲದೆ ನಿಮ್ಮ ಜನನಕ್ಕೆ ಹಬ್ಬವೇನೊ ,
ಕಬ್ಬಿಲ ಮುಬ್ಬುಳ್ಳ ಕೊಬ್ಬುಗರಿರಾ ,ಕಪಿಲಸಿದ್ದಮಲ್ಲಿಕಾರ್ಜುನೊಬ್ಬನರಿಯರ್ದಡೆ .” ಎಂಬಂತೆ
ಜನನ ಮರಣಗಳಿಗೆ ಹೋರಗಾದ ಜಗತ್ತಿನ ಅಧ್ಭುತ ವ್ಯಕ್ತಿಯೇ “ಶರಣ”
ಆ ಒಂದು ಲೌಕಿಕದಲ್ಲಿ ಅಲೌಕಿಕದ ಅಗೋಚರ ಶಕ್ತಿಯ ಅನುಸಂಧಾನ ಮಾಡುವ ವ್ಯಕ್ತಿಯ ಸ್ಥಿತಿಯ ಶರಣ.
ಹಾಗಾಗಿ ಲಿಂಗವಂತರು ಜನನ ಮರಣಗಳಿಗೆ ಹೊರಗಾದವರು ,ಹಾಗಂತ ಮಹಾನುಭಾವರ ವ್ಯಕ್ತಿತ್ವದ ಸ್ಮರಣೆ ಮಾಡದ ಮತಿಹಿನರಾಗಬಾರದು , ಅವರ ಗೈದ ಗೆಯ್ಮೆಗಳು ,ಸಮಾಜದ ಪ್ರತಿ ಅವರು ತೋರಿದ ನಿಷ್ಠೆ ,ಕಾಳಜಿ ,ತನ್ನನ್ನು ತಾನು ಸಮಾಜಕ್ಕೆ ಅರ್ಪಿಸಿಕೊಂಡ ನಿಸ್ವಾರ್ಥಿಗಳನ್ನು ಸ್ಮರಿಸದೆ ಹೊದರೆ ನಾವು ಸಮಾಜ ದ್ರೋಹಿಗಳಾಗುತ್ತೆವೆ,ಅಂಥಹ ಅಪರೂಪದ ವ್ಯಕ್ತಿಗಳ ಒಬ್ಬರು ಪೂ.ಡಾ.ಮಾತೆ ಮಹಾದೇವಿಯವರು .

ಸಮಾಜದ ಅನೇಕ ಅಡೆತಡೆಗಳಿಗೆ ಎದೆಯೊಡ್ಡಿ ನಿಂತ ಛಲಗಾರ್ತಿಯ ಹುಟ್ಟು ಮತ್ತು ಸ್ಮರಣೆ ಸುದಿನವೆ ಈ ದಿನ.

ಎಷ್ಟೇ ಭಿನ್ನಾಭಿಪ್ರಾಯ ,ಟೀಕೆ ಟಿಪ್ಪಣಿಗಳು ,ಅಪಾದನೆಗಳ ನಡುವೆಯು ಅವರು ಕೈಕೊಂಡ ನಿಲವುಗಳು,ಎಡಬಿಡದ ಧೈಯಕಡೆಗಿನ ಪ್ರಯತ್ನ,
,ಸಂಶೋಧನಾ ಸಾಮರ್ಥ್ಯ,ಹಾಗೂ ಲಿಂಗಾಯತ ಧರ್ಮ ಚಿಂತನೆಯ ಕುರಿತು ಇಟ್ಟ ಕೆಚ್ಚೆದೆಯ ನಡಿಗೆಗಳ ಒಳಹೊರ ಆಯಾಮಗಳನ್ನು ಮುಕ್ತ ಮನಸ್ಸಿನಿಂದ ಚಿಂತನೆಮಾಡದೆ ಹೊದರೆ ವಿಶಾಲ ಹೃದಯದ ಬಸವಕಂದರೆಂದು ಹೇಳಿಕೊಳ್ಳಲು ನಾವು ಯೋಗ್ಯರಲ್ಲ ಅನಿಸುತ್ತೆ,
ಬಸವೊತ್ತರ ನಂತರ ಅನೇಕ ಶರಣರು ,ಸ್ವಾಮಿಜಿಗಳು ಹಾಗೂ ಮಠಗಳು ತಮ್ಮದೇ ಆದ ಕೊಡುಗೆಗಳನ್ನು ನೀಡಿಹೊಗಿದ್ದಾರೆ.
ಅವರ ಬಸವತತ್ವವದೆಡೆಗಿನ ಕೆಲ ಮಾರಕ ಹೆಜ್ಜೆಗಳೊಂದಿಗೆ ಅವರ ಅನೆಕ ಪೂರಕ ಹೆಜ್ಜೆಗಳಿಗೆ ಸ್ಮರಿಸಬೇಕಾಗುತ್ತದೆ .ಅಂಥಹ ಕಾರ್ಯಪ್ರವರ್ತಕರಲ್ಲಿ ಡಾ.ಮಾತೆ ಮಹಾದೇವಿ ಒಬ್ಬರು ಎಂಬುದನ್ನು ಯಾರು ಮರೆಯುವಂತಿಲ್ಲಾ.
ಸಂತುಷ್ಟ ಹಾಗೂ ಸಮೃದ್ದ ಕುಂಟುಂಬದಿಂದ ಬಂದ ಪೂ ಮಾತೆ ಮಹಾದೇವೀಯವರು ಹುಟ್ಟಿನಿಂದಲೆ ಆಧ್ಯಾತ್ಮಿಕ ಹಸುವನ್ನು ಒಡಲೊಳು ಹೊತ್ತುಕೊಂಡು ಬಂದವರು ,ಪೂ.ಲಿಂಗಾನಂದ ಅಪ್ಪಾಜಿಯವರ ಆಯಸ್ಕಾಂತಿಯ ಪ್ರವಚನದಿಂದ ಆಕರ್ಶಿತರಾಗಿ ತನ್ನೆಲ್ಲಾ ಕುಂಟುಂಬ ಬಳ್ಳಿಯನ್ನು ತ್ಯಜಿಸಿ ಬಸವ ಬಳ್ಳಿಯಾಗಿ ತನ್ನ 19 ನೇಯ ವಯಸ್ಸಿಗೆ ಪೂ.ಲಿಂಗಾನಂದರಿಂದ ಲಿಂಗದಿಕ್ಷೆಯನ್ನು ಪಡೆದು ,ಒಂದೆ ವರ್ಷದಲ್ಲಿ ಜಂಗಮದಿಕ್ಷೆಯನ್ನು ಪಡೆದು ಚರ ಜಂಗಮರಾಗಿ ತಮ್ಮ ಪಯಣ ಆರಂಭಿಸಿದರು .
ಗುರು ವಿರಕ್ತರು ತಮ್ಮ ತಮ್ಮಲ್ಲೆ ಹಿರಿಕಿರಿದು ಬಿರುದುಗಳಿಗಾಗಿ ,ಬಡೆದಾಡುತ್ತಿರುವಾಗ ,ಉದ್ಭವಮೂರ್ತಿಗಳ ಮಕ್ಕಳಾದವರು ಜಗದ್ಗುರುಗಳ ಪಟ್ಟದ ಸ್ವಂಘೋಸಿತ ಹಕ್ಕನು ಪಡೆದಿಕೊಂಡಿದರು , ಮಹಿಳೆಯು ಜಂಗಮದಿಕ್ಷೆಗೆ ಅರ್ಹಳಲ್ಲ ಎಂದು ಪುರುಷಪ್ರಧಾನವಾದ ಮನುಸಿಧ್ಧಾಂತವನ್ನು ಬಿತ್ತುತ್ತ ಸಾಗುತ್ತಿರುವಾಗಲೆ ,ಬಸವರ ಸಮಸಮಾಜದಲ್ಲಿ ಯಾವ ಮಟ್ಟಕ್ಕಾದರು ಯಾವ ಪೀಠಕ್ಕಾದರು ಎರಬಳ್ಳಲು ಎಂದು ತೋರಿಸಲು ಸಾಂಕೇತಿಕವಾಗಿ ಜಗದ್ಗುರು ಮಹೀಳಾಪೀಠವನ್ನು ಸ್ಥಾಪಿಸಿ ಮೊಟ್ಟಮೂದಲ ಮಹಿಳಾ ಜಗದ್ಗುರು ಪೀಠವನ್ನು ಅಲಂಕರಿಸಿ ಉಧ್ಭವ ಮಕ್ಕಳಿಗೆ ಶಡ್ಡುಹೊಡೆದರು.
ಅನೇಕ ಮಠಾಧೀಶರು ತಮ್ಮತಮ್ಮ ಮಠದ ಸುತ್ತಮುತ್ತ ಬಸವತತ್ವ ಪ್ರಸಾರ ಕಾರ್ಯ ಕೈಕೊಂಡರೆ ,ಬಸವಾದಿ ಶರಣರ ಕಾರ್ಯ ಕ್ಷೇತ್ರ ಐಕ್ಯಕ್ಷೇತ್ರಗಳ ಕಡೆಗೆ ಗಮನ ಹರಿಸಿ , ಕೂಡಲಸಂಗಮ, ಬಸವಕಲ್ಯಾಣ, ಉಳವಿ, ಅಲ್ಲಮಗಿರಿ ,ಧಾರವಾಡ ,ಕುಂಬಳಗೊಡು ,ನೇರೆ ರಾಜ್ಯಗಳಾದ ತೆಲಂಗಾಣ,ತಮಿಳುನಾಡು ಮಹಾರಾಷ್ಟ್ರ ಗಳಲ್ಲಿ ಶರಣತತ್ವವನ್ನು ಪ್ರಸಾರಗೈದ ಧಿಮಂತ ನಾಯಕಿ ಪೂ.ಮಾತೆ ಮಹಾದೇವಿ.
ಲೇಖಕಿಯಾಗಿ ,ಗಾಯಕಿಯಾಗಿ ,ಸಂಶೋದಕಿಯಾಗಿ ,ಉತ್ತಮ ವಾಗ್ಮಿಯಾಗಿ,ಸಾವಿರಾರೂ ಜನರನ್ನು ಕೂಡಿಡುವ ಸಂಘಟಕನಾ ಚತುರರಾಗಿ ,”ವಿಶ್ವಕಲ್ಯಾಣ ಮಿಷನ್,ಬಸವಧರ್ಮ ಪೀಠದ ಮುಖಾಂತರ ಹಳ್ಳಿ ಹಳ್ಳಿಗಳಲ್ಲಿ ಬಸವ ಪ್ರಜ್ಞೆ ಮೂಡಿಸಿದರು ,ಪೂ.ಲಿಂಗಾನಂದರ ಮಾರ್ಗದರ್ಶನ ದಲ್ಲಿ1980 ರಲ್ಲಿ “ರಾಷ್ರೀಯ ಬಸವ ದಳ” ಎಂಬ ಸಂಘಟನೆಯನ್ನು ಹುಟ್ಟುಹಾಕಿ ಯುವಕರನ್ನು ಧರ್ಮದ ಕಡೆಗೆ ಕರೆತರುವ ಯುವಚಿಂತನವುಳ್ಳವರಾಗಿದ್ದರು.
1990 -95 ರ ಸೂಮಾರಿಗೆ ರಾ.ಬ.ದಳವು ಇಡಿ ಲಿಂಗಾಯತ ಸಮುದಾಯದ ನಿರ್ಣಾಯಕ ಸಂಘಟನೆ ಎಂಬ ಮಟ್ಟಿಗೆ ಬೆಳೆದು ನಿಂತಿತು ,ಬಸವತತ್ವ ಎಂದರೆ ರಾಷ್ಟ್ರೀಯ ಬಸವದಳ ಎಂದರೆ ಬಸವತತ್ವ ಎಂಬ ನಿರ್ಣಯಕ್ಕೆ ಸಮಾಜ ಬಂದಿತ್ತು ,
ನಂತರ ಮಾತಾಜಿಯವರ “ಬಸವ ವಚನ ದಿಪ್ತಿಯ” ಮುಖಾಂತರ ಸಂಘಟನೆ ವಿಘಟನೆಯಾಗಿರುವುದು ಅಲ್ಲಗಳೆಯಲಾಗದು ,ಮಾತಾಜಿಯವರು ಸುಪ್ರೀಂಕೋರ್ಟ್ ಆದೇಶಕ್ಕೆ ಮನ್ನಣೆ ಕೊಡುವುದರ ಮುಖಾಂತರ ಆ ವಿವಾದಕ್ಕೆ ತೆರೆಯೆಳೆದರು. ಹಾಗಾಗಿ ಪೂ.ಅಪ್ಪಾಜಿ (ಪೂ.ಲಿಂಗಾನಂದರು) ,ಮತ್ತು ಪೂ.ಮಾತಾಜಿ (ಡಾ.ಮಾತೆ ಮಹಾದೇವಿ) ಯವರ ಕನಸಿನ ಕೂಸಾದ ರಾ.ಬ.ದಳ. ಮತ್ತೆ ಬಾನೆತ್ತರಕ್ಕೆ ಹಾರಲು ಸಜ್ಜಾಗುತ್ತಿದೆ.
ತನ್ನ ಜೀವನುದ್ದಕ್ಕೂ ಯಾವ ಲಾಲಸೆಗೂ ,ಹೊಗಳಿಕೆ ,ತೆಗಳಿಕೆಗೆ ಒಳಗಾಗದೆ ,ಯಾರನ್ನು ಒಲೈಸಲಿಕ್ಕೆ ಹೇಳಿಕೆ ಕೊಡದೆ ತತ್ವ ನಿಷ್ಠುರತೆ ಹೊಂದಿದ ವ್ಯಕ್ತಿ ಅವರು “ದೊಡ್ಡ ದೊಡ್ಡ ಶೆಟ್ಟಿಗಳ ಕಂಡರೆ ಅಡ್ಡಗಟ್ಟಿ ಹೋಗಿ ಶರಣಾರ್ಥಿ ಎಂಬ ಎಡ್ಡುಗಳ್ಳತನಕೆ ತಮ್ಮ ಮಠಕ್ಕೆ ಬನ್ನಿ ಹಿರಿಯರೆ ಎಂಬರು ,ಹೀಗಿ ಶರಣಾರ್ಥಿ ಭಕ್ತನೆಂದೊಡೆ ಕೇಳದ ಹಾಗೆ ಅಡ್ಡಮೊರೆಯನಿಕ್ಕಿಕೊಂಡು ಸುಮ್ಮನೇ ಹೊಗುವ ಹೆಡ್ಡ ಮೂಳರಿಗೆ ದುಡ್ಡೆ ಪ್ರಾಣವಾಯಿತು.”
ಎಂಬ ಅಂಬಿಗರ ಚೌಡಯ್ಯ ನವರ ವಚನದಂತೆ ಯಾವ ರಾಜಕಾರಣಿಗಳು ,ಪ್ರತಿಷ್ಠಿತ ವ್ಯಕ್ತಿಗಳ ಮೂಲಾಜಿಗೂ ಬಲಿಯಾಗದೆ ಸತ್ಯ ಶುದ್ಧ ಭಕ್ತರಿಂದ ಬಂದಂತಹ ಕಾಣಿಕೆಯಿಂದ ಒಂದು ದೊಡ್ಡ ಬಸವ ಪ್ರಸಾರ ಸಂಸ್ಥೆ ಕಟ್ಟಿರುವುದು ದೊಡ್ಡ ಸಾಹಸ ,”ನೇರ ನಿಷ್ಠುರ ದಾಕ್ಷಿಣ್ಯ ಪರ ನಾನಲ್ಲ ಲೋಕ ವಿರೋಧಿ ಶರಣನಾರಿಗೂ ಅಂಜುವವನಲ್ಲ ” ಎನ್ನುವಂತೆ ,ಇಂದು ರಾಜಕಾರಣಿಗಳ ಹಾಗೂ ಶ್ರೀಮಂತರ ಬರುವಿಕೆಗಾಗಿ ವೇದಿಕೆಗಳು ನಿರ್ಮಾಣವಾಗುತ್ತಿರುವ ಸಂಧರ್ಭದಲ್ಲಿ ,ಒಬ್ಬ ಸಾಮಾನ್ಯ ವ್ಯಕ್ತಿ ಗೂ ಹಾಗೂ ಒಬ್ಬ ರಾಜ್ಯದ ಮುಖ್ಯಮಂತ್ರಿಗೂ ಸಮಾನಾದ ಪ್ರೀತಿ ಮತ್ತು ನಿಷ್ಠುರತೆ ತೊರಿರುವುದನ್ನು ಕಂಡರೆ ಅವರ ವ್ಯಕ್ತಿತ್ವ ನಮಗೆ ಅದೆಷ್ಟೋ ಭಿನ್ನವಾಗಿ ಕಾಣುತ್ತದೆ.
ತನ್ನ ಜೀವನದಲ್ಲಿ ಅತಿಹೆಚ್ಚು ವಿವಾದಗಳನು ತನ್ನ ಆತ್ಮಬಲದಿಂದ ಎದುರಿಸಿದ ದಿಟ್ಟಗಾರ್ತೀ ಮಾತಾಜಿ .
ಅನೇಕ ಅನಾನೂಕೂಲತೆ, ವಿವಾದಗಳ ನಡುವೆಯೂ , ತನ್ನ ಆರೂಗ್ಯದ ಪರಿವೆಯೆ ಮಾಡದೆ ಸದಾವಕಾಲ ಸಾಹಿತ್ಯ ಹಾಗೂ ಸಂಶೋಧನೆಯಲ್ಲಿ ತಮ್ಮ ಆಯುಷ್ಯ ಅಲ್ಪಗೊಳಿಸಿಕೊಂಡು ನಮ್ಮನ್ನು ಬೇಗನೆ ತೊರೆದು ಹೋದ ಮಾತೆಗೆ ನಾವು ಸಲ್ಲಿಸುವುದಾದರೂ ಎನನ್ನು ?
ಅವರ ಉನ್ನತ ಚಿಂತನೆಗೆ ಜಗವು ಸ್ಪಂದಿಸಲಿಲ್ಲ ಅಥವಾ ಜಗತ್ತನ್ನು ನಾವು ಸ್ಪಂದಿಸುವ ಅವಕಾಶವೆ ಕೊಡಲಿಲ್ಲವಾ ? ಎಂಬುದು ಯಕ್ಷ ಪ್ರಶ್ನೆಯಾಗೆ ಉಳಿದಿದೆ.
ಅವರ ಬರವಣಿಗೆ, ಸಂಶೋಧನೆ, ಚಿಂತನೆಗಳು ಜನರಿಗೆ ಮುಟ್ಟಿಸುವುದರ ಮುಖಾಂತರ, ಜನರಲ್ಲಿ ಅವರ ಬಗ್ಗೆ ಮನೆಮಾಡಿದ ಸಂದೇಹಗಳ ಮುಸುಕು ತೆಗೆಯುವುದೆ ಇಂದು ನಾವು ಅವರಿಗೆ ಕೊಡುವ ಜನುಮದಿನದ ಕಾಣಿಕೆ.
ಇಂದು ಲಿಂಗಾಯತ ಮಠಗಳು ಹಾಗೂ ಮಠಾಧೀಶರು ತಮ್ಮ ಮಠದ ಸುತ್ತ ಮುತ್ತಲೆ ಕುಳ್ಳು ಆಯುತ್ತಿರುವುದನ್ನು (ಕೆಲವು ಮಠಗಳು ಹೊರತುಪಡಿಸಿ) ನೋಡಿದಾಗ ಮಾತಾಜಿ ನಾಡಿನುದ್ದಕ್ಕೂ ಸಂಚರಿಸಿ ಸಂಘಟನೆಯ ಮುಖಾಂತರ ಜನ ಜಾಗ್ರತಿಯನ್ನು ಮಾಡಿರುವುದನ್ನು ನೊಡಿದಾಗ ,ಹಲವು ಮಠಾಧೀಶರಿಗೆ ಮೈಲುಗಲ್ಲಾಗಿ ನಿಲ್ಲುತ್ತಾರೆ.
ಪುನರಜನ್ಮವನು ನಂಬದವರು ನಾವು, ಹಾಗೆನಾದರು ದೈವಇಚ್ಛೆದಿ ಅಂತರಂಗದ ಭೂವಿಗೆ ದರ್ಶನವ ನಿಡಿದರೆ ಅದುವೆ ನನ್ನ ಧನ್ಯ.

ಸಾವ ಜೀವಕ್ಕೆ ಗುರು ಬೇಡ
ಸಾಯದ ಜೀವಕ್ಕೆ ಗುರು ಬೇಡ,
ಗುರುವಿಲ್ಲದೆ ಕೂಡಲು ಬಾರದು ,
ಇನ್ನಾವ ಠಾವಿಂಗೆ ಗುರು ಬೇಕು ?
ಸಾವು ಜೀವ ಸಂಬಂಧವ ಕಾವ ತೊರಬಲ್ಲಡೆ ಆತನೆ ಗುರು ಗುಹೇಶ್ವರ”

ಶರಣ : ಸಿದ್ದು ಶಟಕಾರ
ರಾಷ್ಟ್ರೀಯ ಬಸವದಳ ಬೀದರ

About Shivanand

Admin : Lingayat Kranti Monthly news paper 8884000008 [email protected]

Check Also

ಸಂಸ್ಕೃತಿ & ಸಂಸ್ಕಾರಗಳ ಬೆನ್ನೇರಿದ ಯುವ ಸನ್ಯಾಸಿಗಳು : ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು

ಬೈಲೂರ: ತಮ್ಮ ಯೌವ್ವನದಲ್ಲಿ ಧರ್ಮದ ಕಂಕಣ ಕಟ್ಟಿಕೊಂಡು‌ ನಿಂತ ಯುವ ಸನ್ಯಾಸಿಗಳ ನೋಡಿದರೆ ತುಂಬ ಸಂತೋಷವಾಗುತ್ತದೆ ಜೊತೆಗೆ ಜೀವನ ಸಾರ್ಥಕವಾಯಿತು …

ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ಲಿಂಗಾಯತ ಉಪಪಂಗಡಗಳು ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ: ಎಂ ಬಿ ಪಾಟೀಲ

ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಶ್ರೀ ಎಂ.ಬಿ.ಪಾಟೀಲ ಅವರು ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು …

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಮೊದಲು ಮೂರು ನೀತಿಕಥೆಗಳನ್ನು ನೊಡೋಣ ಆನಂತರ ವಿಷಯಕ್ಕೆ ಬರೋಣ.ಬೆಳಗಿನ ಜಾವ ಯಾರೋ ಒಬ್ಬರು ಸಮುದ್ರ ತೀರದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅಂದು …

ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಸಾಹಿತಿ ಮತ್ತು ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳ ಒಡನಾಡಿ ಶಿಷ್ಯರಾದ ಸಿದ್ದು ಯಾಪಲಪರವಿ ಅವರು ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ …

ರಂಗಾಯಣದಿಂದ ನೇಗಿನಹಾಳದಲ್ಲಿ ಸರ್ವರಿಗೂ ಸಂವಿಧಾನದ ನಾಟಕ

ನೇಗಿನಹಾಳ: ಜನಸಾಮಾನ್ಯರಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ಮೂಡಿಸುವುದರ ಜೊತೆಗೆ ಜಾತಿ, ಧರ್ಮ, ಲಿಂಗಸಮಾನತೆ, ಅಸ್ಪೃಶ್ಯತೆ ನಿವಾರಣೆ, ದೇವದಾಸಿ …

ಜಗದ್ಭವ್ಯ ಮೇರು ಕೃತಿ : ಮಹಾತ್ಮರ ಚರಿತಾಮೃತ

ಲೇಖನ: ಪ್ರಕಾಶ ಗಿರಿಮಲ್ಲನವರ                          …

ಸೆ. 25ರಂದು “ಮಹಾತ್ಮರ ಚರಿತಾಮೃತ” ಲೋಕಾರ್ಪಣೆ

ಅಥಣಿ: ಗಡಿಭಾಗದಲ್ಲಿ ನಾಡು-ನುಡಿ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಂತ-ಮಹಾಂತರ …

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು …

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ …

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ …

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ …

ಕ್ರೀಡೆ, ಕಲೆ, ಸಾಹಿತ್ಯದಂಥ ರಂಗಗಳು ಜಾತಿ, ಸಂಕುಚಿತತೆ ನಿರ್ಮೂಲನೆಯ ಮಹಾಸಾಧನಗಳು

  ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಮತ ಮುಂಡರಗಿ ಆಗಷ್ಟ್ 07: ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. …

ಪ್ರಮಾಣ ವಚನ ನೇರಪ್ರಸಾರ; ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ರಾಜಭವನದಿಂದ ನೇರ ಪ್ರಸಾರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇಂದು ಮಧ್ಯಾಹ್ನ 2:15ಕ್ಕೆ …

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

  ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ …

ತ್ರಿಭಾಷೆಗಳಲ್ಲಿ ಮೂಡಿಬಂದ ಮಹಾಜಂಗಮ

ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ …

Leave a Reply

Your email address will not be published. Required fields are marked *