Breaking News
Home / featured / ಬಸವ ಭಕ್ತಿಯ ಬೀಜಕ್ಕೆ ಅಲ್ಲಮನೆಂಬ ಮಹಾವೃಕ್ಷ

ಬಸವ ಭಕ್ತಿಯ ಬೀಜಕ್ಕೆ ಅಲ್ಲಮನೆಂಬ ಮಹಾವೃಕ್ಷ

 

ರಾಯಚೂರು: ವಚನ ಸಾಹಿತ್ಯದ ಚರಿತ್ರೆಯಲ್ಲಿ ಕನ್ನಡ ಭಾಷೆ ಕಂಡ ಅತ್ಯಂತ ವಿಶಿಷ್ಟ ಅನುಭಾವಿ ವೈರಾಗ್ಯ ನಿಧಿ ಕವಿ ಅಲ್ಲಮನಾಗಿದ್ದಾನೆ. ಕನ್ನಡ ಸಂಸ್ಕ್ರತಿಯ ಮುಖಾಮುಖಿ ಚಿಂತನೆಯ ಅನುಭಾವಿ ಶರಣ,ವಚನಕಾರರಲ್ಲಿಯೇ ಅತ್ಯಂತ ಶ್ರೇಷ್ಠ ನಿಷ್ಠುರವಾದಿ ಎನ್ನುವುದು ವಿಮಶ೯ಕರ ಅಭಿಪ್ರಾಯ ವಾಗಿದೆ. ಅಲ್ಲಮನ ವಚನ ಚಂದ್ರಿಕೆಯಲ್ಲಿ ೧,೨೯೪ ವಚನಗಳು ಲಭ್ಯವಾಗಿವೆ.ಗುಹೇಶ್ವರ ಗೊಹೇಶ್ವರ ಈತನ ವಚನಗಳ ಅಂಕಿತ ವಾಗಿದೆ.ಅಲ್ಲಮಪ್ರಭುವಿನ ಆಧ್ಯಾತ್ಮಿಕ ಅನುಭಾವದ ವಚನಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ.ರೂಪಕ ಮತ್ತು ಬೆಡಗಿನ ಭಾಷೆಯ ವಿಶಿಷ್ಟ ಧಾರೆಯಾಗಿ ನಮಗ ಪ್ರಭು ವಿನ ವಚನಗಳು ಪರಿಚಯಿಸುತ್ತವೆ.

ಪ್ರಭುವಿನ ವಚನಗಳ ಅನುಸಂಧಾನ ಬಹು ಕಠಿಣ ಎಂಬ ಎಚ್ಚರಿಕೆಯ ಮಾತುಗಳಿವೆ. ಆಧ್ಯಾತ್ಮದ ಚೌಕಟ್ಟಿನಲ್ಲಿ ಅಲ್ಲಮನಿಗಿರುವ ಸ್ಥಾನ ಆತನ ಕಾವ್ಯ ಮೀಮಾಂಸೆ ಪ್ರಯೋಗ ಶೀಲತೆಗೆ ಸಂಬದ್ದಿ ಸಿದ್ದಾಗಿದೆ.ಅಲ್ಲಮ ಮತ್ತು ಬಸಣ್ಣನ ವಿಶಿಷ್ಟ ತೆಯನ್ನು ವಿವರಿಸುವ ವಚನ ಮೀಮಾಂಸೆಯ ಆಂತರಿಕ ಪರಿಕಲ್ಪನೆಗಳಿಂದ ಪ್ರವೇಶಿಸುವ ಪ್ರಯತ್ನ ಈ ಲೇಖನದ್ದು.

ಅಲ್ಲಮಪ್ರಭು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ, ಹನ್ನೆರಡನೆಯ ಶತಮಾನದಲ್ಲಿ ಬನವಾಸಿಯು ಹನ್ನೆರಡು ಸಾವಿರ ಎಂದು ದೊಡ್ಡ ಆಡಳಿತ ವಿಭಾಗದ ಮುಖ್ಯ ಸ್ಥಳ ವಾಗಿತ್ತು.ಕಾಳಾಮುಖ ಶೈವರ ಕೇಂದ್ರ ಸ್ಥಾನವಿದು.ಚಾಮರಸನ ಪ್ರಕಾರ ಅಲ್ಲಮಪ್ರಭುವಿನ ತಂದೆ ತಾಯಿಗಳ ಹೆಸರು ನಿರಹಂಕಾರ ಸಜ್ನಾನಿ ..ದೇವಸ್ಥಾನದಲ್ಲಿ ಮದ್ದಳೆ ಸೇವೆ ಸಲ್ಲಿಸುತ್ತಿದ್ದ. ಪ್ರಾಯಕ್ಕೆ ಬಂದಾಗ ಮದ್ದಳೆ ನುಡಿಸುವ ಕಲೆಯಲ್ಲಿ ಪ್ರಾವಿಣ್ಯತೆಯನ್ನು ಪಡೆದಿದ್ದ. ಈ ಕಲಾ ಪ್ರದಶ೯ನ ದಿಂದಾಗಿಯೆ ಅಲ್ಲಮನ ಜೀವನದಲ್ಲಿ ಹೆಣ್ಣೊಂದರ ಪ್ರವೇಶ ವಾಗುತ್ತದೆ.ಹರಿಹರನ ಪ್ರಕಾರ ಅವಳು ಕಾಮಲತೆ ಯಾದರೆ ಚಾಮರಸ ನ ಪ್ರಕಾರ ಅವಳು ಮಾಯಾ ದೇವಿಯಾಗಿದ್ದಾಳೆ.

ಅನಿಮಿಷ ದೇವ ಅಲ್ಲಮನ ಗುರು.ಹರಿಹರ ಚಾಮರಸ ಶೂನ್ಯ ಸಂಪಾದನಾಕಾರರು ಇದನ್ನು ಒಪ್ಪಿಕೊಳ್ಳುತ್ತಾರೆ.ಸ್ವತಃ ಅಲ್ಲಮನ ವಚನಗಳು ಆಧಾರ ಒದಗಿಸುತ್ತವೆ.ಅಲ್ಲಮಪ್ರಭುವಿನ ಜೀವ ನದಲ್ಲಿ ಅನಿಮಿಷ ಗುರುವಿನ ಸಂದಶ೯ನ ಒಂದು ಪ್ರಮುಖವಾದ ಘಟ್ಟ.ಅಲ್ಲಿಂದ ಮುಂದೆ ಪ್ರಭುವಿನ ಸಾಧನೆ ದೊಡ್ಡ ದಾಶ೯ನಿಕ ಅನುಭಾವಿಯಾಗುವ ಜೊತೆಗೆ ಬಸವಣ್ಣ ನವರು ಕೈಗೆತ್ತಿಕೊಂಡ ಸರ್ವವ್ಯಾಪಿ ವಿವಿಧ ಹಂತಗಳಲ್ಲಿ ಮುಖ್ಯವಾಗಿ ಆಧ್ಯಾತ್ಮಿಕಕ್ಕೆ ಸಂಬಂದಿಸಿದಂತೆ ಮಾರ್ಗದಶ೯ನ ನೀಡಿದ್ದಾನೆ.

ಆಧ್ಯಾತ್ಮಿಕ ಧರ್ಮದಲ್ಲಿ ಬಸವಣ್ಣ ಒಂದು ವ್ಯಕ್ತಿ ಯಲ್ಲ ಒಂದು ತತ್ವ ಜ್ಯೊತಿ. ಬಸವನೆಂದರೆ ಯುಗ ಪರಿವರ್ತನಾ ಶೀಲದ ಜ್ಯೊತಿರ್ಪುಂಜ. ಹಲವು ವ್ಯಕ್ತಿಗಳ ಪ್ರಭೆ.ಹೀಗಾಗಿ ಅಲ್ಲಮ ಬಸವಣ್ಣನನ್ನು ಪಾರಾಮಾರ್ಥಿಕ ಸಾಮಾಜಿಕ ನೆಲೆಯಲ್ಲಿ ವಿಶ್ಲೇಷಣೆ ಮಾಡಿದ್ದಾನೆ. ಅಲ್ಲಮ ಉಳಿದ ಶರಣರಿಗಿಂತ ಭಿನ್ನವಾಗಿ ಕಂಡುಬರುತ್ತಾನೆ.ಹೀಗಾಗಿ ಅಲ್ಲಮ ಬಸವಣ್ಣನ ಮನವನ್ನು ಮನನದಿಂದ ಮಾಡುವ ಸ್ಮರಣೆ ಚಿಂತನೆ ಪ್ರಭುವಿನದ್ದಾಗಿದೆ.ಮನದ ನೆನಹು ಎಷ್ಟೇ ಗಟ್ಟಿಯಾದರೂ ಗುಹೇಶ್ವರ ಲಿಂಗ ಮನದ ಕೈಗೆ ಸಿಗದು ಎಂಬ ಆತಂಕ. ಅರಿವಿನ ಲಿಂಗದ ಹುಡುಕಾಟ ಸಾದ್ಯವಿಲ್ಲ. ಕುರುಹಿಲ್ಲದ ಲಿಂಗವನ್ನು ಅರಿವಾಗಿಸಿ ಕೊಂಡಾಗ ಬಯಲಪ್ಪಿ ಮುದ್ದಾಡಿದಂತೆ ಎಂಬ ಅನುಭಾವಿಕ ನೆಲೆ ಯಾಗಿದೆ.ಘನ ಆಕಾರದ ಮೂರ್ತಿಯಾದ ಬಸವಣ್ಣ ಎನ್ನ ಮನದ ಬಿಂಬದಲ್ಲಿ ಹೇಗೆ
ಅಡಗಿದೆ ಎನ್ನುವ ದಟ್ಟ ಪ್ರೀತಿಯ, ಆವೇಗದ ಸಂಗಮ ವಾಗಿದೆ.

ಅಲ್ಲಮನ ನಿಜ ದ್ವನಿಯನ್ನು ವಚನ ಮೀಮಾಂಸೆ ಯ ತಾತ್ವಿಕತೆಯಲ್ಲಿ ಕಂಡು ಕೊಳ್ಳಲು ಸಾದ್ಯ ವಾಗುತ್ತದೆ. ಅಲ್ಲಮ ಸಾರ್ವಕಾಲಿಕ ಎಚ್ಚರದ ಪ್ರತೀಕ. ಶರಣ ಸಾಹಿತ್ಯದಲ್ಲಿ ಅಲ್ಲಮ ಮತ್ತು ಬಸವಣ್ಣನವರ ಅನುಸಂಧಾನದ ಪ್ರಭೆ ಗುರು ಶಿಷ್ಯ ಸಂಬ್ರಮದ ಅಕರ್ಷಣೆಯಾಗಿದೆ. “ಅಂಗದಲ್ಲಿ ಆಚಾರವ ಸ್ವಾಯತವ ಮಾಡಿ ಕೊಂಡನಯ್ಯ ಬಸವಣ್ಭ” ದೇಹವೆರಡು ಪ್ರಾಣ ಒಂದೇ ಎಂಬ ಅಪೂರ್ವ ಸಮ್ಮಿಲನದ ಉದಾಹರಣೆ ಯಾಗಿದೆ.ಬಸವಣ್ಣ ಶ್ರೇಷ್ಠ ನೆಂದು ಎಲ್ಲರಿಗೂ ಗೊತ್ತು.ಜಗತ್ತಿನಲ್ಲಿ ಹಲವು ಶ್ರೇಷ್ಠರು ಆಗಿ ಹೋಗಿದ್ದಾರೆ.ಆದರೆ ಶ್ರೇಷ್ಠ ನಾಗಿದ್ದೂ ತನ್ನನ್ನು ಕನಿಷ್ಠ ನೆಂದು ಬಣ್ಣಿಸಿಕೊಂಡವರು ಬಸವಣ್ಣ ನಲ್ಲದೆ ಬೇರಾರಿಲ್ಲ. ಹೀಗಾಗಿ ಅಲ್ಲಮನ ವಿನಯವಂತಿಕೆಯ ಮಾತುಗಳು ಹೀಗಿವೆ. ( ಸ ವ ಸಂ..೧೩೭೨)

” ಬ” ಎಂಬಲ್ಲಿ ಎನ್ನ llಭವ ಹರಿಯಿತ್ತು

“ಸ” ಎಂಬಲ್ಲಿ ಸರ್ವಜ್ಞ ನಾದೆನು.

“ವ” ಎಂಬಲ್ಲಿ ವಚಿಸುವಡೆll ಚೈತನ್ಯಾತ್ಮಕ

ನಾದೆನುll ಇಂತೀ ಬಸವಾ ಅಕ್ಷರತ್ರಯವೆನ್ನ

ಸರ್ವಾಂಗದಲ್ಲಿ llತೊಳಗಿ ಬೆಳಗುವ ಭೇದ

ನರಿದು ಆನೂ ನೀನು llಬಸವಾ ಬಸವಾ ಬಸವಾ

ಎನುತಿರ್ದೆವಯ್ಯ ಗುಹೇಶ್ವರ.

ಅಲ್ಲಮನಿಗೆ ಬಸವಣ್ಣ ಆದಶ೯ ಗಳಮೊತ್ತ ಬಸವನೆಂದರೆ ಒಬ್ಬ ವ್ಯಕ್ತಿ ಚೈತನ್ಯ ಎನ್ನಲಾಗದು. ಅವನೊಬ್ಬ ದಿವ್ಯ ಚೇತನ ಆದಶ೯ ರಾಜ್ಯದ ಮೊತ್ತ ದಿವ್ಯ ಚೈತನ್ಯದ ಪುಂಜ .ಅಲ್ಲಮನಿಗೆ ಬಸವಾಕ್ಷರತ್ರಯವೆನ್ನ ಸರ್ವಾಂಗದಲ್ಲಿ ತೊಳಗಿ ಬೆಳಗಿದ ಬೆಳಕೂ ಹೌದು ಬೆಳಗೂ ಹೌದು. ಎಂದು ಹೆಮ್ಮೆಯಿಂದ ಮನ್ಯೀಕರಿಸುತ್ತಾನೆ.

ಅಲ್ಲಮನ ವಚನಗಳು ಬೆಡಗಿನ ಧ್ಯಾನಸ್ಥ ಸ್ಥಿಗೆ ನಮ್ಮನ್ನು ಕರೆದೊಯ್ಯುತ್ತವೆ. ಮನವು ಆ ಮಟ್ಟಕ್ಕೆ ಮುಟ್ಟದ ಹೊರತು ಅದರ ಒಳಾರ್ಥ ಗಳು ಸ್ಪಂದಿಸುವುದಿಲ್ಲ.”ಅದ್ವೈತ ವೆಂಬ ಶಿಶುವೆನ್ನ ಕರಸ್ಥಲ ಸೋಂಕಲೊಡನೆ ಎನ್ನ ತನ್ನಂತೆ ಮಾಡಿತ್ತಾಗಿ ಎನ್ನ ತಾನೆಂಬ ವಿಚಾರವ ಅರಿತು ಹೋಯಿತ್ತು ……ಸಂಗನ ಬಸವಣ್ಣನ ಮಹಿಮೆಯ ನಾನೆತ್ತ ಬಲ್ಲೆನು…ಅದ್ವೈತ ಸ್ಥಿತಿಯ. ಪರಮ ಜ್ಞಾನ ಬಸವಣ್ಣ. ಕರಸ್ಥಲದಲ್ಲಿ ವಿಲೀನವಾಗುವ ವಿಶಿಷ್ಟ ತೆ ಅಲ್ಲಮನಿಗೆ. ಅದ್ವೈತ ವೆಂಬ ಭಾವವು ಸಂಗನ ಬಸವಣ್ಣನ ಲೀಲೆಯಾಗಿದೆ.ಮನವೇ ಲಿಂಗ ಬಸವನಾದಾಗ ನೆನೆಯುವುದು ಇನ್ನಾರನ್ನ.
(ಸ.ವ.ಸ. .ಸಂ..೮೫)

“ಅದ್ವೈತ ವ ನುಡಿದು llಅಹಂಕಾರಿ

ಯಾದೆನಯ್ಯll .ಬ್ರಹ್ಮವ ನುಡಿದು

ಭ್ರಮಿತ ನಾದೆನಯ್ಯ .

ಶೂನ್ಯವ ನುಡಿದುll ಸುಖ ದುಃಖ ಕ್ಕೆ

ಗುರಿಯಾದೆನಯ್ಯಾll . ಗುಹೇಶ್ವರ

ನಿಮ್ಮ ಶರಣಸಂಗನ ಬಸವಣ್ಣನ

ಸಾನ್ನಿಧ್ಯದಿಂದll ನಾನು ಸದ್ಭಕ್ತನಾದೆ.”

ಅಲ್ಲಮನಿಗೆ ಗುಹೇಶ್ವರನ ಸಾಮಿಪ್ಯಕ್ಕೆ

ಬಂದಂತೆಲ್ಲಾ ಅದ್ವೈತ ದ ಸತ್ಯ ಸ್ಪಷ್ಟವಾಗುತ್ತದೆ.ಅದ್ವೈತ ದ ದಾಶ೯ನಿಕತೆಯಲ್ಲಿ ಶಿವನೇ ಸತ್ಯ ಜಗತ್ತು ಮಿಥ್ಯ. ಶಿವ ಜೀವ ಬೇರಲ್ಲ ಎಂಬ ಸಿದ್ದಾಂತ ದಶ೯ನದಲ್ಲಿ ನಾನು ಅಹಂಕಾರಿಯಾದೆ ಎನ್ನುವ ಆತ್ಮಾವಲೋಕನ ಅಲ್ಲಮನದು.ಶಿವನು ಜೀವ ಜಗತ್ತುಗಳ ಆತ್ಮನಾಗಿದ್ದಾನೆ.ಬೆಡಗಿನಲ್ಲಿ ಆತ್ಮವ್ಯಾಖ್ಯೆ ನೀಡಿ ಭ್ರಮಿತನಾದೆ ಎಂಬ ಆರೋಪದಲ್ಲಿ ನಿರೀಶ್ವರವೆಂದು ಸ್ವೀಕರಿಸಿ ದುಃಖಿಯಾದೆ ಗುಹೇಶ್ವರ ಎಂಬ .ದೈನ್ಯತೆ ಅಲ್ಲಮನದು. ಪ್ರಭುವಿನ ಭಾವ ಗರ್ಭದಲ್ಲಿ ಬಸವಣ್ಣ ನಿಗೆ ವಿಶೇಷ ಗುಹೇಶ್ವರನ ಸ್ಥಾನ.ಸಂಗನಬಸವಣ್ಣ ನೀನೇ ದಿವ್ಯಶಕ್ತಿ ಎನ್ನ ಭಕ್ತಿ ಮಾರ್ಗದ ಪೋಷಕ ನೀನೆ ವಾಹಕ.ನಾನು ನಿನ್ನ ಸದ್ಭಕ್ತ ನೀನೆ ಗುರು ನೀನೆ ಎನ್ನ ಗುಹೇಶ್ವರ. ಎಂಬ ಸಮರ್ಥನೆ ಪ್ರಭುವಿನದು.

ಶರಣ ಧರ್ಮದ ಮೌಲಿಕತೆ ಇರುವುದೇ ಬಸವ ಮತ್ತು ಅಲ್ಲಮರ ಅರಿವಿನ ಶ್ರೇಷ್ಠ ತಲೆಯಲ್ಲಿ. ಇವರಿಬ್ಬರೂ ವಚನ ಸಾಹಿತ್ಯದ
ವಿಮಶ೯ಕರಿಗೆ ವಿಶಿಷ್ಟ ವಿಶೇಷ ನಾಯಕರು. ಶರಣ ಧರ್ಮದ ಸಾಮಾಜಿಕ ಸಂಸ್ಸ್ಥೆಯಾಗಿ ಬೆಳೆದವರು.
(ಸ.ವ. ಸಂ ೧೩೯೦)

ಬಸವಣ್ಣಾ ನಿನ್ನ ಕಂಡು ಎನ್ನ ತನು

ಬಯಲಾಯಿತ್ತುll ನಿನ್ನ ಮುಟ್ಟಿ ಮುಟ್ಟಿ

ಎನ್ನಕ್ರೀ ಬಯಲಾಯಿತ್ತುll ಬಸವಣ್ಣನಿನ್ನ

ನೆನೆದು ಎನ್ನ ಮನ ಬಯಲಾಯಿತ್ತು

ಬಸವಣ್ಣಾll ನಿನ್ನ ಮಹಾನುಭಾವವ ಕೇಳಿ

ಇನ್ನ ಭವಂ ನಾಸ್ಥಿಯಾಯಿತ್ತುllನಮ್ಮ

ಗುಹೇಶ್ವರ ಲಿಂಗದಲ್ಲಿllನೀನು ಅಜಾತನೆಂಬುದ

ನೆಲೆ ಮಾಡಿ ಭವ ಪಾಶಂಗಳllಹಿರಿದಿಪ್ಪೆಯಾಗಿ

ನಿನ್ನ ಸಂಗ ದಿಂದನಾನುll ಬದುಕಿದೆನು.

ಅಲ್ಲಮ ಬಸವನೆಂಬ ಸಂಸ್ಥೆಗೆ ಶರಣಾಗುತ್ತಾನೆ. ತನ್ನ ತನು ಮನ ಗುಹೇಶ್ವರನ ಸ್ವರೂಪವಾಗಿದೆ. ಬಸವ ನಿನ್ನ ಮುಟ್ಟಿದಂತೆಲ್ಲಾ ಆನು ಪರಮಾತ್ಮನ ಸ್ವರೂಪನಾದೆ. ಬಸವನೆಂಬ ಬಯಲಲ್ಲಿ ನನ್ನ ಮನ ಬಯಲಾಯಿತ್ತು.ನಿಮ್ಮ ಅಂಗ ಲಿಂಗ ಸಾಮರಸ್ಯದ ಅನುಭಾವಕ್ಕೆ ಕಿಂಕರ ನಾನು. ಶತ್ರುಗಳೇ ಇಲ್ಲದ ಅಜಾತ ಮಹಾ ಶರಣನು ನೀನು.ಎನ್ನುವ ನಿರೂಪಣೆಯಲ್ಲಿ ಅಲ್ಲಮನಿಗೆ ಬಸವ ಶಕ್ತಿಯ ಬಗ್ಗೆ ಆವೇಗದ ಗೌರವ ವಾಗಿದೆ.ಆಧ್ಯಾತ್ಮಿಕ ಸಂಕೇತವಾಗಿದೆ. ಅಂದು ಅಲ್ಲಮನೂ ಸೇರಿದಂತೆ ಅನೇಕ ಶರಣರು ಬಸವನೆಂಬ ಮಹಾ ವೃಕ್ಷಕ್ಕೆ ಶರಣಾಗಿದ್ದರು.ಹೀಗಾಗಿ ಬಸವನೆಂಬ ಮಹಾ ಸಂಸ್ಥೆಯಲ್ಲಿ ಹಿರಿದು ಕಿರಿದು ಭಾವನೆಗಳಿಗೆ ಪ್ರಧಾನವಾದದ್ದು ಹಣವಲ್ಲ.ಗುಣ ಮತ್ತು ಯೋಗ್ಯತೆ ಹಾಗು ಶೀಲ “ಅರಿವಿಂಗೆ ಕಿರಿದೆಂಬ ಭಾವವಿಲ್ಲ ಬಸವಣ್ಣನದು.

ಶರಣ ಧರ್ಮದ ಅನುಭಾವಿಕ ನೆಲೆಯಲ್ಲಿ ಅಲ್ಲಮನ ಅಷ್ಟೇ ಎತ್ತರದ ದಾಶ೯ನಿಕರಿದ್ದಾರೆ. ಆದರೆ ಅನುಭಾವ ಮತ್ತು ಕಾವ್ಯ ಮೀಮಾಂಸೆ ಯ ಮಧ್ಯದಲ್ಲಿ ಅಲ್ಲಮ ನಷ್ಟು ತೀವ್ರವಾಗಿ ಹುಡುಕಾಟ ನಡೆಸಿದ ವಚನಕಾರರು ಬಹಳ ವಿರಳ. ಹೀಗಾಗಿ ಅಲ್ಲಮನ ಎತ್ತರದ ವ್ಯಕ್ತಿತ್ವದ ಬೆಳವಣಿಗೆಗೆ ವಿಶೇಷ ವ್ಯಕ್ತಿ ಅನುಭಾವಿ ಶಕ್ತಿಯ ಆಧ್ಯಾತ್ಮಿಕ ಲೋಕದ ಭಕ್ತಿಯ ಸಂಗನ ಬಸವಣ್ಣ ನಾಗಿದ್ದ.
(ಸ.ವ.ಸಂ..ಸಂ೧೧೨೫)

ಕುಂಡಲಿಗನ ಕೀಟದಂತೆll ಮೈ ಮಣ್ಣಾಗದಂತೆ

ಇದ್ದೆಯಲ್ಲಾ ಬಸವಣ್ಣಾll ಜಲದೊಳಗೆ ತಾವರೆ

ಯಂತೆ ಹೊದ್ದಿಯೂ ಹೊದ್ದದಂತೆllಇದ್ದೆಯಲ್ಲಾ

ಬಸವಣ್ಣಾll ಜಲದಿಂದಾದ ಮೌಕ್ತಿಕದಂತೆ

ಜಲವು ತಾನಾಗದಂತೆllಇದ್ದೆಯಲ್ಲಾ ಬಸವಣ್ಣಾ

ಗುಹೇಶ್ವರ ಲಿಂಗದllಅಣತಿ ವಿಡಿದು ತನುನುಣ

ಮತ್ತರಾಗಿದ್ದ ಐಶ್ವರ್ಯಾಂಧಕಾರllಮತವನೇನ

ಮಾಡಬಂದೆಯಯ್ಯಾ ll ಸಂಗನ ಬಸವಣ್ಣ.

ಈ ವಚನ … ಯೋಗದ ಮನೋಭೂಮಿಕೆಯಲ್ಲಿ ಬಸವಣ್ಣ ನ ಕುರಿತು. ಬ್ರಹ್ಮಾಂಡದ ರಹಸ್ಯ ದಷ್ಟೆ ಪಿಂಡಾಂಡದ ಈ ದೇಹದಲ್ಲಿ ಕಣ್ಣಿಗೆ ಕಾಣದ ಅನುಭವಕ್ಕೆ ಮಾತ್ರ ಅರಿವಾಗುವ ಕುಂಡಿಲಿನಿ ಶಕ್ತಿ ಪಡೆದವನು ನೀನು.ಮಣ್ಣು ಜಢ ವಸ್ತುವಾದರೂ ಸೂಕ್ಷ್ಮ ಜೀವಿಗಳನ್ನು ಒಳಗೊಡಿರುವ ಚೈತನ್ಯ ಶೀಲವದು. ಮಣ್ಣೆಂಬ ಮನೋಭೂಮಿಕೆಯಲ್ಲಿ ಎರೆಹುಳುವಿನ ಕೀಟದಂತೆ ಮೈಗೆ ಮಣ್ಣಾಗ ದಂತೆ ಜ್ಞಾನದ ಫಲವಂತಿಕೆಯನ್ನು ಹಂಚು ವವನು ನೀನು ಬಸವಣ್ಣಾ.ಮನವೆಂಬ ಜಲದಲ್ಲಿ ಜ್ಞಾನವನ್ನು ಹೊತ್ತವನಾದರೂ ನೀರಿನಲ್ಲಿಯ ಕಮಲದಂತೆ ನೀರನ್ನು ಸೋಂಕಿಸಿ ಕೊಳ್ಳದ ಹಾಗೆ ಇದ್ದೆಯಲ್ಲಾ ಬಸವಣ್ಣಾ. ಜಲಮಯವಾದ ಈ ದೇಹದಲ್ಲಿ ಮೌಕ್ತಿಕ ಸ್ವಾತಿ ಮುತ್ತಿನಂತೆ ಇದ್ದೆಯಲ್ಲಾ ನೀನು. ಇತರರ ತಪ್ಪುಗಳನ್ನು ಹುಡುಕಿ ಕೋಪಿಸಿ ಕೊಳ್ಳುವುದಕ್ಕಿಂತ ತಾಳ್ಮೆ ವಿವೇಚನೆಯಿಂದ ತನುವಿನ ಕೋಪ ತನ್ನ ಹಿರಿತನದ ಕೇಡೆಂದು ಹೇಳಿದ ದಾಶ೯ನಿಕ ನೀನು.ಪರಮ ಶಾಂತಿಧೂತನಾಗಿ ಮತಾಂಧರಿಗೆ ನೈತಿಕ ವ್ಯಾಖ್ಯಾನ ತೋರಿದ ಸಂಗನ ಬಸವಣ್ಣ ನೀನು. ಬಸವಣ್ಣ ಮತ್ತು ಅಲ್ಲಮಪ್ರಭುಗಳ ಬಗ್ಗೆ ಕಥನ ರೂಪಗಳನ್ನು ವಚನ ಸಾಹಿತ್ಯದಲ್ಲಿ ಸ್ಪಷ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೂರು ಹಂತಗಳನ್ನು ಕಾಣುತ್ತೇವೆ.

೧….ಪ್ರಭುವಿನ ಜೀವನದ ಕಥನಗಳು
೨….ಉತ್ತರಾಪಥದ ಪಯಣ
೩……ಕಲ್ಯಾಣ ಪಯಣದ ಪ್ರಣತೆ.

ಪ್ರಭು ಕಲ್ಯಾಣದ ಸಂಕೀರ್ಣ ಸತ್ಯವನ್ನು ಅರಿಯ ಬೇಕೆಂದು ಮನಸ್ಸುಮಾಡಿ ವೇಷ ಬದಲಿಸಿ ಕಲ್ಯಾಣಕ್ಕೆ ಬರುತ್ತಾನೆ. ೧೨ ವರ್ಷ ದೇಶ ಪರ್ಯಟನೆ ಮಾಡಿ ದಿವ್ಯ ಜ್ಞಾನವನ್ನು ಪಡೆದು ಸಾಧಕ ನೆನಿಸಿ ಕೊಂಡಿ ದ್ದಾನೆ.ಕಲ್ಯಾಣಕ್ಕೆ ಜಂಗಮ ಲಿಂಗ ಬರ ಬೇಕೆಂದು ಬಸವಣ್ಣ ಶೂನ್ಯ ಸಿಂಹಾಸನ ರಚಿಸಿ ಪ್ರಭುವಿಗಾಗಿ ಕಾಯುತ್ತಾನೆ. ಪ್ರಭುವಿನ ಸ್ವಾಗತಕ್ಕಾಗಿ ಕಲ್ಯಾಣ ಪಟ್ಟಣ ಶೃಂಗಾರ ಗೊಂಡಿದೆ.ಬಸವಣ್ಣ ನಿಗೂ ಪ್ರಭು ನಡೆದು ಬರುವ ಸುಳುಹು ಹತ್ತುತ್ತದೆ.”ಸಸಿಯ ಮೇಲೆ ಸಾಗರವರಿದ “ಅನಂದ ಬಸವಣ್ಣ ನಿಗೆ. ಕಲ್ಯಾಣ ಎನ್ನುವುದು ಅಲ್ಲಮನಿಗೆ ಕನಸಿನ ಊರೆ .ಲೌಕಿಕಾಧಿಕಾರದ ಆಚೆಗೆ ಇರುವ ಬಸವಣ್ಣನ ದೈವಿಕ ಆಧ್ಯಾತ್ಮಿಕ ಪಟ್ಟಣ.ಅದು. ಎಷ್ಟೇ ಆಗಲಿ” ಜ್ಯೋತಿರ್ಲಂಗಕ್ಕೆ ಬಂಗಾರದ ದೀಪ ಸ್ಥಂಬದ ಹಂಗಿಲ್ಲ.”ಅದು ತಾನಾಗಿಯೇ ಬೆಳಗ ಬಲ್ಲದು.
(ಸ.ವ. ಸಂ .೧೦೬೭)

ಕಲ್ಯಾಣವೆಂಬ ಪ್ರಣತೆಯಲ್ಲಿllಭಕ್ತಿ ರಸವೆಂಬ

ತೈಲವನೆತೆದುll ಆಚಾರವೆಂಬ ಬತ್ತಿಯಲ್ಲಿ

ಬಸವಣ್ಣನೆಂಬ llಜ್ಯೋತಿಯ ಮುಟ್ಟಿಸಲು

ತೊಳಗಿ ಬೆಳಗುತ್ತಿದ್ದಿತಯ್ಯ ll ಶಿವನ ಪ್ರಕಾಶ

ಆ ಬೆಳಗಿನೊಳಗೆll ಒಪ್ಪುತ್ತಿದ್ದರಯ್ಯ ಅಸಂಖ್ಯಾತ

ಭಕ್ತ ಗಣಂಗಳುll ಶಿವಭಕ್ತರಿರುವ ಕ್ಷೇತ್ರವೇ

ಅವಿಮುಕ್ತ ಕ್ಷೇತ್ರ ವೆಂಬುದು ll ಹುಸಿಯೇ

ಶಿವ ಭಕ್ತ ರಿರ್ದ ದೇಶ llಪಾವನ ವೆಂಬುದು

ಹುಸಿಯೇ ll ಗುಹೇಶ್ವರ ಲಿಂಗದಲ್ಲಿ ಎನ್ನ

ಪರಮಾರಾದ್ಯ llಸಂಗನ ಬಸವಣ್ಣನನ್ನು

ಕಂಡು ಬದುಕಿದೆನು llಕಾಣಾ ಸಿದ್ದರಾಮಯ್ಯ

ಸಂಗನ ಬಸವಣ್ಣ ಬಂದು ಕಲ್ಯಾಣದಲ್ಲಿ ಮನೆ ಕಟ್ಟಿದರೆ ಮತೃ೯ ಲೋಕವೆಲ್ಲ ಭಕ್ತಿಯ ಸಾಮ್ರಾಜ್ಯ ವಾಯಿತ್ತು. ಆ ಮನೆಗೆ ತಲೆ ಬಾಗಿ ಹೊಕ್ಕವರೆಲ್ಲಾ ನಿಜಲಿಂಗ ಪದವಿನೈಯ್ದಿದ್ದರು. ಹೀಗಾಗಿ ಅಲ್ಲಮನಿಗೆ ಕಲ್ಯಾಣವೇ ಜ್ಞಾನದ ಪ್ರಣತಿಯಾಗಿದೆ.ಅಲ್ಲಿ ಬಸವಣ್ಣನದೇ ಸಾಮ್ರಾಜ್ಯವಿದೆ.ಭಕ್ತಿಎಂಬ ತೈಲದಲ್ಲಿ ಆಧ್ಯಾತ್ಮಿಕ ಶಕ್ತಿಗಳ ಸಂಗಮದ ಮೇಳವದು. ಯೋಗಿಗಳು ಭಕ್ತರು ಮೊದಲಾದ ವಚನ ಶಾಸ್ತ್ರಗಳು ಹೇಳುವ ಶಿವತತ್ವ ವಿದ್ಯಾಭ್ಯಾಸಿಗಳು ಅಲ್ಲಿದ್ದಾರೆ.ವಚನ ಎನ್ನುವುದು ಶಾಸ್ತ್ರ ವಾಗಲೇಬೇಕಾದ ಅನಿವಾರ್ಯತೆ ಕಲ್ಯಾಣ ಲ್ಲಿತ್ತು.ಶಿವಭಕ್ತರ ಈ ಭೂಮಿ ಶರಣ ಸಮೂಹದ ಸಾಗರವಾಗಿದೆ.ಈ ಕ್ಷೇತ್ರದ ನಾಯಕರು ಬಸವಣ್ಣ ಅಲ್ಲಮರಾಗಿದ್ದಾರೆ.ಶರಣ ಧರ್ಮದಲ್ಲಿ ಅಲ್ಲಮ ಎಷ್ಟು ಅಗತ್ಯವೋ ಬಸವಣ್ಣನೂ ಅಷ್ಟೇ ಪ್ರಮುಖ ಗೌರವದ ವ್ಯಕ್ತಿಎನ್ನುವುದು ಪ್ರಶಂಸಾನಾರ್ಹವಾಗಿದೆ. ಅಲ್ಲಮನ ಪ್ರಕಾರ ಬಸವಣ್ಣ ಅಪರೂಪದ ಅನುಭಾವಿ ಪರಶಿವ ಲಿಂಗ ದಷ್ಟೆ ಶುದ್ದ ಚೇತನ. ಬಸವ ಬಾಳ ಹಣತೆಗೆ ಶಿವ ಪ್ರಜ್ಞೆಯ ಬೆಳಕನ್ನು ನೀಡಿದಾತ.ಕವಿ ಮನಸ್ದಿನ ಅಲ್ಲಮ ಬಸವಣ್ಣ ನವರ ವಿಶ್ವ ಶಕ್ತಿಗೆ ಮಾರು ಹೋದರು.ಅಲ್ಲಮನ ಪ್ರಕಾರ ಬಸವಣ್ಣ ಒಂದು ದಿವ್ಯ ಮಂತ್ರವಿದ್ದಂತೆ. ಮಂತ್ರವೆಂದರೆ ಅದನ್ನು ಅರಿತು ಕೊಂಡು ಕಾಲ ಹರಣ ಮಾಡುತ್ತಾ ಜಪಿಸುವುದಲ್ಲ. ಬಸವನೆಂಬ ಮಂತ್ರದಲ್ಲಿ ಅರ್ಥವನ್ನರಿತು ಬದುಕಿನ ಶೋಭೆಯನ್ನಾಗಿ ಮಾಡಿಕೊಳ್ಳುವುದು ಎಂದರ್ಥ.ಬಸವ ಸಂಸ್ಕ್ರತಿಯನ್ನು ಎಚ್ಚರದಿಂದ ಕಾಪಾಡಿ ಕೊಂಡು ಬಂದ ಮಹಾಯೋಗ ಸಾಧಕ ಅಲ್ಲಮನಾಗಿದ್ದ.

 

-ಡಾ. ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು.
ರಾಯಚೂರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಶರಣರ ಪ್ರಗತಿಪರ ಚಿಂತನೆಗೆ ಧಕ್ಕೆ ಮಾಡದಿರಿ: ಬಸವರಾಜ ಹೊರಟ್ಟಿ

  ಹುಬ್ಬಳ್ಳಿ: ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಭೂಮಿಪೂಜೆ ಕಾರ್ಯಕ್ರಮದ ಕುರಿತು ಜ .6 ರಂದು ನೀಡಿದ ಜಾಹೀರಾತಿನಲ್ಲಿ ‘ಸನಾತನ …

ಸರಕಾರದ ವಿರುದ್ಧ ತೋಂಟದ ಸಿದ್ಧರಾಮ ಶ್ರೀಗಳ ಅಸಮಾಧಾನ

  ಲಿಂಗಾಯತ ಪ್ರಗತಿಪರ ಚಿಂತನೆಯ ಧರ್ಮವಾಗಿದೆ ಗದಗ : ಮಹಾಮಾನವತಾವಾದಿ ಪ್ರಗತಿಪರ ಚಿಂತಕ, ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದಲ್ಲಿ ನೂತನ …

ವೇದಕ್ಕೆ ಒರೆಯ ಕಟ್ಟುವೆ

ಭಾರತದ ಚರಿತ್ರೆಯಲ್ಲಿ ಶರಣ ಚಳುವಳಿಗೆ ಒಂದು ವಿಶಿಷ್ಟವಾದ ಸ್ಥಾನ ಸಿಗುತ್ತದೆ. ಬೌದ್ಧ ಧರ್ಮದ ನಂತರ ಭಾರತದಲ್ಲಿ ಮತ್ತೊಮ್ಮೆ ಸಮಾಜೋಧಾರ್ಮಿಕ ಕ್ರಾಂತಿ …

ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಿದ ತ್ಯಾಗವೀರ ಶಿರಸಂಗಿ ಲಿಂಗರಾಜರು

  ಲೇಖನ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತೋಂಟದಾರ್ಯ ಸಂಸ್ಥಾನ ಮಠ ಗದಗ ಬೆಳಗಾವಿ: ಕರ್ನಾಟಕವನ್ನು ಶೈಕ್ಷಣಿಕವಾಗಿ ಹಾಗು ಸಾಂಸ್ಕೃತಿಕವಾಗಿ …

ಸನಾತನ ಶಬ್ದಕ್ಕೆ ಗೊ.ರು.ಚನ್ನಬಸಪ್ಪ ವಿರೋಧ

  ಬಸವಕಲ್ಯಾಣ: ರಾಜ್ಯ ಸರ್ಕಾರ ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ನೂತನ ಅನುಭವ ಮಂಟಪ ನಿರ್ಮಾಣ’ …

ಸಮಗ್ರ ಚಿಂತನೆಯ ವಿಚಾರವಾದ ಮತ್ತು ಮುಲಾಜಿಗೆ ಬಸಿರಾಗುವ ಅರೆಬೆಂದ ವಿಚಾರವಾದ

ಕೆಲವು ಅಥವಾ ಹಲವು ಅರೆಬೆಂದ ವಿಚಾರವಾದಿಗಳು ಅನುಭವ ಮಂಟಪದ ನಿರ್ಮಾಣದ ಕುರಿತಾಗಿ ಆರ್ಥಿಕ ಸ್ಥಿತಿ ಮತ್ತು ಇತರೆ ಕಾರಣಗಳಿಂದ ೫೦೦ …

ಕಾಯಕದಲ್ಲೇ ದೇವರ ಕಂಡ ಕೇತಲಾದೇವಿ

  ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಸಮಕಾಲೀನ ಶಿವಶರಣೆ ಕೇತಲದೇವಿಯು ಶರಣ ಕುಂಬಾರ ಗುಂಡಯ್ಯನವರ ಧರ್ಮಪತ್ನಿ. ಕುಂಬಾರ ಗುಂಡಯ್ಯ ಮತ್ತು …

ಅನುಭವಮಂಟಪ ನಡೆದು ಬಂದ ದಾರಿ

ಬೀದರ್: ವಿಶ್ವರು ಬಸವಣ್ಣನವರು 12ನೇ ಶತಮಾನದಲ್ಲಿ ಜಗತ್ತಿನ ಮುಟ್ಟು ಮೊದಲು ಪ್ರಜಾಪ್ರಭುತ್ವದ ಮಾದರಿಯ ಅನುಭವ ಮಂಟಪವನ್ನು ಸ್ಥಾಪಿಸಿದರು. ಅನುಭವ ಮಂಟಪದಲ್ಲಿ …

ಲಿಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ್ ನಿಧನ

  ಬೆಳಗಾವಿ: ಬೆಳಗಾವಿ ಲಿಂಗಾಯತ ಸಂಘಟನೆಯ ಸಕ್ರಿಯ ಕಾರ್ಯಕರ್ತ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ರಾಜು …

2021ರ ಲಿಂಗಾಯತ ದಿನದರ್ಶಿಕೆ ಬಿಡುಗಡೆ ಹಾಗೂ ಶರಣ ಮೇಳದಲ್ಲಿ ಪಾಲ್ಗೊಳ್ಳಲು ಮನವಿ

ಗಜೇಂದ್ರಗಡ: ನಂಬಿಕೆಗೆ ಅರ್ಹವಲ್ಲದ ಪಂಚಾಂಗ, ಜ್ಯೋತಿಷ್ಯಕ್ಕೆ ಜೋತುಬಿದ್ದು, ಮೌಢ್ಯತೆಗೆ ಒಳಗಾಗಿ ನಮ್ಮ ಬದುಕನ್ನು ಕೆಡಿಸಿಕೊಳ್ಳುವುದರ ಬದಲಾಗಿ ಧರ್ಮಗುರು ಬಸವಣ್ಣ ಹಾಗೂ …

ಲಿಂಗಾಯತ– ವೀರಶೈವರ ‘ಒಬಿಸಿ ಬೇಡಿಕೆ’ ಮತ್ತು ಒಗ್ಗಟ್ಟಿನ ಹೋರಾಟ… ಧರ್ಮ, ರಾಜಕಾರಣ, ಸಾಮಾಜಿಕ ನ್ಯಾಯ

  ಲೇಖನ: ಡಾ. ಶಿವಮೂರ್ತಿ ಮುರುಘಾ ಶರಣರು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ದಿನವನ್ನು ರಾಷ್ಟ್ರದಾದ್ಯಂತ ಕಳೆದ ತಿಂಗಳು …

ಪತ್ರಕರ್ತ ಶಿವರಂಜನ್ ಸತ್ಯಂಪೇಟೆಗೆ ಪಿಎಚ್.ಡಿ.ಪದವಿ

  ಕಲಬುರಗಿ : ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ. ಗುಲ್ಬರ್ಗ ವಿವಿ …

“ನಿಜ ಹೇಳದಿದ್ದರೂ ಪರವಾಗಿಲ್ಲ ಸುಳ್ಳು ಹೇಳಬೇಡಿ”

  ೧) ಬಸವ ಪರಂಪರೆ, ಶರಣ ಪರಂಪರೆ, ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ …

ಇತಿಹಾಸ ತಿರುಚುವ ರಂಭಾಪುರಿ ಶ್ರೀಗಳ ಕೃತ್ಯ ಖಂಡನೀಯ

ರಾಮದುರ್ಗ: ಸುವರ್ಣ ಚಾನೆಲ್ ನವರು ಎಡೆಯೂರ ಸಿದ್ಧಲಿಂಗ ಶ್ರೀಗಳ ಬಗ್ಗೆ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಭಿನವ ಅಲ್ಲಮನೆಂದೇ …

ಇಳಕಲ್ ಗುರುಮಹಾಂತ ಶ್ರೀಗಳಿಗೆ ‘ಸಂಯಮ ಪ್ರಶಸ್ತಿ’ ಪ್ರದಾನ

  ಬಾಗಲಕೋಟೆ: ಇಳಕಲ್‌ನ ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳಿಗೆ ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ ಶನಿವಾರ …

Leave a Reply

Your email address will not be published. Required fields are marked *

error: Content is protected !!