Home / featured / ಶರಣರೇ ಅನುದಾನ-ಅಧಿಕಾರದಾಸೆಯ ನಿಲುವು ಬಿಡಿ : ಡಾ.ಎಸ್.ಎಂ ಜಾಮದಾರ

ಶರಣರೇ ಅನುದಾನ-ಅಧಿಕಾರದಾಸೆಯ ನಿಲುವು ಬಿಡಿ : ಡಾ.ಎಸ್.ಎಂ ಜಾಮದಾರ

30-1-2021ರ೦ದು ಪ್ರಜಾವಾಣಿ ಯಲ್ಲಿ ಪ್ರಕಟವಾದ ಮುರುಘಾ ಶರಣರ ಲೇಖನಕ್ಕೆ ಒ೦ದು ಪ್ರತಿಕ್ರಿಯೆ. ಪೂಜ್ಯ ಶರಣರು “ಬೇಲಿ ಹಾಕುವುದು ಬಸವ ತತ್ವವವಲ್ಲ” ಎ೦ದಿದ್ದಾರೆ. ಅದು ಸತ್ಯ. ಆದರೆ ಮೊನ್ನೆ ಸ್ಥಾಪಿತವಾದ ಲಿ೦ಗಾಯತ ಮಠಗಳ ಒಕ್ಕೂಟಕ್ಕೆ ಯಾರೂ ಯಾವುದೇ ಬೇಲಿಯನ್ನು ಹಾಕಿಲ್ಲ. ಶರಣರೂ ಅದರ ಸದಸ್ಯರಾಗಬಹುದು. ಆದರೆ ಅವರು ಆ ಒಕ್ಕೂಟವನ್ನು ಸೇರುವುದಿಲ್ಲ. ಕಾರಣವೆ೦ದರೆ ಅವರನ್ನು ಕೇಳದೇ ಆ ಒಕ್ಕೂಟ ರಚನೆಯಾಗಿದೆ. ಅದೇ ಅವರ ಹೊಟ್ಟೆ ಉರಿಗೆ ಕಾರಣವಾಗಿದೆ ಎ೦ಬುದು ಸ್ಪಷ್ಟ.

ಅಷ್ಟಕ್ಕೂ ಬೇಲಿ ಹಾಕುತ್ತಿದ್ದವರೂ ಮುರುಘಾ ಶರಣರೇ ಆಗಿದ್ದಾರೆ. ಒ೦ದೂವರೆ ವಷ೯ದ ಹಿ೦ದೆ ಇದೇ ಶರಣರು ಲಿ೦ಗಾಯತ ಮಹಾಸಭೆಯ ಹನ್ನೆರಡು ಪದಾಧಿಕಾರಿಗಳನ್ನು ಬೆ೦ಗಳೂರಿನ ಗಾ೦ಧಿನಗರದಲ್ಲಿರುವ ಅವರ ಮಠಕ್ಕೆ ಕರೆದು ಸಿರಿಗೆರೆ ಮಠದವರೊಡನೆ ಲಿ೦ಗಾಯತ ಮಹಾಸಭೆಯವರು ಸ೦ಪಕ೯ ಇಟ್ಟುಕೊಳ್ಳಬಾರದು ಎ೦ದು ಶರತ್ತು ಹಾಕಿದರು. ಅದನ್ನು ಆ ಪದಾಧಿಕಾರಿಗಳು ಒಪ್ಪದಿದ್ದರೆ ತಾವು ಲಿ೦ಗಾಯತ ಸ್ವತ೦ತ್ರ ಧಮ೯ದ ಹೋರಾಟಕ್ಕೆ ಬೆ೦ಬಲ ನೀಡುವುದಿಲ್ಲವೆ೦ದು ನೇರವಾಗಿ ಹೇಳಿದರು. ಮತ್ತು ಹಾಗೆಯೇ ಮಾಡಿದರು. ಆ ನ೦ತರ ಅವರೇ ಸ೦ಘಟಿಸಿದ “ಅಸ೦ಖೆ ಶರಣರ ಮೇಳ”ದ ಕಾಲದಲ್ಲಿ ಸ್ವತ೦ತ್ರ ಧಮ೯ದ ಹೋರಾಟ ಮುಗಿದ ಅಧ್ಯಾಯ ವೆ೦ದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಅಮಿತ್ ಶಾ ಅವರು ಚುನಾವಣಾ ವೇಳೆ ಮುರುಘಾ ಮಠಕ್ಕೆ ಭೆಟ್ಟಿ ಕೊಟ್ಟಾಗ ಅವರಿಗೆ ಮುಜುಗರವಾಗುವ೦ತೆ ಲಿ೦ಗಾಯತಕ್ಕೆ ಸ್ವತ೦ತ್ರ ಧಮ೯ದ ಮಾನ್ಯತೆ ನೀಡಲು ಒತ್ತಾಯಿಸಿ ಅಗ್ಗದ ಪ್ರಚಾರ ಗಿಟ್ಟಿಸಿಕೊ೦ಡವರೂ ಇದೇ ಶರಣರು! ಇನ್ನೂ ಒ೦ದು ಹೆಜ್ಜೆ ಮು೦ದೆ ಹೋಗಿ, ಎರಡು ತಿ೦ಗಳ ಹಿ೦ದೆ ಈ ಶರಣರೇ ಲಿ೦ಗಾಯತ ಮಹಾಸಭೆಯ ಪದಾಧಿಕಾರಿಗಳನ್ನು ತಮ್ಮ ಮಠಕ್ಕೆ ಇನ್ನೊಂದು ಕೂಟವನ್ನು ರಚಿಸುವ ಮಾತುಕತೆಗೆ ಕರೆದರು. ಶರಣರನ್ನು ಚೆನ್ನಾಗಿ ತಿಳಿದ ಅವರು ಆ ಮಠಕ್ಕೆ ಹೋಗಲಿಲ್ಲ. ಅಷ್ಟರಲ್ಲಿ ನೂರಕ್ಕೂ ಹೆಚ್ಚು ಮಠಾಧೀಶರು ಹೊಸ ಒಕ್ಕೂಟವನ್ನು ರಚಿಸಿಕೊಂಡರು. ಅದು ಅವರಿಗೆ ನು೦ಗಲಾರದ ತುತ್ತಾಗಿ ದೆ! ಇವೆಲ್ಲವೂ ಬೇಲಿ ಹಾಕುವ ಉದಾಹರಣೆಗಳಲ್ಲವೇ?

ಎರಡನೆಯದಾಗಿ, ಶರಣರು “ರಾಜಕೀಯವು ಧಮ೯ವನ್ನು ನು೦ಗಬಾರದು” ಎ೦ದಿದ್ದಾರೆ. ಸರಿಯಾದ ಮಾತೆ. ಅದಕ್ಕೆ ಉದಾಹರಣೆ ನೀಡಿ ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ ಮತ್ತು ವಿಜಾಪುರದಲ್ಲಿ ನಡೆದ ಲಿ೦ಗಾಯತ ಯಾ೯ಲಿಗಳು ರಾಜಕೀಯ ವಾಗಿದ್ದವು ಎ೦ದು ಹೇಳುತ್ತ ತಾವೂ ಅದರಲ್ಲಿ ಭಾಗವಹಿಸಿದ್ದಾಗಿ ಹೇಳಿದ್ದಾರೆ. ಹಾಗಿದ್ದರೆ ಅವರು ಭಾಗವಹಿಸಿದ್ದು ಏತಕ್ಕೆ? ಆ ಪಕ್ಷದ ಸಕಾ೯ರದಿ೦ದ ತಮ್ಮ ಬಸವ ಮೂರ್ತಿ ಯೋಜನೆಗೆ ಹಣ ಗಿಟ್ಟಿಸಿಕೊಳ್ಳಬೇಕಾಗಿತ್ತು. ಆ ಸಕಾ೯ರದ ಅವಧಿಯಲ್ಲಿ ಶರಣರಿಗೆ ಮ೦ಜೂರಾದ ಹಣ ಎಷ್ಟು ಕೋಟಿಗಳು ಎನ್ನುವುದನ್ನು ಶರಣರು ಸಾವ೯ಜನಿಕರಿಗೆ ತಿಳಿಸಬೇಕು.

ಅವರೇ ಹೇಳುವಂತೆ ಆ ಸಕಾ೯ರ ಹೋಯಿತು. ಶಾಸಕರನ್ನು ಖರೀದಿಸುವ ಮೂಲಕ ಹೊಸ ಸಕಾ೯ರ ಅಧಿಕಾರ ಪಡೆಯಿತು. ತಡಮಾಡದೆ ಶರಣರು ಹೊಸ ಸಕಾ೯ರ ಶಾಸಕರನ್ನು ಓಲೈಸುತ್ತ ಆ ಸಕಾ೯ರದ ಮುಖ್ಯ ಸ್ಥರ ಮಗನ ನೇತ್ರತ್ವದಲ್ಲಿ ಶರಣ ಮೇಳವನ್ನು ಸ೦ಘಟಿಸಿ ಬಿಟ್ಟರು. ಆ ಮೂಲಕ ಶರಣರು ಹೊಸ ಸಕಾ೯ರದಿ೦ದ ಈ ವರೆಗೆ ತಮ್ಮ ಬಸವ ಯೋಜನೆಗೆ ಗಿಟ್ಟಿಸಿಕೊ೦ಡ ಹಣ ಎಷ್ಟು ಕೋಟಿಗಳು ಎನ್ನುವುದೂ ಸಾವ೯ಜನಿಕರಿಗೆ ತಿಳಿಯಲಿ. ಏಕೆ೦ದರೆ, ಅದು ಜನರು ನೀಡಿದ ತೆರಿಗೆಯಿ೦ದ ಬ೦ದ ಹಣ.

ಅಲ್ಲದೇ, ನಮ್ಮ ಪ್ರಧಾನ ಮ೦ತ್ರಿಗಳು ಬಸವಣ್ಣ ನವರನ್ನು ಬಹಳ ಮೆಚ್ಚುತ್ತಾರೆ ಎನ್ನುವುದು ಗೊತ್ತಾದ ತಕ್ಷಣವೇ ಶರಣರು ಆ ಪಕ್ಷದ ಮು೦ಚೂಣಿ ನಾಯಕರ ಮೂಲಕ ಪ್ರಧಾನಿಗಳನ್ನು ಸ೦ಪಕಿ೯ಸಿ ತಮ್ಮ ಬಸವ ಮೂತಿ೯ ಯೋಜನೆಗೆ ಕೋಟಿ ಕೋಟಿ ಹಣ ನೀಡಲು ಮನವಿ ಸಲ್ಲಿಸಿದರು. ಕೇ೦ದ್ರ ಸಕಾ೯ರದ ಸಿಪಿಡಬಲೂಬಿ ಇಲಾಖೆಯು ಬಸವ ಯೋಜನೆಯು ಅತ್ಯ೦ತ ಅಭದ್ರವೂ ದೋಷಪೂರಿತವೂ ಎ೦ದು ವರದಿ ನೀಡಿದೆ. ಅದನ್ನು ಬದಿಗಿರಿಸಿ ಹೇಗಾದರೂ ಮಾಡಿ ಹಣ ಪಡೆಯಲು ಶರಣರು ಹೆಣಗಾಡುತ್ತಿದ್ದಾರೆ. ಈ ಎಲ್ಲ ಘಟನೆಗಳು ಏನನ್ನು ಸೂಚಿಸುತ್ತವೆ? ರಾಜಕೀಯವು ಶರಣರ ಧಮ೯ವನ್ನು ನು೦ಗಿದೆಯೋ ಅಥವಾ ಶರಣರೇ ರಾಜಕೀಯವನ್ನು ನು೦ಗಿದ್ದಾರೋ?

ಶರಣರು ತಮ್ಮ ನಡೆ ಮತ್ತು ನುಡಿಗಳ ನಡುವಿನ ವೈರುಧ್ಯಗಳನ್ನು ಆತ್ಮ ಪರೀಕ್ಷೆ ಮಾಡಿಕೊ೦ಡರೆ ಅದು ಶರಣರಿಗೂ ಮತ್ತು ಸಮಾಜಕ್ಕೂ ಒಳ್ಳೆಯದು.

About Shivanand

Admin : Lingayat Kranti Monthly news paper 8884000008 [email protected]

Check Also

ಸಂಸ್ಕೃತಿ & ಸಂಸ್ಕಾರಗಳ ಬೆನ್ನೇರಿದ ಯುವ ಸನ್ಯಾಸಿಗಳು : ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು

ಬೈಲೂರ: ತಮ್ಮ ಯೌವ್ವನದಲ್ಲಿ ಧರ್ಮದ ಕಂಕಣ ಕಟ್ಟಿಕೊಂಡು‌ ನಿಂತ ಯುವ ಸನ್ಯಾಸಿಗಳ ನೋಡಿದರೆ ತುಂಬ ಸಂತೋಷವಾಗುತ್ತದೆ ಜೊತೆಗೆ ಜೀವನ ಸಾರ್ಥಕವಾಯಿತು …

ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ಲಿಂಗಾಯತ ಉಪಪಂಗಡಗಳು ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ: ಎಂ ಬಿ ಪಾಟೀಲ

ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಶ್ರೀ ಎಂ.ಬಿ.ಪಾಟೀಲ ಅವರು ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನು …

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ..

ಮೊದಲು ಮೂರು ನೀತಿಕಥೆಗಳನ್ನು ನೊಡೋಣ ಆನಂತರ ವಿಷಯಕ್ಕೆ ಬರೋಣ.ಬೆಳಗಿನ ಜಾವ ಯಾರೋ ಒಬ್ಬರು ಸಮುದ್ರ ತೀರದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಅಂದು …

ಹಗಲಿನಲ್ಲಿಯೆ ಸಂಜೆಯಾಯಿತು ಒಂದು ಐತಿಹಾಸಿಕ ನಿರೂಪಣೆ: ಡಾ.ಸಿದ್ಧನಗೌಡ ಪಾಟೀಲ

ಸಾಹಿತಿ ಮತ್ತು ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳ ಒಡನಾಡಿ ಶಿಷ್ಯರಾದ ಸಿದ್ದು ಯಾಪಲಪರವಿ ಅವರು ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ …

ರಂಗಾಯಣದಿಂದ ನೇಗಿನಹಾಳದಲ್ಲಿ ಸರ್ವರಿಗೂ ಸಂವಿಧಾನದ ನಾಟಕ

ನೇಗಿನಹಾಳ: ಜನಸಾಮಾನ್ಯರಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ಮೂಡಿಸುವುದರ ಜೊತೆಗೆ ಜಾತಿ, ಧರ್ಮ, ಲಿಂಗಸಮಾನತೆ, ಅಸ್ಪೃಶ್ಯತೆ ನಿವಾರಣೆ, ದೇವದಾಸಿ …

ಜಗದ್ಭವ್ಯ ಮೇರು ಕೃತಿ : ಮಹಾತ್ಮರ ಚರಿತಾಮೃತ

ಲೇಖನ: ಪ್ರಕಾಶ ಗಿರಿಮಲ್ಲನವರ                          …

ಸೆ. 25ರಂದು “ಮಹಾತ್ಮರ ಚರಿತಾಮೃತ” ಲೋಕಾರ್ಪಣೆ

ಅಥಣಿ: ಗಡಿಭಾಗದಲ್ಲಿ ನಾಡು-ನುಡಿ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಂತ-ಮಹಾಂತರ …

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು …

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ …

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ …

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ …

ಕ್ರೀಡೆ, ಕಲೆ, ಸಾಹಿತ್ಯದಂಥ ರಂಗಗಳು ಜಾತಿ, ಸಂಕುಚಿತತೆ ನಿರ್ಮೂಲನೆಯ ಮಹಾಸಾಧನಗಳು

  ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಅಭಿಮತ ಮುಂಡರಗಿ ಆಗಷ್ಟ್ 07: ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. …

ಪ್ರಮಾಣ ವಚನ ನೇರಪ್ರಸಾರ; ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ರಾಜಭವನದಿಂದ ನೇರ ಪ್ರಸಾರ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇಂದು ಮಧ್ಯಾಹ್ನ 2:15ಕ್ಕೆ …

ಅಲ್ಲಮಪ್ರಭುಗಳ ವಚನಗಳು ಇಂಗ್ಲಿಷ್‌ಗೆ ಭಾಷಾಂತರ

  ವಿಜಯಪುರ : ಖ್ಯಾತ ಭಾಷಾತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಕೀರ್ತಿ …

ತ್ರಿಭಾಷೆಗಳಲ್ಲಿ ಮೂಡಿಬಂದ ಮಹಾಜಂಗಮ

ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆ …

One comment

  1. ಬಹಳ ಸತ್ಯವಾದ ನುಡಿಗಳನ್ನೇ ಬರೆದಿದ್ದಾರೆ. ಜಾಮ್ಆಆದರ ಸರ್. ಸ್ವಾಮಿಗಳ ಸ್ವಭಾವ ಮೊದಲಿಂದಲೂ ಹೀಗೆಯೇ ಇದೆ. “ಅವರು ನಾನು ಕೇಂದ್ರಿತ ವ್ಯಕ್ತಿ” , ನನ್ನಿಂದಲೇ ಎಲ್ಲ ನಡೆಯಬೇಕು,ನಾನಿಲ್ಲದಿದ್ದರೆ ಏನೋ ನಡೆಯಬಾರದು ಎನ್ನುವ ಅಹಮಕಾರಾದನಿಲುವು. ಲಿಂಗಾಯತ ಹೋರಾಟಕ್ಕೆ ಸಹ ಅರೆಮನಸ್ಸಿನಿಂದ ಭಾಗವಹಿಸಿದ್ದರು. ಈಗಲೋ ವೀರಶೈವ ಲಿಂಗಾಯತ ಎರಡೋ ಒಂದೇ ಎನ್ನುವ ನಿಲುವು ಅವರದು.ಪ್ರಗತಿಪರ ಎಂದು ತೋರಿಸಿಕೊಳ್ಳಲು ಲಿಂಗಾಯತ ತತ್ವ ಮಾತನಾಡುತ್ತಾರೆ ಅಷ್ಟೇ.

Leave a Reply

Your email address will not be published. Required fields are marked *